ಭಾರತೀಯ ರಿಜರ್ವ್ ಬ್ಯಾಂಕ್ : ಕ್ರೆಡಿಟ್ ಕಾರ್ಡ್ ಸೇವೆಯಲ್ಲಿ ಕನ್ನಡ - ಕನ್ನಡಿಗರ ಹಕ್ಕು!


ಭಾರತೀಯ ರಿಜರ್ವ್ ಬ್ಯಾಂಕಿನ ಭಾಷಾ ನೀತಿ ಬಗ್ಗೆ ಮಾಹಿತಿ ಕೊಡೋ ಒಂದು ಸುದ್ದಿ ಮಾರ್ಚ್ 28 - ಏಪ್ರಿಲ್ 10ರ ಫ್ರಂಟ್ ಲೈನ್ ನಿಯತಕಾಲಿಕೆಯಲ್ಲಿ ಬಂದಿದೆ ಗುರು! ಇವತ್ತು ಕ್ರೆಡಿಟ್ ಕಾರ್ಡ್ ಸೇವೆಗಳಲ್ಲಿ ಕನ್ನಡ ಕಾಣದೇ ಇರೋದಕ್ಕೆ ಭಾರತೀಯ ರಿಜರ್ವ್ ಬ್ಯಾಂಕಿನ ನಿಯಮಾವಳಿಗಳು ಖಂಡಿತಾ ಕಾರಣವಾಗಿಲ್ಲ. ನಾವು ಕನ್ನಡದೋರು ಗ್ರಾಹಕರಾಗಿ ನಮ್ಮ ಹಕ್ಕು ಚಲಾಯುಸ್ತಿಲ್ಲಾ ಅನ್ನೋದೆ ನಿಜವಾದ ಕಾರಣವಾಗಿದೆ.

ಏನನ್ನುತ್ತೆ ರಿಜರ್ವ್ ಬ್ಯಾಂಕ್ ಮಾರ್ಗಸೂಚಿ?

ಎಲ್ಲಾ ಕ್ರೆಡಿಟ್ ಕಾರ್ಡ್ ಸೇವೆ ನೀಡೋ ಬ್ಯಾಂಕುಗಳು ಕಾರ್ಡುಗಳನ್ನು ತನ್ನ ಗ್ರಾಹಕರಿಗೆ ನೀಡೋವಾಗ ಅನುಸರಿಸಬೇಕಾದ ಭಾಷಾ ನೀತಿಯ ಬಗ್ಗೆ ಹೀಗೆನ್ನುತ್ತದೆ ರಿಜರ್ವ್ ಬ್ಯಾಂಕಿನ ನಿಯಮಾವಳಿ :

"While issuing cards, the terms and conditions for issue and usage of a credit card should be mentioned in clear and simple language (preferably in English, Hindi and local language) comprehensible to a card user."


ಅಂದರೆ ಕಾರ್ಡುಗಳನ್ನು ವಿತರಣೆ ಮಾಡುವಾಗ ಗ್ರಾಹಕನಿಗೆ ಅನುಕೂಲವಾಗುವಂತೆ ಸರಳವಾದ ಭಾಷೆಯಲ್ಲಿ ಇಂಗ್ಲಿಷ್, ಹಿಂದಿ ಮತ್ತು ಸ್ಥಳೀಯ ಭಾಷೆಗಳಲ್ಲಿ ನಿಬಂಧನೆಗಳ ಬಗ್ಗೆ ಪೂರ್ಣವಾದ ಮಾಹಿತಿ ನೀಡಬೇಕಾದ್ದು ಆಯಾ ಬ್ಯಾಂಕುಗಳ ಹೊಣೆಯಾಗಿದೆ ಮತ್ತದು ಕಡ್ಡಾಯವಾಗಿದೆ.


ಗ್ರಾಹಕ ತನ್ನ ಹಕ್ಕು ಮರೆಯೋದು ದೊಡ್ಡತಪ್ಪು!


ಇಷ್ಟೆಲ್ಲಾ ನೀತಿ ನಿಯಮಗಳಿದೆ ಅನ್ನೋದೇ ನಮ್ಮ ಜನಕ್ಕೆ ತಿಳಿಯದೇ ಇರೋದು ಕನ್ನಡದಲ್ಲಿ ಗ್ರಾಹಕ ಸೇವೆ "ಕ್ರೆಡಿಟ್ ಕಾರ್ಡು"ಗಳ ವಿಷಯದಲ್ಲಿ ಅಷ್ಟು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲದೇ ಇರಕ್ಕೆ ದೊಡ್ಡ ಕಾರಣವಾಗಿದೆ. ಇಂಥಾ ಹಕ್ಕು ಇರೋದನ್ನು ಜನತೆಗೆ ತಲುಪಿಸೋ ಕೆಲಸಾ ಆಗಬೇಕಾಗಿದೆ. ಅಷ್ಟೇ ಅಲ್ಲಾ, ನಾವು ಇನ್ಮುಂದೆ ನಮ್ಮ ಈ ಹಕ್ಕನ್ನು ಚಲಾಯಿಸಿ ಕ್ರೆಡಿಟ್ ಕಾರ್ಡುಗಳ ಲೋಕದಲ್ಲಿ ಕನ್ನಡ ಬಾವುಟ ಹಾರಿಸೋಣ ಗುರು!

2 ಅನಿಸಿಕೆಗಳು:

ಚಿಕ್ಕೋಡಿ ಚಿನ್ನಸ್ವಾಮಿ ಅಂತಾರೆ...

ರಿಸರ್ವ್ ಬ್ಯಾಂಕಿನ ಈ ನೀತಿ ನಾನು ನೋಡಿದ ಪ್ರಕಾರ ಯಾವುದೇ ಬ್ಯಾಂಕ್ ಪಾಲಿಸುವುದಿಲ್ಲ. ನಾನು ಸಾಕಷ್ಟು ಬ್ಯಾಂಕ್ ಗಳಲ್ಲಿ ವಾದ ಮಾಡಿದ್ದೇನೆ. ಇದರ ಬಗ್ಗೆ ದೂರು ಕೊಡುವುದಾದರೆ ಯಾರನ್ನು ಸಂಪರ್ಕಿಸಬೇಕು? ದಯಮಾಡಿ ತಿಳಿಸಿ.

ಸಾಗರದಾಚೆಯ ಇಂಚರ ಅಂತಾರೆ...

Good information, thank you

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails