ಕೇಂದ್ರದಲ್ಲಿ ಮಂತ್ರಿಗಳಾಗೋ ಈ ಇಬ್ಬರು ಕನ್ನಡಿಗರು!

ಈ ಬಾರಿಯ ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಿರೋದು ಸರಿಯಷ್ಟೆ. ಈ ಸಾರಿ ಭಾಳ ವರ್ಷಗಳ ಮೇಲೆ ಸಂಪುಟ ದರ್ಜೆಯ ಸಚಿವರಾಗಿ ಕನ್ನಡಿಗರಾದ ಶ್ರೀ ಎಸ್.ಎಂ.ಕೃಷ್ಣ ಮತ್ತು ಶ್ರೀ. ವೀರಪ್ಪ ಮೊಯ್ಲಿಯವರುಗಳು ಆಯ್ಕೆಯಾಗಿರೋ ಸುದ್ದಿ ದಿನಪತ್ರಿಕೆಗಳಲ್ಲಿ ರಾರಾಜಿಸ್ತಾ ಇದೆ ಗುರು!


ಕರ್ನಾಟಕದ ಹಿರಿಯ ರಾಜಕಾರಣಿಗಳು


ಈ ಇಬ್ಬರು ಕಾಂಗ್ರೆಸ್ ಮುಖಂಡರಿಗೆ ನಮ್ಮ ಅಭಿನಂದನೆಗಳನ್ನು ಮೊದಲಾಗಿ ಸಲ್ಲಿಸುತ್ತೇವೆ. ಈ ಇಬ್ರೂ ಮೂರು ನಾಲ್ಕು ದಶಕಗಳಿಂದ ರಾಜಕಾರಣ ಮಾಡ್ಕೊಂಡು ಬಂದಿದ್ದಾರೆ. ಮಂತ್ರಿಗಳಾಗಿ ಈ ಬಾರಿ ನೇಮಕವಾಗೋ ಮುನ್ನ ಅನೇಕ ರಾಜಕೀಯ ಸ್ಥಾನಮಾನಗಳ ಅನುಭವ ಇವರಿಬ್ಬರಿಗೆ ಇದೆ. ಇಬ್ಬರೂ ಕರ್ನಾಟಕದ ರಾಜ್ಯ ರಾಜಕಾರಣದ ಉನ್ನತ ಪೀಠವಾದ ಮುಖ್ಯಮಂತ್ರಿ ಸ್ಥಾನದಲ್ಲಿ ದುಡಿದು ಅನುಭವ ಇರೋರೇ ಆಗಿದ್ದಾರೆ. ಎಸ್.ಎಂ ಕೃಷ್ಣರವರು ಮುಖ್ಯಮಂತ್ರಿಯಾಗಿದ್ದಾಗ ಅತಿಕ್ಲಿಷ್ಟಕರವಾದ ಡಾ. ರಾಜ್ ಅಪಹರಣದಂತಹ ಸನ್ನಿವೇಶಾನ ಎದುರಿಸಿದ್ದವರು.


ಇನ್ನು ವೀರಪ್ಪ ಮೊಯ್ಲಿಯವರು ಕೂಡಾ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ತೀವ್ರ ಹೋರಾಟ ನಡೆಸೇ ಉನ್ನತ ಶಿಕ್ಷಣಕ್ಕಾಗೆ ನಡೆಸೋ ಸಿ.ಇ.ಟಿಯನ್ನು ಜಾರಿಗೆ ತಂದಿದ್ದವರು. ಆಡಳಿತ ಸುಧಾರಣಾ ಸಮಿತಿಯ ಅಧ್ಯಕ್ಷರಾಗಿ ಕೂಡಾ ಕಾರ್ಯನಿರ್ವಹಿಸಿರೋ ಅನುಭವಾ ಇರೋರು ಇವರು. ಈ ಇಬ್ಬರ ಸೇರ್ಪಡೆಯಿಂದ ಖಂಡಿತವಾಗಿ ಕೇಂದ್ರಸರ್ಕಾರದ ಬಲ ಹೆಚ್ಚಿರೋದು ಸುಳ್ಳಲ್ಲ.

ಈ ಬಾರಿ ಎರಡು ಸಚಿವ ಸ್ಥಾನ ಯಾಕೆ?

ಹೇಳಿ ಕೇಳಿ ಕರ್ನಾಟಕದಲ್ಲಿ ಕಾಂಗ್ರೆಸ್ಸು ಗೆದ್ದಿರೋದೇ ಆರು ಸ್ಥಾನಗಳನ್ನು. ಅಂಥಾದ್ರಲ್ಲಿ ಇಬ್ಬಿಬ್ಬರಿಗೆ ಹೆಂಗಪ್ಪಾ ಸಂಪುಟ ದರ್ಜೆ ಸ್ಥಾನಾ ಸಿಕ್ತು. ಹಾಗ್ ನೋಡುದ್ರೆ ಕಳೆದ್ ಸಾರ್ತಿಗಿಂತ ಈ ಸಲ ಸೀಟು ಗೆದ್ದಿರೋದು ಕಮ್ಮೀನೆ. ಇದಕ್ಕೆ ಎರಡು ಕಾರಣ ಇರಬೌದು ಗುರು! ಮೊದಲನೇದು ಈ ಬಾರಿ ಕಾಂಗ್ರೆಸ್ಸು ಭಾರಿ ಮುಂದಾಲೋಚನೆಯಿಂದಾಗಿ ಒಳ್ಳೊಳ್ಳೆ ಅನುಭವ ಇರೋ ನಾಯಕರುಗಳನ್ನೇ ಆರಿಸಿ ಮಂತ್ರಿ ಮಾಡಿದಾರೆ. ಆ ಮೂಲಕ ಒಳ್ಳೇ ಆಡಳಿತ ಕೊಟ್ಟು ಮುಂದಿನ ದಿನಗಳಲ್ಲಿ ಒಳ್ಳೇ ಹೆಸರು ಮಾಡಿ, ಭಾವಿ ಯುವ ನಾಯಕನ ಪ್ರವೇಶಕ್ಕೆ ಒಳ್ಳೇ ವೇದಿಕೆ/ ಪೀಠಿಕೆ ಹಾಕ್ಕೊಡೊ ಉದ್ದೇಶ. ಅಂದ್ರೆ ಕನ್ನಡಿಗ ಕಾಂಗ್ರೆಸ್ಸಿಗರಲ್ಲಿ ಆ ಮಟ್ಟದ ಮುತ್ಸದ್ದಿಗಳು ಇವ್ರು ಅಂತಾ ಆಯ್ತು. ಇದಕ್ಕಿಂತ ಮುಖ್ಯವಾದ ಇನ್ನೊಂದು ಕಾರಣ ಅಂದ್ರೆ ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಆಗಿರೋ ಕನ್ನಡತನದ ಜಾಗೃತಿ. ಕಾವೇರಿ ಐತೀರ್ಪು, ಶಾಸ್ತ್ರೀಯ ಭಾಷಾ ಸ್ಥಾನಮಾನ ಇತ್ಯಾದಿಗಳೆದುರಾದಾಗೆಲ್ಲಾ ಕನ್ನಡಿಗರು ಸಿಡಿದು ನಿಂತು ಪ್ರತಿಭಟನೆ ಮಾಡಿ ದಿಲ್ಲೀ ಹೊಸ್ತಿಲು ಮೆಟ್ಟಿ ಬಂದಿದ್ದೂ ಒಂದು ದೊಡ್ಡ ಕಾರಣ. ಇದು ಭಾರತ ಒಕ್ಕೂಟದಲ್ಲಿ ನಿರಂತರವಾಗಿ ಕನ್ನಡದೋರಿಗೆ ಅನ್ಯಾಯ ಮಾಡ್ತಾ ಇರೋದ್ನ ನಾವಿನ್ನು ಸಹಿಸಲ್ಲ ಅನ್ನೋ ಸಂದೇಶ ಕೊಟ್ಟಿರೋದೂ ಕಾರಣವಾಗಿದೆ. ಹೌದಲ್ವಾ ಗುರು?


4 ಅನಿಸಿಕೆಗಳು:

Anonymous ಅಂತಾರೆ...

idu olle suddi, kendra sarkara kangressige kadime seetugalu baralu kannadigara kopa karana anta eegalaadaru artha madikondiro hage kanisuttirodu olle belavanige.

ದಂಡ ಪಿಂಡ ಅಂತಾರೆ...

ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಸೋಲು ಇದಕ್ಕೆ ಕಾರಣ. ಕರ್ನಾಟಕದ ಜನರಿಗೆ ಇವರು ಕಾವೇರಿ ನೀರು ಹಂಚಿಕೆ, ಬೆಳಗಾವಿ, ಹೊಗೇನಕಲ್, ಏನ್ ಎಸ ಗಿ, ಐ ಐ ತಿ ಮತ್ತು ಅನೇಕ ವಿಷಯಗಳಲ್ಲಿ ಕೈ ಕೊಟ್ಟಿದ್ದಾರೆ . ಬೇಸತ್ತ ಜನ ಬೇರೆ ಬಾ.ಜಾ.ಪ ಗೆ ಮತ ಚಲಾಯಿಸಿದ್ದಾರೆ. ಈಗ damage control ಮಾಡಲು ಮೆಲಾಜ್ಞೆ ಮೀರದವರಿಗೆ ಮಂತ್ರಿಗಿರಿ ದಕ್ಕಿದೆ. ಜನರಿಗೂ ಕೈ ಕೊಡಕ್ಕೆ ಬರತ್ತೆ ಮತ್ತು ಜನರು ದಡ್ಡರಲ್ಲ ಎಂದು ಎಲ್ಲ ಪಕ್ಷಗಳು ತಿಳಿದು ಕೊಂಡರೆ ಉತ್ತಮ. ಆದರೂ ಕರ್ನಾಟಕಕ್ಕೆ ಕರ್ನಾಟಕದ ಪಕ್ಷದ ಅಗತ್ಯ ಬಹಳಷ್ಟಿದೆ.

cheluva ಅಂತಾರೆ...

swaamy, idyaava santosha paduvantha suddi? karnatakadina eshtu mantrigalaagiddaare nodi illi nodi..

http://ibnlive.in.com/politics/loksabhafinal/clistState.php

kerala ge kooda namagintha hechchu sikkide. maharashtra 9 !!

sivaneee !!!

Harsha ಅಂತಾರೆ...

ರಜ್ಯದಲ್ಲಿ ಬಾ.ಜ.ಪ ಸರ್ಕಾರ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ನಮ್ಮ ರಾಜ್ಯಕ್ಕೆ ಬಹಳ ನಿರಿಕ್ಷೆಗಳೆನು ಇಟ್ಟುಕೊಳ್ಳಲಾಗದು ಅದರಲ್ಲು ಬರಿ ಎರಡು ಸಚಿವ ಸ್ತಾನ ಮಾತ್ರ ದಕ್ಕಿರುವ ಕಾರಣ ಹೆಚ್ಚು ಸಂಕಷ್ಟ ಎದಿರಿಸುವ ಸಾದ್ಯತೆ ಇದೆ. ಆದರೆ ತಮಿಳು ನಾಡಿಗೆ ಕರುಣಾನಿಧಿಯವರ ಇಛ್ಛೆಯಂತೆ ಏಳು ಸಚಿವ ಸ್ತಾನಗಳು ಸಿಕ್ಕಿದೆ. ಈ ಬಾರಿಯು ಕೇಂದ್ರದಿಂದ ಕರ್ನಾಟಕ ಪರ ಕೆಲಸಗಳು ನಡೆಯುವುದು ಅನುಮನವೆ ಸರಿ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails