ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಿಂಚಲಿರೋ ಕನ್ನಡತನ!


ಬೆಂಗಳೂರಲ್ಲಿ ನೆಲೆಸಿ ಚೆನ್ನಾಗಿ ವ್ಯಾಪಾರ-ವಹಿವಾಟು ನಡೆಸಲು ಕನ್ನಡದ ಮಹತ್ವವನ್ನು ಲೇಟ್ ಆದ್ರೂ ಲೇಟೆಸ್ಟ್ ಆಗಿ ಬೆಂಗಳೂರು ವಿಮಾನ ನಿಲ್ದಾಣ ನೋಡಿಕೊಳ್ಳೊ ಬಿ.ಐ.ಎ.ಎಲ್ ಕಂಪನಿಯವರು ಅರ್ಥ ಮಾಡಿಕೊಂಡಿರುವ ಹಾಗಿದೆ ಗುರು. ವಿಮಾನ ನಿಲ್ದಾಣದ ಸ್ವಾಗತದಲ್ಲಿ ಸ್ಥಳೀಯತೆಯ ಸೊಗಡನ್ನು ಬಿಂಬಿಸುವುದು, ಸ್ಥಳೀಯ ಕಲೆ, ಊಟ-ತಿಂಡಿ ರುಚಿಯ ಪರಿಚಯ, ನಾಡಿನ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ, ನಮ್ಮ ಹಬ್ಬಗಳಾದ ರಾಜ್ಯೋತ್ಸವ, ಆಯುಧ ಪೂಜೆ, ದೀಪಾವಳಿಗಳ ಆಚರಣೆ ಹೀಗೆ ಅನೇಕ ಕ್ರಮಗಳ ಮೂಲಕ ಬಿ.ಐ.ಎ.ಎಲ್ ಕನ್ನಡಿಗರ ಮನಸ್ಸಿಗೆ ಹತ್ತಿರವಾಗೋ ಹಲವಾರು ಸರಿಯಾದ ಕ್ರಮಗಳನ್ನು ತಡವಾಗಿಯಾದರೂ ತೆಗೆದುಕೊಳ್ಳುವತ್ತ ಹೆಜ್ಜೆ ಇಟ್ಟಿದೆ ಅನ್ನೋ ಸುದ್ದಿ "ಎಕ್ಸ್ ಪ್ರೆಸ್ ಬಝ್"ನಲ್ಲಿ ವರದಿಯಾಗಿದೆ. ಇದು ಜನ ಪ್ರತಿನಿಧಿಗಳ, ಕನ್ನಡ ಪರ ಸಂಘಟನೆಗಳ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಜಾಗೃತ ಕನ್ನಡದ ಗ್ರಾಹಕರ ಒತ್ತಾಯಕ್ಕೆ ಸಿಕ್ಕ ಗೆಲುವು ಗುರು!
ಇದೆಲ್ಲ ಆಗಿದ್ದು ಕನ್ನಡದ ಗ್ರಾಹಕನಿಂದ

ಈ ಬದಲಾವಣೆಯಲ್ಲಿ ಜನ ಪ್ರತಿನಿಧಿಗಳು, ಕನ್ನಡ ಪರ ಸಂಘಟನೆಗಳ ಪಾತ್ರ ಎಷ್ಟಿದೆಯೋ ಅದರ ಹಲವು ಪಟ್ಟು ಪ್ರಮುಖ ಪಾತ್ರ ಅಲ್ಲಿಗೆ ಹೋಗೊ ಕನ್ನಡದ ಗ್ರಾಹಕನದ್ದು ಗುರು. ವಿಮಾನ ನಿಲ್ದಾಣ ಶುರು ಆದಾಗಿನಿಂದ ಹಿಡಿದು ಇಲ್ಲಿಯವರೆಗೆ, ಅಲ್ಲಿ ಕನ್ನಡಿಗರಿಗೆ ಉದ್ಯೋಗ, ಕನ್ನಡ ವಾತಾವರಣ, ನಿಲ್ದಾಣದ ಒಳ-ಹೊರಗೆ ಕನ್ನಡದಲ್ಲಿ ಜಾಹೀರಾತು, ಕನ್ನಡದಲ್ಲಿ ಗ್ರಾಹಕಸೇವೆ ಹೀಗೆ ಸಕ್ರಿಯವಾಗಿ ಕನ್ನಡದ ಗ್ರಾಹಕನಾಗಿ ತಂದ ಒತ್ತಾಯ, ಪ್ರತಿಭಟನೆಗಳು ನಿಧಾನವಾಗಿಯಾದರೂ ಈ ಬದಲಾವಣೆ ತರಲು ಕಾರಣವಾಗಿವೆ. ಹೋರಾಟಗಳಿಗೆ ಇರೋ ಶಕ್ತಿ ಗ್ರಾಹಕನ ದೂರಿಗೂ ಇದೆ ಅನ್ನೋದು ಮತ್ತೆ ಮತ್ತೆ ರುಜುವಾತಾಗ್ತಿದೆ. ಹೀಗೆ ಮುಂದುವರಿದಲ್ಲಿ ಕೆಲವೇ ಕೆಲವು ಕಾಲದಲ್ಲಿ ಎಲ್ಲೆಡೆ ಕನ್ನಡದಲ್ಲಿ ಎಲ್ಲ ತರಹದ, ಎಲ್ಲ ಹಂತದ ಗ್ರಾಹಕಸೇವೆ ಸಿಗೋದ್ರಲ್ಲಿ ಅನುಮಾನ ಇಲ್ಲ, ಏನಂತೀಯಾ ಗುರು?

9 ಅನಿಸಿಕೆಗಳು:

prasadh ಅಂತಾರೆ...

ತುಂಬಾ ಸಂತೋಷದ ವಿಚಾರ, ಆದ್ರೆ ನನ್ ಪ್ರಕಾರ ಈ ರೀತಿ ಬದಲಾವಣೆ ಬಂದಿರೋದು ಕನ್ನಡ ಅಭಿಮಾನ ಎಚ್ಚೆತ್ತು ಕೊಂಡಿರೋದಕ್ಕಲ್ಲ ತಮ್ಮ ವ್ಯಾಪಾರ ಹೆಚ್ಚು ಮಾಡ್ಕೊಳೊಕ್ಕೆ ಅಷ್ಟೆ. ಯಾವ ವಿಷಯ ವ್ಯಾಪಾರದ ಅಡಿಪಾಯದ ಮೇಲಿರುತ್ತೊ ಅದು ಸುಭದ್ರವಲ್ಲ. ನಾವು ಅಭಿಮಾನ ಬೆಳೆಸೊ ಚಳುವಳಿ ಮಾಡ್ಬೇಕು ಆಗಲೆ ನಿಜವಾದ ಬೆಳಕು ಮೂಡುವುದು ಅಲ್ಲಿವರ್ಗು ಟ್ಯೂಬ್‌ಲೈಟ್‌ನ ಬೆಳಕನ್ನೆ ಸೂರ್ಯನ ಬೆಳಕು ಅಂತ ತಿಳಿದುಕೊಂಡು ಭ್ರಮೆಯಲ್ಲಿ ಬದುಕಿರುತ್ತೇವೆ.

Santosh ಅಂತಾರೆ...

idannu oodi thumba khushiyagide

Santosh Bhoosthali

Anonymous ಅಂತಾರೆ...

namskar guru,
thumba valleya vichara hellidri,,
one suggestions, ennu andre. kannada barha balesuvaga, dayavittu english padagallu balasabedi,,example ಲೇಟ್, ಲೇಟೆಸ್ಟ್ balaagi,english nalli kannada da kampu aralali..

nima
heartzhunter

Muniraj ಅಂತಾರೆ...

ಹಾಲು ಕುಡಿದಷ್ಟು ಸ೦ತೊಶ ಆಯ್ತು :))))

Unknown ಅಂತಾರೆ...

ee vishya keli nanage thumbaa santosha aytu. Naanu kannadiga annuvudakke hemme haguttide..

Anonymous ಅಂತಾರೆ...

yellaa sari. aadre vimaanadalli:
1. kannaDa patrikegaLu
2. KannaDa cinema
3. kannaDa sangiita
4. kannaDa sandeesha
5. kannaDa maatanaaDaballa sibbandi

khaDDaayavaagi siguvudu yaavaaga ?

jai,

kannaDiga

Akshaya ಅಂತಾರೆ...

sakat suddi guru

rAkShITh ಅಂತಾರೆ...

ಬೊಂಬಾಟ್ ಸುದ್ದಿ ಗುರು...

ರಕ್ಷಿತ್ ಅನೂರ್

Harsha ಅಂತಾರೆ...

ಒಗ್ಗಟ್ಟಿನಲ್ಲಿ ಬಲವಿದೆ ಅನ್ನುವುದಕ್ಕೆ..ಇದು ಒಂದು ಉದಾಹರಣೆ..
ಆದರು ಕೆಲವರ ಅನುಭವದಂತೆ ಅಲ್ಲಿ ಹೆಚ್ಚು ಬದಲಾವಣೆ ಕಾಣದು.
ನಮ್ಮಲ್ಲಿ ಇನ್ನು ಹೆಚ್ಚು ಒಗಟ್ಟು ಮತ್ತು ಅದರ್ಶ ಬೇಕಾಗಿದೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails