ನಮ್ಮ ಸಮಸ್ಯೆಗೆಲ್ಲಾ ಕನ್ನಡ ಕೇಂದ್ರಿತ ರಾಜಕಾರಣವೇ ಪರಿಹಾರ!

ಅಬ್ಬಬ್ಬಾ! ಅಂತೂ ಇಂತೂ ತಮಿಳುನಾಡು ತನ್ನ ಮೊಂಡುತನಾನ ಬಿಟ್ಟು ಹೊಗೆನಕಲ್ ಯೋಜನೇನ ಮುಂದೂಡಿದೆ. ಸದ್ಯಕ್ ಎದೆ ಮೇಲೆ ಹತ್ತಿ ಕೂತಿದ್ದ ಭೂತ ಇಳಿದಂಗಾಗಿದೆ. ಆದ್ರೆ ಕನ್ನಡಿಗರು ಇಷ್ಟಕ್ಕೇ ಗೆದ್ವಿ ಅನ್ಕೊಂಡು ಸುಮ್ನಿದ್ರೆ ಆಗಲ್ಲ. ಈಗಾಗಿರೋದು ಮುಂದಾಗಬಹುದಾದ ಮಹಾ ಅನಾಹುತದ ಮುನ್ಸೂಚನೆ ಕೊಡ್ತಿಲ್ವಾ ಗುರು? ನಿಜವಾದ ಆಕ್ರಮಣ ಶುರು ಮಾಡೋ ಮೊದಲು ಶತ್ರುಗಳ ಬಲಾ ಅಳ್ಯಕ್ಕೆ ಚೂರು ಸ್ಯಾಂಪಲ್ ನೋಡಕ್ ಮುಂದಾಗೋ ಹಾಗೆ ನಮ್ಮ ಪ್ರತಿಕ್ರಿಯೆ ಹೆಂಗಿರಬೋದು ಅಂತ ಈಗ ನೋಡಿದಾರೆ. ಮುಂದಿನ ದಿನಗಳಲ್ಲಿ ಸರ್ಯಾಗಿ ಸಿದ್ಧತೆ ಮಾಡ್ಕೊಂಡೇ ಅವ್ರೂ ಮುಂದಾಗ್ತಾರೆ. ಅಷ್ಟರೊಳಗೆ ಕನ್ನಡಿಗರು ನಮ್ಮ ಬಲಾನ ಹೆಚ್ಚುಸ್ಕೊಳ್ಳಲೇ ಬೇಕು ಗುರು.

ಚಳವಳಿಗಳು ಜ್ವರದ ಮದ್ದು ಮಾತ್ರಾ!

ರೈಲ್ವೇ ನೇಮಕಾತಿ ವಿಷ್ಯಾನೆ ಇರಲಿ, ಬೆಳಗಾವಿ ಗಡಿ ವಿಷ್ಯಾನೆ ಇರಲಿ, ಕಾವೇರಿ ತೀರ್ಪೇ ಇರಲಿ, ಹೊಗೆನಕಲ್ ವಿಷ್ಯಾನೆ ಇರಲಿ ನಾವು ಪ್ರತಿ ಬಾರಿಯೂ ಬೀದಿಗಿಳಿದು ಹೋರಾಟವನ್ನು ಮಾಡಿದಾಗಲೇ ಚೂರು ಪಾರು ಪರಿಹಾರ ಸಿಕ್ಕಿರೋದು... ಸತ್ಯಾನೆ ಗುರು.
ಕಾವೇರಿ ಐತೀರ್ಪು ಇಂದಿಗೂ ಗೆಜೆಟ್ಟಲ್ಲಿ ಪ್ರಕಟವಾಗದೆ ಇರೋಕೆ ಅಂದು ನಾಡಿನಾದ್ಯಾಂತ ಭುಗಿಲೆದ್ದ ಚಳವಳಿಯೇ ಕಾರಣ. ರೇಲ್ವೇ ಇಲಾಖೆ ತನ್ನ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಿದ್ದೂ ಕನ್ನಡಿಗರ ಸಂಘಟಿತ ಹೋರಾಟದಿಂದಲೇ ಅನ್ನೋದ್ರಲ್ಲಿ ಅನುಮಾನ ಇಲ್ಲ. ಇದೀಗ ಕರುಣಾನಿಧಿಯವರು ಹೊಗೆನಕಲ್ ಯೋಜನೇನ ಮುಂದೂಡಕ್ಕೂ ಇದೇ ಕಾರಣ. ಕಳೆದ ಒಂದೆರಡು ತಿಂಗಳಿಂದ ನಡೀತಿದ್ದ ಶಾಂತಿಯುತ ನಿರಶನಗಳು ಮಾಡದ ಪರಿಣಾಮವನ್ನು ಕನ್ನಡಿಗರು ಬೀದಿಗಿಳಿದು ನಡೆಸಿದ ಹೋರಾಟ ಮಾಡಿರೋದು ಸತ್ಯಾ. ಆದ್ರೆ ಇಂಥಾ ಹೋರಾಟಗಳು ತಾತ್ಕಾಲಿಕ ಪರಿಹಾರ ಒದಗಿಸಿ ಕೊಡಲು ಮಾತ್ರಾ ಶಕ್ತ ಅನ್ನೋದು ಅವುಗಳಿಗೆ ಇರೋ ಮಿತಿ ಗುರು.

ರೋಗದ ಮೂಲಕ್ಕೆ ಮದ್ದು ಬೇರೆ ಇದೆ ಗುರು!

ಆದ್ರೆ ಪ್ರತಿ ಸಲವೂ ಹೀಗೆ ಹೋರಾಟ ಮಾಡೆ ನ್ಯಾಯ ದೊರಕುಸ್ಕೋತೀವಿ ಅನ್ನೋದಕ್ಕೆ ಆಗಲ್ಲ. ಯಾಕಂದ್ರೆ, ಹೋರಾಟಗಳಿಗಿಂತ ನ್ಯಾಯಾಲಯಗಳಲ್ಲಿ ಮಾಡೋ ವಾದಗಳು ಮುಖ್ಯ.
ಅದಕ್ಕಿಂತ ಮುಖ್ಯವಾದದ್ದು ರಾಜಕೀಯ ಬಲ. ಈ ಬಲದ ಮೂಲಕ ಕೇಂದ್ರ ಸರ್ಕಾರದ ಮೇಲೆ ಇಟ್ಕೊಳ್ಳೋ ಹಿಡಿತ ಮುಖ್ಯ.
ಆಯಕಟ್ಟಿನ ಜಾಗಗಳಲ್ಲಿ ಕೆಲ್ಸಮಾಡೋ ಅಧಿಕಾರಿಗಳಾಗಿ ನಮ್ಮವರಿದ್ದರೆ ಸತ್ಯಾನ ಹೆಕ್ಕಿ ತೆಗ್ಯೋಕೆ ಸಾಧ್ಯ. ಮಾಧ್ಯಮಗಳಲ್ಲಿ ನಮ್ಮ ನಿಲುವನ್ನು ಸರಿಯಾಗಿ ತೋರುಸ್ಬೇಕು ಅಂದ್ರೆ ಅಲ್ಲೂ ನಮ್ಮವರಿರಬೇಕು.
ನಮ್ಮ ನಾಡಿನ ಅರ್ಥಿಕ ಚಟುವಟಿಕೆಗಳ ಮೇಲಿನ ಹಿಡಿತ ನಮ್ಮದೇ ಆಗಿರಬೇಕು ಗುರೂ!

ತಮಿಳುನಾಡೋರು ಮಾಡಿರೋದು ಇದನ್ನೇ...

ತಮಿಳುನಾಡು ಹಿಂದಿನಿಂದ ಮಾಡ್ಕೊಂಡ್ ಬಂದಿರೋದು ಇದನ್ನೇ. ತನ್ನ ಪರವಾಗಿ ವಾದ ಮಾಡಕ್ಕೆ ಕರ್ನಾಟಕದೋರು ನಾರಿಮನ್ ಥರದ ಕನ್ನಡೇತರರನ್ನು ಅವಲಂಬಿಸ್ಬೇಕು. ಆದ್ರೆ ತಮಿಳುನಾಡಿನ ವಕೀಲರಾದ ಪರಾಶರನ್ ತಮಿಳರೇ ಗುರು. ಕೇಂದ್ರದ ಮೇಲೆ ಹಿಡ್ತ ಇಟ್ಕೊಂಡಿರೋರು ಕರ್ನಾಟಕದ ಸಂಸದರಲ್ಲ, ತಮಿಳುನಾಡಿನೋರು. ಕೇಂದ್ರದಲ್ಲಿ ಯಾವ್ದೇ ಸರ್ಕಾರ ಇರಲಿ, ಅದುನ್ನ ತನ್ನ ತಾಳಕ್ಕೆ ತಕ್ಕಂತೆ ಕುಣ್ಸೋ ತಾಕತ್ತಿರೋದು ತಮಿಳುನಾಡಿನ ರಾಜಕೀಯ ಪಕ್ಷಗಳಿಗೇ ಗುರು.
ಇದಕ್ಕೆ ಕಾರಣಾನೂ ಅಲ್ಲಿರೋ ಪಕ್ಷಗಳು ತಮಿಳರ, ತಮಿಳುನಾಡಿನ ಹಿತವನ್ನು ಕೇಂದ್ರದಲ್ಲಿ ಇಟ್ಕೊಂಡು ಕಟ್ಟಿರೋ ಪಕ್ಷಗಳು. ತಮಿಳರಿಗೆ ಅನ್ಯಾಯ ಮಾಡ್ತಿದಾರೆ, ತಮಿಳು ಸಂಸ್ಕೃತಿಯನ್ನ ಹಾಳುಮಾಡ್ತಿದಾರೆ ಅನ್ನೋದೆ ಒಬ್ರುಗೆ ಇನ್ನೊಬ್ರನ್ನ ಹಣಿಯೋಕೆ ಇರೋ ಅಸ್ತ್ರ. ಈಗ್ಲೇ ನೋಡಿ, ಜಯಮ್ಮ ಕರುಣಾನಿಧಿಯೋರು ನೆರೆ ರಾಜ್ಯಗಳ ಪರ ಪಕ್ಷಪಾತ ಮಾಡ್ತಾರೆ ಅಂತ ಆರೋಪಾ ಮಾಡ್ತಿದಾರೆ.
ಆದ್ರೆ ನಮ್ಮ ನಾಡಲ್ಲಿ ಪರಿಸ್ಥಿತಿ ಇದಕ್ಕೆ ಪೂರ್ತಿ ವಿರುದ್ಧವಾಗಿದೆ. ಈಗ ಹೇಳಿ, ನಾವು ತಮಿಳುನಾಡು ನಮ್ಮ ಮೇಲೆ ಅನ್ಯಾಯ ಮಾಡ್ತಿದೆ ಅಂತಾ ಹೋರಾಟವೊಂದನ್ನೇ ನೆಚ್ಕೊಂಡ್ರೆ ನ್ಯಾಯ ಸಿಗುತ್ತಾ?ಗುರು.

ಮುಂದಾಗಬೇಕಾಗಿರೋದು...

ಇವತ್ತಿನ ದಿನ ಯಾವ ಹೋರಾಟಗಾರರು ನಾಡು ನುಡಿ ಬಗ್ಗೆ ಪ್ರಾಮಾಣಿಕ ಕಾಳಜಿ ಇಟ್ಕೊಂಡು ಹೋರಾಟ ಮಾಡ್ತಿದಾರೋ ಅವರು ನಾಡಿನ ಉಳಿವಿಗಾಗಿ ರಾಜಕೀಯಕ್ಕೆ ಬರೋ ಮನಸ್ಸು ಮಾಡಬೇಕು. ಕನ್ನಡದ ಜನತೆ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧೆಗೆ ನಿಲ್ಲೋ ಅಭ್ಯರ್ಥಿಗಳಿಗೆ ನಾಡಿನ ಬಗ್ಗೆ ಇರೋ ಕಾಳಜಿ, ಬದ್ಧತೇನ ಸಾಣೆ ಹಿಡಿದು ನೋಡೇ ಮತ ಹಾಕ್ಬೇಕು. ಕನ್ನಡಿಗರು ದೊಡ್ಡ ಮತಬ್ಯಾಂಕ್ ಆಗಿ ನಾಡಿನ ಪರ ಕಾಳಜಿ ಇರೋರನ್ನೇ ಗೆಲ್ಲುಸ್ಬೇಕು. ಇದರಿಂದ ರಾಜಕೀಯವಾಗಿ ಬಲ ಗಳಿಸಿಕೋಬೇಕು. ಇದುನ್ನ ಮೊದಲನೆ ಹೆಜ್ಜೆ ಮಾಡ್ಕೊಂಡು ವ್ಯಾಪಾರ, ವಹಿವಾಟು, ಉದ್ಯೋಗ, ಉದ್ದಿಮೆ, ಆಡಳಿತ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡಿಗರ ಹಿಡಿತವನ್ನು ಸಾಧಿಸಬೇಕು. ಆಗ ನಮ್ಮ ಪಾಲಿಗೆ ನ್ಯಾಯನೂ ಸಿಗುತ್ತೆ. ನಮ್ಮ ಮೇಲಾಗ್ತಿರೋ ಅನ್ಯಾಯಗಳೂ ಕೊನೆಯಾಗುತ್ತೆ. ಏನಂತೀ ಗುರು?

8 ಅನಿಸಿಕೆಗಳು:

anisikegalu ಅಂತಾರೆ...

kannada samghatanegalu namma chunayita pratinidhigalannu taratege tegedukollabeku. avru anna kotta nadigeruna teerisuva kelasa maduvante ottayiisabeku. summane rastegilidu jana samanyara jeevana astavyastada badlige ivrugalinda balavantavagi kelas madabeku. summane pakkada rajyadavarnnu dooshisi prayojanavilla.

Anonymous ಅಂತಾರೆ...

ನಾವು ನೋಡುತ್ತಾ ನೋಡುತ್ತಾ ಸೋವಿಯಟ್ ರಷ್ಯ ಹಾಗು ಯುಗೋಸ್ಲಾವಿಯಾ ದೇಶಗಳು ಅನೇಕ ಬಾಗಗಲಾಗಿ ಒದೆದುಹೋದವು. ಹಾಗೆಯೆ ಭಾರತಕ್ಕೆ ಒಂದು ದಿನ ಆ ಸ್ಥಿತಿ ಬಂದರೆ ಕರ್ನಾಟಕ ಸ್ವತಂತ್ರ ದೇಶವಾಗಿ ಹೊರಹುಮ್ಮುತದೆ. ಆಗ ಕನ್ನಡಿಗರು ತಮ್ಮ ದೇಶವನ್ನು ಮರಾಠಿಯರ ಹಾಗು ತಮಿಳರ ದಾಳಿಯನ್ನು ಎದರಿಸಬಲ್ಲರೆ ಎಂಬುದೂ ಕಾಡುವ ಪ್ರಶ್ನೆ. ಮೊದಲೇ ಭಾರತದ ಸೈನ್ಯದಲ್ಲಿ ಕನ್ನಡಿಗರ ಸಂಖ್ಯೆ ಅತಿ ಕಡಿಮೆ. ತಮಿಳರು ಬೆಂಗಳೂರನ್ನು ವಶಪಡಿಸಿಕೊಳ್ಳಲು ಎಲ್ಲಾ ಪ್ರಯತ್ನವನ್ನು ಮಾಡುವರು. ಹಾಗೆಯೇ ಮರಾಠಿಯರು ಕಾರವಾರ, ಕೈಗಾ ಅಣು ಸ್ಥಾವರ ಸೇರಿದಂತೆ ಬೆಳಗಾವಿಯನ್ನು ಕಂಡಿತವಾಗಿ ಕಬಳಿಸಲು ಪ್ರಯತ್ತ್ನಿಸಿವರು. ಸ್ವತಂತ್ರ ಕರ್ನಾಟಕವು ಆರ್ಥಿಕವಾಗಿ ಸಮೃದ್ದವಾಗಿರಲು ಯಾವುದೇ ಆತ್ಹಂಕವಿರುವುದಿಲ್ಲ ಆಧರೆ ಆಕ್ರಮಣದಿಂದ ಪಾರಾಗುವುದು ದೊಡ್ಡ ಸಮಸ್ಯಯೇ ಸರಿ.ಮೊದಲೇ ನಮ್ಮ ಜನಸಂಖ್ಯೆ ಶೇಕಡ ೬೦ ರಿಂದ ೭೦ ರವರಿಗೆ ಇದೆ. (ಶುದ್ದ ಕನ್ನಡ ಮಾತನಾಡುವವರು). ನಾವು ಇಸ್ರೆಯಲ್ ದೇಶದ ಊದಹರನೆ ತೆಗೆದುಕೊಂಡಾಗ, ಕೇವಲ ತಂತ್ರಜ್ಞಾನದ ಸಹಾಯದಿಂದ ತಮ್ಮ ದೇಶವನ್ನು ಅರಬ್ ದೇಶಗಳ ಒಕ್ಕೂಟದ ಆಕ್ರಮಣಶೀಲ ದೋರಣೆ ಯಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗಿದೆ. ಕನ್ನಡಿಗರು ಜನಸಂಕ್ಯೆಯಲ್ಲಿ ಕಡಿಮೆ ಇರುವ ಕಾರಣ ದೊಡ್ಡ ಸೇನೆ ಯನ್ನು ಕಾಪಾಡಿಕೂಂಡುಬರುವುದು ಕಷ್ಟಕರ. ಆದುದರಿಂದ ಅಣುಅಸ್ತ್ರ ಪಡೆದುಕೊಳ್ಳುವುದು ಅನಿವಾರ್ಯ. ಅಣು ಅಸ್ತ್ರವು ಆಕ್ರಮಣಶೀಲರಿಗೆ ‘ಡೆಟರೆಂಟ’ ಆಗಿ ಕೆಲಸ ಮಾಡುತ್ತದೆ.

ಪುಟ್ಟ PUTTA ಅಂತಾರೆ...

Srinivas,
Your foresight is appreciated! I think we should start preparing bombs to thwart these threats!

anisikegalu ಅಂತಾರೆ...

Hooratagaararu Rajakeeyakke barabeku. Aadre,adhikarada ruchi hattidre hindina kanasuglella nuccu nooraguttave. kela varshagala hinde Assam nalli vidyarthi samghatnegalu nelad janara bedikegaligagi dodda chaluvliyanne madidavu. Aadare nantarada dinagalalli ade nayakaru bhrastaragi moolegumpagiddare. Innondu udaharane turtu paristitiyalli Aarambhagoda JP chaluvali. Allidda nayakaru eega enu maduttiddare embudu amgainalli kanuttide. Aagina bahuteka nayakarugalu tammade aada paksha madikondu adaralli darodekooraru, bhoogata jagattinavaru, kolegaararu ivarugalannu saki belesuttiddare. heegagi chaluvaligarendare anumanadinda noduvantaguttade.

Kannada movies and videos ಅಂತಾರೆ...

chennagi bardiddiya guru .. ninna vichara dhaare ella kannadigarannu talupali ..

VSgoogler ಅಂತಾರೆ...

"ಬೇರೇ ಕಾರಣಕ್ಕೆ ’ಬಂದ್’ ಅಗೋಹಾಗೆ- ಈ ದುರ್ಸ್ಥಿತಿಯಲ್ಲಿ ಎಲ್ಲಾರೀತಿಯ "ಮೋಜನ್ನು" ಬಂದ್ ಮಾಡಿ -ಆ ಕಾಲ ಮತ್ತು ಹಣಗಳನ್ನು ಈ ನೋವಿನ ಉಪಚಾರಕ್ಕೆ ಉಪಯೋಗಿಸಿ" ಅಂತ ಎಲ್ಲೆರನ್ನೂ ಕೇಳಿಕೊಳ್ಳುವಷ್ಟು ಅತ್ಮೀಯವಾಗಿದೆ ಕವನ.

harish ಅಂತಾರೆ...

ಸರಿಯಾಗ್ ಹೆಲಿದ್ರಿ ಗುರು

SUNIL KUDLA ಅಂತಾರೆ...

NODI NIVU HELUVUDU SARIYAGIDE AYAKATTINA JAGADALLI KANNADIGARIRABEKU RELIGION MATTU DESHA YAVATTU ONDAGALU SADHYAVILLA UDAHARANEGE SPAIN NODI ALIRUVARELLA CHHRISTARU ADARE BARSILONA SPAIN NINDA SWATANTRYA BAYASUTADE YAKE TANNA BASHABIMANA DINDA NAVYAKE HINDE NAVU EDE TATTI HELUVA NAVU KANNADIGARU KANNADVE NITYA KANNADVE SATYA NANNA MATRRABHASHE KANNADA NANU NERHOREYALLI KALITADDU TULU SHALEYALLI KALITADDU KANNDA NANAGE KONKANNI HEGEYO TULU KANNADAGALU KUDA MATRABHASHE GALE AVATTU GOVA DINDA PORTUGUESSA RA HAGU MARATHARA UPATALA TALA RALADE ASHRYA BEDIDAGA KONKANNI KANDAMMA GALIGE MADILLALLI ASHRAYA NIDDIDU KANNADADA VIRA RANI BEDANURU KELADI RANI MAHAMATHE CHENNAMMA RALLAVE MAREYABAHUDE AKEYYANNU MARETARE A DEVARU MECHHARE NAMMANNU NERE KEREYALLI SAHABALVEYENDA HOSA STALADALLI KUDI BALALU KALISIDA TULU VA RANNU KANNADIGA RANNU MAREYALADITE TIPPU SULTHANA SERE YALLI ABAYA VANNU NIDIDA KODAGINA RAJARANNU MAREYALADITE NAVU KANNADIGA TULUVA KODAGA KONKANNI GALU A KANNADAMBE YA MAKKALU NAVELLA KANNADIGARU JAI KARUNADU KARNATAKA

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails