ಹಿಂದೀನೇ ಕನ್ನಡ ಲಿಪಿಯಲ್ಲಿ ಬರೆದರೆ ಅದು ಕನ್ನಡ ಅನ್ನಿಸಿಕೊಳ್ಳಲ್ಲ


ಕನ್ನಡದ ಪತ್ರಿಕೆಗಳಲ್ಲಿ ಓಡಾದುತ್ತಿರೋ ಈ ಎರಡು ಜಾಹೀರಾತುಗಳ ತುಣುಕುಗಳನ್ನ ಸೊಲ್ಪ ನೋಡಿ. ಮೇಲ್ನೋಟಕ್ಕೆ ಇವುಗಳಲ್ಲಿ ಯಾವ ದೋಷವೂ ಕಾಣದೆ ಇರಬಹುದು. ಆದರೆ ಮತ್ತೊಮ್ಮೆ ಗಮನ ಇಟ್ಟು ನೋಡಿ. ಒಂದು ನಾವು ಹುಟ್ಟಿದಾಗಿಂದ ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಎಸ್.ಬಿ.ಐ. ಬ್ಯಾಂಕಿಂದು, ಇನ್ನೊಂದು ಇತ್ತೀಚೆಗೆ ಶುರುವಾಗಿರುವ ಟೈಟನ್ ಐ+ ಎಂಬ ಕನ್ನಡಕದ ಅಂಗಡೀದು.

ಎಸ್.ಬಿ.ಐ. ಅನ್ನತ್ತೆ "ನಿಮ್ಮ ಜೊತೆ - ಸದಾ ಸರ್ವದಾ" ಅಂತ. "ಸದಾ" ಅನ್ನೋದನ್ನ ಕನ್ನಡದಲ್ಲಿ ಕೇಳಿದೀವಿ, ಆದರೆ "ಸದಾ ಸರ್ವದಾ" ಅನ್ನೋರು ನಾವಲ್ಲ ಸಾರ್, ದೂರ ಸಾವಿರಾರು ಕಿ.ಮಿ. ದೂರದಲ್ಲಿರೋ ಹಿಂದಿಯೋರು! ಹಿಂದಿಗೂ ಕನ್ನಡಕ್ಕೂ ಯಾವ ನಂಟೂ ಇಲ್ಲ. ಎರಡೂ ಬೇರೆಬೇರೆ ಭಾಷಾಕುಟುಂಬಕ್ಕೆ ಸೇರಿದ ಭಾಷೆಗಳು.

ಇನ್ನು ಟೈಟನ್ ಐ+ ನೋರು ಉಪಯೋಗಿಸಿರೋ "ಚಶ್ಮಿಶ್" ಅಂದ್ರೆ ಏನು ಅಂತ ಎಷ್ಟು ತಲೆ ಕೆಡಿಸಿಕೊಂಡರೂ ಕನ್ನಡಿಗರಿಗೆ ಅರ್ಥವಾಗಲ್ಲ ಬಿಡಿ. ಜಾಹೀರಾತು ಜನರಿಗೆ ನೇರವಾಗಿ ತಲುಪಬೇಕು ತಾನೆ? ಅದಕ್ಕೆ ಅವರು ಉಪಯೋಗಿಸೋ ಭಾಷೇನೇ ಸರಿ ತಾನೆ? ಅವರ ಮನಸ್ಸಿನಲ್ಲಿ ಚಿರಪರಿಚಿತವಾಗಿರೋ ವಿಷಯಗಳನ್ನ ಉಪಯೋಗಿಸಿಕೊಳ್ಳಬೇಕು ತಾನೆ? ಹಾಗಾದರೆ "ಸದಾ ಸರ್ವದಾ", "ಚಶ್ಮಿಶ್" - ಇವುಗಳಿಗೂ ಕನ್ನಡಿಗರಿಗೂ ಎಲ್ಲೆಲ್ಲಿಯ ನಂಟೂ ಇಲ್ಲವಲ್ಲ? ಈ ಕಂಪನಿಗಳು ಜಾಹೀರಾತು ಮಾಡಕ್ಕೆ ಹಾಕಿದ ದುಡ್ಡಿಗಾದರೂ ಬೆಲೆ ಬೇಡವಾ?

ಹಿಂದಿಯಲ್ಲಿದ್ದ ಜಾಹೀರಾತನ್ನು ಕನ್ನಡಕ್ಕೆ ಇಷ್ಟು ಕೆಟ್ಟದಾಗಿ ಅನುವಾದ ಮಾಡಿರೋದನ್ನ ನೋಡಿದರೆ ನಗಬೇಕೋ ಅಳಬೇಕೋ ಗೊತ್ತಿಲ್ಲ! ಘಂ ಅಂತ "ನಿಮ್ಮ ಜೊತೆ - ಎಂದೆಂದಿಗೂ" ಅನ್ನಕ್ಕೇನು? ಹಂಗೇ "ಸೋಡಾ-ಬುಡ್ಡಿ ಅಲ್ಲ" ಅನ್ನಕ್ಕೇನು ಈ ಜಾಹೀರಾತು ಮಾಡೋರಿಗೆ?

ಕನ್ನಡದಲ್ಲಿ ಜಾಹೀರಾತು ಮಾಡೋದಕ್ಕೆ ಯಾರನ್ನಾದರೂ ಇವರು ನೇಮಿಸಿಕೊಂಡಿದ್ದಾರೋ ಇಲ್ಲವೋ ಅನ್ನೋದೇ ಸಂಶಯಾಸ್ಪದವಾಗಿದೆ! ಅಥವಾ ನೇಮಿಸಿಕೊಂಡಿದ್ದರೆ ಆ ಮಹಾನುಭಾವನಿಗೆ ಬೆಳ್ಳಗಿರೋದೆಲ್ಲ ಹಾಲಲ್ಲ, ಕನ್ನಡದ ಲಿಪಿಯಲ್ಲಿ ಬರೆದಿದ್ದೆಲ್ಲ ಕನ್ನಡವಲ್ಲ ಅಂತ ತುರ್ತಾಗಿ ಅರ್ಥವಾಗಬೇಕಿದೆ! ಅದೇನು ಕನ್ನಡದಲ್ಲಿ ಹೊಸ ಜಾಹೀರಾತು ಮಾಡದೆ ಹಿಂದಿಯಲ್ಲಿರೋದನ್ನೇ ಕನ್ನಡ ಲಿಪಿಯಲ್ಲಿ ಬರೆಯೋ ಅಷ್ಟು ಸೋಮಾರಿತನವೋ ಏನೋ ಗೊತ್ತಿಲ್ಲ! ಕರ್ನಾಟಕದಲ್ಲಿ ಮಾರಾಟ ಆಗಬೇಕಾದರೆ ಕನ್ನಡದಲ್ಲಿ ಜಾಹೀರಾತು ಮಾಡಬೇಕು ಅನ್ನೋದು ಅರ್ಥವಾಗಿದೆ ಇವರಿಗೆ, ಆದರೆ ಅದರ ಲಾಭ ದಕ್ಕಬೇಕಾದರೆ ಬಳಸೋ ಕನ್ನಡ ಅಷ್ಟೇ ಸರಿಯಾಗಿರಬೇಕು ಅಂತ ಅರ್ಥವಾಗಬೇಡವೆ? ಇದೊಳ್ಳೆ ಎಲ್ಲಾ ಜಾಣ, ತುಸ ಕೋಣ ಅಂದಂಗಾಯ್ತು ಗುರು!

57 ಅನಿಸಿಕೆಗಳು:

Anonymous ಅಂತಾರೆ...

ಏನ್ ಗುರೂ... ಮುಂಗಾರು ಮಳೆ ಸಿನಿಮಾ ಬ್ಯಾನರ್‌ನಾಗು “ಹನಿ ಹನಿ ಪ್ರೇಮ್ ಕಹಾನಿ” ಅಂತ ಆಕ್ಕೊಂಡವ್ರಲ್ಲ.

Anonymous ಅಂತಾರೆ...

After displaying the text the IE shows "Done, but with errors on page". There may be some problems in the html/script in the blog. please check.

ಪವ್ವಿ ಅಂತಾರೆ...

ಮುಂಗಾರು ಮಳೆಯಲ್ಲಿ ಎಚ್ಚರಿಕೆಯನ್ನು ಸರಿಯಾಗಿ ಕೋಟ್ಟಿದ್ದಾರೆ,

ಸಾಲುಗಳ ಮಧ್ಯೆ ಓದಿದರೆ ಕಾಣಿಸುವುದು


Honey,Honey ಅನ್ನುವ ಕನ್ನಡವಲ್ಲದ ಪದಗಳನ್ನು ಪ್ರೇಮದಿಂದ ಬಳಸಿದರೆ, ಅದು "ಕ(ನ್ನಡದ) ಹಾನಿ" ಆಗುತ್ತದೆ.

ಶ್ವೇತ ಅಂತಾರೆ...

ಆದರು ಮುಂಗಾರು ಮಳೆಯಲ್ಲಿ ಆಥರ ಹಿಂದಿಯ ಪದ ಪ್ರಯೊಗ ಮಾಡಬಾರದಿತ್ತು. ಚಿತ್ರಗಳ ಹೆಸರನ್ನು ಈಗೀಗೆ ಹಿಂದಿಯಲ್ಲಿಡುತ್ತಿದ್ದಾರೆ. ಉದಾ: ದುನಿಯ

'ಮುಂಗಾರು ಮಳೆ ಭಾಗ ೨' ಕ್ಕೆ ಆ ಹೆಸರು ಸಿಗಲಿಲ್ಲದಿದ್ದರೆ, 'ಪ್ರೀತಮ್ ಕಿ ಪ್ರೆಮ್ ಕಹಾನಿ' ಅಂತ ಇಡಲು ಹೊರಟಿದ್ದಾರೆ.

Anonymous ಅಂತಾರೆ...

ಕನ್ನಡಿಗನಿಗೆ “ಭಾಷೆ” ಅಂದ ಕೂಡಲೆ “ಹೆತ್ತ ಅಮ್ಮ”ನ ನೆನಪಾಗಬೇಕು. ಎಲ್ಲಿಯವರೆಗೆ ಆ ಸಮೀಕರಣ ಸಾಧಿಸುವುದಿಲ್ಲವೋ ಅಲ್ಲಿಯವರೆಗೆ ಕನ್ನಡಿಗನ ನಿರಭಿಮಾನ, ಅವಮಾನ ಇದ್ದದ್ದೇ. “ನಮಗೆ ಬೇರೆ ತಾಯಂದಿರ ಬಗ್ಗೆ ಗೌರವ ಇದೆ. ಆದರೆ ನಮ್ಮ ಮನೆಯಲ್ಲಿ ನಮ್ಮ ಅಮ್ಮನೇ ಯಜಮಾನಿ.” ಎಂಬ ತಿಳುವಳಿಕೆ ಎಲ್ಲಾ ಕನ್ನಡಿಗನಿಗೆ ಬಂದರೆ ಅಂದು ಕನ್ನಡಿಗನ ಎಲ್ಲಾ ಸಮಸ್ಯೆ ಪರಿಹಾರವಾದಂತೆ.

Anonymous ಅಂತಾರೆ...

ಕನ್ನಡ ಅಂದ್ರೇನು

ಮೊಕ್ಕಾಲು ಸಂಸ್ಕೃತ, ಮಿಕ್ಕ ಹತ್ತು ಹದಿನೈದು % ಹಿಂದಿ, ಇಂಗ್ಲೀಷು, ಉರ್ದು ಅಲ್ಲಿ ಇಲ್ಲಿ ಕೆಲವು ಕನ್ನಡದ ಪದಗಳನ್ನು ಇಣಿಕಿಸುವುದು.

ಹೆಚ್ಚು ಕನ್ನಡ ಪದಗಳನ್ನು ಬಳಸಿ ಮಾತಾಡೋರೆಲ್ಲ "ಐತೇ, ಪೈತೆ" ಅನ್ನೋ ಹಳ್ಳಿ ಗಮಾರರು.

Unknown ಅಂತಾರೆ...

ಸರಿಯಾಗಿ ಕನ್ನಡ ಬರದೇ ಇದ್ದೋರು, ಸಂಸ್ಕೃತ, ಇಂಗ್ಲೀಶು, ಹಿಂದಿ ಬರೆಸಿ ಬರೆದರೆ, ಅದು ಕನ್ನಡದ ತಪ್ಪಲ್ಲ.

ಕನ್ನಡದಲ್ಲೇ ತುಂಬಿ ತುಳುಕವಷ್ಟು ಪದ-ಸಿರಿ ಇದೆ.

ತಮಗೆ ಕನ್ನಡ ಪದಗಳು ಗೊತ್ತಿಲ್ಲ ಅಂತ ಹೀಗೆ ಮಾಡೋದು ತಪ್ಪು.

Anonymous ಅಂತಾರೆ...

ಅಯ್ಯಾ ಅನಾನಿಮಸ್, ನೀನು "ಮುಕ್ಕಾಲು" ಬದಲು "ಮೊಕ್ಕಾಲು" ಅಂತ ಬರೆದಾಗಲೆ ಗೊತ್ತಾಗುತ್ತೆ ನಿನಗೆ ಕನ್ನಡದ ಗಂಧವೇ ಇಲ್ಲ ಅಂತ. ಸಂಸ್ಕೃತ, ಹಿಂದಿ ಅನ್ನೋವು ಭಾಷೆಗಳು ಅಂತ ಗೊತ್ತಲ್ಲ, ಅದೇ ಪುಣ್ಯ!

ಹಳ್ಳಿಯವರು ಗಮಾರರು ಅಂತ ತಿಳ್ಕೊಂಡಿರೋ ನೀನು ಇನ್ನೆಂತ ಐನಾತಿ ಗಮಾರ ಇರಬೇಕು ಅಂತ!!

Anonymous ಅಂತಾರೆ...

swamy anonymous,

"aithe" annovarella haLLiyavaralla, mattu halliyavarella gamararalla anno ashtu jnana irali nimage. ee tharada murkhatanada mathhugaLannaDi nimage baruvudadaru enu ? kannada da vividha pranthyagaLalli vividha reethiya padagaLu baLakeyallive, mysurinavaru "ide" andre, Mangalurinavaru "unTu" andare, Davanagereyavaru "Aithe" anthare. idaralli yavudu keeLalla, yavudu melalla, adaralli nachike pattukoLLuvudu enu illa...ellavu chanda...nimagiro ee tharada keeLarimeya bhavadiMda adashtu bega horage baMdare, nimma arogyakke oLLeyadu..prayatnisi..

Anonymous ಅಂತಾರೆ...

:)

ನನಗೆ ಕನ್ನಡ ಬರುವುದಿಲ್ಲ, ಸರಿ. ಆದರೆ ಕನ್ನಡವನ್ನು ಅರಿದು ಕುಡಿದು ಇರುವವರು ಮಹನೀಯರು ನೀವು ಹೇಳಿ

"ಗಂಧ, ಪುಣ್ಯ,, ಭಾಷೆ,ಜ್ಞಾನ, ಮೂರ್ಖ, ವಿವಿಧ, ಪ್ರಯತ್ನ, ವಿವಿಧ, ರೀತಿ, ಪದ, ಭಾವ, ಆರೋಗ್ಯ, ಪ್ರಯತ್ನಿಸಿ,"

ಈ ಸಂಸ್ಕೃತ ಪದಗಳ ವಿನಾ, ಅಲ್ಲೇನಿದೆ ಮಣ್ಣಂಟ್ಟಿ!

ಸಂಸ್ಕೃತದಿಂದ ಪದಗಳು ಓಕೆ ಆದ ಮೇಲೆ, ಹಿಂದಿಗೆ ಯಾಕೆ, ನಿಮ್ಮ ಕ್ಯಾತೆ?

ಏನೇ ಆದರು ಕನ್ನಡದಲ್ಲಿ ಸೂಕ್ತವಾದ ಸಂವಾದೀ/ಪಾರಿಭಾಷಿಕ ಪದಗಳ ಬೃಹತ್ ದಾರಿದ್ರ್‍ಯವಿದೆ . ಅಂತಹ ಪದಗಳು ಇದ್ದರೂ ಅವುಗಳನ್ನು ಯಾರು ಉಪಯೋಗ ಮಾಡುವುದಿಲ್ಲ. ಎಲ್ಲ out dated. ಏನೇ ಹೇಳಿಕೊಂಡರು, ಕನ್ನಡ ಸಂಸ್ಕೃತ, ಇಂಗ್ಲೀಶಿಗೆ ದಾಸ, ಅಡಿಯಾಳು. ಇವು ಇಲ್ಲದಿದ್ದರೆ ಕನ್ನಡದಲ್ಲಿ ಏನಿಲ್ಲ, ಖಾಲಿ ಖಾಲಿ.

ನೀವೆಲ್ಲ, ಒಮ್ಮೆ "ಕನ್ನಡದ ಪಾರಿಭಾಷಿಕ ನಿಘಂಟು" ಅಂತ ಇದೆಯಲ್ಲ ಅದನ್ನು ಒಂದು ಸರತಿ ವೀಕ್ಷಿಸಿ, ಜ್ಞಾನೋದಯವಾಗುವುದು.

ಕನ್ನಡದ ಪಠ್ಯಪುಸ್ತಕಗಳನ್ನು ನೋಡಿದರೆ ಸಾಕು, ಕನ್ನಡದಲ್ಲಿ ಎಂತಹ ಅಪಾರವಾದ ಪದದಾರಿದ್ರ್‍ಯವಿದೆ ಎಂದು ತಿಳಿಯುವುದು.

ಸುಮ್ಮನೆ ಸಂಸ್ಕೃತಪದಗಳನ್ನೆಲ್ಲ ಕನ್ನಡ ಪದ ಎಂದು ಜಂಭ ಕೊಚ್ಚಿಕೊಂಡರಾಯಿತಾ? ಅದು ಸತ್ಯವಾ?

Anonymous ಅಂತಾರೆ...

ವಂದನಾ ಬರೆದದ್ದು - "ಐತೆ" ಅನ್ನುವವರೆಲ್ಲಾ ಹಳ್ಳಿಯವರಲ್ಲಾ, ಮತ್ತು ಹಳ್ಳಿಯವರೆಲ್ಲಾ ಗಮಾರರಲ್ಲಾ ಅನ್ನುವ ಅಷ್ಟು ಜ್ಞಾನ ಇರಲಿ ನಿಮಗೆ. ಈ ತರದ ಮೂರ್ಖತನದ ಮಾತುಗಳನ್ನಾಡಿ ನಿಮಗೆ ಬರುವದಾದರೂ ಏನು? ಕನ್ನಡದ ವಿವಿಧ ಪ್ರಾಂತ್ಯಗಳಲ್ಲಿ ವಿವಿಧ ರೀತಿಯ ಪದಗಳು ಬಳಕೆಯಲ್ಲಿವೆ. ಮೈಸೂರಿನವರು ಇದೆ ಅಂದರೆ ಮಂಗಳೂರಿನವರು ಉಂಟು ಅಂತಾರೆ. ದಾವಣಗೆರೆಯವರು ಐತೆ ಅಂತಾರೆ. ಇದರಲ್ಲಿ ಯಾವುದೂ ಕೀಳಲ್ಲ, ಯಾವುದೂ ಮೇಲಲ್ಲ, ಅದರಲ್ಲಿ ನಾಚಿಕೆಪಟ್ಟುಕೊಳ್ಳುವದು ಏನೂ ಇಲ್ಲಾ, ... ಎಲ್ಲವೂ ಚೆಂದ ... ನಿಮಗಿರುವ ಈ ಕೀಳರಿಮೆ ಭಾವದಿಂದ ಆದಷ್ಟು ಬೇಗ ಹೊರಗೆ ಬಂದರೆ, ನಿಮ್ಮ ಆರೋಗ್ಯಕ್ಕೆ ಒಳ್ಳೆಯದು, ಪ್ರಯತ್ನಿಸಿ.. ಗೆಳೆಯರೆ/ಗೆಳತಿಯರೆ,.. www.mykannada.net/KannadaTypePad.htm ಈ ಕೊಡಿಯಲ್ಲಿ ನೀವು ಬ್ರಾವ್ಸರ್ ನಲ್ಲೇ ನೇರವಾಗಿ ಟೈಪ್ ಮಾಡಬಹುದು. ಬರಹ ಇಲ್ಲಾ ಯಾವುದೇ IME ಬೇಕಾಗಿಲ್ಲ.

Anonymous ಅಂತಾರೆ...

ಮಾನ್ಯರುಗಳೆ,

ಪರವಾಗಿಲ್ಲ...

ಯಾವ ಆತುರವಿಲ್ಲ. ಸಾವಧಾನವಾಗಿ ನಿಧಾನವಾಗಿ ಧೀರ್ಘಾಲೋಚನೆ ಮಾಡಿರಿ.

ಶುಭವಾಗಲಿ, ಶುಭದಿನ
ಸಂಸ್ಕೃತದ ಧನ್ಯವಾದಗಳು.

Anonymous ಅಂತಾರೆ...

ಸಂಸ್ಕ್ರುತದಲ್ಲಿ ರಾಮ ರಾಮೌ ರಾಮಹ: ಬಿಟ್ರೆ ಬೇರೆ ಏನ್ರಿ ಇದೆ? ನಿಮ್ಮ comments ನೋಡಿದ್ರೆನೆ ಗೊತ್ತಗೊಲ್ವ? ಒಲ್ಲೆ ಹಳೆಗನ್ನಡದ ಥರ ಇದೆ. ನಿಮ್ಮಂಥವರು ಸುಮ್ನೆ slum+skruta (ಸಂಸ್ಕ್ರುತ) ಮಿಕ್ಸ್ ಮಾಡಿ ಮಾತನಾಡಿದರೆ ಅದು ನಮ್ಮ ತಪ್ಪಲ್ಲ.

ವಸಂತ ಅಂತಾರೆ...

ರೀ ಅನಾಸಿನ್ನು,,,, ಬಾಯಿಗೆ ಬಂದಿದೆಲ್ಲಾ ಮಾತಾಡಬೇಡಿ .ಎಲ್ಲಾ ಭಾಷೆಗಳು ಒಂದಿಷ್ಟು ಪದಗಳನ್ನು ಅನ್ಯ ಭಾಷೆಯಿಂದ ಕಡ ಪಡೆದಿರುತ್ತವೆ. ಇ ವಿಷಯಕ್ಕೆ ವಿಶ್ವದ ಯಾವ ಭಾಷೆಯು ಹೊರತಲ್ಲ. ಕನ್ನಡದಲ್ಲಿರುವ ಪದಗಳ ಪರಿಚಯ ಇಲ್ಲದ ತಮ್ಮಂತ ಮೂಢರು ಮಾತ್ರ ಇಂತ ಮೊಂಡು ವಾದ ಮಾಡ್ತಿರಾ..

Phantom ಅಂತಾರೆ...

ಅನಾನಿಮಸ್,

೧. ನಿಮ್ಮ ಅಳಲು,ಸಂಸ್ಕೃತದ ಪದಗಳಿಗೆ ಕನ್ನಡಿಗರು ಸ್ವಾಗತ ಕೊಡ್ತಾರೆ, ಹಿಂದಿಗೇಕೆ ಆಗ್ಬಾರ್ದು ಅಂತ ಅಲ್ವೇ.

೨. ಅಷ್ಟೆಲ್ಲ ಪದಗಳನ್ನ ತೊಗೊಂಡ್ ಇದ್ದಿವಿ, "ಚಶ್ಮಿಶ್" ಯಾಕ್ ಆಗ್ಬಾರ್ದು ಅಂತ ಅಲ್ವೇ?

ಬೇಡ ಸ್ವಾಮಿ, ಕನ್ನಡದಲ್ಲಿ (ಸಂಕೃತದಲ್ಲದ) ಕನ್ನಡಕ ಎಂಬ ಪದ ಇದ್ಯಲ್ಲ; ಯಾಕ್ ಬಳಸ್ ಬಾರ್ದು ಎಂಬುದು ನನ್ನ ಆಂಬೋಣ.

ನಿಮ್ ಥರಹ ಯಾರೊ ಹಿಂದೆ, ಸಂಕೃತದ ಪದ ಯಾಕ್ ಬಳಸ ಬಾರ್ದು ಅಂತ ಕೇಳಿದಕ್ಕೆ, ಇವತ್ತು ನಮ್ ಬಳಿ ಇಷ್ಟು ಸಂಸ್ಕೃತ ಪದಗಳು ಇವೆ. ಹೀಗೆ ನಿಮ್ಮಂತಹ ಮಹ ಪ್ರಜೆಗಳು, ಯಾಕ್ ಆಗ್ಬಾರ್ದು ಅಂತ ಕೇಳ್ತ ಇದ್ರೆ, ಹಿಂದಿ ಮಯ, ತಮಿಳು ಮಯ, ತೆಲಗು ಮಯ ಆಗುತ್ತ ಹೋಗುತ್ತೆ.

ಶೇ ೭೫ ಸಂಸ್ಕೃತ ಪದಗಳು ಅಂದಿರಲ್ಲ, ಯಾವ ಆಧಾರದ ಮೇಲೇ ಗುರುವೇ?

ಕೊನೆಯದಾಗಿ

ಸಂಕೃತ ಉಪಯೋಗಿಸ್ತಾರೊ ಎಂದು ಅಳುವ ಬದಲು, ಕನ್ನಡದಲ್ಲಿ ಪದಗಳನ್ನು ಹುಟ್ ಹಾಕಿ. ಹಾಕೋಕ್ ಬರೊಲ್ಲ ಅಂದ್ರೆ ತಿಳಿಸಿ ಕೊಡೋರ್ ಇದ್ದರೆ, ಕೇಳಿ.

ಅದು ಮಾಡೊಕ್ಕೆ ಆಗ್ಲಿಲ್ಲ ಅಂದ್ರೆ ನನ್ ತರಹ ತೆಪ್ಪಗಿರಿ.

ನಮ್ ಪದಗಳೇ ಇರ್ಲಿ ಅಂತ ಹೇಳೋರ್ನೋ, ಅಥವ ನಮ್ ಪದಗಳ್ಯಾಕ್ ಆಗ್ಬಾರ್ದು ಅನ್ನೋರ್ನು, ತುಳಿಯೊಕ್ಕೆ ಪ್ರಯತ್ನ ಪಡ್ಬೇಡಿ.

ಇಂತಿ
ಭೂತ

Anonymous ಅಂತಾರೆ...

ಶ್ವೇತ( ಸಂಸ್ಕೃತದಲ್ಲಿ ಬಿಳಿ :) ) ಇವರ ಕನ್ನಡ "ಮಿಕ್ಸ್ ಕನ್ನಡ". ಪಾಪಾ ಇವರಿಗೆ ಕನ್ನಡದಲ್ಲಿ 'ಬೆರೆಕೆ' ಇದೆ ಅಂತ ಗೊತ್ತಿಲ್ಲ. ಇನ್ನು ಸಂಸ್ಕೃತದ ಬಗ್ಗೆ ಹೇಗೆ ತಾನೆ ಗೊತ್ತಿರುತ್ತದೆ. ಅದು ರಾಮಹಃ ಅಲ್ಲ ರಾಮಃ :).

ವಸಂತ ಅವರು ಮಾತು ಚನ್ನಾಗಿದೆ "ವಿಷಯಕ್ಕೆ ವಿಶ್ವದ ಯಾವ ಭಾಷೆಯು ಹೊರತಲ್ಲ".
ವಿಷಯ, ವಿಶ್ವ, ಭಾಷೆ, ಐದು ಪದಗಳಲ್ಲಿ ಮೂರು ಸಂಸ್ಕೃತದ್ದು :)
ವಸಂತ ಅವರೇ ಅದನ್ನೇ ನಾನು ಹೇಳಿದ್ದು, ಸಂಸ್ಕೃತದ ಮೇಲೆ ಪ್ರೇಮ ಇರುವ ನಿಮಗೆ, ಹಿಂದೆ ಮೇಲೆ ಯಾಕೆ ಕೋಪ?

ನೋಡಿ ನಿಮಗೆ ನನ್ನ ನಿಂದನೆ ಮಾಡಲೂ, 'ಮೂಢ' ಅನ್ನುವ ಸಂಸ್ಕೃತ ಪದವೇ ಅನಿವಾರ್ಯವಾಯಿತು. ಕನ್ನಡದಲ್ಲಿ "ಮೂಢ" ಅನ್ನೋದಕ್ಕೆ ಪದ ಇಲ್ವಾ?

ಇನ್ನು ಭೂತ ಅವರ ಮಾತು
"ಶೇ ೭೫ ಸಂಸ್ಕೃತ ಪದಗಳು ಅಂದಿರಲ್ಲ, ಯಾವ ಆಧಾರದ ಮೇಲೇ ಗುರುವೇ?"

ಈ ಕೆಳಗಿನ ಸಂಪೂರ್ಣ ಸಂಸ್ಕತ ಹೆಸರುಗಳನ್ನು ನೋಡಿರಿ ಆಗ, 75% ಕೂಡ ಕಡಮೆ.
೧) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಇಲ್ಲಿ ಬೆಂಗಳೂರು ಒಂದೇ ಕನ್ನಡ )
೨) ಕೇಂದ್ರ ಕಾರಾಗೃಹ( ಒಂದು ಕನ್ನಡವಿಲ್ಲ )
೩) ವೃತ್ತ ಆರಕ್ಷಕ ನಿರೀಕ್ಷಕರ ಕಛೇರಿ ( ಇಲ್ಲೂ ಒಂದೂ ಇಲ್ಲ )
೪) ಹೊರ ವರ್ತುಲ ರಸ್ತೆ ( ಹೊರ ಮಾತ್ರ ಕನ್ನಡ )
೫) ಕನ್ನಡ ಸಾಹಿತ್ಯ ಪರಿಷತ್ತು( ಕನ್ನಡವೊಂದೇ ಕನ್ನಡ :) )
೬) ಕನ್ನಡ ಅಭಿವೃದ್ಧಿ ಪ್ರಾಧಿಕಾರ ( ಕನ್ನಡವೊಂದೇ ಕನ್ನಡ )
೭) ಶ್ವಾನ ದಳ
೯) ಶಿಶು ವಿಹಾರ
೧೦) ಲೋಕಾಯುಕ್ತ
೧೧) ಲೋಕಸಭಾ ಚುನಾವಣೆ
೧೨) ಧೂಮಪಾನ
೧೩) ಶೌಚಾಲಯ
೧೪) ಮಹಿಳಾ ಪೋಲೀಸು ( ಹೆಂಗಸು ಪೋಲಿಸು ಅನ್ನಲ್ಲ :) )
೧೫) ಪ್ರವಾಹ ಭೀತಿ
೧೭) ಭಾಷಾಭಿಮಾನ :)
೧೮) ವಿದ್ಯುಚ್ಛಕ್ತಿ
೧೯) ಜಲ ಮಂಡಲಿ
೨೦) ಮುಖ್ಯ ಮಂತ್ರಿ

ಇನ್ನು ಸಹಸ್ರ ಸಹಸ್ರ ಹೆಸರುಗಳನ್ನು ಕೊಡಬಹುದು.
ಇವೆಕ್ಕೆಲ್ಲ ಕೇವಲ ಕನ್ನಡದಲ್ಲಿ ಏನು ಹೇಳಕ್ಕೆ ಆಗುತ್ತದೆ?

ಇನ್ನು ಕನ್ನಡಕ್ಕಾಗಿ ಶ್ರಮಿಸು ಸಂಘಗಳ ಹೆಸರೂ 'ಕನ್ನಡ''/'ಕರ್ನಾಟಕ ' ಬಿಟ್ಟು ಸಂಪೂರ್ಣ ಸಂಸ್ಕೃತ.

ನನಗೆ ನಿಮಗೆ ಬೇಜಾರು ಮಾಡಬೇಕೆಂಬ ಆಶಯವಿಲ್ಲ. ನೀವೆಲ್ಲ/ನಾವೆಲ್ಲ ಬರೆಯುವ ಕನ್ನಡದಲ್ಲಿ ಕನ್ನಡದ್ದು ಅಂತ ಹೇಳಿಕೊಳ್ಳಲು ಆಗುವ ಪದಗಳೇ ಕಡಮೆ. ಸಂಸ್ಕೃತಪದಗಳನ್ನು ಕನ್ನಡ ಪದ ಎಂದು ಜಂಭ ಕೊಚ್ಚಿಕೊಂಡು, ಕೇಳಿದರೆ, "ವಿಶ್ವದ ಎಲ್ಲ ಭಾಷೆಗಳೂ ಹೀಗೆ" ಅನ್ನೋದಾ?

ಅದಕ್ಕೆ ನಾನು ಹಿಂದೆಯೇ ಹೇಳಿದ್ದು

"ಏನೇ ಆದರು ಕನ್ನಡದಲ್ಲಿ ಸೂಕ್ತವಾದ ಸಂವಾದೀ/ಪಾರಿಭಾಷಿಕ ಪದಗಳ ಬೃಹತ್ ದಾರಿದ್ರ್‍ಯವಿದೆ . ಅಂತಹ ಪದಗಳು ಇದ್ದರೂ ಅವುಗಳನ್ನು ಯಾರು ಉಪಯೋಗ ಮಾಡುವುದಿಲ್ಲ. ಎಲ್ಲ out dated. ಏನೇ ಹೇಳಿಕೊಂಡರು, ಕನ್ನಡ ಸಂಸ್ಕೃತ, ಇಂಗ್ಲೀಶಿಗೆ ದಾಸ, ಅಡಿಯಾಳು. ಇವು ಇಲ್ಲದಿದ್ದರೆ ಕನ್ನಡದಲ್ಲಿ ಏನಿಲ್ಲ, ಖಾಲಿ ಖಾಲಿ."

Anonymous ಅಂತಾರೆ...

ಸ್ಲಂಸ್ಕ್ತ್ರುತವನ್ನ ಉಡಿದಾರಕ್ಕೆ ಸಿಕ್ಕಿಸಿಕೊಂಡ ಹಾಗೆ ಆಡುವ ಹೆಸರಿಲ್ಲದವ್ರೆ, ನಿಮ್ಮಂತ ಅನೇಕ ಚಡ್ದಿ-ಒಳಚಡ್ದಿ ನೋಡಿದ್ದಿವಿ ಬಿಡಿ ಸ್ವಾಮಿ. ಅದೇನೋ ಹೇಳ್ತಾರಲ್ಲ ನಿಮ್ಮಂತವರಿಗೆ ಒಳ್ಳೆ ಬಾಟ್ಲಲ್ಲಿ ಇದ್ರೆನೆ ಸಾರಾಯಿ ಇಲ್ಲಾಂದ್ರೆ ಕಂತ್ರಿಸರಾಬು ಅಂತ. ನಿಮ್ಮ ಆ ದೇವರ ಭಾಸೆನ ನಿಮ್ಮ ಹತ್ರನೇ ಇಟ್ಕೊಳ್ಳಿ, ಅದೇನು ಆ ಭಾಸೆಯಲ್ಲಿ ಕಿಸಿತ್ತಿರೋ ಕಿಸಿರಿ, ಮೇಲೆ ಇರೋ ಆ ಭಗವಂತ ಕಣ್ ಬಿಡ್ತಾನೆ ಇಲ್ಲಾ ನೀವು ಕಣ್ಣು ಮುಚ್ಚಿ ಆ ದೇವರ ಹತ್ತಿರ ಹೋಗ್ತಿರಾ.
ನಿಮಗೆ ಸ್ಲಂಸ್ಕ್ರುತದ ರಾಜಗನ್ನಡವೇ ಇರಲಿ,ಇಟ್ಕೊಳ್ಳಿ, ಆದ್ರೆ ನಮ್ಮ ಹಳ್ಳಿಮಕ್ಕಳ ಸುದ್ದಿಗೆ ಯಾಕೆ ಬರ್ತಿರಾ. ನಿಮಗೆ ತಿನ್ನೊಕ್ಕೆ ಅನ್ನ, ತೊಳಕೊಳಕ್ಕೆ ನೀರು ಬರ್ತ ಇರೋದೆ ನಮ್ಮ ಕೃಪೆಯಿಂದೆ. ಎನು ಪಟ್ಟಣದಲ್ಲಿ ಇದ್ದ ಮಾತ್ರಕ್ಕೆ ನಿಮಗೆ ೨ ಕೊಂಬು ಇದೆಯಾ, ಹುಚ್ಚು ಹುಚ್ಚಾಗಿ ಮಾತನಾಡ ಬೇಡಿ. ಆ ಹೆಸರುಗಳನ್ನು ಕೊಟ್ರಲ್ಲ, ಅವೆಲ್ಲಾ ನಿಮ್ಮಂತ ಚಡ್ದಿಯವರ ಕೆಲ್ಸವೇ. ಅದಕ್ಕೆ ನೋಡಿ, ದಿಲ್ಲಿಯ ಜನರನ್ನು ಉದ್ದೇಶಿಸಿ ಹೇಳುವಾಗ "ಜೀ" ಅನ್ನುವ ಪದ ಬಳಿಸ್ತಾರೆ.
ನಿಮ್ಮಂತ ಹೈದರಿಗೆ ಕನ್ನಡದಲ್ಲಿ ಹೇಳಿದರೆ "ಕೀಳು" ಅನ್ನೋ ಭಾವನೆ,ಅರ್ಥ ಆಗದ ಸ್ಲಂಸ್ಕ್ರುತದಲ್ಲಿ ಹೇಳಿದರೆ ಎನೋ ದೊಡ್ದದು ಅನ್ನುವ ಹಾಗೆ ...ಹಹಹ್ಹಹ

ನಮ್ಮ ಹಳ್ಳಿ ಕಡೆ ಒಮ್ಮೆ ಬನ್ನಿ..ಬಿಡುವು ಮಾಡಿಕೊಂಡು.

Anonymous ಅಂತಾರೆ...

hetta ammanige laadi yeleyo nimmantha jana iro tanaka, kannada kaali ne.

ishtu handiprema iroru yak swami olle
hedarikondu matadtirra. hogli bidi, swalpa quater hakkolli, meter bandru barabahudu.

ತಿಳಿಗಣ್ಣ ಅಂತಾರೆ...

ಹೆಸರಿಲ್ಲದವರೇ!!

ತುೞಿಲ್ ( ನಮಸ್ಕಾರ )

ನಿಮ್ಮ ಪಟ್ಟಿ ಸರಿ. ಕನ್ನಡದಲ್ಲೀಗ ಹೇರಳ ಸಕ್ಕದ(ಸಂಸ್ಕೃತ)ದ ಬಳಕೆಯಿದೆ ಅದೂ ಸರಿ.

ಆದರೆ ಕನ್ನಡದಲ್ಲಿ ಒರೆ(ಪದ)ಗಳೇ ಇಲ್ಲ ಅಂತ ಹೇಳೋದು, ಬಲು ತಪ್ಪು, ಸೈಪಲ್ಲ(ನ್ಯಾಯವಲ್ಲ).

ಕನ್ನಡದಲ್ಲಿ ಯಾವ ಕೊರೆತೆಯಿಲ್ಲ. ಕನ್ನಡದಲ್ಲಿ ಒರೆಸಿರಿ( ಪದಸಂಪತ್ತು) ಬಲು ದೊಡ್ಡದು ಮತ್ತು ಕನ್ನಡಕ್ಕೆ ಸಾಕಾಗುವ ಅನಿತು( ಅಷ್ಟು ) ಇದೆ.

ಈ ತೀರಾ ಸಕ್ಕದದ ಬಳಕೆಗೆ ಹೆಲವಾರು ಓಸುಗರಗಳಿವೆ(ಕಾರಣಗಳಿವೆ). ಅವನ್ನೆಲ್ಲ ಇಲ್ಲೇ ಬೆದಕುವುದು ಸಲ್ಲದು ಮತ್ತು ಸುಮ್ಮನೆ ಮಾತು ಉದ್ದವಾಗುವುದು.

ಇವೊತ್ತು ಕನ್ನಡದಲ್ಲಿ ಎಗ್ಗಿಲ್ಲದೆ ಸಕ್ಕದದ ಒರೆಗಳ ಬಳಕೆ ಇರುವುದಂತೂ ದಿಟ, ಅದನ್ನು ನಾನು ಒಪ್ಪುವೆನು. ಆದರೆ ಈ ಸಕ್ಕದದ ಒರೆಗಳು ಕನ್ನಡಕ್ಕೆ ಬೇಕೇ ಬೇಕೆಂದಿಲ್ಲ.

ನಮ್ಮ ಅಚ್ಚಕನ್ನಡ/ಅಪ್ಪಟ-ಕನ್ನಡ/ಅಣ್ಣೆಕನ್ನಡ(ಶುದ್ಧ ಕನ್ನಡ)ದಲ್ಲೇ ಒರೆಗಳನ್ನು ನೆಗಳ್ಚಬಹುದು( ರಚಿಸಬಹುದು )

ಕನ್ನಡದ ಒರೆಗಳ ಅರಿವೇ ಇಲ್ಲದೇ ಇರುವವರು ಹೀಗೆ ಹೇರಳ ಸಕ್ಕದ ತುಂಬಿದ್ದಾರೆ, ಅದನ್ನು ಇದುರಿಸಬೇಕು ಎಂಬುದು ನಿಮ್ಮ ಮಾತಿನ ಹಿಂದಿನ ಗುರಿಯಾಗಿದ್ದರೆ ಅದಕ್ಕೆ ನನ್ನ ಒಡಗೊರಲು( ಸಹಮತ) ವಿದೆ.

ಕನ್ನಡಕ್ಕೆ ಸಕ್ಕದದ ಒರೆಗಳೂ ಬೇಡ, ಹಿಂದಿ ಒರೆಗಳೂ ಬೇಡ. ಕನ್ನಡದಲ್ಲೇ ಎಲ್ಲವನ್ನು ಹೇಳಬರುವುದು.

ಇರಲಿ.. ಕನ್ನಡದಲ್ಲಿ ಒರೆಗಳಿಲ್ಲ ಎಂಬ ನಿಮ್ಮ ಮಾತು ಒಪ್ಪತಕ್ಕುದ್ದಲ್ಲ.

ಇಲ್ಲಿಗೆ ನಿಮ್ಮ ಹುಡುಗಾಟ ಸಾಕು.

ನನ್ನಿ!( ಧನ್ಯವಾದ ).

nareshov ಅಂತಾರೆ...

@Shrinivas with IE problems:

ಫಯರ್ಫಾks ಬಳಸಿ :)

http://www.mozilla-europe.org/en/products/firefox/

Anonymous ಅಂತಾರೆ...

ಶಿವ ಶಿವಲಿಂಗ!! ಎಂತಹ 'ವಿನಯ'ವಾದ ಸಭ್ಯವಾದ ಸುಸಂಸ್ಕೃತ ಮಾತುಗಳು!! :) ಅಬದ್ಧ!

ಶ್ರೀ ಕನ್ನಡ ಪಂಡಿತೋತ್ತಮ ಮಹೇಶರವರೆ,

ನೀವು ಪಾಪಾ ಏನೇನು ಹುಡುಕಿ ಹಾಗೆ ಬರೆದಿದ್ದೀರಿ? ಪಾಪಾ ತುಂಬಾ ಕಷ್ಟ, ಶ್ರಮ ಪಟ್ಟಿರಬೇಕು. ಆದರು ಕನ್ನಡದಲ್ಲಿ ಈಗ ಕೆಲಸಕ್ಕೆ ಬಾರದ ಪದಗಳು ಇವೆ ಅಂತ ತಿಳಿಸದಕ್ಕೆ ನಿಮ್ಮ ನನ್ನಿ( ಧನ್ಯವಾದ :) ).

"ಕನ್ನಡದ ಒರೆಗಳ ಅರಿವೇ ಇಲ್ಲದೇ ಇರುವವರು ಹೀಗೆ ಹೇರಳ ಸಕ್ಕದ ತುಂಬಿದ್ದಾರೆ, ಅದನ್ನು ಇದುರಿಸಬೇಕು ಎಂಬುದು ನಿಮ್ಮ ಮಾತಿನ ಹಿಂದಿನ ಗುರಿಯಾಗಿದ್ದರೆ ಅದಕ್ಕೆ ನನ್ನ ಒಡಗೊರಲು( ಸಹಮತ) ವಿದೆ."
:)

ರಾಮ ರಾಮ, ಹಿಂದೀ ವಿರೋಧವಾಯಿತು, ಈಗ ಸಂಸ್ಕೃತ ವಿರೋಧವೇ? ಅಷ್ಟೊಂದು ಧೈರ್ಯ ಇದೆಯೇ ನಿಮಗೆ? ಬರೀ ಬೊಗಳೆ, ಅಬದ್ಧ.

ಪಾಪಾ ಕನ್ನಡ ಯಾವುದು ಸಂಸ್ಕೃತ ಯಾವುದು ಎಂದು ಜ್ಞಾನವಿಲ್ಲದ 'ಹೈಕಳು' ಏನೋ ಆಟ ಆಡುತ್ತಾ ಇದ್ದೀರ, ಆಡಿಕೊಳ್ಳಿ.

ಶುಭವಾಗಲಿ. ದೇವರು ಒಳ್ಳೆಯದು ಮಾಡಲಿ.

ತಮ್ಮ ಕನ್ನಡ ಬೈಗುಳದಿಂದ, ಸೊಂಟದ ಕೆಳಗಿನ ಮಾತುಗಳಿಂತ ತಮ್ಮ ಆ ಸಭ್ಯತೆ ತೋರಿಸಿದವರಿಗೂ, ದೇವಭಾಷೆಯಾಡುವ ದೇವರುಗಳು ಶುಭ ಮಾಡಲಿ.

:) ( ಇಲ್ಲಿ ಇನ್ನು ಹೆಚ್ಚು ಬರೆದರೆ ಪ್ರಯೋಜನವಿಲ್ಲ.ಬರೀ ಅಬದ್ಧ )

nareshov ಅಂತಾರೆ...

@swetha: "ಒಲ್ಲೆ ಹಳೆಗನ್ನಡದ ಥರ ಇದೆ"

ಏನ್ರೀ, ಹಳಗನ್ನಡ ಅಂದ್ರೆ ಅನಿತ್ತು ಕೀೞಾ?

P.S: "ಒಲ್ಲೆ" ಅಲ್ರೀ‌ :P
"ಒಳ್ಳೆ"

Anonymous ಅಂತಾರೆ...

nareshov!

ಪಾಪಾ ಅವರಿಗೆ ನೆಟ್ಟಗೆ ಕನ್ನಡವೇ ಬರಲ್ಲ, ಅವರದು ಮಿಕ್ಸ್ ಕನ್ನಡ. ಇನ್ನು ಹಳಗನ್ನಡದ ೞ ಹೇಗೆ ತಿಳಿಬೇಕು.

ನೀವು ಹಳಗನ್ನಡ ಓದಿದ್ದೀರ? ಅದರಲ್ಲೂ ಬರೀ ಸಂಸ್ಕೃತವೇ ಅಲ್ವಾ!!

ನೋಡಿ, ಕುಮಾರವ್ಯಾಸ ಭಾರತ ಹೀಗೆ ಪ್ರಾರಂಭವಾಗುವುದು.

"ಶ್ರೀವನಿತೆಯರಸನೆ ವಿಮಲ ರಾಜೀವ ಪೀಠನ ಪಿತನೆ
ಜಗಕಧಿನಾಯಕನೇ ಸನಕಾದಿ ಸಜ್ಜನ ನಿಕರ ದಾತಾರ
ರಾವಣಸುರ ಮಥನ ಶ್ರವಣಸುಧಾ ವಿನೂತನ ಕಧನಕಾರಣ
ಕಾವುದು ಆಣತ ಜಗವ ಗದುಗಿನ ವೀರ ನಾರಯಣ"

ಇಲ್ಲಿ ಅರಸ, ಕಾವುದು, ಆಣ, ಗದುಗು ಈ ನಾಲ್ಕು ಪದಗಳಷ್ಟೇ ಕನ್ನಡ!! :) ಇದು 75%ಗಿಂತ ಅಧಿಕ ಅಲ್ವಾ!!

ನಿಮ್ಮ 'ಕೀೞಾ' ನೋಡಿ, ಒಂದು ಮಾತು ಹೇಳೋಣ ಅಂತ ಭಾವ ಬಂತು. ಹೇಳಿದೆ.

ಶುಭರಾತ್ರಿ! :) ನರೇಶನನ್ನು ನೋಡಿ ಕಲಿಯಬೇಕು ಹಲವರು :)

Anonymous ಅಂತಾರೆ...

... ಮತ್ತೆ ಬಂದೆ.
ಅನಿಸುತಿದೆ ಯಾಕೋ ಇಂದು..
ನನ್ನದು ತಪ್ಪಾಗಿದೆ ದಯವಿಟ್ಟು ಕ್ಷಮಿಸಿ, ಸುಮ್ಮನೆ ನಮ್ಮ ಜನರ ಕಾಲು ಎಳೆಯುವ ಬುದ್ಧಿ ನನಗೆ ಯಾಕೆ ಬಂದಿತೋ ನಾ ಕಾಣೆ. ಅದಕ್ಕೆ ನೋಡಿ ನಿಮ್ಮ ಮುಂದೆ ಹೆಸರು ಬರೆಯಲಾಗದೆ ಅನಾಮದೇಯನಾಗಿ ಮಾತನಾಡುತ್ತ ಇರುವುದು. ಬಿಡಿ ನನ್ನಂತ ಕಾಲೆಳೆಯುವ ಜನ ಇದ್ದೆ ಇರುತ್ತಾರೆ. ಆದರೆ ನನಗೆ ಹಳ್ಳಿ ಜನರ ಬಗ್ಗೆ ಗೌರವ ಇದೆ.
ಸಿಗೋಣ

Anonymous ಅಂತಾರೆ...

ಬಹಳ ಒಳ್ಳೇ ಬ್ಲಾಗ್. ಒಳ್ಳೆಯ ಬರಹಗಳು. ಕನ್ನಡಿಗರು ಕಡೆಗಣಿಸಬಾರದಂತಹ ವಿಷಯಗಳನ್ನು ಎತ್ತಿಕೊಂಡು ಸೊಗಸಾದ ಬರಹಗಳು ಬರುತ್ತಿವೆ. ಒಳ್ಳೆಯದಾಗಲ್!

ಇನ್ನು ಇಲ್ಲಿ ಸಂಸ್ಕೃತದ ವಿಷಯವನ್ನು "ಅನಾನಿಮಸ್" ಎತ್ತಿರುವುದು ಅಪ್ರಸ್ತುತವೂ ಹೌದು, ಇಲ್ಲಿ ಚರ್ಚೆ ಮಾಡಲಾಗುತ್ತಿರುವ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರುವುದರ ಗುರುತೂ ಹೌದು.

ಕನ್ನಡ ಸಂಸ್ಕೃತದಿಂದ ಸಾಕಷ್ಟು ಪದಗಳನ್ನು ಎರವಲು ಪಡೆದಿದೆ ಎನ್ನುವುದು ನಿಜ. ಹಾಗೇ ಪರ್ಶಿಯನ್, ಸ್ಪ್ಯಾನಿಷ್, ಪೋರ್ಚುಗೀಸ್ ಮುಂತಾದ ಭಾಷೆಗಳಿಂದಲೂ ಸಾಕಷ್ಟು ಎರವಲು ಪಡೆದಿದೆ. ಬೇರೆ ಭಾಷೆಗಳಿಂದ ಎರವಲು ಪಡೆದುಕೊಳ್ಳುವುದು ಒಂದು ಜೀವಂತ ಭಾಷೆಯ ಗುರುತು.

ಕನ್ನಡದಲ್ಲಿ ೭೫% ಸಂಸ್ಕೃತ ಇದೆ ಎನ್ನುವ ಮಾತಲ್ಲಿ ಹುರುಳಿಲ್ಲ. ೭೫ ಏಕೆ? ೧೦೦% ಸಂಸ್ಕೃತವಿರುವಂತೆಯೂ ಕನ್ನಡವನ್ನು ಬರೆಯಬಹುದು. ಹಾಗೆಯೇ ೧೦% ಸಂಸ್ಕೃತವಿರುವಂತೆಯೂ ಬರೆಯಬಹುದು (ಆಡುಗನ್ನಡ ಇದಕ್ಕೆ ಹತ್ತಿರವಾಗಿರುತ್ತದೆ...ಅನಾನಿಮಸ್ ಹೇಳಿರುವಂತೆ ಹಳ್ಳಿಗಳಲ್ಲಿ ಇದು ಸಿಗುತ್ತದೆ".

ಹೆಚ್ಚು ಸಂಸ್ಕೃತವಿದ್ದರೆ ಅದು "ಮೇಲ್ದರ್ಜೆಯ ಕನ್ನಡ" ಎನ್ನುವುದು ಕನ್ನಡದ ಡೈಗ್ಲಾಸಿಯಾ (ಭಾಷೆಯಲ್ಲಿ ಮೇಲು-ಕೀಳೆಂಬ ಎರಡು ರೀತಿ). ಡೈಗ್ಲಾಸಿಯಾ ಬಗ್ಗೆ http://en.wikipedia.org/wiki/Diglossia ನೋಡಿ. ಕಡಿಮೆ ಸಂಸ್ಕೃತ ಉಪಯೋಗಿಸಿದರೆ ಅದು ಕೀಳೆಂಬ ಮನೋಭಾವ ನಮ್ಮ ಸಮಾಜದಲ್ಲಿರುವ ಒಂದು ಪಿಡುಗು. ಆ ಪಿಡುಗೇ ಡೈಗ್ಲಾಸಿಯಾ.

ಇಲ್ಲಿ ಗಮನಿಸಬೇಕಾದ್ದೇನೆಂದರೆ ಏನ್ ಗುರು ಅವರು ತೋರಿಸಿಕೊಟ್ಟಿರುವಂತೆ ಆ ಜಾಹೀರಾತುಗಳಲ್ಲಿ ಬಳಸಲಾಗಿರುವ "ಸದಾ ಸರ್ವದಾ" ಮತ್ತು "ಚಶ್ಮಿಷ್" ಎಂಬ ಪದಗಳು ಆಡುಗನ್ನಡದಲ್ಲಿ ಬಳಕೆಯಲ್ಲಿಲ್ಲ. ಇದರ ಬದಲು "ಎಂದೆಂದಿಗೂ" ಮತ್ತು "ಸೋಡಾಬುಡ್ಡಿ" ಎಂಬ ಪ್ರಯೋಗವನ್ನೇ ಮಾಡುವುದು ಸರಿ ಎಂದು ಒಪ್ಪುತ್ತೇನೆ.

ನಮ್ಮ ನಾಲಿಗೆಯಲ್ಲಿ ಹೊರಳುವ ಪದಗಳನ್ನು ಎಲ್ಲಿಂದ ಎರವಲು ಪಡೆದರೂ ಅಡ್ಡಿಯಿಲ್ಲ. ಎಂದೆಂದಿಗೂ ನಮ್ಮ ಜನರಿಗೆ ಹೇಳಲೇ ಆಗದಂತಹ ಪದಗಳನ್ನು (ಉದಾ "ಬೃಹತ್" - ಇದರಲ್ಲಿ ಋಕಾರವನ್ನು ಸರಿಯಾಗಿ ಹೇಳಬಲ್ಲವನು ಈ ಪ್ರಪಂಚದಲ್ಲೇ ಯಾರೂ ಇಲ್ಲ) ಎಲ್ಲಿಂದಲೂ ತೆಗೆದುಕೊಳ್ಳುವುದು ಸರಿಯಲ್ಲ. ಅದು ಸಂಸ್ಕೃತವಾಗಿದ್ದರೂ ಅಷ್ಟೆ, ಮತ್ತೊಂದಾಗಿದ್ದರೂ ಅಷ್ಟೆ.

Anonymous ಅಂತಾರೆ...

ಕನ್ನಡದಲ್ಲಿ ಹೆಸರಿಡುವಾಗ ಅದು ಸಂಸ್ಕೃತದಲ್ಲೇ ಇರಬೇಕೆಂಬುದು ನಮ್ಮ ಜನರಿಗೆ ಹತ್ತಿರುವ ದೊಡ್ಡರೋಗ! ಈ ರೋಗ ಅನಾನಿಮಸ್ಸಿಗೂ ಹತ್ತಿರುವುದು ಆಶ್ಚರ್ಯವೇನಲ್ಲ! ಅವರು ಕೊಟ್ಟಿರುವ ಪದಗಳಿಗೆ ಸೊಗಸಾದ ಕನ್ನಡದ ಪದಗಳನ್ನು ಕೊಡಬಹುದು, ನೋಡಿ (ನನ್ನ ಕೈಲಾದಷ್ಟು ಬರೆದಿದ್ದೇನೆ, ಮಿಕ್ಕಿದ್ದನ್ನು ಬುದ್ಧಿವಂತರು ಮುಂದುವರೆಸಬಹುದು):

೧) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ = ದೊಡ್ಡಬೆಂಗಳೂರು ಪೊರೆಮನೆ

೨) ಕೇಂದ್ರ ಕಾರಾಗೃಹ = ನಡುವಿನ ಸೆರೆಮನೆ

೩) ವೃತ್ತ ಆರಕ್ಷಕ ನಿರೀಕ್ಷಕರ ಕಛೇರಿ = ಸುತ್ತು ಪೋಲೀಸ್ (ನಿರೀಕ್ಷ್ಕ ಅಂದರೆ ನಂಗೇ ಗೊತ್ತಿಲ್ಲ!) ಕಚೇರಿ
೪) ಹೊರ ವರ್ತುಲ ರಸ್ತೆ = ಹೊರ ಸುತ್ತುಬೀದಿ
೫) ಕನ್ನಡ ಸಾಹಿತ್ಯ ಪರಿಷತ್ತು = ಕನ್ನಡ ಬರಹ ಒಕ್ಕೂಟ
೬) ಕನ್ನಡ ಅಭಿವೃದ್ಧಿ ಪ್ರಾಧಿಕಾರ = ಕನ್ನಡ ಏಳಿಗೆ ಕಚೇರಿ
೭) ಶ್ವಾನ ದಳ = ನಾಯಿಪಡೆ
೯) ಶಿಶು ವಿಹಾರ = ಕೂಸುಮನೆ
೧೦) ಲೋಕಾಯುಕ್ತ = ಇದರಲ್ಲಿ ಆಯುಕ್ತ ಅಂದರೇನು ಅಂತ ಮೊದಲು ತಿಳಿಸಿಕೊಡಿ, ಆಮೇಲೆ ಕನ್ನಡದ ಪದ ಹೇಳುತ್ತೇನೆ.
೧೧) ಲೋಕಸಭಾ ಚುನಾವಣೆ = ಲೋಕಸಭೆಗೆ ಲೋಕಸಭೆ ಅಂತ ಹೆಸರಿಟ್ಟಿರುವುದರಲ್ಲೇ ಅರ್ಥವಿದ್ದಂತಿಲ್ಲ. "ಕೆಳಮನೆಗೆ ಆಯ್ಕೆ" ಎನ್ನಬಹುದು.
೧೨) ಧೂಮಪಾನ = ಹೊಗೆಕುಡಿತ
೧೩) ಶೌಚಾಲಯ = ಬಚ್ಚಲುಮನೆ
೧೪) ಮಹಿಳಾ ಪೋಲೀಸು = ಹೆಂಪೋಲೀಸು
೧೫) ಪ್ರವಾಹ ಭೀತಿ = ನೆರೆನಡುಕ
೧೭) ಭಾಷಾಭಿಮಾನ = ನುಡಿಯೊಲುಮೆ
೧೮) ವಿದ್ಯುಚ್ಛಕ್ತಿ = ಮಿಂಚಾರ್ಪು
೧೯) ಜಲ ಮಂಡಲಿ = ನೀರ್ಮನೆ
೨೦) ಮುಖ್ಯ ಮಂತ್ರಿ = ?

ತಲೆ ಓಡಿಸಿದರೆ ಕನ್ನಡಿಗನಿಗೆ ಈ ಪದಗಳು ಹೊಳೆಯದೆಯೇನಿಲ್ಲ. ನಿಜವಾಗಲೂ ನೋಡಿದರೆ ನಮಗೆ ಕನ್ನಡದ ಪದಗಳೇ ಸರಳಾವಾಗಿ ಬರುವುದು. ಮಾಧ್ಯಮಗಳು (ಆದರಲ್ಲೂ ವಿಜಯಕರ್ನಾಟಕ...ಅಬ್ಬಬ್ಬ!) ಮತ್ತು ಆಡಳಿತದಲ್ಲಿರುವವರು ಸಂಸ್ಕೃತಕ್ಕೆ ಇಲ್ಲದ ಪಟ್ಟ ಕಟ್ಟಿರುವುದರಿಂದ ನಮಗೆ ನಮ್ಮ ಭಾಷೆಯೇ ಮರೆತುಹೋಗುತ್ತಿದೆ!

nareshov ಅಂತಾರೆ...

ದೋಡ್ಡಣ್ಣನವರ ನುಡಿಪಟ್ಟಿ ಬಹಳ ಚನ್ನಾಗಿದೆ!

ಇಂತಹ ಪದಗಳಿದ್ದೂ ಬಳಸದೇ ಇರುವವರಿಗೆ ಅಚ್ಚಗನ್ನಡ ತಿಳಿದಿದೆಯೊ ಇಲ್ಲವೊ, ಇಲ್ಲವೆ ಬಳಸಲು ನಾಚಿಕೆಯಾಗುತ್ತದೊ ಆ ಸಿವನೇ ಬಲ್ಲ.

ರಾಘವೇಂದ್ರಾಚಾರಿಗಳು ಹೇಳುವಹಾಗೆ, Diglossia ಎಂಬುದು ಕನ್ನಡಿಗರಲ್ಲಿ ಇರಬಾರದಂತಹ ಪಿಡುಗು :|

Anonymous ಅಂತಾರೆ...

ದೊಡ್ಡಣ್ಣ ಅವರು ಅಷ್ಟೊಂದು ಕಷ್ಟುಪಟ್ಟು, ಶ್ರಮವಹಿಸಿ ಬರೆದ ಎಲ್ಲ ಅನುವಾದಗಳು ಯಾವ ಒಂದೂ ಉಪಯೋಗಕ್ಕಿಲ್ಲ. ಅವು ಚಾಲ್ತಿಯಲ್ಲೇ ಇಲ್ಲ. ನೀವು ಚಾಲ್ತಿಗೆ ತನ್ನಿ ಆಗ ನೀವು ಅಭಿನಂದಾನರ್ಹರು.

ಜಾಲ್ತಿ( ಹಿಂದಿ ಪದ :) )

ಇನ್ನು ರಾಘವೇಂದ್ರಾಚಾರ್‍ ಇವರ ಮಾತು ಬಿಡಿ... :) ಇವರದು ಬರಿ ಮಾತಿಗಾಗಿ ಮಾತು. ಇವರಲ್ಲೇ ಹುರುಳಿಲ್ಲ. :)

"ಕನ್ನಡ ಸಂಸ್ಕೃತದಿಂದ ಸಾಕಷ್ಟು ಪದಗಳನ್ನು ಎರವಲು ಪಡೆದಿದೆ ಎನ್ನುವುದು ನಿಜ. ಹಾಗೇ ಪರ್ಶಿಯನ್, ಸ್ಪ್ಯಾನಿಷ್, ಪೋರ್ಚುಗೀಸ್ ಮುಂತಾದ ಭಾಷೆಗಳಿಂದಲೂ ಸಾಕಷ್ಟು ಎರವಲು ಪಡೆದಿದೆ. ಬೇರೆ ಭಾಷೆಗಳಿಂದ ಎರವಲು ಪಡೆದುಕೊಳ್ಳುವುದು ಒಂದು ಜೀವಂತ ಭಾಷೆಯ ಗುರುತು.

ಕನ್ನಡದಲ್ಲಿ ೭೫% ಸಂಸ್ಕೃತ ಇದೆ ಎನ್ನುವ ಮಾತಲ್ಲಿ ಹುರುಳಿಲ್ಲ. ೭೫ ಏಕೆ? ೧೦೦% ಸಂಸ್ಕೃತವಿರುವಂತೆಯೂ ಕನ್ನಡವನ್ನು ಬರೆಯಬಹುದು. ಹಾಗೆಯೇ ೧೦% ಸಂಸ್ಕೃತವಿರುವಂತೆಯೂ ಬರೆಯಬಹುದು (ಆಡುಗನ್ನಡ ಇದಕ್ಕೆ ಹತ್ತಿರವಾಗಿರುತ್ತದೆ...ಅನಾನಿಮಸ್ ಹೇಳಿರುವಂತೆ ಹಳ್ಳಿಗಳಲ್ಲಿ ಇದು ಸಿಗುತ್ತದೆ"."

:) ಹಾಸ್ಯಾಸ್ಪದ.
ಒಂದು ಕಡೆ ಎಲ್ಲ ಭಾಷೆಗಳಿಂದಲೂ ಪದಗಳ ಬರಲಿ ಅಂತ ಹೇಳುತ್ತಾರೆ. ಹಾಗಾದರೆ ಹಿಂದಿಯಿಂದ ಯಾಕೆ ಬೇಡ?

ನಿನ್ನೊಂದು "ಆಡುಭಾಷೆ" ಅಂತ ವಾದವನ್ನು ತಿರುಗಿಸುತ್ತಾರೆ. "ಬೃಹತ್, ಅವಶ್ಯಕ, ಶೌಚಾಲಯ" ಮುಂತಾದವನ್ನು ಯಾರು ಆಡು ಮಾತಲ್ಲಿ ಉಪಯೋಗ ಮಾಡುತ್ತಾರೆ? ಅಂದರೂ ಅವು ಕನ್ನಡದಲ್ಲಿ ಸಭ್ಯ ಪದಗಳು ಅಲ್ವಾ ಆಚಾರ್ಯರೇ? :)

ಅವರ ಬರೆದಿರುವದನ್ನೇ ನೋಡಿರಿ. "Diglossia" ಬಗ್ಗೆ ಮಾತಾಡುವವರು, ಅದೇ diglossiaಕ್ಕೆ ಅವಲಂಬಿತರಾಗಿದ್ದಾರೆ. ಅವರಿಗೂ ಸಂಸ್ಕೃತವಿಲ್ಲದೇ ಬರೆಯಲು ಸಾಧ್ಯವೇ. ಪಾಪಾ ದೊಡ್ಡಣ್ಣ ಪ್ರಯತ್ನವಾದರೂ ಮಾಡಿ 'ದೊಡ್ಡ'ವರಾದರು :)

ಅವರಿಗೆ ಸಹ
"೧ ಉಪಯೋಗ,
೨ ವಿಷಯ,
೩ ಅಪ್ರಸ್ತುತ,
೪ ಚರ್ಚೆ,
೫ ಅರ್ಥ,
೬ ಭಾಷೆ
೭ ಜೀವಂತ
೮ ಸಂಸ್ಕೃತ
೯ ಮನೋಭಾವ
೧೦ ಸಮಾಜ
೧೧ ಗುರು
೧೨ ಜಾಹೀರಾತು
೧೩ ಸದ
೧೪ ಸರ್ವದಾ
೧೫ ಬೃಹತ್
೧೬ ಋಕಾರ
೧೯ ಪ್ರಚಂಚ

ಇಷ್ಟನ್ನು ಸಂಸ್ಕೃತದಲ್ಲೇ ಹೇಳಬೇಕಾಯಿತು. ಕನ್ನಡದಲ್ಲಿ ಇವೆಕ್ಕೆ ಎಲ್ಲಿದ ಪದಗಳು? :)

"ಈ ಸಂಸ್ಕೃತದ ಮಾತು ಇಲ್ಲಿ ಅಪ್ರಸ್ತತ" ಅನ್ನೋ ಇವರಿಗೆ ಇದರ ಪ್ರಸ್ತುತತೆಯನ್ನು ತಲೆಯಿಳಿಸಿಕೊಳ್ಳಲು ಬಹು ಕಷ್ಟ.

ಒಂದು ವಾದಕ್ಕೂ, ಮತ್ತೊಂದು ವಾದಕ್ಕೂ ವಿರೋಧಾಭಾಸ ಎದ್ದು ಕಾಣುವ ಇವರು ಗಣನೀಯವೇ? :) ಕಡೆಗಣನೀಯ :)

ಸದಾ ಸರ್ವದಾ ಇವೆಲ್ಲ ಉಪಯೋಗದಲ್ಲಿ ಇವೆಯಲ್ಲ. ಚಶ್ಮಿಷ್ ಅಂದರೆ ಗೊತ್ತಿಲ್ಲದಿದ್ದರೆ ಗೊತ್ತು ಮಾಡಿಕೊಂಡರಾಯಿತು.

ಇಷ್ಟೊಂದು ವಿಪುಲವಾದ ಸಂಸ್ಕೃತದಲ್ಲಿ ಕದ್ದು ಕನ್ನಡದ್ದು ಎಂದು ಜಂಭಕೊಚ್ಚಿಕೊಳ್ಳಲು ಆಗುವಾಗ ಈ ಒಂದು ಪದ ತಿಳಿಯಕ್ಕೆ ಏನು ರೋಗ?

ಕೇವಲ ವೃಥಾ ಕಲಹವಿದೆ. ಅರ್ಥವಿಲ್ಲದ್ದು.!

ಅವರು ಹೇಳುವ ಮಾತುಗಳಿಗೆ ಅವರೇ ಬದ್ಧರಿಲ್ಲ. :) ಅರ್ಥಹೀನ.!!

ಬದನೆಕಾಯಿ ಕತೆ ಪಂಡಿತರಂತ ಆಚಾರ್ಯರಿಗೆ ನಮೋನಮಃ !!

ಅಬದ್ಧ ಪ್ರಲಾಪ!

Anonymous ಅಂತಾರೆ...

ಅಯ್ಯಾ ಅನಾನಿಮಸ್ಸು!

ಹಿಂದಿಯಿಂದ ಬೇಡ ಅಂತ ಯಾರೂ ಅನ್ನೈಲ್ಲ. ಸುಮ್ಮನೆ ದುಡುಕಬೇಡ. ಹಿಂದಿಯಿಂದಲೂ ತೆಗೆದುಕೊಳ್ಳಬೇಕು, ತಮಿಳಿಂದಲೂ ತೆಗೆದುಕೊಳ್ಳಬೇಕು. ಯಾರಿಲ್ಲ ಅಂದವರು? ಆದರೆ ಈಗಾಗಲೇ ಕನ್ನಡಿಗರಲ್ಲಿ ಚಾಲ್ತಿಯಲ್ಲಿರುವ ಪದಗಳನ್ನು ಬಿಟ್ಟು ನಾಲಿಗೆಗೆ ಹೊರಳದಂಥ ಬೇರೆಭಾಷೆಯ ಪದಗಳನ್ನು ಕನ್ನಡಕ್ಕೆ ತರುವ ಅವಶ್ಯಕತೆಯಿಲ್ಲ.

ಡೈಗ್ಲಾಸಿಯಾ ಅನ್ನುವುದಕ್ಕೆ ನಾನು ಅವಲಂಬಿತವಾಗಿಲ್ಲ ಎಂದು ನಾನೇನು ಹೇಳಲಿಲ್ಲವಲ್ಲ? ನಾನೂ ಅವಲಂಬಿತನೇ, ನೀನೂ ಅವಲಂಬಿತನೇ. ಆದರೆ ನನಗದರ ದುಷ್ಪರಿಣಾಮಗಳ ಅರಿವಿದೆ, ನಿನಗಿಲ್ಲ. ಇಷ್ಟೇ ಅಂತರ.

ಇದನ್ನು ಕ್ರೈಸ್ತ ಮಿಶನರಿಗಳು ಅರ್ಥಮಾಡಿಕೊಂಡಿದ್ದಾರೆ, ಆದರೆ ನಮ್ಮ ಹಿಂದುಧರ್ಮವನ್ನು ಬಚಾಯಿಸಿಕೊಳ್ಳಲು ಹೊರಟ ಪೆದ್ದರಿಗೆ ಪೆದ್ದರಿಗೆ ಅರ್ಥವಾಗಿಲ್ಲ, ಅಷ್ಟೆ. ಕ್ರೈಸ್ತರು ತಿಳಿಗನ್ನಡದಲ್ಲಿ ಯಾವ ವಾದದಲ್ಲೂ ನಿಲ್ಲದ "ಸಿದ್ಧಾಂತ"ವನ್ನು ಪ್ರಚಾರ ಮಾಡುತ್ತಿದ್ದರೆ ಅದ್ಭುತವಾದ ಹಿಂದೂಧರ್ಮದ ಬಚಾವಣೆಗೆ ನಿಂತಿರುವವರು ಅರ್ಥವಾಗದ ಸಂಸ್ಕೃತಕ್ಕೆ ಮೊರೆಹೊಕ್ಕಿದ್ದಾರೆ.

ಇದೇ ಪೆದ್ದತನ ಮಾರುಕಟ್ಟೆಯಲ್ಲಿ ಜಾಹೀರಾತು ಬಿಡುವಾಗಲೂ ತೋರಿಸುತ್ತಾರೆ!

Anonymous ಅಂತಾರೆ...

ಬದಲಾವಣೆಯ ಬೆಟ್ಟದ ತುದಿಯಲ್ಲಿ ನಿಂತಿದ್ದೇವೆ ನಾವು. ಹತ್ತುವುದಕ್ಕೆ ಮೈಯಲ್ಲಿ ಮಿಂಚಿದ್ದರೆ ಬಾ. ಇಲ್ಲದಿದ್ದರೆ ಸುಮ್ಮನೆ ಹೊರಡು. ಬೆಟ್ಟ ಹತ್ತುವುದು ಕಷ್ಟ ಎಂದು ನನಗೆ ಗೊತ್ತಿಲ್ಲದೆ ಇಲ್ಲ. ಆದರೂ ಆಗುವುದೇ ಇಲ್ಲ ಎಂದು ಕೈಕಟ್ಟಿ ಕೂರುವುದು ಷಂಡತನ (ಸಂಸ್ಕೃತ: ಕ್ಲೈಬ್ಯ). ಕ್ಲೈಬ್ಯಂ ಮಾ ಸ್ಮಗಮಃ ಪಾರ್ಥ ನೈತತ್ವಯ್ಯುಪಪದ್ಯತೇ | ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪ್ರರಂತಪ || ನಾವು ಧರ್ಮ-ಅಧ್ಯಾತ್ಮಗಳನ್ನು ಬಿಡಬೇಕಿಲ್ಲ. ಬಿಡಬೇಕಾದ್ದು ಸಂಸ್ಕೃತದ ಕುರುಡು-ಹಿಂಬಾಲಿಕೆಯನ್ನು ಮಾತ್ರ.

Anonymous ಅಂತಾರೆ...

ಬೆಟ್ಟದ "ತುದಿ" ಎಂದು ತಪ್ಪಾಗಿ ಬರೆದಿದ್ದೇನೆ. ನಾನು ಹೇಳುವುದಕ್ಕೆ ಹೊರಟಿದ್ದು "ತಪ್ಪಲು" ಎಂದು. ತಪ್ಪಾಯಿತು.

Anonymous ಅಂತಾರೆ...

ರೀ ಆಚಾರ್ಯ, ಕೊನೆಗೂ ನಿಮ್ಮ ಆಚಾರ್ಯ ಬುದ್ಧಿ ತೋರಿಸಿ ಬಿಟ್ಟರಲ್ಲ. ಜಾತಿ ಧರ್ಮವನ್ನು ತಂದೇ ಬಿಟ್ಟಿರಲ್ಲ.
ನೀವು ದೇವಸ್ಥಾನದಲ್ಲಿ ಗಂಟೆ ಅಲ್ಲಾಡಿಸಿಕೊಂಡು ಪೂಜೆ ಮಾಡುವಾಗ ಕನ್ನಡದಲ್ಲಾ ಮಂತ್ರ ಪಠಣ ನಡೆಸುವುದು? ಸಂಸ್ಕೃತದಲ್ಲಿ ತಾನೆ.

ಈಗ ದೊಡ್ಡದಾಗಿ ಏನೋ ಕನ್ನಡ ಉದ್ದಾರ ಮಾಡಕ್ಕ ಬಂದೋರಂತೆ ಪೂಸ್ ಕೊಡಬೇಡಿ

ನೀವು ನಾಲಾಯಕ್ಕು. ನಿಮ್ಮದು ಕೇವಲ ಬದ್ಧತೆ ಇಲ್ಲ ಅಬದ್ಧಮಾತು.
.
.
.
ದೊಡ್ಡಣ್ಣ ಅವರೆ... ನಿಮ್ಮ ಕನ್ನಡ ಜ್ಞಾನ ನೀವು ಭಾವಿಸಿದಷ್ಟು ಉತ್ತಮವಾಗಿಲ್ಲ

ಬದಲು ಇದು ಉರ್ದು :)
ಷಂಡ ಇದು ಸಂಸ್ಕೃತ( ಕನ್ನಡವಲ್ಲ ) :)
ಹಿಂಬಾಲಿಕೆಯಲ್ಲಿ ಇರುವ ಪಾಲಿಕೆ ಸಂಸ್ಕೃತವೇ :)

ಇನ್ನು ನನ್ನ ಸಂತೋಷಕ್ಕೆ ಭಗವದ್ಗೀತೆಯ ಉದ್ಧೃತ. ಇಲ್ಲೂ ಸಂಸ್ಕೃತವೇ ಅವಶ್ಯವು ನಿಮಗೆ.

ಧರ್ಮ, ಆಧ್ಯಾತ್ಮಕ್ಕೆ ಕನ್ನಡದಲ್ಲಿಯಾವ ಪದ ಇದೆ?

ಅಸಭ್ಯವಚನ ಏಕವಚನ ಪ್ರಯೋಗದಲ್ಲಿ ನಿಷ್ಣಾತರು ನೀವು. ಇಷ್ಟು ಬಿಟ್ಟು ಬರೀ ಟೊಳ್ಳು!!

ತುದಿ, ತಪ್ಪಲೋ ನಿಮಗೆ ಪ್ರಜ್ಞೆಯಿಲ್ಲ. ಏನೇನೋ ಬಡಬಡಾಯಿಸಬೇಡಿ. ಮೊದಲು ಕನ್ನಡ ಯಾವುದು ಸಂಸ್ಕೃತ ಯಾವುದು, ಉರ್ದು ಯಾವುದು ಅದನ್ನು ಅಭ್ಯಾಸ ಮಾಡಿ.

ಅಯ್ಯೋ ಈ ದಡ್ಡಶಿಖಾಮಣಿಗಳಿಂದ ಕನ್ನಡೋದ್ಧಾರವೇ ಹರಿ ಹರಿ!! :)

ಏನೇನೋ ಬರೆಯಬೇಡಿ, ಅಬದ್ಧ!!

Anonymous ಅಂತಾರೆ...

ನಿನ್ನ ಅರ್ಥವಿಲ್ಲದ ವಾದಕ್ಕೆ ಏಕವಚನವಲ್ಲದೆ ಇನ್ನೇನೂ ಸಿಗುವುದಿಲ್ಲ. ಭಗವದ್ಗೀತೆಯ ಶ್ಲೋಕವನ್ನು ನಿನಗಾಗೇ ಬರೆದಿದ್ದು, ನಿಜ. ಆ ಶ್ಲೋಕದ ಅರ್ಥವೇನಾದರೂ ನಿನಗೆ ಗೊತ್ತಿದ್ದರೆ ನಿನ್ನ ಷಂಡತನವನ್ನು ಬಿಡು. ಹೌದು, ಸಂಸ್ಕೃತವು ಕನ್ನಡವನ್ನು ಸಾಕಿ ಸಲಹಿದ ಭೇಷ್ಮನಿದ್ದಂತೆ. ಅವನನ್ನು ಯುದ್ಧದಲ್ಲಿ ಎದುರಿಸುವುದಕ್ಕೆ ನಿನ್ನ ಷಂಡತನ ಹೋಗಬೇಕು. ಭೀಷ್ಮನ ಆಶೀರ್ವಾದವನ್ನೇ ಪಡೆದು ಅವನನ್ನೇ ಕೊಲ್ಲಲು ಹೊರಡುವವನಷ್ಟು ಗಂಡೆದೆ ಬೇಕು, ಕರ್ಮಯೋಗಿಯ ಎದೆ ಬೇಕು. ನಿನಗೆ ಭೀಷ್ಮನ ಆಶೀರ್ವಾದವೂ ಇಲ್ಲ, ಅವನನ್ನು ಎದುರಿಸುವ ಗಂಡಸುತನವೂ ಇಲ್ಲ, ಎದುರಿಸುವುದೇ ಗೀತೆಯ ಸಾರ ಎನ್ನುವ ಅರಿವೂ ಇಲ್ಲ. ತಿಳಿದುಕೋ, ಭೀಷ್ಮನಿಗೂ ಸಾವಿಲ್ಲ, ನಿನಗೂ ಇಲ್ಲ. ಅರಿವಿಲ್ಲದೆ ಒದರದಿರು.

ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ |
ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ||

Anonymous ಅಂತಾರೆ...

anaonymous avare naanu nimma jnanakke mechchuttene yavagalu namage uttara tiLiyada prashneyanna kelidaga adu avarige adhika prasangavaagi kanuttade

dhoddanna avru mahila police ge hempolice antha barithare police acha kannadada shabda antha nanage gotte irlilla swami.:)

samskrutavanna kannadada hettamma anthare namma bhashe samskrutadinda bahala shabdagalanna eravalu padedide..ivaga adanne kannadashabda samskruta yakkachitha annodralli artha illa..

vasi avru yoltha irodraagiro dhitanu nodi sami..sumge nam bhase nam bhase andre aagakilla vasi byare bhasegu marvade kodbeku...:)

Anonymous ಅಂತಾರೆ...

ಆಚಾರಿ ಆಚಾರಿ ಬುದ್ಧಿಯನ್ನಲ್ಲದೆ ಇನ್ನೇನು ತೋರಿಸೀಯಾನು? ಹಾಗೆಯೇ ಹೆಸರಿಲ್ಲದ ನಿಮ್ಮ ವಾದಕ್ಕೂ ಹೆಸರಿಲ್ಲ ಬಿಡಿ!

ಒಂದೇ ವಾಕ್ಯದಲ್ಲಿ ನಿಮ್ಮ ವಾದದ ಸಾರಾಂಶವೇನು ಎಂದು ತಿಳಿಸಿ, ಒಂದು ಸರಿಯಾದ ಹೆಸರಿಟ್ಟುಕೊಳ್ಳಿ, ಆ ಹೆಸರಿಗೆ ಒಪ್ಪುವಂತೆ ಮಾತಾಡಿ.

ತಿಳಿಗಣ್ಣ ಅಂತಾರೆ...

ಹೆಸರಿಲ್ಲದವರ ಮಾತುಗಳಲ್ಲಿ ಒಳ್ಳೆಯದನ್ನು ನೋಡಿದರೆ...

ಕೆಲವು ತೂಕವಾದ ಸಂಗತಿಗಳನ್ನು ಕೂಡ ಅವರು ಎತ್ತಿದ್ದಾರೆ. ಅದಕ್ಕೆ ಅವರಿಗೆ ನನ್ನಿ!

೧) ಕನ್ನಡದಲ್ಲಿ ಬೇಡವಾದೆಡೆಯೆಲ್ಲ ಕಗ್ಗಂಟಾದ, ಉಲಿಯಲು ಎಡರಾದ ಹೇರಳ ಸಕ್ಕದ ಒರಗಳ ಬಳಕೆ.
೨) ನಾವು ಕನ್ನಡಿಗರು ದೊಡ್ಡ ಮನದವರು ಎಂಬಂತೇ, ಸಿಕ್ಕಸಿಕ್ಕ ನುಡಿಗಳಿಂದೆಲ್ಲ ಒರೆಗಳನ್ನು ಎರವಲು ಪಡೆಯುವುದು.
೩) ಹಲವರಿಗೆ ದಿಟವಾದ ಕನ್ನಡವು ಯಾವುದು, ಸಕ್ಕದ ಯಾವುದು ಎಂಬ ಅರಿವೇ ಇಲ್ಲದಿರುವುದು.

ಹೀಗೆ ಹಲವು ಒಳ್ಳೆಯ ಉಂಕಿಸ(ಯೋಚಿಸ)-ತಕ್ಕ ಸಂಗತಿಗಳನ್ನು ಹೇಳಿದ್ದಾರೆ. ಒಳ್ಳೆಯದು.

ಆದರೆ ಅವರ ಮಾತಿನಲ್ಲಿ ಕನ್ನಡದಲ್ಲಿ ಒರೆಗಳೇ ಇಲ್ಲ ಎಂಬುದು ಬಲು ತಪ್ಪು. ಬಳಕೆಯಲ್ಲಿಲ್ಲ ಎಂಬುದು ಸರಿ.

ಇನಿತ್ತು ಬಿಟ್ಟು ಇಲ್ಲಿ ಹೆಚ್ಚು ಮಾತಾಡಲು ಬೇರೇನು ಇಲ್ಲ!

ಇನ್ನು ಈ ಮಾತನ್ನು ಬೆಳಸದೆ, ಏನೇನೋ ಕೆದಕದೇ, ಹದ ತಪ್ಪಿ ನುಡಿಯದೇ ಇರುವುದು ಎಲ್ಲರಿಗೂ ಮಾಡ-ತಕ್ಕದ್ದು.

ಇಲ್ಲಿಗೆ ಮುಗಿಸಿರಿ. ಹೆಸರಿಲ್ಲದವರ ಮಾತುಗಳಲ್ಲಿ ಒಳ್ಳೆಯ ಸಂಗತಿಗಳೆಂಬ ತಿರುಳು ಪಡೆದು, ಹೊಟ್ಟನ್ನು ಬಿಟ್ಟು ಬಿಡೋಣ.
ಬರಿ ಹೊಟ್ಟಿಗಾಗಿ ಕಿತ್ತಾಟ ಬೇಡ!

ಈ ಸಂಗತಿಗಳು
೧) "ಎಲ್ಲ ನುಡಿಯಿಂದ ಒರೆಗಳನ್ನು ಪಡೆಯುವುದು ತಕ್ಕುದಾದುದೇ" ಎನ್ನುವುದು
೨) ಕನ್ನಡ ಅಂದರೆ ಯಾವುದು, ಸಕ್ಕದವು ಯಾವುದು, ಉರ್ದು ಯಾವುದು ಎಂದು ಗೊತ್ತು ಮಾಡಿಕೊಳ್ಳದೇ ಮಾತಿಗಿಳಿಯುವುದು.
೩) ಸುಮ್ಮನೆ ಮಾತನ್ನು ತಿರುಳಿನಿಂದ ಆಚೆಗೆ ಒಯ್ಯವುದು
೪) ಹಳೆಗನ್ನಡವನ್ನು ಕೀಳಾಗಿ ಕಾಣುವುದು

ಇವೆಲ್ಲ ತಕ್ಕುದಾದಲ್ಲ. ಈ ಬಗೆಯಲ್ಲಿ ನಮ್ಮ ನಡೆಯಿರಬಾರದೆಂದು ನನ್ನ ಅನಿಸಿಕೆ.

ಈ ಮಾತುಕತೆಯು ಹದದಲ್ಲೇ ಮುಂದುವರಿಲಿ, ಹದ-ತಪ್ಪಿದ ಮಾತು ಯಾರಿಂದಲೂ ಬರದೇ ಇರಲಿ ಎಂದು ಹಂಬಲಿಸಿವೆನು.

ಇಲ್ಲಿಗೆ ಸಾಕು!

ಎಲ್ಲಿಗೂ ಒಳ್ಳೆಯದಾಗಲಿ,
ನನ್ನಿ!
-ಮಹೇಶ

Anonymous ಅಂತಾರೆ...

ಶ್ರೀಮಾನ್ಯ ಮಹೇಶ ಅವರು ಸಾಧುವಾಗಿ ಹೇಳಿದ್ದಾರೆ.

ಯಾರೋ ಎರಡು ವಾಕ್ಯದಲ್ಲಿ ಹೇಳಿ ಎಂದು ವಿನಂತಿಸಿಕೊಂಡಿದ್ದಾರೆ.

ಆ ಎರಡು ವಾಕ್ಯಗಳು ಇವು.

೧) ಕನ್ನಡದಲ್ಲಿ ಪದಗಳ ದಾರಿದ್ರ್‍ಯವಿಲ್ಲದಿದ್ದರೆ, ಸಂಸ್ಕೃತದ ಪದಗಳನ್ನು ಪ್ರಯೋಗ ಮಾಡದೇ, ಕೇವಲ ಕನ್ನಡದ ಪದಗಳಿಂದ ಲೇಖನಗಳನ್ನು ರಚಿಸಿ ತೋರಿಸುವುದು ಅತಿ ಅವಶ್ಯ. ಅದರ ವಿನಾ ಹಾಸ್ಯಾಸ್ಪದ.

೨) ಸುಮ್ಮನೆ ಸಂಸ್ಕೃತದ ಪದಗಳನ್ನೆಲ್ಲ ಕದ್ದು, ಕನ್ನಡದ್ದು ಎಂದು ಪೊಳ್ಳು ಜಂಭದಿಂದ ಅಬದ್ಧಗಳನ್ನು ಹೇಯವಚನವನ್ನು ಆಡಿಕೊಂಡು ಅಹಂಕಾರಪಡಬೇಡಿ.

ಅಂತಿಮವಾಗಿ ಆ ದೇವರಲ್ಲಿ ಪ್ರಾರ್ಥನೆ ಈ ರಾಘವೇಂದ್ರಾಚಾರ್ಯರು, ದೊಡ್ಡಣ್ಣನವರು ಇಂತವರಿಗೆ ಸದ್ಬುದ್ಧಿ, ಸಭ್ಯತೆ ಬರಲಿ.

ಶುಭವಾಗಲಿ!

Anonymous ಅಂತಾರೆ...

ಹಹ್ಹಹಾ...
ನಿಜಾ ಹೇಳಿದರೆ ಯಾಕೆ ಉರಕೊಳ್ಳುತ್ತಿರಾ,ನಿಮ್ಮ ಸನಾತನಿ ಬುದ್ಧಿ ಬಯಲು ಮಾಡಿದರೆ ತಲೆ ಪರಪರ ಕೆರಕೊಂಡು, ನಿಮ್ಮ ದೇವರ ಭಾಸೆಯಲ್ಲಿ ಎಲ್ಲಾ ಚೆನ್ನಾಗಿರಲಿ ಹಾರೈಸೊದು ನೋಡಿದರೆ ನಗು ಬರುತ್ತದೆ. ಅದು ಮೊದಲು ಬೇಕಾಗಿರುವುದು ನಿಮಗೆ ಕಣ್ರಿ.

ನಿಮ್ಮ ಪ್ರಕಾರ ನಿಮ್ಮ ಸ್ಲಂಸ್ಕ್ರುತ ಅಷ್ಟು ಚೆನ್ನಾಗಿ ಇದ್ದರೆ, ಯಾಕೆ ಹೊಗೆ ಹಾಕಿಸಿಕೊಳ್ತಾ ಇತ್ತು?.
ಪಾಪ..ಸತ್ತ ಭಾಷೆಯ ಪರವಾಗಿ ವಾದ ಮಾಡಿ, ಕನ್ನಡ ಸರಿ ಇಲ್ಲ, ಹಳ್ಳಿ ಭಾಸೆ ಅಂತ ಕರೆಯೊದು ನೋಡಿದರೆ. ನಿಮ್ಮ ಹೊಟ್ಟೆ ಉರಿ ತೋರಿಸುತ್ತದೆ ಮತ್ತು ನಿಮ್ಮ ಮೇಲು ಕೀಳುಭಾವ ತೋರಿಸುತ್ತದೆ,ಅದಕ್ಕೆ ದಮ್ ಇಲ್ಲದೆ ಹೆದರಿಕೊಂಡು ಮಾತನಾಡುತ್ತ ಇರುವುದು. ಹಿಂದೆ ಮಹಭಾರತದಲ್ಲಿ ಶಿಖಂಡಿ ಇಟ್ಕೊಂಡು ಯುದ್ಧ ಮಾಡುತ್ತ ಇದ್ದರು, ಅದೆಲ್ಲಾ ಕೇಳಿದ್ದೆ , ಈಗ ನೋಡೊ ಕೃಪೆ ಮಾಡಿದ್ರಿ ಸಾಮಿ. ನನಗೆ ಬೇಜಾನ್ ಕುಸಿ ಆಯಿತು.

- ನಿಮ್ಮ್
ಸಿದ್ಧ
ಕೊರಟಗೆರೆ

Anonymous ಅಂತಾರೆ...

ಕನ್ನಡದಲ್ಲಿ ಸಂಸ್ಕೃತದ ಪದಗಳು ಸಾಕಶ್ಟಿವೆ. ಅವುಗಳನ್ನೆಲ್ಲ ಸಂಸ್ಕೃತದ ಪದಗಳಲ್ಲ ಎಂದು ಯಾರೂ ಹೇಳುತ್ತಿಲ್ಲ (ಕೆಲವರಿಗೆ ಗೊತ್ತಿಲ್ಲದೆ ಇರಬಹುದು, ಅಷ್ಟೆ). ಹಾಗೆಯೇ ಯಾವ ಪದಗಳು ಕನ್ನಡಿಗರ ನಾಲಿಗೆಯಲ್ಲ್ ಹೊರಳುತ್ತವೆಯೋ, ಹೊರಳುತ್ತಿವೆಯೋಅವುಗಳು ಕನ್ನಡದ ಪದಗಳಲ್ಲ ಎಂದೂ ಹೇಳಲಾಗುವುದಿಲ್ಲ. ಇಂಗ್ಲೀಷಿನ ಅನೇಕ ಪದಗಳು ಲ್ಯಾಟಿನ್ ಪದಗಳೂ ಹೌದು ಎಂಬಂತೆ.

ತಮಿಳರಂತೆ ಕನ್ನಡವನ್ನು ಸಂಸ್ಕೃತರಹಿತವಾಗಿ ಮಾಡುವ ಅವಶ್ಯಕತೆಯೇನಿಲ್ಲ. ಸಂಸ್ಕೃತದ್ವೇಷ ಈ ಪ್ರಪಂಚದವರಿಗೆ ತರವಲ್ಲ.

ಒಟ್ಟಿನಲ್ಲಿ ಕನ್ನಡ ಎಂದರೆ ಕರ್ನಾಟಕದ ಜನರು ಆಡುವ ಭಾಷೆ. "ಐತೆ ಪೈತಿ" ಎಲ್ಲವೂ ಕನ್ನಡವೇ. ಇದನ್ನು ಕೀಳು ಎಂದು ಕರೆಯುವುದು ತಪ್ಪು ಎಂದು ನನ್ನ ಅನಿಸಿಕೆ. ಡೈಗ್ಲಾಸಿಯಾ ಬಗ್ಗೆ ತಿಳಿಸಿದ್ದಾಕ್ಕೆ ರಾಘವೇಂದ್ರಾಚಾರ್ ಅವರಿಗೆ ನನ್ನಿ! ನಿಜಕ್ಕೂ ಇದು ನಮ್ಮ ದೇಶದ ಪ್ರತಿಯೊಂದು ರಾಜ್ಯದಲ್ಲೂ ಇರುವ ಪ್ಡಿಗು!

ಅದಿರಲಿ (ಮೂಲ ವಿಷಯಕ್ಕೆ ಹಿಂತಿರುಗುತ್ತ...) ಜಾಹೀರಾತುಗಳಲ್ಲಿ ಕನ್ನಡದ ಆಡುಭಾಷೆಯ ಪದಗಳನ್ನೇ ಹಾಕಬಹುದಿತ್ತು.

Anonymous ಅಂತಾರೆ...

ಅನಾನಿಮಸ್ಸಿಗೆ ಕನ್ನಡವೂ ಅರ್ಥವಾಗಲ್ಲ, ಸಂಸ್ಕೃತವೂ ಅರ್ಥವಾಗಲ್ಲ ಅನಿಸುತಿದೆ! ಅರ್ಥವಾಗಿದ್ದರೆ ನಾನು ಹೇಳಿದ್ದು ಅರ್ಥವಾಗುತ್ತಿತ್ತು. ಕನ್ನಡದಲ್ಲಿ ಸಂಸ್ಕೃತವೇ ಇಲ್ಲದಂತೆ ಮಾತಾಡುತ್ತೇನೆ ಎಂದಾಗಲಿ ಮಾತಾಡಬೇಕು ಎಂದಾಗಲಿ ನಾನು ಹೇಳಲಿಲ್ಲ. ಹಾಗೆಯೇ ಸಂಸ್ಕೃತದಿಂದ ಪದಗಳನ್ನು ಕದ್ದು ಯಾರೋ ಜಂಭ ಪಡುತ್ತಿದ್ದಾರೆ ಎನ್ನುವುದೂ ಸರಿಯಲ್ಲ, "ಅಬದ್ಧ". ಸಾಕಿನ್ನು ಇಂಥವರ ಜೊತೆ ಏಗಿದ್ದು! ನಮಸ್ಕಾರ!

Anonymous ಅಂತಾರೆ...

ಬ್ಲಾಗ್ ನಡೆಸುವವರಿಗೆ ಮನವಿ: ಇಲ್ಲಿ Anonymous ಜನರಿಗೆ ಅನಿಸಿಕೆ ಬರೆಯುವುದಕ್ಕೆ ಬಿಡದಿರುವುದೇ ಒಳ್ಳೆಯದು. ಇದರಿಂದ ಅಶ್ಲೀಲ ವೆಬ್-ಸೈಟ್ ಗಳಿಂದ ಸುಮ್ಮಸುಮ್ಮನೆ spam ಬರುತ್ತದೆ.

ತಿಳಿಗಣ್ಣ ಅಂತಾರೆ...

ರಾಜೇಶ ಐತಾಳರೇ....

ಇಂಗ್ಲೀಶು, ತಮಿಳುಗಳ ಮಾತು ಇಲ್ಲಿ ದಯವಿಟ್ಟು ಬೇಡ, ತಮಿಳು ತಮಿಳೇ, ಸಕ್ಕದ ಸಕ್ಕದವೇ, ಕನ್ನಡ ಕನ್ನಡವೇ. ಇವುಗಳ ನಡುವೆ ಹೋಲಿಕೆಯ ತಕ್ಕಡಿ ಯಾವ ದೊಡ್ಡಗುರಿಗೆ?. ಅದು ಸಲ್ಲದ ಗೊಡವೆಗೆ ಈಡು ಮಾಡುವುದು.

ಕನ್ನಡದ ಒರೆ-ಸರಿ ತುಂಬು-ತುಳುಕುವಂತಹದ್ದು. ಕನ್ನಡದ್ದೇ ಒರೆಗಳ ಬಳಕೆಯನ್ನು ಹೆಚ್ಚಿಸಲು ಮೊಗಸೋಣ. ಹುಡುಕಿದರೆ ಸಾಕು ಸಾಕು ಎನ್ನುವನಿತ್ತು ಒರೆಗಳು ದೊರೆಯುವುವು.

ಎಲ್ಲ ಮಂದಿಯ ಕನ್ನಡವೂ ಮೇಲುಮಟ್ಟದ್ದೇ. ಐತೆ ಇದು ಕನ್ನಡದ ಒರೆಯೇ. ಇದನ್ನು ಕನ್ನಡನೆಲದಲ್ಲಿ ತುಂಬ ಮಂದಿ ಬಳಸುವರು.

Diaglossiaದ ಬಗ್ಗೆ.

ಕನ್ನಡದಲ್ಲಿ Triglossia ಇದೆ :)
೧) ಬರಹ ಕನ್ನಡ
೨) ಆಡು ಕನ್ನಡ
೩) ಕಬ್ಬ ಕನ್ನಡ ( ಕವನದ ಕನ್ನಡ ) :)

ಹಿಂದಿ, ಸಕ್ಕದ, ಇಂಗ್ಲೀಶಲ್ಲಿ ಈ ತೊಂದರೆ ಕಡಮೆಯೆಂದು ಕೇಳಿರುವೆನು.

ಸಾರುಮಾತುಗಳಲ್ಲಿ ಆಡುನುಡಿಯೇ ಚೆನ್ನು. ಆದರೆ ಅದು ಯಾವ ಓಸುಗರದಿಂದ ಹೀಗೆ ಗಡಿಬಿಡಿ ಗೋಜಲು ಕನ್ನಡ ಬಳಸುವರೂ ತಿಳಿಯದು. ಇದು ನಾಚಿಕೆಗೇಡು.

ದೊಡ್ಡಣ್ಣನವರೇ,
---> ಇರಲಿ ಬಿಡಿ. :). ಮತ್ತೆ ಬಂದಾನು ಸಕ್ಕದದವ!! :)
====
ಒರೆ = ಪದ
ಮೊಗಸು = ಪ್ರಯತ್ನ
ರಟ್ಟು/ಸಾರು = advertise, make people know
ಓಸುಗರ = ಕಾರಣ
ಕಬ್ಬ = ಸಾಹಿತ್ಯ
ಅನಿತ್ತು = ಅಷ್ಟು

http://dsal.uchicago.edu/dictionaries/burrow/
ಇಲ್ಲಿ ಅಚ್ಚಗನ್ನಡ(native)ದ ಒರೆಗಳು ಸಿಗುವುವು.

ಹಾಗೆ
ಕೊಳಂಬೆ ಪುಟ್ಟಣ್ಣಗೌಡ "ಅಚ್ಚಗನ್ನಡ ನುಡಿಕೋಶ" ನೋಡಬಹುದು.

ಕೊಳೆಂಬೆ ಪುಟ್ಟಣ್ಣಗೌಡರ "ತಿಳಿಗನ್ನಡ ನುಡಿವಣಿಗಳು" ಎನ್ವ ಕಬ್ಬವಿದೆ. ಅದರಲ್ಲಿ ಒಂದೂ ಕನ್ನಡವಲ್ಲದ ಒರೆ ಬಳಸಿಲ್ಲ. ಸಕ್ಕದವೂ ಇಲ್ಲ. ಹುರುಪಿರುವವರು ಓದಿರಿ.

ಹಾಗೆ ಅಂಡಯ್ಯನ "ಕಬ್ಬಿಗರ ಕಾವ"ವೂ ಇದೆ.

ನನ್ನಿ! ಹದುಳವಿರಲಿ!

Anonymous ಅಂತಾರೆ...

ಹೋಗಲಿ ಬಿಡಿ ಪಾಪ, ಆ ಹೆಸರಿಲ್ಲದ ಪುಕ್ಕಲು ಹೈದನ್ ಯಾಕ್ ಗೋಳು ಹುಯ್ಕೋತೀರಾ? ಎಲ್ಲಾರೂ ಹೇಳ್ತಿರೋದೂ ಒಂದೇ. ಸಂಸ್ಕ್ರುತ ಸಾಕು, ಕನ್ನಡ ಬೇಕು ಅಂತ ತಾನೇ. ಹಲೋ, ಹೆಸರಿಲ್ಲದ, ಅನಾಸಿನ್,... ದೊಡ್ಡಣ್ಣ, ಮಹೇಶರಂತೆ ಅಪ್ಪಟಕನ್ನಡ ಪದ ಹೇಳೋಕೆ ನೋಡು. ಅದು ಬಿಟ್ಟು ಸಂಸ್ಕ್ರುತ ಬಿಟ್ರೇ ಕನ್ನಡಕ್ಕೆ ಗತಿ ಇಲ್ಲಾ ಅನ್ನಬಾರದು. ಒಂದು ಕಡೆ ಇಂಗ್ಳೀಸಿನ ಪದಗಳನ್ನು ಹಂಗಂಗೆ ಇಡಬೇಕು ಅನ್ನೋರಿದಾರೆ, ಯಾವ ನುಡಿಯಿಂದ ಬಂದ್ರು ತುಗೋಳಿ ಅನ್ನೋರು ಇದಾರೆ, ಸಂಸ್ಕ್ರುತದ ಪದ ಆದರೆ ಪರವಾಗಿಲ್ಲಾ, ಬೇರೆ ನುಡಿಯದ್ದಾಗಿರಬಾರದು ಅಂತ ಅನ್ನೋದು ಸರಿಯಲ್ಲ. ಅಚ್ಚಕನ್ನಡ ಪದನೇ ಬೇಕು, ಇಲ್ಲಾ ಅಂದ್ರೇ ಕನ್ನಡದಲ್ಲೇ ಪದವನ್ನು ಹುಟ್ಟಿಸಬೇಕು, ಅದೂ ಆಗಲಿಲ್ಲ ಅಂದ್ರೆ ಅದು ಯಾವ ನುಡಿಯಿಂದ ಬಂದಿರುತ್ತೋ ಹಂಗಂಗೇ ಬಿಡಬೇಕು. ಪೋಲಿಸ ಸ್ಟೇಹೋಗಲಿ ಬಿಡಿ ಪಾಪ, ಆ ಹೆಸರಿಲ್ಲದ ಪುಕ್ಕಲು ಹೈದನ್ ಯಾಕ್ ಗೋಳು ಹುಯ್ಕೋತೀರಾ? ಎಲ್ಲಾರೂ ಹೇಳ್ತಿರೋದೂ ಒಂದೇ. ಸಂಸ್ಕ್ರುತ ಸಾಕು, ಕನ್ನಡ ಬೇಕು ಅಂತ ತಾನೇ. ಹಲೋ, ಹೆಸರಿಲ್ಲದ, ಅನಾಸಿನ್,... ದೊಡ್ಡಣ್ಣ, ಮಹೇಶರಂತೆ ಅಪ್ಪಟಕನ್ನಡ ಪದ ಹೇಳೋಕೆ ನೋಡು. ಅದು ಬಿಟ್ಟು ಸಂಸ್ಕ್ರುತ ಬಿಟ್ರೇ ಕನ್ನಡಕ್ಕೆ ಗತಿ ಇಲ್ಲಾ ಅನ್ನಬಾರದು. ಒಂದು ಕಡೆ ಇಂಗ್ಳೀಸಿನ ಪದಗಳನ್ನು ಹಂಗಂಗೆ ಇಡಬೇಕು ಅನ್ನೋರಿದಾರೆ, ಯಾವ ನುಡಿಯಿಂದ ಬಂದ್ರು ತುಗೋಳಿ ಅನ್ನೋರು ಇದಾರೆ, ಸಂಸ್ಕ್ರುತದ ಪದ ಆದರೆ ಪರವಾಗಿಲ್ಲಾ, ಬೇರೆ ನುಡಿಯದ್ದಾಗಿರಬಾರದು ಅಂತ ಅನ್ನೋದು ಸರಿಯಲ್ಲ. ಅಚ್ಚಕನ್ನಡ ಪದನೇ ಬೇಕು, ಇಲ್ಲಾ ಅಂದ್ರೇ ಕನ್ನಡದಲ್ಲೇ ಪದವನ್ನು ಹುಟ್ಟಿಸಬೇಕು, ಅದೂ ಆಗಲಿಲ್ಲ ಅಂದ್ರೆ ಅದು ಯಾವ ನುಡಿಯಿಂದ ಬಂದಿರುತ್ತೋ ಹಂಗಂಗೇ ಬಿಡಬೇಕು. ಪೋಲಿಸ ಸ್ಟೇಶನ್, ಈ ಕಾನ್ಸೇಪ್ಟ್ ಬಂದಿದ್ದು ಇಂಗ್ಳೀಸರಿಂದ. ಅದನ್ನು "ಆರಕ್ಷಕ ಠಾಣೆ" ಅಂತಾರೆ, ಆದರೆ ಯಾರು ಮಾತಲ್ಲಿ ಅದನ್ನು ಬಳಸಲ್ಲ. ಅಂದ ಮೇಲೆ ಹೆಸರು ಬೇರೆ ಮಾಡಿ ಏನು ಬಂತು? "ರಕ್ಷಕರು" - ಈ ಪದ ಆಡು ಮಾತಿನಲ್ಲಿಲ್ಲ. ಕಾಯುವವರು - ಈ ಪದ ಇದೆ. ಹಿಂದಿನ ಅರಸರ ದಿನಗಳಲ್ಲಿ 'ದಂಡಿ'ಗಳು ಅಂತ ಇದ್ದರು. ಅದನ್ನೇ 'ಪೋಲಿಸ್' ಅನ್ನುವದಕ್ಕೆ ಹೆಸರು ಕೊಡಬಹುದಾಗಿತ್ತು.ಶನ್, ಈ ಕಾನ್ಸೇಪ್ಟ್ ಬಂದಿದ್ದು ಇಂಗ್ಳೀಸರಿಂದ. ಅದನ್ನು "ಆರಕ್ಷಕ ಠಾಣೆ" ಅಂತಾರೆ, ಆದರೆ ಯಾರು ಮಾತಲ್ಲಿ ಅದನ್ನು ಬಳಸಲ್ಲ. ಅಂದ ಮೇಲೆ ಹೆಸರು ಬೇರೆ ಮಾಡಿ ಏನು ಬಂತು? "ರಕ್ಷಕರು" - ಈ ಪದ ಆಡು ಮಾತಿನಲ್ಲಿಲ್ಲ. ಕಾಯುವವರು - ಈ ಪದ ಇದೆ. ಹಿಂದಿನ ಅರಸರ ದಿನಗಳಲ್ಲಿ 'ದಂಡಿ'ಗಳು ಅಂತ ಇದ್ದರು. ಅದನ್ನೇ 'ಪೋಲಿಸ್' ಅನ್ನುವದಕ್ಕೆ ಹೆಸರು ಕೊಡಬಹುದಾಗಿತ್ತು.

ತಿಳಿಗಣ್ಣ ಅಂತಾರೆ...

ಪೋಲೀಸಿಗೆ ಬಂಟರು, ಕಾವಲು, ನಾಡಾಳುಗಳು, ಇನ್ನು ಬೇಕುಬೇಕಾದಂತೆ ಕನ್ನಡದಲ್ಲೇ ಒರೆ ಮಾಡಿಕೊಳ್ಳಬಹುದು. ನಮ್ಮ ಹಿಮ್ಮೆ(ಇತಿಹಾಸ)ದ ಹೊತ್ತಗೆ ನೋಡಿದರೆ ಸಿಗುವುದು. ಹೊಯ್ಸಳರು, ವಿಜಯನಗರದವರ, ನಾಡುಗಳಿಲ್ಲಿ ಪೋಲಿಸ್ ಇತ್ತಲ್ಲ.

ಆದರೆ ನಮ್ಮ ಸರಕಾರಕ್ಕೆ ಒಂದು "ಬೃಹತ್" ಐಲು ಇದೆ. ಕಂಡಕಂಡದ್ದಕ್ಕೆಲ್ಲ ಸಕ್ಕದದಲ್ಲೇ ಹೆಸರಿಡುವುದು.

ನಮ್ಮ ಜಕ್ಕನಹಳ್ಳಿ ಬಸ್ ನಿಲ್ದಾಣದಲ್ಲಿ "ಧೂಮಪಾನ ನಿಷೇಧಿಸಿದೆ" ಅಂತ ಬರೆದಿರುತ್ತಾರೆ. ಪಾಪಾ ಹಳ್ಳಿಯವರಿಗೆ ಇದು ಹೇಗೆ ತಿಳಿಯಬೇಕು? ಅದಕ್ಕೆ ಅವರು ಬಸ್ ನಿಲವಲ್ಲೇ ಬೀಡಿ ಸೇದ್ತಾರೆ.

ಅದರ ಹೊರತು "ಹೊಗೆ ಸೇದಬೇಡಿ" ಅಂದರೆ ಸಲೀಸಾಗಿ ಎಲ್ಲ ತೊಂದರೆ ಮುಗಿಯಿತಲ್ಲ.

ಹೀಗೆ ಬೇಕಾದನಿತ್ತು ಮಾದರಿಗಳು ಸಿಗುವುವು.
ಮಹಿಳೆಯರ ಆಸನ :) ( ladies seat )
ಪುರುಷ ಶೌಚಾಲಯ
ಕುಕ್ಕುಟ ಪಾಲನಾ ಇಲಾಖೆ( ಕೋಳಿ ಇಲಾಕೆ )
ಪಶುಸಂಗೋಪನಾ ಇಲಾಖೆ ( ದನದ ಇಲಾಕೆ )
ಅನಕ್ಷರತಾ ನಿರ್ಮೂಲನಾ ಕೇಂದ್ರ :)

ಇದನ್ನು ಸರಿಪಡಿಸಲು, ಯಾರಿಗೂ ಹುರುಪು ಇದ್ದಂತಿಲ್ಲ. ಇದರ ಕಡೆ ಸರಕಾರ, ಕಬ್ಬಿಗರು( ಸಾಹಿತಿಗಳು) ಯಾರು ಗಮನವನ್ನು ಹರಿಸಲು ಅಣಿಯಿಲ್ಲ.

Standard ಸರಕಾರದ ಕನ್ನಡವೆಂದರೆ ಅದು "ಕುಕ್ಕುಟ ಪಾಲಾನಾ " ತರ ಇದೆ.

ಇದರ ಕಡೆ ನಾವು ಕೊಂಚ ಗಮನ ಮಾಡಬೇಕು! ಬರೀ ಕನ್ನಡದ 'ಪ್ರತ್ಯಯಗಳಿದ್ದರೆ" ಅದು ಕನ್ನಡವಾಗುವುದಿಲ್ಲ. ಅಲ್ಲಿ ಕನ್ನಡದ್ದೇ ಒರೆ ಇರಬೇಕು.

Anonymous ಅಂತಾರೆ...


It is waste to write in Kannada. Because these idiots don't understand anything other than there vulgar slang.

What stupidity is this?

It is impossible to use only Kannada, the language with scarcity of words. I still say Kannada is nothing but 90% Sanskrit, but these fanatics won't agree.

whatever yet another stupid group! bye bye

Anonymous ಅಂತಾರೆ...

ಮಹೇಶ್ ಅವರೆ,

ನೀವು ಕನ್ನಡ ತಾಣಗಳಲ್ಲಿ ಅಚ್ಚ ಕನ್ನಡದಲ್ಲಿ ಬರೆಯುವ ರೀತಿ ನನಗೆ ಬಹಳ ಇಷ್ಟವಾಯಿತು. “ಧೂಮಪಾನ ನಿಷೇಧಿಸಿದೆ” ಎಂಬುದನ್ನು “ಹೊಗೆ ಸೇದಬೇಡಿ” ಅಂತ ಸರಳವಾಗಿ, ನೇರವಾಗಿ ಮನಮುಟ್ಟಿಸುವ ಕನ್ನಡ ಪದಗಳನ್ನು ನಮಗೆ ಪರಿಚಯ ಮಾಡಿಸುತ್ತಿರುವುದಕ್ಕೆ ನನ್ನಿ.

[ನಿಮ್ಮ ಈಮೈಲ್ ವಿಳಾಸ ಗೊತ್ತಾಗಲಿಲ್ಲ. ಅದಕ್ಕೆ ಇಲ್ಲಿ ಬರೀತಾ ಇದ್ದೇನೆ.]

ತಿಳಿಗಣ್ಣ ಅಂತಾರೆ...

ಶೇಷಾದ್ರಿವಾಸು ಅವರೇ,

ನನ್ನ ಮಾತುಗಳನ್ನು ಮೆಚ್ಚಿದಕ್ಕೆ ನಿಮಗೂ ನನ್ನಿ!

mahesha_b_s@yahoo.com ಇಲ್ಲಿಗೆ ಬರಯಿರಿ. ನನಗೆ ತಲುಪುವುದು. :)

ನಲವು!

Anonymous ಅಂತಾರೆ...

What stupidity is this?
ಯಾಕೆ ಬುದ್ಧಿ ನಿಮಗೆ ನಿಮ್ಮ ದೇವರ ಭಾಷೆಯಲ್ಲಿ ಪದ ಖಾಲಿ ಆಯಿತಾ. ನಿಮ್ಮ ಸ್ಲಂಸ್ಕ್ರುತ ಸತ್ತ ಭಾಷೆ ಅಂತ ಒಪ್ಪಿಕೊಂಡರಲ್ಲ.
ನೀವು ಬಳಸುತ್ತ ಇರೋ ಬಾಸೆಯಲ್ಲೂ ಲ್ಯಾಟೀನ್,ಫ್ರೆಂಚ್ ಪದಗಳೇ ಇವೆ. ಹಾಗೆ ಅಂತ ಈ ಭಾಷೆ ಸರಿ ಇಲ್ಲ ಅಂತ ರಾಣಿ ವಿಕ್ಟೋರೀಯಾಗೆ ಹೇಳ್ತಿರಾ?
ನಿಮ್ಮ ಹುಚ್ಚು ವಾದ ಕೇಳೊರಿಲ್ಲ ಅಂತ ಬೇರೆ ಜನರನ್ನು fanatics ಕರೆಯೋದು ಬೋ ನಗು ತರ್ತದೆ. ನಿಮಗೆ ದೊಡ್ಡ ನಮಸ್ಕಾರ. ನಿಮ್ಮಂತ ಮಗ ಪನ್-ಡಿತರನ್ನ ಬೇಟಿ ಮಾಡಿ ಕುಸಿ ಆಯಿತು. ನೋಡ್ಕೊಳ್ಳಿ ನಿಮ್ಮ ಉಡಿದಾರ ಇನ್ನಾ ಅಯ್ತ ಇಲ್ಲ ಎಲ್ಲಾದರೂ ಬಿದ್ದು ಹೋಯಿತಾ ಅಂತ.

Anonymous ಅಂತಾರೆ...

ಸಿವು( ಇವರಿಗೆ "ಶಿವ"ಅಂತ ಉಚ್ಚಾರಣೆ ಮಾಡಕ್ಕೆ ನಾಲಗೆ ಹೊರಳುತ್ತದೆಯೇ? ) :)

ನಿಮ್ಮ ಬುದ್ಧಿ ಏನಿದ್ದರೂ ಉಡಿದಾರ, ಸೊಂಟದ ಕೆಳಗೇ ಓಡುವುದು. ಎಷ್ಟೇ ಆದರೆ ಅಸುಸಂಸ್ಕೃತರು :)

ಸಂಸ್ಕೃತದಲ್ಲೇ ನಾನು ಬರೆಯಬಹುದು ಆದರೆ ನಿಮ್ಮಂತ ದಡ್ಡಶಿಖಾಮಣಿಗಳಿಗೆ, ವಡ್ಡರಿಗೆ, ಗಮಾರರಿಗೆ ಕನ್ನಡದಂತ ಭಾಷೇ ನೆಟ್ಟಗೆ ಬರುವುದಿಲ್ಲ, ಇನ್ನು ಶ್ರೇಷ್ಠ-ಸಂಸ್ಕೃತ ಅರ್ಥ ಆಗುವುದು ಅಸಾಧ್ಯ ಅಸಂಭವ.

ಸುಮ್ಮನೆ ಮನೆಗೆ ಹೋಗಿ ಗುಂಡು ಗುಂಡು ರಾಗಿ ಮುದ್ದೆ ಉಂಡು ನಿದ್ರೆ ಮಾಡವುದಕ್ಕೆ ಲಾಯಕ್ಕು! ನೀವೋ ನಿಮ್ಮ 'ಬಾಸೆ'ಯೋ ಶಿವ ಶಿವ!

ಕರ್ನಾಟಕದ ನಾಡಗೀತೆ ಅಂತ ಇದೆಯಲ್ಲ

"ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ"
ಈ ವಾಕ್ಯದಲ್ಲಿ "ಕರ್ನಾಟಕ"ಎನ್ನುವ ಅಪಭ್ರಂಶ ಮಾತ್ರ ಕನ್ನಡ. ಮಿಕ್ಕಿದೆಲ್ಲ ಸಂಸ್ಕೃತ. ಅದನ್ನು ನೀವು ಹಾಡಿದ್ದೋ ಹಾಡಿದ್ದು. :)

ಇನ್ನೂ ಬೇಕಾ ನಿಮ್ಮ ಪ್ರಸಿದ್ಧವಾದ ಕನ್ನಡದ್ದು ಎಂದು ಜಂಭಕೊಚ್ಚಿಕೊಳ್ಳುವ ಕವನಗಳು..

"ವಿಶ್ವವಿನೂತನ ವಿದ್ಯಾಚೇತನ ಸರ್ವಹೃದಯ ಸಂಸ್ಕಾರಿ ಜಯ ಭಾರತಿ" ೧೦೦% ಸಂಸ್ಕೃತ

"ತೇನ ವಿನಾ ತೇನ ವಿನಾ ತೃಣಮಪಿ ನಚಲತಿ ತೇನ ವಿನಾ" ೧೦೦% ಸಂಸ್ಕೃತ

ಎಲ್ಲವೂ ಸಂಸ್ಕೃತಮಯವೇ. ನೀವು ದೊಡ್ಡದಾಗಿ ಜಂಭಕೊಚ್ಚಿಕೊಂಡು ಹೇಳುವ ಹಾಡುಗಳಲ್ಲೇ ೯೦% ಸಂಸ್ಕೃತ ಇದೆ. :)

ಸಂಸ್ಕೃತ ಸತ್ತಿದೆಯಾ? ನೀವು ಹಾಡಿ ಹಾಡಿ ಬದುಕಿಸುತ್ತಿದ್ದೀರಲ್ಲ!! ನಿಮ್ಮ ಕನ್ನಡವೇ ಸತ್ತ ಭಾಷೆ, ಇಲ್ಲ ಸತ್ವಹೀನ ಭಾಷೆ. ಎಲ್ಲದಕ್ಕೂ ಸಂಸ್ಕೃತದಿಂದ ಪದಗಳನ್ನು ಕದಿಯುತ್ತಿದೆ.

ಇದೆಲ್ಲ ನಿಮ್ಮಂತ 'ಐತೆ ಪೈತೆ'ಗಳಿಗೆ ಎಲ್ಲಿಂದ ಅರ್ಥವಾಗಲು ಸಾಧ್ಯ. ಅದಕ್ಕೂ 'ಜ್ಞಾನ' ಅನ್ನುವುದು ಬೇಕು. :) ಸುಮ್ಮನೆ ಮನೆಗೆ ಹೋಗಿ ಮಲಗಪ್ಪ 'ಒರಟಗೆರೆ' ಶಿವು.

ಅಶ್ಲೀಲವಾಗಿ ಬೈಯುವುದು ಬಿಟ್ಟು ಜೀವನದಲ್ಲಿ ಏನನ್ನಾದರೂ ಉತ್ತಮವಾದುದನ್ನು ಕಲಿತಿದ್ದೀರ? 'ಭೂಮಿಗೆ ಭಾರವಾಗಿರುವ ನರರೂಪಿ ಮೃಗ'!

ಬನವಾಸಿ ಬಳಗ ಅಂತಾರೆ...

ಈ ಬ್ಲಾಗಿನಲ್ಲಿ ಅನಿಸಿಕೆಗಳನ್ನು ಬರೆಯುವವರು ಯಾವಾಗಲೂ ಒಂದು ವಿಷಯವನ್ನು ನೆನಪಿನಲ್ಲಿಡಿ ಎಂದು ಕೋರಿಕೊಳ್ಳುತ್ತೇವೆ: ನೀವು ಏನೇ ಬರೆದರೂ ಆ ಬರಹದಿಂದ ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳ್ಗೆ ಸಾಧ್ಯವೆ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. ಇಲ್ಲಿ ಹಲವರು ಆಡಿರುವ ಮಾತುಗಳಿಗೂ ಈ ಏಳ್ಗೆಗೂ ಯಾವ ನಂಟೂ ಇಲ್ಲ. ಯಾರೊಬ್ಬರನ್ನೂ ಬೆರಳೆತ್ತಿ ತೋರಿಸುವುದು ನಮ್ಮ ಉದ್ದೇಶವಲ್ಲ, ಆದರೆ ಅನಿಸಿಕೆಯನ್ನು ಬರೆಯುವ ಮುನ್ನ ಆ ನಿಮ್ಮ ಅನಿಸಿಕೆಯಿಂದ ನಮ್ಮ ಹೆಗ್ಗುರಿಯನ್ನು ಮುಟ್ಟಲು ಆದೀತೆ ಎಂದು ಕೇಳಿಕೊಂಡೇ ಮುಂದುವರೆಯಿರಿ. ಆಗದು ಎನಿಸಿದರೆ ಆ ಮಾತನ್ನು ಆಡದಿರುವುದೇ ಲೇಸು. ವ್ಯಕ್ತಿ-ವ್ಯಕ್ತಿಗಳ ನಡುವಿನ ಜಗಳಗಳಿಗೆ ಇದು ಜಾಗವಲ್ಲ.

Breeze ಅಂತಾರೆ...

Am from Hubli, and this is just so that someone here pounces on me as a non-kannadiga. I am typing this letter in English only because I find it faster.

People who talk about removing words from languages or using something else do gross injustice to their mother tongue. This is because a language grows only when it keeps adding words that are commonly spoken by the layman. For instance, a lot of words like "Dove" "Enne" would have made it to the kannada dictionary if it had shown the same kind of flexibility as English. For any word, you can chalk up at least three different synonyms, one invariably derived from Sanskrit.

One example: Come fast

Bellary: Bhadaan baa
Mangalore: Sheeghra (Derived from Sanskrit ad verbatim) baa
Mysore: Bega (derived from vega - Sanskrit) baa
Hubli: Lagoon (Marathi origin) baa

Sky: Aaakasha (Sanskrit), Baanu (must be pure Kannada)

I have never heard anyone use baanu so far in my life.

I can go on and on and on.

If Kannada shows the same kind of flexibility that English does, it will be much more popular than it is today. English borrows heavily from almost any language in the world and is the world's fastest growing language. Sanskrit died out because it became the domain of the upper castes and so, could not grow.

Look at Tamil for example. Not many people can understand the language because there are no Sanskrit words to relate to.

Sadaa sarvada are both accepted Kannada words, thank you, even though they may not be in the dictionary. Sarvarigoo swagatha...?
Chashma is not a Hindi word but comes from Urdu, Chashm (eye). Jargu comes from Sarko (urdu again for "move".) Sarkothira...? Chhatri is a persian word.

Kannada's beauty lies in the fact thta it accepts words and enriches itself. Let not your narrow-mindedness destroy the spirit of this all-encompassing language.

Cheers,

Anonymous ಅಂತಾರೆ...

ಮೊದಲು ಕನ್ನಡದಲ್ಲಿ ಬರೆಯಿರಿ ಸ್ವಾಮಿ.!!

ನೀವು ಅಮೆರಿಕದಲ್ಲೂ ಆಸ್ಟ್ರೇಲಿಯದಲ್ಲಿ ಕೂತು ಇದನ್ನೆಲ್ಲ ಹೇಳೋದು ಸುಲಬ.

ಬಸ್ ನಿಲ್ದಾಣದಲ್ಲಿ "ಧೂಮಪಾನ ನಿಷೇದಿಸಿದೆ" ಅಂತ ಯಾಕೆ ಹಾಕಬೇಕು? ಅದು ಹಳ್ಳಿಯವರಿಗೆ ತಿಳಿಯಯೋದೆ ಇಲ್ಲ.

ತುಸು ಅರ್ತ ಮಾಡಿಕೊಳ್ಳಿ. ನಿಮ್ಮ ಸಂಸ್ಕ್ರುತವನ್ನ ನಿಮ್ಮ ಮನೆಯಲ್ಲಿ ಇಟ್ಟಿಕೊಳ್ಳೀ, ಯಾಕೆ ಹಿಂಗೆ ಕನ್ನಡಕ್ಕೆ ಸಂಸ್ಕ್ರುತ, ಉರ್ದು, ಹಿಂದಿ, ಎಲ್ಲ ಬರೆಸಿ ಹಾಳು ಮಾಡ್ತೀರ?

ಕನ್ನಡಕ ಅಂತ ಕನ್ನಡದಲ್ಲಿ ಪದ ಇಲ್ವಾ?
"ಎಂದೂ ಯಾವಾಗಲೂ" ಅಂತ ಕನ್ನಡದಲ್ಲೇ ಹೇಳಬಹುದಲ್ಲ.

ಮೊದಲು ಕನ್ನಡದಲ್ಲಿ ಬರೆಯಿರಿ, ಆಗ ಕಷ್ಟ ಗೊತ್ತಾಗುತ್ತದೆ.

Breeze ಅಂತಾರೆ...

Mr Kannadiga,

As long as fanatics like you abound, I see no way in which Kannada can get some standing.

I work in Bangalore, thank you, and not in the US or Australia. I am not quite sure how many people have gained from your kannada and although I work for a software concern, I teach Kannada as a past-time. Most people from the north find it easier to learn when I teach them the sanskrit words than the pure kannada ones. The ultimate aim is that they should be able to find their way around in Karnataka.

Dhoomapana nishedhisidhe annuva badalu Cigarette sedabedi ennabahudu. Aadare Cigarette english pada. Beedi sedabedi ennabahhdu aadare beedi hindi pada. :) Nimma accha kannada nighantinalli bere padagaliddaru adu jana samaanyarige thalupisi nodi.

Illi iruva bahalashtu mandi dakshina karnatakadavarendanisuthade. Swalpa nammoorugala kade bandu nodi. Hubbali, Dharwada, Belgaum, Bidar, Gulbarga, Bellary yavara kannadadalli hindi allade, marathi, telugu, urdu padagalu prathi dinada bhaasheyalli balasutheve. Thindiya badalu nashta annuvudaralli thappenu. Thindi endare thinisu antha artha nammooralli.

Trainnalli hoguvaga maguvinondige kannadadallli mathanadalu prayathniside. Aadare maguvina thayi "nanna maguvige english baruthade" endu abhimaana pattaru. Intha samayadalli, kannadavannu hegadaru kapadabeku. Neevu shuddha kannadavannu janara gantalinalli thooralikke prayathnisidare, avaru kannadavanne bittu biduthhare, joke'!

Breeze ಅಂತಾರೆ...
This comment has been removed by the author.
Anonymous ಅಂತಾರೆ...

Scarred letters,

I completely agree with you on the fact that Kannada needs to be flexible. No doubt about that. However, I think you are missing the point of the original post. "Sadaa Sarvadaa" is never used in day-to-day Kannada. On the other hand, "Endendigoo" very much is.

Wonder if you've heard the term "Scintillate, Scintillate Asterus Minim!" There are people who argue that it's Latin, and there are people who argue that it is English. But what is certain is that nobody says that instead of the simple "Twinkle twinkle little star"!

Nobody questions that words have to be given and taken from language to language. However, when the need to communicate is more than to bedazzle the reader with flowery language made up of words from a language which is linguistically distant, words which are already in use are the ones which should take priority.

Anonymous ಅಂತಾರೆ...

ಮೊದಲು ಕನ್ನಡದಲ್ಲಿ ಬರೆಯಿರಿ.

ಆಮೇಲೆ ನಿಮ್ಮ ಜೊತೆ ಮಾತು!!

ಏನ್ ಹೇಳಿದರು ಕನ್ನಡದಲ್ಲಿ ಹೇಳಿ, ಆಗ ನಿಮ್ಮ ಕನ್ನಡದ ಬಗ್ಗೆ ಇರುವ ಒಲವು ಗೊತ್ತಾಗುತ್ತದೆ.

ಬರೀ ಇದೇ ಆಯ್ತು ನಾನು ಹುಬ್ಬಳ್ಳಿ, ನೀನು ಮೈಸೂರು, ನಾನು ಮಂಗಳೂರು, ನೀನು ಬಳ್ಳಾರಿ.

ಎಲ್ಲಿಂದ ಎಲ್ಲಿಗೂ ವಿಷಯ ಅಂಟು ಹಾಕೋದು.

ಕನ್ನಡದಲ್ಲಿ ಬರೆಯಿರಿ!!

ಬನವಾಸಿ ಬಳಗದೋರಿಗೆ ಒಂದು ಮನವಿ, ಈ ಇಂಗ್ಲೀಶು, ಕಂಗ್ಲೀಶಲ್ಲಿ ಬರೆದ ಕಮೆಂಟನ್ನು ಅಳಿಸಿ ಹಾಕಿ, ಇಲ್ಲ ಹಾಗೆ ಬರೆಯಲು ಬಿಡಬೇಡಿ.

ಕನ್ನಡ ಬರೆಯಕ್ಕೆ ಬರಲ್ಲ, ಏನೇನೋ, ಎಲ್ಲಿಂದ ಎಲ್ಲಿಗೋ ಮಾತಾಡ್ತಾರೆ.

ಮೊದಲು ಕನ್ನಡದಲ್ಲಿ ಬರೆಯಿರಿ, ಆಮೇಲೆ ಮುಂದಿನ ಮಾತು.!

ಸಂಸ್ಕೃತದ ಮಾತು ಬಂತು ಅಂದರೆ ಇವರಿಗೆ ಎಲ್ಲೂ ಇಲ್ಲದ ಕಾಳಜಿ, ಆದರೆ ತುಸು ನೋಡಿಕೊಂಡು ಕನ್ನಡದ ಬರೆಯಕ್ಕೆ ಸೋಮಾರಿತನ!

Anonymous ಅಂತಾರೆ...

‌ಇಂಗ್ಲೀಶಲ್ಲಿ ಯಾಕೆ ಬರೀತೀರ್ರಿ‍?

ಕನ್ನಡದಾಗ್ ಬರೀರಿ.!!

ಇವರಿಗೆ ಬೊರೊಬರಿ ಕನ್ನಡದಾಗ್ ಮಾತಾಡಕ್ಕ್ ಬರೊಲ್ಲದಾ?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails