ಇವ ನಮ್ಮ ಕನ್ನಡದ ರಾಜಾಧಿರಾಜ!



ಕನ್ನಡದ ಮೊದಲ ದೊರೆ ಮಯೂರ ಎಂದೊಡನೇ ಕಣ್ಮುಂದೆ ಬರೋ ಚಿತ್ರ ಡಾ.ರಾಜ್ ಅವರದ್ದು. ಕನ್ನಡ ಇತಿಹಾಸವನ್ನು ಒಂದೊಂದಾಗಿ ಮುತ್ತಂತೆ ಕಟ್ಟಿಕೊಟ್ಟ ಮುತ್ತುರಾಜನಿಗೆ ಕನ್ನಡದ ಜನತೆ ಎಷ್ಟು ನಮನಗಳನ್ನು ಸಲ್ಲಿಸಿದ್ರೂ ಸಾಲ್ದು. ಮಯೂರ ಚಿತ್ರದ ಈ ಸನ್ನಿವೇಶಾನೇ ನೋಡಿ. ಎಂಥಾ ಅಭಿನಯಾ, ಎಂಥಾ ಸಂಭಾಷಣೆ, ಎಂಥಾ ದೃಶ್ಯಾವಳಿ. ಈ ಒಂದು ಸನ್ನಿವೇಶ ಕನ್ನಡಿಗರ ಎದೆಯಲ್ಲಿ ಸ್ವಾಭಿಮಾನದ ಕಿಚ್ಚು ಬಡಿದೆಬ್ಬಿಸೋದು ಖಂಡಿತಾ.

ಬಹುದಿನಗಳಿಂದ ಮೈಮರೆವೆಯಿಂದ ಮೆತ್ತಿಕೊಂಡಿರುವ ಕೊಳೆಯನ್ನು ಕೊಚ್ಚಲು ಇಂಥಾ ಇತಿಹಾಸದ ಕಥೆಗಳು ಪ್ರೇರಣೆ ನೀಡುತ್ತವೆ. ಅದರಲ್ಲೂ ಕನ್ನಡಿಗರಲ್ಲಿ ಕನ್ನಡತನದ ಜಾಗೃತಿ ಮೂಡಿಸಿದ ಮಹತ್ಕಾರ್ಯ ಡಾ.ರಾಜಕುಮಾರ್ ಅವ್ರಿಂದ ಆಗಿದೆ. ರಾಜ್ ಏನ್ ಮಾಡಿದಾರೆ? ಏನ್ ಮಾಡಿದಾರೆ? ಅನ್ನೋರ್ಗೆಲ್ಲಾ ಉತ್ತರ "ಕನ್ನಡಿಗರ ಕಣಕಣದಲ್ಲಿ ಸ್ವಾಭಿಮಾನ, ನಾಡಭಿಮಾನ, ನುಡಿಯಭಿಮಾನ ತುಂಬಿ ಎದೆಯಲ್ಲಿ ಕೆಚ್ಚು ತುಂಬಿದ್ದಾರೆ" ಅನ್ನೋದೇ ಆಗಿದೆ ಗುರು!

ಇಂಥಾ ಮಹಾನುಭಾವ ನಮಗೆ ಪರಿಚಯಿಸಿದ ರಣಧೀರ ಕಂಠೀರವ, ಮಯೂರವರ್ಮ, ಇಮ್ಮಡಿ ಪುಲಿಕೇಶಿ, ಶ್ರೀಕೃಷ್ಣದೇವರಾಯ... ನಮ್ಮ ಕೋಟಿ ಕೋಟಿ ಕನ್ನಡಿಗರೆದೆಯಲ್ಲಿ ಸ್ವಾಭಿಮಾನದ ದೀಪ ಹಚ್ಚಿದೆ ಗುರು! ಈ ಬೆಳಕು ನೀಡಿದ ಕನ್ನಡ ಹೃದಯ ಸಿಂಹಾಸನಾಧೀಶ್ವರನಿಗೆ ನಮ್ಮ ನಮನ. ಡಾ. ರಾಜ್ ಪುಣ್ಯತಿಥಿಗೆ ಏನ್ ಗುರುವಿನ ಶ್ರದ್ಧಾಂಜಲಿ.

11 ಅನಿಸಿಕೆಗಳು:

Sandesh ಅಂತಾರೆ...

ಹೌದು! ಮಯೂರ ಎಂದರೆ ನೆನಪಾಗುವುದು ರಾಜ್ ರ ಅಭಿನಯ ಸರಿ! ಅವರಂತೆ ಸಮರ್ಥವಾಗಿ ಯಾರೂ ಪೌರಾಣಿಕ ಪಾತ್ರಗಳಲ್ಲಿ ಅಭಿನಯಸಲಾರರು. ಹಾಗೆಯೇ ನಾವು ಇಲ್ಲಿ ಮಯುರದ ಹಿಂದಿದ್ದ ಸಾಹಿತ್ಯ ಶಕ್ತಿ ದೇವುಡು ನರಸಿಂಹಶಾಸ್ತ್ರಿಗಳನ್ನು ನೆನಪಿಸಬೇಕು.

Anonymous ಅಂತಾರೆ...

ರಾಜಣ್ಣ ಕನ್ನಡಿಗರ ಗೌರವದ ಸ೦ಕೇತ. ಇಲ್ಲಿ ಅನ್ನಕ್ಕೋಸ್ಕರ ಬ೦ದು ನೆಲೆಸಿರುವ ಪರಭಾಷಿಕರು ರಾಜಣ್ಣನ ಪರಿಚಯವಿಲ್ಲದಿದ್ದರೂ, ರಾಜಣ್ಣನ ಬಗ್ಗೆ ಕೀಳಾಗಿ ಮಾತಾಡುವುದಲ್ಲದೆ, ಕನ್ನಡಿಗರ ಒಗ್ಗಟ್ಟಿಗೇ ಸಾವಾಲು ಹಾಕುತ್ತಾರೆ.

ಇವರ ನೆನಪಿನಲ್ಲಿ ಸ್ಟಾ೦ಪ್ ಬಿಡುಗಡೆ ಮಾಡುತ್ತಿದ್ದಾರೆ ಅ೦ತ ಕೇಳಿದ್ದೆ.. ಆದರೆ ಆ ಸುದ್ದಿ ಏನಾಯಿತು ಇನ್ನೂ ಗೊತ್ತಿಲ್ಲ.

Madhu ಅಂತಾರೆ...

Annavru namge Krishnadevaraya, Mayura, babruvahana, Immadi Pulakeshi, Kalidasa ivrella hegidru antha thorisikottoru. Hats off.

ಪಂಜು ಅಂತಾರೆ...

ಅಣ್ಣಾ, ಮತ್ತೆ ಹುಟ್ಟಿ ಬಾ ಕರುನಾಡಿಗೆ
ನಿನ್ನ ಅಭಿಮಾನಿಗಳು ಕಾದಿಹರು

@anonymous
ಪರಭಾಷಿಕರು ಮಾತ್ರವಲ್ಲ, ನಮ್ಮ ಎಷ್ಟೋ ಕನ್ನಡಿಗರೂ ಸಹ ಹಿಂದೆ ಮುಂದೆ ಯೋಚಿಸದೆ, ಅಣ್ಣಾವ್ರ ಬಗ್ಗೆ ಕೀಳಾಗಿ ಮಾತನಾಡುವುದು ಉಂಟು. ಅವರಿಗೆ ಬುದ್ಧಿ ಹೇಳುವಷ್ಟು ದೊಡ್ಡವನಲ್ಲ, ಯೋಗಿಯೂ ಅಲ್ಲ.

ಆದರೆ ಒಂದು ಮಾತ್ರ ನಿಜ - ರಾಜಕುಮಾರ್ ಒಂದು ವೇಳೆ ಬೇರೆ ನಾಡಿನಲ್ಲಿ ಹುಟ್ಟಿದ್ದರೆ, ಅವರನ್ನ ದೇವರನ್ನಾಗಿ ಪೂಜಿಸುತಿದ್ದರು ಅನ್ನುವುದಕ್ಕೆ ಸ್ವಲ್ಪ ಕೂಡ ಅನುಮಾನವಿಲ್ಲ. ಹೆಣ್ಣಿಗೆ ಹೆಣ್ಣೇ ವೈರಿ ಅಂದ ಹಾಗೆ, ಕನ್ನಡಿಗರಿಗೆ ಕನ್ನಡಿಗರೇ ಕಲ್ಲ್ ಹಾಕೋದು ಅನ್ನುವ ನಾಣ್ಣುಡಿಯನ್ನ ಅರಿಯಬೇಕಾಗಿದೆ.

ಆದರೂ ಸಹ ಧೃಡ ನಿರ್ಧಾರವಿರುವ ಕನ್ನಡಿಗರು ಎಂದೆಂದಿಗೂ ಕನ್ನಡಕ್ಕಾಗಿ ಪಣತೊಟ್ಟು ಹೋರಾಡುತ್ತಾರೆ.

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

Ram Prasad ಅಂತಾರೆ...

ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ....ಎಂಬ ರಾಜರ ಹಾಡಿನಂತೆ, ರಾಜ್ ಅಭಿನಯಕ್ಕೆ ರಾಜ್ ಅವರೇ ಸಾಟಿ. ಅವರು ಮಾಡಿರುವ ಚಿತ್ರಗಳಿಂದ ಕನ್ನಡ ಜಾಗ್ರತಿ ಮೂಡಿರುವುದಂತೂ ಯಾರು ಅಲ್ಲಗೆಳೆಯುವಂತಿಲ್ಲ. ರಾಜ್ ಅವರ ಸಿನೆಮಾದ ಸಂಭಾಷಣೆ ಹಾಡುಗಳು...ಅಹಾ...ಒಂದು ಕನಾಸಾಗಿ ಹೋಯಿತು.

ಎಲ್ಲೇ ಇರು ಹೇಗೆ ಇರು, ಎಂದೆಂದಿಗೂ ನೀ ಕನ್ನಡವಾಗಿರು
ಸಿರಿಗನ್ನಡಂ ಗೆಲ್ಗೆ.

ರಾಮ್ ಪ್ರಸಾದ್

ksk ಅಂತಾರೆ...

Very good article... www.knowinfonow.com
KSK

Priyank ಅಂತಾರೆ...

ನಿಜಕ್ಕೂ, ನಮ್ಮ ನಾಡು ಕಂಡ ಅತಿ ದೊಡ್ಡ ವ್ಯಕ್ತಿಗಳಲ್ಲಿ ಒಬ್ಬರು.

ಹರಿಜೋಗಿ ಅಂತಾರೆ...

ಡಾ| ರಾಜ್ ಅಪ್ರತಿಮ ನಟ (ಮುಖ್ಯವಾಗಿ ಚಾರಿತ್ರಿಕ, ಪೌರಾಣಿಕ ಪಾತ್ರಗಳಲ್ಲಿ) ಎಂಬುದರ ಬಗ್ಗೆ ಎರಡು ಮಾತಿಲ್ಲ.. ಅವರು ಬಹಳ ಸಾತ್ವಿಕ ಮನುಷ್ಯ ಕೂಡಾ.. ನಿಜ ಜೀವನದಲ್ಲೂ ಮಹಾ ಆದರ್ಶವಾದಿ.. ಇತರರಿಗೆ ಪ್ರೇರಣೆ. ಆದರು ಆತ ತನ್ನ ವರ್ಚಸ್ಸನ್ನು ಸಾಮಾಜಿಕ ಉಪಯೋಗಕ್ಕೆ ಬಳಸಲಿಲ್ಲವೆಂಬುದು ಅಷ್ಟೇ ಸತ್ಯ. ಅವರ ಚಿತ್ರಗಳಿಂದ ಪಾತ್ರಗಳಿಂದ ಪ್ರೇರಿತರಾದವರು ಅವರ ಅಭಿಮಾನಿ ಸಂಘ ಕಟ್ಟಿಕೊಂಡು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿದ್ದರೂ ಡಾ|ರಾಜ್ ಸ್ವತಃ ಕೈ ಹಾಕಿದ ಕಾರ್ಯಗಳು ಬಹಳ ವಿರಳ. ಡಾ| ಅನಂತಮೂರ್ತಿಯವರೂ ಈ ಮಾತನ್ನು ಒಮ್ಮೆ ಪ್ರಸ್ತಾಪಿಸಿದ್ದರು. ಅವರು ಮನಸ್ಸುಮಾಡಿದರೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಬಹುದಾಗಿತ್ತು. ನೇತ್ರದಾನ ದಂತಹ ಕಾರ್ಯಗಳಲ್ಲಿ ಅವರು ಬಹಳ ತಡವಾಗಿ ಸೇರಿಕೊಂಡರು. ನಮ್ಮ ದೇಶದ ಮೂಲಭೂತ ಸಮಸ್ಯೆ ಭ್ರಷ್ಟಾಚಾರದ ವಿರುದ್ಧ ಚಳುವಳಿ ಮಾಡಬಹುದಿತ್ತು ಎಂದು ನನ್ನ ವೈಯಕ್ತಿಕ ಅಭಿಪ್ರಾಯ.

ಸಾಗರದಾಚೆಯ ಇಂಚರ ಅಂತಾರೆ...

ಮಯೂರ ನನಗೂ ತುಂಬಾ ಇಷ್ಟವಾದ ಚಲನಚಿತ್ರ. ರಾಜ್ ಗೆ ರಾಜ್ ಮಾತ್ರ ಸಾಟಿ

Anonymous ಅಂತಾರೆ...

nammellara aaradhya daiva raj!
Raj tamma pratibhe indashte alla tamma vyaktitvadinda yellara mana sooregondavaru.
Doorada calcutta nalli nelasiruva nanage raj chitragalu maneya nenapannu maresuva saadhana.Kaalaateetavaagi raj ra yella chitragallalli avara pratibhe ,vinaya haasu hokkagide.
Ondu reetiyalli Raj kanndatanada,kannadigara sahrudateya ,kannadigara soujanyada sanketa.
Tamma yella chitragallallu kannadada moulyagalanna yettihidida dheemanta.

Nannannu yavvagalu kaaduva prashne yendare Raj karnatakadallallade bere kade huttiddare daivatva padeyuttiddareno..

Etv yalli Jayant kaikini nadesida 'natasarvabhoumanige namaskaara' karyakramada DVD horatandere kannadigarige aa channel maduva dodda upakaaravaguttade.

eN GURU ee nittinalli sahaaya madaballude?

Basavaraj babu

Kannada ಅಂತಾರೆ...

full hot maga ;)

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails