ಇಂಥವರಿಗೆ ಸಲ್ಲಬೇಕು ಶಿಕ್ಷಕರ ದಿನದ ನಮನ!

ಎಲೆಮರೆಯ ಕಾಯಂತೆ ಕನ್ನಡನಾಡ್ನ ಹಗಲು-ಇರುಳು ಕಟ್ತಾ ಇರೋ ಕರ್ನಾಟಕದ ಒಂದು ವಿಶೇಷವಾದ ಶಿಕ್ಷಕವರ್ಗಕ್ಕೆ ಶಿಕ್ಷಕರ ದಿನದಂದು ನಮ್ಮ ನಮನ.

ಎಲ್ಲಾ ಓಕೆ, ಯಾವುದು ಈ ವಿಶೇಷವಾದ ಶಿಕ್ಷಕವರ್ಗ ಅಂತೀರಾ? ಮುಂದೆ ಓದಿ...

ಈ ಶಿಕ್ಷಕರು ಕನ್ನಡನಾಡಲ್ಲಿ ಮೂಲೆಮೂಲೆಗಳಲ್ಲಿ ಅಡಗಿಕೊಂಡಿದ್ದಾರೆ, ಆದ್ರೆ ತಮ್ಮ ಮಾತಿಗೆ ಬೆಲೆ ಸಿಗ್ತಾ ಇಲ್ಲ ಅನ್ನೋದೊಂದೇ ಅವರ ಅಳಲು. ಇವತ್ತಿನ ದಿನ ಅವರು ಕನ್ನಡದಲ್ಲೇ ಬೋಧನೆ ಮಾಡ್ತಾ ಇರಲಿ, ಅನಿವಾರ್ಯ ಅಂತ ಇಂಗ್ಲೀಷಲ್ಲೇ ಬೋಧನೆ ಮಾಡ್ತಾ ಇರಲಿ, "ಕನ್ನಡವೇ ಸತ್ಯ, ಅನ್ಯವೆನಲದೇ ಮಿಥ್ಯ" ಅಂತ ನಿಜವಾಗಲೂ ತರಗತಿಯಲ್ಲಿ ಕಣ್ಣಾರೆ ಕಾಣ್ತಾ ಇರೋಂಥಾ ಶಿಕ್ಷಕರು ಇವರು!

ಕಲಿಕೆ ನಮ್ಮ ತಾಯ್ನುಡಿಯಲ್ಲೇ ಶುರುವಾಗೋದು, ತಾಯ್ನುಡಿಯ ಮೂಲಕವೇ ಅರಿವು ದೊರೆಯೋದು ಅಂತ ಅನುಭವದಿಂದ ತಿಳ್ಕೊಂಡಿರೋಂಥಾ ಶಿಕ್ಷಕರು ಇವರು. ಪ್ರಾಥಮಿಕ ಶಿಕ್ಷಣ ಮಾತ್ರ ಕನ್ನಡದಲ್ಲಿ (ಮಾತೃಭಾಷೇಲಿ) ಇದ್ದರೆ ಸಾಕು ಅಂತ ಸುಮ್ಮನೆ ಕೂರದೆ ನಿಜವಾಗಲೂ ಈ ಕೆಳಗಿನದೆಲ್ಲಾ ಆಗಬೇಕು ಅಂತ ಕನಸು ಕಾಣ್ತಾ ಇರೋ ಶಿಕ್ಷಕರು ಇವರು:
  • ನಮ್ಮ ಎಲ್ಲ ಪಠ್ಯ ಪುಸ್ತಕಗಳ ಮರು ಪರಿಶೀಲನೆಯಾಗಿ.... ಸರಳವಾದ, ನಿಜವಾದ ಕನ್ನಡೀಕರಣ ಆಗಬೇಕು
  • ವಿಜ್ಞಾನ - ತಂತ್ರಜ್ಞಾನ - ವೈದ್ಯಕೀಯವೂ ಸೇರಿದಂತೆ ಎಲ್ಲ ಶಿಕ್ಷಣಗಳೂ ಕನ್ನಡದಲ್ಲಿ ದೊರೆಯಬೇಕು
  • ಹಾಗೆ ಅಗತ್ಯವಿರುವ ಜ್ಞಾನ ಭಂಡಾರವನ್ನು ಕನ್ನಡಕ್ಕೆ ತರಲು, ಹೊಸ ಹೊಸ ಪದಗಳನ್ನು ಹುಟ್ಟು ಹಾಕುವ ಕೆಲಸವನ್ನೇ ಮಾಡುವ ಕನ್ನಡ ವಿಶ್ವವಿದ್ಯಾನಿಲಯಗಳನ್ನು ಕಟ್ಟಬೇಕು
  • ನಮ್ಮ ಮಕ್ಕಳು ಯಾವುದೇ ವಿಷಯವನ್ನು ಅಭ್ಯಾಸ ಮಾಡಬೇಕೆಂದರೆ ಅದು ಕನ್ನಡದಲ್ಲಿ ಸಾಧ್ಯವಾಗಬೇಕು.
  • ಸಂಶೋಧನೆಗಳು, ಉನ್ನತ ಶಿಕ್ಷಣ ಎಲ್ಲವೂ ಕನ್ನಡದಲ್ಲಿ ಆಗಬೇಕು
  • ಕನ್ನಡ ಭಾಷೆಯಲ್ಲಿ ಎಲ್ಲ ಕ್ಷೇತ್ರಗಳಿಗೆ ಸಂಬಂಧ ಪಟ್ಟ ಪದಕೋಶಗಳು ತಯಾರಾಗಬೇಕು
ಇವುಗಳಿಂದ ಯಾವುದೇ ವಿಷಯದ ಆಳಕ್ಕೆ ಹೋಗಕ್ಕೆ ಕನ್ನಡದ ಮಕ್ಕಳಿಗೆ ಸುಲಭ ಆಗತ್ತೆ, ಇವುಗಳಾದ್ರೆ ಮಾತ್ರ ಹೊಸ ಹೊಸ ಸಂಶೋಧನೆಗಳು, ಹೊಸಹೊಸ ಉತ್ಪನ್ನಗಳ ತಂತ್ರಜ್ಞಾನ ನಮ್ಮಲ್ಲೇ ಹುಟ್ಟಕ್ಕೆ ಸಾಧ್ಯ, ಹೀಗಾಗೋದ್ರಿಂದ ಮಾತ್ರ ನಾವು ಪ್ರಪಂಚದ ಅತ್ಯುತ್ತಮ ಉತ್ಪನ್ನಗಳನ್ನು ತಯಾರಿಸಬಲ್ಲವರಾಗ್ತೀವಿ, ಜಗತ್ತಲ್ಲಿ ಆರ್ಥಿಕವಾಗಿ ಬಲಿಷ್ಠ ಆಗಕ್ಕೆ ಸಾಧ್ಯ ಆಗತ್ತೆ ಅಂತ ಮನಸಾರೆ ಅರ್ಥ ಮಾಡ್ಕೊಂಡಿರೋಂಥಾ ಶಿಕ್ಷಕರು ಇವರು. ಇಂಥಾ ಒಂದು ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದಾಗಲೇ ನಾವು ಫ್ರಾನ್ಸು, ಜಪಾನು, ಜರ್ಮನಿ, ಇಸ್ರೇಲು, ರಷ್ಯಾ, ಚೀನಾ ಸೇರಿದ ಹಾಗೆ ಪ್ರಪಂಚದ ಬಲಿಷ್ಠ ದೇಶಗಳ ಜೊತೆ ಗಂಡಸರ ನಡುವೆ ಗಂಡಸರಂತೆ ನಿಲ್ಲಕ್ಕಾಗೋದು ಅಂತ ತಿಳ್ಕೊಂಡಿರೋ ಶಿಕ್ಷಕರು ಇವರು.

ಈ ವಿಶೇಷವಾದ ಶಿಕ್ಷಕವರ್ಗಕ್ಕೆ ಇಂದು ನಮ್ಮ ನಮನ. ನಾವು ನಿಮ್ಮ ಜೊತೆ ಇದೀವಿ ಗುರುಗಳೆ!

ಕಟ್ಟುವಾ ಬೆಳಕುತುಂಬಿದ ನಾಳೆಯಾ, ನೀನಿನ್ನು ಬಾರೆಯಾ?

3 ಅನಿಸಿಕೆಗಳು:

Anonymous ಅಂತಾರೆ...

maatru bhasheyalli shikshaNa tumba agatya. idu oLLe lEkhana. KannaDa kalisuttiruva ella shikshakarige nanna haardika abhinaMdanegaLu.
naanu saha kannaDadalle kalitiddu. eegalu kannaDadalli kalita vishayagaLella thumba chennagi nenapive....
nanna akkana magaLu CBSE paTya kramadalli odutta iddale. avalu ishTu dina thumba kashta pattu bejaru pattu kondu odutta iddalu. kaarana yakandre avara shaleyalli bari nammadallada hindi mattu english nalli bodhisuttare adakke. eega mane paaTakke serikondalu. alle kannadalle avaLige ella vivarisuttare. eega thumba uttama aMkagaLu baruttive. idu oMdu chikka nidarshana ashTe.

iMta saaviraaru "success stories" naavu maaDabahudu.

-karuNaa.

Unknown ಅಂತಾರೆ...

**ಇಂಥವರಿಗೆ ಸಲ್ಲಬೇಕು ಶಿಕ್ಷಕರ ದಿನದ ನಮನ!**
ಲೇಖನ ತು೦ಬಾ ಚೆನ್ನಾಗಿದೆ, ಲೇಖನ ಓದುವಾಗ ನಮ್ಮ ಪ್ರಾಥಮಿಕ ಶಾಲೆಯ ಶಿಕ್ಷಕರು, ಅವರ ನಿಸ್ವಾರ್ಥ ಪಟ್ಯ ಬೊದನೆ, ಸರಳೆತೆ,... ಎಲ್ಲ ನೆನಪಿಗೆ ಬ೦ತು.

ಇವರ ಕನಸುಗಳಾದ:
ನಮ್ಮ ಎಲ್ಲ ಪಠ್ಯ ಪುಸ್ತಕಗಳ ಮರು ಪರಿಶೀಲನೆಯಾಗಿ.... ಸರಳವಾದ, ನಿಜವಾದ ಕನ್ನಡೀಕರಣ ಆಗಬೇಕು
ವಿಜ್ಞಾನ - ತಂತ್ರಜ್ಞಾನ - ವೈದ್ಯಕೀಯವೂ ಸೇರಿದಂತೆ ಎಲ್ಲ ಶಿಕ್ಷಣಗಳೂ ಕನ್ನಡದಲ್ಲಿ ದೊರೆಯಬೇಕು
ಹಾಗೆ ಅಗತ್ಯವಿರುವ ಜ್ಞಾನ ಭಂಡಾರವನ್ನು ಕನ್ನಡಕ್ಕೆ ತರಲು, ಹೊಸ ಹೊಸ ಪದಗಳನ್ನು ಹುಟ್ಟು ಹಾಕುವ ಕೆಲಸವನ್ನೇ ಮಾಡುವ ಕನ್ನಡ ವಿಶ್ವವಿದ್ಯಾನಿಲಯಗಳನ್ನು ಕಟ್ಟಬೇಕು
ನಮ್ಮ ಮಕ್ಕಳು ಯಾವುದೇ ವಿಷಯವನ್ನು ಅಭ್ಯಾಸ ಮಾಡಬೇಕೆಂದರೆ ಅದು ಕನ್ನಡದಲ್ಲಿ ಸಾಧ್ಯವಾಗಬೇಕು.
ಸಂಶೋಧನೆಗಳು, ಉನ್ನತ ಶಿಕ್ಷಣ ಎಲ್ಲವೂ ಕನ್ನಡದಲ್ಲಿ ಆಗಬೇಕು
ಕನ್ನಡ ಭಾಷೆಯಲ್ಲಿ ಎಲ್ಲ ಕ್ಷೇತ್ರಗಳಿಗೆ ಸಂಬಂಧ ಪಟ್ಟ ಪದಕೋಶಗಳು ತಯಾರಾಗಬೇಕು

ಎಲ್ಲ ನಿಜವಾದ್ರೆ ಎಸ್ಟು ಛೆನ್ನಾಗಿರುತ್ತೆ.. ಅರೆ ಯಾಕಾಗ್ಬಾರ್ದು ಸ್ವಾಮಿ, ಪ್ರಯತ್ನ ಪಟ್ಟರೆ ಎಲ್ಲ ಸಾದ್ಯವಾಗುತ್ತದೆ, ನಮ್ಮ ಶ೦ಕರ್ ನಾಗ್ ಅವರು ಹೇಳುವ ಹಾಗೆ ಒ೦ದು ಒಳ್ಳೆ ಕೆಲಸ ಆಗ್ಬೇಕಾದ್ರೆ ಮೊದಲು ಅದನ್ನು ಶುರು ಮಾಡಬೇಕು.

suma ಅಂತಾರೆ...

super

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails