ಕೈಯ್ಯಲ್ಲಿ ಕನ್ನಡ ಪತ್ರಿಕೆ ಇಟ್ಕೊಂಡೇ ಏರ್ ಪೋರ್ಟಿಗೆ ಹೋಗೋಣ!


ಒಂದು ಪ್ರದೇಶದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಲಿ, ಇನ್ಮುಂದೆ ಆ ವಿಮಾನ ನಿಲ್ದಾಣದ ಆವರಣದಲ್ಲಿ ಆ ಪ್ರದೇಶದ ಜನರ ಭಾಷೆಯ ಪತ್ರಿಕೆಗಳನ್ನು ಮಾರಬಾರ್ದು ಅನ್ನೋ ಆದೇಶ ಹೊರಡಿಸಿದೆ ಅನ್ನೋ ಅಂಥಾ ಒಂದು ಸುದ್ದೀನಾ ಎಂದಾದರೂ ಯಾವುದಾದರೂ ಪತ್ರಿಕೇಲಿ ಕಾಣಕ್ಕೆ ಸಾಧ್ಯಾನಾ ಗುರು? ಬಿಡ್ರಿ ತಮಾಷೇನಾ, ಪ್ರಪಂಚದ ಯಾವ ಮೂಲೇಲೂ ಇಂಥ ಸುದ್ದಿ ನೋಡಕ್ಕೆ ಆಗಲ್ಲಾ ಅನ್ತಾ ಇದೀರಾ?

ಇಲ್ಲಿರೋದು ಹೀಗೇ...

ಹಾಗಾದ್ರೆ ಬನ್ನಿ... ಭರತ ವರ್ಷದ ಭರತ ಖಂಡದ ಜಂಬೂ ದ್ವೀಪದ ದಂಡಕಾರಣ್ಯದ ಗೋದಾವರಿಯ ದಕ್ಷಿಣ ದಂಡೆಯಲ್ಲಿರುವ ಕರ್ನಾಟಕವೆಂಬ ರಾಜ್ಯದ ರಾಜಧಾನಿ ಬೆಂಗಳೂರಿಗೆ. ಅಲ್ಲಿಂದ ಸೀದಾ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ! ನಮ್ಮ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡ ಪತ್ರಿಕೆಗಳಿಗೆ ನಿಷೇಧ ಹೇರಿರೋದನ್ನು ಖಂಡುಸ್ತೀನಿ ಅಂತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಯುತ ಮುಖ್ಯಮಂತ್ರಿ ಚಂದ್ರು ಅವ್ರು ಅಂದಿದಾರೆ ಅನ್ನೋ ಸುದ್ದಿ ದಟ್ಸ್ ಕನ್ನಡ ಪತ್ರಿಕೆಯ 2009ರ ಮೇ 3ನೇ ತಾರೀಕಿನ ಒಂದು ವರದಿ ಹೇಳ್ತಿದೆ ಗುರು! ಪ್ರಪಂಚದ ಬೇರೆ ಯಾವ ದೇಶದ ವಿಮಾನ ನಿಲ್ದಾಣದಲ್ಲೂ ಇಲ್ದಿರೋ ಇಂತಹ ಅತಿರೇಕಗಳನ್ನು ಪ್ರಶ್ನಿಸಿ, ಬದಲಾಯಿಸೋ ಶಕ್ತಿ ಇರೋದು ಅಲ್ಲಿಗೆ ಹೋಗೊ ಕನ್ನಡದ ಗ್ರಾಹಕನಿಗೆ ಮಾತ್ರ ಗುರು.

ಅದಕ್ ಈಗ ನಾವು ಏನ್ ಮಾಡೋಣ ಅಂತೀರಾ?

ವಿಮಾನ ನಿಲ್ದಾಣಕ್ಕ ಹೋದಾಗಲೆಲ್ಲ ಅಲ್ಲಿನ ಅಂಗಡಿಗಳಲ್ಲಿ ಕನ್ನಡ ಪತ್ರಿಕೆಗಳಿಗೆ ಆಗ್ರಹಿಸೋಣ. ಕನ್ನಡ ಪತ್ರಿಕೆಗಳನ್ನ ಮಾರಕ್ಕೆ ಅವಕಾಶ ಮಾಡ್ಕೊಡಬೇಕು ಅಂತ ವಿಮಾನ ನಿಲ್ದಾಣದವರಿಗೆ ದೂರು ಕೊಡೋಣ. ವಿಮಾನದ ಒಳಗೆ ಕನ್ನಡದ ಪತ್ರಿಕೆಗಳಿಗೆ, ಕನ್ನಡ ಮನರಂಜನೆಗಾಗಿ ಒತ್ತಾಯಿಸೋಣ. ಪತ್ರಿಕೆಗಳಿಗೆ ಪತ್ರ ಬರೆಯೋ ಮೂಲಕ ಇನ್ನಷ್ಟು ಜನರು ನಿಲ್ದಾಣದಲ್ಲಿ ಕನ್ನಡಕ್ಕಾಗಿ ಒತ್ತಾಯಿಸುವ ಜಾಗೃತಿ ತನ್ನಿ. ಹೋರಾಟಗಳಿಗೆ ಇರೋ ಶಕ್ತಿ ಗ್ರಾಹಕನ ದೂರು ಪತ್ರಕ್ಕೂ ಇದೇ ಅನ್ನೋದು ನೆನಪಲ್ಲಿಟ್ಟುಕೊಂಡ್ರೆ ಖಂಡಿತ ನಾವೂ ಬದಲಾವಣೆ ತರಬೋದು! ಏನಂತೀ ಗುರು?

ಕೊನೆಹನಿ : ವಿಮಾನನಿಲ್ದಾಣಕ್ಕೆ ಹೋಗೋವಾಗ ಮರೆಯದೆ ಒಂದೆರಡು ಕನ್ನಡ ಪತ್ರಿಕೆಗಳನ್ನು ಕೊಂಡೊಯ್ಯೋಣ. ಲಾಂಜಿನಲ್ಲಿ ಕುಳಿತೋ, ವಿಮಾನದ ಒಳಗೋ ಓದಿ ಅದನ್ನು ಅಲ್ಲೇ ಬಿಟ್ಟೇಳೋಣ.

19 ಅನಿಸಿಕೆಗಳು:

Priyank ಅಂತಾರೆ...

ಇದು ಅತಿರೇಕ ಗುರು.
ಕನ್ನಡ ಪೇಪರ್ ಮಾರಿದರೆ, B.I.A.Lನೋರಿಗೆ ಏನ್ ತೊಂದರೆ ಅಂತೆ?
ಇವರಿಗೆ ಏರ್ಪೋರ್ಟ್ ಕಟ್ಟಿ ಅಂತ ಜಾಗ ಕೊಟ್ಟಿದ್ದೆ ತಪ್ಪಾಯ್ತು .

Srirang (Brahmana) ಅಂತಾರೆ...

ಇವತ್ತು ಕನ್ನಡದ ಬಗ್ಗೆ ಒಂದು ಸಂತೋಷದ ಸುದ್ದಿ ತಿಳಿಯುವಷ್ಟರಲ್ಲಿ ಈ ಸುದ್ದಿ ತಿಳಿಯಿತು. ಸಂತೋಷದ ಸುದ್ದಿ ಅಂದ್ರೆ ಇವತ್ತು ಬೆಳಿಗ್ಗೆ ಯಾವುದೋ ಬ್ಯಾಂಕಿನವರಿಂದ ಕರೆ ಬಂದಿತ್ತು, ಅದೇ ನಮ್ಮ ಈ ವಿಮಾ ಯೋಜನೆಯಲ್ಲಿ ದುಡ್ಡು ಹಾಕಿ ಅಂತಾ. ಆದ್ರೆ ಪ್ರತಿ ಬಾರಿಯಂತೆ ಈತ ಇಂಗ್ಲಿಷಲ್ಲಿ ಕೊರಿಲಿಲ್ಲಾ, ಚೊಕ್ಕ ಕನ್ನಡದಲ್ಲಿ ಮಾತಾಡಿದ. ನನಗಂತ್ರೂ ತುಂಬಾ ಖುಷಿ ಆಯ್ತು. ಈಗ ಇಲ್ಲಿ ನೋಡಿದ್ರೆ ಆ ಕೆಟ್ಟ ಸುದ್ದಿ. ಇದು ನಿಜವಾಗ್ಲು ನಮ್ಮ ಮೂರ್ಖತನವನ್ನ ತೋರಿಸತ್ತೆ. ಪಿಂಕಾಅವರು ಹೇಳಿದಹಾಗೆ ಕನ್ನಡ ಪತ್ರಿಕೆ ಇದ್ರೆ ಅವರಿಗೇನು ಕಷ್ಟಾ ಗುರು. ಇದರ ಬಗ್ಗೆ ಪತ್ರಿಕೆಯವರು ಸಹ ಪ್ರತಿಭಟಿಸಬೇಕು.

Anonymous ಅಂತಾರೆ...

ಚಂಡಾಲ ದೇವ್ರಿಗೆ ಚಪ್ಲೀ ಪೂಜೆ ಅಂದಹಾಗೆ ಈ ಆದೇಶ ಹೊರಡಿಸೋರ್ನ ಸಾರ್ವಜನಿಕವಾಗಿ ಜ್ವರ ಬರೋ ತನಕ ಕೆರದಲ್ಲಿ ಬಡೀಬೇಕು.

-ಸುಬ್ಬ

Akshaya ಅಂತಾರೆ...

nange ondu artha agalla. idella karnatakadalle yake nediyatte. yake annodu nange innu ondu bagehariyada preshne aagi ulkondide. idakke answer enadru sikre. dayavittu tilsi guru

Keshav.Kulkarni ಅಂತಾರೆ...

ನಿಜ, ವಿಮಾನತಾಣ ಬಿಡಿ, ನನಗೆ ಬೆಂಗಳೂರಿನ ರೇಲ್ವೆತಾಣದಲ್ಲಿ ಕನ್ನಡ ಪತ್ರಿಕೆ ಸಿಗಲಿಲ್ಲ ಎರಡು ವರ್ಷದ ಹಿಂದೆ. ಈಗ ಹೇಗಿದೆ ಗೊತ್ತಿಲ್ಲ.
- ಕೇಶವ

Anonymous ಅಂತಾರೆ...

Idakkella onde daari. Karnatakakke beku Article 370 Kashmirada taraha

namma ward 52 ಅಂತಾರೆ...

ಸ್ನೇಹಿತರೆ
ಕನ್ನಡ ರಾಜ್ಯದ ರಾಜಧಾನಿಯ ವಿಮಾನ ನಿಲ್ದಾಣದಲ್ಲಿ ಕನ್ನಡ ಪತ್ರಿಕೆ ಮಾರಲು ಅನುಮತಿ ಇಲ್ಲಾಂದ್ರೆ , ಅದು ನಿಜಕ್ಕೂ ಕನ್ನಡಿಗರ ದುರ್ಭಾಗ್ಯ. ಕೇವಲ ಕನ್ನಡ ಪತ್ರಿಕೆಗಾಗಿ ಅಗ್ರಹಿಸುವದಿಷ್ಟೇ ಅಲ್ಲದೆ ಕನ್ನಡಿಗರಿಗೆಲ್ಲರಿಗು ಕನ್ನಡದಲ್ಲೇ ವ್ಯವಹರಿಸುವಂತೆ ವಿನಂತಿಸಿಕೊಳ್ಳೋಣ. ಪರದೇಶಕ್ಕೆ ಹೋದಾಗ ನಮಗಾಗುವ ಭಾಷಾ ಸಮಸ್ಯೆಯನ್ನ ನಾವು ಮರಿತಿಲ್ಲ ತಾನೆ, ಅವರ ಭಾಶಾಭಿಮಾನವನ್ನ ಹೊಗಳಿ ಹಾಡುವ ನಮಗೆ, ನಮ್ಮ ಭಾಷೆಯ ಬಗ್ಗೆ ಸ್ವಲ್ಪ ಗೌರವ ವಾದರೂ ಇರಲಿ. ಪರಕೀಯರ ಭಾಷೆಯನ್ನು ಬಿಗಿದಪ್ಪಿಕೊಂಡು ಕುಣಿದಾಡುವಷ್ಟು ಉದಾರಭಾವನೆ ಕನ್ನಡಿಗರಿಗೆ ಬರದಿರಲಿ ಅಕಸ್ಮಾತ್ ಅಪ್ಪಿ ತಪ್ಪಿ ಬಂದ್ರು ಕನ್ನಡವ ಮರೆಯಿದಿರಿ
ಪ್ರಶಾಂತ್ ಆಡೂರ್

ಸುನಿಲ್ ಜಯಪ್ರಕಾಶ್ ಅಂತಾರೆ...

ಪತ್ರಿಕೆ ಜೊತೆಗೆ, ತರಂಗ ಸುಧಾ ಮಯೂರಗಳನ್ನೂ ತೆಗೆದುಕೊಂಡು ಹೋಗೋಣ ಗುರು.

Anonymous ಅಂತಾರೆ...

ಸ್ನೇಹಿತರೆ
ಕನ್ನಡ ರಾಜ್ಯದ ರಾಜಧಾನಿಯ ವಿಮಾನ ನಿಲ್ದಾಣದಲ್ಲಿ ಕನ್ನಡ ಪತ್ರಿಕೆ ಮಾರಲು ಅನುಮತಿ ಇಲ್ಲಾಂದ್ರೆ , ಅದು ನಿಜಕ್ಕೂ ಕನ್ನಡಿಗರ ದುರ್ಭಾಗ್ಯ. ಕೇವಲ ಕನ್ನಡ ಪತ್ರಿಕೆಗಾಗಿ ಅಗ್ರಹಿಸುವದಿಷ್ಟೇ ಅಲ್ಲದೆ ಕನ್ನಡಿಗರಿಗೆಲ್ಲರಿಗು ಕನ್ನಡದಲ್ಲೇ ವ್ಯವಹರಿಸುವಂತೆ ವಿನಂತಿಸಿಕೊಳ್ಳೋಣ. ಪರದೇಶಕ್ಕೆ ಹೋದಾಗ ನಮಗಾಗುವ ಭಾಷಾ ಸಮಸ್ಯೆಯನ್ನ ನಾವು ಮರಿತಿಲ್ಲ ತಾನೆ, ಅವರ ಭಾಶಾಭಿಮಾನವನ್ನ ಹೊಗಳಿ ಹಾಡುವ ನಮಗೆ, ನಮ್ಮ ಭಾಷೆಯ ಬಗ್ಗೆ ಸ್ವಲ್ಪ ಗೌರವ ವಾದರೂ ಇರಲಿ. ಪರಕೀಯರ ಭಾಷೆಯನ್ನು ಬಿಗಿದಪ್ಪಿಕೊಂಡು ಕುಣಿದಾಡುವಷ್ಟು ಉದಾರಭಾವನೆ ಕನ್ನಡಿಗರಿಗೆ ಬರದಿರಲಿ ಅಕಸ್ಮಾತ್ ಅಪ್ಪಿ ತಪ್ಪಿ ಬಂದ್ರು ಕನ್ನಡವ ಮರೆಯಿದಿರಿ
ಪ್ರಶಾಂತ್ ಆಡೂರ್

ಸೋಮ್ನಳ್ಳಿ ಸುರೇಶ ಅಂತಾರೆ...

ನಿಜ ಗುರು, ಇಂಥಾ ಸುದ್ದಿ ಪ್ರಪಂಚದ ಬೇರೆ ಯಾವ ಮೂಲೇಲೂ ನೋಡಲು ಸಾಧ್ಯವಿಲ್ಲ. ಕನ್ನಡಿಗನಲ್ಲಿರುವ ಕೀಳರಿಮೆಯೇ ಇಂಥ ಅನಾಹುತಕ್ಕೆ ಕಾರಣ. ನಾವು ಗ್ರಾಹಕರಾಗಿ, ಸೇವೆ ಕೊಡೋರ ಕಾಲು ಹಿಡ್ಕೋತೀವಲ್ಲ... ಇಂಥಾ ಜನನ್ನೂ ಪ್ರಪಂಚದ ಬೇರೆ ಯಾವ ಮೂಲೇಲೂ ನೋಡಲು ಸಾಧ್ಯವಿಲ್ಲ! ನಾವು ಕನ್ನಡಿಗರು ಬದಲಾಗಬೇಕು... ನಮ್ಮ ತನ ಏನು ಅಂತ ತಿಳಿಬೇಕು. ಆಗ ನಮಗೆ ಬೇಕ್ಕಾದ್ದು ನಮಗೆ ದಕ್ಕತ್ತೆ. ಇಲ್ಲದಿದ್ರೆ ದ್ಯಾವ್ರೇ ಗತೆ!

Anonymous ಅಂತಾರೆ...

Hindi Gulaamaraagiruvarege ide gati

Anonymous ಅಂತಾರೆ...

"Hindi Gulaamaraagiruvarege ide gati"
Chintisabedi. kannadigarannu poreyalu hosa shakti hora hommuttide.

hamsanandi ಅಂತಾರೆ...

ಅಯ್ಯೋ ದೇವ್ರೆ,
ಬೆಂಗಳೂರು ಏರ್ಪೋಟ್ರಲ್ಲೇನು ಸ್ವಾಹಿಲಿ ಪೇಪರ್ರಿಡ್ಬೇಕೇನು? ಇಂತಹ ಅನ್ಯಾಯಕ್ಕೆ ಯಾರೂ ಸರಿಯಾಗಿ ಉಗಿಯೋರಿಲ್ವಾ?

Anonymous ಅಂತಾರೆ...

15 varshadimda naanu idanna maadtaa iddene. airportnalli, aeroplanenalli j=kannada papaer odde majaa.

raviraj padukone ಅಂತಾರೆ...

prashanth avare, nimma maatu nija,,
naavu elle hodaru namma bhashe bit kodabaaradu,,
hindi rashtra bhashe anno sullige naavyaru baliyaagabaaradu,,

karnatakadalli kannadave rashtra bhashe,,

BIAL nadeyannu khandisi,, ellaru patra bareyiri ee email id ge: feedback@bialairport.com

Prashanth ಅಂತಾರೆ...

Nanu 15 dinada kelage Bengaluru Antararastriya Vimana Nildanakke bheti kottidde.

Alliruva yella Kannada pustaka gala bele kevala Rs. 1000 maatra aagittu. Nanu yella pustakagalannu ottige khareedisi mattadi, matte pustakagalannu tarisi anta helide.

- Prashanth

Anonymous ಅಂತಾರೆ...

hatrik hodimaga

Anonymous ಅಂತಾರೆ...

EE vishaya odudakke nanage dhukha agutte. idenu gathi. Namma naadinalli namage maryade illa. Thkshana naavu prtibatisabeku. Airporet bandu maadi . Kannada rakshana Samthi yaru enumadithhidaare. Srkardavaru enu madu thiddare. Inthaha avamana yarigu bekilla. Prathi bat6isi.

Jayaswamy From Chicago.

Padyana Ramachandra ಅಂತಾರೆ...

ಭರತ ಖಂಡದ ಜಂಬೂ ದ್ವೀಪದ ದಂಡಕಾರಣ್ಯದ ಗೋದಾವರಿಯ ದಕ್ಷಿಣ ದಂಡೆಯಲ್ಲಿರುವ ಕರ್ನಾಟಕವೆಂಬ ರಾಜ್ಯದ ರಾಜಧಾನಿ ಬೆಂಗಳೂರು ನಗರ ಕನ್ನಡ ಭಾಷಾ ರಾಜಧಾನಿಯಗಿರಲಿ ಎಂದು ನನ್ನ ಹಾರೈಕೆ.

-ಪ.ರಾಮಚಂದ್ರ
ರಾಸ್ ಲಫ್ಫಾನ್, ಕತಾರ್ ದೇಶ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails