ಮೀರಾ ಮಾಧವ ರಾಘವ: ಸಕ್ಕತ್ತಾಗಿದ್ಯಂತೆ ಹೋಗುವ!

ಟಿ.ಎನ್."ಮುಕ್ತ"ಸೀತಾರಾಮ್ ನಿರ್ದೇಶಿಸಿರೋ ಮೀರಾ-ಮಾಧವ-ರಾಘವ ಅನ್ನೋ "ಮನೆಕತೆ" ಚಿತ್ರ ಇವತ್ತು ತೆರೇಗ್ ಬಂದೈತಿ. ಪ್ರಪಂಚದಲ್ಲಿ ಎಲ್ಲಾ ಕಡೆಯಿರೋ ಕನ್ನಡಿಗರ ಆಸೆಗಳನ್ನ ಮಡಿಲಿಗೆ ತುಂಬಿಕೊಂಡೈತಿ! ಇವತ್ತಿನ "ಸಿನಿವಿಜಯ"ದ ತುಂಬಾ ಇದ್ರುದೇ ರಂಗೋಲಿ. ಹಂಸಲೇಖ ನಿರ್ದೇಶಿಸಿರೋ ಇಂಪಾದ ಹಾಡುಗಳು ಆಗ್ಲೇ ಬೆಂಗ್ಳೂರಿನ್ ರೇಡಿಯೋ ಮಿರ್ಚೀಲಿ ತುಂಬ್ಕೊಂಡಿವೆ. ಸಾಲದಕ್ಕೆ ಈ ಚಿತ್ರದಲ್ಲಿ ಸರಿಗಮಪಾ ಹಾಡೊ ರೋಲಿನಲ್ಲಿ ರಮ್ಯ ಕಾಣಿಸಿಕೊಂಡಿರೋದು ಶ್ಯಾನೆ ಕಚುಗುಳಿ ಗುರುವೇ...

ಆದ್ರೆ ಇಂಥಾ ಒಳ್ಳೇ ಕನ್ನಡದ ನಿರ್ದೇಶಕ ಮಾಡಿರೋ ಸಿನಿಮಾಗೆ ಪ್ರೋತ್ಸಾಹ ಕೊಡಬೇಕಾಗಿರೋ ಕರ್ನಾಟಕದ ಪಟ್ಟಣ (ಪಟ್ಟ+ಅಣ=ರಾಜಧಾನಿ) ಬೆಂಗಳೂರಿನ ಒಳ್ಳೊಳ್ಳೆ ಚಿತ್ರಮಂದಿರಗಳು ಶಂಕರ್-ಶಿವಾಜಿಗಳನ್ನ ಮೆರೆಸಿಕೊಂಡಿರೋದ್ರಿಂದ ಬರೀ ಕಿತ್ತೋಗಿರೋ, ಇಲ್ಲಾ ಊರಾಚೆ ಇರೋ ಚಿತ್ರಮಂದಿರಗಳಲ್ಲಿ (ಆದೂ ರಾತ್ರಿ ಪಾಳಿಯಲ್ಲಿ!) ಬಿಡುಗಡೆ ಆಗ್ತಾ ಇದೆ ಅನ್ನೋದು ಕಟುಸತ್ಯ!

ಇದೇ ಹೊತ್ತಿಗೆ ಸರಿಯಾಗಿ ಬಿಡುಗಡೆ ಆಗಿರೋ ಯಾವ್ದೋ ಒಂದು ತೆಲ್ಗು ಚಿತ್ರಕ್ಕೆ ಊರೊಳಗಿರೋ 20 ಚಿತ್ರಮಂದಿರಗಳು ಸಿಕ್ಕಿವೆ! ಯಾಕೆ ಹೀಗೆ? ಕನ್ನಡನಾಡಲ್ಲೇ ಕನ್ನಡ ಚಿತ್ರಗಳಿಗೆ ಈ ಗತಿ ಯಾಕೆ...ಅಂತ ತಲೆ ಕೆರ್ಕೊಳೋದು ಬೇಕಾಗೇ ಇಲ್ಲ. ಆ ಚಿತ್ರದಲ್ಲಿ ಚಿರಂಜೀವಿ ಕೈಲಿ 2 ಕನ್ನಡದ್ ಪದ ಮಾತಾಡ್ಸಿ ಕರ್ನಾಟಕದ ತೆಲುಗು ಬಿಡ್ಡ ಚಾನೆಲ್ಗಳ್ಗೆ (ಹೆಚ್ಚಾಗಿ TV9 ಮತ್ತು ETV) ಹರ್ಡರ್ಲಾ ಈ ಪಿಚ್ಚರ್ನ ಅಂತ್ಯೋಳಿರ್ಬೇಕು ಗುರು! ಅಬ್ಬಬ್ಬಬ್ಬಬ್ಬಬ್ಬ! ಅದೇನು ಚಿರಂಜೀವಿ ಹಿರಿಮೆ ಹೇಳೋದು, ಅದೇನು ಈ ತೆಲುಗು ಚಿತ್ರದ್ ಪ್ರಚಾರ!!!


ಕನ್ನಡಿಗರು ಚಿತ್ರರಂಗದ ಸುತ್ತಲೇ ಒಂದು ಸಕ್ಕತ್ ವ್ಯಾಪಾರಸಾಮ್ರಾಜ್ಯ ಹುಟ್ಟಿಸೋದಕ್ಕೆ ಬೇಕಾದ್ದೆಲ್ಲ ಇದೆ. ಇತ್ತೀಚೆಗಂತೂ ಸಕ್ಕತ್ತಾಗಿ ಜನಕ್ಕೆ ಏನು ಬೇಕು ಅಂತ ತಿಳ್ಕೊಂಡ್ ಬಿಡ್ತಿರೋ ಕನ್ನಡ ಚಿತ್ರಗಳು, ಎಫ್.ಎಂ. ಚಾನೆಲ್ಗಳಿಗೆ ಕೊನೆಗೂ ಅರ್ಥವಾಗಿರೋ ಕನ್ನಡದ ಚಿತ್ರಗಳ/ಹಾಡುಗಳ ಮಾರುಕಟ್ಟೆ, ಹೊಸದಾಗಿ ಶುರುವಾಗ್ತಿರೋ ಕನ್ನಡ ಟೀವಿ ಚಾನೆಲ್ಲುಗಳು (ಅದ್ರಲ್ಲೂ ನಮ್ಮ ಮು.ಮ.ಗಳ ಮನೆಯೋರ ಕಸ್ತೂರಿ ಚಾನೆಲ್ಲು), ಪತ್ರಿಕೆಗಳು - ಇವೆಲ್ಲಾ ಸೇರಿ ಇದ್ನ ಮಾಡ್ಬೋದಲ್ವಾ ಗುರು?

ತಮ್ಮದೇ ಕಂಪನಿ ತೆಗ್ಯೋದು ಗಿಗ್ಯೋದೆಲ್ಲಾ ಯಾರೋ ಹಿಂದಿಯೋರು ಇಲ್ಲಾ ತೆಲುಗ್ರು ಇಲ್ಲಾ ತಮಿಳ್ರು ಮಾಡೋ ಕೆಲಸ, ನಮಗೆ ಔರ್ ಅಂಗಡೀಲಿ ಹೋಗಿ ಪೊಟ್ಟಣ ಕಟ್ಟಕ್ಕೆ ಮಾತ್ರ ಯೋಗ್ತೆ ಇರೋದು, ನಾವು "ರಿಸ್ಕು" ತೊಗೊಳಕ್ ಹೋಗಲ್ಲ ಅಂತೆಲ್ಲ ಅಂದುಕೊಂಡು ಕನ್ನಡಿಗರು ಕೂತ್ಕೊಳೋ ದಿನಗಳು ಕೊನೆಗೂ ಮುಗೀತವೆ ಅನ್ನೋದು ಎರ್ರಾಬಿರ್ರಿ ಒಳ್ಳೇ ಸುದ್ದೀನೇ ಗುರು! ಒಳ್ಳೇ ಕಾಫಿ ಕುಡಿದಾಗ ಆಗೋಷ್ಟು ಖುಷಿ ತರೋ ಬೆಳವಣಿಗೆ ಗುರು! ಉದ್ಯಮಶೀಲತೆ ಅನ್ನೋದು ಕುರ್ಚೀಗಿರೋ ನಾಕ್ ಕಾಲಲ್ಲಿ ಒಂದಿದ್ದಂಗೆ. ಅದು ಮುರ್ದ್ ಹೋದ್ರೆ ಕನ್ನಡ ಜನಾಂಗ ಎಡ್ವಿ ಬೀಳೋದು ಖಂಡಿತ. ತೊಗೋಬೇಕು, ರಿಸ್ಕು ತೊಗೋಬೇಕು. ಅದ್ನೇ ಎಲ್ರೂ ಮಾಡೋದು. ಅದ್ನ ಮಾಡ್ದೋನಿಗೇ ದುಡ್ಡು ಅನ್ನೋ ದೊಡ್ಡಪ್ಪ ಒಲ್ಯೋದು! ಈ ಒಂದು ಕಾಲು ನಿಲ್ಲದೇ ಹೋದರೆ ಅದೇ ಕುರ್ಚೀನ ನಿಲ್ಲಿಸಕ್ಕೆ ಬೇರೆಭಾಷೆಯೋರು ಮುನ್ನುಗ್ಗಿ ಬರ್ತಾರೆ, ನಮಗೆ ಬರಬೇಕಾಗಿರೋ ದುಡ್ನ ಹೊಡ್ಕೊಂಡ್ ಹೋಗ್ತಾರೆ ಗುರು!

ಮೀ-ಮಾ-ರಾಗ್ ಓಗ್ಮಾ?

6 ಅನಿಸಿಕೆಗಳು:

Rohith B R ಅಂತಾರೆ...

ಓಗ್ಮ ಗುರು!! ಖಂಡಿತ ಓಗ್ಮ.. ಈ ಚಿತ್ರ ಕೂಡ ೨೦೦+ ದಿನಗಳು ಓಡಲಿ ಎಂದು ಎಲ್ಲ್ರೂ ಹಾರೈಸಣ..

Anonymous ಅಂತಾರೆ...

ಗುರು,

ರಮ್ಯ ಆಂಟಿದು ಎಂತ ಫೊಟೋ ಹಾಕಿದ್ಯ ಗುರು. ತಡ್ಕಳಕಾಗ್ತಿಲ್ಲ............

ಇಗೋ ಒಂಟೆ..............







ಸಿನ್ಮಾ ನೋಡಕ್ಕೆ ಅಷ್ಟೆಪಾ............

Anonymous ಅಂತಾರೆ...

sariyaagE ide guru,
PVR nalli weekdays show samaya 1:20 PM, 4:20 PM mathu 10:00 PM. kelsakke hogowraagli, makkLirO appa ammaMdarigaagli ee yaava samaya hondatte??? telgu tamil sinimaagalge 6:30PM, 7:30 PM timings?? enappa kannada naadinalli kannadakke aagthiro anyaayagaLu. enaana maadlEbeku idakke.....

Anonymous ಅಂತಾರೆ...

ನಮಸ್ಕಾರ್ ಗುರುಗಳಿಗ್,,
ಮೊನ್ನೆ ಶನಿವಾರ್ ರಾತ್ರಿ ನವರಂಗ್ ಥೇಟರ್ ನಾಗ್ ರಾತ್ರಿ ೧೦ ಗಂಟೆ ಷೋ ಕ್ಕ ಹೋಗಿದ್ದೆ ರೀ,, ನಂಬ್ತಿರೊ ಇಲ್ಲೋ,, ರಾತ್ರಿ ಷೋ ಹೌಸಫುಲ್ ಆಗೀತ್ರಿ.. ಬರೇ ಹೆಣ ಮಕ್ಕಳ್ ಬಂದಿದ್ರ ರೀ.. ಪಿಚ್ಚರ್ ಚಲೋ ಐತ್ರಿ.. ರಮ್ಯಾ ಅಂತು ಖತರನಾಕ್ ಬಂದಾಳ ರೀ...ಹೇಳಿದ್ರ ಆಗುದಿಲ್ರಿ..ಆಕೀ acting ನೋಡೀನ ಸವಿಬೇಕು..ಸ್ವಲ್ಪ slow ಹೋಗ್ತೆತಿ ಅನ್ನುದ ಬಿಟ್ರ ಭಾರಿ ಮಸ್ತ್ ಕಥಿ ಐತ್ರಿ... ನೀವು ಒಮ್ಮಿ ನೋಡ್ರಿ...

Anonymous ಅಂತಾರೆ...

ಹೌದು. ಪಿ ವಿ ಆರ್ ನಲ್ಲಿ ೩ ಆಟಗಳು ಇತ್ತು. ಆದರೆ ಚೀಟಿ ಸಿಗಲಿಲ್ಲ. ಬೇರೆ ಭಾಷೆಯ ಚಿತ್ರಗಳನ್ನು ಪಿ ವಿ ಆರ್ ನಲ್ಲೆ ದೊಡ್ಡ ದೊಡ್ಡ ಮಂದಿರಗಳಲ್ಲಿ ಹಾಕುತ್ತಾರೆ. ಕನ್ನಡ ಚಿತ್ರಗಳನ್ನು ಮಾತ್ರ ೪ ಜನ ಕೂರುವುದಕ್ಕಾಗೊ ಸಣ್ಣ ಮಂದಿರಗಳಲ್ಲಿ. ಹೀಗಾಗಿ ನಂಗೆ ಪಿ ವಿ ಆರ್ ನಲ್ಲಿ ಚೀಟಿ ಸಿಗೋದೆ ಕಷ್ಟ. :(
ಮನೆ ಹತ್ತಿರ ಇರೊ ಮಂದಿರಗಳಾದ ಉರ್ವಶಿ, ಸ್ವಾಗತ್ ಗಳಲ್ಲಿ ಯಾವಾಗಲು ಹಂದಿ ಚಿತ್ರಗಳೆ. ಮೆಜೆಸ್ಟಿಕ್ ಗೆ ಹುಡುಗಿಯರು ಅದು ರಾತ್ರಿ ಪಾಳಿಯಲ್ಲಿ ಹೋಗಲು ಎಲ್ಲಗುತ್ತೆ. ಕರ್ಮ ಕರ್ಮ. :(
ಹಾಗೆ ಈ ಬಾರಿಯು ಸಿಗಲಿಲ್ಲ. ಮುಂದಿನ ವಾರಾಂತ್ಯದಲ್ಲದರು ನೋಡಬೇಕು.

ಈ ತೆಲುಗು, ತಮಿಳು ಜನರ ಗಿಮಿಕ್ ನೋಡಿ. ರಜನಿ ಸಿನೆಮಾ ಬರೊಕ್ ಮುಂಚೆ ಅವ್ನ ಬಗ್ಗೆ ಪುಸ್ತಕ ಬರೆಸೋದೆನು, ಅವ್ನ ಫೊಟೊನ ನಮ್ಮ ಅಣ್ಣಾವ್ರ ಫೊಟೊ ಪಕ್ಕ ಹಾಕೋದೆನು. ಈಗ ಈ ಚಿರಂಜೀವಿ ಕೈಯಲ್ಲಿ ಕನ್ನಡ ಮಾತಾದ್ಸೋದೇನು. ನಮ್ಮಂತಾ ಬಕ್ರಾಗಳು ಪ್ರಪಂಚದಲ್ಲೆ ಸಿಗೋಲ್ಲ. :(

Samarasa ಅಂತಾರೆ...

nange neevu kannadigarige agathiro mosada bagge bariyodu nodidre or oodhidre tumba kopa bartide adre namma kyli enu madakke agada asahyakate kadtide.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails