ಕರ್ನಾಟಕಕ್ಕೆ ಬಂದ ಹಿಂದಿಯೋರು ಕನ್ನಡ ಕಲೀಬೇಕು, ನಮಗೇ ಹಿಂದಿ ಕಲಿಸೋದಲ್ಲ!

ಒಬ್ಬ ಕನ್ನಡಿಗ ಉತ್ತರ ಭಾರತದ ಹಿಂದಿ ರಾಜ್ಯಗಳಿಗೆ ವಲಸೆ ಹೋದ್ರೆ ಹಿಂದಿ ಮಾತಾಡ್ತಾನೆ, ಅಲ್ಲೀ ಸಂಸ್ಕೃತಿ ಅರಿತು ಆ ಜನರೊಡನೆ ಬೆರೆತು ಮುಖ್ಯವಾಹಿನಿಯಲ್ಲಿ ಸೇರ್ಕೋತಾನೆ. ಆದರೆ ಉತ್ತರಭಾರತದಿಂದ ಹಿಂದಿಯೋರು ಬಂದ್ರೆ ಮಾತ್ರ ಇಲ್ಲಿ ಅವರು ಕನ್ನಡ ಕಲಿಯೋದಿರ್ಲಿ, ನಮ್ಮ ಕಣ್ಣಿಗೇ ಮಣ್ಣೆರಚಿ ನಮಗೇ ಹಿಂದಿ ಕಲಿಸಕ್ಕೆ ಬರ್ತಾರಲ್ಲ, ಹೀಗೆ ಯಾಕೆ ಗುರು? ಇದಕ್ಕೆ ಪರಿಹಾರ ಏನು ಗುರು?

ಕೇಂದ್ರದ ಆಡಳಿತದಲ್ಲಿರೋ ಇಲಾಖೆಗಳು ಬಿತ್ತ ಬೀಜ

ಕೆಲವೇ ವರ್ಷಗಳ ಹಿಂದೆ ಸರ್ಕಾರಾನೇ ಉದ್ಯೋಗ ಕೊಡೋ ತಾಯಿ-ತಂದೆ ಎಲ್ಲವೂ ಆಗಿತ್ತು. ಸರ್ಕಾರವೇ ಬ್ಯಾಂಕು ನಡೆಸ್ತಾ ಇತ್ತು, ವಾಹನಗಳ್ನ ತಯಾರು ಮಾಡ್ತಿತ್ತು, ಅಡಿಗೆ ಸಾಮಾನು ಮಾರ್ತಾ ಇತ್ತು, ಪೇಪರ್ ತಯಾರಿಸ್ತಾ ಇತ್ತು, ಅಂಚೆ ಸೇವೆ ನಡೆಸ್ತಾ ಇತ್ತು, ಪ್ರತಿಯೊಂದ್ನೂ ಮಾಡ್ತಿತ್ತು. ಇದು ನಮ್ಮ ಹಿಂದಿನ ಪೀಳಿಗೆಯೋರ್ಗೆ ಬಹಳ ಚೆನ್ನಾಗಿ ಗೊತ್ತು. ಒಟ್ನಲ್ಲಿ "ಸರ್ಕಾರ = ಉದ್ಯೋಗ ಕೊಡೋ ದೇವ್ರು" ಆಗಿತ್ತು. ಆದ್ರೆ ಆ ಸರ್ಕಾರಕ್ಕೆ ಹಿಂದಿ ಹಿಡಿದಿತ್ತು.

ಕರ್ನಾಟಕಕ್ಕೆ ಹಿಂದಿಯೋರು ವಲಸೆ ಬರಕ್ಕೆ ಶುರು ಮಾಡಿದ್ದು ಹೆಚ್ಚಾಗಿ ಕೇಂದ್ರಸರ್ಕಾರದ ಬೇರೆಬೇರೆ ಇಲಾಖೆಗಳಿಗೆ ಕೆಲಸಕ್ಕೆ ಬರೋ ನೆಪದಲ್ಲಿ. ಅದ್ಯಾಕೆ? ಕೇಂದ್ರಸರ್ಕಾರದ ಇಲಾಖೆಗಳಿಗೆ ಹಿಂದಿಯೋರೇ ಹೆಚ್ಚು ಯಾಕೆ ಬಂದ್ರು ಅಂತೀರಾ? ಕೆಲವರು ಅಂದ್ಕೊಂಡಿರಬೋದು ಅವರಿಗೆ ಹೆಚ್ಚು ತಲೆ ಇತ್ತು, ಅವರು ಕನ್ನಡಿಗರಿಗಿಂತ ಬುದ್ಧಿವಂತರು, ಉದ್ಯಮಶೀಲರು, ಧೈರ್ಯವಂತರು, ಮುನ್ನುಗ್ಗೋರು, ಮಣ್ಣು ಮಸಿ, ಅದಕ್ಕೋಸ್ಕರಾನೇ ಔರು ಇಲ್ಲೀಗೆ ಬಂದು ಸೇರ್ಕೊಂಡ್ರು ಅಂತ.

ಎಲ್ಲಾ ಬರೀ ಸುಳ್ಳು. ಕಾರಣ ಅದಲ್ಲ. ಕಾರಣ ಇಷ್ಟೇ: ಆಗಲಿಂದಲೇ ಕೇಂದ್ರ ಕಚೇರಿಗಳಲ್ಲಿ ಹೆಚ್ಚು ಹೆಚ್ಚು ಕೆಲಸ ಹಿಂದಿಯಲ್ಲಿ ನಡೀಬೇಕು, ಬರ್ತಾ ಬರ್ತಾ ಇಂಗ್ಲೀಷು ಹೋಗಿ ಬರೀ ಹಿಂದಿ ಉಳೀಬೇಕು ಅನ್ನೋ ಕಾನೂನು ಆಗಲೇ ಇತ್ತು (ಈಗಲೂ ಇದೆ!). ಅದಕ್ಕೆ ಹಿಂದಿ ಬರೋರೇ ಆಗಬೇಕಲ್ಲ, ಅದಕ್ಕೇ ಹಿಂದಿ ಜನ ಬಂದು ಬಂದು ಇಲ್ಲಿ ತುಂಬ್ಕೊಂಡಿದ್ದು (ಈಗಲೂ ತುಂಬ್ಕೋತಿದಾರೆ!).

ಇಷ್ಟೆಲ್ಲಾ ನಡೀತಿರುವಾಗ ಕನ್ನಡಿಗ ಏನ್ ಮಾಡ್ದ? ಪಾಪ ಔನಿಗೆಲ್ಲಿ ಬರಬೇಕು ಹಿಂದಿ? ಕೆಲಸ ಸಿಗದೆ ಸುಮ್ಮನೆ ಕೂತಿದ್ದ! ತನಗೆ ಕೆಲಸ ಯಾಕೆ ಸಿಗಲಿಲ್ಲ ಅಂತ ಯೋಚಿಸಿದಾಗ ತನಗೆ ಬುದ್ಧಿಯಿಲ್ಲವೇನೋ, ಅದೃಷ್ಟ ಇಲ್ಲವೇನೋ, ಯೋಗ್ಯತೆ ಇಲ್ಲವೇನೋ ಅಂದುಕೊಂಡು ಸುಮ್ಮನಾದ! ಬರ್ತಾ ಬರ್ತಾ ತನ್ನ ಭಾಷೆ ಯೋಗ್ಯತೇನೇ ಇಷ್ಟು, ಕನ್ನಡದಿಂದ ಅನ್ನ ಇಲ್ಲ ಅನ್ಕೊಂಡು ಹಿಂದಿ ಕಲಿಯಕ್ಕೆ ಶುರು ಮಾಡ್ದ!

ಹಿಂದಿ ಪ್ರಚಾರ ಹಾಕಿದ ನೀರು

ಇದರ ಜೊತೇಗೇ ಹಿಂದಿ ಅಂದ್ರೆ ರಾಷ್ಟ್ರಭಾಷೆ, ಹಿಂದೀನೇ ದೇಶದ ಪ್ರಾತಿನಿಧಿಕ ಭಾಷೆ, ಹಿಂದಿ ಬರದೇ ಇರೋನು ಈ ದೇಶದಲ್ಲಿರಕ್ಕೆ ಲಾಯಕ್ಕಿಲ್ಲ ಅಂತೆಲ್ಲಾ ಸಕ್ಕತ್ತು ಸುಳ್ಳುಸುಳ್ಳು ಪ್ರಚಾರಗಳು ನಡುದ್ವು. ಇವತ್ತಿಗೂ "ದಕ್ಷಿಣ್ ಭಾರತ್ ಹಿಂದಿ ಪ್ರಚಾರ್ ಸಭಾ" ಅನ್ನೋ ಒಂದು ಸಂಸ್ಥೆ ಹಿಂದೀನ ರಾಷ್ಟ್ರಭಾಷೆ ಅಂತ ರಾಜಾರೋಷವಾಗಿ ಕರೀತಿದೆ. ಇವರೊಬ್ರೇ ಅಲ್ಲ, ಹಾಗೆ ನಂಬ್ಕೊಂಡಿರೋರು ಭಾರತದಲ್ಲಿ ಬಹಳ ಜನ ಇದಾರೆ. ಆದರೆ ಇವೆಲ್ಲ ಸುಳ್ಳು. ಹಿಂದಿಗೆ ನಮ್ಮ ಸಂವಿಧಾನ ಕೇಂದ್ರದ "ಅಧಿಕೃತ ಭಾಷೆ" ಅನ್ನೋ ಸ್ಥಾನಮಾನ ಕೊಟ್ಟಿದೆಯೇ ಹೊರತು ಹೆಚ್ಚೇನೂ ಇಲ್ಲ. ಹಾಗೆ ಕೊಟ್ಟಿರೋದು ಸರಿಯಿಲ್ಲ ಅನ್ನೋದನ್ನೂ ನಾವು ಮರೀಬಾರದು ಗುರು! ಯಾಕೆ ಅದಕ್ಕೆ ಈ ವಿಶೇಷ ಸ್ಥಾನ? ಇರಲಿ.

ಒಟ್ನಲ್ಲಿ ಹಿಂದಿಗೆ ಇಲ್ಲದ ಸ್ಥಾನ ಕೊಡ್ತು ಈ ಪ್ರಚಾರ. ಇವತ್ತಿಗೂ ಇಲ್ಲದ ಪ್ರಚಾರ, ಇಲ್ಲದ ಸ್ಥಾನಮಾನಾನ ಹಿಂದಿಗೆ ಕೇಂದ್ರಸರ್ಕಾರ ಕೊಡ್ತಾನೇ ಇದೆ, ನಮ್ಮ ರಾಜ್ಯಸರ್ಕಾರಾನೂ ತೂಗುತಲೆ ತೂಗ್ತಾನೇ ಇದೆ, ಅನೇಕ ಕನ್ನಡಿಗರು ಹಿಂದೀನ ಕಣ್ಗೊತ್ಕೋತಾನೇ ಇದಾರೆ. ಈ ಹಿಂದೀವಾದಿ ಕನ್ನಡಿಗರೆಲ್ಲ ನಮ್ಮ ವ್ಯವಸ್ಥೆಯಲ್ಲಿರೋ ಪಕ್ಷಪಾತದ ಮಕ್ಕಳೇ! ಈ ಮಕ್ಕಳಿಗೆ ಹಿಂದಿಯೇ ತಾಯಾದಳು, ಹಿಂದಿಯೋರೆಲ್ಲಾ ಅಣ್ಣತಮ್ಮಂದಿರಾದರು. ಸುತ್ತಮುತ್ತಲ ತಮ್ಮದೇ ಜನಾಂಗಕ್ಕೆ ಸೇರಿದ ಕನ್ನಡಿಗರು ಕಚ್ಚಾಡೋ ದಾಯಾದಿಗಳಾದ್ರು! ಯಾವ ಕಚ್ಚಾಟ? ಕೇಂದ್ರಸರ್ಕಾರೀ ನೌಕರಿ ಗಿಟ್ಟಿಸಿಕೊಳ್ಳಕ್ಕೆ ಹಿಂದಿ ಕಲಿಯೋದ್ರಲ್ಲಿ ನಾಮುಂದು ತಾಮುಂದು ಅಂತ ಬಾವಿಗೆ ಬೀಳೋದ್ರಲ್ಲಿ!

ಬೀಜ ಹೆಮ್ಮರವಾಗಿದ್ದು ಆಶ್ಚರ್ಯವೇನು?

ಹಿಂದಿಯೋರಿಗೆ ಎಲ್ಲಿಗೆ ಹೋದರೂ ತಮ್ಮ ಭಾಷೆ ನಡೀಬೇಕು ಅನ್ನೋ ವ್ಯವಸ್ಥೆ, ಕರ್ನಾಟಕಕ್ಕೆ ಬಂದರೆ ತೋರಣ ಕಟ್ಟಿ ಆರತಿ ಮಾಡಿ ಅವರ ಭಾಷೇಲೇ ಹಾಡು ಹೇಳಿ ಬರಮಾಡ್ಕೋಬೇಕು ಅನ್ನೋ ಕನ್ನಡಿಗರು - ಇವೆಲ್ಲಾ ಇದ್ದಾಗ ಹಿಂದಿ ಮಾತಾಡೋ ವಲಸಿಗ್ರು ಬಂದು ತುಂಬ್ಕೊಳೋದು ವಿಶೇಷವೇನು? ಔರಿಗೇ ಇದು ಮನೆ ಅನ್ನಿಸ್ತಾ ಇರೋದು, ಕನ್ನಡಿಗರಿಗಲ್ಲ!

ಇವತ್ತು ಐಟಿ-ಬಿಟಿ ಗಳ ಯುಗ ಬಂದು ಕಚೇರಿಗಳಲ್ಲಿ ಹಿಂದಿಯಲ್ಲೇ ಕೆಲಸ ನಡೀಬೇಕು ಅಂತಿಲ್ಲದೆ ಹೋದರೂ ಈ ವಲಸೆಯೇನು ನಿಂತಿಲ್ಲ, ಹಿಂದಿ ಹೇರಿಕೆ ನಿಂತಿಲ್ಲ. ಯಾಕೆ? ಇವತ್ತಿಗೂ ಹಿಂದಿಯೋರು ಇಲ್ಲೀಗ್ ಬಂದು "ಇನ್ನೂ ಇಲ್ಲೀ ಜನ ಯಾಕೆ ಹಿಂದಿ ಮಾತಾಡ್ತಿಲ್ಲ?" ಅಂತಾರಲ್ಲ, ಯಾಕೆ? ಇಲ್ಲೀಗೆ ಬರೋ ಎಷ್ಟೋಂದು ಹಿಂದಿಯೋರಿಗೆ ಇಲ್ಲಿ ಭಾಷೆ ಯಾವುದು ಅಂತಾನೇ ಗೊತ್ತಿರಲ್ಲವಲ್ಲ, ಯಾಕೆ?

ಬೀಜ ಇಲ್ಲದಿದ್ದರೂ ಹೆಮ್ಮರ ಉಳ್ಕೊಂಡಿದ್ಯಲ್ಲ, ಯಾಕೆ? ಯಾಕೇಂದ್ರೆ ಆ ಮರವೇ ನೀರು ಕುಡಿದು ಕುಡಿದು ಬೆಳ್ದು ಬೆಳ್ದು ದೊಡ್ಡದಾಗ್ತಿದೆ, ಅದಕ್ಕೆ!

ಇದಕ್ಕೆಲ್ಲ ಪರಿಹಾರ

ಇದು ಹೀಗೇ ಮುಂದುವರ್ಕೊಂಡು ಹೋಗೋದು ಸರಿಯಿಲ್ಲ ಅನ್ನೋದು ಸ್ಪಷ್ಟ. ಕನ್ನಡಿಗನೇ ಕರ್ನಾಟಕದಲ್ಲಿ ಸಾರ್ವಭೌಮನಾಗಬೇಕು. ಕನ್ನಡವೇ ಇಲ್ಲಿ ಸಾರ್ವಭೌಮವಾಗಬೇಕು. ಹಿಂದಿ-ಹಿಂದಿಯೋರು ಇಲ್ಲಿ ನಮಗಿಂತ ಹೆಚ್ಚು ಸೌಲತ್ತುಗಳನ್ನು ಅನುಭವಿಸೋದು, ನಾವು ನಮ್ಮ ನಾಡಲ್ಲೇ ಎರಡನೇ ದರ್ಜೆ ಪ್ರಜೆಗಳಾಗಿರೋದು - ಇವೆಲ್ಲ ನಿಲ್ಲಬೇಕು.

ಜೊತೆಗೆ ಈಗಾಗಲೇ ಇಲ್ಲಿ ವಲಸೆ ಬಂದು ನೆಲೆಸಿರೋ ಹಿಂದಿಯೋರಿಗೆ ಕನ್ನಡ ಕಲಿಯದೆ ಬೇರೆ ದಾರಿ ಇಲ್ಲ ಅನ್ನೋ ವ್ಯವಸ್ಥೆ ಬರಬೇಕು. ಇವತ್ತು ಕರ್ನಾಟಕದಲ್ಲಿ ಎಲ್ಲೆಲ್ಲಿ ಹಿಂದಿ ಇದ್ಯೋ ಅಲ್ಲೆಲ್ಲ ಮೊದಲು ಕನ್ನಡ ಬರಬೇಕು. ನಿಧಾನವಾಗಿ ಇಂಗ್ಲೀಷೂ ಹೋಗಿ ಬರೀ ಕನ್ನಡವಾಗಬೇಕು. ತಾವಾಗೇ ತಮ್ಮ ಇಷ್ಟದಿಂದ್ಲೇ ಕನ್ನಡ ಕಲೀತೀನಿ ಅನ್ನೋ ಹಿಂದಿಯೋರೂ ಬಹಳ ಜನ ಇದಾರೆ. ಇವರಿಗೆ ಕನ್ನಡಿಗರು ಸರಿಯಾದ ಸಂಸ್ಥೆಗಳ್ನ ಹುಟ್ಟುಹಾಕಿ ಕನ್ನಡವನ್ನ ವೈಜ್ಞಾನಿಕವಾಗಿ, ಹೊಚ್ಚಹೊಸ ತಂತ್ರಜ್ಞಾನಗಳ ಉಪಯೋಗ ಪಡ್ಕೊಂಡು ಹೇಳ್ಕೊಡ್ಬೇಕು.

ಇದೇ ಪರಿಹಾರ. ಇದಕ್ಕೆ ಮೊದಲ ಹೆಜ್ಜೇನೇ ಹಿಂದಿ ಹೇರಿಕೆಯನ್ನ ಕನ್ನಡಿಗರು ವಿರೋಧಿಸೋದು. ಯಾವುದೇ ಸಂದರ್ಭದಲ್ಲೂ ಹಿಂದಿ ಹೇರಿಕೆ ಒಪ್ಕೊಳ್ದೆ ಒಂದು ರೀತಿಯಲ್ಲಿ ಅಸಹಕಾರ ಚಳುವಳಿ ಶುರುವಾಗಬೇಕು ಗುರು! ಇಲ್ಲಿ ಹಿಂದಿಯೋರು ಕನ್ನಡ ಕಲೀಬೇಕೇ ಹೊರತು ಕನ್ನಡಿಗರು ಹಿಂದೀನಲ್ಲ.

"ಅತಿಥಿದೇವೋ ಭವ" ಅನ್ನೋ ಮಾತು ನಿಜ. ಆದರೆ ಹಿಂದಿಯೋರು ಅತಿಥಿಗಳಲ್ವೇ ಅಲ್ಲ! ಯಾರು ಆಕಸ್ಮಿಕವಾಗಿ ನಮ್ಮ ಮನೇಗೆ ಬರ್ತಾನೋ ಔನು ಅತಿಥಿ. 60 ವರ್ಷದಿಂದ ಸ್ಕೆಚ್ ಹಾಕ್ಕೊಂಡು ರೈಲ್ಮೇಲೆ ರೈಲು ಹಾಕ್ಕೊಂಡು ವ್ಯವಸ್ಥಿತವಾಗಿ ಬರ್ತಿರೋನು ಅತಿಥಿಯೂ ಅಲ್ಲ, ದೇವರೂ ಅಲ್ಲ!

11 ಅನಿಸಿಕೆಗಳು:

Anonymous ಅಂತಾರೆ...

ಈ ಬ್ಲಾಗ್‌ನಲ್ಲಿ ಬರುತ್ತಿರುವ ಲೇಖನಗಳು ಗಮನಾರ್ಹವಾಗಿದೆ. “ಹಿಂದಿ ವಿರೋಧಿ ಚಳುವಳಿ” ಅನ್ನುವುದಕ್ಕಿಂತ “ಕನ್ನಡ ಅನುಷ್ಠಾನ ಚಳುವಳಿ” ಎನ್ನುವ ದೃಶ್ಟಿಯಿಂದ ನೋಡುವುದು ಒಳ್ಳೆಯದು. ಇಷ್ಟು ದಿನ ನಾವು ಕನ್ನಡಿಗರೇಕೆ ಈ ವಿಷಯವಾಗಿ ಎಚ್ಚೆತ್ತುಕೊಳ್ಳಲಿಲ್ಲ ಆಶ್ಚರ್ಯವಾಗುತ್ತೆ. ಶಾಲೆಗಳಲ್ಲಿ ಕಲಿಯುತ್ತಿದ್ದ ದಿನದಿಂದ, ಮಾಧ್ಯಮಗಳು, ಸಾರ್ವಜನಿಕ ವ್ಯಕ್ತಿಗಳು ಈ ಹಿಂದಿ ಹೇರಿಕೆಯ ಬಗ್ಗೆ ಅಷ್ಟಾಗಿ ಗಮನ ಹರಿಸದಿದ್ದು ವಿಷಾದಕರ. ಈ ಬ್ಲಾಗ್ ನ ನಿರ್ವಾಹಕರು ಅಚ್ಚ ಕನ್ನಡ ಪ್ರೇಮಿಗಳು, ದೇಶಭಕ್ತರು ಎನ್ನುವುದರಲ್ಲಿ ಅನುಮಾನವಿಲ್ಲ. ನಿಮ್ಮ ಯೋಜನೆಗಳು ಸಫಲವಾಗಲಿ. ನಾವೆಲ್ಲಾ ಕನ್ನಡಿಗರು ನಿಮ್ಮೊಡನಿದ್ದೇವೆ.

-ಗುರುಪ್ರಸಾದ

Anonymous ಅಂತಾರೆ...

1965 ralli annadurai hindi virudhdha maataDidaaga namma nijalingappa en maadtaa idda??? nijalingappana tale odtirlilva ..??

http://en.wikipedia.org/wiki/Anti-Hindi_agitations#1965

Anonymous ಅಂತಾರೆ...

Swamy.. Kannadakke udhara aagade irodadde naavu kannadagare nera hone. Naau kannadigaragi enu madabeko adanna madta illa aste. Nammalli modalu bhasha abhimana illa. Navella naditaitee bido annu swabhadavaru. Illee namma IT/BT companies nalli kannadagaridare aadre honestly helteenii innobba kannadiga mele barod ellaroo sahisolla. Ade bere davaranna nodi ellaroo koodi avanna mele tartare.. Naavella aramba shooraru Kannada Chaluvali anta shuru madteevi aadre follow up madalla. Kannadatana annodu namma rakta gata aagbekri, namma makkalige kalisi kodabeku. Bangalore nalli yaradru bere bhasheli information kelidre naanu neat aagi avarige artha aago thara avara bhashe nalle helteevi. We should not ask others to learn kannada, instead we should make them to learn kannada.

Karnataka dalli kannadiga saarvabhoumanagodu naanu nodbeku anta idini.

-YUVRAJ
yuva21@gmail.com

Anonymous ಅಂತಾರೆ...

saarvajanika sthalagaLaada Bus nildaaNa, park modalaadakade ee hindi goobegaLu bandu nammanna avara bhaasheyalli daari, vivara keltaaralla avaaga naavu kannaDadalle 'nanage Hindi barolla kaNo' anta heLi kaLuhisabeku..aaga noDi aa janarige budhi bartade.

Anonymous ಅಂತಾರೆ...

neevella heLtha irodu nija gurugaLe.
ide varsha naanu May thingaLalli Delhi mattu itara uttara bharatada kaDe pravasakke hogidde. Alli hindi illade irakke saadyave illa anno paristhiti ide. tamashe andre himacala pradesha dallu saha avaradde ada ondu bhashe ide . Adre allella bari hindi de rajya bhara. ene mADidaru saha yaaru bere bhashe yalli uttara hogali english nallu saha uttara kodtha iralilla. aagale nanage nijavaada "Hindi bhoota" da arivaagiddu.

Howdu kannaDa "Saarvabouma" bhashe aago dina bega barbeku. idakke
namma IT vargada sakkashtu koduge iddare bega agatte. Yaakandre naavu thumba prabhavishaali varga - karuNaa

Anonymous ಅಂತಾರೆ...

Onde maathalli helabekendare Hindi kaliyuva saamarthyavillada janaru illi thamma golanu chennagi vishleshisuttiddare anta thiliyithu.

Halavaaru bhaashe kalitha nanage deshadaadyanta haagu vishwadaadyanta snehithariddare. Inta chikka manobhaava iruva Kannada snehitharinda nanage mukti sikkitu anta naanu khushi padabeku. Koopastha mandukaraagi baaluvudannu nillisi. Prayaana maadi, preethi belisi. Bhaashe nimannnu kapaadali. Neevu adannu kapaaduva stithi bandare nimma bhaasheyalli aa saamarthyavilla anuvuddu neravagi thilidu baruthade.

Anonymous ಅಂತಾರೆ...

houdu, bhaashe mattu saMskrutigaLannu uLisikoLLabekaaddu namma kartavya. namma bhaashe uLiyabeku andre adakke aDigallagiruva dharma mattu saMskrutigaLanno naavu uttegisabeku. hindu dharmada ulivinindale kannaDada udhaara saadhya.

Anonymous ಅಂತಾರೆ...

nissankoch avare ,
bahusha neevu elle prayaana maadidru eshte desha nodidru saha "neevu aa deshada/rajyada" hitasakti ge baddaragi nadedukolluttiddiri. idaralli aa rajyada, deshada bhasheyu serutte. illi neevu namma niluvugaLannu sariyaagi artha maadikondilla endu spashtavaagi gottagatte.
namma bhashe bagge gowrava preethi hechchisikoLLi endu hELOdu yaava reethiyalli tamage "koopa mandukatana" vaagi kaaNutte ?. yaake idanne kannada kaliyalu niraakarisuvavarige kooda hELbodalla ? - Barathi

Anonymous ಅಂತಾರೆ...

vaasudev ,
illi hindu dharmada prashNe baruvadilla. illi namage bEkaagiruvadu onde. karnaaTakadalli yaavude dharma, janarirali alli kannaDakke agrasthana ashte. namage hindu/crishtian/muslim emba bEdabhavavilla ellavu kannaDamaya vaagabEku - barathi

Anonymous ಅಂತಾರೆ...

"hindu dharmada ulivinindale kannaDada udhaara saadhya."

ನಾವು ಮುಸ್ಲಿಂ, ಕ್ರಿಶ್ಚಿಯನ್ನರು ಕನ್ನಡಿಗರು ಅಲ್ವಾ?

ಕನ್ನಡವು ಹಿಂದುಗಳ ಆಸ್ತಿ ಅಂತ ಇವು ಹೇಳುತ್ತಾ ಇದ್ದಾರೆ ನನ್ನ ಅಭಿಪ್ರಾಯ.

೧೧% ಮುಸ್ಲಿಂ ಕನ್ನಡಿಗರು ಇದ್ದೇವೆ ನಾವು. ನಾವು ಹಾಗಾದರೆ ಕನ್ನಡಿಗರ ಅಲ್ಲ ಅನ್ನುತ್ತಾರ ಇವರು?

ಏನ್ಗುರು ಹಿಂದಿ ನಮಗೆ ಬೇಡ, ಆದ್ರೆ ಹಿಂದಿಗೆ ತುಂಬ ಪ್ರಾಮುಖ್ಯತೆ ಕೊಡುವವರು ನಾವು ಮುಸ್ಲಿಂ-ಕ್ರಿಶ್ಚಿಯನ್ ಜನ ಅಲ್ಲ.

ಹಿಂದಿಯನ್ನು ನಮ್ಮ ಕರ್ನಾಟಕಕ್ಕೆ ತಂದಿರುವವರು ಹೆಚ್ಚು ಬಿಜೆಪಿ, ಕಾಂಗ್ರೆಸ್ ಜನ.

ನಾವು ಮನೆಯಲ್ಲು ಉರ್ದು ಮಾತಾಡಿದರೂ, ಪಬ್ಲಿಕಲ್ಲಿ ಕನ್ನಡವನ್ನೇ ಮಾತಾಡುತ್ತೇವೆ. ನಮಗೂ ಕನ್ನಡ ಓದಲು, ಬರೆಯಲು ಚನ್ನಾಗಿ ಬರುವುದು.

Anonymous ಅಂತಾರೆ...

kannada muslim avare, karnatakadalli iruva prathiyobbanu kannadigane. Hindu-Muslim yella nammannu vargikarana maduvadakke maadiruva kattupadu.
Kannada uddharakku HINDU dharmakku sambandave illa. naavu HINDU/MUSLIM agade iddaru uttama Kannadiragabahudhu.

haalu hampi hindu fanatics ge kaanisolla,adre doorada ramasethu/Ayodya kanisotte. modalu ivaru tamma rajyada bagge yochisiali aamele deshada bagge mtadali.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails