ಕಮಲಹಾಸನ್ ಮತ್ತು ಕಲೆಯ ತಿಳಿಗೊಳ!

ಕನ್ನಡ ಚಿತ್ರರಂಗ 75ವರ್ಷ ಪೂರೈಸ್ತು ಅಂತಾ ಮೊನ್ನೆ, ಅಂದ್ರೆ 2009ರ ಮಾರ್ಚಿ ಒಂದನೇ ತಾರೀಕಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನದ ಒಂದು ಕಾರ್ಯಕ್ರಮಾನ ಹಮ್ಮಿಕೊಂಡಿದ್ರು. ಮೊದಲನೇ ದಿನಾ ತಮಿಳಿನಿಂದ ಕನ್ನಡಕ್ಕೆ ಬಂದಿದ್ದೋರೂ ಅಂತಾ ತಮಿಳು ಚಿತ್ರರಂಗದ ಹೆಸರಾಂತ ನಟರಾದ ಕಮಲಹಾಸನ್ ಅವ್ರುನ್ನ ಸನ್ಮಾನ ಮಾಡೊ ಸಲುವಾಗಿ ಕರೆದಿದ್ರು. ಅವ್ರು ಬಂದು ಗೌರವಾ ಸ್ವೀಕರಿಸಿ ಕನ್ನಡದಲ್ಲೇ ಭಾಷಣಾನೂ ಮಾಡಿದ್ರು. ಭಾಷಣದ ಕಡೆಗೆ ಅಡಿಗರ ಕಾವ್ಯವೊಂದನ್ನೂ ಓದಿದ್ರು. ಉದಾತ್ತತೆ, ಆದರ್ಶಗಳಿದ್ದ ಅವರ ಮಾತುಗಳು ತಾತ್ವಿಕವಾಗಿ, ರಾಜಕೀಯವಾಗಿ ಜನಮನ ಸೂರೆಯಾಗುವಂತೆಯೇ ಇದ್ವು, ಆದ್ರೆ ತಮ್ಮ ಅದ್ಭುತ ಉಪದೇಶಾಮೃತಾನ ಕನ್ನಡದೋರಿಗೆ, ಅದೂ ಈ ಸಮಯದಲ್ಲಿ ಕೊಡೋ ಅಗತ್ಯವೇನಿತ್ತು ಗುರು?

ಕಮಲಹಾಸನ್ ಆಡಿದ ರಾಜಕೀಯದ ಮಾತು!


ಆ ದಿನ ಕಮಲಹಾಸನ್ ಅವ್ರು ಆಡಿದ ಮಾತುಗಳನ್ನು ಒಂದ್ಸಲ ಮೆಲುಕು ಹಾಕಣ ಬನ್ನಿ!

“ನಾನೊಬ್ಬ ತಮಿಳಿಗ, ಇದು ಬದಲಿಸಲಾಗದ ಸತ್ಯ, ಆದರೆ ನಾನು ರಜನಿ, ತಾಯಿನಾಗೇಶ್, ಸಾವುಕಾರ ಜಾನಕಿ,
ಪ್ರಭುದೇವ, ಪ್ರಕಾಶ್ ರಾಜ್ ಮೊದಲಾದವರನ್ನೆಲ್ಲಾ ನಮ್ಮವರೆಂದು ಒಪ್ಪಿಕೊಂಡ ತಮಿಳಿಗ,
ಪುಟ್ಟಣ್ಣನವರನ್ನು ಗೌರವಿಸುವ ತಮಿಳಿಗ….”

ವೈಯುಕ್ತಿಕವಾಗಿ ಕಮಲ್ ಅಂಥ ದೊಡ್ಡತನದವರೇ ಇರಬಹುದು. ಇಷ್ಟನ್ನು ಆ ಸಭೆಯಲ್ಲಿ ಹೇಳಿ ಅಷ್ಟಕ್ಕೇ ನಿಲ್ಸಿದ್ರೆ ಎಲ್ಲಾ ತಮಿಳ್ರು ಹೀಗೆ ಇರಬೇಕು, ಎಲ್ಲಾ ಕನ್ನಡದೋರೂ ಹೀಗೆ ಇರಬೇಕು ಅನ್ನೋ ಸಂದೇಶ ತೊಗೊಂಡು ಖುಶಿ ಪಡ್ಬೋದಾಗಿತ್ತು… ಆದರೆ ಇಂಥಾ ಒಳ್ಳೇತನದ ಆದರ್ಶದ, ವ್ಯಕ್ತಿಗತವಾದ ಸ್ವಭಾವ ಹೇಳಿದ ಮರುಕ್ಷಣವೇ ನಾನಿಲ್ಲಿ ಬಂದಿರೋದೇ ಕನ್ನಡದವ್ರಿಗೆ ಬುದ್ಧಿ ಹೇಳಕ್ಕೆ ಅಂದು

“ರಾಜಕೀಯದ ಕೊಳದಲ್ಲಿ ಕಲ್ಲು ಹಾಕುದ್ರೆ ಪರ್ವಾಗಿಲ್ಲಾ, ನೀವೆಲ್ಲಾ ಕಲೆಯ ಕೊಳಕ್ಕೆ
ಕಲ್ಲುಹಾಕಬೇಡಿ, ಈ ಪುಷ್ಕರಣೀನಾ ರಕ್ತದ ಹೊಂಡ ಮಾಡಬೇಡಿ”

ಅಂದ್ರು. ಏನಿದರ ಅರ್ಥ? ನೀವು ಕಲ್ಲು ಹಾಕಬೇಡಿ ಅನ್ನೋ ಬದಲು ನಾವ್ಯಾರೂ ಕಲ್ಲು ಹಾಕಬಾರ್ದು ಅನ್ನಬೇಕಿತ್ತಲ್ವಾ? ಗುರು!

ತಿಳಿಗೊಳಕೆ ಕಲ್ಲನೆಸದವರು ಯಾರು?


"ನಿಜವಾಗ್ಲೂ ಯಾರು, ಕಲೆಗೂ ರಾಜಕೀಯಕ್ಕೂ ತಳುಕು ಹಾಕ್ತಿರೋರು? ಕನ್ನಡಿಗ್ರಾ? ತಮಿಳ್ರಾ? ಯಾರಿವನು ಸಿನಿಮಾ ಶೂಟಿಂಗ್ ಸಮಯದಲ್ಲಿ ಯಾಕೆ ತಮಿಳ್ರು ಡಾ. ರಾಜ್ ಮೇಲೆ ಆಕ್ರಮಣ ಮಾಡುದ್ರು? ಯಾಕೆ ಕಲಾವಿದರಾದ ಡಾ. ರಾಜ್ ಅವರನ್ನು ಹೊತ್ತೊಯ್ದು, ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯೇ ಮೊದಲಾದ ರಾಜಕೀಯ ಬೇಡಿಕೆಗಳನ್ನಿಟ್ರು? ಯಾರು ದಕ್ಷಿಣ ಭಾರತ ಚಲನಚಿತ್ರ ಮಂಡಳಿಯಿಂದ ಏಕಪಕ್ಷೀಯವಾಗಿ ಕನ್ನಡಿಗ ಪ್ರತಿನಿಧಿಗಳನ್ನು ಅವರದಲ್ಲದ ತಪ್ಪಿಗಾಗಿ, ಅವರು ಕನ್ನಡಿಗರೆಂಬ ಒಂದೇ ಕಾರಣಕ್ಕಾಗಿ ಸಸ್ಪೆಂಡ್ ಮಾಡಿದ್ರು? ಯಾರು ಕನ್ನಡಿಗರ ವಿರುದ್ಧವಾಗಿ ಪ್ರತಿಸಾರಿ ಚೆನ್ನೈ ಬೀಚಿನಲ್ಲಿ ಸತ್ಯಾಗ್ರಹ, ಭಾಷಣ ಮಾಡಿರೋರು? ಯಾರು ತುಂಬಿದ ಸಭೆಯಲ್ಲಿ “ಇವ್ರುನ್ನ ಒದೀಬೇಕು” ಅಂತಂದೋರು? ಯಾರು ಈ ಸಭೆಯಲ್ಲಿ ಭಾಗವಹಿಸದ ಕಲಾವಿದರನ್ನು ಚಿತ್ರರಂಗದಿಂದ ಬಹಿಷ್ಕರಿಸ್ತೀವಿ ಅಂದೋರು? ಯಾರು? ಯಾರು?" ಅಂತ ನಿಮ್ಮ ಮನಸ್ಸಲ್ಲಿ ಪ್ರಶ್ನೆಗಳು ಏಳ್ತಿಲ್ವಾ ಗುರು?

ಕಮಲಹಾಸನ್ ಅವ್ರು ತಮ್ಮ ಭಾಷಣಾನ್ನ ಯಾರನ್ನುದ್ದೇಶಿಸಿ ಮಾತಾಡಬೇಕಿತ್ತು? ಕನ್ನಡದವ್ರನ್ನೋ? ತಮಿಳರ್ನೋ? ಇದೇ ಭಾಷಣವನ್ನು ತಮಿಳು ಚಿತ್ರರಂಗದ ಕಾರ್ಯಕ್ರಮದಲ್ಲಿ ಇವ್ರು ಆಡಿದರೇನು? ಚೆನ್ನೈ ಬೀಚಲ್ಲಿ ನಿಂತು ಕಾವೇರಿ ಹೋರಾಟ ಮಾಡುವಾಗ ಆಡಿದರೇನು? ಇವತ್ತು ’ಕಲೆ, ಕಲಾವಿದರು ಶುಭ್ರ ಪುಷ್ಕರಣಿ, ರಾಜಕೀಯ ರಕ್ತದಹೊಂಡ’ ಅನ್ನೋರು, ’ತಮಿಳುನಾಡಿನ ಚಿತ್ರರಂಗದ ಜನ ಯಾಕೆ ಚಿತ್ರರಂಗವನ್ನು ರಾಜಕೀಯದ ಏಣಿಯಾಗಿ ಬಳುಸ್ತಾರೆ? ನಿಜವಾಗ್ಲೂ ಕಲೆಯ ತಿಳಿಗೊಳವನ್ನು ಕಲಕಿದೋರು ಯಾರು?’ ಅಂತಾ ಯೋಚುಸ್ಬೇಕಾಗಿತು ಅನ್ನುಸ್ತಿಲ್ವಾ? ಗುರು...


ಇವರು ಬಂದಿದ್ದಾದ್ರೂ ಯಾಕಿರಬೌದು?


ಚಿತ್ರರಂಗ ಇವತ್ತಿನ ದಿವ್ಸಾ ಬರೀ ಕಲೆಯಾಗಿ ಉಳ್ದಿಲ್ಲ. ಅದು ದೊಡ್ಡ ಉದ್ದಿಮೆಯಾಗಿ ಬೆಳೆದಿದೆ. ಕರ್ನಾಟಕ್ದಲ್ಲಿ ಚಲನಚಿತ್ರಗಳಿಗೆ ಮಾರುಕಟ್ಟೆ ಅನ್ನೋದು ಇರೋ ಹಾಗೇನೇ, ಮಾರುಕಟ್ಟೆಯಲ್ಲಿ ಸ್ಪರ್ಧೆಯೂ ಇದೆ. ಕರ್ನಾಟಕದಲ್ಲಿ ತಮಿಳು ಚಿತ್ರಗಳಿಗೆ ಮಾರುಕಟ್ಟೆ ಗಟ್ಟಿಗಳ್ಸೋ ತಂತ್ರವಾಗೇ “ಕಲೆಗೆ ಭಾಷೆಯಿಲ್ಲ, ಕಲಾವಿದ್ರೆಲ್ಲಾ ಒಂದೇ” ಅಂತಂದ್ರಾ ಅನ್ಸಲ್ವಾ ಗುರು? ಇವ್ರ ಮಾತುಗಳನ್ನು ಕೇಳಿದ ಮೇಲೆ ಅನ್ಸೋದೇನಪ್ಪಾ ಅಂದ್ರೆ ಇವರು ಇಲ್ಲಿಗೆ ಬಂದ ಉದ್ದೇಶ ನಮ್ಮನ್ನು ಅಭಿನಂದಿಸಿ ಗೌರವ ಸ್ವೀಕರಿಸಿ ಹೋಗೋದಷ್ಟೇ ಆಗಿರಲಿಲ್ಲಾ… ಅದಕ್ಕೂ ಮೀರಿದ ತಮಿಳು ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿಕೊಡೋ ತಂತ್ರಗಾರಿಕೆ ಅನ್ನೋ ಅನುಮಾನ ಆವತ್ತಿನ ದಿವ್ಸ ಕಮಲಹಾಸನ್ ಅವ್ರ ಮಾತುಗಳನ್ನು ಕೇಳಿದೋರಿಗೆ ಬಂದಿರಬೋದಲ್ವಾ? ಗುರುಗಳೇ!

16 ಅನಿಸಿಕೆಗಳು:

Anonymous ಅಂತಾರೆ...

ನಿಜಾ ಗುರು!
ಆವತ್ತು ಚಪ್ಪಾಳೆ ಹೊಡೆದವರಲ್ಲಿ ನಾನೂ ಇದ್ದೆ, ಆದರೆ ನಿಮ್ಮ ಲೇಕನ ಓದಿ ಹೌದಲ್ವಾ? ಅನ್ನುಸ್ತು.
ತುಂಬಾ ಚೆನ್ನಾದ ಚಿಂತನೆ.

ರಾಜಾರಾಂ

Anonymous ಅಂತಾರೆ...

ಅಕ್ಷರ ಸಹ ದಿಟ ಗುರು...
ಉಪದೇಶ ಹೇಳೋದಾದ್ರೆ ಕನ್ನಡಿಗರಿಗೆ ಹಾಗು ತಮಿಳರಿಗೆ ಇಬ್ಬರಿಗೂ ಹೇಳ ಬೇಕು ... ಇವರ ಭಾಷಣ , ನೀತ , ಉಪದೇಶ ಕೇಳೋಕ್ಕೆ ಕನ್ನಡಿಗರೆನ್ ಕಿವಿಲ್ ಹೂವ ಮಡುಗ್ ಕೊಂಡ್ ಔರ ?....ಇಂತಹ ಮಾತ್ನ ಪ್ರತಿಭಟಿಸದೆ ಚಪ್ಪಾಳೆ ಹೊಡುದ್ರು... ಯಾವಾಗ್ ಸ್ವಾಭಿಮಾನಿಗಳಗ್ತಾರೋ ಕನ್ನಡಿಗರು ನಾ ಕಾಣೆ ...

ಕ್ಲಾನ್ಗೊರೌಸ್

Anonymous ಅಂತಾರೆ...

ಕಲೆಗೆ ರಾಜಕೀಯ ತರಬೇಡಿ ಈ ಮಾತನ್ನು ನಿಮಗೆ ಹೇಳಕ್ಕೋಸ್ಕರವೇ ನಾನು ಇಲ್ಲಿಗೆ ಬಂದಿದ್ದೇನೆ ಅಂತ ಹೇಳಿದನಲ್ಲ ಪುಣ್ಯಾತ್ಮ ಕಮಲಹಾಸನ್. he was barking at the wrong tree. he could have saved the airfare.

Anonymous ಅಂತಾರೆ...

ಕೇಮಲ್ ಹಾಸನ್ ಅವರು ಮಾತುಗಳಿಂದ ನಮ್ಮನ್ನು ಮರುಳು ಮಾಡಲಾರರು.

ಅವೀನ್ ಅಂತಾರೆ...

ಇಂಥಾ ಊಸರವಳ್ಳಿ ಜನಗಳು ಯಾಕಾದ್ರೂ ಸಾಮಾಜಿಕ, ನೈತಿಕ ಜವಬ್ದಾರಿ ಬಗ್ಗೆ ಊರ್ ತುಂಬ ಬೊಗಳೆ ಬಿಡ್ತಾರೋ?
ಇಂಥಾ ಬೇಜವಾಬ್ದಾರಿ ಜನಗಳೇ ನಮ್ಮ ತಮಿಳಿಗರಿಗೆ ದೇವ್ರು ಅವತಾರ್ ಪುರುಷ.. ನಾಚಿಕೆ ಆಗ್ಬೇಕು ಅವರುಗಳ ಅಭಿರುಚಿಗೆ. ದೇಶ, ಜನರ ಸಾಂಸ್ಕೃತಿಕ ಭಾವನೆಗಳ ಜೊತೆ ಚೆಲ್ಲಾಟ ಆಡೋ ಕನ್ನಡಕ ಕರುಣಾನಿಧಿ, ಊರ್ ಮುಳುಗಿದರೂ ಮೂಸ್ ನೋಡದ ಕು(?). ಜಯಲಲಿತಾ.. ದೇಶನಾ ಉದ್ದಾರ/ಉದ್ದ ಮಾಡೋಕ್ಕೆ ಇಂಥಾ ಮೂರ್ಖ ಸಿಖಾಮಣಿ ರತ್ಹ್ನಗಳನ್ನ ಆ ದೇವ್ರೇ ಸೃಷ್ಟಿ ಮಾಡಿರಬೇಕು. ಮೋಲ ಜನರಿಗಿಂತ "" ಆದೋರೆ ಹೆಚ್ಚು ಹೆಚ್ಚು ಸಾಚ ಅಂತ ಪೋಸು ಕೊಡ್ತಾರೆ.. ಮಾನಗೆಟ್ಟವರು. ಥೂ...

Anonymous ಅಂತಾರೆ...

Neevu Ide spirit; Innu hattu varsha idi ; ide reeti comment maadi; ottnalli navella namma kelsadalli busy aadre; hyage anta; olle lekhana

Abhishek ಅಂತಾರೆ...

Correct Correct !!! He had written his speech.. so it was not a error in speech! it was intentional !

Unknown ಅಂತಾರೆ...

ನಮಸ್ಕಾರ ವಸಂತ್, ನಿಮ್ಮ ಈ ಒಂದು ಬರವಣಿಗೆಗೆ ತುಂಬ ಧನ್ಯವಾದಗಳು!

ಸರಿಯಾಗಿ ಕನ್ನಡ ಉಚ್ಚಾರಣೆ ಮಾಡಿ ಓದೋಕೆ ಬರದ ಆ ಕಲಾವಿದನಿಗೆ, ಕನ್ನಡ ಚಲನ ಚಿತ್ರದ ಅಮೃತ ಮಹೋತ್ಸವಕ್ಕೆ ಮೊದಲ ದಿನವೆ ಕರೆದು ಸನ್ಮಾನ ಮಾಡುವಂತ ಪರಿವೆನ್ನಿತ್ತು? ಆ ಮಹಾಶಯನೋ ಯಾರೊ ಬರೆದುಕೊಟ್ಟ ಭಾಷಣವನ್ನ ಅದರ ಅರ್ಥವನ್ನು ತಿಳಿದುಕೊಳ್ಳದೆ ಕನ್ನಡಿಗರಿಗೆ ತಿಳಿ ಹೇಳೋಕೆ ಬಂದಂಗ್ಗಿತ್ತು. ಅವರ ಮಾತಿಗೆ ನಮ್ಮ ಜನಗಳೋ?? ಚಪ್ಪಾಳೆ ಒಡೆದು ಸ್ವಾಗತಿಸುತ್ತಾರೆ?. ಇದಕ್ಕಿಂತ ವಿಪರ್ಯಾಸ ಬೇಕೆ.
ಅವರು ಮಾಡೋ ತಪ್ಪನ್ನು ಕಡೆಗಣಿಸಿ, ಕನ್ನಡಿಗರಿಗೆ ತಿಳಿಹೇಳೊ ಕಮಲ್ ಹಾಸನ್ ರ ಭಾಷಣವನ್ನ?? ನಾನು- ಅರುಣಕುಮಾರ ಎಚ್ ಮಲ್ಲೇಗೌಡ..ಕೂಡ ಖಂಡಿಸುತ್ತೇನೆ!

sunaath ಅಂತಾರೆ...

ಈ ಕಮಲಹಾಸನನನ್ನು ನಮ್ಮ ಜನ ಯಾತಕ್ಕೆ ಕರೆದರೊ ಅರ್ಥ ಆಗ್ತಾ ಇಲ್ಲ. ಬಂದೋನು ನಮಗೆ ಚಪ್ಪಲಿ ಏಟು ಇಟ್ಟು ಹೋದ!
ತುಂಬಾ ಚೆನ್ನಾಗಿ ಬರೆದಿದ್ದೀರಿ, ಗುರು.
-ಸುನಾಥ

Anonymous ಅಂತಾರೆ...

what u have written is 100% correct, But I feel this type of information( nija sangati) should reach to all. Otherwise what we feel, "oh kamalahaasan came to b'lore and talked in kannada,, its great..". what is the intention behind nobody will understand unless they know truth......

Anonymous ಅಂತಾರೆ...

what u have written is 100% correct.. but i feel this information(nija sangati) should reach to all. otherwise we will feel that, "oh, kamalhaasan came to k'taka and talked in kannada, its great....".. But we will not think about the reason behind that.....

Anonymous ಅಂತಾರೆ...

ಕಮಲಹಸನ್ನ ಕರೆದಿದ್ದು ಸರಿ. ಅವನೂ ಕನ್ನಡ ಸಿನಿಮದಲ್ಲಿ ಪಾತ್ರ ಮಾಡಿದ್ದಾನೆ. ಅದೂ ಅಲ್ಲದೇ ಇಂತಹ ಸಂದರ್ಬದಲ್ಲಿ ಬೇರೆನುಡಿಯ ಸಿನಿಮದವರನ್ನು ಕರೆಯೋದು ಸರಿಯೇ. ರಿಬಲಿಕ್ ಡೇಗೆ ಯಾವುದೋ ದೇಸದ ಪ್ರೆಸಿಡೆಂಟೋ, ಇನ್ಯಾವೋನ್ನೋ ಕರೆಸಿ ಕೂರಿಸ್ತೀವಲ್ಲ ಹಂಗೆ.

ಆದರೆ ಆ ವಯ್ಯಂಗೆ ಬಾಸಣ ಮಾಡಕ್ ಕೊಟ್ಟಿದ್ದು ಸರಿಯಲ್ಲ. ಅವನಿಗೆ ಸುಮ್ನೆ ಸನ್ಮಾನ ಮಾಡಿ ಕಳಿಸಬೇಕಿತ್ತು.

ಇನ್ನು ಆ ಯಪ್ಪ ಬಾಸಣದಾಗೆ ಹೇಳಿರೋದು ಅವನ ತಲೆಯ ಮಟ್ಟಿಗೆ ಪ್ರಾಮಾಣಿಕವೇ! ತಮಿಳ ತಮಿಳನಾಗಿರದೇ ಕನ್ನಡಿಗನಾಗ್ತಾನ? ಕನ್ನಡಿಗರಿಗೂ ಅವನ ಬುದ್ದಿ ಬರಲಿ ಅಲ್ವ. ನಾವು ಬೇರೆಕಡೆ ವೋಗಿ ನಾವು ಕನ್ನಡಿಗರು ಎಂದು ಗಟ್ಟಿಯಾಗಿ ಅವನು ’ನಾನು ತಮಿಳ’ ಎಂದು ಹೇಳಿಕೊಂಡ ಹಾಗೆ ಯಾಕೆ ಹೇಳಿಕೋಬಾರದು?!

ನನಗೆ ಕಮಲಹಸನ್ನ ಏನ್‌ಗುರು ಟೀಕಿಸಿದ್ದು ಸರಿ ಕಾಣಿಸ್ತಿಲ್ಲ. ಇಲ್ಲಿ ತಪ್ಪು ಅ ವಯ್ಯಂದಲ್ಲ. ತಪ್ಪು ಅವನಿಗೆ ಬಾಸಣ ಮಾಡಕ್ಕೆ ಬಿಟ್ಟವರದು. ವಿಸ್ಣು, ಅಂಬಿ ಏನೂ ಮಾತಾಡೇ ಇಲ್ವೇ? ಅವರೂ ’ಹುಂ ನಾವ್ ಕನ್ನಡಿಗರೂ ನಮ್ ನೆಲ, ನೀರುಗಳನ್ನು ಮುಲಾಜಿಲ್ಲದೇ ಕಾಪಾಡ್ತೀವಿ’ ಅಂದಿದ್ರೆ ಅಲ್ಲಿಗಲ್ಲಿಗೆ ಸರಿವೋಯ್ತಿತ್ತಲ್ಲ. ಅಲ್ಲಿದ್ದ ಕನ್ನಡ ಬಾಸಣಗಾರರು ಏನು ಕಡಬು ತಿಂತಿದ್ರ?

ಇದೇ ಆಯ್ತು ನಮ್ ಹಣೆ ಪಾಡು.! :(

Anonymous ಅಂತಾರೆ...

Regarding Kamal:

Inviting to the kannada mahotsava: may be OK..
Giving him opportunity to speak: foolishness - he used the opportunity for his gains ..

other kannada movie industry leaders: useless & shameless - did not even understand that Kamal is stabbing them; lack serious leadership & pride ..

bottomline - if you want invite a speaker, let him be Kannada promoter ..

prasadh ಅಂತಾರೆ...

ಹ್ಮ್ಮ್ ನಿಜ..
ನಾನು ಸಹ ಅವರ ಭಾಷಣ ಬಿಗಿದ ರೀತಿ, ಆ ಮಾತುಗಳು ಕೇಳಿ ಈ ಯಪ್ಪ ಅಲ್ಲಿಂದ ಬಂದಿದ್ದರ ಉದ್ದೇಶ ಗೊತ್ತಯ್ತು. ಕನ್ನಡಿಗ/ತಮಿಳಿಗರ ಮಧ್ಯೆ ಎಂದಿಗು ಸಹ ಸ್ನೇಹ ಇರಲು ಸಾಧ್ಯವೆ ಇಲ್ಲ, ಯಾಕಂದರೆ ಅದು ಅವರಿಗೆ ಇಷ್ಟವಿಲ್ಲದ ಮಾತು. ಈ ಥರಹ ಇದ್ಮೇಲೆ ಅವರ ಕರೆಸಿ ಕೆರದಲ್ಲಿ ಹೊಡೆಸಿಕೊಳ್ಳೊ ಉದಾರತೆ ಕನ್ನಡಿಗರು ಬಿಡ್ಬೇಕು.ಚೆನ್ನೈನಲ್ಲಿ "ಮುಂಗಾರು ಮಳೆ" ವಾರದ ದಿನಗಳಲ್ಲೆ house full ಇದ್ರು ಸಹ ೧/೨ ವಾರಕ್ಕೆ ಕಿತ್ತುಬಿಸಾಕಿದ್ರು. ಈ ಅನ್ಯಾಯ ಕಾಣೊಲ್ವ? ಒಂದು ಪತ್ರಿಕೇಲು ಸಹ ಜಾಹಿರಾತು ಬರಲಿಲ್ಲ. ಇದು ಕನ್ನಡ ಚಿತ್ರ ಮೇಲೆ ಅತ್ಯಾಚಾರ ಅಲ್ವ? ಉಪಯೋಗಕ್ಕೆ ಬಾರದ ಉದಾರತೆ ತೋರಿನೇನೆ ಕನ್ನಡಿಗರು/ ಭಾರತೀಯರು ಹಾಳ್ಬಿದ್ದಿರೋದು.

Anonymous ಅಂತಾರೆ...

avanannu karediddu doDDa tappu..ashTe alla 'kannaDigarannu odibEku' anta cinema shailiyallE hELida aa rajanikaaMtanannu karedu mataaDalu biTTiddu innoo doDDa tappu..kamalhaasan na bhaashaNa kELida takshaNane gottaaitu... tamma bELe bEyisikoLLalu ivanu maataaDtidaane..ivara citragaLige illi maarukaTTe ide adariMda baruva laabhakke dhakke baradE irali anno duruddEshada bhaashaNa cikka paapuvigu artha aago aMtaddu...adakke kale bEre raajakeeya bEre annO doDDa doDDa vEdaaMti tarada buddhi maatu...

tappu ammadE..yaakaMdre avrige cennaagi gottu nammaMta
daDDaru moorkharu yaaroo illa aMta..avara naaDinalli kannaDa cinemaagaLu biDugaDe maaDadidroo illi avara citragaLa haMcikeyannu pradarshana hakkannu kannaDigaru aMta annisikoMDa pradarshakaru nirmaapakaru 'naa muMde taa muMde' aMta baDidaaDi togotaare' aMta..adakkE nammannu mattashTu moorkharannaagi maaDi nagaaDtidaare..

inmElaadru namma janaralli 'bEreyavaru shrEshTha naavu kammi' annO keeLarime tolagi oMdu cinemaada ella
vibhaagadalloo guNamaTTada bagge kaaLaji vahisi namma pratibhegaLige avakaasha koTTu cini raMgada ella kshEtradallu miMcali.

Madivala Venkatesh/ಮಡಿವಾಳ ವೆಂಕಟೇಶ ಅಂತಾರೆ...

ಅವ್ರು ಅವತ್ತು ಇಂಗ್ಲೀಷಲ್ಲಿ ಭಾಷಣ ಶುರು ಮಾಡುತ್ತಿದ್ದಂತೆ ಕನ್ನಡದಲ್ಲಿ ಮಾತಾಡಿ ಎಂದವರ್ಲ್ಲಿ ನಾನು ಒಬ್ಬ..
ಇಷ್ಟು ದಿನ ಅವರೊಬ್ಬ ಗ್ರೇಟ್ ನಟ ಅಂತ ಮನಸಲ್ಲಿ ಭಾವನೆ ಇತ್ತು, ಆದ್ರೆ ಅವ್ರು ಹಿಂದೊಮ್ಮೆ ಕಾವೇರಿ ಗಾಗಿ, ಹೊಗೆನಕಲ್ ಗಾಗಿ ಸ್ಟ್ರೈಕ್ ಮಾಡಿದಾಗ ರಾಜಕಾರಣಿಗಳ ಕೈ ಗೊಂಬೆಯಂತೆ ಮಾತಾಡಿ, ಪೋಸ್ ಕೊಟ್ಟಾಗಲೇ, ಇವರ ಹಣೆ ಬರಹ ತಿಳಿಯಿತು....

ಅದ್ಯಾಕೋ ಗೊತ್ತಿಲ್ಲ, ಈ ದೇಶದಲ್ಲಿ, ಒಲ್ಲೆ ಒಲ್ಲೆ ನಟರೆಲ್ಲ, ಅದ್ಯಾವುದೋ ತೆವಲಿಗೆ ಬಿದ್ದು, ದೊಡ್ಡ ಸಮಾಜ ಸುಧಾರಕರಂತೆ ಪೋಸ್ ಕೊಡಲು ಆರಂಬಿಸುತ್ತಾರೆ,(ಇದಕ್ಕೆ ನಮ್ಮಣ್ಣ ಅಣ್ಣಾವ್ರು ಮಾತ್ರ ಅಪವಾದ)

ಇದು ರಜನೀಕಾಂತ್, ಇನ್ನಿತರ ಎಲ್ಲರ ಹಣೆಬರಹವೂ ಹೌದು ...

ಇವರೆಲ್ಲ ಹೀಗಾದಳು ನಾವು ಸುಮ್ಮನಿರುವುದೇ ಕಾರಣ, ಪ್ರತಿಭಟಿಸಬೇಕು...
ಒಳ್ಳೆ ಲೇಖನ ಗುರು...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails