ಸ್ಲಂ ಸುಧಾ, ಆಟೋ ನಾಣಿ!

ಕನ್ನಡ ಚಿತ್ರಗಳ್ನ ನೋಡೋರು ಆಟೊ ಓಡ್ಸೋರು ಇಲ್ಲಾ ಸ್ಲಮ್ಮಲ್ಲಿ ಇರೊ ಜನ ಅಂತ ಭೂಮೀಗ್-ಭಾರ-ಅನ್ನಕ್-ದಂಡ ಅನ್ನೋ ಬಿರುದಿಗೆ ಹೊಂದೋರು, ತಿಂದಮನೆಗೆ ೨ ಬಗೆಯೋರು ಕೆಲವರು ಬ್ಲಾಗಿಸಿದ್ದು, ಜನ ಅದನ್ನು ಓದಿ ನಕ್ಕಿದ್ದು ನಿಮಗೆ ತಿಳಿದೇ ಇದೆ. ಕನ್ನಡ ಚಿತ್ರಗಳ ಬಗ್ಗೆ, ಅಭಿಮಾನಿಗಳ ಬಗ್ಗೆ ಬೆಂಗಳೂರಲ್ಲೇ ಒಕ್ಕರಿಸಿಕೊಂಡಿರೋ ಬ್ಯಾಂಗಲೋರ್ ಟಾರ್ಪೆಡೋ ಅನ್ನೋನ ದಿಮಾಕ್ ಎಷ್ಟಿದೆ ನೋಡಿ. ಸ್ಲಮ್ಮು, ಆಟೋಗಳ ಕೊಳೆ/ಧೂಳುಗಳಲ್ಲಿ ಬಿದ್ದು ಒದ್ದಾಡ್ತಿರೋ ಕೆಲವರು ಮುಂಗಾರುಮಳೆ ತಂಡದ ಜೊತೆ ಇಲ್ಲಿದಾರೆ ನೋಡಿ:


ಮೊನ್ನೆ ಇನ್ಫೊಸಿಸ್ ಸಂಸ್ಥೆಯಲ್ಲಿ ಮುಂಗಾರು ಮಳೆಯ ಚಿತ್ರತಂಡ ಶ್ರೀ/ಶ್ರೀಮತಿ ಮೂರ್ತಿಯವರ ಅಹ್ವಾನದ ಮೇರೆಗೆ ಬಂದು, ತಮ್ಮ ಅನುಭವಗಳನ್ನು ಹಂಚಕೋತು, ಸನ್ಮಾನ ಮಾಡಿಸಿಕೋತು. ಇವೆಲ್ಲ ಆಗಕ್ಕೆ ಕಾರಣ ಎನಪ್ಪ ಎಂದರೆ ಸುಧಾ ಮೂರ್ತಿಯವರಿಗೆ ಮುಂಗಾರು ಮಳೆ ಬೋ ಹಿಡಿಸಿ, ಒಂದು ಸಲ ಸಾಲೊಲ್ಲ ಅಂತ ಪದೇ ಪದೆ ನೋಡಿದರಂತೆ, ಅದೂ ಸಾಲಲ್ಲ ಅಂತ ಮುಂಗಾರುಮಳೆ ತಂಡದೋರ್ನ ಮುಖಾಮುಖಿ ಭೇಟೀನೇ ಆಗಬೇಕು ಅನ್ನಿಸಿತಂತೆ.
ಈ ಸಮಾರಂಭಕ್ಕೆ ಶ್ರೀ ನಾರಾಯಣ ಮೂರ್ತಿಗಳು ಬಂದು ಚಿತ್ರತಂಡದ ಜೊತೆ ಸಂತಸ ಹಂಚಿಕೊಂಡಿದ್ದು ವಿಶೇಷ. ನಮ್ಮ ಗಣೇಶಗೆ ಶಾಲು ಹೊದ್ಸಿ ಸನ್ಮಾನ ಮಾಡಿ ತ್ರಿಲ್ ಕೊಟ್ಟಿದ್ದು ಈಗ ಬೆಂಗಳೂರಲ್ಲಿರೋ ಪ್ರತಿಯೊಬ್ಬನ ಮಿಂಚೆಪೆಟ್ಟಿಗೆ (mailbox) ನಲ್ಲೂ ಓಡಾಡ್ತಿದೆ.
ಅಷ್ಟೆ ಅಲ್ಲಾ ಗುರು, ಸುಧಾ ಮೂರ್ತಿ ಇದೇ ರೀತಿ ಉಪ್ಪಿ ಮನೆಗೆ ಕೂಡ ಹೋಗಿದ್ದು, ಅವರು ಮಕ್ಕಳು ಉಪ್ಪಿ ಫ್ಯಾನ್ ಅಂದಿದ್ದು ಎಲ್ಲಾ ಹಳೇ ಸುದ್ದಿ.
ನಮ್ಮ ಸುಧಾ ಮೂರ್ತಿ ಮ್ಯಾಡಮ್ ಕೂಲಿನಾಲಿ ಮಾಡೋರಾ? ಇಲ್ಲಾ ನಮ್ಮ ನಾರಾಯಣ ಮೂರ್ತಿ ಆಟೊ ಓಡಿಸ್ತಾರಾ? (ಹಾಗಾಗಿದ್ರೆ ಔರು ಕೀಳು ಇಲ್ಲಾ ಔರು ನೋಡೊ ಚಿತ್ರಗಳು ಕೀಳು ಅಂತೇನಲ್ಲ, ಬಾಯಿಗೆ ಬಂದಂಗೆ ಬೊಗಳೋ ನಾಯಿಗಳಿಗೆ ಇದರಿಂದ ಸೊಲ್ಪ ಅರ್ಥ ಆಗ್ಲಿ ಅಂತ, ಅಷ್ಟೆ).

10 ಅನಿಸಿಕೆಗಳು:

Anonymous ಅಂತಾರೆ...

ನಾಣಿನ ನಂಬೋದು ಕಷ್ಟ. ಯಾವಾಗ backshot ಹಾಕ್ತಾನೆ ಅಂತ ಹೇಳಕಾಗಲ್ಲ. ಆದ್ರು ಇದು ಒಳ್ಳೆ ಬೆಳವಣಿಗೆ. ಇಂತಹ ದೊಡ್ದ ದೊಡ್ದ "decent" ಪಿಗರ್‍ಗಳು ಕನ್ನಡಕ್ಕೆ ಸಂಭಂದಪಟ್ಟ ವಿಷಯಗಳಲ್ಲಿ associate ಆದ್ರೆ ಕೀಳರಿಮೆ ಇರೋ ಕನ್ನಡಿಗರಿ ಒಂದು ಸ್ಫೂರ್ತಿ.
ಅಂಗೆ ಸೈಡ್ನಲ್ಲಿ ಆ ಬ್ಯಾಂಗ್ಲೂರ್ ಟಾರ್ಪೆಡೊ ಟಿ ಹೊಡಿಬೇಕು. ಥ್ಯಾಂಕ್ಸ್ ಗುರು! ಈ ಖುಷಿಯಲ್ಲಿ ಕಾಪಿಗೊಂಟೆ...

Anonymous ಅಂತಾರೆ...

Aaa torpedo ge idakkinta olleya uttara kodalikkagutye?

Thanks to sudha akka and naani bhava for supporting us.

Anonymous ಅಂತಾರೆ...

eegantu tumba ollolle chitragaLu bartive, yugaadi kooda hit chitra yendu kelibantu..Meera Maadhava Raaghava kooda innondu mungaaru maLeyantaha hit chitravaagtade anta maha mahimaru bhavishya nudididdare..

ottinalli kannada chalana chitrarangada 'suvarna yuga' nadeetide..

Amarnath Shivashankar ಅಂತಾರೆ...

ಈ ನಾಣಿ ಮತ್ತು ಸುಧಾ ಕನ್ನಡಿಗರೆಂದು ಹೆಳುವದಕ್ಕೆ ಅಸಹ್ಯವಾಗುತ್ತದೆ.
ಕನ್ನಡದ ಕಾರ್ಮಿಕ ವರ್ಗದವರಿಗೆ ಇವರು ಅವಮಾನ ಮಾಡಿದ್ದಾರೆ.
ಅಶ್ತೆ ಅಲ್ಲ, ಸರೋಜಿನಿ ಮಹಿಷಿ ವರದಿಯ ಪ್ರಕಾರ ಕನ್ನಡಿಗರಿಗೆ ಕೊಡಬೇಕಾದ ಕೆಲಸಗಳು ಕನ್ನಡಿಗರಿಗೆ ಸಿಗುತ್ತಿಲ್ಲ..ಕನ್ನಡಿಗರೇ ಮಾಲೀಕರಾದ ಈ ಸಂಸ್ಥೆಯಲ್ಲೇ ಈ ಪರಿಸ್ಥಿತಿ ಅಂದರೆ, ಉಳಿದ ಕಂಪನಿಗಳ ಕಥೆಯೇನಾಗಿರಬಹುದು ಎಂದು ಯೋಚಿಸಿ....
ಸತ್ಯಂ ಸಂಸ್ಥೆಯ ಮಾಲೀಕರಾದ ರಾಮಲಿಂಗರಾಜು, ಆಂಧ್ರದ ಎಲ್ಲ ನಗರಗಳಲ್ಲಿಯೂ ಕಂಪನಿ ಪ್ರಾರಂಭಿಸಬೇಕೆಂದಿದ್ದಾರೆ..ಆದರೆ ಈ ಸೊಟ್ಟ ಕಣ್ಣಿನ ನಾಣಿಗೆ ಕನ್ನಡಿಗರ ಬಗ್ಗೆ ಕಾಳಜಿಯೇ ಇಲ್ಲ..
ಬೆಂಗಳೂರಿನ Infosys ನಲ್ಲಿ ಉತ್ತರ ಭಾರತದವರು ತುಂಬಿದ್ದಾರೆ, ಮೈಸೂರಿನ Infosys ನಲ್ಲಿ ಮತ್ತೆ ಕಲಬೆರಕೆ, ಮಂಗಳೂರಿನ Infosys ನಲ್ಲಿ ಕೇವಲ ಮಲಯಾಳಿಗಳು ತುಂಬಿ ತುಳುಕಾಡುತ್ತಿದ್ದಾರೆ.

Anonymous ಅಂತಾರೆ...

ಅಯ್ಯಂದಿರ ಅಕ್ಕಂದಿರ ವಸಿ ತಾಳ್ಮೆ ತಕ್ಕೊಳ್ಳಿ...

ಪಾಪಾ ಅವರು ಒಂದು ಒಳ್ಳೇ ಕೆಲಸ ಮಾಡವ್ರೆ, ಅದನ್ನ ಹೊಗಳಿ, ಬೈಯೋದು ಇದ್ದೇ ಇದ್ಯಲ್ಲ.

ಯಾಕೆ ಅವರು ಮಾಡಿದ ಒಳ್ಳೇ ಕೆಲಸಕ್ಕೂ ಬೈಯಬೇಕು...

ನಂಗಂತೂ ಈ ಸುದಮ್ಮ, ನಾಣಪ್ಪನ ಈ ಕೆಲಸದಿಂದ ಬಲು ಸಂತೋಸ ಆಗಯ್ತೆ! ಇದೇನು ಕಡಮೆ ಅಲ್ಲ.

ಇಸ್ಟಾರ ನಮ್ಮ ಕನ್ನಡದ ಮೇಲೇ ಪ್ರೀತಿ ಇಟ್ಟುಕೊಂಡವ್ರಲ್ಲ, ಅದಕ್ಕೆ ಕುಸಿಪಡೋಣ, ಎಲ್ಲದಕ್ಕೂ ಗೊಣಗಾಡೋದು ಸಂದಾಕ್ಕಿರಕ್ಕಿಲ್ಲ.

ಬತ್ತೀನಿ

Anonymous ಅಂತಾರೆ...

ಎಲ್ಲಾರಿಗು ನಮಸ್ಕಾರಿ ಪಾ,

ಇದ್ದನ್ನ ನೊಡಿ, ಭಾಳ ಖುಶಿ ಅತ ನೊಡ್ರಿಪಾ. ನಮ್ಮ ಸುಧಾ ಮೆಡಮ್ಮ ಮತ್ತ ನಾಣಿ ಅವರು ನಮ್ಮ ಕನ್ನಡ ಸಲುವಾಗಿ ಎನ ಎಲ್ಲಾ ಮಾಡತಾರ. ಆದರ ನಮ್ಮ ಕನ್ನಡದವರಿಗೆ ಎನ್ಮಾಡಿದುರನು ಸಮಾಧಾನಾನ ಇಲ್ಲಾ. ಅಲ್ಲರಿ ಅಮರ ಸಾಹೆಬ್ರ ಅಲ್ಲೆ ಕಂಪನಿ ವಳಗ ಬ್ಯಾರೆ ಮಂದಿ ಇದ್ದರ ಅದು ಅವರ ತಪ್ಪ ಹೆಂಗ್ರಿ. ಇವನ್ವನ ಇದಕ ಆ ಕಂಪನ್ಯಾಗಿನ ಕನ್ನಡಾ ಮಂದಿ ಅದಾರಲಾ ಅವರ ಹೆಡ್ಕಿ ಮ್ಯಾಲೆ ನಾಕ ಒದಿ ಬೆಕ ನೊಡ್ರಿ. ಯಾಕ ಅಂತಿರ, ಎಲ್ಲಾರು ತಮ ತಮ ಮಂದಿನ ಒಳಗ ಹಕ್ಕೊತಾರ್ರಿ, ಈ ನಮ್ಮ ಸೊ ಕಾಲ್ದ (so called) ಕನ್ನಡಾ ಮಂದಿ ತಮ್ಮ ಬುದ್ದಿ ಎಲ್ಲೆ ಇಟ್ಟಾರ ಅಂತಿನಿ. ಇನ್ನ ಮ್ಯಾಲರ ನಮ್ಮ ಕನ್ನಡಾ ಮಂದಿ ಎದ್ದೆಳಬೆಕ, ನಮ್ಮ ಮಂದಿನ ಎಲ್ಲಾ ಕಂಪನಿ ಒಳಗ ತಗೊ ಬೆಕ.

ಒಂದ ಲಾಸ್ಟ ಮಾತ ನೊಡ್ರಿ, ಈ ನಮ್ಮ ಇನಪೊಸಿಸ ಮಾಡಿದಸ್ಟ ನಮ್ಮ ಕನ್ನಡಾಕ, ಯಾ ಮಗಾ ಮಾಡಿಲ್ಲರಿ.

Anonymous ಅಂತಾರೆ...

konegU NRN ge budhdhi baMtaa? athavaa avarEnAdru iMtaha blog gaLanna Odakk shuru mADi, ee rIti kelsa mADdre janara oppige paDeyabahudu aMta EnAdru "sketch" hAkidAra? irli, oTTinalli, En mADdre jana mechchtAre aMta tiLItalla ee mansaMge :) adanna nODi khushi paDbEku.. paDaNa. muMgaaru maLe iMda innu eshTu kannaDa hirime hechchattO Eno? bhale, bhale!

ಉಉನಾಶೆ ಅಂತಾರೆ...

ನಾನು ೧೯೯೨-೧೯೯೫ರಲ್ಲಿ ಇನ್‍ಫೊಸಿಸ್‍ನಲ್ಲಿ ಕೆಲಸ ಮಾಡಿದ್ದೆ. ನಾರಾಯಣ ಮೂರ್ತಿಗಳ "ಕನ್ನಡ ಪ್ರೇಮ" ಆಗಲೂ ಇತ್ತು ಅಂತ ನನ್ನ ಭಾವನೆ. ಆದರೆ ನಾವು ಅಂದುಕೊಳ್ಳುವಂತೆ ಎಲ್ಲದರಲ್ಲೂ ಅದು ಪ್ರಕಟವಾಗುವ ಸಾಧ್ಯತೆಗಳು ಅಂದೂ ಇರಲಿಲ್ಲ, ಇಂದೂ ಇಲ್ಲ.
೧೯೯೨ರಲ್ಲಿ ಕನ್ನಡದಲ್ಲಿ ಕಂಪನಿಯ ಹೆಸರಿನ ಬೋರ್ಡ್ ಹಾಕಿಕೊಂಡ ಬೆರೆಳೆಣಿಕೆಯ ಐಟಿ ಕಂಪನಿಗಳಲ್ಲಿ ಇನ್‍ಫೋಸಿಸ್ ಒಂದು. ಐಎಸ್‍ಓ ೨೦೦೧ಕ್ಕಾಗಿ ಇನ್‍ಫೋಸಿಸ್‍ನ ಧ್ಯೇಯ ಉದ್ದೇಶಗಳನ್ನು ಕನ್ನಡದಲ್ಲಿ ಕೂಡ ಮುದ್ರಿಸಿ ಪ್ರಚಾರ ಮಾಡಿದ ಕಂಪನಿ ಅದು. ಆಗ ಇನ್‍ಫೋಸಿಸ್‍ನಲ್ಲಿ ಕನ್ನಡಿಗರ ಸಂಖ್ಯೆ ಕೆಳಹಂತದಲ್ಲಿ ಸುಮಾರು ೩೫% - ೫೦% ಮೇಲ್ಹಂತದಲ್ಲಿ ೭೫% - ೯೦% ಇತ್ತು. ಈಗ ಹೇಗಿದೆ?
ಬೇರೇನೇ ಇರಲಿ, ಮೂರ್ತಿ ದಂಪತಿಗಳ ಕ್ರಮ ಮತ್ತು ಅದಕ್ಕೆ ಸಿಗುವ ಪ್ರಚಾರದಿಂದ ಯಾರಿಗೂ ನಷ್ಟವಿಲ್ಲ, ಲಾಭವಾದರೂ ಆಗಬಹುದು.
ಇತೀ,
ಉಉನಾಶೆ

Anonymous ಅಂತಾರೆ...

modalu infosys nalli UGADI habbake raje(holiday) kodali. ONAM habbakke raje kottiddare. ade torisutte ivarige kannada samskruti matte bhasheya melina prema.
nimma
lakshmisha

yayaathi ಅಂತಾರೆ...

kalam article is very nice

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails