ಹೊರಲಾರದ ಇಂಗ್ಲೀಷ್ ಹೊರೆಯಿಂದ ಭಾರತ ತರಗತಿಯಲ್ಲಿ ನಪಾಸು!

ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿರೋ ಪಟ್ಟಿ ಪ್ರಕಾರ ಸಂಶೋಧನೆ ಮತ್ತು ಅಭಿವೃದ್ಧಿ (R&D) ವಿಷಯದಲ್ಲಿ ಭಾರತ ಮೆಕ್ಸಿಕೊ ದೇಶಕಿಂತಲೂ ಹಿಂದಿದೆ ಅಂತ ಅಕ್ಟೋಬರ್ 8ರ ಬಿಜಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಇದಕ್ಕೆ ಕಾರಣ ಸಂಶೋಧನೆ ಮಾಡುವ ಯೋಗ್ಯತೆಯನ್ನ ನಮ್ಮ ವ್ಯವಸ್ಥೆ ಎಲ್ಲರಿಗೂ ಕೊಡದೆ ಕೆಲವರಿಗೆ ಮಾತ್ರ ಕೊಟ್ಟಿರುವುದು ಅಂತ ಅದೇ ವರದಿ ಹೇಳತ್ತೆ. ಜನಸಂಖ್ಯೆ ಮತ್ತು ವಿಸ್ತೀರ್ಣಗಳ್ನ ನೋಡಿದರೆ ಭಾರತ ಅಲ್ಲ ಮೆಕ್ಸಿಕೋನ ಮೀರಿಸಬೇಕಾಗಿರೋದು - ಕರ್ನಾಟಕ! ಎಷ್ಟು ಹಿಂದುಳಿದಿದೀವಿ ನಾವು ಅಂತ ಅರ್ಥವಾಯಿತಾ?

ಲಕ್ಷಾಂತರ ಪದವೀಧರರು ಪ್ರತಿ ವರ್ಷ ಕಾಲೇಜುಗಳಿಂದ ಹೊರ ಬಂದ್ರೂ, ಅವರಿಂದ ಇಡೀ ವಿಶ್ವ ಬೆರಗಾಗುವಂಥಾ ಉತ್ಪನ್ನಗಳ ಸೃಷ್ಟಿ ಆಗಲಿ ಸಂಶೋಧನೆಗಳಾಗಲಿ ಆಗ್ತಿಲ್ಲ ಅನ್ನೋದು ಕಟುಸತ್ಯ. ಹಾಗಿದ್ರೆ ನಮ್ಮ ದೇಶದ ಜನರಲ್ಲಿ ಆ ಸಾಮರ್ಥ್ಯವೇ ಇಲ್ವಾ? ಸಾಮರ್ಥ್ಯ ಖಂಡಿತವಾಗಿಯೂ ಇದೆ, ಆದರೆ ಸಮಸ್ಯೆಯ ಮೂಲವಿರೋದು ಪ್ರತಿಭೆಗಲ್ಲದೆ ಇಂಗ್ಲೀಷಿಗೆ ಮಣೆ ಹಾಕೋ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಗುರು! ಈ ಸುದ್ದಿಯಿಂದ ಕನ್ನಡಿಗರು (ಅಷ್ಟೇ ಅಲ್ಲ, ಇತರ ಭಾರತೀಯರು ಕೂಡ) ಏನು ಕಲೀಬೇಕು, ಏನು ಮಾಡಬೇಕು ಅಂತ ನೋಡ್ಮ.

ಕೋಟಿಗಟ್ಟಲೆ ಪ್ರತಿಭಾವಂತರಿಗೆ ಕೊಳ್ಳಲಾರದ ಇಂಗ್ಲೀಷ್ ಟಿಕೆಟ್ಟು
ಇವತ್ತು ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ ಪಡಿಸೋ ಕೆಲವೇ ಕೆಲವು ಸಂಸ್ಥೆಗಳಲ್ಲಿ ಎಲ್ಲ ಅಧ್ಯಯನ ವ್ಯವಸ್ಥೆಯೂ ಇಂಗ್ಲೀಷಿನಲ್ಲಿದೆ. ಅಷ್ಟೇ ಅಲ್ಲದೆ ಇಂಥ ಯಾವುದೇ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಇಂಗ್ಲೀಷಲ್ಲೇ ಪರೀಕ್ಷೆ ಪಾಸ್ ಆಗ್ಬೇಕು, ಅದೂ ಸಾಲದು ಅನ್ನೋಹಾಗೆ ಪ್ರವೇಶ ಪಡೆಯೋಕೆ ಕಟ್ಟಬೇಕಾಗಿರೊ ಫೀಸು ಕೂಡಾ ಬಡವರ, ಮಧ್ಯಮ ವರ್ಗದವರ ಎಟುಕಿಗೆ ನಿಲುಕದ್ದು. ಹೀಗಿರುವಾಗ ಹಳ್ಳಿಗಳ ದೇಶವಾದ ಭಾರತದ ಆರ್ಥಿಕವಾಗಿ ಹಿಂದುಳಿದಿರುವ, ಇಲ್ಲವೆ ಇಂಗ್ಲೀಷ್ ಭಾಷೆ ಮೇಲೆ ಪ್ರಭುತ್ವ ಇಲ್ಲದಿರೋ ಅಸಂಖ್ಯಾತ ಪ್ರತಿಭಾವಂತರು ಮೂಲೆಗುಂಪಾಗುತ್ತಿದ್ದಾರೆ ಅನ್ನೋದು ಕಟು ಸತ್ಯ. ಇವರನ್ನೆಲ್ಲ ಬಿಟ್ಟು ಮುಂದೆ ಹೋಗ್ತೀನಿ ಅನ್ನೋ ವ್ಯವಸ್ಥೆ ಎಲ್ಲೀವರೆಗೆ ಇರತ್ತೋ ಅಲ್ಲೀವರೆಗೆ ಮೆಕ್ಸಿಕೋನೂ ನಮ್ನ ಮೀರಿಸತ್ತೆ, ಗಿಕ್ಸಿಕೋನೂ ಮೀರಿಸತ್ತೆ ಗುರು!

ಎಲ್ಲರಿಗೂ ಸಮಾನ ಅವಕಾಶಕ್ಕೆ ಕಲಿಕೆ ತಾಯ್ನುಡಿಯಲ್ಲೇ ಇರಬೇಕು
ತಂತ್ರಜ್ಞಾನದ ಬಾನಿನಲ್ಲಿ ಭಾರತವನ್ನ ಇನ್ನೂ ಎತ್ತರಕ್ಕೆ ಕೊಂಡೊಯ್ಯಬೇಕು ಅಂದ್ರೆ ಅಗತ್ಯವಾಗಿ ಬೇಕಾಗಿರೋದು ಯಾರನ್ನೂ ಮರೆಯದ, ಕಡೆಗಣಿಸದ ವ್ಯವಸ್ಥೆ, ಅಂದ್ರೆ ತಂತ್ರಜ್ಞಾನ ಅಭಿವೃದ್ಧಿಯ ಈ ಯಜ್ಞದಲ್ಲಿ ನಾಡಿನ ಎಲ್ಲರೂ ಕೊಡುಗೆ ನೀಡಲು ಸಾಧ್ಯವಾಗುವಂಥಾ ಒಂದು ಶಿಕ್ಷಣ ವ್ಯವಸ್ಥೆ. ಅಂದ್ರೆ ತಂತ್ರಜ್ಞಾನ ಇರಲಿ, ವಿಜ್ಞಾನ ಇರಲಿ ಅಥವಾ ಮತ್ತೊಂದಿರಲಿ, ಈ ಎಲ್ಲ ವಿಷಯಗಳ ಕಲಿಕೆಗೂ, ಕಲಿಕೆಯ ವಸ್ತುಗಳಿಗೂ ನಾಡಿನ ಸರ್ವರಿಗೂ ಸಮಾನ ಅವಕಾಶ ಇರಬೇಕು.

ಹಾಗೇ ಅದು ಎಲ್ಲರಿಗೂ ಸುಲಭವಾಗಿ ಅರ್ಥವಾಗುವ, ಎಲ್ಲರೂ ಸರಿಯಾಗಿ ಗ್ರಹಿಸಲು ಸಾಧ್ಯವಾಗುವ ಭಾಷೆಯಲ್ಲಿರಬೇಕು. ಅಂತಹ ಭಾಷೆ ಯಾವುದು? ಇಂಗ್ಲಿಷೋ? ಇಲ್ಲ ಹುಟ್ಟಿದಾಗಿನಿಂದಲೇ ಬಂದಿರೊ ತಾಯಿ ನುಡಿಯೊ? ವಿಷಯ ಸರಳವಾಗಿದೆ ಗುರು. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಹೀಗೆ ಎಲ್ಲ ಕ್ಷೇತ್ರದ ವಿಷಯಗಳು ಕಲಿಕೆಗೆ ಕನ್ನಡದಲ್ಲೇ ಲಭ್ಯವಾಗಬೇಕು.

ಇಂಗ್ಲೀಷಲ್ಲೇ ಯಾಕೆ ಸಾಧ್ಯವಿಲ್ಲ?

ಕೆಲವರಿಗೆ ಇದೆಲ್ಲಾ ಇಂಗ್ಲೀಷಲ್ಲೇ ಆಗೋ ದಿನ ಬರತ್ತೆ ಅನ್ನೋ ತಪ್ಪು ತಿಳುವಳಿಕೆ ಇದೆ. ಅಂಥೋರು ಈ ಅಂಶಗಳ್ನ ಮನಸ್ಸಿನಲ್ಲಿ ಮೆಲಕು ಹಾಕಲಿ:
  • ಕಲಿಕೆಯ ಎಲ್ಲ ಅವಕಾಶಗಳು ಎಲ್ಲರಿಗೂ ಇಂಗ್ಲೀಷಲ್ಲಿ ದೊರಕಬೇಕು ಅಂದ್ರೆ ದೇಶದ ಜನರಿಗೆ ಮೊದಲು ಇಂಗ್ಲೀಷ್ ಕಲಿಸಬೇಕು. ಯಾಕೆಂದ್ರೆ ದೇಶದ ಜನಸಂಖ್ಯೆಯಲ್ಲಿ ಇಂಗ್ಲೀಷ್ ಬಲ್ಲವರ ಸಂಖ್ಯೆ ಶೇಕಡಾ 10 ಇರಬಹುದಷ್ಟೆ. ಅದು ನಮ್ಮ ರಾಜ್ಯಕ್ಕೂ ಅನ್ವಯಿಸುತ್ತದೆ. ಅಂದ್ರೆ ನಮ್ಮ ನಾಡಿನ ಐದೂವರೆ ಕೋಟಿ ಜನರಲ್ಲಿ ಒಂದು 55 ಲಕ್ಷಜನಕ್ಕೆ ಇಂಗ್ಲೀಷ್ ಗೊತ್ತು. ಬ್ರಿಟಿಶರು ನಮ್ಮನ್ನ 300 ವರ್ಷ ಆಳಿದ ಮೇಲೆ ಈ ನಾಡಿನ ಶೇಕಡಾ 10 ರಷ್ಟು ಜನಕ್ಕೆ ಇಂಗ್ಲಿಷ್ ಬರುತ್ತೆ. ಉಳದಿರೊ ಜನಕ್ಕೆ ಇಂಗ್ಲಿಷ್ ಕಲಿಸೊ ಹೊತ್ತಿಗೆ ನಮ್ಮ ಐವತ್ತೋ, ಅರವತ್ತೋ ತಲೆಮಾರು ಸರಿದು ಹೊಗಿರುತ್ತೆ! ಅಮೇಲೆ ಏನ್ ಮಣ್ಣ ಸಂಶೋಧನೆ, ಅಭಿವೃದ್ಧಿ ಮಾಡ್ತಿವಿ? ಅಷ್ಟು ವರ್ಷ ಹಿಂದುಳಿದರೆ ನಾವು ಬದುಕೋದೇ ಇಲ್ಲ!
  • 90 ಪ್ರತಿಶತ ಜನ ಮಾತಾಡೋ ಭಾಷೆಲಿ ಇಂಥದೊಂದು ವ್ಯವಸ್ಥೆ ತರೋದು ಸುಲಭವೋ? ಇಲ್ಲವೇ ಶೇಕಡಾ 10 ಜನ ಮಾತಾಡೋ ಭಾಷೇಲೋ?
  • ಒಂದು ಜನಾಂಗ, ಆ ಜನಾಂಗ ಮಾತಾಡೋ ಭಾಷೆ, ಅವರ ಸಂಸ್ಕೃತಿ ಒಂದಕೊಂದು ತಳಕು ಹಾಕಿಕೊಂಡಿರುತ್ತವೆ. ಶಿಕ್ಷಣ ಅನ್ನೊದು ಆ ಶಕ್ತೀನ ಪಡಕೊಳ್ಳೊದಕ್ಕೆ ಇರೋ ಸಾಧನ. ಆ ಶಿಕ್ಷಣ ವ್ಯವಸ್ಥೆ ಮಾತೃಭಾಷೆಯಲ್ಲಿದ್ದಾಗ ಮಾತ್ರ ವಿದ್ಯಾರ್ಥಿಗೆ ಆತ್ಮ ವಿಶ್ವಾಸ ಪಡೆದು, ತನ್ನಲ್ಲಿರುವ ಸಂಪೂರ್ಣ ಸಾಮರ್ಥ್ಯವನ್ನು ಹೊರಗೆಡವಲು ಸಾಧ್ಯವಾಗೊದು ಮತ್ತು ಸಾಧ್ಯವಾದಾಗಲೇ ನಮ್ಮ ನೆಲದಿಂದ ಹೆಚ್ಚು ಹೆಚ್ಚು ಉತ್ಪನ್ನಗಳೂ, ಪೇಟೆಂಟುಗಳೂ ಬರಲು ಸಾಧ್ಯವಾಗೊದು.
  • ಕನ್ನಡಿಗನ ಬೌದ್ಧಿಕ ವಿಕಾಸಕ್ಕೆ, ತಲೆ ಚುರುಕಾಗಿ ಕೆಲ್ಸಮಾಡೋಕೆ ಆತನ ಮಾತೃಭಾಷೇಲಿ ಶಿಕ್ಷಣ ಭಾಳ ಮುಖ್ಯ. ಇದನ್ನ ನಾವಲ್ಲ ಹೇಳ್ತಿರೊದು, ಜಗತ್ತಿನಾದ್ಯಂತ ಆಗಿರೊ ನೂರಾರು ಸಾವಿರಾರು ಸಮೀಕ್ಷೆಗಳು ಸಾರಿ ಸಾರಿ ಹೇಳ್ತಾ ಇವೆ. ಇದನ್ನ ವಿಶ್ವಸಂಸ್ಥೇನೂ ಹೇಳ್ತಾ ಬಂದಿದೆ, ಗಾಂಧೀಜಿಯವರೂ ಬಹಳ ಹಿಂದೇನೇ ಹೇಳಿದ್ದಾರೆ.
ನಾವು-ನೀವು ಇದಕ್ಕಾಗಿ ಏನು ಮಾಡಬಹುದು?

ಎಲ್ಲವೂ ಕೊನೆಗೆ "ನಾವೇನು ಮಾಡಬಹುದು?" ಅನ್ನೋದಕ್ಕೇ ಬರುತ್ತೆ ಗುರು. ಇಷ್ಟಾದರೂ ಮಾಡಬಹುದಲ್ಲ?
  • ನಮ್ಮನಮ್ಮ ಪರಿಣಿತಿಯ ಕ್ಷೇತ್ರದಲ್ಲಿ ವಿಷ್ಯಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡೋದು ಹಾಗೂ ಅಂತಹ ಪ್ರಯತ್ನ ಮಾಡ್ತಿರೊರಿಗೆ ಎಲ್ಲ ರೀತಿಯ ಬೆಂಬಲ ನೀಡೊದು
  • ಐ.ಟಿ ಕಂಪನೀನೇ ಇರಲಿ, ಮತ್ತೊಂದು ಕಂಪನಿಯಿರಲಿ, ಕಾಲೇಜೇ ಇರಲಿ ನಮ್ಮ ಸ್ನೇಹಿತರೋಡನೆ ವಿಜ್ಞಾನ-ತಂತ್ರಜ್ಞಾನದ ವಿಷಯಗಳನ್ನ ಕನ್ನಡದಲ್ಲೇ ಚರ್ಚಿಸಿ, ಆ ಮೂಲಕ ಕನ್ನಡದಲ್ಲಿ ತಾಂತ್ರಿಕ ಚರ್ಚೆ ಸಾಧ್ಯವಾಗಿಸೋದು
  • ನಮ್ಮ ಘನ ಸರಕಾರ ಇದೆಲ್ಲ ಆಗದಿರೋ ಮಾತು ಅನ್ನೊ ಕೀಳರಿಮೆ ಬಿಟ್ಟು ಸರಿಯಾದ ಶಿಕ್ಷಕರ ನೇಮಕ, ಸರಿಯಾದ ಪಠ್ಯಕ್ರಮದ ಯೋಜನೆ ಹಾಗೂ ಅತಿ ಮುಖ್ಯವಾಗಿ ಕನ್ನಡದಲ್ಲಿ ಉನ್ನತ ಶಿಕ್ಷಣ ಜಾರಿಗೆ ತರಲು ತಜ್ಞರ ಮುಂದಾಳುತನದಲ್ಲಿ ಸಾಗಬೇಕಾದ ದಾರಿಯ ಬಗ್ಗೆ ಚಿಂತಿಸೋ ಹಾಗೆ ಮಾಡೋದು

11 ಅನಿಸಿಕೆಗಳು:

Unknown ಅಂತಾರೆ...

Haudu...indu English na prabhava metro city ge matra simitavagide anta anista ede.... adanna halli halli ge talupisuva prayatna tumba kasta... E vandu drustienda namma kannadada janateyalli mukyavaagi sanna oorugallina janarige vignana mattu tantrajnanada mahiti poorakavagi, avarige arthavaguva reetiyalli muttuttilla...

Namma Lekhakaru heluva haage...adannu Kannadadalli, kannada janatege muttisabeku....

Anonymous ಅಂತಾರೆ...

deshakke khyati tanda vijnanigaLada CNR Rao, UR Rao, namma vishweshwariah hige hattu halavu pramukharu kananda maadhyamadalle kalitu munde bandoru,, aadre kaLeda 50 varshadalli namma rajydainda banda vijnaanigaLa sankhe noDidre niraashe aagutte,, adakke kaaraNa spashTa,, vijnana tantrajnanada kalike naadina sakalarannu muTTuttilla,, the lack of inclusive innovation as you said is the real cause. naadinalliro prassiddha vijnani gaLu, bere bere rangada pariNitarannu vishwasakke tagonDu sarakara e kelsakke kai haakidre innu 10 varshadalli naavu R&D kshetradalli khanditavaagiyu pragati saadhisuttive,, tumba olle baraha gurugaLe,, dhanyawada

Anonymous ಅಂತಾರೆ...

Note : I have not used any filthy language. dont delete this comment unless u have very personal interest to do so.

ನಮಸ್ತೆ ಸರ್,

ಈ ಇಂಗ್ಲಿಷ್ ಮೇಲೆ ಯಾಕೆ ಇಂತ ಕಿಚ್ಚು ?
ನಮ್ಮ ಭಾರತವನ್ನ ಈ ಇಂಗ್ಲಿಷ್ ನವರು ೧೫೦ ವರ್ಶ ಆಳಿದ್ರಂತೆ , ಅದರ ಗುಲಾಮ ಗಿರಿಗೆ ಈ ಇಂಗ್ಲಿಷ್ ಅನ್ನೊ ಸ್ಟ್ಯಾಂಪು ಅಂಟಿದೆ.

ಎಲ್ಲಾ ಇಂಗ್ಲಿಷ್ ಮಯ , ಕನ್ನಡ ಎನೊ ಇಲ್ಲ ಅಂತೀರಲ್ಲ , ನಮ್ಮ ಸಿಟಿ ಪುಸ್ತಕಾಲಯವನ್ನ ನೋಡಿ , ಎಲ್ಲ ಕನ್ನಡದ ಪುಸ್ತಕಗಳು ದೊಳಾಗಿ ಹೋಗಿವೆ.

ಈಗ ಇರೊ ಕನ್ನಡವನ್ನೆ ಅರೆದು , ನುಂಗಿ ಜ್ನಾನ ಬೆಳೆಸಿಕೊಳ್ಳೋಕೆ ಅಗದ ನಮ್ಮ ಜನ ಇನ್ನು ಎಲ್ಲಾ ಕನ್ನಡದಲ್ಲೆ ಕಡ್ಡಾಯ ಮಾಡಿದರೆ , ಎಲ್ರು ಬೆಂಗಳೊರಿನಲ್ಲಿ ಆಟೊ ಡ್ರೈವರ್ ಆಗ್ಬೆಕಾಗುತ್ತೆ.

ನಮ್ಮ ಯ್ಯೊಗ್ಯತೆಗೆ ಈಗಿನ ಸಂದರ್ಬದಲ್ಲಿ ಒಬ್ಬ ಕನ್ನಡಿಗನಿಗೆ ಒಂದು ಐ ಟಿ ಕಂಪನಿನಲ್ಲಿ ಕೆಲ್ಸಸಿಗ್ತಾ ಇಲ್ಲ , ಇನ್ನು ನಾವು ಎಲ್ಲಾ ಕನ್ನಡಮಯ ಮಾಡಿದ್ರೆ ಎಷ್ಟು ಜಯಶೀಲರಾಗ್ತೀವಿ ಅಂತ ಅಂದ್ಕೊಂಡಿದ್ದಿರ ?

ಮಹಾತ್ಮ ಗಾಂಧಿ ಇಂಗ್ಲಾಂಡ್ನಲ್ಲಿ ಇದ್ದಾಗ ಗುಜುರಾತಿ ಮಾತಾಡ್ತಾಇದ್ರ ?

ಅವರು ಅಹಿಂಸೆ ಇಲ್ಲದೆ ನಮಗೆ ಸ್ವಾತಂತ್ರ ತಂದು ಕೊಟ್ರು , ಅದ್ರೆ ನಮ್ಮ ರಾಜಕೀಯದವರು ಅದೇ ಸ್ವಾತಂತ್ರದ ದುರುಪಯೋಗದಿಂದ ಶಾಲೆಗಳನ್ನ ಕನ್ನಡಮಯ ಮಾಡ್ಬೇಕೋ , ಇಂಗ್ಳೀಷ್ ನಲ್ಲೆ ಬಿಡ್ಬೇಕೊ ಅನ್ನೋದು ತಿಳಿಯದೆ ನಮ್ಮ ಮಕ್ಕಳೆಲ್ಲ ಕಣ್ಣು ಬಾಯಿ ಬಿಡ್ತಾ ಇದ್ದಾರೆ.

ಒಂದು ಮಾತು , ನಿಜ ಹೇಳ್ತೀನಿ , ಬೇಜಾರ್ ಮಾಡ್ಕೋಬೇಡಿ.

ಎಲ್ಲ ಕನ್ನಡದಲ್ಲೆ ಇರ್ಲಿ , ಇಂಗ್ಲಿಷ್ ಕೊನೆಗೆ ಇರ್ಲಿ ಅಂತ ಹೇಳ್ತಿದ್ದ ನಮ್ಮ ಮಹನೀಯರನ್ನ ಕಾಲರ್ ಪಟ್ಟಿ ಹಿಡಿಯೋವರ್ಗು ನಮ್ಮ ಜನ ಹೋಗಿದ್ರು.
ಇನ್ನು ನಾವು ಇಲ್ಲಿ ಅರಿಚುವುದು ಯಾವ ಲಾಭಕ್ಕೆ ಅಂತ ಯೋಚನೆಮಾಡಿ.

ಕುಣಿಲಾರದವಳು ನೆಲ ಡೊಂಕು ಅಂದ್ಲಂತೆ..!!

ಹಾಗಾಯ್ತು ನಮ್ಮ ಮಾತು. ಮೊದಲು ನಮ್ಮಲ್ಲಿ ಈಗಿರುವ ಕನ್ನಡ ಅಭಿಮಾನ , ಪ್ರೇಮ , ಒಲವಿನಿಂದ ನಾವು ಎನೇನು ಸಾದಿಸಿದ್ದೀವಿ ಅಂತ ಪಟ್ಟಿಮಾಡಿ.

ಆಮೇಲೆ , ಕನ್ನಡಾನೋ , ಇಂಗ್ಳೀಷೊ ನೋಡೊಣ.

"ಸರಕಾರ ಸರಿ ಇಲ್ಲದಿರ್ದೊಡೆ , ಗುಂಡಿಟ್ಟು ಕೊಲ್ಲೋಣ..!!
ನಮ್ಮ ಜನರೆಂಬ ಸರಕಾರ ಅದಗೆಟ್ಟೊಡೆ ಯಾರ್ಯಾರ್ನ್ನ ಕೊಲ್ಲೋದು..!!"

"ಜ್ನಾನದ ಸುಡುಬಿಸಿಲಿಗೆ ನೆರಳ ಹೊಕ್ಕರಂತೆ , ಅಜ್ನಾನದ ಮುಂಗಾರಿಗೆ ಹೊರಬಂದು ಕುಣಿದರಂತ..!!"

-ಸತ್ಯಮೇವ ಜಯತೆ

Anonymous ಅಂತಾರೆ...

gurugaLe,
e blog bagge namma office alli nanna aaptha snehitanobbana jote charche maadide aata mattade bere deshkku namagu difference idey,, we are a country with more than 20 languages alli hege idanna implement maadodu antha,, adakke naanu heLide,, idanna atleast karnataka-da maTTadalli ondu pilot project tarahanaadru implement maadali,, omme karnatakadalli idu successs aadre bere raajyagaLu follow maadtaare antha,, nanna anisike andre,, sarakara kke intha ondu vishyda bagge heLabekaada kannada abhivruddhi pradhikara, kannada saahitya parishattu haagu itara yella kannada sanghagaLu munde barabeku,, haage sarkarakke sariyaagi ilisi heLi atleast ondu pilot level alli idanna maadoke yella sahaya kodo haage maadabeku,, aamele intha vishyakke funding ge bere deshdalliruva, taayi nadige, nudige ynaadru maadabeku anno kannadigaru khanidta kai jodistaare... yene aagali,,nimma praythnakke nanna abhinandane,, yaakendre,, all this while, talking about higher education in kannada was regarded as a taboo topic, atleast enguru dared to speak about it so convincingly.. Kudos !

Anonymous ಅಂತಾರೆ...

guru,, tumba olle baraha,,
inthadondu possibility bagge vicharane maadiralilla,, sadyada maTTige kannada-dalli hecchina vijnana, tantrajnanada vishyagaLu labhyavilla,, aadre idanna badalayisoke namagenu 2-3 talemaaru beda,, swalpa sarakarada baddate, swalpa janaralli idara bagge jaagruti,, ishTadre khandita saadya..

Anonymous ಅಂತಾರೆ...

enguru !
sadyada political situation nodidaaga, bejaar aagutte.. yaavude baddate illada namma rajakaraNigaLu kannada-kkagi yenadru maadiyaaraa? anno sandeha kaadutte,, higher education in kannada can only be made possible with the help Government. namma nelada, nammade rajakiya pakshavondara agatya iga yellakintha hecchide,, yaakandre neevu dinavu heLo yeshTella vishyagaLa bagge yene kelsa aagbeku andru,, adakke political powers illade aagalla,, naadu nudi bagge concerns iruvantha ondu paksha astitvakke barada horatu idella aagolla,, antha ondu party yendaadaru bandita??

Anonymous ಅಂತಾರೆ...

I always thought higher education in kannada is not possible and not needed. But you made me rethink about it. The lack of enough R&D professionals is directly linked with the flaws in our education system. I think you have a point.
After reading your article, i just did a google search on education in mother's tongue and you are definately not alone in this. Alot of countries are debating the pros and cons of this. This definately merits some thinking at government level. Thanks for providing a good article.

Sorry for writing this in english as I don't have kannada software and I don't prefer writing kannada in english script.

Anonymous ಅಂತಾರೆ...

ಗುರು, ವಿಗ್ನಾನ, ತಂತ್ರಗ್ನಾನ ಶಿಕ್ಷಣಕ್ಕೆ ಮಾತೃ ಭಾಷೆಯೇ ಉತ್ತಮ. ಮಹಾ ಪಂಡಿತೋತ್ತಮರೇ ಈ ವಿಷಯವನ್ನು ಹೇಳಿದ್ದಾರೆ. ಈ ವಿಷಯದಲ್ಲಿ ಸರ್ಕಾರಗಳು ಕಾರ್ಯ ಪ್ರವೃತ್ತರಾಗಬೇಕು. ಇವತ್ತು ಕನ್ನಡಿಗ ಮತ್ತು ಹೊಸ ಆವಿಷ್ಕಾರ, ಸಂಶೋಧನೆ ಗಳಿಗಿರುವ ಅಡ್ಡಗೋಡೆ ಎಂದರೆ ಇಂಗ್ಲೀಷ್. ಈ ಅಡ್ಡ ಗೋಡೆಯನ್ನು ಸಧ್ಯ ಒಡೆಯಬೇಕಿದೆ. ಇಲ್ಲದಿದ್ದರೆ ಹೊಸ ಸಂಶೋಧನೆ ಎಂದರೆ ’ಇಂಗ್ಲೀಷಿನಲ್ಲಿಯೇ ಯೋಚಿಸಬೇಕೇನೋ’ ಎಂದು ತಿಳಿದು ಮಂಕು ಕವಿದಂತಾಗಿ
’ಅವೆಲ್ಲಾ ನಮಗ್ಯಾಕೆ?’ ಎಂದುಕೊಂಡು ಅಲ್ಲಿಗೆ ಬಿಟ್ಟು ಬಿಡುತ್ತೇವೆ.

Anonymous ಅಂತಾರೆ...

ಏನ್ ಗುರು,

ನಿಮ್ಮ ಬ್ಲಾಗ್ ಬಗ್ಗೆ ಇಲ್ಲೊಂದು ಲೇಖನ ಇದೆ ನೋಡಿ.

http://kannada.webdunia.com/miscellaneous/literature/articles/0710/19/1071019029_1.htm

Anonymous ಅಂತಾರೆ...

olle baraha,, aadre e disheyalli aagbekaagiro kelsada bagge janarige clarity illa gurugaLe,,

nivu nimma mundina barahagaLalli innashTu spashTate kodi,,

nimma,
hari

ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡ ಅಂತಾರೆ...

ಸತ್ಯಮೇವ ಜಯತೇ ಗುರು, ನಿಮುಗ್ ದೋಡ್ ನಮುಸ್ಕಾರ. "ಎಲ್ಲಾ ಕನ್ನಡದಲ್ಲೆ ಕಡ್ಡಾಯ ಮಾಡಿದರೆ , ಎಲ್ರು ಬೆಂಗಳೊರಿನಲ್ಲಿ ಆಟೊ ಡ್ರೈವರ್ ಆಗ್ಬೆಕಾಗುತ್ತೆ" ಅನ್ನೋ ಮಾತ ಆಡಿದ್ದೀರಲ್ಲ... ಅಯ್ಯೊ ಶಿವ್ನೇ... ಕನ್ನಡ ಕಲ್ತು ಉದ್ದಾರ ಆಗ್ದೇರುತ್ಗೆ ಕಾರ್ಣ ಕನ್ನಡ ಇಸ್ಕೂಲಲ್ಲಿ ಒಳ್ಳೇ ಸೌಲಬ್ಯ ಇಲ್ಡೇರುದು. ಒಳ್ಳೇ ಸೌಲಬ್ಯ ಕೊಡ್ಬೇಕು ಅಂತೆ ಎನ್ ಗುರು ಅನ್ತಾಯ್ರುದು. ಸ್ವಾತಂತ್ರ ಹೋರಾಟ್ಗಾರ್ರು ಬರೀ ಇಂಗ್ಲೀಶ್ರೂ ವಿರುದ್ದ ಅಸ್ಟೆ ಹೋರಾಡ್ಲಿಲ್ಲ, ನಮ್ಮಲ್ಲಿದ್ದ ಗುಲಾಮ್ಗಿರಿ ಮನೋಬಾವುಧ್ ವಿರುದ್ದ ಕೂಡ. ನಮ್ಜನ ಆಗ.." ಒಹೋಹೋಹೋ ಬ್ರಿಟಿಷರು ಪ್ರಪಂಚಾನೇ ಆಳ್ತಾವ್ರೆ, ಅವ್ರ್ ವಿರುದ್ದ ನಾವ್ ನಿಲ್ಲುಕಾದುದೇ, ನಾವ್ ಗುಲಾಮ್ರಾಗಿರೋದೇ ಸರಿ" ಅಂತ ಅಂದಕೊಂಡ್ಇದ್ರು. ಈಗ್ ನೀವ್ ಕನ್ನಡುದ್ ಬಗ್ಗೆ ಅಂತಿರುದು ಒನ್ತರ ಅಂಗೆ. ಹೋರಾಟ್ಗಾರರು, ಇಲ್ಲಪ್ಪ...ನಾವು ಬ್ರಿಟಿಷರನ್ನ ಹೊಡಿಸ್ಬೊದು, ನಮ್ಮನ್ ನಾವೇ ಆಳ್ಕೊಬೊದು ಅಂತ ಮನ್ವರ್ಕೆ ಮಾಡಿಸ್ತಿದ್ರು. ಎನ್ ಗುರು ಮಾಡ್ತಿರುದು ಒನ್ತರ ಅದೇ.
"ಮಹಾತ್ಮ ಗಾಂಧಿ ಇಂಗ್ಲಾಂಡ್ನಲ್ಲಿ ಇದ್ದಾಗ ಗುಜುರಾತಿ ಮಾತಾಡ್ತಾಇದ್ರ" ? ಅಂತ ಕೇಳಿ ನಿಮುಗ್ ನೀವೇ ಉಲ್ಟಾ ಹೊಡೀತಿದ್ದೀರಲ್ ಗುರು. ಗಾಂದಿ ಇಂಗ್ಲಾಂಡಲ್ಲಿ ಇಂಗ್ಲೀಶ್ ಮಾತಾಡ್ದನ್ಗೆ ಕರ್ನಾಟಕಕ್ ಬರೊನು ಕನ್ನಡ ಮಾತಾಡ್ಬೇಕು. ಎನ್ ಗುರು ಹೇಳೋ ಸಾರಾಂಸ ಅದೇ.
"ಮೊದಲು ನಮ್ಮಲ್ಲಿ ಈಗಿರುವ ಕನ್ನಡ ಅಭಿಮಾನ , ಪ್ರೇಮ , ಒಲವಿನಿಂದ ನಾವು ಎನೇನು ಸಾದಿಸಿದ್ದೀವಿ ಅಂತ ಪಟ್ಟಿಮಾಡಿ" ಅಂತಿರಲ್ಲ, ನಿಮ್ ಮಾತಲ್ಲೇ ಉತ್ರ ಅದೇ. ಪಟ್ಟಿ ಯಾಕ್ ದೊಡ್ದಿಲ್ಲ ಅಂದ್ರೆ ಅದುಕ್ ಕಾರ್ಣ ಸ್ವಾಬಿಮಾನ ಕಮ್ಮಿ ಇತ್ತು ಅಂತ ಅಲ್ವೇ.
ಅದಿಲ್ಲ, ಇದಿಲ್ಲ ಅಂತ ರಾಗ ಆಡ್ಕೊನ್ದ್ ಕೋರುಗ್ತಾ ಇರು ಬದ್ಲು. ಹೊಣೆ ಒತ್ಕೊನ್ದ್ ಹೋರಾಟ ಮಾಡ್ಬೇಕು ಗುರು. ಕಮ್ಮಿ ಅಂದ್ರೆ, ಹೋರಾಟ ಮಾಡೋರ್‍ಗೆ ತ್ರಾಸ ಮಾಡುದ್ ಬುಡ್ಬೇಕು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails