ಕನ್ನಡ ನಾಡು: ಬರೀ ಚಿನ್ನದ ಬೀಡಲ್ಲ, ಚಿನ್ನದಂಥಾ ಜನರ ಬೀಡು!

ಕನ್ನಡಿಗ್ರು, ನಾವೇನಾ ಇಂಗಿದ್ದೋರು ಅಂತ ಅಚ್ಚರಿ ಪಡೋ ಸುದ್ದಿ ಡೆಕ್ಕನ್-ಹೆರಾಲ್ಡಲ್ಲಿ ಬಂದೈತೆ ಗುರು! ನಮ್ಮೋರು ಅಟ್ಟಿ ಗಣಿಯೊಳಕ್ಕೆ ಇಳ್ಯಕ್ ಸುರು ಅಚ್ಕೊಂಡು ಎಲ್ಡು ಸಾವ್ರ ವರ್ಸಕ್ಕಿಂತ ಜಾಸ್ತಿ ಆಯ್ತಂತೆ. ಬಾಳ ಇಂದೆ ಅಂದ್ರೆ ಕ್ರಿಸ್ತ ಉಟ್ಟಕ್ಕೂ ನಲವತ್ತು ವರ್ಸ ಮೊದ್ಲು ಅಟ್ಟಿನಲ್ಲಿ ಚಿನ್ನ ತೆಗ್ಯಕ್ ಮೊದಲಾದ್ರಂತೆ. ಆಗ ನಮ್ಮೋರು ಬಳುಸ್ತಿದ್ದ ತಂತ್ರಗ್ನಾನ ನೋಡ್ಬುಟ್ಟು ಪರಪಂಚದ ಅತಿ ಅಳೇ ನಾಗರೀಕತೆ ಅಂತ ಕರುಸ್ಕೊತಾ ಇರೋ ಗ್ರೀಕ್ ಜನ್ರು ತಮ್ಮ ಗಣಿಗಾರಿಕೆ ಇದಾನಾನ ಸುದಾರುಸ್ಕೊಂಡ್ರಂತೆ ಗುರು! ಈ ಸುದ್ದಿ ಕೇಳ್ತಿದ್ರೆ ಒಳ್ಳೆ ಕರದೆಮ್ಮೆ ಅಸಿ ಆಲು ಕುಡ್ದಸ್ಟ್ ಕುಸಿ ಆಯ್ತುದೆ.
ಇರಿಯರು ಸಾದಿಸಿದ್ದ ಇರಿಮೆ

ನಾವು ಇವತ್ತೆಲ್ಲಾ ನಮ್ಮಲ್ಲಿ ಗಣಿಗಾರಿಕೆ ಮಾಡಬೇಕು ಅಂದ್ರೆ ಜಪಾನಿನ ತಂತ್ರಗ್ನಾನ, ಜರ್ಮನಿ ತಂತ್ರಗ್ನಾನ ಅಂತೆಲ್ಲಾ ಅವೇ ಗ್ರೇಟು ಅಂತ ಅವ್ರುನ್ನೆ ಕರ್ದು ಗಣಿಗಾರಿಕೆ ಮಾಡುಸ್ತೀವಿ. ಆದ್ರೆ ಆವತ್ತು ಹೊರ ದೇಸದವ್ರೂ ನಮ್ಮುನ್ ನೋಡಿ ಕಲೀತಿದ್ರು ಅನ್ನದ್ ಕುಸಿ ಇಸ್ಯಾ ಅಲ್ವಾ? ಆ ಮಟ್ಟಕ್ಕೆ ನಮ್ಮೋರು ಇರಿಮೆ ಸಾದಿಸಿದ್ರು ಅಂದ್ರೆ ನಮ್ಮ ಕನ್ನಡದೋರು ಪರಪಂಚದಾಗೇ ದೊಡ್ಡು ಜನ ಅಲ್ವುರಾ? ಇಂತಾ ಇರಿಮೆ ಬರೀ ಅವತ್ತಿನ ಗಣಿಗಾರಿಕೆ ಒಂದ್ರಲ್ಲೇ ಅಲ್ಲಾ, ಕಲ್ಲು ಕೆತ್ತೋದ್ರಲ್ಲಿ, ಬೆಳೆ ಬೆಳ್ಯೋದ್ರಲ್ಲಿ, ಬೆಳೆಗೆ ನದೀ ನೀರು ಅರಿಸೋದ್ರಲ್ಲಿ, ಅರಮನೆ ಕಟ್ಟೋದ್ರಲ್ಲಿ, ಬೇಸ್ಗೆ ಬಿಸ್ಲು ಸುಡದಂಗೆ ಗ್ವಾಡೆ ಒಳಿಕ್ಕೇ ನೀರ್ ಆಯುಸ್ಕೊಂಡು ತಂಪು ಮಾಡ್ಕೊಳೊದ್ರಲ್ಲಿ ನಮ್ಮೋರು ಎತ್ತುದ್ ಕೈಯ್ಯಿ ಗುರು! ಇಂತಾ ಸುದ್ದಿ ಕೇಳ್ದಾಗೆಲ್ಲಾ, ನಮ್ಮ ಮೈಯ್ಯಾಗೆ ಅರಿತಿರೋ ರಗುತ ಬರೀ ಕೆಂಪು ನೀರಲ್ಲ, ಅದು ದೊಡ್ಡ ದೊಡ್ಡ ಸಾದ್ನೆಗೆ ಕಾರಣ ಆಗಿರೋದು ಅಂತ ಒಸಾ ಉಮ್ಮಸ್ಸು ಉಟ್ಟುತ್ತೆ ಗುರು!

ಕೊನೆಹನಿ: ಆವತ್ತು ಇಂಗೆಲ್ಲಾ ನಮ್ಮೋರು ದೇಸ ಇದೇಸಗಳೆಲ್ಲಾ ಅನುಕರ್ಸೋ ಸಾದ್ನೆ ಮಾಡಿ, ಅಲ್ಲಿಂದೆಲ್ಲ ಬರೋ ಜನ್ರುಗೆ ಏಳಿ ಕೊಡ್ತಿದ್ರು ಅಂದ್ರೆ ಅವುರೆಲ್ಲಾ ಇಂಗ್ಲಿಸು ಕಲ್ತಿರಲಿಲ್ಲಾ ಗುರು! ಅಸಲ್ಗೆ ಇಂಗ್ಲಿಸು ಉಟ್ಟೇ ಇರಲಿಲ್ಲ.

3 ಅನಿಸಿಕೆಗಳು:

ಶಶಿ ಅಂತಾರೆ...

ಕನ್ನಡಿಗರು ಹೆಮ್ಮೆ ಪಡೋ ವಿಷಯ. ಇಂತಹ ಒಳ್ಳೇ ಸುದ್ದಿಗಳನ್ನು ಬರೀತಾ ಇರಿ ಸ್ವಾಮಿ. ಕನ್ನಡಿಗರ ಅಭಿಮಾನ ಶೂನ್ಯತೆಗೆ ಸೂಜಿ ಚುಚ್ಚಿದ ಹಾಗೆ! ಇಂತಹ ವಿಷಯಗಳು ಹೆಚ್ಚು ಹೆಚ್ಚು ಬರುತ್ತಿರಲಿ. ನನ್ನ ಪ್ರಕಾರ ಇಂತಹ ವಿಷಯ ಗಳಿಂದಲೇ ಕನ್ನಡಿಗರ ಸ್ವಾಭಿಮಾನ ಹೆಚ್ಚಾಗುವುದು.

Raghavendra C ಅಂತಾರೆ...

ನಿಜ ಗುರು, ಕನ್ನಡಿಗರು ಹೆಮ್ಮೆ ಪಡಬೇಕಾದ ವಿಷಯನೇ ಸರಿ. ೨೦೦೦ ವರುಷಗಳ ಹಿಂದೇನೆ ಹಟ್ಟಿ ಚಿನ್ನದ ಗಣಿಯಲ್ಲಿ ಚಿನ್ನದ ಗಣಿಗಾರಿಕೆ ಮಾಡುತಾ ಇದ್ದರು ಅಂದ್ರೆ, ತಾರ್ಕಿಕವಾಗಿ ಯೋಚಿಸಿದರೆ ನಮ್ಮ ನಾಗರಿಕತೆ ಎಷ್ಟೊಂದು ಹಿಂದಿನದು ಪ್ರಶ್ನೆಗೆ ಉತ್ತರ ಸಿಗುತ್ತೆ.

ಮರೆಯಲಾರದ ದಿನಗಳು......Ramesh Kumar ಅಂತಾರೆ...

ee mannige naa chiraruni....

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails