ಬ್ರಿಟಿಷರು, ಕನ್ನಡ, ಬೃಹದಾರಣ್ಯಕ ಉಪನಿಷತ್ತು ಮತ್ತು ನಾವು

ಬ್ರಿಟಿಷರು ಹೇಗೆ ಆಡಳಿತದಲ್ಲಿ ಕನ್ನಡದ ಬಳಕೆ ಮಾಡ್ತಿದ್ರು ಅನ್ನೋ ಬಗ್ಗೆ ವಿ.ಕ. ದಲ್ಲಿ ನಟರಾಜ್ ಅವರ ಬರಹದ ಬಗ್ಗೆ ಮೊನ್ನೆಮೊನ್ನೆ ಬರೆದಿದ್ದೆವು. ಆ ಬ್ರಿಟಿಷರು ಕನ್ನಡಕ್ಕಾಗಿ ಕೆಲಸ ಮಾಡಿದರು ಇಲ್ಲವೇ ಕನ್ನಡಕ್ಕಾಗಿ ಕೈ ಎತ್ತಿದರು ಇಲ್ಲವೇ ಕನ್ನಡವನ್ನ ಉದ್ಧಾರ ಮಾಡಿದರು ಅನ್ನೋದು ಗೌಣವಾಗಿ ಏರ್ಪಟ್ಟಿದ್ದರೂ ಅದೇ ಅವರಿಂದ ಕಲೀಬೇಕಾದ ಪಾಠ ಅಲ್ಲ. ಪಾಠ ಇನ್ನೂ ಆಳವಾದ್ದು.

ಆಡಳಿತದಲ್ಲಿ ಕನ್ನಡದ ಬಳಕೆ ಮಾಡ್ತಿದ್ದ ಬ್ರಿಟಿಷರ ಕತೆಯ ಮುಖ್ಯ ಸಂದೇಶ ಏನೂಂದ್ರೆ ಔರು ತಮ್ಮ ಆಡಳಿತ ಮತ್ತು ವ್ಯಾಪಾರದ ಕೆಲಸವನ್ನ ಆದಷ್ಟೂ ಸಮರ್ಪಕವಾಗಿ ಮಾಡಬೇಕಾದರೆ ಅದಕ್ಕೆ ಕನ್ನಡ ಕಲೀಬೇಕು, ಕನ್ನಡದಲ್ಲೇ ಮಾಡಬೇಕು ಅನ್ನೋದನ್ನ ಅರ್ಥ ಮಾಡ್ಕೊಂಡಿದ್ರು ಅನ್ನೋದು. ಇವತ್ತು ನಮ್ಮ ಜನ ಇದನ್ನ ಮರೆತು ಬ್ರಿಟಿಷರಿಗೆ ಕನ್ನಡಾಭಿಮಾನ ಇತ್ತು ಅಂತ ತಪ್ಪು ಅರ್ಥ ಮಾಡ್ಕೊಳೋದು, ಔರ ಬಗ್ಗೆ ಭಯ ಭಕ್ತಿ ಬರೆಸಿಕೊಳ್ಳೋದು - ಇವೆಲ್ಲಾ ಮೂರ್ಖತನಾನೂ ಹೌದು, ನಿಜಕ್ಕೂ ನಮ್ಮ ಜೀವನದಲ್ಲಿ ನಮ್ಮ ಭಾಷೆಯ ಸ್ಥಾನ ಅಂದ್ರೆ ಏನು ಅಂತ ಅರ್ಥ ಮಾಡ್ಕೊಳ್ದೇ ಇರೋದೂ ಹೌದು.

ಔರು ಯಾರೂ ಕನ್ನಡ ಅನ್ನೋ ಒಂದು ವಸ್ತೂನ ಉದ್ಧಾರ ಮಾಡಕ್ಕೆ ಹೊರಡಲಿಲ್ಲ. ಔರು ತಮ್ಮ ಉದ್ಧಾರ ಮಾಡ್ಕೊಳಕ್ಕೇ ಹೊರಟಿದ್ದು. ಜೊತೆಗೆ ಕನ್ನಡ ಬೆಳೀತು, ಅಷ್ಟೆ. ಇವತ್ತಿನ ದಿನವೂ ಅಷ್ಟೆ, ಏನೋ ಕನ್ನಡ ಉದ್ಧಾರ ಮಾಡ್ತೀನಿ ಅಂತ ಯಾರೂ ಹೊರಡಬೇಕಾಗಿಲ್ಲ. ಉದ್ಧಾರ ಮಾಡ್ಕೋಬೇಕಾಗಿರೋದು ನಮ್ಮನ್ನ ಮಾತ್ರ. ಜೊತೆಗೆ ಕನ್ನಡ ಬೆಳೆಯತ್ತೆ, ಅಷ್ಟೆ.

ಬೃಹದಾರಣ್ಯಕ ಉಪನಿಷತ್ತಿನಲ್ಲಿ ಮೈತ್ರೇಯಿಗೆ ಯಾಜ್ಞ್ಯವಲ್ಕ್ಯ ಇದನ್ನೇ ಹೇಳಿದ್ದ:
ಸಂಸ್ಕೃತದಲ್ಲಿ:ನ ವಾ ಅರೇ ಭೂತಾನಾಂ ಕಾಮಾಯ ಭೂತಾನಿ ಪ್ರಿಯಾಣಿ ಭವಂತಿ
ಆತ್ಮನಸ್ತು ಕಾಮಾಯ ಭೂತಾನಿ ಪ್ರಿಯಾಣಿ ಭವಂತಿ |
ನ ವಾ ಅರೇ ಸರ್ವಸ್ಯ ಕಾಮಾಯ ಸರ್ವಂ ಪ್ರಿಯಂ ಭವತಿ
ಆತ್ಮನಸ್ತು ಕಾಮಾಯ ಸರ್ವಂ ಪ್ರಿಯಂ ಭವತಿ |

ಕನ್ನಡದಲ್ಲಿ:
ಅರೇ! ಜೀವಿಗಳ ಬಯಕೆಯಿಂದ ಜೀವಿಗಳು ಪ್ರಿಯವಾಗವು
ಆತ್ಮದ ಬಯಕೆಯಿಂದ ಜೀವಿಗಳು ಪ್ರಿಯವಾಗುತ್ತವೆ |
ಅರೇ! ಎಲ್ಲದರ ಬಯಕೆಯಿಂದ ಎಲ್ಲವೂ ಪ್ರಿಯವಾಗದು
ಆತ್ಮದ ಬಯಕೆಯಿಂದ ಎಲ್ಲವೂ ಪ್ರಿಯವಾಗುತ್ತದೆ |

ಈ ಸಂದರ್ಭದಲ್ಲಿ ಈ ಶ್ಲೋಕವನ್ನ ಅರ್ಥ ಮಾಡ್ಕೋಬೇಕಾಗಿರೋದು ಹೀಗೆ:
ಅರೇ! ಕನ್ನಡದ ಬಯಕೆಯಿಂದ ಕನ್ನಡವು ಪ್ರಿಯವಾಗದು
ಆತ್ಮದ ಬಯಕೆಯಿಂದ ಕನ್ನಡವು ಪ್ರಿಯವಾಗುತ್ತದೆ |

ಒಟ್ನಲ್ಲಿ ಆ ಬ್ರಿಟಿಷರೂ ಯಾವುದೋ "ಕನ್ನಡ" ಅನ್ನೋ ತಮಗಿಂತ ಬೇರೆಯಾದ ಒಂದು ವಸ್ತುವನ್ನ ಬಯಸಿ ಅದನ್ನ ಉದ್ಧಾರ ಮಾಡಕ್ಕೆ ಹೊರಡಲಿಲ್ಲ, ನಾವೂ ಹೊರಡಬಾರದು. ನಮ್ಮ ಉದ್ಧಾರವನ್ನ ಬಯಸಿ ಕೆಲಸ ಮಾಡಿದಾಗ ತಾನೇ ಕನ್ನಡ ಉದ್ಧಾರವಾಗುತ್ತೆ. ಆ ಬ್ರಿಟಿಷರ ಕಾಲದಲ್ಲೂ ಇದೇ ಆಗಿದ್ದು. ಔರು ತಮ್ಮ ಬೇಳೆ ಬೇಯಿಸಿಕೊಳ್ಳಕ್ಕೆ ಹೊರಟಿದ್ದಕ್ಕೇ ಔರು ಅಷ್ಟು "ಕನ್ನಡಕ್ಕಾಗಿ ಕೈ ಎತ್ತಿದ್ದು" ಗುರು! ನಮ್ಮ ಉದ್ಧಾರವನ್ನ ನಾವು ಬಯಸದೆ ಎಷ್ಟು "ಕನ್ನಡಕ್ಕಾಗಿ ಕೈ ಎತ್ತಿದರೂ" ಕನ್ನಡವೂ ಉದ್ಧಾರವಾಗಲ್ಲ, ನಾವೂ ಉದ್ಧಾರವಾಗಲ್ಲ (ಮೊದಲನೇದು ಗೌಣವಾಗಿ, ಎರಡನೇದು ನೇರವಾಗಿ). ಈ ಮಾತು ಆಡಳಿತ ಮತ್ತು ವ್ಯಾಪಾರಗಳಿಗೆ ಹೇಗೆ ಅನ್ವಯಿಸುತ್ತೋ ಹಾಗೇ ಅಧ್ಯಾತ್ಮದ ವಿಷಯದಲ್ಲೂ ಅನ್ವಯಿಸುತ್ತೆ. ಏನ್ ಗುರು?

ಕೊನೆ ಗುಟುಕು

"ಇದೇನಿದು? ಏನ್ಗುರು ಸಂಸ್ಕೃತದ ಶ್ಲೋಕ ಬರೆಯೋದೆ?" ಅಂತೀರಾ? ಹ್ಹ ಹ್ಹ! ಸಂಸ್ಕೃತದಿಂದ ಕಲೀಬೇಕಾಗಿರೋದನ್ನ ನಾವು ಕಲೀಲೇಬೇಕು. ಕಲೀಬಾರದ್ದನ್ನ ಕಲೀಬಾರದು, ಅಷ್ಟೆ (ಕಲೀಬೇಕಾಗಿರೋದನ್ನ ಕಲಿಯಕ್ಕಾಗದೇ ಇರೋರೇ ಕಲೀಬಾರದ್ದನ್ನ ಕಲಿಯೋದು). ಇದು ಸಂಸ್ಕೃತಕ್ಕೆ ಮಾತ್ರ ಅಲ್ಲ, ಎಲ್ಲಾದಕ್ಕೂ ಅನ್ವಯಿಸುತ್ತೆ ಗುರು!

7 ಅನಿಸಿಕೆಗಳು:

Anonymous ಅಂತಾರೆ...

ಬಳಗದ ಗೆಳೆಯರಿಗೆ ನಮಸ್ತೇ.

ನಿಮ್ಮ ಎಲ್ಲ ಬರಹಗಳೂ ಚಿಂತನೆಗೆ ಹಚ್ಚುವಂಥವೇ. ವಿಶೇಷವಾಗಿ ಈ ಬರಹ ಇಷ್ಟವಾಯ್ತು. ಕಿಟ್ಟೆಲ್ ಬಗ್ಗೆ ಇಂಥದೇ ಮಾತನ್ನು ಹೇಳಿದಾಗ ಗೆಳೆಯರು ’ಪೂರ್ವಗ್ರಹ’ ಎನ್ನುತ್ತ ನನ್ನನ್ನು ಛೇಡಿಸಿದ್ದರು. ಈಗ ನನಗೆ ಸಮಾಧಾನವಾಯ್ತು!

ವಂದೇ,
ಚೇತನಾ ತೀರ್ಥಹಳ್ಳಿ

Anonymous ಅಂತಾರೆ...

kone gutuku nijakku arthapoorna, jagattinalli ellelli olleyadideyo adannella padedukollona aadare nammatanavannu kaledukolluvudu beda. Olleya lekhana, dhanyavaadagalu

Anonymous ಅಂತಾರೆ...

bahaLa chennagittu bareddiddeera gurugaLe. nijavAgilu oLLeya lekhana. iSTu divasa nAnu idu ondu 'fanatics group' ankonDidde. Adre ivattu ee lekhana odida mele nanige swalpa khushi Agutta ide. 'kone gutuku' ge nanna kaDe inda 'standing ovation' togoLi. Rohith. B. R. navarige dhanyavaadagaLu nanige ee 'link' kaLisidakke.

Anonymous ಅಂತಾರೆ...

Enguru yaavude leanings illade, kannadavonde dharma annodanna samarthavaagi torside e baraha ! hats off to you guru..

nalmeya snehitaru intha blog bandaaga aadasjtu snehitarige tiLisuva kelsa maadbeku..

nammatanada bagge hemme taaLalu yendu hinjariyabaaradu anno ondu tatva enguru odta odta kalite guru

Anonymous ಅಂತಾರೆ...

Nimma vycharika baraha tumbane santhosa kottide, nimma prayatana eege sagali,

Anonymous ಅಂತಾರೆ...

”ಸಂಸ್ಕೃತದಿಂದ ಕಲೀಬೇಕಾದ್ದನ್ನು ಕಲೀಬೇಕು” ಅನ್ನೋ ನಿಮ್ಮ ಮಾತನ್ನ ನಾನು ಒಪ್ತೇನೆ. ಸಂಸ್ಕೃತ ಏಕೆ, ಯಾವುದೇ ಭಾಷೆಯಿಂದ, ಕಲೀಬೇಕಾದ್ದನ್ನ ಕಲಿಯೋಣ, ಆದ್ರೆ, ನಮ್ಮ ಮಾತನ್ನ ಮಾತ್ರ ಮರೆಯೋದ್ ಬೇಡ

-ನೀಲಾಂಜನ

http://neelanjana.wordpress.com/

Anonymous ಅಂತಾರೆ...

ನಿಮ್ಮ ಮಾತು ಸರಿಯಾಗಿದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಆಂಗ್ಲರು ಕನ್ನಡವನ್ನು ಕಲಿತರು.ಶತೃವನ್ನು ಎದುರಿಸಬೇಕೆಂದರೆ ಮೊದಲು ಶತೃವಿನ ಬಲಾಬಲಗಳನ್ನು ಅರಿಯಬೇಕು ಎನ್ನುವ ಮಾತಿನಂತೆ ಆಂಗ್ಲರು ನಮ್ಮ ಭಾಷೆಯನ್ನು ಕಲಿತರು ಅಷ್ಟೇ ಅದರಲ್ಲಿ ಪ್ರೀತಿ-ಭಕ್ತಿ ಎಲ್ಲಿಂದ ಬರಬೇಕು ಹೇಳಿ. ಅದನ್ನೇ ದೊಡ್ಡದಾಗಿ ಆಂಗ್ಲರಿಗೆ ಕನ್ನಡದ ಬಗ್ಗೆ ಅತೀವ ಪ್ರೀತಿ ಇತ್ತು ಅನ್ನೋದು ಬರೀ ಸುಳ್ಳು.


ಸೌಮ್ಯ.ನಾ.ಕುಮಾರ್

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails