ಮೋಡಿ ಮಾಡಲಾಗದ ಮೋದಿ!

ಮೊನ್ನೆ ಚುನಾವಣಾ ಪ್ರಚಾರಕ್ಕೆ ಅಂತ ಕರ್ನಾಟಕಕ್ಕೆ ಬಂದ, ಗುಜರಾತಿನ ನರೇಂದ್ರ ಮೋದಿಯವರ ಭಾಷಣಕ್ಕೆ ಕಾರ್ಕಳದಲ್ಲಿ ನೀರಸ ಪ್ರತಿಕ್ರಿಯೆ ಬಂತಂತೆ! ಅಲ್ಲಾ ಗುರು, ನಮಗೆ ಅರ್ಥವಾಗದ ಭಾಷೇಲಿ ಭಗವಂತನೇ ಬಂದು ಉಪದೇಶ ಕೊಟ್ರೂ ಅದು ಜನರನ್ನು ಮುಟ್ಟಲ್ಲಾ ಅನ್ನೋದು ಈ ಜನಗಳಿಗೆ ಅರ್ಥವಾಗೋದು ಯಾವಾಗ ಅಂತಾ?

ನೀರಸ ಪ್ರತಿಕ್ರಿಯೆಗೆ ಕಾರಣ?

ಬೇರೆ ಪ್ರದೇಶಗಳ ನಾಯಕರುಗಳ್ನ ನಮ್ಮೂರಿಗೆ ಕರುಸ್ದಾಗ ಅವರ ಭಾಷಣಾನ ಕನ್ನಡದಲ್ಲಿ ತರ್ಜುಮೆ ಮಾಡಿ ಹೇಳೋದು ವಾಡಿಕೆ. ಆದ್ರೆ ಮೊನ್ನೆ ಹುಬ್ಬಳ್ಳಿ ಸಭೇಲಿ ಮೋದಿಯವ್ರು ಹಿಂದೀಲಿ ಮಾತಾಡಿದ್ನ ನೋಡುದ್ ಜನ "ಈ ಬಿಜೆಪಿಯವರು ಹಿಂದಿ ಭಕ್ತರು. ಇವ್ರು ಹೊರ್ಗಿಂದ ಕರ್ಕೊಂಡ್ ಬರೋ ನಾಯಕ್ರುಗಳ ಮಾತೂ ಹಿಂದೀಲಿರೋದು ಖಂಡಿತಾ" ಅಂತ ಅಂದ್ಕೊಂಡ್ರೋ ಏನೋ, ಒಟ್ನಲ್ಲಿ ಜನ ಹೆಚ್ಚು ಸೇರಿರಲಿಲ್ಲ. ಇನ್ನು ಮಾತು ಶುರು ಮಾಡಕ್ ಮೊದ್ಲು ಮೋದಿಯೋರು ತರ್ಜುಮೆ ಬೇಕಾ ಅಂದ್ರಂತೆ, ಒಂದಷ್ಟು ಜನ ಬೇಡಾ ಅಂದ್ರಂತೆ. ಇವ್ರು ಬೇಕಾ ಅಂದಂಗ್ ಮಾಡುದ್ರು ಅವ್ರು ಬೇಡ ಅಂದಂಗ್ ಮಾಡುದ್ರು ಅಷ್ಟೆ. ಇನ್ನು ಅವರು ಎಷ್ಟೇ ಸೊಗಸಾಗಿ ಮಾತಾಡುದ್ರೂ ಜನಕ್ ಅರ್ಥ ಆಗ್ಬೇಕಲ್ಲಾ? ಇದ್ ಬದ್ ಜನ್ವೂ ಆಕಳಿಸ್ಕೊಂಡು ಮನೆಗೋದ್ರು..

ಯಾಕೆ ತರ್ಜುಮೆ ಬೇಕಿತ್ತು?

ಪ್ರಜಾಪ್ರಭುತ್ವದ ನಿಜವಾದ ಅರ್ಥವೇ ಜನರಿಂದ ಆಳ್ವಿಕೆ ಅಂತ. ನಮ್ಮುನ್ ನಾವು ಆಳ್ಕೊಳೋ ವ್ಯವಸ್ಥೇಲಿ ನಮ್ಮಿಂದ ಆರ್ಸಿ ಬರೋರು ಏನೇನು ಮಾಡ್ತಾರೆ, ಏನೇನು ಮಾತಾಡ್ತಾರೆ ಅಂತ ತಿಳ್ಕೊಳೊ ಹಕ್ಕು ಅವ್ರುನ್ನ ಪ್ರಶ್ನೆ ಮಾಡೋ ಹಕ್ಕು ಜನಕ್ಕಿರುತ್ತೆ. ಈ ಸಂವಹನ ಪ್ರಕ್ರಿಯೇಲಿ ಭಾಷೆಗೆ ಅತಿ ಹೆಚ್ಚಿನ ಮಹತ್ವ ಇದೆ. ನಮ್ಮ ಭಾಷೆ ಆಡೋರುನ್ನ ನಮ್ಮೋರು ಅಂದುಕೊಳ್ಳೋದು, ನಮ್ಮ ಸಮಸ್ಯೆಗಳನ್ನು ಅರ್ಥ ಮಾಡ್ಕೋಳ್ಳೋರು ಅಂದ್ಕೊಳ್ಳೋದೂ, ಸಮಸ್ಯೆಗಳ್ನ ಪರಿಹರುಸ್ತಾರೆ ಅನ್ನೋ ಭರವಸೆ ಹುಟ್ಟೋದು ಸಹಜವಾದದ್ದು. ಅಂತಾದ್ರಲ್ಲಿ ನಮ್ಮದಲ್ಲದ ನುಡಿ ಆಡೋರು ಸ್ವರ್ಗಾನೆ ತಂದು ಕೊಡ್ತೀನಿ ಅಂದ್ರೂ ಜನರ ಮನಸ್ಸನ್ನ ಗೆಲ್ಲಕ್ಕೆ ಆಗಲ್ಲ ಗುರು!

ಹಾಗಾದ್ರೆ ಕಾರ್ಕಳದಲ್ಲಿ ಏನು ಮಾಡ್ಬೇಕಿತ್ತು?

ಅನುಮಾನಾನೆ ಬೇಡ. ಕಾರ್ಕಳದಲ್ಲಿ ತುಳುವಿನಲ್ಲಿ ಭಾಷಣದ ತರ್ಜುಮೆ ಆಗಬೇಕಿತ್ತು. ಈ ಮಣ್ಣಲ್ಲೇ ಹುಟ್ಟಿರೋ ಕೊಡವ, ತುಳು ಭಾಷೆಗಳಲ್ಲಿ ಆಯಾ ಪ್ರದೇಶಗಳಲ್ಲಿ ಪ್ರಚಾರ ಮಾಡೋದೆ ಸರಿಯಾದದ್ದು. ಕನ್ನಡ ನಾಡಿನಲ್ಲೇ ಇರುವ ಈ ಒಳನುಡಿಗಳಿಗೆ ಸಲ್ಲಬೇಕಾದ ಗೌರವ ಸಲ್ಲಿಸೋದು ಖಂಡಿತಾ ಸರಿ ಗುರು! ಅಷ್ಟಕ್ಕೂ ವೈವಿಧ್ಯತೆಯಲ್ಲಿ ಏಕತೆ ಅನ್ನೋದನ್ನ, ಪ್ರತಿ ಪ್ರದೇಶದ ಅನನ್ಯತೆ ಕಾಪಾಡಿಕೊಳ್ಳಬೇಕು ಅನ್ನೋದನ್ನ ತಾನೆ ನಾವು ಪ್ರತಿಪಾದುಸ್ತಿರೋದು? ಗುರು!

5 ಅನಿಸಿಕೆಗಳು:

Anonymous ಅಂತಾರೆ...

gurugale,,

one simple vishya en andre,, hubballi aagali, karkala aagali,, chunavane sabhege baro janaru halli janaru,, avarige avara mathru bhashe ( kannada tulu) bitre berenu baradu.. higiddaga,, city li kela janakke hindi barutte,, higaagi iDi karnatakakke hindi barutte antha ankondiro BJPyavaru pedda mundegalu.

innadru chunavaNe pracharaana kannada tulu kodava bhasheli maadli..

Nandan S R ಅಂತಾರೆ...

ಸರಿಯಾಗಿ ಹೇಳಿದ್ರಿ ಗುರುಗಳೇ,
ನಮ್ಮ ನಾಡಲ್ಲಿ ನಮ್ಮ ಭಾಷೆ ಬಿಟ್ಟು ಬೇರೆ ಭಾಷೆ ಬಳಸಿ ನಮನ್ನು ಗೆಲ್ಲಲ್ಲು ಸಾಧ್ಯವಿಲ್ಲ ಅನ್ನೋದನ್ನ ನಮ್ಮ ಜನತೆ ಅವರಿಗೆ ಚೆನ್ನಾಗಿ ಹೇಳಿದ್ದಾರೆ. ಇದು ಒಂದು ಉದಾಹರಣೆ ಅಸ್ಟೇ. ಇದೇ ರೀತಿ ನಾವು ಸ್ಪಂದಿಸಿದಬೇಕು ಹಾಗು ಕನ್ನಡಕ್ಕೆ ಬೆಂಬಲ ಸೂಚಿಸಬೇಕು.

ನಾವು ಗ್ರಾಹಕರಾಗಿಯೂ ಇದೇ ರೀತಿ ಪ್ರತಿಕ್ರಯಿಸಿದರೆ ನಮಗೆ ೧೦೦% ಕನ್ನಡ ಮಾರುಕಟ್ಟೆ ಸಿಗುತ್ತದೆ.

ಜೈ ಕರ್ನಾಟಕ

Anonymous ಅಂತಾರೆ...

nija hElteeni... ee bjp ge vote maaDidre 'himdi rashtrabhaashe' amtaare mattu adanna balavantavaagi hErtaare...congress kELalebEDi...worst amdre worstu...innu jd(s)- appa jd-s na national party amtaane maga praadEshika paksha amtaane...namma raajyadimda oMdu praadEshika paksha iddidre idyaava taapatrayanu irtirlilla...alva gurgaLe..

-putta

Anonymous ಅಂತಾರೆ...

mahan gurugale, anthima palithamsha barovargu swalp thadiri. modi yaaru..?yav pakshakke seridava...idarbagga amela charche ge barona..illi charche agabekagirodu modi kelasad bagga!. hanakasu adaaya taruva deshada modal rajya vagi marpattide.ondu kal dalli surastravu mookampa dinda tettarsi hoda rajya.istendo pragati sadisalu yenu karana adu namage bekkadadu..... huballi ge modi bandidu bashana bigiyuvadakke alla nam nadina janaru adarillo uttarkaarnatada janathe allina krushi,kaigarike,hago swalambane bagga tamma salahe kotturu vinaha neevu heldange yavudu nadedilla.

Inthi NImm Preethiyaaa..........

Anonymous ಅಂತಾರೆ...

ನಮಸ್ಕಾರ ಸ್ವಾಮಿ,
ಮೋದಿ ಯಾರು? ಯಾವ ಪಕ್ಷಕ್ಕೆ ಸೇರಿದೋರು ಅಂತಾಗ್ಲೀ, ಅವರು ಗುಜರಾತನ್ನು ಹೇಗೆ ಉದ್ಧಾರ ಮಾದಿದ್ರು ಅಂತಾಗ್ಲಿ ಇಲ್ಲಿ ಬರೆದಿಲ್ಲ. ನೀವಂದಂತೆ ಅವರ ಸಾಧನೆ ಬಗ್ಗೆ ಮಾತಾಡೋಕ್ಕೂ, ಅವರ ಸಲಹೆಗಳನ್ನು ಸ್ವೀಕರಿಸೋಕ್ಕೂ ಇರೋ ಸಾಧನ ಕನ್ನಡ/ತುಳು/ಕೊಡವ ಅಂತ ಹೇಳಿದ್ದಾರೆ. ಮೊದಲು ಇಲ್ಲಿ ಬರ್ದಿರೋದ್ನ ಅರ್ಹ ಮಾಡ್ಕೊಳ್ಳಿ, ಆಮೇಲೆ ಎಗರಾಡ್ತೀರಂತೆ. ಮೋದಿ ಯಶಸ್ಸಿನ ಬಗ್ಗೆ ಇದೇ ಗುರುಗಳು ಬರ್ದಿರೋ ಇನ್ನೊಂದು ಲೇಖನಾನ ಈ ಲಿಂಕ್ ನಲ್ಲಿ ಓದಿ.http://enguru.blogspot.com/2007/12/blog-post_6327.html
ಆಮೇಲೆ ಕಾಮೆಂಟ್ ಬರೀರಿ.

ತಿಮ್ಮಯ್ಯ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails