ಲವ್ವಬಲ್ ಸತ್ಯಾ!



"ಸತ್ಯಾ ಇನ್ ಲವ್" ಅನ್ನೂ ಸಿನಿಮಾ ಬಗ್ಗೆ ಯಾ ಮಗ ಕೇಳಿಲ್ಲ? ಅಲ್ಲಿ, ಇಲ್ಲಿ, ಎಲ್ಲಿ ನೋಡುದ್ರು ಅದರದಾ ಸುದ್ದಿ. ಕನ್ನಡ ಸಿನಿಮಾದ ಇತಿಹಾಸದಾಗ ಮೊದಲನೆ ಸಲಿ ಚಿತ್ರವೊಂದು ಕರ್ನಾಟಕವೊಂದ ಅಲ್ಲದಾ ಆಂಧ್ರ ಪ್ರದೇಶದ ಕರ್ನುಲೂ, ಹಿಂದುಪುರ, ಅನಂತಪುರ, ನಂಧ್ಯಾಲ್, ಹೈದರಾಬಾದ್, ತಮಿಳುನಾಡಿನ ಹೊಸೂರು, ಚೆನ್ನೈ, ಮಹಾರಾಷ್ಟ್ರದ ಮುಂಬೈ, ಪುಣೆ, ಅಕ್ಕಲಕೋಟೆ, ಜತ್ತ, ಲಾತುರ್ ಮತ್ತ ದಿಲ್ಲೀನಾಗು ಬಿಡುಗಡಿ ಆಗಿ ಚಲೋತ್ನಾಗ ಓಡಾಕ್ ಹತ್ತೈತಂತ್ರೀ. ಆಹಾ! ಎಂಥ ಛಲೋ ಸುದ್ದಿ ಬಂದೇತ್ರಿಪಾ. ಸಿನಿಮಾ ಛಂದ ಐತೋ ಇಲ್ಲೋ ಅದು ಬ್ಯಾರೀ ಮಾತು, ಹೊರನಾಡಿನಾಗೂ ಬಿಡುಗಡಿ ಕಂಡಿರೂದಕ್ಕ ಸತ್ಯಾ ಖರೇನಾ ಲವ್ವಬಲ್ ಅಗ್ಯಾನ್ರೀಪಾ...

ಹೊರ ನಾಡಿನಾಗ ಛಲೋ ವಿತರಣಾ ಜಾಲ:

ಕರ್ನಾಟಕದ ಹೊರಗ ಕನ್ನಡ ಮಾತಾಡೋ ಮಂದಿ ಬ್ಯಾರೆ ಬ್ಯಾರೆ ರಾಜ್ಯ , ದೇಶದಾಗ ಅದಾರ್ರೀ. ಅಲ್ಲೆಲ್ಲಾ ಕನ್ನಡ ಚಿತ್ರಗಳು ನಿಯಮಿತವಾಗಿ ಬರು ಹಂಗ ಆಗ್ಬೇಕ್ರಿ. ಹೊರ ರಾಜ್ಯ, ಹೊರ ದೇಶದಾಗ ನಮ್ಮ ಮಂದಿ ಎಲ್ಲೆಲ್ಲಿ ಅದಾರೋ ಅಲ್ಲೆಲ್ಲಾ ನಮ್ಮ ಚಿತ್ರಗಳನ್ನ ಪ್ರಚಾರ ಮಾಡಾಕ್ "ಕನ್ನಡ ಚಿತ್ರ ಸಂಜೆ", " ಕನ್ನಡ ಸಂಗೀತ ಸಂಜೆ " ತರಹದ ಕಾರ್ಯಕ್ರಮ ಮಾಡಿ ಬೇಡಿಕಿ ಹುಟ್ ಹಾಕ್ಬೇಕ್ರಿ. ಛಲೋ ಮಾರಾಟ ಜಾಲ ಸೃಷ್ಟಿ ಮಾಡ್ಬೇಕ್ರಿ.

ಅನೇಕ ಕಡಿ ಹೊರ ರಾಜ್ಯ, ಹೊರ ದೇಶದಾಗ್ ಇರು ಎಲ್ಲ ಕನ್ನಡ ಸಂಘಗಳು ಬಾಳ್ ತ್ರಾಸ್ ತಗೊಂಡು ನಮ್ಮ ಚಿತ್ರಗಳನ್ನ ಅಲ್ಲಿ ಪ್ರದರ್ಶನ ಮಾಡಾಕ್ ಪ್ರಯತ್ನ ಮಾಡ್ತಾವ್ ರೀ. ಇಂಥ ಉತ್ಸಾಹಿಗಳಿಗೆ ನಮ್ಮ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು, ಒಟ್ಟಾರೆ ನಮ್ಮ ಚಿತ್ರರಂಗ ಎಲ್ಲ ರೀತಿಯ ಬೆಂಬಲ ಕೊಟ್ಟು ಬೆನ್ನು ತಟ್ಟಬೇಕ್ರಿ. ನಮ್ಮ ಸರ್ಕಾರಾನೂ ಅವರಿಗೆ ಸಾಧ್ಯವಾದ ಎಲ್ಲ ನೆರವು ಕೊಡಬೇಕ್ರಿ.

ಅಷ್ಟೆ ಮುಖ್ಯವಾಗಿ ಇವತ್ತಿನ ದಿನದಾಗ್, ಪ್ರಚಾರ ಇಲ್ದೆ ಯಾವ ವಸ್ತುನೂ ಬಿಕರಿ ಆಗುದಿಲ್ರಿ. ಹಿಂಗಾಗಿ ಚಿತ್ರ ಬಿಡುಗಡೆ ಆಗು ಮುಂಚೆ ಚಿತ್ರದ ಬಗ್ಗ ಮಂದಿ ನಡುವೆ ಕುತೂಹಲ ಮೂಡಿಸುವಂತ ಪ್ರಚಾರ ತಂತ್ರ ಬಳಸಬೇಕ್ರಿ. ಬರೇ ಟಿ.ವಿ, ಪೇಪರ್ ಅಷ್ಟಕ್ಕೇ ನಿಲ್ಲದೇ, ಇಂದಿನ ಯುವ ಜನರು ಜಾಸ್ತಿ ಬಳಸುವಂತ ಇಂಟರ್ನೆಟ್, ಎಸ್.ಎಂ.ಎಸ್, ಎಫ್.ಎಂ ರೇಡಿಯೋದಂತ ಸಮೂಹ ಮಾಧ್ಯಮವನ್ನು ಸರಿಯಾಗಿ ಬಳಸಕೊಂಡು ಪಿಚ್ಚರ್ ಬಗ್ಗ ಚಲೋ ಹವಾ ಮಾಡ್ಬೇಕ್ರಿ.

ಬರೀ ಕನ್ನಡ ಮಂದೀಗಲ್ಲಾ, ಬ್ಯಾರೀ ಮಂದಿನೂ ಗುರಿ ಮಾಡ್ಕೋಬೇಕು

ಹೊರ ರಾಜ್ಯ, ಹೊರ ದೇಶದಾಗ್ ಚಿತ್ರ ಬಿಡಬೇಕಾರ್, ಬರೇ ಅಲ್ಲಿನ ಕನ್ನಡ ಮಂದಿನ ಅಷ್ಟೆ ಗುರಿಯಾಗಿಸಿಕೊಳ್ದೆ, ಆಯಾ ರಾಜ್ಯದ ಮಂದಿನೂ ನಮ್ಮ ಚಿತ್ರ ನೋಡಾಕ್ ಅನುಕೂಲ ಆಗು ಹಂಗ, ಆಯಾ ರಾಜ್ಯದ ಭಾಷೆಯಲ್ಲಿ ಚಿತ್ರಕ್ಕೆ ಉಪ ಶೀರ್ಷಿಕೆ (sub-title) ಕೊಟ್ಟು ಬಿಡುಗಡೆ ಮಾಡ್ಬಬಹುದು. ಆ ಮೂಲಕಾನು ನಮ್ಮ ಮಾರುಕಟ್ಟೆನ ವಿಸ್ತರಿಸಿಕೊಬೌದ್ರಿ. ನಮ್ಮ ಪಿಚ್ಚರಿಗೆ ಅಲ್ಲೆಲ್ಲಾ ಎಲ್ಲ ಮಾರ್ಕೆಟ್ ಐತ ಬಿಡ್ರಿ ಅನಬ್ಯಾಡ್ರಿ

ಇಷ್ಟೆಲ್ಲಾ ಹೇಳಿದ ಮ್ಯಾಲೆ, ಒಂದು ಬೀಜ ಮಾತು ಹೇಳಲಿಲ್ಲ ಅಂದ್ರ ಹೆಂಗ? ಬ್ಯಾರೀ ಭಾಷೆ ಚಿತ್ರಗಳು ಕರ್ನಾಟಕದಾಗ ಹಂಗಾ ಹೇಳೋರ ಕೇಳೋರ ಇಲ್ಲದ ಲೆಕ್ಕದಲೇ ಬರ್ತಾವ, ಅಂತದ್ರಾಗ ನಮ್ಮ ಚಿತ್ರಗಳು ಹೊರಗಿನ ರಾಜ್ಯಕ್ಕೆ ಯಾವಾಗಲೋ ಹೋಗಬೇಕಿತ್ರಿ. ಇದೆಲ್ಲ ಒಂದ ತರಹ ಕೊಡು-ತಗೊಳ್ಳು ಲೆಕ್ಕ ಆಗಬೇಕ್ರಿ. ನಿಮ್ಮ ಭಾಷೆ ಚಿತ್ರ ಇಲ್ಲಿ ಬಿಡ್ತಿರಿ ಅಂದ್ರೆ ನಮ್ಮ ಭಾಷೆ ಚಿತ್ರಕ್ಕೂ ನಿಮ್ಮ ನೆಲದಾಗ್ ಅನುಮತಿ ಕೊಡಬೇಕು ಅನಬೇಕ್ರೀಪಾ.

ನಮ್ಮ ನಿರ್ಮಾಪಕರು "ಏಯ್! ಬಿಡೋ ಮಾರಾಯ, ನಮ್ಮ ಪಿಚ್ಚರ್ ಅಲ್ಲೆಲ್ಲಾ ಯಾ ಮಗಾ ನೋಡ್ತಾನ? " ಅನ್ನೂ ಮಾತು ಬಿಟ್ಟು ನಮ್ಮ ಚಿತ್ರಕ್ಕೆ ಇರು ಮಾರುಕಟ್ಟೆ ಸಾಧ್ಯತೆಗಳ ಬಗ್ಗ ಕಣ್ಣು ತೆರೀ ಬೇಕ್ರಿಪಾ. ಮುಂಗಾರು ಮಳೆ ಈಗಾಗಲೇ ನಮ್ಮ ಚಿತ್ರಗಳಿಗೆ ಇರು ಸಾಮರ್ಥ್ಯ ಏನ್ ಅಂತ ತೋರಸೇತಿ. ನಮ್ಮ ನಿರ್ಮಾಪಕರು ಛಲೋ ಕಥಿ, ಛಲೋ ಸಂಗೀತ, ಸಾಹಿತ್ಯ, ಛಲೋ ತಾಂತ್ರಿಕ ಸಾಮರ್ಥ್ಯ ತೋರಸೋಂಥ ಚಿತ್ರ ಮಾಡಿದ್ರ, ಅದಕ್ಕ ತಕ್ಕಂಥಾ ಪ್ರಚಾರ ಮಾಡುದ್ರಾ ನಮ್ಮನ್ನ್ ಹಿಡಿಯಾಕ್ ಯಾ ಮಗಂಗು ಆಗಂಗಿಲ್ಲಾ. ಏನ್ ಅಂತೀರ್ರೀ ಗುರುಗಳಾ?

6 ಅನಿಸಿಕೆಗಳು:

Anonymous ಅಂತಾರೆ...

ಈ ಸದ್ಯಕ್ಕೆ, ಎಲ್ಲ ಯಶಸ್ವಿ ಕನ್ನಡ ಚಿತ್ರಗಳ ಡಿ.ವಿ.ಡಿ / ವಿ.ಸಿ.ಡಿ ಸಿಗಾಕ್ ಚಿತ್ರ ಬಿಡುಗಡೆ ಆಗಿ ೩-೪ ವರ್ಷ ಕಾಯು ಪರಿಸ್ಥಿತಿ ಐತ್ರಿ. ಆದ್ರೆ ಅದೇ ಹಿಂದಿ/ತಮಿಳು ಯಶಸ್ವಿ ಚಿತ್ರಗಳ ಡಿ.ವಿ.ಡಿ / ವಿ.ಸಿ.ಡಿ ಚಿತ್ರ ಬಿಡುಗಡೆ ಆಗಿ ಬರೇ ೬ ತಿಂಗಳಿಗೆ ದೇಶ/ವಿದೇಶದಾಗ್ ಎಲ್ಲ ಕಡೆ ಸಿಗ್ತೆತ್ರಿ. ನಮ್ಮ ಕನ್ನಡ ಚಿತ್ರಗಳ ಡಿ.ವಿ.ಡಿ / ವಿ.ಸಿ.ಡಿ ನು ಪಿಚ್ಚರ್ ಬಿಡುಗಡೆ ಆಗಿ ೬ ತಿಂಗಳನಾಗ್ ಎಲ್ಲ ಕಡೆ ಸಿಗು ವ್ಯವಸ್ಥೆ ಮಾಡಿದ್ರ ಅದರಲೇನು ನಾವು ಚಲೋ ರೊಕ್ಕ ಮಾಡಬೌದ್ರಿ.

Anonymous ಅಂತಾರೆ...

ella sari..idralli ondu telugu haaDu haagu telugu dialogues ide anta kELpaTTe...idu yaake bEKaagitto naa kaaNe...

kannaDada maarukaTTe chikkadu annOrige idu oLLe uttara..
heege namma chitragaLu raajya,desha haagu vishwadellaDe biDugaDeyaagli haagu chennaagi ODli anta haarasiteeni...

-putta

Anonymous ಅಂತಾರೆ...

"ella sari..idralli ondu telugu haaDu haagu telugu dialogues ide anta kELpaTTe...idu yaake bEKaagitto naa kaaNe..."

ಇವ್ರೇ.. ಹಾಗ ಅನ್‌ಬ್ಯಾಡ್ರೀ.. ನಮ್ ಬಳ್ಳಾರಿ, ಆದೋನಿ, ರಾಯದುರ್ಗ, ತಾಡಪತ್ರಿ ಕಡೆ ನಾವ್ ತೆಲುಗು ಕನ್ನಡ ಬರೆಸೇ ಮಾತಾಡೋದು...

ಅದ್ರಾಗೂ ರಾಯಲಸೀಮಾ ತೆಲುಗು ನಮ್ ಕನ್ನಡಕ್ಕೆ ಸ್ಯಾನ ಹತ್ತ ಅದ್ರೀ...

ಕೆಲವ್ ಕನ್ನಡ ಸಿನಿಮದಾಗೆ ಎಶ್ಟು ಇಂಗ್ಲೀಶ್ ಮಾತಾಡ್ತಾರ ಗೊರ್ತ? ಅದು ಇರಲಿ.. ಚಂದ ಇರ್ತದ.

ತೆಲುಗು ಸಾಲ ಇರ್ಲಿ. ಒಂದೆರಡು ಸಾಲಿಂದ ಏನ್ ಆದಾತ್ರಿ..

ಅದೋನಿಯಾಗೆ ಕನ್ನಡ ಸಿನಿಮ ಬಿಡುಗಡೆ ಕೇಳ್ ನಂಗೆ ಚಾನ ಸಂತೋಶ ಆತ್ರಿ.

ಭೇಶ್ ಸುದ್ದಿ ಇದು.

Anonymous ಅಂತಾರೆ...

bare onderaDu lines alla...2nd half fullu teluge ante...even ondu haaDu fullu telugumaya...

telugu films enaadru kannaDa lines irtaava?..eshtu telugu films nalli kannaDa haadu ive ?

yaaako ee vaada sari illa..

-putta

Unknown ಅಂತಾರೆ...

ಇದು ನಿಜವಾಗಿಯು ಅತಿ ಸಂತಸ, ಹೆಮ್ಮೆ ತರುವ ವಿಶಯ.. ನಮ್ಮ ಚಿತ್ರ ವಿದೇಶದಲ್ಲಿ ನೋಡೊ ಖುಶಿನೆ ಬೇರೆ!

Anonymous ಅಂತಾರೆ...

we struggled to get kannada movies at hyderabad & succeeded in last yr. i seen `satya' first day at hyderabad large screen multiplex. only 30 people were there out of 600 seats.advt was very poor. on saturday & sunday i seen lot of advance booking. i doubt success ofthis movie at hyderabad. but mungaru male ran fpor 7 week end house full shows and galipata 3 week end housefull shows. but it is a great initiative. we want more & more kannada movies at hyderabad & other parts of AP.

www.hyderabadkannadigaru.tk, hyderabadkannadigaru@gmail.com

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails