ಮತ್ತೊಮ್ಮೆ ಬೆಳಗಾವಿಗೆ ಕನ್ನಡ ಮೇಯರ್!

ಬೆಳಗಾವಿ ನಗರ ಪಾಲಿಕೆಯ ಮೇಯರ್ ಪಟ್ಟ ಈ ಬಾರಿಯೂ ಕನ್ನಡಿಗರ ಪಾಲಾಗಿರೋ ಸುದ್ದಿ ಇವತ್ತಿನ (31.03.2009)ರ ಕನ್ನಡಪ್ರಭ ಪತ್ರಿಕೆಯಲ್ಲಿ ವರದಿಯಾಗಿದೆ. ಆಹಾ! ಎಂಥಾ ಕಿವಿಗೆ, ಕಣ್ಣಿಗೆ ಹಿತವಾದ ಸುದ್ದಿ ಅಂತಾ ಕನ್ನಡಿಗರೆಲ್ಲಾ ಹಿಗ್ತಿದಾರೆ ಗುರು!
ಈ ಸಾಧನೆಗೆ ಕಾರಣವಾದೋರಿಗೆ ಅಭಿನಂದನೆ!
ಕಳೆದ ವರ್ಷ ಮಹಾನಗರ ಪಾಲಿಕೆಗೆ ಚುನಾವಣೆಯಾದಾಗ ಕನ್ನಡಪರರು 29 ಸ್ಥಾನಗಳಲ್ಲಿ ಆಯ್ಕೆಯಾಗಿದ್ದಾರೆ. 57 ಪಾಲಿಕೆ ಸದಸ್ಯರೂ, 4 ಶಾಸಕರೂ, ಒಬ್ಬ ಸಂಸದರೂ ಸೇರಿ 62 ಮಂದಿ ಕೂಡಿ ಮೇಯರ್ ಉಪಮೇಯರ್ ಆಯ್ಕೆ ಮಾಡ್ತಾರೆ. ಗೆಲುವಿಗೆ ಬೇಕಿರೋ 32 ಮತಗಳಿಸಲು ಕನ್ನಡಪರರ ಒಗ್ಗಟ್ಟು ಬಹುಮುಖ್ಯವಾಗಿದೆ. ಎಂ.ಇ.ಎಸ್ ಬೆಂಬಲಿಸೋ ಶಾಸಕರ, ಸಂಸದರ ಕಾರಣದಿಂದ ಎಂ.ಇ.ಎಸ್ ಗೆಲುವುದೇನೋ ಎನ್ನೋ ಆತಂಕ ಸದಾ ಇದ್ದಿದ್ದೆ. ಹಾಗಾಗಿ ಮೇಯರ್ ಉಪಮೇಯರ್ ಆಯ್ಕೆ ಮಾತ್ರಾ ಪ್ರತೀಬಾರಿ ಕನ್ನಡಪರರ ಒಗ್ಗಟ್ಟಿಗೆ ಸವಾಲೇ ಆಗಿದೆ. ಇಂಥಾ ಸವಾಲನ್ನು ಎದುರಿಸಿ ಕನ್ನಡಪರ ಮತಗಳು ಚದರದ ಹಾಗೆ ಮಾಡಿ ಕನ್ನಡಿಗರೇ ಮೇಯರ್, ಉಪಮೇಯರ್ ಆಗಿ ಆಯ್ಕೆಯಾಗುವಂತೆ ಶ್ರಮಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆ ಮತ್ತದರ ರಾಜ್ಯಾಧ್ಯಕ್ಷರಾದ ಶ್ರೀ. ನಾರಾಯಣಗೌಡರು. ಈ ಶ್ರಮದ ಕಾರಣದಿಂದಾಗಿಯೇ ಕಳೆದ ಬಾರಿ ಶ್ರೀಮತಿ. ಪ್ರಶಾಂತಾ ಬುಡವಿ ಅವ್ರು ಮೇಯರ್ ಆಗಿಯೂ, ಶ್ರೀ.ಯೂನಿಸ್ ಮೊಮಿನ್ ಅವ್ರು ಉಪಮೇಯರ್ ಆಗಿಯೂ ಆಯ್ಕೆಯಾಗಿದ್ರು.

ಮತ್ತೊಮ್ಮೆ ಕರ್ನಾಟಕ ರಕ್ಷಣಾ ವೇದಿಕೆಯವರು ಬೆಳಗಾವಿಯಲ್ಲಿ ಮೊಕ್ಕಾಂ ಹೂಡಿ ಅಲ್ಲಿನ ರಾಜಕಾರಣಿಗಳ ಮೇಲೆ ಒತ್ತಡ ಹೇರಿದ್ದರ ಪರಿಣಾಮವಾಗಿ ಈ ಬಾರಿ ಯಲ್ಲಪ್ಪ ಕುರುಬರವ್ರು ಮೇಯರ್ ಆಗಿಯೂ, ಶ್ರೀಮತಿ ಜ್ಯೋತಿ ಬಾವಿಕಟ್ಟಿಯವ್ರು ಉಪಮೇಯರ್ ಆಗಿಯೂ ಆಯ್ಕೆಯಾಗಿ ಬಂದಿದಾರೆ. ಬೆಳಗಾವಿಯಲ್ಲಿ ನಡೆದ ಹೋರಾಟಗಳಿಂದಲೂ, ಮೊನ್ನೆಮೊನ್ನೆ ನಡೆದ ಬಾವುಟದ ಘಟನೆಯಿಂದಲೂ, ರಾಜ್ಯಾದ್ಯಂತ ಸುರೇಶ್ ಅಂಗಡಿ ಮತ್ತು ಬಿಜೆಪಿ ವಿರುದ್ಧ ನಡೆದ ಪ್ರತಿಭಟನೆಗಳಿಂದಲೂ, ಮುಂದೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರ ಮತವನ್ನು ಸೆಳೆಯುವ ದೃಷ್ಟಿಯಿಂದಲೂ... ಬಿಜೆಪಿ ಸರ್ಕಾರದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ್ ಬೊಮ್ಮಾಯಿಯೋರು ಖುದ್ದಾಗಿ ನಿಂತು ಪಕ್ಷಭೇದವಿಲ್ಲದಂತೆ ಕನ್ನಡ ಮತಗಳನ್ನು ಒಗ್ಗೂಡ್ಸಿ ಈ ಆಯ್ಕೆ ಸುಸೂತ್ರವಾಗಿ ನಡ್ಯೋ ಹಾಗೆ ಮಾಡಿದ್ರಂತೆ. ಅವರಿಗೂ ನಮ್ಮ ಅಭಿನಂದನೆಗಳು. ಏನೇ ಆಗಲೀ ಬೆಳಗಾವಿ ಪಾಲಿಕೆ ಮೇಯರ್ ಆಯ್ಕೆಗಾಗಿ ಎಲ್ಲಾ ಪಕ್ಷದೋರೂ ಒಂದಾಗಿದ್ದಕ್ಕೆ ಕಾರಣವೇ ಅಲ್ಲಿ ಕನ್ನಡಪರ ವಾತಾವರಣ ಜಾಗೃತಿಗೊಳಿಸಿದ ಕರ್ನಾಟಕ ರಕ್ಷಣಾ ವೇದಿಕೆಯೋರು. ಅಂದು ವಿಜಯ್ ಮೋರೆಗೆ ಮಸಿ ಬಳಿದಿದ್ದರಿಂದ ಹಿಡ್ದು ನಿನ್ನೆ ಮೇಯರ್ ಆಯ್ಕೆ ಆಗೋವರೆಗೂ, ಅದು ಎ.ಪಿ.ಎಂ.ಸಿ ಚುನಾವಣೆ ಆಗ್ಲಿ, ಎಂ.ಇ.ಎಸ್ ಬಾವುಟ ತೆಗೆಸೋ ಹೋರಾಟವಿರಲಿ, ವಿಶಾನಸೌಧಕ್ಕಾಗಿ ಹೋರಾಟವಿರಲಿ, ಹೀಗೆ ಪ್ರತಿಯೊಂದು ಸನ್ನಿವೇಶದಲ್ಲೂ ಬೆಳಗಾವಿಯಲ್ಲಿ ಕನ್ನದಪರವಾಗಿ ಶ್ರಮಿಸಿದ ಅವರಿಗೆ ನಾಡಿನ ಕನ್ನಡಿಗರೆಲ್ಲರ ಪರವಾಗಿ ನಮ್ಮ ಮನದುಂಬಿದ ಅಭಿನಂದನೆಗಳು... ಗುರು!

ಕೊನೆಹನಿ : ಇದೇ ಮೊದಲ ಬಾರಿಗೆ ಮೇಯರ್, ಉಪಮೇಯರ್ ಇಬ್ಬರೂ ಕನ್ನಡಿಗರು ಅಂತಾ ಕನ್ನಡಪ್ರಭ ಸೇರಿದಂತೆ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಕಳೆದ ಸರ್ತಿ ಮೇಯರ್ ಆಗಿದ್ದ ಪ್ರಶಾಂತಾ ಬುಡವೀನಾ ಕನ್ನಡದೋರು ಅಂತ ಒಪ್ಪಿರೋರು ಉಪಮೇಯರ್ ಆಗಿದ್ದ ಯೂನಿಸ್ ಮೊಮಿನ್ ಅವರನ್ನು ಕನ್ನಡದವರಲ್ಲಾ ಅನ್ನೋ ಹಾಗೆ ವರದಿ ಮಾಡ್ತಿರೋದು ಸರೀನಾ ಗುರು?

5 ಅನಿಸಿಕೆಗಳು:

ISHWARA BHAT K ಅಂತಾರೆ...

thumba santhosha

sirigannadam gelge

Priyank ಅಂತಾರೆ...

ರಕ್ಷಣಾ ವೇದಿಕೆಯವರು ಕಳೆದ ಬಾರಿನೂ ಇದೇ ರೀತಿ ಶ್ರಮ ವಹಿಸಿದ್ದರು.
ಅವರ ಶ್ರಮೆ ಪ್ರಶಂಸಾರ್ಹ.
ಕಳೆದ ಬಾರಿ ಸುಮಾರು ೨೫ ಲಕ್ಷ ಹಣ ವ್ಯಯಿಸಿ ಪಾಲಿಕೆ ಸದಸ್ಯರ ಮತ ಹಂಚಿ ಹೋಗದಂತೆ ಕಾಯಬೇಕಾಯಿತು ಅಂತ ನಾರಾಯಣ ಗೌಡರು ಹೇಳಿದ್ದ ನೆನಪು.

irfan khan honnalli ಅಂತಾರೆ...

muslimaru kannadigaralla annuva maadhyamadavara manastithi nijakku badalaagabeku..

karnatakadalli nelesi, illinavare aagiruva ella bhashikaru kannadigare...

Anonymous ಅಂತಾರೆ...

musalmaanaru kannadigaralla annuvudu khandita tappu .. nammagaLa eshto janara shaaleyalli kannada panditaru musalmaanaru ...

ಇನಾಯ್ತುಲ್ಲ ಅಂತಾರೆ...

ನೀವೆಷ್ಟೇ ಬಡುಕೊಂಡರು ಸಾಬರು ಸಾಬ್ರೆಯಾ. ಯೂನಿಸ್ ಉರ್ದು ಬಳಗದಿಂದ ಆರಿಸಲ್ಪಟ್ಟ ಅಭ್ಯರ್ತಿ, ಹಾಗಾದರೆ ಅವನು ಕನ್ನಡಿಗನಾಗಲು ಹೀಗೆ ಸಾಧ್ಯ? ಅವನಿಗೆ ಕನ್ನಡ ಬರುವುದು ಬೇರೆ ವಿಚಾರ.

ಕರಾವಳಿ ಕಡೆ ಇರೋ ಎಷ್ಟೋ ಸಾಬರ ಮನೆಮಾತು ಕನ್ನಡ, ಇವರುಗಳು ಖಂಡಿತ ಕನ್ನಡಿಗರು ಅದು ಹೆಮ್ಮೆಯ ವಿಚಾರ, ಆದರೆ ಎಲ್ಲಾ ಸಾಬರು ಕನ್ನಡಿಗರಲ್ಲ.. ಈ ಯೂನಿಸ್ ಆಗಲಿ, ಶಿವಾಜಿನಗರದ ಸಾಬರಾಗಲಿ, ಪಾದರಾಯನಪುರದ ಸಾಬರಾಗಲಿ ಕನ್ನಡಿಗರಲ್ಲ, ಬರೀ ಅರೆ ಕನ್ನಡ ಗೊತ್ತಿರೋ ಸಾಬರು. ಅವರ ಮಾತಾಗಲಿ, ಕನ್ನಡದ ಬಗ್ಗೆ ಕಾಳಜಿಯಾಗಲಿ ಕೇಳಿದರೆ, ತಿಕ್ಕಲು ಹಿಡಿಯುತ್ತೆ. ಅವರ ಎಷ್ಟೋ ಅಂಗಡಿ ಬೋರ್ಡುಗಳಲ್ಲಿ ಕನ್ನಡವೇ ಸಿಕ್ಕೊಲ್ಲ, ಬರೀ ಉರ್ದು, ಇಂಗ್ಲಿಶ್ಶು, ಸಿಕ್ಕರೂ ಕಾಟಾಚಾರಕ್ಕೆ ಇರುತ್ತೆ.

ಕ.ರ.ವೆ ಯವರ ಬ್ಯಾನರ್ರುಗಳಲ್ಲು ಕೂಡ ಒಮ್ಮೊಮ್ಮೆ ಟಿಪ್ಪುವಿನ ಚಿತ್ರ ಕಾಣುತ್ತೆ.. ಆ ಟಿಪ್ಪು ನಮ್ಮ ಕರುನಾಡಲ್ಲಿ ಅದರಲ್ಲೂ ಮೈಸೂರು ಪ್ರಾಂತ್ಯದಲ್ಲಿ ಕನ್ನಡ ಕಿತ್ತು ಉರ್ದು ತಂದಿದಕ್ಕೆ ಇವತ್ತು ಕೂಡ ಸಾಬರಿಗೆ ಕನ್ನಡಿಕ್ಕಿಂತ ಉರ್ದುಗೆ ಒಲವು ಹೆಚ್ಚು. ಇಂತಹ ವಿಚಾರಗಳನ್ನ ತಿಳಿದು ಕೂಡ ನಮ್ಮ ಲದ್ದಿ ಜೀವಿಗಳು ಟಿಪ್ಪುವಿನ ಪರ ಮಾತಾಡ್ತಾರೆ. ಕ.ರ.ವೆ ಮತ್ತು ಬನವಾಸಿ ಬಳಗ ಕೂಡ ಈ ವಿಚಾರದ ಬಗ್ಗೆ ಗಮನ ಹರಿಸಬೇಕಾಗಿದೆ.

ನಮ್ಮ ನೆರೆ ರಾಜ್ಯಗಳಲ್ಲಿ ಸಾಬರು ಅಲ್ಲಿ ಸ್ಥಳೀಯ ನುಡಿಯನ್ನು ಅವರ ತಾಯ್ನುದಿಯನ್ನಾಗಿ ಮಾಡಿಕೊಂಡರೆ, ನಮ್ಮ ಸಾಬರದ್ದು ಅವರದ್ದೇ ಆದ ಭಾಷೆ, ಬೀದಿ, ಕೇರಿ, ಆಡಳಿತ ಎಲ್ಲ... ಮತ್ತಿನ್ನೆಲ್ಲಿ ಕನ್ನಡಿಗರಾಗ್ತಾರೆ ಸಿವಾ?

ದಯವಿಟ್ಟು ಯಾರೋ ಒಬ್ಬ ನಿಸ್ಸಾರ್ ಅಹ್ಮದ್ದು, ಕರೀಂ ಖಾನು ಅವರನ್ನ ತೋರಿಸಿಬೇಡಿ.. ಅಂತಹವರು ಎಷ್ಟು ಜನ ಸಾಬರು ಇದ್ದಾರೆ? ಅನ್ನದಲ್ಲಿ ಒಂದೆರಡು ಕಲ್ಲು ಸಿಕ್ಕರೆ ಬಿಸಾಡಬಹುದು, ಅನ್ನದಲ್ಲಿ ಕಲ್ಲೇ ಹೆಚ್ಚಾದರೆ ಎಲ್ಲವೂ ಬಿಸಾಡುವ ಪರಿಸ್ಥಿತಿ ಬರುವುದಿಲ್ಲವೆ? ನೀವೇ ಯೋಚನೆ ಮಾಡಿ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails