ತೆಲುಗು ಅಕಾಡೆಮಿಯಿಂದ ಕನ್ನಡಿಗರ ಕಿವಿ ಮೇಲೆ ಲಾಲ್ಬಾಗ್

ಮೊನ್ನೆ ಮೊನ್ನೆಯ ಮಾಧ್ಯಮದ ವರದಿಯೊಂದರ ಪ್ರಕಾರ ಕರ್ನಾಟಕ ತೆಲುಗು ಅಕಾಡೆಮಿಗೆ ಎಣಿಸೋದು ಮರೆತುಹೋಗಿ ಕರ್ನಾಟಕದಲ್ಲಿ ೧.೩೫ ಕೋಟಿ ತೆಲುಗರಿದ್ದು, ಈ ಸದ್ಯದ ಕರ್ನಾಟಕದ ವ್ಯವಸ್ಥೆಯಲ್ಲಿ ಅವರ ಶೈಕ್ಷಣಿಕ ಹಾಗೂ ಸಾ೦ಸ್ಕೃತಿಕ ಅಭಿವೃದ್ಧಿ ಆಗ್ತಾ ಇಲ್ಲ ಅಂತಾ ಕಿವಿ ಮೇಲೆ ಲಾಲ್ಬಾಗ್ ಮಡಗೋಕೆ ಹೊರಟಿರೋ ಇವರ ಬಗ್ಗೆ ಏನ್ ಹೇಳೋದು ಗುರು?

೨೦೦೧ ನೆಯ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ನೆಲೆಸಿರುವ ತೆಲುಗು ಮಾತೃ ಭಾಷೆ ಆಗಿರೋರ ಸ೦ಖ್ಯೆ ೩೬ ಲಕ್ಷ ಅ೦ದರೆ ಸುಮಾರು ೬% ಮಾತ್ರ. ಈ ೩೬ ಲಕ್ಷ ಜನ್ರು ಅಕಾಡೆಮಿಗೆ ಅದೆಂಗೆ ೧.೩೫ ಕೋಟಿಯಾಗಿ ಕಂಡ್ರು ಅನ್ನೋದೇ ಒಂದು ಸೋಜಿಗ. ಅದೇನಾದ್ರೂ ನಾಕ್-ನಾಕ್ ಕಾಣ್ಸೋ ಕನ್ನಡ್ಕ ಏನಾರ ಆಕ್ಕಂಡಿದ್ರಾ ಇವ್ರು? ಇರ್ಲಿ. ಈ ೬% ಜನಾನೂ ಏನ್ ನಿನ್ನೆ ಮೊನ್ನೆ ಬಂದವರಲ್ಲ, ಹತ್ತಾರು-ನೂರಾರು ವರ್ಷಗಳ ಹಿಂದೆನೇ ಬಂದು ಇಲ್ಲಿ ನೆಲೆಗೊಂಡು ಕನ್ನಡಿಗರೇ ಆಗೋಗಿರೋರು. ಅಂತಾದ್ರಲ್ಲಿ, ಕಳೆದ ೫-೧೦ ವರ್ಷದಲ್ಲಿ ವಲಸೆ ಬಂದ ತೆಲುಗರನ್ನ ಇಲ್ಲಿನ ಮುಖ್ಯ ವಾಹಿನಿಗೆ ಸೇರೋ ಹಂಗೆ ಮಾಡೋದು ಬಿಟ್ಟು, ನಾವು ಒಂದೂವರೆ ಕೋಟಿ ಇದೀವಿ, ನಮ್ಮ ಉದ್ಧಾರ ಕನ್ನಡದಿಂದ ಆಗಲ್ಲ ಅನ್ನೋ ಹಸಿ ಸುಳ್ಳು ಹೇಳ್ತಾ, ಇಲ್ಲಿ ನೆಲೆಗೊಂಡು ಕನ್ನಡಿಗರೇ ಆಗಿರೋರನ್ನು "ನೀನು ತೆಲುಗ, ನೀನು ಬೇರೆ, ನೀನು ಕನ್ನಡಿಗನಲ್ಲ, ನೀನು ಹೊರಗಿನವನು, ನಿನ್ನ ಮನೆ ಅಲ್ಲಿದೆ" ಅಂತ ಪ್ರತ್ಯೇಕತೆ ತುಂಬಿ ಕನ್ನಡದ ಮುಖ್ಯವಾಹಿನಿಗೆ ಸೇರದಂತೆ ತಡೆಯೋ ಮನೆ ಮುರುಕ ಕೆಲ್ಸ ಇದು.

ನೂರಾರು ವರ್ಷಗಳಿ೦ದ ಇಲ್ಲೇ ನೆಲೆಸಿರುವ ತೆಲುಗು ಮಾತಾಡೋರು ಕನ್ನಡದ ಬಗ್ಗೆ ಅಪಾರ ಅಭಿಮಾನ ಇಟ್ಕೊ೦ಡು ಕನ್ನಡಿಗರೇ ಆಗೋಗಿದ್ದಾರೆ. ಮನೆಮಾತು ತಲುಗಾಗಿದ್ರೂ ಕನ್ನಡಕ್ಕಾಗಿ ದುಡಿದ ಮಹನೀಯರು ತು೦ಬಾ ಇದಾರೆ. ಆ ಮಹನೀಯರಲ್ಲಿ ಕೆಲವ್ರು ದೇವುಡು ನರಸಿಂಹ ಶಾಸ್ತ್ರಿ, ಮ.ರಾಮಮೂರ್ತಿ, ವೀರಕೇಸರಿ ಸೀತಾರಾಮ ಶಾಸ್ತ್ರಿ, ಬೀಚಿ, ಟಿ ಎಸ್ ವೆಂಕಣ್ಣಯ್ಯ, ಲಲಿತಾ ಶಾಸ್ತ್ರಿ ಮು೦ತಾದವರು. ಇನ್ನುಳಿದ ವಲಸೆ ಬ೦ದ ತೆಲುಗರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡೋ ಬದಲು ತೆಲುಗು ಬರೀ ಮನೆಮಾತಾಗಿರೋ ಕನ್ನಡಿಗರನ್ನೂ ಕೂಡ ಕನ್ನಡಿಗರ ಮೇಲೆ ಎತ್ತುಕಟ್ಟೋ ಪ್ರಯತ್ನ ಅಲ್ಲದೆ ಇದು ಇನ್ನೇನು ಗುರು ? ಇಂತ ಪ್ರತ್ಯೇಕತೆ ಬಿತ್ತೋ ಕೆಲಸಕ್ಕೆ ನಮ್ಮ ಸರ್ಕಾರ ಯಾವ ರೀತಿಯ ಬೆಂಬಲಾನೂ ಕೊಡಬಾರದು. ಏನಂತೀಯಾ ಗುರು?

8 ಅನಿಸಿಕೆಗಳು:

bd ಅಂತಾರೆ...

ಸರಿಯಾಗಿ ಹೇಳಿದ್ರಿ. ನನ್ನ ಮಾತೃ ಭಾಷೆ ತೆಲುಗು. ಆದರೆ ನನ್ನ ತಾತಂದಿರ ಕಾಲದಿಂದ ಇಲ್ಲೇ ಇದ್ದೇವೆ. ಹಾಗಾಗಿ ಕನ್ನಡವೂ ಸಹ ನನ್ನ ಭಾಷೆಯೇ. ತೆಲುಗರೂ ಸಹ ಕನ್ನಡಿಗರ ವಾಹಿನಿಯಲ್ಲಿ ಸೇರಬಹುದು ಎಂಬುದಕ್ಕೆ ನಾನೇ ಸಾಕ್ಷಿ. ವಲಸೆ ಬಂದ ತೆಲುಗರ ಸಂಖ್ಯೆ ೧ ಕೋಟಿ ಇರಬಹುದೇನೊ, ಆದರೆ ಕರ್ಣಾಟಕದಲ್ಲೇ settle ಆಗಿರುವವರ ಸಂಖ್ಯೆ ಕಡಿಮೆ ಎನ್ನುತ್ತೇನೆ.

Anonymous ಅಂತಾರೆ...

!!! ಅಷ್ಟೋಂದು ಜನ ತೆಲುಗು ನಾಡಿನವರು ನಮ್ಮ ಅನ್ನ ಕಸಿದುಕೊಂಡು ಕರ್ನಾಟಕದಲ್ಲಿ ನೆಲೆಸಿದ್ದಾರ? ಇಲ್ಲಿ ಬಂದ ಮೇಲೆ ಇಲ್ಲಿಯವರ ಥರ ಕನ್ನಡ ಮಾತಾಡಿಕೊಂಡು ನಮ್ಮ ಸಂಸ್ಕ್ರುತಿಗೆ ಗೌರವ ಕೊಟ್ಟುಕೊಂಡು ಇರುವಾ ಹಾಗಿದ್ದರೆ ಇರಲಿ, ಇಲ್ಲವಾದರೆ ತೆಲುಗು ನಾಡಿಗೆ ಹೊರಟು ಹೋಗಲಿ ಎಂದು ರಾಜ್ ಠಾಕ್ರೆ ಥರ ಒಂದು ಕೂಗು ಹಾಕಿದರೆ ಮುಚ್ಚಿಕೊಂಡು ಕೂರುತ್ತಾರೆ ಬಡ್ಡಿ ಮಕ್ಕಳು. ಮಹರಾಷ್ಟ್ರದಲ್ಲಿ ಅಷ್ಟೆಲ್ಲ ಗಲಾಟೆ ಆಗುತ್ತಿದ್ದರು ಈ ಮಕ್ಕಳಿಗೆ ಬುದ್ದಿ ಬರುತ್ತಿಲ್ಲವಲ್ಲ ಏನು ಹೇಳಲಿ.
ಇದಕ್ಕೆಲ್ಲ ಪರಿಹಾರ ಏನೆಂದರೆ, ನಮ್ಮಲ್ಲು ಒಬ್ಬ್ಬ ರಾಜ್ ಠಾಕ್ರೆ ಹುಟ್ಟು ಬರಬೇಕು ಅಷ್ಟೆ.
- ಬ. ಬ.

Balakrishna ಅಂತಾರೆ...

Hi,
36 lakhs is equal to 0.36 crore.

Bala

Anonymous ಅಂತಾರೆ...

36 ಲಕ್ಷ ತೆಲುಗರಿದ್ದರೂ ಅವರೆಲ್ಲರೂ ಕನ್ನಡಿಗರಾಗಿಹೋಗಿದ್ದಾರೆ. ಅ೦ತಹ ಕನ್ನಡಿಗರನ್ನು ಕೆಣಕಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳೋರು ಮುಖಕ್ಕೆ ಸರ್ಯಾಗಿ ಮ೦ಗಳಾರತಿ ಮಾಡ್ಬೇಕಾಗಿದೆ.

Anonymous ಅಂತಾರೆ...

ಸರಿಯಾಗಿ ಹೇಳುದ್ರಿ ಗುರುಗಳೇ.

ನಮ್ಮ ಮನೆಯಲ್ಲೂ ನಾವು ತೆಲುಗು ಮಾತಾಡುತ್ತೇವೆ, ಅಂದ ಮಾತ್ರಕ್ಕೆ ನಾವು ತೆಲಗಿನವರು ಆಗ್ತೀವಾ? ನಾನು ಎಂದಿಗೂ ತೆಲಗಿನವನು ಎಂದು ಹೇಳಲ್ಲ. ಅಭ್ಯಾಸದಿಂದ ನಾವು ಮನೆಯಲ್ಲಿ ತೆಲಗು ಮಾತಾಡುತ್ತೇವೆ ಹೊರತು ಬೇರೆ ಕಾರಣಗಳಿಲ್ಲ. ನನ್ನ ಮೈಯಲ್ಲಿ ಹರಿಯುತ್ತಿರುವುದು ಕನ್ನಡ ರಕ್ತವೇ. ಆ ತೆಲುಗು ಅಕಾಡಮಿ ಅವ್ರು ನಮ್ಮ ಮನೇನು ಸೇರಿಸಿದಾರೋ ಏನೋ ಪಾಪ ಅವ್ರ ಲೆಕ್ಕದಲ್ಲಿ. ನನ್ನಂತೆ ಬೇಕಾದಷ್ಟು ಜನ ಇದ್ದರೆ. ಅವರೆಲ್ಲ ಹೀಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರೆ ಅಕಾಡಮಿಗೆ ಸಿಕ್ಕುವುದು ೩೬ ಲಕ್ಷನು ಅಲ್ಲ. ಆಚೆ ನಾನು ಎಂದಿಗೂ ತೆಲಗಿನವನು ಅಂತ ಹೇಳಲ್ಲ. ನನಗೆ ತೆಲಗು ಭಾಷೆ ಬರತ್ತೆ ಅಂತಾನೆ ಹೇಳೋದು. ಎಲ್ಲರೂ ಹೀಗೆ ಇರೋದು ಆದ್ರೆ ಅಕಾಡಮಿಗೆ ಮಾತ್ರ ಬೇರೆತರಾನೆ ಕಾಣತ್ತೆ ಕಣ್ಣಿಗೆ. ಕೆಪ್ಪ ನನ್ ಮಕ್ಳು ಅಕಾಡಮಿ ಅವ್ರು.

ಇಲ್ಲಿ ಪ್ರಾಬ್ಲಮ್ ಏನು ಅಂದ್ರೆ ನಾವು ಶಾಲಾ ಕಾಲೇಜ್ ಅಲ್ಲಿ ಮಾತೃ ಭಾಷೆ ತೆಲುಗು ಅಂತ ಕೊಟ್ಬಿಡ್ತ್ಹಿವಿ. ಅಲ್ಲೇ ಜನ ಯೆಡ್ವತ ಮಾಡೋದು. ಅಲ್ಲಿ ಕನ್ನಡ ಅಂತ ಕೊಟ್ರೆ ಸರಿಹೋಗತ್ತೆ. ಏನಂತೀರ ಗುರುಗಳೇ.

ಇಂತಿ ನಿಮ್ಮ,
ನಂದನ್

Anonymous ಅಂತಾರೆ...

ಕರ್ನಾಟಕದಲ್ಲಿ ಎಲ್ಲರು ಕನ್ನಡದವರು. ಎಲ್ಲರು ಕನ್ನಡಿಗರನ್ನಾಗಿ ಕಾಣಿ ಮತ್ತು ಅವರು ಮಾಡುವ ಕೆಲಸದಲ್ಲಿ ಕನ್ನಡವನ್ನು ತೋರಿಸಿ ಹಾಗಾ ಅವರು ಕನ್ನಡದವರೆಂದು ಅವರಿಗೆ ಮನವರಿಕೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಬೇಕಾದ ಸಕಲ ನೆರವುನೀಡಬೇಕು. ತಪ್ಪು ಮಾಡಿದರೆ ದಯವಿಟ್ಟು ದಂಡಿಸಿ. (ಕಾನೂನು ರೀತಿ) ಒಮ್ಮೆ ಅವರ ಮನಸ್ಸಿನಲ್ಲಿ ನಾವು ಕನ್ನಡಿಗರು ಎಂದು ಮನವರಿಕೆ ಯಾದರೆ ಎಂದೆಂದು ಅವರು ಕನ್ನಡವನ್ನು ಬಿಡುವುದಿಲ್ಲ....

Anonymous ಅಂತಾರೆ...

ನಿನ್ನೆ ಮೊನ್ನೆ ಬಂದಿರುವ ಈ ತೆಲುಗು ಅಕಾಡಮಿ ನಮ್ಮ ಏಳಿಗೆಯ ಬಗ್ಗೆ ಏಕೆ ಚಿಂತಿಸಬೇಕು? ನಾವು ಈ ಕನ್ನಡ ನಾಡಿನ ಋಣಿಗಳು. ನಮಗೆ ತೆಲುಗು ಬರೆ ಮನೆ ಮಾತು. ನಮಗೆ ಕನ್ನಡ ಇರಬೇಕಾದರೆ ನಾವು ತೆಲುಗು ಕಲಿತು ಏನು ಮಾಡಬೇಕು?

Anonymous ಅಂತಾರೆ...

Nija helbek andre kannada telugugintha haledhu mathe innondhu vishya yenappa andre kannada telugu onde lipi irodrindha ..... kannada haledradrindha kannada lipi ne telugu nalli achu (Copy ) ilsidarantha helabahudhu ...... Mathe ibbrugu 1de sala rajyotsava andre avru nam inda bere hogidhu ..... so idella tagondre kannada thayi (mother) telugu (magu (child)) so maklu thap madidre thayi thane kshamisodhu :)

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails