ಸಲ್ಲದ ಸಂಸ್ಕೃತ ದ್ವೇಷ ಮತ್ತು ವ್ಯಾಮೋಹ!


ಕರ್ನಾಟಕ ಸರ್ಕಾರ ಹೊಸದಾಗಿ ಸಂಸ್ಕೃತ ವಿಶ್ವವಿದ್ಯಾಲಯಾನ ಶುರು ಮಾಡ್ತೀವಿ ಅಂದಾಗಿಂದ ಅದುನ್ನ ಬ್ಯಾಡಾ ಅನ್ನೋರೂ, ಬೇಕೂ ಅನ್ನೋರೂ ವಾದವಿವಾದ ಮಾಡ್ತಾನೇ ಇದಾರೆ. ಇಂಥಾ ಎರಡು ದೃಷ್ಟಿಕೋನಗಳ ಎರಡು ಬೇರೆಬೇರೆ ಪಂಗಡಗಳಿಂದ ಎರಡು ಸುದ್ದಿಗಳು ಬಂದಿವೆ, ಒಂದು ಪ್ರಜಾವಾಣಿಯಲ್ಲಿ, ಮತ್ತೊಂದು ವಿಜಯಕರ್ನಾಟಕದಲ್ಲಿ!

ಸಂಸ್ಕೃತ ವಿಶ್ವವಿದ್ಯಾಲಯ ಬೇಡೆನ್ನುವವರ ವಾದ!



"ಸಂಸ್ಕೃತ ಸತ್ತಭಾಷೆ, ಜನ ಬಳಸದ ಭಾಷೆ, ಇದರಲ್ಲಿ ಕನ್ನಡಿಗರಿಗೆ ಬೇಕಾದುದು ಏನೂ ಇಲ್ಲ, ಇದು ಸೃಜನಶೀಲ ಭಾಷೆಯಲ್ಲ, ಇದರಲ್ಲಿನ ಆಯುರ್ವೇದ, ದೇಗುಲ ನಿರ್ಮಾಣ ಶಾಸ್ತ್ರಗಳಂಥಾ ಅರಿಮೆಗಳೂ ಗೊಡ್ಡು ಪುರಾಣಗಳಾಗಿವೆ, ಶೂದ್ರರು ಮತ್ತು ಸ್ತ್ರೀಯರು ಕಿವಿಯಿಂದ ಕೇಳಬಾರದೆಂಬ ಮಡಿವಂತಿಕೆಯಿದ್ದ, ಕೇವಲ ಭೂಸುರರು ಮಾತ್ರಾ ಆಡಬೇಕೆಂಬ ಮಡಿವಂತಿಕೆಯಿದ್ದ ಭಾಷೆ ಅದು, ತರತಮಗಳ ಪೂರ್ವಾಗ್ರಹಗಳುಳ್ಳ ಭಾಷೆ ಅದು, ಅದು ಹೇಗೆ ತಾನೆ ಜನ ಸಾಮಾನ್ಯರ ಸಂಸ್ಕೃತಿಯನ್ನು ಕಾಪಾಡೀತು?"
ಹೀಗೆ ಸಂಸ್ಕೃತ ವಿಶ್ವವಿದ್ಯಾಲಯ ಬೇಡವೆನ್ನುವವರ ವಾದದ ಸಾರದಂತೆ 31.05.2009ರ ಪ್ರಜಾವಾಣಿಯ ಏಳನೇ ಪುಟದಲ್ಲಿ ಬಂದಿರೋ ಚಂದ್ರಶೇಖರ ಕಂಬಾರರ ಸಂದರ್ಶನದೊಳಗಿನ ಮಾತುಗಳು ತೋರುತ್ತಿವೆ. ಒಟ್ಟಾರೆ ಸಂಸ್ಕೃತ ಭಾಷೆಗೆ ತಾರತಮ್ಯದ ಬೇರಿನ, ಕನ್ನಡಿಗರಿಗೆ ಬೇಕಾದ ಜ್ಞಾನವಿರದ, ಸತ್ತುಹೋದ ಭಾಷೆಯೆಂಬ ಕಾರಣಗಳನ್ನು ಈ ವಾದ ಸರಣಿಯಲ್ಲಿ ಕಾಣಬಹುದು.

ಸಂಸ್ಕೃತ ವಿಶ್ವವಿದ್ಯಾಲಯ ಬೇಕೆನ್ನುವವರ ವಾದ!



"ಭಾರತೀಯ ಸಂಸ್ಕೃತಿಯನ್ನು ಮತ್ತು ಧರ್ಮವನ್ನು ಮೈಗೂಡಿಸಿಕೊಳ್ಳಲು ಸಂಸ್ಕೃತ ಕಲಿಯುವಿಕೆ ಅನಿವಾರ್ಯ, ಸಂಸ್ಕೃತ ಕಲಿಯುವುದರಿಂದ ಸಮಾಜನಿಷ್ಠೆ ಮತ್ತು ರಾಷ್ಟ್ರಪ್ರಜ್ಞೆ ಹೆಚ್ಚುತ್ತದೆ, ಕಂಪ್ಯೂಟರಿಗೆ ಬೇರೆಲ್ಲಾ ನುಡಿಗಿಂತ ಚೆನ್ನಾಗಿ ಹೊಂದಿಕೊಳ್ಳುವ ಭಾಷೆ, ಇದು ಅನೇಕ ವಿದೇಶಿಯರಿಂದ, ಭಾರತ ದೇಶ ಆರಾಧಿಸುವ ಗಾಂಧಿ, ವಿವೇಕಾನಂದರಂತ ಮಹಾತ್ಮರಿಂದ, ಕುವೆಂಪುರವರಂಥ ಕನ್ನಡ ಕವಿಗಳಿಂದ, ರಾಜಾರಾಮಣ್ಣನವರಂತಹ ವಿಜ್ಞಾನಿಗಳಿಂದ, ಅಂಬೇಡ್ಕರ್ ಅವರಂತಹ ಹಿಂದುಳಿದವರ ಮುಖಂಡರಿಂದಲೂ ಒಪ್ಪಲ್ಪಟ್ಟಿದೆ, ಪ್ರತಿಪಾದಿಸಲ್ಪಟ್ಟಿದೆ, ಮೇಲ್ಜಾತಿಯವರ ಸ್ವತ್ತಲ್ಲಾ, ವಾಲ್ಮೀಕಿಯಂತಹ ಕೆಳಜಾತಿಯವರೂ ಬಳಸಿದ್ದಾರೆ, ಸಂಸ್ಕೃತ ಕಲಿತು ಹಿಂದೂವಾಗಬಹುದೆಂಬ ನಂಬಿಕೆ ಕೆಲ ವಿದೇಶಿಯರಲ್ಲಿದೆ, ಸಂಸ್ಕೃತವೆಂಬ ನೀರು ಬೇಡವೆಂದವರು ಕೊಳೆತು ನಾರಬೇಕಾಗುತ್ತದೆ."
ಹೀಗೆ ಸಂಸ್ಕೃತ ವಿಶ್ವವಿದ್ಯಾಲಯ ಬೇಕೆನ್ನುವವರ ವಾದದ ಸಾರವನ್ನು 03.06.2009ರ ವಿಜಯಕರ್ನಾಟಕದ ಎಂಟನೇ ಪುಟದಲ್ಲಿ ಪ್ರಕಟವಾಗಿರೋ ಸ್ವಾಮಿ ವೀರೇಶಾನಂದ ಸ್ವಾಮಿಗಳ ಮಾತುಗಳು ತೋರಿಸಿಕೊಡುತ್ತಿವೆ. ಒಟ್ಟಾರೆ ಸಂಸ್ಕೃತ ಭಾಷೆಯನ್ನು ಪ್ರತಿ ಹಿಂದುಗಳೂ ಕಲಿಯಬೇಕು, ಇದನ್ನು ಕಲಿಯದ ಹಿಂದುವಿನ ಬಾಳು ಅಪೂರ್ಣ, ಹಾಗಾಗಿ ಸಂಸ್ಕೃತ ವಿಶ್ವವಿದ್ಯಾಲಯ ಬೇಡೆನ್ನುವುದು ದುರದೃಷ್ಟಕರ, ಎಲ್ಲರೂ ಸಂಸ್ಕೃತ ಕಲಿಯಬೇಕು ಎಂಬ ಅಭಿಪ್ರಾಯವನ್ನು ಇವರು ವ್ಯಕ್ತಪಡಿಸಿದ್ದಾರೆ.

ವಾಸ್ತವ ಇವೆರಡರಿಂದಲೂ ದೂರ!

ಎರಡೂ ವಾದಗಳಲ್ಲಿ ಸತ್ಯವೆನಿಸೋ ಕೆಲವು ಅಂಶಗಳೂ, ಸುಳ್ಳೆನ್ನಿಸುವ ಅಂಶಗಳೂ ಇವೆ. ಸಂಸ್ಕೃತದಲ್ಲಿ ಏನೇನೂ ಇಲ್ಲ ಎಂಬುದನ್ನು ಒಪ್ಪುವುದು ಎಷ್ಟು ಕಷ್ಟವೋ ಸಂಸ್ಕೃತ ಕಲಿಯುವುದರಿಂದ ರಾಷ್ಟ್ರಪ್ರಜ್ಞೆ ಹೆಚ್ಚುತ್ತದೆ ಎನ್ನುವುದನ್ನೂ ಒಪ್ಪುವುದೂ ಅಷ್ಟೇ ಕಷ್ಟ. ಅಧ್ಯಾತ್ಮದ ಸಾಕಷ್ಟು ಸಾರ ಸಂಸ್ಕೃತದಲ್ಲಿದೆ ಎಂಬುದನ್ನೂ ಒಪ್ಪುವಂತೆಯೇ ಸಂಸ್ಕೃತದಿಂದ ಕನ್ನಾಡಕ್ಕೆ ಬರಬೇಕಾದದ್ದೂ ಇದೆ ಎನ್ನುವುದನ್ನೂ ಒಪ್ಪಬೇಕಾಗಿದೆ.
ಆದರೆ ಸಂಸ್ಕೃತ ದೇವಭಾಷೆ ಅನ್ನುತ್ತಾ ಅದಕ್ಕೊಂದು ಶಿಖರ ಸ್ಥಾನ ಕೊಡುತ್ತಾ ಇದರಿಂದಲೇ ಮನುಷ್ಯನಿಗೆ ಸಂಸ್ಕಾರ ಬರುವುದು, ಇದರಿಂದಲೇ ಸುಸಂಕೃತನಾಗೋದು, ರಾಷ್ಟ್ರಪ್ರೇಮ ಉಕ್ಕೋದು ಎಂದೆಲ್ಲಾ ಕಥೆ ಹೊಡೆಯೋದು ತಪ್ಪು ಗುರು! ನಿಜವಾಗಿಯೂ ’ಸಂಸ್ಕೃತದಲ್ಲಿ ಅದ್ಭುತ ಜ್ಞಾನ ಇದೆ, ಅದನ್ನು ಅರಿಯಲು ಇಡೀ ನಾಡಿನ ಎಲ್ಲಾ ಪ್ರಜೆಗಳೂ ಸಂಸ್ಕೃತ ಕಲೀಬೇಕು’ ಅನ್ನುವಂಥಾ ಮನಸ್ಥಿತಿಯೇ ಪೆದ್ದುತನದ್ದಲ್ವಾ ಗುರು? ನಿಜವಾಗ್ಲೂ ಜನರಿಗೆಲ್ಲಾ ಆ ಜ್ಞಾನ ಸಿಗಬೇಕು ಅನ್ನೋದಾದ್ರೆ, ಹಾಗೆ ಇರೋ ಜ್ಞಾನಾನೆಲ್ಲಾ ಕನ್ನಡಕ್ಕೆ ತರೋದ್ರಿಂದಲೇ ಕನ್ನಡದ ಜನಕ್ಕೆ ಅದು ಸಿಗಲು ಸಾಧ್ಯವಾಗೋದು. ಇವತ್ತಿನ ದಿನ ಸಂಸ್ಕೃತ ವಿಶ್ವವಿದ್ಯಾಲಯ ಬೇಕು ಬೇಕು ಎಂದು ಪತ್ರಿಕೆಗಳಲ್ಲಿ ಬರೆಯುತ್ತಿರೋ ಜನಾ ಅರಿಯದೇ ಇರೋ ಸತ್ಯವೂ ಇದೇ... ಸಂಸ್ಕೃತ ಸಂಸ್ಕೃತದಲ್ಲೇ ಇದ್ದರೆ ಕನ್ನಡಿಗರನ್ನು ಪರಿಣಾಮಕಾರಿಯಾಗಿ ಮುಟ್ಟಲಾರದು. ಸಂಸ್ಕೃತ ಸುಭಾಷಿತಗಳು ಕನ್ನಡದ ವ್ಯಾಖ್ಯಾನವಿಲ್ಲದೆ ಕನ್ನಡಿಗರನ್ನು ತಲುಪಲಾರವು. ಇಂಥಾ ಕೆಲ್ಸಾನ ಮಾಡಬಲ್ಲ, ಸಂಸ್ಕೃತದಲ್ಲಿನ ಅರಿವನ್ನು ಕನ್ನಡಿಗರಿಗೆ ಕನ್ನಡದಲ್ಲಿ ತಲುಪಿಸಲು ಮುಂದಾಗೋ ಅಧ್ಯಯನ ಕೇಂದ್ರ ನಮ್ಮಲ್ಲಿದ್ದರೆ ಸಾಲದಾ ಗುರು! ಅದು ಬಿಟ್ಟು ಕನ್ನಡದೋರಿಗೆಲ್ಲಾ ಪಾಣಿನಿಯನ್ನು ಕಲಿಸೋದಷ್ಟೇ ಗುರಿಯಾಗಿಟ್ಟುಕೊಳ್ಳೋ ವಿಶ್ವವಿದ್ಯಾಲಯಗಳು ಬೇಕಾಗಿಲ್ಲ! ನಾವು ಹೇಳೋದು ಇಷ್ಟೇ: ಈ ವಿವಿಯಿಂದ ಬರೀ ಸಂಸ್ಕೃತದ ಪಂಡಿತರು ಹೊರಬರೋದಾದ್ರೆ ಇದು ಬೇಡ್ವೇ ಬೇಡ. ಇವತ್ತಿನ ದಿನ ಇನ್ನಷ್ಟು ಸಂಸ್ಕೃತದ ಪಂಡಿತರನ್ನ ಹೆತ್ತು ಕನ್ನಡದ ತಾಯಿ ಏನನ್ನೂ ಸಾಧಿಸಬೇಕಾಗಿಲ್ಲ.

ಪ್ರಮುಖವಾದ ವಿಷಯ!

ಆದ್ರೆ ಅದಕ್ಕಿಂತ ಮುಖ್ಯವಾದ ವಿಷ್ಯ ಇನ್ನೊಂದಿದೆ. ಇವತ್ತಿನ ದಿನ ಪ್ರೆಂಚ್ ಅಥವಾ ಲ್ಯಾಟೀನ್ ಭಾಷೆಗಳಲ್ಲಿ ಬಹಳ ಪುರಾತನವಾದ ಜ್ಞಾನಭಂಡಾರವಿದೆ, ಆದ್ದರಿಂದ ಕನ್ನಡಿಗರಿಗೆಲ್ಲಾ ಫ್ರೆಂಚು ಮತ್ತು ಲ್ಯಾಟಿನ್ನುಗಳನ್ನು ಕಲಿಸಲು ವಿಶ್ವವಿದ್ಯಾಲಯವೊಂದನ್ನು ಕರ್ನಾಟಕದಲ್ಲಿ ತೆರೆಯುವುದು ಸರಿಯೋ? ಅಥವಾ ಫ್ರೆಂಚು, ಲ್ಯಾಟಿನ್ನುಗಳಲ್ಲಿರೋ ಜ್ಞಾನ ಕನ್ನಡದೋರಿಗೆ ಸಿಗುವಂತಾಗಲು ಅದನ್ನು ಕನ್ನಡಕ್ಕೆ ತರುವುದು ಸರಿಯೋ? ಹಾಗೆ ತೆರೆಯೋದು ತಪ್ಪೇನು ಅಲ್ಲವಲ್ಲಾ? ಆದರೆ ಈಗ ಫ್ರೆಂಚು, ಲ್ಯಾಟಿನ್ನು, ಸಂಸ್ಕೃತಗಳ ಜ್ಞಾನಭಂಡಾರಾನಾ ಕನ್ನಡಕ್ಕೆ ತರುವುದು ಆದ್ಯತೆಯೇನು? ಕನ್ನಡ ನುಡಿಯರಿಮೆಯ ಕ್ಷೇತ್ರದಲ್ಲಿ ತುರ್ತಾಗಿ ಆಗಬೇಕಾದ ಸಾವಿರಾರು ಕೆಲಸಗಳು ಇವೆ. ಅದನ್ನೆಲ್ಲಾ ಆದ್ಯತೆ ಪಟ್ಟಿಯ ಬುಡಕ್ಕೆ ತಳ್ಳಿ ಅದರ ಪಾಯದ ಮೇಲೆ ಈ ಸಂಸ್ಕೃತ ವಿಶ್ವವಿದ್ಯಾಲಯ ಕಟ್ಟಲು ನಮ್ಮ ಸರ್ಕಾರ ಮುಂದಾಗಿರುವುದು ಎಷ್ಟು ಸರಿ? ಕನ್ನಡದ ಸ್ವರೂಪದ ಅಧ್ಯಯನ, ವ್ಯಾಕರಣದ ಅಧ್ಯಯನ, ಕನ್ನಡ ನುಡಿಯನ್ನು ಅನ್ನದ ನುಡಿಯಾಗಿಸೋದಕ್ಕೆ ಬೇಕಾದ ಹೆಜ್ಜೆಗಳು, ಕನ್ನಡದಲ್ಲಿ ಶಿಕ್ಷಣ ವ್ಯವಸ್ಥೆ ಕಟ್ಟೋಕೆ ಏನು ಮಾಡಬೇಕು? ಕನ್ನಡಿಗರ ಏಳಿಗೆಗೆ ಕನ್ನಡವನ್ನೇ ಪರಿಣಾಮಕಾರಿಯಾದ ಸಾಧನವಾಗ್ಸೋದು ಹ್ಯಾಗೆ?... ಅನ್ನೋದೆಲ್ಲಾ ಕರ್ನಾಟಕ ಸರ್ಕಾರದ ಆದ್ಯತೆ ಪಟ್ಟೀಲಿ ಸಂಸ್ಕೃತ ವಿಶ್ವವಿದ್ಯಾಲಯ ಕಟ್ಟೋಕ್ಕಿಂತ ಮೇಲಿರಬೇಕಾಗಿದೆ ಗುರು.

22 ಅನಿಸಿಕೆಗಳು:

Gireesh BT ಅಂತಾರೆ...

ನೀವು ಹೇಳೋದಉ ಸರಿಯಾಗಿದೆ. ಆದರೆ, ಒಂದು ಮಾತು ನಿಜ.. ಸಂಸ್ಕೃತ ವಿಶ್ವವಿದ್ಯಾಲಯ ಇಲ್ಲದಿದ್ದರೆ ಸಂಸ್ಕೃತದಲ್ಲಿರುವ ಜ್ಞಾನಭಂಡಾರವನ್ನು ಉಳಿಸಿಕೊಳ್ಳುವುದು ಹೇಗೆ? ಇದನ್ನು ಕೆಂದ್ರ ಸರಕಾರ ಮಾಡಬೇಕಾಗಿತ್ತೇನೋ. ಕರ್ನಾಟಕ ಸರಕಾರದವರು ಇದನ್ನು ಮಾಡಲು ಹೊರಟಿದ್ದಾರೆ. ಸಂಸ್ಕೃತ ಕಲಿಯುವುದರಿಂದ ನಮಗೆ ನಷ್ಟವೇನೂ ಇಲ್ಲ ಲಾಭವೇ ಹೆಚ್ಚು ಎಂದು ನನಗೆ ಅನಿಸುತ್ತದೆ. ಹಿಂದಿ ಕಲಿಯುವುದನ್ನು ಬಿಟ್ಟು ಸಂಸ್ಕೃತ ಕಲಿತರೆ ಹೆಚ್ಚು ಉತ್ತಮವೇ. ಎಲ್ಲರಿಗೂ ಸಂಸ್ಕೃತ ಓದಲು ಬರೆಯಲು ಸಾಧ್ಯವಾದರೆ, ನಮಗೆ ಹಿಂದಿ ಬೇಡ ಎಂದು ಪ್ರತಿಪಾದಿಸುವುದು ಹೆಚ್ಚು ಸಾಧ್ಯ ಎನಿಸುತ್ತದೆ. ಹಿಂದಿ ಭಾಷಿಕರೂ ಇನ್ನೊಂದು ಭಾಷೆ ಕಲಿಯಬೇಕಾಗುತ್ತದೆ. ಸಂಸ್ಕೃತವನ್ನು ಫ್ರೆಂಚ್, ಲ್ಯಾಟಿನ್‍ಗಳಿಗೆ ಹೋಲಿಸುವುದು ತಪ್ಪೆಂದು ನನಗೆನಿಸಿತ್ತದೆ. ಸಂಸ್ಕೃತ ಭಾಷೆ ನಮ್ಮ ಭಾರತದ್ದೇ ಆಗಿದೆ. ಈ ಭಾಷೆಯಿಂದ ನಮ್ಮ ಭಾಷೆಗಳು ಸಾಕಷ್ಟು ಬೆಳೆದಿವೆ.
ಗಿರೀಶ.

Priyank ಅಂತಾರೆ...

ಗ್ರೀಕ್, ಲ್ಯಾಟಿನ್ ಭಾಷೆಗಳಿಗೆ ಮಾತ್ರ ಸೀಮಿತವಾಗಿದ್ದ ಜ್ನ್ಯಾನ ಭಂಡಾರ-ವನ್ನು ಇಟಾಲಿಯನ್, ಫ್ರೆಂಚ್, ಜರ್ಮನ್, ಇಂಗ್ಲಿಷ್ ಭಾಷೆಗಳಿಗೆ ತಂದ ನಂತರ ಯುರೋಪ್ ಖಂಡದಲ್ಲಿ ಅಮೋಘ ಬೆಳವಣಿಗೆಗಳು ಆಗಿದ್ದು ಇಲ್ಲಿ ಸ್ಮರಿಸಬಹುದು.
ಸಂಸ್ಕೃತ-ದಲ್ಲಿ ಇರಬಹುದಾದ ಜ್ನ್ಯಾನ ಕನ್ನಡವಾದರೆ ಇಂತದ್ದೆ ಒಂದು ಬೆಳವಣಿಗೆ ನಮ್ಮಲ್ಲೂ ಆಗುತ್ತೆ.

ravi kulkarni ಅಂತಾರೆ...

igagle rajasthanadalli, orissadalli sanskrit university idey,,

kendra sarakara classical language quota dalli sanskrutakke anta dodda maTTadalli funds kooda kodta idey,,

ishtara meloo,, karnatakadalli sanskrit university beku anno BJP vaada nijakku nagu tarutte,,

illi hampiyalli kannada university funds illade paradaaDuvaaga,, ivarige sanskrutada chinte,, thu,,

xyz ಅಂತಾರೆ...

ಕ್ಷಮಿಸಿ ಸಾರ್ ನಮ್ಗೆ ಸ೦ಸ್ಕೃತದಿ೦ದಾಗ್ಲಿ, ಯೂರೋಪಿಯನ್ ಭಾಷೆಯಿ೦ದಾಗ್ಲಿ ಕನ್ನಡಕ್ಕೆ ಜ್ಞಾನವನ್ನು ತರೋಹಾಗಿಲ್ಲ. ಎಷ್ಟೇ ಕಷ್ಟಾ ಆದ್ರೂ ಸ೦ಸ್ಕೃತವನ್ನೇ ಓದಬೇಕು. no translation allowed whether its movies or real life.

Anonymous ಅಂತಾರೆ...

nodi swaamy neevu bejar maadkobedi sanskruta saata bhsheyalla adunna sattide an nuvavaru bogale budhdhijeevigalu ... kambaararu haage heeliddu avara sannatanavannu torisuttade ... ega hegandavru munde english hindi haagu etare bhasheya prabhava hechchaadaaga kannadakku edey gati... nodi ella bhasheyannu preetisabeku gouravisabeku,... sanskrutadindaane huttiruva hindige rastrabhashe , sanskritakke satta bhashe edu yava nyaya swamy..
\
edalle mukya vadaddu ennondide

edu shuruvaaguvadarinda eshtoo janarige udyovakashavu edey,,,..

modalu yochne maadi bareyiri...

jai kannadambe;;;

Anonymous ಅಂತಾರೆ...

ಹೆಸರಿಲ್ಲದವರೇ,

ಸಂಸ್ಕೃತ ಸತ್ತಭಾಷೆ ಅಂತಾ ಏನ್ ಗುರು ಎಲ್ಲಿ ಹೇಳಿದೇರಿ? ಅದನ್ನು ಹೇಳಿರೋರು ವಿವಿ ಬೇಡ ಅನ್ನೋರು ಅಂತಾ ಏನ್ ಗುರು ಕೋಟ್ ಮಾಡಿ ತೋರ್ಸಿದೆ. ಸತ್ತ ಭಾಷೆ ಅನ್ನೋದು ಒಂದು ವಿಕಾರವಾದ್ರೆ, ಇದನ್ನು ದೇವಭಾಷೆ ಅನ್ನೋದೂ ಅಷ್ಟೇ ವಿಕಾರವಾದ ನಿಲುವು. ಪೆದದ್ದು ಪೆದ್ದಾಗಿ ಹಿಂದಿ ರಾಷ್ಟ್ರಭಾಷೆ ಅನ್ನೋ ಸುಳ್ಳುನ್ನೇ ಆಡಕ್ಕೆ ನಾಚ್ಕೆ ಆಗಬೇಕು ನಿಮಗೆ. ಇದೇ ಏನ್ ಗುರೂಲಿ ನೂರು ಪೋಸ್ಟ್ ಬಂದಿದೆ ನೋಡ್ಕೊಳ್ಳಿ, ಹಿಂದಿ ರಾಷ್ಟ್ರಭಾಷೆ ಅಲ್ಲ ಅಂತ. ಏನಂದ್ರಿ? ಸಂಸ್ಕೃತ ವಿವಿಯಿಂದ ಜನಕ್ಕೆ ಕೆಲಸ ಸಿಗುತ್ತೆ ಅಂತಾನಾ? ನಿಮಗೆ return of investment ಅಂದ್ರೇನು ಅಂತಾ ಗೊತ್ತಾ? ಎಷ್ಟು ಉದ್ಯೋಗ ಹುಟ್ಸುತ್ತೆ ಅದು? ಅದಕ್ಕೆ ಎಷ್ಟು ಕೋಟಿ ಸುರೀತಾ ಇದೆ ಸರ್ಕಾರ? ಕುರುಡು ಸಂಸ್ಕೃತ ಪ್ರೇಮಾನ ಬಿಟ್ಟು ಕಣ್ಬಿಟ್ಟು ನೋಡಿ.

xyz ಅವ್ರೇ,
ತರ್ಜುಮೆ ಮಾಡೊ ಹಾಗಿಲ್ಲ, ಸಂಸ್ಕೃತಾನ ಸಂಸ್ಕೃತದಲ್ಲೇ ತಿಳ್ಕೋಬೇಕು ಅದಕ್ಕೆ ಕನ್ನಡದೋರೆಲ್ಲಾ ಸಂಸ್ಕೃತ ಕಲೀಬೇಕು ಅನ್ನೋ ನಿಮ್ಮ ನಿಲುವೇ ಸರಿಯಿಲ್ಲ. ಭಗವದ್ಗೀತೆ, ರಾಮಾಯಣಾ ಎಲ್ಲಾ ಕನ್ನಡದಲ್ಲಿ ಬಂದಿದ್ದಕ್ಕೇ ಜನಕ್ಕೆ ಅದು ಅರ್ಥವಾಗಿರೋದು ಮತ್ತು ಆ ಕಾರಣಕ್ಕೇ ಪವಿತ್ರವಾಗಿರೋದು. ಯೂರೋಪಿಯನ್ ಭಾಷೆಯಿಂದ, ಸಂಸ್ಕೃತದಿಂದ ಜ್ಞಾನ ಕನ್ನಡಕ್ಕೆ ತರೋಹಾಗಿಲ್ಲಾ ಯಾಕೆ ಅಂತ ಹೇಳ್ತೀರಾ?

ಸುಂದರ್

Unknown ಅಂತಾರೆ...

ನಮಸ್ಕಾರ ಗುರು.

ನಾನು ಈ ವಿಷಯದ ಬಗ್ಗೆ ಒಂದು ಲೇಖನ ಬರೆದಿದ್ದೀನಿ. ಇಲ್ಲಿ ಓದ್ ನೋಡಿ.

http://kannadigaa.blogspot.com/2009/06/samskruta-veda-vishwavidyaalaya-eke.html

Deshabhakta ಅಂತಾರೆ...

ನಮಸ್ಕಾರ ಗುರು,

ಸಂಸ್ಕ್ರತ ಭಾಷೆಯ ಅಳಿವು-ಉಳಿವನ್ನು ನೋಡಿಕೊಳ್ಳುವ ಕರ್ತವ್ಯ ಎಲ್ಲ ಭಾರತೀಯರದು. ಅದು "ನಮ್ಮ" ಭಾಷೆ. ಸಂಸ್ಕ್ರತ ವಿವಿಯಿಂದ ಕನ್ನಡಕ್ಕೇನು ಲಾಭ ಎಂಬ ಸಂಕುಚಿತ ವಿಚಾರ ಬೇಡ. ಸಂಸ್ಕ್ರತದಲ್ಲಿನ ಜ್ಞಾನ ಕನ್ನಡಕ್ಕೆ ಬರಬೇಕೆಂದಾದರೆ ಸಂಸ್ಕ್ರತದ ಅಧ್ಯಯನ ಅಗತ್ಯ. ಅದು ಕನ್ನಡದ ನೆಲದ ಮೇಲೆ ನಿರ್ಮಿತವಾಗುತ್ತಿರುವದರಿಂದ ಎರಡೂ ಭಾಷೆಗಳ ಅಭಿವೃದ್ಧಿಗೆ ನಾಂದಿಗುತ್ತದೆ.
ಸುಳ್ಳನ್ನು ಪದೇಪದೇ ಹೇಳ್ತಾ ಇದ್ರೆ ಅದು ಜನಮನದಲ್ಲಿ ಸತ್ಯವೆಂದು ಪರಿಗಣಿಸಲ್ಪಡುತ್ತದಂತೆ. ಅದೇ ಪ್ರಯತ್ನವನ್ನು ಕನ್ನಡದ ಕೆಲವು 'ಮೇರು' ಸಾಹಿತಿಗಳು ಈ ವಿಷಯದಲ್ಲಿ ಮಾಡುತ್ತಿರುವದು ಕಂಡುಬರುತ್ತಿದೆ. ಸಂಸ್ಕೃತವನ್ನು ಸಾಯಿಸುವ ಮತ್ತು ಅದರ ಏಳ್ಗೆಯನ್ನು ಸಾಧ್ಯವಾದಷ್ಟು ತಡೆಹಿಡಿಯುವ ಹುನ್ನಾರದ ಚಿನ್ಹೆಗಳು ಇದರಲ್ಲಿವೆ. ಇವರ ಎಡಪಂಥೀಯ ವಾಲುವಿಕೆಯನ್ನು ಪರೀಕ್ಷಿಸಿಯೇ ನಾವು ಇವರ ಅಭಿಪ್ರಾಯಕ್ಕೆ ತಕ್ಕ ಗೌರವ ನೀಡಬೇಕು.
ಕರ್ನಾಟಕದಂತೆ ಪ್ರತಿಯೊಂದು ರಾಜ್ಯದಲ್ಲೂ ಕನಿಷ್ಚ ಒಂದು ಸಂಸ್ಕೃತ ವಿವಿ ಸ್ಥಾಪನೆಯಾಗಲು ಎಂದು ಆಶಿಸುತ್ತೇನೆ.
-ಧನ್ಯವಾದಗಳು.

Anonymous ಅಂತಾರೆ...

ಗುರುಗಳೇ,

ನೀವು ಬರೆದಿರೋ ಲೇಖನದಲ್ಲಿ "ಸಂಸ್ಕೃತದಲ್ಲಿ ಭಾಳ ಜ್ಞಾನ ಇದೆ, ಅದು ಕನ್ನಡಕ್ಕೆ ಬರಬೇಕು" ಅನ್ನುವ ಹಾಗೆ ಬರ್ದಿದ್ದೀರ‍ಾ, ಅದೇನೋ ಸರೀನೆ. ಆದ್ರೆ ಅದ್ರಲ್ಲಿರೋ ಜ್ಞಾನ ಎ೦ಥದ್ದು ಅಂತ ಯೋಚನೆ ಮಾಡಿದ್ದೀರಾ? ಇವತ್ತಿನ ದಿನ ಆಯುರ್ವೇದ ಅನ್ನೋದೊಂದನ್ನು ಬಿಟ್ರೆ ವೇದ, ಮಂತ್ರಕ್ಕೆ ಮಾತ್ರಾ ಸಂಸ್ಕೃತಾನಾ ಉಪಯೋಗಿಸೋದು ಅಲ್ವಾ? ಹೆಚ್ಚೂ ಅಂದ್ರೆ ಅದರಿಂದ ಆಯುರ್ವೇದ ವೈದ್ಯಕೀಯ ಪದ್ದತಿ ಇದೆ, ದುರಂತ ಅಂದ್ರೆ ಅದನ್ನೂ ಕನ್ನಡಕ್ಕೆ ತರದೆ ಇಂಗ್ಲೀಷಿನಲ್ಲಿ ಹೇಳಿಕೊಡ್ತಾರೆ. ಈಗ ವಿಶ್ವವಿದ್ಯಾಲಯ ಅಂತ ಮಾಡಿ ಅದರಲ್ಲಿ ಹೇಳ್ಕೊಡೊ ವಿಷಯಗಳು ಬರಿ ಅಧ್ಯಾತ್ಮಕ್ಕೆ ಸಂಬಂಧಿಸಿದ್ದಷ್ಟೆ ಆಗಿರುತ್ತೆ ಅನ್ಸಲ್ವಾ, ಇವತ್ತು ಮೈಸೂರಿನಲ್ಲಿರೋ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ಹೇಳಿಕೊಡೋ ಸಬ್ಜೆಕ್ಟುಗಳು ಯಾವ್ದು ಗೊತ್ತಾ? ತರ್ಕ ಮೀಮಾಂಸೆ ಇಂಥವು. ಹೆಚ್ಚಿನ ಸಂಸ್ಕೃತ ಕಲಿಕೆಯಲ್ಲಿ ಇರೋದು ಅಧ್ಯಾತ್ಮ ಮತ್ತು ಕಾವ್ಯವೇ.ಇದನ್ನು ಹೇಳಿಕೊಡಕ್ಕೆ ಯಾವ ವಿಶ್ವವಿದ್ಯಾಲಯವೂ ಇವತ್ತು ಕನ್ನಡಿಗರಿಗೆ ಆದ್ಯತೆಯ ವಿಷಯವಲ್ಲ ಮತ್ತು ನಾಡಿಗೆ ಖಂಡಿತಾ ಬೇಕಾಗಿಲ್ಲ. ನಮಗೆ ಅನ್ನ ಕೊಡೋ ವಿ.ವಿಗಳು ಬೇಕು.

ಸುಂದರ್

MagicalTouch ಅಂತಾರೆ...

ಗ್ರೀಕ್, ಲ್ಯಾಟಿನ್ ಭಾಷೆಗಳನ್ನು ಸಂಸ್ಕೃತಕ್ಕೆ ಹೋಲಿಸೋದು ತಪ್ಪು ಅಲ್ಲ ಆದ್ರೆ ಅವೈಜ್ಞಾನಿಕ ಅಂತ ಅನ್ಸುತ್ತೆ. ಹೇಗೆ ನಿಯಾಂಡರ್ಥಾಲ್ ಮಾನವ ಮತ್ತು ಹೋಮೋ ಸೇಪಿಯನ್ ಮಾನವ ಬೇರೆ ಬೇರೆನೋ, ಹಾಗೆ.
ಸಂಸ್ಕೃತದಲ್ಲಿನ ಜ್ಞಾನವನ್ನು ಕನ್ನಡಕ್ಕೆ ಹಾಗೂ ಇತರ ಭಾಷೆಗಳಿಗೆ ತರೋದು ಉತ್ತಮ ಬೆಳವಣಿಗೆ, ನಿಜ. ಆದರೂ, ಸಂಸ್ಕೃತವನ್ನು ಮೂಲರೂಪದಲ್ಲಿ, ಸ್ವಲ್ಪಮಟ್ಟಿಗಾದರೂ ಉಳಿಸಿಕೊಳ್ಳೋದು ಇನ್ನೂ ಉತ್ತಮ ಅಂತ ನನ್ನ ಅನಿಸಿಕೆ. ಈ ನಿಟ್ಟಿನಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ,(ಒಂದು ವೇಳೆ, ಸರಿಯಾದ ರೀತಿಯಲ್ಲಿ ಇದನ್ನು ಕಟ್ಟಿದಲ್ಲಿ) ಸಹಕಾರಿ.

satish ಅಂತಾರೆ...

those who argue Kannada is not benifitted from sanskrit, they have not read kannada literature properly i,e Kavi its sanskrit word, In medival or before that its kabbiga like so many words right now we using are either derived from sanskrit or have effect of sanskrita.
coming to the sanskrita university we should have. not only because of knowledge it has. surely it will flourish our kannada bhashe in literature

kummi ಅಂತಾರೆ...

"ಕನ್ನಾಡಕ್ಕೆ" anta ide ondu kade. dayavittu adannu tiddi.

ವ್ಯಾಸರಾಜು ಅಂತಾರೆ...

ಅದೇನೇ ಆಗ್ಲಿ ಸ೦ಸ್ಕೃತ ವಿ.ವಿ ಬ೦ದುಬಿಡಬೇಕು! ಅನ್ನೋರ್ಗೆ ತಲೆ ಇಲ್ಲ. ಸ೦ಸ್ಕೃತದಲ್ಲಿರುವ ಅಮೋಘ ಜ್ಞಾನ ಭ೦ಡಾರವನ್ನು ಅರ್ಥ ಮಾಡುಕೊಳ್ಳೋದರಲ್ಲಿ ಆಸಕ್ತಿ ಇಲ್ಲ ಇವರಿಗೆ. ಸ೦ಸಕೃತದಲ್ಲಿರೋ ಮಹಾಪ್ರಾಣಗಳನ್ನು ಉಛ್ಚರಿಸಿದರೆ ಸಾಕು ಭಗವ೦ತನೇ ಪ್ರತ್ಯಕ್ಷವಾಗಿ ಮೋಕ್ಷ ಕೊಟ್ಟುಬಿಡುತ್ತಾನೆ. ಈ ನ೦ಬಿಕೆ ಇನ್ನು ೧೦೦ ವರ್ಷಗಳ ಕಾಲ ಜನರ ಮನಸ್ಸಿನಿ೦ದ ಹೋಗೋ ಹಾಗೆ ಕಾಣೆ.

ಪವ್ವಿ ಅಂತಾರೆ...

ಇಲ್ಲಿ ತನಕ ಬಂದಿರುವ, ಪ್ರಕಟಗೊಂಡಿರುವ ಎಲ್ಲಾ ಪರ ಚಿಂತನೆಗಳನ್ನು ಕೆಳಗಡೆ ಹೀಗೆ ಹೇಳಬಹುದು.

ಕನ್ನಡಕ್ಕೆ ಇಷ್ಟು ಪದ ಬಂದಿದೆ
ಇಷ್ಟು ಜನ ಅದನ್ನು ಓದಿದ್ದಾರೆ
ಪ್ರಮುಖರು ಅದರ ಬಗ್ಗೆ ಒಳ್ಳೆ ಮಾತನಾಡಿದ್ದಾರೆ
ನಮ್ಮ ಎಲ್ಲಾ ಕಾವ್ಯಗಳು ಆ ಭಾಷೆಯಲ್ಲೇ ಇದೆ
ಜಗತ್ತಿನ ಎಷ್ಟೋ ವಿಶ್ವವಿದ್ಯಾಲಯದಲ್ಲಿ ಹೇಳಿಕೊಡುತ್ತಾರೆ
ಬಿಳಿಚರ್ಮದವರು ಇದನ್ನು ಮೆಚ್ಚಿದ್ದಾರೆ( ಹೆಮ್ಮೆಯಿಂದ)
ಇದರಲ್ಲಿ TCP/IP ಇಂದ ಹಿಡಿದು, ಆರ್ಯುವೇದದ ತನಕ ಜ್ಞಾನ ಭಂಡಾರ ಇದೆ.
ನಮ್ಮ ಮಠಗಳು ಸಂಸ್ಕೃತ ಹೇಳಿಕೊಡುತ್ತಿವೆ.
ಎಲ್ಲಾ ಭಾಷೆಯಗಳಿಗೂ ಇದೆ ಅಮ್ಮ.
ನಮ್ಮ ಸಂಸ್ಕೃತಿ ಇರುವುದೇ ಈ ಭಾಷೆಯಿಂದ.
ನಮ್ಮ ಸಾಹಿತಿಗಳಿಗೆ ೭ ಜ್ಞಾನಪೀಠ ಬಂದಿರುವುದೇ ಸಂಸ್ಕೃತದಿಂದ.
ಸಂಸ್ಕೃತವನ್ನು ತಿರಸ್ಕರಿಸಿದ ಭಾಷೆಗಳು ಮಟಾಷ್ ಆದವು ಉದಾ;- ತಮಿಳ್, ಅದೇ ಕನ್ನಡ ಬೆಳೆದವು , ಬೇಕಿದ್ದರೆ ನಮಗೆ ೭ ಜ್ಞಾನಪೀಠ ಬಂದಿರುವುದೇ ಸಾಕ್ಷಿ.
ಸಂಸ್ಕ್ರುತ ಸಾಹಿತ್ಯ ಇನ್ನು ಇದೆ, ಇದನ್ನು ಮಾತನಾಡುವ ಒಂದು ಗ್ರಾಮ ಇದೆ.
ಪೈಗಂಬರ ಈ ಶಭ್ದದಲ್ಲೂ ಅಂಬರ ಅನ್ನುವ ಸಂಸ್ಕೃತ ಪದ ಇದೆ, ಕವಿ ಇದು ಕೂಡ ಸಂಸ್ಕೃತ ಪದ..
ಎಲ್ಲಾ ಜಾತಿಯವರು ಮಾತನಾಡುತ್ತ ಇದ್ದರು ಹಿಂದೆ.


ಗಮನಿಸಿ ನೊಡಿ, ಇವು ಯಾವುದಾದರೂ ಒಂದಾದರೂ ನಮ್ಗೆ ಸಂಸ್ಕೃತ ವಿವಿ ಬೇಕು ಅನ್ನುವದನ್ನು ಅನುಮೋದಿಸುತ್ತದೆಯಾ ?. ೧೨ ವಿವಿ ಇವೆ, ಅವು ದಶಕಗಳಿಂದ ಇವೆ, ನಮ್ಮ ರಾಜ್ಯದಲ್ಲೇ ಅನೇಕ ಪೀಠಗಳೂ ಇವೆ, ಮಠಗಳಲ್ಲಿ ಹೇಳಿಕೊಡುತ್ತಾರೆ, ಅವುಗಳು ಮಾಡದ ಕೆಲ್ಸ ಇದು ಮಾಡುತ್ತೆದೆಯಾ. ಅಷ್ಟಕ್ಕೂ ನಮ್ಮ ರಾಜ್ಯದ ಸಂಸ್ಕ್ರುತ ಕಲಿಬೇಕು ಅನ್ನೊ ವಿದ್ಯಾರ್ಥಿ ಬೇರೆ ರಾಜ್ಯಕ್ಕೆ ಇಲ್ಲ ಬೇರೆ ದೇಶಕ್ಕೆ ಹೋಗಲು ಬಿಡುತ್ತ ಇಲ್ಲವೇ, ಇಲ್ಲ ಅಲ್ಲಿ ನೇಮಕಾತಿಯನ್ನು ತಿರಸ್ಕರಿಸಿದ್ದಾರೆ ?.
೧೫ ಕೋಟಿ ಪಡೆಯಲು ಹರಸಾಹಸ ಮಾಡುತ್ತ ಇರೊವಾಗ, ೧೦೦ ಕೊಟೀ ವೆಚ್ಚ ಮಾಡುತ್ತ ಇರುವುದು ಯಾವ ನ್ಯಾಯ. ಅದೇ ನಾವು ಕೇಂದ್ರಕ್ಕೆ ಸಡ್ಡು ಹೊಡೆದು ನೀವು ಕೋಡಬೇಡಿ ನಾವೇ ನಮ್ಮ ಭಾಷೆಯನ್ನು ಪೋಷಿಸುತ್ತೆವೆ ಅಂತ ಹೇಳಿ ೭ ವರ‍್ಶ ಕನ್ನಡ ಕೆಲ್ಸಗಳನ್ನು ಮಾಡಬಹುದಿತ್ತು.

ನಮ್ಮ ರಾಜ್ಯದ ವಿವಿ ಯಾವ ಮಟ್ಟಕ್ಕೆ ಇದೆ ಅಂತ ಎಲ್ಲರಿಗೂ ಗೊತ್ತು, ಹಂಪಿ ವಿವಿಯನ್ನು ಸರಿ ಮಾಡದೇ ಇನ್ನೊಂದು ಪಾಳು(ಪೋಲು) ವಿವಿ ಮಾಡುತ್ತೆವೆ ಎಂದು ಹೊರಡುವ ಕ್ರಮ ಯಾರನ್ನು ಮೆಚ್ಚಿಸಲೋ ನಾ ಕಾಣೆ.

Anonymous ಅಂತಾರೆ...

[ಕನ್ನಡದ ಸ್ವರೂಪದ ಅಧ್ಯಯನ, ವ್ಯಾಕರಣದ ಅಧ್ಯಯನ, ಕನ್ನಡ ನುಡಿಯನ್ನು ಅನ್ನದ ನುಡಿಯಾಗಿಸೋದಕ್ಕೆ ಬೇಕಾದ ಹೆಜ್ಜೆಗಳು, ಕನ್ನಡದಲ್ಲಿ ಶಿಕ್ಷಣ ವ್ಯವಸ್ಥೆ ಕಟ್ಟೋಕೆ ಏನು ಮಾಡಬೇಕು? ಕನ್ನಡಿಗರ ಏಳಿಗೆಗೆ ಕನ್ನಡವನ್ನೇ ಪರಿಣಾಮಕಾರಿಯಾದ ಸಾಧನವಾಗ್ಸೋದು ಹ್ಯಾಗೆ?... ಅನ್ನೋದೆಲ್ಲಾ ಕರ್ನಾಟಕ ಸರ್ಕಾರದ ಆದ್ಯತೆ ಪಟ್ಟೀಲಿ ಸಂಸ್ಕೃತ ವಿಶ್ವವಿದ್ಯಾಲಯ ಕಟ್ಟೋಕ್ಕಿಂತ ಮೇಲಿರಬೇಕಾಗಿದೆ ಗುರು.]

ಮೆಚ್ಚತಕ್ಕ ಹಾಗು ಒಪ್ಪತಕ್ಕ ಮಾತು. ಈ ಬರಹ ತುಂಬಾ ಚನ್ನಾಗಿ ಬಂದಿದೆ.

ನನ್ನನಿಸಿಕೆಯಲ್ಲಿ ಕನ್ನಡಕ್ಕಿನ್ನು ತಕ್ಕವಾದ ಸೊಲ್ಲರಿಮೆಯ ಆರಯ್ಯು ನಡೆದೇ ಇಲ್ಲ. ಹಾಗೂ ಕನ್ನಡವನ್ನು ಹೊಸಜಗತ್ತಿನ ಹೊಸತುಗಳಿಗೆ ಮುಂದುವರಿಕೆಗಳಿಗೆ ಒಗ್ಗಿಸುವ ಕೆಲಸಗಳೇ ಬೇಕಾದಶ್ಟಿದೆ.

ಇನ್ನು ಸಕ್ಕದದ ಹಗೆ ಯಾಕೆ ಎಂಬುದಕ್ಕೆ ಸಕ್ಕದದ ಬೆಂಬಲಿಗರ ನಿಲುವುಗಳು ತೋರಿಸಿಕೊಡುವುದು. ಒಪ್ಪತಕ್ಕ ಸಲುವುಗಳಿಂದ ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ಯಾರೇ ಬೇಡವೆಂದರೂ ಅವರನ್ನೆಲ್ಲ ಮುಲಾಜಿಲ್ಲದೇ, ಹಾಯಾಗಿ ಸಂಸ್ಕೃತವಿರೋಧಿಗಳು ಎಂಬ ಹಣೆಪಟ್ಟಿ ಕಟ್ಟಬಹುದು.

ಇನ್ನೂ ಸರಕಾರ ನೆಲೆಸಲೆಣಸಿದ್ದು ’ವೇದ ವಿಶ್ವವಿದ್ಯಾನಿಲಯ’ವನ್ನು, ಅದನ್ನು ಈಗ ’ಸಂಸ್ಕೃತ ವಿಶ್ವವಿದ್ಯಾನಿಲಯ’ ಎಂದು ಕರೆಯುತ್ತಿದ್ದಾರೆ. ವೇದ ವಿಶ್ವವಿದ್ಯಾನಿಲಯವಾದರೆ ನಾಳೆ ಕುರಾನ್, ಬಯ್ಬಲ್ಲು ಮುಂತಾದ ವಿಶ್ವವಿದ್ಯಾನಿಲಯಗಳನ್ನು ನೆಲೆಸಲು ಸರಕಾರಗಳಿಗೆ ಒಂದು ಸುಲಭವಾದ ಕಾರಣ ಸಿಕ್ಕಿಬಿಡುವುದಲ್ಲವೆ!

ಆದರೂ ಸಂಸ್ಕೃತದಲ್ಲಿ ಏನಿದೆ ಏನಿಲ್ಲ ಅನ್ನುವುದಕ್ಕೆ ಹೆಚ್ಚು ಊಹಾಪೋಹಗಳು, ವ್ಯವಸ್ಥಿತ ವ್ಯಾಖ್ಯಾನಗಳು ನಮ್ಮ ದಾರಿ ತಪ್ಪಿಸುತ್ತಿವೆ.

ಕನ್ನಡದ ಕಾವ್ಯಗಳಲ್ಲಿ ಏನೇನಿದೆ, ಅದರೆಲ್ಲಶ್ಟು ಜ್ನಾನ/ಅರಿವಿದೆ ಎಂದು ತಿಳಿಸುವ ಕೆಲಸ ನಮ್ಮ ಕರ್‍ನಾಟಕ ಸರಕಾರಕ್ಕೆ ಮನಸ್ಸು ಯಾವಾಗ ಬಂದೀತು? ವಚನ ಸಾಹಿತ್ಯಕ್ಕಿದ್ದು ವೆಬ್ ಸಯ್ಟು ಕೆಲಸ ಮಾಡುತ್ತಿಲ್ಲ. ವಚನದ ಬಗ್ಗೆ ವಿಶ್ವವಿದ್ಯಾನಿಲಯ ಯಾಕೆ ಬರಬಾರದು? ಹಳಗನ್ನಡದ ವಿಶ್ವವಿದ್ಯಾನಿಲಯ ಬೇಕಲ್ವೆ?

manju ಅಂತಾರೆ...

ನನ್ನ ಪ್ರಕಾರ, ಕನ್ನಡ ವಿ ವಿ ಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಬೆಳೆಸಲಿ. ಬೇಕಾದ್ರೆ ಸಂಸ್ಕೃತದಿಂದ ಕನ್ನಡಕ್ಕೆ ಉಪಯೋಗವಾಗುವನ್ತದ್ದೇನಾದ್ರು ಬರೋ ಹಾಗಿದ್ರೆ ನಮ್ಮ ವಿ ವಿಗಳಲ್ಲೇ ಆ ತರ್ಜುಮೆ ಕೆಲಸ ನಡೆಯಲಿ. ಸಂಸ್ಕೃತ ವಿಶ್ವವಿದ್ಯಾನಿಲಯ ಬೇಡವೇ ಬೇಡ.

Anonymous ಅಂತಾರೆ...

ಕನ್ನಡದ ಮೊತ್ತಮೊದಲ ವ್ಯಾಕರಣ ಪುಸ್ತಕ ಕೇಶಿರಾಜನ ಶಬ್ದಮಣಿದರ್ಪಣ...ಆ ಕಾಲದಿಂದಲೂ ಸಂಸ್ಕೃತೀಕರಣವನ್ನು ವಿರೋಧಿಸಿದ ಕನ್ನಡ ಕವಿ ಪುಂಗವರೇ ಹೆಚ್ಚು...
ಇದರಲ್ಲಿ ಅಸಗ, ಗಜಗ, ಮನಸಿಜ, ಗುಣನಂದಿ ಮೊದಲಾದ ಪುರಾತನ ಪೂರ್ವ ಹಳೆಗನ್ನದದ ಕವಿಗಳು ಜೈನ ಧರ್ಮೀಯರೂ ಮುಂಚೂಣಿಯಲ್ಲಿದ್ದರು

ಎಚ್ಚರಿಕೆ ಅಂತಾರೆ...

ಸ್ವಾಮಿ

ದಿನಾಲು ವಿಜಯಕರ್ನಾಟಕದಲ್ಲಿ ಒಂದೊಂದು ಕನ್ನಡಪದವನ್ನು ಸಂಸ್ಕೃತದಿಂದ ಬಂದಿದೆ ಎಂದು ಸಾರುತ್ತಿದ್ದಾರೆ.

ವನಿತಾ ಪದದಿಂದ ಹೆಣ್/ಪೆಣ್, ಪತ ಪದದಿಂದ ಪಡು, ಪ್ರೋಣ ಪದದಿಂದ ಹೂಳು ಹೀಗೆ. ಆದರೆ ವೆಂಕಟಸುಬ್ಬಯ್ಯ, ಕಿಟ್ಟಲ್ ಮುಂತಾದ ಕನ್ನಡದ ನಿಘಂಟುಗಳು ಇವೆಲ್ಲ ಕನ್ನಡದ್ದೇ, ದ್ರಾವಿಡ ದೇಶೀ ಮೂಲವಾದ್ದು ಎಂದೇ ಹೇಳುವುವು.

ದಯವಿಟ್ಟು ಈ ಬಗ್ಗೆ ತುಸು ಎಚ್ಚಿಕೆ ತೋರಿಸಿರಿ.

ದೇವರು ಕನ್ನಡಕ್ಕೆ ಕೆಲಸ ಮಾಡುತ್ತಿರುವ ನಿಮಗೆ ಒಳ್ಳೆಯದು ಮಾಡಲಿ

mankuthimmappa ಅಂತಾರೆ...

puttappanavaru kannadada kristha english shilubeya mele saaythaa iddane antha ondu padya barediddaare. nija helabekendare, kannadithiyaru, kannadigaru saaythaa irodu ajnaanadinda, badathanadinda. ee dushta shakthigaLannu maNisalu samskritha vishwavidyanilayadinda hege saadhya? Namma naadinalli kannada kalithe baduktheve annuvantha vaathavarana nirmaana maadbeku. Illadidre naavu kannadada kampina urulininda usiru katti saayodu nija. naguvanahalliya mandige shabdamanidarpana, pampabhaaratha, adhyaathma, vedaadhyana aprasthutha. Illi kaantha iro shishta graanthika kannada (eshte desipadagalannu hondiddaru kooda) avarige artha aaguva sandarbha kadime. kooli kelasa maadikondu baduko mariswamy paalyada anna, akka, thamma, thangiyarige modalu bekaagirodu eradu hotthu oota, thale mele ondu sooru, saakashtu batte, matthu nithya jeevanadalli nemmadi. avu namage yaava maargada moolaka bandaru onde. heeganda mathrakke kannadakke apamaana esagutthidene antha yaaru bhaaviso avashyakathe illa. nanna nithya badukinalli, manovyaapaaragalalli adara praamukhya bannisalu asadalavaadaddu. eega, illi annuvudara bagge gamana harisidare, kannada bagge kanasu kaanalu, aa kanasannu nanasu maaduvudu saadhyavaadeetu. hasivaadaaga nanage mukhya aahara padaarthagalu yaava maathinalli irabeku anno vishya alla. anna saaradru aayithu, mrushtaannavaadaru aayithu.

ee maathugalanna dayvittu kannada lipige ilistheera?

ಮಧುಕುಮಾರ ಅಂತಾರೆ...

ಸಂಸ್ಕೃತದ ಬಗ್ಗೆ ಅಗೌರವದ ಮಾತು ಬೇಡ,ಮಹಾಕವಿ ಕಾಳಿದಾಸರು ಮತ್ತಿತರ ಕವಿಗಳ ಭಾಷೆ ಅದು...ನಮ್ಮ ಎಷ್ಟು ಕಾಲೇಜುಗಳಲ್ಲಿ ಉರ್ದು,ಮರಾಠಿ,ತಮಿಳು ಇದೆ ಗೊತ್ತಾ?...ಅದಕ್ಕಿಂತ ಕೀಳಾ ಸಂಸ್ಕೃತ?...

Anonymous ಅಂತಾರೆ...

ಬರೀ ಆ ಭಾಷೆ ಬೇಕು, ಈ ಭಾಷೆ ಬೇಡ, ಅನ್ನೋದರಲ್ಲೇ ನಾವು ಕಾಲ ಕಳೀತೀವಿ ಅಷ್ಟೇ. ವೇದಗಳು ಹೇಳಿವೆ "ಜ್ಘ್ಯಾನ ಯಾವ ಮೊಲೆಯಿಂದಾರೂ ಬರಲಿ ಅದನ್ನು ನಾವು ಗೌರವಿಸಿ ಅಳವಡಿಸಿಕೊಳ್ಳಬೇಕು" ಎಂದು. ಹಾಗೇ ಭಾಷೆ ಯಾವುದಾದರೂ ಸರಿ ನಮ್ಮ ಹೊಟ್ಟೆಗೆ ಎರಡು ಹೊತ್ತು ಊಟ ಬೇಕಷ್ಟೆ. ಅದು ಸಂಸ್ಕೃತವಾಗಿರಬಹುದು, ಕನ್ನಡವಾಗಿರಬಹುದು ಮತ್ಯಾವುದೋ ಅಗಿರಬಹುದು. ಆ ಹೊಟ್ಟೆ ತುಂಬಿದ ಮೇಲೆ ಅಲ್ಲವೇ ನಾನು, ನನ್ನದು, ನಮ್ಮದು ಬರುವುದು

ಕಿರಣ್ ರಾಜ್

Unknown ಅಂತಾರೆ...

"ಸಂಸೃತವೆಂಬ ನೀರು ಬೇಡಎಂದವರು ಕೋಳೆತು ನಾರಬೇಕಾಗುತ್ತದೆ" ಇಂತ ಸರ್ವಾಧಿಕಾರಿ ದೋರಣೆಯಮಾತುಗಳಿಂದ ಉತ್ತಮ ಬಾಷೆಯಾದ ಸಂಸೃತವನ್ನು ಉಳಿಸಿಕೊಳ್ಳಲು ಸಾದ್ಯವಿಲ್ಲ,
ಸಂಸೃತದ ಪರವಾಗಿರುವವರಿಗೆ ನಿಜವಾಗಿಯೊ ಅಸ್ಟೊಂದು ಕಾಳಜಿ ಇದ್ದರೆ ಬಾಷೆಯನ್ನು ಸಾರ್ವಜನಿಕರಿಗೆ ಸುಲುಬವಾಗಿ,ಜಾತಿ,ಆಹಾರಪದ್ದತಿಗಳ ಬೇದ ಮಾಡದೆ ಕಲಿಸುವ ವ್ಯವಸ್ತೆ ಮಾಡಿ.
ಇದು ನಿಮ್ಮಿಂದ ಸಾದ್ಯವೆ!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails