ನಾಡಿರುವುದು ನಮಗಾಗಿ...

ನಮ್ಮ ಮನೇಲಿ ಬಂದಿರೋರು ನಮ್ಮ ಭಾಷೇಲಿ ಮಾತಾಡಿ, ನಮ್ಮ ನುಡಿಯಲ್ಲೇ ವ್ಯವಹಾರ ಮಾಡಿ ಅಂತ ಹಕ್ಕೊತ್ತಾಯ ಮಾಡೋ ದುಸ್ಥಿತಿ ಭವ್ಯ ಭಾರತದಲ್ಲಿ ಮಾತ್ರಾ ಬರೋಕೆ ಸಾಧ್ಯ ಅನ್ಸುತ್ತೆ! ಒಂದು ಸಹಜವಾಗಿರಬೇಕಾದ ವ್ಯವಸ್ಥೇನ ಜಾರಿ ಮಾಡಕ್ ಮುಂದಾದ್ರೆ ದೊಡ್ ದೊಡ್ ಟಿವಿ ಚಾನಲ್ಲೋರು ಅದೊಂದು ವಿಚಿತ್ರವಾದ ಬೆಳವಣಿಗೆ ಅನ್ನೋ ಥರ ಮಾತಾಡೋದು ಎಂಥಾ ತಮಾಷೆ ಅಲ್ವಾ ಗುರು?

ನಮ್ಮೂರ ವ್ಯವಸ್ಥೆ ಇರೋದು ನಮಗಾಗಿ!

ಪ್ರಪಂಚದ ಯಾವ ಮೂಲೇಲೆ ಆಗಲಿ, ಯಾವ ನಾಗರೀಕತೆಯೇ ಆಗಲಿ ಅಲ್ಲಿರೋ ಜನಗಳ ಭಾಷೇಲಿ ಅಲ್ಲಿನ ವ್ಯವಸ್ಥೆಗಳೆಲ್ಲಾ ಇರೋದು ಸಹಜವಾದದ್ದು. ಹಾಗೊಂದು ಪ್ರದೇಶ ಇದ್ದಾಗ ಅಲ್ಲಿಗೆ ಬೇರೆ ಬೇರೆ ಕಾರಣದಿಂದ ವಲ್ಸೆ ಬರೊ ಜನ ಆ ಪ್ರದೇಶದ ವ್ಯವಸ್ಥೆಗೆ ಹೊಂದಿಕೊಳ್ಳಬೇಕೇ ಹೊರತು ಅಲ್ಲಿ ತಮ್ಮತನಾನ ಮೆರೆಸಕ್ಕೆ ಹೋಗಬಾರದು. ಹಾಗೆ ಮಾಡೋದು ಆಯಾ ಪ್ರದೇಶದ ಮೇಲೆ ನಡ್ಸೋ ದಾಳೀನೇ ಆಗುತ್ತೆ. ಇಂಥಾ ದಾಳೀನ ತಡ್ಯೋ ವ್ಯವಸ್ಥೇನ ಆ ಪ್ರದೇಶದ ಆಡಳಿತಗಳು ರೂಪಿಸಿಕೊಳ್ಳೋದು, ಆದೇಶಗಳ ಮೂಲಕ ಜಾರಿಗೆ ತರೋದು ಸಹಜವಾದದ್ದೇ ಆಗಿದೆ. ಫ್ರಾನ್ಸ್ ದೇಶಕ್ ಹೋಗಿ ಫ್ರೆಂಚ್ ಭಾಷಿಕರ ಜೊತೆ ಫ್ರೆಂಚಲ್ಲಿ ವ್ಯವಹರಿಸ್ದೇ ಇರೋದು ಯಾವ ವಲಸಿಗನ ಹಕ್ಕೂ ಆಗಲ್ಲ. ಅದು ಫ್ರೆಂಚರ ಹಕ್ಕಿನ ಮೇಲಿನ ಆಕ್ರಮಣಾ ಆಗುತ್ತೆ ಅಷ್ಟೆ. ಒಟ್ನಲ್ಲಿ ಒಂದು ನಾಡಿನ ವ್ಯವಸ್ಥೆ ಇರೋದು ಆ ನಾಡಿಗರಿಗಾಗೇ ಹೊರತು ವಲಸೆ ಬಂದಿರೋರಿಗಲ್ಲ!!

ಆಡಳಿತಗಾರರು ಕೇಳ್ಕೋಬೇಕಾದ್ದು...

ಕನ್ನಡದ ನೆಲದಲ್ಲಿ ಇರೋ ಯಾವುದೇ ಸಂಸ್ಥೆ ಇರೋದೆ ಈ ಜನರ ಅನುಕೂಲಕ್ಕಾಗಿ ಅಲ್ವಾ? ಅಷ್ಟರ ಮೇಲೆ ಹೊರಗಿಂದ ಬಂದಿರೋರು ನಮ್ಮ ಭಾಷೇ ಕಲೀಬೇಕಾದ್ದೇ ಸರಿ ಅಲ್ವಾ? ಒಂದೇ ದಿನಕ್ ಕಲಿಯಕ್ ಆಗಲ್ಲಾ ಅಂತಲೋ ಪ್ರವಾಸಿಗರ ಅನುಕೂಲಕ್ಕಾಗಿ ಅಂತ್ಲೋ ಇಂಗ್ಲಿಷ್ ಭಾಷೇಲೂ ಚಿಕ್ಕದಾಗಿ ಬೋರ್ಡ್ ಬರ್ದಿದ್ರೆ ಸಾಲ್ದಾ? ಅನ್ನೋ ಪ್ರಶ್ನೆಗಳನ್ನೆಲ್ಲಾ ಸಂಬಂಧಿಸಿರೋ ಇಲಾಖೆಗಳೂ ಅಧಿಕಾರಿಗಳೂ ಕೇಳ್ಕೋಬೇಕು ಗುರು! ನಿಜಾ ಅಂದ್ರೆ ಬೆಂಗಳೂರಿನ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ಕೊಡಬೇಕು ಅಂತಿರೋ ಆದೇಶಾನಾ ಜಾರಿ ಮಾಡಕ್ಕೆ ಪಾಲಿಕೆಗೂ ಸರ್ಕಾರಕ್ಕೂ ಗಟ್ಟಿ ಮನಸ್ಸಿರೋದು ಇದುವರೆಗೂ ಕಂಡಿಲ್ಲ. ಇದ್ದಿದ್ರೆ ಈಗ ಅಂಥಾ ಅಂಗಡಿಗಳಿಗೆ ನೋಟೀಸ್ ಕೊಡೋ ಪರಿಸ್ಥಿತಿ ಬರ್ತಾ ಇರಲಿಲ್ಲ.

ವಲಸಿಗ ಕೇಳ್ಕೋಬೇಕಾದ್ದು...

ತಾನು ಹೊಟ್ಟೆಪಾಡಿಗೆ ಬೇರೆ ಪ್ರದೇಶಕ್ಕೆ ಬಂದಾಗ ಆ ಪ್ರದೇಶದ ಅತಿಥೀನೇ ಹೊರತು ಯಜಮಾನ ಅಲ್ಲ ಅಲ್ವಾ? ತಾ ಬಂದಿರೋ ನಾಡಲ್ಲಿರೋ ಸಂಸ್ಕೃತಿ, ನುಡಿ, ವ್ಯವಸ್ಥೆಗಳಿಗೆ ಹೊಂದಿಕೊಂಡು ನಡೆಯೋದೇ ಸರಿಯಾದ ಧರ್ಮ ಅಲ್ವಾ? ಆ ನಾಡಿನ ಜನರ ನುಡಿಯಲ್ಲಿ ಸೇವೆ ಕೊಡಬೇಕಾದ್ದು ತನ್ನ ಮೊದಲ ಕರ್ತವ್ಯ ಅಲ್ವಾ? ಆ ನಾಡಿಗರ ನುಡಿನ ನಾನ್ಯಾಕೆ ಬಳುಸ್ಲಿ, ನಂಗೆ ಬೇಕಾದ ಭಾಷೇಲಿ ಬೋರ್ಡ್ ಹಾಕ್ತೀನಿ, ವ್ಯಾಪಾರ ಮಾಡ್ತೀನಿ ಅನ್ನೋದು ಅನ್ನ ಕೊಟ್ಟ ಮನೆಯ ಗಳ ಎಣ್ಸೋ ಬುದ್ದಿ ಅಲ್ವಾ? ಅದು ನಾ ಮಾಡೋ ದೇಶದ್ರೋಹ ಅಲ್ವಾ? ಅಂತ ವಲಸಿಗ ಪ್ರಶ್ನೆ ಮಾಡ್ಕೋಬೇಕು ಗುರು!

ನಾಡಿಗ ಕೇಳ್ಕೋಬೇಕಾದ್ದು...

ಈ ನಾಡಲ್ಲಿ ಇರೋ ಪ್ರತಿಯೊಂದೂ ತನ್ನ ಅನುಕೂಲಕ್ಕಾಗಿ, ತನ್ನ ಏಳಿಗೆಗೆ ಪೂರಕವಾಗಿ ಇರಬೇಕಾದದ್ದು ಅಲ್ವಾ? ನನ್ನ ನಾಡಲ್ಲಿ ನನ್ನ ಭಾಷೇಲಿ ಸೇವೆ ಕೊಡಬೇಕಾದ್ದು ಪ್ರತಿಯೊಂದು ಸಂಸ್ಥೆಯ ಹೊಣೆಗಾರಿಕೆ ಅಲ್ವಾ? ಇದನ್ನು ನಿರಾಕರಿಸೋದು ಶಿಕ್ಷಾರ್ಹ ಅಪರಾಧ ಅನ್ನೋ ಕಾಯ್ದೇನ ನಮ್ಮ ಸರ್ಕಾರ ತರಲೇಬೇಕಲ್ವಾ? ನನ್ನ ನಾಡಿನ ಸರ್ವಭೌಮ ಭೌಷೆ ನನ್ನ ಭಾಷೇನೆ ಅಲ್ವಾ? ಇಲ್ಲಿರೋ ಅಂಗಡಿ ಮುಂಗಟ್ಟುಗಳ ಬೋರ್ಡು ನಮ್ಮ ಭಾಷೇಲಿರಬೇಕಾದದ್ದೇ ಸರಿ ಅಲ್ವಾ? ಅಂತ ತನ್ನನ್ನು ತಾನೇ ಕೇಳ್ಕೋ ಬೇಕು ಗುರು!!

ಇದನ್ನೆಲ್ಲಾ ನಾವೂ ನೀವು ಕೇಳ್ಕೊಂಡು ಆಮೇಲೆ ಮಹಾರಾಷ್ಟ್ರದಲ್ಲಿ ನಡೀತಿರೋದು ಏನಪ್ಪಾ ಅಂತ ವಸಿ ಕಣ್ ಬುಟ್ ನೋಡುದ್ರೆ ಯಾವ್ದು ಸರಿ? ಯಾವ್ದು ತಪ್ಪು? ಯಾರು ದೇಶ ಒಡೀತಿರೋರು? ಯಾವುದು ಸರಿಯಾದ ವ್ಯವಸ್ಥೆ? ಅನ್ನೋ ಪ್ರಶ್ನೆಗಳ್ಗೆಲ್ಲಾ ಚಕಚಕಾಂತ ಉತ್ರ ಹೊಳೀದಿದ್ರೆ ಭಾರತ ದೇಶದ ಮೇಲ್ ಆಣೆ ಗುರು!!

3 ಅನಿಸಿಕೆಗಳು:

clangorous ಅಂತಾರೆ...

idu ondu olleya BeLavaNige guru, Kannada Pradhikarakke namma namanagaLu, heege ee niyamavannu antharashtriya vimaana nildaNadallu ( BAIL ) tandare tumba santoshavagutte guru. BAIL nalli yesto maLigegalu kannadana tatsara madive guru, ad yaake alliro yella nama PhalakagaLallu kannadakke chikkadaada lipiyalli moorane sthana guru. idu kannada pradhikarada gamanakke innu bandilla annodu vishadaneeya.

Kannadabhimani

clangorous ಅಂತಾರೆ...

adu BIAL aagirbeku....aksharagaLu adali badaliyaagive. Tappigagi kshame irali

Anonymous ಅಂತಾರೆ...

ಮಹಾರಾಷ್ಟ್ರದಲ್ಲಿ ನಡೀತಿರೋದು ಏನಪ್ಪಾ ಅಂದ್ರೆ - ಜತ್ತಿ ಬಿದ್ರು ಮೀಸೆ ಮಣ್ಣಾಗ್ಲಿಲ್ಲ. ಅನ್ನೋ ವಾದ ಅವ್ರುದು..... ಮುಂಬೈನ ಬೊಗತಕ್ಕೆ ಕೊಟ್ಟು...... ಕರ್ನಾಟಕಕ ಹಲವು ಪ್ರದೇಶಗಳನ್ನ ಕೇಂದ್ರ ಸರ್ಕಾರದ ಆಡಳಿತಕ್ಕೆ ಒಳಪಡಿಸಬೇಕು ಅನ್ನೋದು....

ತಮಿಳರು ದೇಶ ಒಡೆಯೋ ಕೆಲ್ಸನ ಚೆನ್ನಾಗಿ ಮಾಡ್ತಾವ್ರೆ ಗುರು....

ಕನ್ನಡಕ್ಕೆ ಸಿಗಬೇಕಾದ ಶಾಸ್ತ್ರಿಯ ಸ್ಥಾನ ಮಾನದ ವಿಷಯದಲ್ಲಿ..... ತಮಿಳುನಾಡು ಮತ್ತು ಕೇಂದ್ರ ಸರ್ಕಾರ ಮಾಡ್ತಿರೋದು ತಪ್ಪು.

ಶತ್ರು ಆಶ್ರಯ ಕೇಳಿದ್ರು..... ಅಂಜಿಕೆ ಇಲ್ಲದೇ ಆಶ್ರಯ ನೀಡೋ ವ್ಯವಸ್ಥೆ ಇರೋ ಕರ್ನಾಟಕದ ವ್ಯವಸ್ಥೆ ಸರಿಯಾದದ್ದು.

- ಮಂಜುನಾಥ.ಜಿ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails