ಯುವಕರಿಗೆ ಕನ್ನಡ ಬೇಡಾ ಅಂತ ಭಾವಿಸಿರೋ ಯುವದಸರಾ!


ಪ್ರತಿವರ್ಷದಂತೆ ಈ ಸಾರೀನೂ ಮೈಸೂರು ದಸರಾದ ಅಂಗವಾಗಿ ಯುವ ದಸರಾನ ಆಚರುಸ್ತಾ ಇದಾರೆ. ಆದ್ರೆ ನಾಡಿನ ಯುವ ಜನರ ಪ್ರತಿಭೆಗಳಿಗೆ ವೇದಿಕೆ ಆಗ್ಬೇಕಾಗಿದ್ದ ಈ ಯುವದಸರಾದ ಈ ವರ್ಷದ ಕಾರ್ಯಕ್ರಮಗಳ ಪಟ್ಟಿ ನೋಡುದ್ರೆ ಎಷ್ಟು ಚೆನ್ನಾಗಿ ಆಯೋಜಕರು ಎಡವಿದ್ದಾರೆ ಅಂತ ಗೊತ್ತಾಗುತ್ತೆ ಗುರು!

ಕನ್ನಡಿಗ ಕಲಾವಿದರಿಗೆ ಮನ್ನಣೆ ಇಲ್ಲ
ಈ ಕಾರ್ಯಕ್ರಮದ ಮೂಲಕ ಭಾರತದ ಪ್ರತಿಭೆಗಳನ್ನು ಮೈಸೂರಿಗರಿಗೆ ಪರಿಚಯಿಸುತ್ತೇವೆ ಅಂತ ಹೇಳ್ಕೊಂಡು ಇವ್ರು ಪ್ರತಿವರ್ಷ ಆಯೋಜಿಸೋ ಕಾರ್ಯಕ್ರಮಗಳಲ್ಲಿ ಪರಭಾಷಿಕರಿಗೇ ಮೊದಲ ಮಣೆ ಹಾಕ್ತಾ ಬಂದಿದಾರೆ. ಈ ಕಲಾವಿದರು ನೀಡೋ ಕಾರ್ಯಕ್ರಮದಲ್ಲೂ ಕನ್ನಡ ಕಣ್ಮರೆ, ಅಕಸ್ಮಾತ್ ಇವರು ದೊಡ್ದ ಮನಸ್ಸು ಮಾಡಿದರೆ ಒಂದೋ ಎರಡೋ ಕನ್ನಡ ಹಾಡುಗಳ್ನ ಹಾಡಬಹುದೇನೋ... ಈ ವರ್ಷಾನೆ ನೋಡಿ, ವಸುಂಧರಾ ದಾಸ್, ಶಿವಮಣಿ, ಕೈಲಾಸ್ ಖೇರ್, ಜಾಗೋ ಹಿಂದುಸ್ಥಾನಿ, ಶಂಕರ್ ಮಹದೇವನ್... ಇವ್ರು ಮಧ್ಯೆ ಕಾಣೋ ಒಂದೇ ಕನ್ನಡದ ಹೆಸರು ರಾಜೇಶ್ ಕೃಷ್ಣನ್.

ಕನ್ನಡ ಕಾರ್ಯಕ್ರಮಗಳಿಗೂ ಮನ್ನಣೆಯಿಲ್ಲ

ಕಲಾವಿದರೇ ನಮ್ಮೋರಲ್ಲದಿದ್ದಾಗ ಕಾರ್ಯಕ್ರಮ ನಮ್ಮದಾಗಿರುತ್ಯೇ? ಎಲ್ಲಾ ಕಾರ್ಯಕ್ರಮದ ನಿರೂಪಣೆಯೂ ಇಂಗ್ಲಿಷ್ ಭಾಷೇಲಿ ಮುಖ್ಯವಾಗಿತ್ತು. ಆಗಾಗ ಮತ್ತೆ ಜನ ಕೂಗ್ತಾರೆ ಅಂತ ಕನ್ನಡದಲ್ಲೂ ಮಾತಾಡ್ತಾ ಇದ್ರು. ಕನ್ನಡದ ಜನಕ್ಕೆ ಮಾಡ್ತಿರೋ ಕಾರ್ಯಕ್ರಮಾನ ಕನ್ನಡದಲ್ಲಿ ಯಾಕೆ ಮಾಡ್ಬಾರ್ದಾಗಿತ್ತು? ಪ್ರವಾಸಿಗಳಿಗೆ ಕನ್ನಡ ಬರಲ್ಲ ಅದುಕ್ಕೆ ಅಂದ್ರೆ ಹಾಗಾದ್ರೆ ಪ್ರವಾಸಿಗಳಿಗೆ ಕನ್ನಡದ ಪ್ರತಿಭೆಗಳನ್ನು ಪರಿಚಯ ಮಾಡಿಕೊಡೋ ದೃಷ್ಟಿಯಿಂದ ಹೆಚ್ಚೆಚ್ಚು ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಬೇಕಿತ್ತಲ್ವಾ? ಹೊರನಾಡಿನ ಪರಭಾಷೆಯ ಕಲಾವಿದರು ನೀಡಿದ ಕಾರ್ಯಕ್ರಮದಲ್ಲಿ ಸಿಂಹಪಾಲು ಹಿಂದಿ ಹಾಡುಗಳೇ. ರಾಜೇಶ್ ಒಬ್ಬರ ಕಾರ್ಯಕ್ರಮ ನೋಡ್ದಾಗ ಮಾತ್ರಾ ಈ ಯುವ ದಸರಾ ನಮ್ಮದು ಅನ್ನುಸ್ತಿತ್ತು. ಉಳಿದಂತೆ ಅದು ಪರದೇಶಿಗಳದ್ದಾಗಿತ್ತು ಗುರು!

ಕನ್ನಡ ಯುವಕ್ರು ಅಂದ್ರೆ ಕನ್ನಡದಿಂದ ದೂರ ಅಂತ್ಲಾ?
ಈ ಕಾರ್ಯಕ್ರಮದ ಆಯೋಜಕರು ಮೈಸೂರಿನ ಯುವಕ್ರು ಅಂದ್ರೆ ಕನ್ನಡಾನ ಮರ್ತು ಹೋಗ್ಬಿಟ್ಟಿದ್ದಾರೆ ಅಂದುಕೊಂಡಿದ್ದಾರೆ ಅನ್ಸುತ್ತೆ. ಹೀಗೆ ಒಂದು ಪೀಳಿಗೇನ್ನೆ ತಾಯ್ನುಡಿಯಿಂದ ದೂರಾ ಮಾಡಿ ಮನರಂಜನೆ ಅಂದ್ರೆ ಹಿಂದೀ ಅಂತ ತಲೇಲಿ ತುಂಬ್ತಿರೋ ಪಾಪದ ಕೆಲಸ ಮಾಡ್ತಿದಾರೆ ಇವ್ರು. ಇದು ಹೀಗೇ ನಡ್ಕಂಡ್ ಹೋದರೆ ಮುಂದಿನ ಕೆಲವೇ ವರ್ಷದಲ್ಲಿ ಕನ್ನಡ ಅನ್ನೋದು ದಸರಾ ಕಾರ್ಯಕ್ರಮಗಳಲ್ಲಿ ಮರೆಯಾಗೋದು ಗ್ಯಾರಂಟಿ. ಮತ್ತೂ ಮುಂದಿನ ದಿನಗಳಲ್ಲಿ ಕನ್ನಡ ಅನ್ನೋದು ಮನರಂಜನೆಗೇ ನಾಲಾಯಕ್ಕಾದ ಭಾಷೆ ಅನ್ಸಿಕೊಳ್ಳಲ್ವಾ? "ಇಡೀ ಭಾರತ ಒಂದು, ಒಂದು... ಅದ್ಕೆ ನ್ಯಾಶನಲ್ ಲೆವೆಲ್ಲಿನ ಮನರಂಜನೆ ತೊಗೊಳ್ಳಿ " ಅಂತಾ ನೈಸಾಗಿ ಹಿಂದೀನ ಹೇರೋ, ಹಿಂದಿ ಮನರಂಜನೆಗೆ ಮಾರುಕಟ್ಟೆ ಕಟ್ಟಿಕೊಡೋ ಹುನ್ನಾರ ಅಲ್ವಾ ಗುರು ಇದು?

ಕನ್ನಡ ಸಂಸ್ಕೃತಿ ಅಂದ್ರೆ ಇದೇನಾ?
ನಮ್ಮೂರ ನಾಡಹಬ್ಬದಲ್ಲಿ ಹೊರಗಿನ ಕಲಾವಿದರು ಇರಬಾರ್ದು ಅನ್ನೋ ವಾದ ನಮ್ಮದಲ್ಲ. ಆದರೆ ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸೋ ಕಾರ್ಯಕ್ರಮಗಳು, ನಮ್ಮ ದೇಸಿ ಪ್ರತಿಭೆಗಳು ತಮ್ಮ ಪ್ರತಿಭೇನ ಪ್ರಪಂಚದ ಮೂಲೆ ಮೂಲೆಯಿಂದ ಬಂದಿರೋ ಪ್ರವಾಸಿಗಳಿಗೆ ತೋರಿಸೋ ಅವಕಾಶ ಇರಬೇಕು ಅಲ್ವಾ ಗುರು? ಬರೀ ಕನ್ನಡ ಸಂಸ್ಕೃತಿ ಒಂದೇ ಅಲ್ಲ, ಯಾರಾದ್ರೂ ಕನ್ನಡಿಗರು ಪಾಶ್ಚಿಮಾತ್ಯ ಸಂಗೀತದಲ್ಲಿ ಪ್ರವೀಣರಾಗಿದ್ರೆ ಅಂಥವರ ಕಾರ್ಯಕ್ರಮಾನೂ ಇಡ್ಲಿ, ಯಾರು ಬೇಡಾ ಅಂದ್ರು. ಅದು ಬಿಟ್ಟು ಬರೀ ಹೊರಗಿನವ್ರಿಗೇ ಮಣೆ ಹಾಕೋದಾದ್ರೆ ಮೈಸೂರು ದಸರಾ ಅನ್ನೋದು ಅದ್ಹೇಗೆ ಕನ್ನಡಿಗರ ನಾಡಹಬ್ಬ ಆಗುತ್ತೆ? ಚಲನಚಿತ್ರ ಗೀತೆ, ಭಾವಗೀತೆ, ಜನಪದ ಗೀತೆ, ಜನಪದ ಕಲೆಗಳು, ಪಾಶ್ಚಿಮಾತ್ಯ ಸಂಗೀತ, ವಾದ್ಯಸಂಗೀತ, ನಾಟಕ, ಶಾಸ್ತ್ರೀಯನೃತ್ಯ, ಜನಪದ ನೃತ್ಯ, ಸಿನಿಮಾ ನೃತ್ಯ... ಇಂಥಾ ಹತ್ತಾರು ಕಲೆಗಳಲ್ಲಿ ಪರಿಣಿತಿ ಸಾಧುಸ್ತಾ ಇರೋ, ತಮ್ಮ ಪ್ರತಿಭೆಗೆ ಪ್ರೋತ್ಸಾಹ ಸಿಗಲೀ, ದಸರಾದಲ್ಲಿ ನಮಗೊಂದೇ ಒಂದು ಅವಕಾಶ ಸಿಗಲೀ ಅಂತ ಬಕಪಕ್ಷಗಳಂತೆ ಕಾಯ್ಕೊಂಡಿರೋ ಕನ್ನಡದ ಯುವಕ ಯುವತಿಯರನ್ನು ಕಡೆಗಣ್ಸೋದಾದ್ರೆ ಈ ಯುವ ದಸರಾ ಯಾಕೆ? ಮಣ್ ಹೊಯ್ಕೊಳ್ಳೋಕೆ... ಅಷ್ಟೆ.

7 ಅನಿಸಿಕೆಗಳು:

Anonymous ಅಂತಾರೆ...

ಕೇಳಿ ನೋಡಿ ಬೇಕಿದ್ರೆ.. ಇದು ಭಾರತದ ಹಬ್ಬ. ನಮ್ಮದು ಒ೦ದು ದೇಶ ಒ೦ದು ಸ೦ಸ್ಕೃತಿ... ಒ೦ದು ಒ೦ದು ಅನ್ಕೊ೦ಡು ದಸರಾನಲ್ಲಿ ಪೂರ್ತಿಯಾಗಿ ಕನ್ನಡವನ್ನು ಕಿತ್ತು ಒಗೆಯುತ್ತಾರೆ. ಈ ಮಟ್ಟಿಗೆ ಧೃಡವಾಗಿರುವ ಅವರ ಅಭಿಮಾನ ಶೂನ್ಯತೆ ನೋಡಿದ್ರೆ.. ಸ೦ಸ್ಕೃತಿ, ಭಾಷೆಯನ್ನು ಉಳಿಸಲು ಏನು ಅರ್ಹತೆ ಇರಬೇಕು ಅ೦ತ ಅವರಿಗೆ ತಿಳಿಸಿಕೊಡಬೇಕಾಗಿದೆ. ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದು ನಾಡು ನುಡಿ, ನಾಡಿನ ಪ್ರತಿಭೆಗಳಿಗೆ ಅನ್ಯಾಯವೆಸಗುತ್ತಿರುವ ಇವರನ್ನು ನಾವು ಕರೆ ನೀಡಿ ಪ್ರಶ್ನೆ ಮಾಡಬೇಕು. ಈ ರೀತಿಯಾಗಿಯಾದರೂ ಅವರ ಮನಸ್ಸಿನಲ್ಲಿ "ನಮ್ಮತನ" ಎನ್ನುವುದು ಏನು ಎ೦ದು ಅರಿವಾಗಲಿ. ನಾವು ಇವೆಲ್ಲವನ್ನೂ ಒಕ್ಕೊರಳಿನಿ೦ದ ಖ೦ಡಿಸದೇ ಇರುವುದು ಅಪರಾಧವೇ ಸರಿ. ಪ್ರತಿ ಪತ್ರಿಕೆಗಳಲ್ಲಿ, ಪ್ರತಿ ಮಾಧ್ಯಮಗಳಲ್ಲಿ ಇದರ ಖ೦ಡನೆ ಆಗಬೇಕು.

ಮೊದಲು ಇವರಿಗೆ ಏನ್ ಗುರು ಲೇಖನಗಳ ಪರಿಚಯ ಮಾಡಿಸಬೇಕಾಗಿದೆ. ಆಗ ಇವರು ಖ೦ಡಿತ ಸುಧಾರಿಸುತ್ತಾರೆ.

Anonymous ಅಂತಾರೆ...

ಗುರುಗಳೇ,

ಮೈಸೂರು ದಸರಾ ಕಮಿಟಿಗಳಲ್ಲಿ ನಿಮ್ಮಂತೆ ಯೋಚಿಸುವ ಜನರು ಇರಬೇಕಿತ್ತು.

ಹೀಗೆ ನಿದ್ದೇ ಹೋಗುತ್ತಿರುವ ಜನರನ್ನು ಎಚ್ಚರಿಸುತ್ತಿರಿ.

ನಿಮ್ಮ ಉದ್ದೇಶ ಈಡೇರಲಿ.

-ಶಂಕರ ಬಾಳಿಗ

clangorous ಅಂತಾರೆ...

naan munchina dasara website lekhanadalle heLdange....neevu aa karyakramagalanna nodidre alli idda namma kannadada yuvaka yuvathiyaru hindi/punjabi haadugaLa vyamohadalli kannadada maaraNA homa nadesuttiddare annodu spashTavaagi gocharisuttittu guru....

Unknown ಅಂತಾರೆ...

ನಮಸ್ಕಾರ..
ನನಗೆ ಸದ್ಯಕ್ಕೆ ಒ೦ದೇ ಒ೦ದು ಮಾತು ಜ್ನಾಪಕ ಬರ್ತಾ ಇದೆ.
ನಮ್ಮ ಭಾಷೆಯನ್ನು ಮೊದಲು ಪೋಷಿಸುವುದರ ಕಡೆಗೆ ಮೊದಲು ಗಮನ ಕೊಟ್ಟು ನ೦ತರ ಇನ್ನೊ೦ದು ಭಾಷೆಯನ್ನು ಪ್ರೀತಿಸುವುದರ ಕಡೆಗೆ ಗಮನ ಕೊಡಬಹುದು.

ಅಲ್ವೇ?

ಏನ೦ತೀರಿ?

-ಸತ್ಯ ಚರಣ ಎಸ್.ಎ೦.

Anonymous ಅಂತಾರೆ...

ನಮ್ಮವರು ಏಕೆ ಹೀಗೆ ಅಂತ ಅರ್ಥನೇ ಆಗೋದಿಲ್ಲ ... ಏನ್ ಹಿಂದಿ ರೋಗ ಇವರಿಗೆ ..
ಇನ್ನೊಂದು ವಿಷಯ ನಾನು ಗಮಿನಿಸಿರೋದು ಅಂದ್ರೆ ಅಂಗ್ಲ ಪ್ರತಿಗಲಲ್ಲಿ "Dasara" ಬದಲಿ
" Dusshera" ಅಂತ ಬರಿಯೋದು .ನೋಡಿದ್ರೆ ಸಕ್ಕತ್ ಬೇಜಾರ್ ಆಗುತೆ - ಪ್ರಶಾಂತ್

Anonymous ಅಂತಾರೆ...

nan magLu school nalli makara sankrantige PONGAL anta holiday kottiddare... infosys nalli ugadi badalu ONAM ge raja kodtare..kelidre ,, we are all indians antare..
ade bengali dasaradalli bari avara samskruti takka haage aacharaNe maadtare.. nanu nanna bhashe nanna rajya anno abhimaana elli tanaka baralovo, allivarge ivrigella buddi barolla.. yaavaga barutte andre, avara makkalige sigo kelsa hora raajyada jana kitkondaaga,, allivarge ellaru pseudo cosmopolitan assholes..

Anonymous ಅಂತಾರೆ...

sarvam reddymayam !

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails