ಮೈಸೂರು ದಸರಾ ಅಂತರ್ಜಾಲ ತಾಣದಲ್ಲಿ ಕನ್ನಡವೇ ಮೂಲೆಗುಂಪು!

ನಮ್ಮ ನಾಡಹಬ್ಬ ಮೈಸೂರು ದಸರಾದ ಬಗ್ಗೆ ಮಾಹಿತಿ ನೀಡೋ http://www.mysoredasara.com ಅನ್ನೋ ಅಂತರ್ಜಾಲ ತಾಣದಲ್ಲಿ ಕನ್ನಡವನ್ನು ಕಡೆಗಣಿಸಿರೋದು ಖಂಡಿತಾ ತಪ್ಪು. ಪ್ರವಾಸಿಗಳ್ನ ಸೆಳೆಯೋಕೆ ಮತ್ತು ಅವರಿಗೆ ಅನುಕೂಲ ಮಾಡಿಕೊಡಬೇಕು ಅಂತ ಅವರುಗಳ ಭಾಷೇಲಿ ಇರ್ಲೇಬೇಕು, ನಿಜ. ಆದ್ರೆ ಕನ್ನಡದಲ್ಲಿ ಇಲ್ಲದೇ ಇರೋದು ಅಥ್ವಾ ಇದ್ರೂ ಕೆಟ್ಟದಾಗಿ ಅರೆಬರೆ ಇರೋದು ಮಾತ್ರ ಖಂಡಿತ ತಪ್ಪು ಗುರು! ಅದ್ಯಾಕೆ ನಮ್ಮ ಜನಕ್ಕೆ ನಮ್ಮ ಭಾಷೇನ ಅಡುಗೆಮನೆ-ಬಚ್ಚಲುಮನೆಗಳಿಗೇ ಮೀಸಲಾಗಿಡಬೇಕು ಅನ್ನೋ ರೋಗವೋ ಗೊತ್ತಿಲ್ಲ! ಅಥವಾ ಕನ್ನಡಿಗರಿಗೆ ಮೈಸೂರು ದಸರಾ ಬಗ್ಗೆ ಮಾಹಿತಿ ಬೇಡವೇ ಬೇಡ ಅನ್ನೋದು ಅವರ ತೀರ್ಮಾನವೇನು? ಏನು ಪೆದ್ದತನ!

ತಾಣದಲ್ಲಿ ಕಡೆಗಣಿಸಲಾದ ಕನ್ನಡ

ಆ ಇಡೀ ತಾಣವನ್ನು ರೂಪಿಸಿರೋದು ಇಂಗ್ಲಿಷ್ ಭಾಷೇಲಿ. ಗೂಗಲ್ ಟ್ರಾನ್ಸ್‍ಲೇಟ್ ಬಳಸಿ ವಿಶ್ವದ ಎಂಟು ಭಾಷೆಗಳಲ್ಲಿ ಮಾಹಿತಿ ಸಿಗೋಹಾಗೆ ಮಾಡಿ ಕನ್ನಡವನ್ನ ಮೂಲೆಗೆ ತಳ್ಳಿದಾರಲ್ಲ, ಇವರಿಗೇನು ಬಂತು? ತಾಣದಲ್ಲಿ ಯಾರಿಗೂ ಕಾಣದಂತೆ ಮೂಲೇಲಿರೋ ಆ ಕನ್ನಡದ ಕೊಂಡಿ ಒತ್ತಿದರೆ ಮೊದಲ ಪುಟ ಕನ್ನಡದಲ್ಲಿ ಕಾಣುತ್ತೆ, ಆದರೆ ಅಲ್ಲಿಂದ ಯಾವ ಲಿಂಕೂ ತೆರೆದುಕೊಳ್ಳಲ್ಲ. ಜೊತೆಗೆ ಕಾಗುಣಿತದ ತಪ್ಪುಗಳು ಸಾಕಷ್ಟಿವೆ (ಸ್ಥಳಾವಕಾಶ = ಸ್ಥಳವಕಾಶ. ದಸರಾ ಸುದ್ದಿ = ದಸರಾ ಸುದ್ದ)!

ನಮ್ಮತನಾನ ತೋರಿಸಿಕೊಳ್ಳೋದೇ ಪ್ರವಾಸೋದ್ಯಮದ ಬೆನ್ನೆಲುಬು ಅಂದಾಗ ಈ ನಮ್ಮತನದಲ್ಲಿ ನಮ್ಮ ಭಾಷೇನೂ ಬರತ್ತೆ ಅನ್ನೋ ಬುದ್ಧಿ ಬೇಡವಾ? ಇಡೀ ಪ್ರಪಂಚದ ಕಣ್ಣಿಗೆ ಕನ್ನಡ ಮತ್ತು ಕನ್ನಡ ಸಂಸ್ಕೃತಿ ಎರಡನ್ನೂ ತೋರ್ಸೋ ಒಳ್ಳೇ ಅವಕಾಶ ಇದು. ಇದನ್ನೆಲ್ಲ ಬಿಟ್ಟು ಪ್ರವಾಸಿಗಳಿಗೆ ಬರೀ ಅವರತನವನ್ನೇ ತೋರಿಸಿಕೊಡಕ್ಕೆ ದಸರಾ ಯಾಕೆ ಮಣ್ಣು ಹುಯ್ಕೊಳಕ್ಕೆ? ನಮ್ಮೂರಿನ ಬಗ್ಗೆ ಇರೋ ನಮ್ಮದೇ ಅಂತರ್ಜಾಲ ತಾಣದಲ್ಲಿ ನಮ್ಮ ಭಾಷೇನೇ ನಾವು ಕಡೆಗಣುಸ್ತಾ ಇದೀವಿ ಅಂದ್ರೆ ಇದು ಎಂಥಾ ಕೀಳರಿಮೆ ಗುರು?! ಅಥವಾ ಜರ್ಮನ್ ಪ್ರವಾಸಿಯೊಬ್ಬ ಇದನ್ನ ನೋಡಿ "ನಿಮ್ಮದು ಅಂತ ಯಾವ ಭಾಷೇನೂ ಇಲ್ಲವಾ?" ಅಂದ್ರೆ ಏನ್ ಮಾಡ್ತಾರಂತೆ ಆ ತಾಣವನ್ನ ಮಾಡಿರೋ ಭೂಪತಿಗಳು?

ಆ ತಾಣದಲ್ಲಿ ಕನ್ನಡ ರಾರಾಜಿಸೋಹಾಗೆ ಮಾಡಬೇಕು

ನಮ್ಮತನವನ್ನ ಬರೀ ಅಡುಗೆಮನೆ-ಬಚ್ಚಲುಮನೆಗಳಿಗೇ ಮೀಸಲಿಡಬೇಕು ಅನ್ನೋ ಮನೆಹಾಳು ಬುದ್ಧಿ ಬಿಸಾಕಿ ಕೂಡಲೇ ಆ ತಾಣದಲ್ಲಿ ಈ ಕೆಳಗಿನ ಬದಲಾವಣೆಗಳಾಗಬೇಕು ಅಂತ ಆ ತಾಣ ಮಾಡಿರೋರ್ಗೆ ಒಸಿ ಬರಿಯೋಣ ಗುರು:
  • ಈ ತಾಣವನ್ನು ತೆರೆದ ಕೂಡಲೇ ಕನ್ನಡದ ಅಕ್ಷರಗಳು ಕಾಣಬೇಕು
  • ಬದಿಯಲ್ಲಿ ಭಾಷಾ ಆಯ್ಕೆ ಅಂತ ಬೇರೆ ಬೇರೆ ಭಾಷೆಗಳ ಆಯ್ಕೆಯ ಪಟ್ಟಿ ಇರಬೇಕು
  • ಎಲ್ಲ ಲಿಂಕುಗಳೂ ಕನ್ನಡದ ಆಯ್ಕೆ ಇದ್ದಾಗಲೂ ಕೆಲಸ ಮಾಡಬೇಕು.
ಕನ್ನಡದಲ್ಲಿ ಮಾಡಿ ಅಂದ್ರೆ ಕನ್ನಡದಲ್ಲಿ ಅದಾಗಲ್ಲ, ಇದಾಗಲ್ಲ, ಎಲ್ಲರಿಗೂ ಕಾಣೋಹಾಗೆ ಮಾಡಕ್ಕಾಗಲ್ಲ, ತಂತ್ರಾಂಶ ಇಲ್ಲ, ಗಿಂತ್ರಾಂಶ ಇಲ್ಲ, ಅದು-ಇದು, ಮಣ್ಣು-ಮಸಿ ಅಂತ ಉತ್ತರ ಕೊಡೋಕೆ ಮುಂದೆ ಬಂದ್ರೆ ಎಲ್ಲಕ್ಕೂ ನಮ್ಮಹತ್ತಿರ ಉತ್ರ ಇದೆ ಅಂತ ಹೇಳ್ಬೇಕು ಗುರು! ಈ ತಂತ್ರಾಂಶ-ಗಿಂತ್ರಾಂಶದ ತೊಂದರೆಗಳೆಲ್ಲ ಕುಣೀಲಾರದೇ ಇರೋರಿಗೆ ಮಾತ್ರ. ಕುಣೀಲೇಬೇಕು ಅಂತಿದ್ರೆ ತಂತ್ರಾಂಶವೂ ಬರತ್ತೆ, ಮಣ್ಣು-ಮಸೀನೂ ಬರತ್ತೆ ಅನ್ನೋದಕ್ಕೆ ಕನ್ನಡದಲ್ಲಿ ಇವತ್ತಿನ ದಿನ ಇರೋ ಸಾವಿರಗಟ್ಲೆ ಬ್ಲಾಗುಗಳೇ ಸಾಕ್ಷಿ ಗುರು!

5 ಅನಿಸಿಕೆಗಳು:

Anonymous ಅಂತಾರೆ...

ಸರಿಯಾಗಿ ಹೇಳಿದಿಯಾ ಗುರು. ಆದರೆ ವಿಪರ್ಯಾಸ ಅಂದ್ರೆ ಇದನ್ನು ಸರಿ ಅನ್ನೋ ಮನಸ್ಥಿತಿ ಇರೋವಂಥ ಕನ್ನಡಿಗರೂ ಇದ್ದಾರೆ.ಇದೇ ವಿಷಯವಾಗಿ ’ದಟ್ಸ್ ಕನ್ನಡ’ದಲ್ಲಿ "ಮೈಸೂರು ದಸರಾ ವೆಬ್ ಸೈಟ್ ಸರ್ವಂ ಇಂಗ್ಲಿಷ್ ಮಯಂ!" ಅನ್ನೋ ಲೇಖನ ಬಂದಿತ್ತು(http://thatskannada.oneindia.in/news/2007/10/11/dasara-info-in-eight-foreign-languages.html) . ಅದರಲ್ಲಿ ಕನ್ನಡಿಗನೊಬ್ಬ ಇದರಲ್ಲಿ ತಪ್ಪೇನಿದೆ ಎಂದು ಕೇಳಿ ದಟ್ಸ್ ಕನ್ನಡ ಸಂಪಾದಕರಿಗೇ ಬೈದಿರುವ comment ಒಂದು ಇನ್ನೂ ಅಲ್ಲೇ ಇದೆ. ಇಂಥ ಕೀಳರಿಮೆಯ , ನಮ್ಮವರನ್ನು ಕಡೆಗಣಿಸಿ ಹೊರಗಿನವರಿಗೆ ಅನುಕೂಲ ಮಾಡಿಕೊಡುವ ಮನಸ್ಥಿತಿಯುಳ್ಳ ಜನರಿಂದಲೇ ಇವತ್ತು ಪರಿಸ್ಥಿತಿ ಹೀಗಾಗಿರೋದು.

Lohith ಅಂತಾರೆ...

Ed nijavaglu dukha taruva visya....Mysooru dasara namma KANNADA Nadina hagu KANNADA samskruthi belsuva nada habba....Nam nadinale heg adre henge?..Baro pravasegaranu akarsisalu heg maduvudu nama nadige nave madida avamana aste.......

Anonymous ಅಂತಾರೆ...

naanu mysurinavane,, namma dasara habbada bagge namma bhasheli website li maahiti ilde irodu nijkku dukhada vishya.. ninne dina nadeda ondu job interview nalli naanu City column nalli mysuru anthane haaki kotte,, adanna nodi HR obbalu kushi paTlu. mysore na mysuru antha bardiddu yaake andaag, heLide, nammatana torso hesaru mysuru, adu igaa sarkara kooda approve maadide antha,, she felt happy..

Anonymous ಅಂತಾರೆ...

ಆ ಸೈಟನ್ನು ಮಾಡಿರೋದು ರಾಮನ್ institute.. :)

ನೋಡಿ.. ಇದನ್ನು outsource ಮಾಡಬೇಕಾ?

ನಮ್ಮ ಕನ್ನಡದೊರಿಗೆ ಒಂದು ವೆಬ್ ಸೈಟ್ ಮಾಡಕ್ಕೆ ಬರೊಲ್ವಾ?

ಇಲ್ಲೋ lobby... ನಮ್ಮ ನಾಡಿನ ಹಣದಿಂದ ಯಾರು ಯಾರಿಗೋ ಕೆಲಸ ..

ಇನ್ನು ಹೊರನಾಡಿನೋರು ಮಾಡಿದ ಕನ್ನಡ ಸೈಟಲ್ಲಿ ತಪ್ಪು ಇಲ್ಲದೇ ಇರ್ತದಾ?

Shalva ಅಂತಾರೆ...

sAr nAvu eSHtE baDidAdrunu, namma BUpatigaLu innU adanna sari mADilla andre En artha guruvE? nAvu mADthA iro kelsa vyarTa AgolvA? nIve osi hELi.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails