ಇನ್ನು "ಆರ್ ಸಿ: ಉಡಾಯ್ಸಿ" ಅನ್ನೋ ಸರದಿ ಚಿತ್ರತಾರೆಗಳದ್ದು!


ನಿನ್ನೆ ದಿನದ ಅಂದ್ರೆ 21.03.2009ರ "ದಟ್ಸ್ ಕನ್ನಡ. ಕಾಮ್" ಪತ್ರೀಕೇಲಿ ಇಂಡಿಯನ್ ಪ್ರೀಮಿಯರ್ ಲೀಗಿನ ಪಂದ್ಯಗಳಲ್ಲಿ ಪಾಲ್ಗೊಂಡು ಸ್ಥಾನಿಕ ತಂಡವನ್ನು ಕನ್ನಡದ ಕೆಲ ಚಿತ್ರತಾರೆಯರು ಬೆಂಬಲಿಸಲು ಮುಂದಾಗಿದ್ದಾರೆ ಅನ್ನೋ ಸುದ್ದಿ ಪ್ರಕಟವಾಗಿದೆ. ಸ್ಥಾನಿಕ ತಂಡ ಅಂದ್ರೆ ಬೆಂಗಳೂರಿನ ತಂಡವಾದ ರಾಯಲ್ ಚಾಲೆಂಜರ್ಸ್ ಅನ್ನೋದು ನಮ್ಮ ಊಹೆ. ಸುದ್ದಿ ಇದೇ ಆಗಿದ್ರೆ ಇದು ನಿಜವಾಗ್ಲೂ ಒಂದೊಳ್ಳೆ ಬೆಳವಣಿಗೇನೆ ಆಗಿದೆ.

ಚಿನ್ನಸ್ವಾಮಿ ಮೈದಾನ ತಾರೆಗಳ ತೋಟವಾಗಲಿ!

ಕ್ರಿಕೆಟ್ ತಾರೆಗಳೂ ಅಂದ್ರೆ ನಮ್ಮ ಜನಕ್ಕೆಂಥದೋ ಅಭಿಮಾನ, ಇನ್ನು ಇವರ ಜೊತೆ ಚಿತ್ರತಾರೆಗಳೂ ಸೇರ್ಕೊಂಡ್ರೆ ಡಬ್ಬಲ್ ಮಜಾ. ಕನ್ನಡದ ಹಲವಾರು ತಾರೆಯರು ಬೆಂಗಳೂರಲ್ಲಿ ನಡೆಯೋ ಎಂಟು ಪಂದ್ಯಗಳಲ್ಲಿ ಏಳರಲ್ಲಿ ರಾಯಲ್ ಚಾಲೆಂಜರ್ಸ್ ಆಡಲಿದೆ, ಇನ್ನೊಂದು ಬೇರೆ ತಂಡಗಳದ್ದು. ಇರಲಿ, ನಮ್ಮ ಕನ್ನಡದ ತಾರೆಯರು ಬೆಂಗಳೂರು ತಂಡಕ್ಕೆ ಚಿಯರ್ ಮಾಡಲು ಇವುಗಳಲ್ಲಿ ಭಾಗವಹಿಸೋದು ಚೆನ್ನಾನೆ. ಈ ನೆಪದಿಂದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮತ್ತಷ್ಟು ಬೆಂಬಲ ಸಿಕ್ಕೋದ್ರಲ್ಲಿ ಅನುಮಾನವಿಲ್ಲ.

ಇದು ಹೀಗಿರಬೇಕಿತ್ತಲ್ವಾ?

ಇದೆಲ್ಲಾ ಸರೀನೆ, ಆದ್ರೆ ರಮೇಶ್ ಅರವಿಂದ್, ಗಣೇಶ್, ಪುನೀತ್, ಶರ್ಮಿಳಾ ಮೊದಲಾದ ತಾರೆಯರೆಲ್ಲಾ ಈ ದಿಸೆಯಲ್ಲಿ ಐ.ಪಿ.ಎಲ್ ಆಡಳಿತ ಮಂಡಳಿನಾ ಸಂಪರ್ಕ ಮಾಡಿದಾರೆ ಅನ್ನೋ ಸುದ್ದಿ ಚೂರು ನಿರಾಸೆ ಉಂಟುಮಾಡಿರೋದೂ ನಿಜಾನೆ. ಇದರ ಬಗ್ಗೆ ನಿಜವಾಗ್ಲೂ ರಾಯಲ್ ಚಾಲೆಂಜರ್ಸ್ ತಂಡದ ವ್ಯವಸ್ಥಾಪಕರು ತಾವೇ ಮುಂದಾಗಿ ಕನ್ನಡದ ತಾರೆಯರನ್ನು ಆಹ್ವಾನಿಸಿ, ತಮ್ಮ ತಂಡ ಎಲ್ಲೆಲ್ಲಿ ಆಡುತ್ತೋ ಅಲ್ಲಿಗೆಲ್ಲಾ ಕರ್ಕೊಂಡು ಹೋಗಿ ಚಿಯರ್ಸ್ ಹೇಳಿಸಲು ಒಪ್ಪಂದ ಮಾಡ್ಕೊಂಡಿದ್ದಿದ್ರೆ ಸರಿಯಾದ ನಡೆಯಾಗ್ತಿತ್ತು! ಇದರಿಂದ ಇಬ್ಬರಿಗೂ ಲಾಭವಾಗ್ತಿತ್ತು ಅನ್ನೋದು ನಿಜಾ ಅಲ್ವಾ ಗುರು? ಆ ಮೂಲಕ ಬೆಂಗಳೂರು ತಂಡಕ್ಕೆ ಹೆಚ್ಚು ಹೆಚ್ಚು ಬೆಂಬಲ ಗಳಿಸಿಕೊಡೋದ್ರು ಜೊತೆಗೆ ತಂಡವಾಡೊ ಎಲ್ಲಾ ಪಂದ್ಯಗಳ ಪ್ರೇಕ್ಷಕರ/ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳಬಹುದಿತ್ತು. ಇತ್ತೀಚಿನ ಬೆಳವಣಿಗೆ ನೋಡಿದರೆ ಈ ಪಂದ್ಯಗಳು ಹೊರದೇಶದಲ್ಲಿ ನಡ್ಯೋ ಸಾಧ್ಯತೆಗಳು ಎದ್ದು ಕಾಣ್ತಿವೆ. ಹಾಗಾಗೋದಾದ್ರೆ ನಮ್ಮ ಚಿತ್ರ ತಾರೆಯರನ್ನು ಅಲ್ಲಿಗೆ ಒಯ್ಯೋ ಮೂಲಕ ತಮ್ಮ ತಂಡ ಆಡೊ ಪಂದ್ಯಗಳ ವೀಕ್ಷಕರ ಸಂಖ್ಯೆಯನ್ನು ಕರ್ನಾಟಕದಲ್ಲಂತೂ ಹೆಚ್ಚಿಸ್ಕೋಬೌದು ಅನ್ನೋದು ಹದಿನಾರಾಣೆ ಸತ್ಯಾ ಗುರು!

4 ಅನಿಸಿಕೆಗಳು:

Anonymous ಅಂತಾರೆ...

Jai Kannada Cinema Thareyarige....
Jai Karnataka

Unknown ಅಂತಾರೆ...

taareyara aagamanadinda namma royal challengers team ge olle holapu barodadre, nijavagalu tumba khushine.

Unknown ಅಂತಾರೆ...

Banavasi Balagada ella geleyarigu YUGADI habbada shubhashaygalu.
nimma ella baravanigegalu tumba upaykta mahitiyannu needuttave. Naadu, nudi bagge nimagiruva kalakali prashamshnarha. ee nimma seve naadu nudige anantavagirali.
JAI BHARATAMBE,
JAI KARNATAKA MAATE.

prasadh ಅಂತಾರೆ...

ಪರಭಾಷೆಗಳ ಚಿತ್ರತಾರೆಯರಂತೆ ನಮ್ಮ ಜನಕ್ಕೆ ನಮ್ಮವ್ರು crowd-pulling ಅಲ್ಲ ಹಾಗಾಗಿ ಕನ್ನಡದ ಚಿತ್ರತಾರೆಗಳು ಚಿಯರ್ ಮಾಡಿದ್ರೆ ಪ್ರೇಕ್ಷಕರ ಸಂಖ್ಯೆ ಜಾಸ್ತಿ ಆಗೊದು ಅಷ್ರಲ್ಲೆ ಇದೆ. ಚಿತ್ರತಾರೆಗಳು ಹೋಗಿ ನಿರ್ಮಾಪಕರನ್ನ ಭೇಟಿ ಆಗಿರೋದು ದುಡ್ಡಿಗಾಗಿ ಅಷ್ಟೆ, ಏನು ನಿಸ್ಸ್ವಾರ್ಥ ಸೇವೆ ಅಲ್ವಲ್ಲ. ಸೊ ಉಪಯೋಗದ್ದು ಮಾಡೊದ್ರಲ್ಲೆ ಅರ್ಥ ಇದೆ, ಇಂತಹ ಸುದ್ದಿಗೆ hype ಕೊಡದೆ ಇರೊದೆ ಒಳ್ಳೆಯದು.. anyways ಎಲ್ಲರಿಗು ಯುಗಾದಿ ಹಬ್ಬದ ಶುಭಾಶಯಗಳು, ಹೊಸ ವರುಷ ಕನ್ನಡಿಗರ/ಕನ್ನಡ ಪರ ಚಟುವಟಕೆಗಳಿಗೆ ಹೊಸ ಉತ್ತೇಜನವನ್ನು ಕೊಡಲಿ ಅನ್ನುವುದೆ ನನ್ನ ಆಸೆ...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails