ಪ್ರಾದೇಶಿಕ ಪಕ್ಷ ಅಂದ್ರೆ...

ಜಾತ್ಯಾತೀತ ಜನತಾ ದಳದೋರ ಒಂದು ಸಮಾವೇಶ ಬೆಂಗಳೂರಲ್ಲಿ ನಿನ್ನೆ ನಡೀತು. ಆ ಸಭೇಲಿ ಜೆಡಿಎಸ್ಸಿನ ರಾಜ್ಯಾಧ್ಯಕ್ಷರಾದ ಶ್ರೀ ಕುಮಾರಣ್ಣೋರು, ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ದ್ಯಾವೇಗೌಡರ ಸಮ್ಮುಖದಲ್ಲಿಯೇ "ತಮ್ಮದು ಪ್ರಾದೇಶಿಕ ಪಕ್ಷ, ನೀವೆಲ್ಲಾ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ" ಅನ್ನೋ ಹೇಳಿಕೆ ಕೊಟ್ರು! ಈ ಮಾತಿನ ನಿಜಾಯ್ತಿ ಬಗ್ಗೇನೆ ಅನುಮಾನ ಹುಟ್ತಿದೆ ಗುರು!

ನಾಡಿನ ಏಳಿಗೆ ಪ್ರಾದೇಶಿಕ ಪಕ್ಷದಿಂದಲೇ!

ನಿಜಾ, ಇವತ್ತು ನಮ್ಮ ನಾಡಿನ ಎಲ್ಲ ಸಮಸ್ಯೆಗಳ ಬೇರು ಹುಡುಕ್ಕೊಂಡು ಹೊರಟ್ರೆ ಕಾಣೋದು ಕನ್ನಡ- ಕನ್ನಡಿಗ-ಕರ್ನಾಟಕದ ಏಳಿಗೆಯನ್ನು ಭಾರತದ ಏಳಿಗೆಯಿಂದ ಭಿನ್ನ ಅಂದುಕೊಂಡಿರೋ ರಾಷ್ಟ್ರೀಯ ಪಕ್ಷಗಳ ನಿಲುವುಗಳು. ಕರ್ನಾಟಕದ ಪರವಾಗಿ ದನಿ ಎತ್ತುದ್ರೆ ಪಕ್ಕದ ರಾಜ್ಯದಲ್ಲಿ ಎಲ್ಲಿ ನೆಲೆ ಕಳ್ಕೋಬೇಕಾಗುತ್ತೋ ಅನ್ನೋ ಆತಂಕದಿಂದಲೇ ಇವುಗಳು ನಾಡಹಿತಕ್ಕೆ ಅಗತ್ಯವಿರೋ ಗಟ್ಟಿ ನಿಲುವು ತೊಗೊಳ್ಳೋದ್ರಲ್ಲಿ ಸೋತು ನಮ್ಮ ಏಳಿಗೆಯನ್ನು ಕಡೆಗಣ್ಸಿವೆ. ಇದಕ್ಕೆ ಪರಿಹಾರ ನಮ್ಮದೇ ನಾಡಿನ ಪ್ರಾದೇಶಿಕ ಪಕ್ಷ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಅದು ಎಂತಹ ಪಕ್ಷ ಆಗಿರಬೇಕು ಅನ್ನೋದೇ ನಮ್ಮ ಮುಂದಿರೋ ಪ್ರಶ್ನೆ.

ಪ್ರಾದೇಶಿಕ ಪಕ್ಷವೆಂದರೆ...
ಪ್ರಾದೇಶಿಕ ಪಕ್ಷಾ ಅಂದ್ರೆ ಮತ ಗಳಿಸಬೇಕು ಅಂತ ಸಮಾಜಾನಾ ಜಾತಿ ಮತಗಳ ಆಧಾರದ ಮೇಲೆ ಒಡೆಯೋದಾಗಲೀ, ವೋಟು ಸಿಗಲಿ ಅಂತ ವಲಸಿಗರಿಂದ ತುಂಬಿರೋ ಕೊಳೆಗೇರಿಗಳನ್ನು ಸಕ್ರಮ ಮಾಡಿ ಅವರಿಗೆ ಹಕ್ಕುಪತ್ರ ನೀಡ್ತೀವಿ ಅನ್ನೋದಾಗಲೀ, ದಿಲ್ಲೀಲಿ ಸಲ್ಲಲಾಗದ ಕಾರಣದಿಂದ ಇಲ್ಲಿ ಪ್ರಾದೇಶಿಕ ಪಕ್ಷ ಅನ್ನೋ ದೊಂಬರಾಟಗಳಾಗಲೀ ಅಲ್ಲ ಗುರು! ಕನ್ನಡ-ಕನ್ನಡಿಗ-ಕರ್ನಾಟಕಗಳನ್ನು ಕೇಂದ್ರವಾಗಿ ಹೊಂದಿರುವ ಸಿದ್ಧಾಂತ ಈ ಪಕ್ಷದ್ದಾಗಿರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ನಾಡಿನ ಹಕ್ಕುಗಳನ್ನು ಉಳಿಸಿಕೊಳ್ಳಲು, ಹಿತವನ್ನು ಕಾಪಾಡಿಕೊಳ್ಳಲು ಟೊಂಕಕಟ್ಟಿ ನಿಂತಿರಬೇಕು. ಜಾತಿ, ಧರ್ಮ, ಮತಗಳನ್ನು ಮೀರಿದ ಕನ್ನಡತನದ ಸಿದ್ಧಾಂತದ ಬೆನ್ನೆಲುಬಿರಬೇಕು. ಇವೆಲ್ಲಾ ಇವತ್ತಿನ ಜಾತ್ಯಾತೀತ ಜನತಾದಳಕ್ಕೆ ಇದೆಯಾ? ಅಥ್ವಾ ಇವತ್ತಿನ ದಿವಸ ಕನ್ನಡಿಗರಲ್ಲಿ ಕನ್ನಡತನದ ಅರಿವು ಹೆಚ್ತಾಯಿದೆ, ಜನ ಪೊಳ್ಳು ರಾಷ್ಟ್ರೀಯತೆಗೂ ನಿಜವಾದ ರಾಷ್ಟ್ರೀಯತೆಗೂ ಇರೋ ವ್ಯತ್ಯಾಸ ಗುರುತ್ಸಕ್ಕೆ ಶುರು ಮಾಡ್ತಿದಾರೆ, ಇವತ್ತು ಕನ್ನಡದ ಹೆಸರು ಹೇಳುದ್ರೆ, ಕನ್ನಡಿಗರ ಸ್ವಾಭಿಮಾನದ ಹೆಸರು ಹೇಳುದ್ರೆ ಯಶಸ್ವಿಯಾಗಿ ರಾಜಕೀಯ ಮಾಡಬಹುದು ಅನ್ನೋ ದುರಾಲೋಚನೇನಾ? ಈ ಪ್ರಶ್ನೆಗಳಿಗೆಲ್ಲಾ ಉತ್ತರ ಕಂಡುಕೊಳ್ಳದಷ್ಟು ದಡ್ಡರು ನಮ್ಮ ಜನಾ ಅಂದ್ಕೊಂಡಿದಾರಾ ಇವ್ರು ಗುರೂ?

7 ಅನಿಸಿಕೆಗಳು:

Anonymous ಅಂತಾರೆ...

ಸರಿಯಾಗ್ ಹೇಳದೆ ಗುರು,
ಇದೇ ಕುಮಾರ ಸ್ವಾಮಿ ಪಕ್ಷ ಬೆಳಗಾವಿಯಲ್ಲಿ MES ಜೊತೆ APMC ಅಧಿಕಾರ ಹಂಚಕೊಂಡು ಕನ್ನಡ ತಾಯಿಗೆ ದ್ರೋಹ ಬಗೆಯೋ ಕೆಲಸ ಮಾಡಿದ್ದನ್ನ ಮರೆಯೊಕಾಗುತ್ತಾ?

ಅಧಿಕಾರದಲ್ಲಿದ್ದ ೨೦ ತಿಂಗಳು ಕನ್ನಡ-ಕರ್ನಾಟಕದ ಪರವಾಗಿ ಒಂದಾದ್ರೂ ಕೆಲ್ಸ ಮಾಡಿದ್ರಾ? ಬರೀ ಜಾತಿ-ಮೀಸಲಾತಿ-ದಿಲ್ಲಿ ದರ್ಬಾರಿನ ಹುಚ್ಚು,, ಇದರಲ್ಲೇ ಕಾಲ ಕಳೆದ ಗೋಸುಂಬೆಗಳು ಇವರು,,

ಈಗ ಕನ್ನಡಿಗನಲ್ಲಿ ಕನ್ನಡತನದ ಪ್ರಜ್ಞೆ ಜಾಗೃತಿ ಆಗ್ತಿರೋದನ್ನ ನೋಡಿ, ಕನ್ನಡದ ಹೆಸರಲ್ಲಿ ವೋಟ್ ಗಿಟ್ಟುತ್ತಾ ಅಂತಾ ನೋಡೊಕೆ ಇದೆಲ್ಲ ನಾಟಕ,, ಇವರ ಮಕಕ್ಕೆ ಉಗದು ಉಪ್ಪಿನಕಾಯಿ ಹಾಕಬೇಕು.

arun ಅಂತಾರೆ...

ನಿಜ ಗುರು

ನಮ್ಮ ದೇವೆ ಗೌಡ್ರು ಅವರು ಪ್ರಾದೇಶಿಕ ಪಕ್ಷ ಕಟ್ಟೊದು ಹಂಗಿರಲಿ ಮೊದಲು ಅವರ ಪಕ್ಷ ಬದ್ರ ಮಾಡ್ಕೊಳಿ. ಗೌಡ್ರ ಗದ್ದಲ ನೋಡಿ ಅವರ ಪಕ್ಷದಲ್ಲಿ ಸರಿಯಾಗಿ ಎಣಿಸಿದ್ರೆ ೪ ಜನ ಇಲ್ಲ ಆದ್ರು ನೆನ್ನೆ ಜನ ಮಾತ್ರ ಆ ಪಾಟಿ.

ಆದ್ರೆ ಸಮಾವೇಶ ನೊಡ್ದ್ಮೆಲೆ ಅವರು ಪ್ರಾದೇಷಿಕ ಪಕ್ಷ ಇರ್ರ್ಲಿ ವಾಹನಗಳಾ ಪಕ್ಷ ಮಾತ್ರ ನೆನ್ನೆ ಕಟ್ಟಿದ್ರು.

Anonymous ಅಂತಾರೆ...

೨೦ ತಿಂಗಳ ಆಡಳಿತ ಹಾಗೆ ಹೀಗೆ ಅಂತೀರಲ್ಲ ಈಗಿನ ಸರ್ಕಾರಕ್ಕೆ ಹೋಲಿಸಿದರೆ ಆ ೨೦ ತಿಂಗಳೇ ಚೆನ್ನಾಗಿತ್ತು. ನಿಮಗೆಲ್ಲ ಬರಿ ನೆಗಟಿವ್ ಪಾಯಿಂಟ್ ಗಳೇ ಕಾಣೋದು... ಬೆಳಗಾವಿ ಯನ್ನು ಮಹಾರಾಷ್ಟ್ರದವರು ನುಂಗೋಕೆ ಹೋಗುತ್ತಿದ್ದಾಗಲೆ ಕುಮಾರಣ್ಣ ಅಲ್ಲಿ ವಿಧಾನ ಸಭೆಯ ಸಮಾವೇಶ ನಡೆಸಿ ಬೆಳಗಾವಿನ ೨ನೇ ರಾಜಧಾನಿ ಮಾಡೋಕೆ ಹೊರಟರೆ ಈ ಯಡಿಯೂರಪ್ಪ ಬಂದಮೇಲೆ ಬೆಳಗಾವಿ ೨ನೇ ರಾಜಧಾನಿ ಅಲ್ಲ ಅಂತ ಹೇಳಿಕೆ ಕೊಟ್ಟ

Anonymous ಅಂತಾರೆ...

ಯಡ್ಯುರಪ್ಪನ್ಗೆ ಈನಿದ್ರು ಸೆಂಟರ್ ನಲ್ಲಿ bjp ಬರಲಿ ಅನ್ನೋದಷ್ಟೇ ಬೀಕಿರೋದು.. BJP ಏನಾದ್ರು ಬಂದ್ರೆ ಕನ್ನಡನ ಕರ್ನಾಟಕ ಮಾರ್ಬಿಡ್ತಾರೆ ಅನ್ಸತ್ತೆ.. ಆದ್ರೆ ನಮ್ ರಾಜ್ಯದಲ್ಲಿ ನಮ್ ರಾಜ್ಯಕ್ಕಾಗಿ ದುಡಿಯೂ ಒಂದ್ ಪಕ್ಷನೂ ಇಲ್ಲ...

Anonymous ಅಂತಾರೆ...

Did not BJP play the card of caste by trying to get support of Lingayats?

Isn't that casteism?

Anonymous ಅಂತಾರೆ...

ಹೌದು ಗುರು. ನಮ್ಮ ನಾಡು, ನುಡಿ, ನೆಲೆ ಜಲದ ರಕ್ಷಣೆಗೆ ಈ ನೆಲದ ಸತ್ವದಿಂದ ಹುಟ್ಟಿದ ಒಂದು ರಾಜಕೀಯ ಪಕ್ಷದ ಅಗತ್ಯವಿದೆ. ಅದು ಜೆಡಿಎಸ್‌ನಿಂದ ಸಾಧ್ಯವೇ ಹೊರತು ಬೇರಾವ ಪಕ್ಷದಿಂದಲೂ ಸಾಧ್ಯವಿಲ್ಲ. ಅದರಲ್ಲೂ ಕುಮಾರಸ್ವಾಮಿ ನಮ್ಮ ರಾಜ್ಯದ ಪ್ರಸ್ತುತ ಸ್ಥಿತಿಗತಿಗೆ ಹೇಳಿಮಾಡಿಸಿದಂತ ನಾಯಕರು. ಅವರ ೨೦ ತಿಂಗಳ ಆಡಳಿತ ಮತ್ತು ಯಡಿಯೂರಪ್ಪನವರ ೬ ತಿಂಗಳ ರಾಜಬಾರಕ್ಕೂ ಹೋಲಿಕೆ ಮಾಡಿ ನೋಡಿದಾಗ ಅದು ಸ್ಪಷ್ಟವಾಗುತ್ತದೆ.

Unknown ಅಂತಾರೆ...

good

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails