ಮಗಧೀರ 50: ಹಬ್ಬ ಇಲ್ಯಾಕೆ ಬೇಕಿತ್ತು?

ಮಗಧೀರ ಅನ್ನೋ ತೆಲುಗು ಚಿತ್ರ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿ ಕರ್ನಾಟಕದಲ್ಲಿ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದು ಕನ್ನಡದ ಅನೇಕ ಉತ್ತಮ ಚಿತ್ರಗಳನ್ನು ಚಿತ್ರ ಮಂದಿರದಿಂದ ಒಕ್ಕಲೆಬ್ಬಿಸಿ, ಕನ್ನಡ ಚಿತ್ರ ಮಾರುಕಟ್ಟೆಗೆ ಕೊಡಲಿ ಏಟು ಹಾಕಲು ಯತ್ನಿಸಿತ್ತು. ಈಗ ಈ ಚಿತ್ರ ಕರ್ನಾಟಕದಲ್ಲಿ 50 ದಿನ ಓಡಿದೆ ಅನ್ನೋ ಕಾರಣದಿಂದ ತೆಲುಗು ಸಿನೆಮಾದವರು ಬೆಂಗಳೂರಿಗೆ ಬಂದು ಒಂದು ಸಮಾರಂಭ ಮಾಡಿದ ಸುದ್ದಿ ದಟ್ಸ್ ಕನ್ನಡದಲ್ಲಿ ಸೆಪ್ಟೆಂಬರ್ 19ರಂದು ಬಂದಿದೆ. ಇದು ಕನ್ನಡದ ಕಲಾವಿದರನ್ನು ಮತ್ತು ರಾಜಕಾರಣಿಗಳನ್ನ ಸೇರಿಸಿಕೊಂಡು ಸಮಾರಂಭ ಮಾಡಿ, ಭಾವೈಕ್ಯತೆ ಅದು ಇದು ಅನ್ಕೊಂಡು ತೆಲುಗು ಸಿನೆಮಾಗಳಿಗೆ ಕರ್ನಾಟಕದಲ್ಲಿ ಇನ್ನಷ್ಟು ಮಾರುಕಟ್ಟೆ ಕಟ್ಟಿಕೊಳ್ಳುವ ಹುನ್ನಾರ ಇದ್ದಂಗಿದೆ. ಈ ಚಿತ್ರದ ಈ ಸಮಾರಂಭಕ್ಕೆ ಬಂದು ಅವರನ್ನು ಹಾಡಿ ಹೊಗಳಿದ್ದನ್ನು ನೋಡಿದ್ರೆ ಇವರಿಗೆ ಸ್ವಾಭಿಮಾನ ಕಿಂಚಿತ್ ಆದ್ರೂ ಇದೆಯಾ ಅನ್ನೋ ಪ್ರಶ್ನೆ ಕನ್ನಡಿಗರ ಮನಸ್ಸಲ್ಲಿ ಏಳ್ತಿದೆ ಗುರು !

ಇವರು ಹೇಳೊದೇ ಕೇಳಿ !

ಸಭೆಯಲ್ಲಿದ್ದ ಮಾನ್ಯ ಮಂತ್ರಿಗಳಾದ ಡಿ.ಎಚ್.ಶಂಕರ ಮೂರ್ತಿಗಳು " 500 ವರ್ಷಗಳ ಹಿಂದೆ ಕೃಷ್ಣದೇವರಾಯ ಆಳ್ವಿಕೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ ಎರಡೂ ಒಂದೇ ಆಗಿದ್ದವು. ಈಗಲೂ ಎರಡೂ ರಾಜ್ಯಗಳು ಆ ಸಂಬಂಧವನ್ನು ಮುಂದುವರಿಸುತ್ತಿರುವುದು ಸಂತೋಷ ಉಂಟು ಮಾಡುತ್ತಿದೆ" ಎಂದರು. ಅಲ್ಲಾ ಗುರು, ಒಂದು ಚಿತ್ರ, ಇನ್ನೊಂದು ಚಿತ್ರ ರಂಗದ ಮಾರುಕಟ್ಟೆಯನ್ನೇ ನುಂಗಿ ಹಾಕೋ ಪ್ರಯತ್ನ ಮಾಡಿದಾಗಲೂ, ಆ ಚಿತ್ರ ಭಾವೈಕ್ಯತೆ(?) ಬೆಸೆಯೋ ಕೊಂಡಿಯಾಗಿ ಇವರಿಗೆ ಕಾಣಿಸ್ತಾ ಇರೋದು, ಕನ್ನಡ-ಕರ್ನಾಟಕ-ಕನ್ನಡಿಗರ ಬಗ್ಗೆ ಇವರಿಗಿರೋ ನಿಷ್ಟೆ ಎಂತದ್ದು ಅನ್ನುವುದನ್ನ ತಿಳಿಸಲ್ವಾ? ಇವರ ಲೆಕ್ಕದಲ್ಲಿ, ಪರಭಾಷಾ ಚಿತ್ರಗಳ ಹಾವಳಿಯಲ್ಲಿ, ಕನ್ನಡ ಚಿತ್ರರಂಗ ಉಡೀಸ್ ಆದ್ರೂ, ಕನ್ನಡ ಚಿತ್ರ ನಿರ್ಮಾಪಕ ಬೀದಿಗೆ ಬಂದ್ರೂ ಪರ್ವಾಗಿಲ್ಲ, "ಭಾವೈಕ್ಯತೆ(?)" ಬೆಸುದ್ರೆ ಸಾಕು. ಒಂದು ನಾಡಿನ ಚಿತ್ರರಂಗದ ಅಸ್ತಿತ್ವವನ್ನೇ ಕಿತ್ತು ಹಾಕ್ತೀನಿ ಅನ್ನೋಹಾಂಗೆ ಬರೋರು ಇವರ ಕಣ್ಣಲ್ಲಿ ಸಂಬಂಧ ಬೆಸೆಯೋ ಗುಣ ಸಂಪನ್ನರ ತರಾ ಕಾಣಸೋದು ಎಂಥಾ ವಿಚಿತ್ರಾ ಅಲ್ವಾ, ಇದರ ಹಿಂದಿರೋ ಚಿಂತನೆಯಲ್ಲೇ, ಕರ್ನಾಟಕದಲ್ಲಿ ಕನ್ನಡದ ಸಾರ್ವಭೌಮತ್ವಕ್ಕೆ ಎಷ್ಟು ಬೆಲೆ ಇದೆ ಅನ್ನೋದನ್ನ ತೋರಿಸ್ತಾ ಇಲ್ವಾ ಗುರು ? ಶಂಕರಮೂರ್ತಿಗಳ ಪ್ರಕಾರ "ಕರ್ನಾಟಕದಲ್ಲಿ" ತೆಲುಗು-ಕನ್ನಡ ಬೇರೆ ಬೇರೆ ಅಲ್ವಂತೆ, ಅದು ಸರಿನೇ ಬಿಡಿ, ಕರ್ನಾಟಕದಲ್ಲಿ ಮಾತ್ರ ತೆಲುಗು-ಕನ್ನಡ ಎಲ್ಲ ಒಂದೇ. ಯಾಕಂದ್ರೆ, ಆಂಧ್ರದಲ್ಲಿ ಲಕ್ಷಗಟ್ಲೆ ಕನ್ನಡಿಗರು ಇದ್ರೂ, ಅವರಿಗೆ ಕರ್ನಾಟಕದಲ್ಲಿ ತೆಲುಗರಿಗೆ ಸಿಗ್ತಾ ಇರೋ ಯಾವ ಅನುಕೂಲವೂ, ಸೌಲಭ್ಯವೂ ಸಿಕ್ತಿಲ್ಲ, ಅಲ್ಲಿನ ಮಂತ್ರಿಗಳ್ಯಾರು ಕನ್ನಡ-ತೆಲುಗು ಒಂದೇ ಅಂತ ಹೇಳೊ ಪೆದ್ದರು ಅಲ್ಲ. ಅದೇನಿದ್ರೂ ಕರ್ನಾಟಕದಲ್ಲಷ್ಟೇ. ಬಿಡು ಗುರು, ಕರ್ನಾಟಕದ ಸರ್ಕಾರವೇ ಕೆಲವು ತೆಲುಗು ಸಚಿವರ ಅಣತಿಯಂತೆ ನಡೆಯುತ್ತಿರೋ ಅನುಮಾನ ಇರುವಾಗ, ಇಲ್ಲಿ ತೆಲುಗು-ಕನ್ನಡ ಎಲ್ಲ ಒಂದೇ ಆಗಿ ಇವರಿಗೆ ಕಾಣೋದ್ರಲ್ಲಿ ವಿಶೇಷ ಏನಿಲ್ಲಾ.

ಶಿವಣ್ಣನವರು ಹೇಳೊದು

ಇದೇ ಸಭೆಲಿ, ಕನ್ನಡಿಗರ ಕಣ್ಮಣಿ ಅಣ್ಣಾವ್ರ ಮಗನಾದ ಶಿವರಾಜ್‍ಕುಮಾರ್ ಅವರು "ಕರ್ನಾಟಕದ 13 ಚಿತ್ರಮಂದಿರಗಳಲ್ಲಿ ಮಗಧೀರ ಅರ್ಧ ಶತಕ ಪೂರೈಸಿರುವುದು ಖುಷಿ ಕೊಟ್ಟಿದೆ" ಅನ್ನೋ ಹೇಳಿಕೆ ಕೊಟ್ರು ಗುರು. ರಾಜ್ಯದಲ್ಲಿ ಚಿತ್ರಮಂದಿರದ ಕೊರತೆ. ಕನ್ನಡ ಚಿತ್ರಗಳು ಬಿಡುಗಡೆಗಾಗಿ ಕಾಯಬೇಕಾದ ಪರಿಸ್ಥಿತಿ. ಇಂತಹ ಸನ್ನಿವೇಶದಲ್ಲಿ ಕೆ.ಎಫ್.ಸಿ.ಸಿಯ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆಕಂಡು ಒಳ್ಳೆ ಅಭಿರುಚಿಯ ಮಳೆ ಬರಲಿ ಮಂಜು ಇರಲಿಯಂತಹ ಚಿತ್ರವನ್ನು ಚಿತ್ರ ಮಂದಿರದಿಂದ ಒದ್ದೋಡಿಸಿದಾಗ, ಕನ್ನಡ ಚಿತ್ರದ ಪರವಾಗಿ, ಕನ್ನಡದ ನಿರ್ಮಾಪಕರ ಪರವಾಗಿ ಒಮ್ಮೆಯೂ ದನಿ ಎತ್ತಿದ್ದು ಕಾಣಲಿಲ್ಲ. ಆದರೆ ಈಗ ಇವ್ರು ಮಗಧೀರ ಕರ್ನಾಟಕದಲ್ಲಿ 50 ದಿನ ಓಡ್ತು ಅಂತ ಅಂತ ಮಾಡೋ ಸಭೆಗೆ ಹೋಗಿ, ಅವರನ್ನ ಹಾಡಿ ಹೊಗಳೋ ಧಾರಾಳತೆ ತೋರಿಸುತ್ತಾ, ತಮ್ಮ ಕುಟುಂಬ ಮತ್ತು ಚಿರಂಜೀವಿ ಕುಟುಂಬಗಳಿಗಿರೋ ಬಾಂಧವ್ಯದ ಕಥೆ ಹೇಳುವುದನ್ನು ನೋಡಿದಾಗ, ಇವರ ನಿಷ್ಟೆ ತಮಗೆ ಅನ್ನ ಹಾಕಿರೋ ಕನ್ನಡ ಚಿತ್ರರಂಗಕ್ಕಾ ಇಲ್ಲ ಕೇವಲ ತಮ್ಮ ವೈಯಕ್ತಿಕ ಸಂಬಂಧಗಳಿಗಾ? ಅನ್ನೋ ಸಂದೇಹ ಮನಸ್ಸಲ್ಲಿ ಸುಳಿಯಲ್ವಾ ಗುರು?

ಕೊನೆಹನಿ:
ತೆಲುಗು ಚಿತ್ರವೊಂದರ 50ರ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಪ್ರಮುಖ ರಾಜಕಾರಣಿಯೊಬ್ರು ಭಾಗವಹಿಸಿದ್ದು ಮತ್ತವರ ಮನೆಮಾತು ತೆಲುಗಾಗಿದ್ದೂ ಕಾಕತಾಳೀಯಾನಾ ಗುರು?

30 ಅನಿಸಿಕೆಗಳು:

ಶಬರಿ ಅಂತಾರೆ...

ಶಬರಿ ಅಂತ ಯಾಕೆ ಹೆಸರಿಟ್ಟೆ ಅಂದ್ರೆ, ಶಬರಿ ಥರ ಒಳ್ಳೆಯ ಕನ್ನಡ ಚಿತ್ರ ನೋಡ್ಲಿಕ್ಕೆ ಕಾಯುತ್ತಿದ್ದಿನಿ. ಬೇರೆ ಭಾಷೆ ಚಿತ್ರ ನೋಡ್ಲಿಕ್ಕೆ ಇಷ್ಟ ಇಲ್ಲ ... ಆದ್ರೆ ಒಳ್ಳೆ ಕನ್ನಡ ಚಿತ್ರ ಬರೋದಿಲ್ಲ :-(
ಒಳ್ಳೆಯ ಕನ್ನಡ ಚಿತ್ರಗಳು ಬಂದು ಅವನ್ನು ನೋಡಲು ಜನ ಮುಗಿದು ಬಿದ್ದರೆ, ಅವನ್ನು ತೆಗೆಸುವಂತ ಕೆಲಸ ತೆಲುಗವ್ರು ಯಾಕೆ ಮಾಡುತ್ತಿದ್ದರು? ಹೋಗಲಿ ಬಿಡಿ ತೆಲುಗವರ ಚಿತ್ರಗಳಾದರು ಓಡಲಿ.

ಕ್ಲಾನ್ಗೊರೌಸ್ ಅಂತಾರೆ...

ಸರ್ಯಾಗಿ ಉಗ್ದಿದ್ಯ ಗುರು,
ಅಪ್ಪನಿಂದ ಈ ಮಕ್ಕಳು ಏನ್ ಕಲಿಬೇಕು ಕಲ್ತಿಲ್ಲ ಅನ್ಸುತ್ತೆ, ಅಣ್ಣವರು ಯಾರ್ನೆ ಹೊಗಳುದ್ರು ಈ ಥರ ತಮ್ಮತನನ ಬಿಟ್ಕೊಡ್ತಾ ಇರ್ಲಿಲ್ಲ.

@ ಶಬರಿ,
ಕನ್ನಡಿಗರು ನಿಮ್ಮ ಥರ ಯೋಚನೆ ಮಾಡೋದು ಮೊದಲು ನಿಲ್ಲಸ ಬೇಕು , ಯಾರ್ ಸ್ವಾಮಿ ಹೇಳಿದ್ದು ಕನ್ನಡದಲ್ಲಿ ಒಳ್ಳೆ ಸಿನಿಮಾ ಬರ್ತಿಲ್ಲ ಅಂತ, ಕನ್ನಡಿಗರು ಕನ್ನಡ ಸಿನಿಮಾ ನೋಡುದ್ರೆ ತಾನೇ ಒಳ್ಳೇದೋ ಕೆಟ್ಟುದ್ದೋ ಅಂತ ನಿರ್ದಾರ ಮಾಡೋಕ್ಕೆ. ಅವರ್ಗೆ ಅಕ್ಕ ಪಕ್ಕದ ಎಂಜಲೇ ರುಚಿ, ಸ್ವಾಮಿ ನಾನು ಈ ಮಗುಧೀರದಲ್ಲೇನಿದೆ ಅಂತ ಅಸ್ಟೊಂದು ಬೊಬ್ಬೆ ಹೊಡಿತಾರೆ ಅಂತ ನೋಡೋಣ ಅಂತ ಹೋದ ವಾರ ಅಪರ್ಣ ದಲ್ಲಿ ಹೋಗಿದ್ದೆ . ಚಿತ್ರ ಮಂದಿರ ಖಾಲಿ ಹೊಡಿತಿತ್ತು, ಚಿತ್ರ ದಲ್ಲಿ ಗ್ರಾಫಿಕ್ಸ್ ಬಿಟ್ರೆ ಇನ್ನೇನು ದುಮ್ಮಿಲ್ಲ (ಗ್ರಾಫಿಕ್ಸ್ ಕೂಡ ಲಾರ್ಡ್ ಆಫ್ ದಿ ರಿಂಗ್ಸ್ ನಿಂದ ಎಸ್ಟೋ ಕಾಪಿ ಇಳ್ಸಿರೋದು, ಕೊನೆಯ ಹಾಡಂತೂ (ಟ್ಯೂನ್ ಹಾಗು ಸಿಂಗಿಂಗ್) ಅಚ್ಚು L.O.T.R ದೇ). ಹಾಡುಗಳು ಸಾದಾರಣ, ಮತ್ತೆ ಮತ್ತೆ ಕೇಳೋಷ್ಟು ಗುಂಗೇನು ಇಲ್ಲ, ೪೦ ಕೋಟಿ ಏನಕ್ಕೆ ಕರ್ಚ್ ಮಾಡಿದ್ದಾರೋ ನಾ ಕಾಣೆ. ೮ - ೧೦ ಕೋಟಿ ಕರ್ಚ್ ಮಾಡಿ ಮಾಡಿರೋ 'ರಾಜ್' ಸಿನಿಮಾ ಎಸ್ಟೋ ಮೇಲು, ಹಾಡುಗಳು ಸೂಪರ್ ಹಿಟ್. ತಾಂತ್ರಿಕವಾಗಿ ಬಹಳ ಒಳ್ಳೆಯ ಚಿತ್ರ, ಆದರೆ ನಮ್ಮ ಕನ್ನಡಿಗರು ಏನ್ ಮಾಡುದ್ರು ? , ವಿನಾ ಕಾರಣ ಅಪಪ್ರಚಾರ ಮಾಡುದ್ರು . ಅಷ್ಟಿಲ್ದೆ ನಮ್ಮ ಹಿರಿಯರು ಈ ಗಾದೆ ಮಾಡುದ್ರ ? : ಹಿತ್ತಲ ಗಿಡ ಮದ್ದಲ್ಲ ಅಂತ

Adonis ಅಂತಾರೆ...

ಶಬರಿ ನೀವು ಎಷ್ಟೂ ಕನ್ನಡ ಚಿತ್ರ ನೋಡಿದ್ದೀರಾ, ಚೆನ್ನಾಗಿದೆ ಇಲ್ಲ ಅಂತ ಹೇಗೆ ನಿರ್ಧಾರ ಮಾಡುತ್ತೀರಾ ?. ನಿಮ್ಮ ಪ್ರಕಾರ ಒಳ್ಳೆ ಚಿತ್ರ ಅಂದರೆ ಯಾವುದು( ಮುಂಗಾರು ಮಳೆ ಅನ್ನಬೇಡಿ, ಯಾಕೆ ಅಂದರೆ ಮೊದಮೊದಲು ಅದನ್ನು ತೆಗೆಳಿದವರು ನಿಮ್ಮಂತ ಜನರೇ).
ನಿಮಗೆ ತೆಲುಗು ಚಿತ್ರವೂ ಒಂದೆ, ಹಿಂದಿ ಚಿತ್ರವೂ ಒಂದೆ, ಸಭಾರಂಭದಲ್ಲಿ ಪಾಲ್ಗೋಂಡ ರಾಜಕರಣಿಗಳಿಗೆ, ಕಲಾವಿದರಿಗೆ ಕಲೆಗೆ ಭಾಷೆ ಇಲ್ಲ ಇರಬೇಕಾದರೆ ನಿಮ್ಮಂತ ಪ್ರೇಕ್ಷಕರಿಗೆ ಯಾಕೆ ಇರಬೇಕು ಅಲ್ಲವೇ.. ನಿಮ್ಮಂತವರ ಪ್ರೋತ್ಸಾಹ ಇದ್ದರೆ ೫೦ ದಿನ ಅಲ್ಲ ೧೦೦ ದಿನ ಬೇಕಾದರೂ ಓಡುತ್ತದೆ.

Amar ಅಂತಾರೆ...

I want to see the reaction of sizziling star fans on this, i am sure dumb fans support this act and call it as Brotherhood. Utter mobbocracy.

ರಮೇಶ ರಾವ್ ಅಂತಾರೆ...

ಪಾಲಿಕೆ ಚುನಾವಣೆನ ಮನದಲ್ಲಿಟ್ಟುಕೊಂಡೆ ಈ ಮಂತ್ರಿಗಳಿಬ್ಬರು ತೆಲುಗು ಸಿನಿಮಾನ ಹೊಗಳಿದಹಾಗಿದೆ. ಅದರಲ್ಲು ಬಚ್ಚೇಗೌಡರಂತು "ನಾನು ಎಷ್ಟೋ ಚಿರಂಜೀವಿ ಸಿನಿಮಾಗಳನ್ನ ನೋಡಿದ್ದಿನಿ" ಅಂತಾರೆ. ಅದೇ ಜಗನ್ ಮೋಹನ್ ರೆಡ್ಡಿ ಬಾಯ್ಲಿ "ನಾನು ಎಷ್ಟೋ ರಾಜ್ಕುಮಾರ್ ಸಿನಿಮಾಗಳನ್ನ ನೋಡಿದ್ದಿನಿ" ಅಂತ ಹೇಳಿಸಲಿ ನೋಡೋಣ. ಕನ್ನಡ ಸಿನಿಮಾಗಳ ಗೋರಿಯ ಮೇಲೆ ಸೌಧ ಕಟ್ಟುವ ಈ ಥರಹದ ಕಾರ್ಯಕ್ರಮಗಳಿಗೆ ಇನ್ನಾದರು ನಮ್ಮ ಮಂತ್ರಿಗಳು ಸೊಪ್ಪು ಹಾಕದಿರಲಿ. ಇನ್ನಾದರು ತಾವು ನಿಂತ ಮರದ ರೆಂಬೆಯನ್ನು ಕಡಿಯಲು ಕನ್ನಡ ಸಿನಿಮಾ ನಟರು ಕೊಡಲಿ ಹಾಕಲು ಮುಂದಾಗದಿರಲಿ.

Anonymous ಅಂತಾರೆ...

Ella gurugaligu ondhu Prashne.. illi baredoru..eshtu jana "Bagyadha Balegara" chitra nodidira ?
Kannada, Karanatakakke sambandha patta ondhu uthama chitra yaaru nimmalli nodi prothsahisilla endare innu Kannada chitra oduvudadaru hege ?

Priyank ಅಂತಾರೆ...

೫೦ ದಿನ ಓಡಿದ್ರೆ ಸಮಾರಂಭ !!
ನಿಮ್ಮನ್ನ ನಿಮ್ ಮನೆಯಿಂದನೆ ಓಡ್ಸಿ ೫೦ ದಿನ ಆಯ್ತು, ಬನ್ನಿ ಸಿಹಿ ತಿನ್ನಿ ಅಂದಿದಾರೆ.
ಇವರು ಹೋಗಿದಾರೆ.
ಕರ್ಮ ಕರ್ಮ !!

Akshaya ಅಂತಾರೆ...

@ shabari

shabari avre, ond sari andhra pradesh ge hogi nodi, avru varshakke estu movies tagiyuttaro adralli mukkalu flop agatte. failures are obvious!. adre aganta andhradalli kannada movies hakalla, adu telugu movie tagesi, kannada movie hakodu --- not a chance. nammoru kelu mandi compromise agidare aste. it is not that kannada movies are inferior and their's is superior. ee mindset modlu tagdu haaki

tejappa ಅಂತಾರೆ...

bhagyada baLegaarada modala vaarada collection 2 koTi rupaayi.,, innu 3-4 vaara oDi dre haakida duDDina 2 paTTu barutte,, allige ellaru kuSh,,

alla,, 10 koTi haaki, 100 koTi tegitini anno chalgaararu kannada dalli ilve ilva?

ಸಿನಿಕ ಅಂತಾರೆ...

@ಶಬರಿ,
"ಒಳ್ಳೆಯ ಕನ್ನಡ ಚಿತ್ರಗಳು ಬಂದು ಅವನ್ನು ನೋಡಲು ಜನ ಮುಗಿದು ಬಿದ್ದರೆ, ಅವನ್ನು ತೆಗೆಸುವಂತ ಕೆಲಸ ತೆಲುಗವ್ರು ಯಾಕೆ ಮಾಡುತ್ತಿದ್ದರು?..ಹೋಗಲಿ ಬಿಡಿ ತೆಲುಗವರ ಚಿತ್ರಗಳಾದರು ಓಡಲಿ."

ವಾಹ್..ಯಾರ್ಗಾದ್ರು ಹೊಳೆದಿತ್ತಾ ಇಂತಾದ್ದು...ಎಂತ ಒಳ್ಳೆ ಯೋಚನೆ..ಎಂತ ದೊಡ್ಡ ಮನಸು..

ಅಲ್ಲ ಸಾರ್.. ನಮ್ಮ ನಾಡಿನಲ್ಲಿ ನಮ್ ಸಿನಿಮಾ ಹೆಂಗಾದ್ರೂ ಇರ್ಲಿ ಹೆಂಗಾದ್ರೂ ಓಡಲಿ.ಅದನ್ನ ತೆಗೆಯೋದು ಬಿಡೋದು ನಿರ್ಧರಿಸಬೇಕಾದುದು ನಾವು/ನಮ್ ಜನ. ತೆಲುಗು ಸಿನೆಮಾನ ಅವ್ರ ಊರ್ನಲ್ಲಿ ಜನ ನೋಡಲ್ಲ ಅಂತಾರ..ಅಲ್ಲಿನ ಜನ ಕಾಸು ಬದ್ಲು ಕಲ್ಲು ಕೊಡ್ತಾರ..
ನೀವು ಹೇಳೋದು ನೋಡಿದ್ರೆ ಕನ್ನಡದ ಸಿನೆಮಾಗಳೆಲ್ಲ ಬರೀ ಕೆಟ್ಟ ಚಿತ್ರಗಳು.ತೆಲುಗಿನವ್ರುದು ಎಲ್ಲ ಹಿಟ್ ಚಿತ್ರಗಳು ಅನ್ನೋ ಹಾಗಿದೆ.ಇಲ್ಲಿ ಬಿಡುಗಡೆ ಆಗೋ ಅವ್ರ ಚಿತ್ರಗಳು ಬರೀ ಅಬ್ಬರದ ಪ್ರಚಾರ ಪಡೆದುಕೊಂಡ ಚಿತ್ರಗಳು ಮಾತ್ರ.ಅಲ್ಲಿ ಹೋಗಿ ನೋಡಿದ್ರೆ ಅವ್ರುದು ಅದೇ ಕಥೆನೇ..
೯೮% ಕೆಟ್ಟ ಚಿತ್ರಗಳೇ. ಆದ್ರೆ 'ತೆಲುಗು ಸಿನಿಮಾ ಚೆನ್ನಾಗಿಲ್ಲ ಓಡ್ತಾ ಇಲ್ಲ ಕನ್ನಡ ಸಿನೆಮಾ ಹಾಕೋಣ' ಅಂತ ಅವ್ರು ಖಂಡಿತ ಅನ್ಕೊಳ್ಳೋದಿಲ್ಲ.ಮತ್ತೆ ತಮ್ ಭಾಷೆದೆ ಚಿತ್ರ ಹಾಕಿ ಓಡಿಸ್ತಾರೆ..

ನಮ್ ಜನ ಹಿಂಗಿರೋದ್ರಿಂದಲೇ..ಇವತ್ತು ಮಗಧೀರ ಹೀರೋಗೆ ಅವರಪ್ಪನಿಗೆ ರಜನಿಗೆ ಕಮಲ್ ಗೆ ಪರಭಾಷೆ ಚಿತ್ರರಂಗದ ನಾಯಕರಿಗೆ ಕರ್ನಾಟಕದಲ್ಲಿ 'ಅಭಿಮಾನಿ ಸಂಘಗಳು' ಹುಟ್ಟಿರೋದು.. ಅಲೀ ಎಲ್ಲೋ ನಮ್ ನಟರ ಅಭಿಮಾನಿಗಳ ಸಂಘ ಇಲ್ಲ..ಯಾಕಂದ್ರೆ ಆ ಬೇರೆಯವರಿಗೆ ವ್ಯವಹಾರ/ವ್ಯಾಪಾರಿ ಪ್ರಜ್ಞೆ ಇದೆ. ಅದಕ್ಕೆ ಇಂತದ್ದೆಲ್ಲವನ್ನು ತಮ್ಮ ಹಿಡಿತದಲ್ಲಿಟ್ಕೊನ್ಡಿದಾರೆ ..ನಮ್ ಜನ ಎಷ್ಟು ದಡ್ಡರು ಅಂತ ಅವ್ರಿಗೆ ಗೊತ್ತು.ಅದಕ್ಕೆ ಭಾಂದವ್ಯ ಅಂತ ಹೇಳಿ ಮಂಗ ಮಾಡಿ ಸರಿಯಾಗಿ ಕೊಳ್ಳೆ ಹೊಡೀತಿದಾರೆ ನಮ್ ನಾಡ್ನ..ಆದ್ರೆ ನಮ್ ಜನಕ್ಕೆ ಇದನ್ನು ಬಿಡಿಸಿ 'ಇನ್ಮೇಲೆ ಬೇರೆ ಚಿತ್ರ ನೋಡ್ಬೇಡಪ್ಪ' ಅಂತ ಹೇಳಿದ್ರೆ 'ನೀನು ಭಾಂದವ್ಯಕ್ಕೆ ಕಲ್ಲು ಹಾಕೋನು ಎಲ್ರು ಒಂದೇ ಎಲ್ಲ ಭಾಷೆನು ಒಂದೇ ಕಲೆಗೆ ಭಾಷೆ ಇಲ್ಲ ಅದು ಇದು' ಅಂತ ಮತ್ತೆ ಮತ್ತೆ ಮಂಗರಾಗ್ತಾರೆ. ಒಮ್ಮೊಮ್ಮೆ ಅನ್ಸುತ್ತೆ ಬೇರೆಯವರನ್ನು ಬಯ್ಯೋದು ಸರಿಯಲ್ಲ ಅಂತ. ನಮ್ ಜನಾನೇ ಸ್ವಾಭಿಮಾನ ಇಲ್ದೆ ನಮ್ಮೊರ್ನ ಬಿಟ್ಟು ಬೇರೆಯವರನ್ನು ಬೆಳೆಸ್ತಾರೆ.ಅದಕ್ಕೆ ನಮ್ ನಾಡಿನಲ್ಲಿ ನಾವು ಅಬ್ಬೇಪಾರಿಗಳಾಗಿದೀವಿ.ನಮ್ ನಾಡು ಬೇಲಿ ಇಲ್ಲದ ಹೊಲ ಆಗಿದೆ..ಯಾರ್ಯಾರೋ ಬಂದು ತಮ್ ದನ ಕುರಿಗಳನ್ನ ಇಲ್ಲಿ ಮೆಯ್ಸ್ಕೊಂಡು ಹೋಗ್ತಾರೆ.

ನಮ್ ಕನ್ನಡದವರು ಒಳ್ಳೆ ಚಿತ್ರ ಬರಬೇಕು ಅನ್ನೋದು ಮೊದ್ಲು ಹೇಳ್ಬಿಡ್ತಾರೆ ಆದ್ರೆ 'ಒಳ್ಳೇದು' ಅಂದ್ರೆ ಹೆಂಗೆ ಅಂತ ಅವರನ್ನು ಕೇಳ್ದಾಗ 'ಒಳ್ಳೇದು' ಅನ್ನೋದರ ವಿವರಣೆ ಕನ್ನಡ ಹಾಗು ಪರಭಾಷೆಗಳ ಚಿತ್ರಗಳಿಗೆ ಬೇರೆ ಬೇರೇನೆ ಆಗಿರುತ್ತೆ. ಬೇರೆ ಭಾಷೆ ಚಿತ್ರಗಳ ಬಜೆಟ್ ೫-೧೦ ಕೋಟಿ ದಾಟಿದ ತಕ್ಷಣ ಅದು ಹೆಂಗೆ ಇದ್ರೂ(ಅಂದ್ರೆ ಕಥೆ,ಲಾಜಿಕ್ - ೨ ಇಲ್ದಿದ್ರೂ) ಯುರೋಪ್-ಹಾಲಿವುಡ್ ಇಂದ ಕಥೆ/ಫೈಟ್ಸ್ ಕಾಪಿ ಹೊಡೆದು ಚಿತ್ರ ಮಾಡಿದ್ರು 'ಕನ್ನಡದವರು ಅದನ್ನ ನೋಡಿ ಕಲೀಬೇಕು..ಹಂಗ್ ಮಾಡ್ಬೇಕು ಸಿನೆಮಾನಾ' ಅಂತ ಮೊದ್ಲು ಹೇಳ್ಬಿಡ್ತಾರೆ...ನಮ್ಮವರು ಆ ತರ ಸಿನೆಮಾನ ನಮ್ಮ ಬಜೆಟ್ ಮಿತಿಯಲ್ಲೇ ತಗೆದರೆ 'ಮಣ್ಣು .ಕಥೆನೆ ಇಲ್ಲ..ಹೆಂಗ್ ಸಿನಿಮಾ ತೆಗೀತಾರೋ ಏನೋ..ಒಟ್ನಲ್ಲಿ ಕನ್ನಡ ಸಿನಿಮಾ ಚೆನ್ನಾಗಿರೋಲ್ಲ..ಬೇರೆ ಭಾಷೇಲಿ ಮಾತ್ರ ಒಳ್ಳೆ ಚಿತ್ರ ಬರೋದು..ಫಿಲಂಸ್ಗೆ/ಕಲೆಗೆ ಭಾಷೆ ಯಾವುದಾದರೇನು..ಬೇರೆದನ್ನೇ ನೋಡ್ಬೇಕು..' ಅಂತ ಅಪಪ್ರಚಾರ ಮಾಡಲು ಶುರುವಿಟ್ಕೋತಾರೆ...ರಾಜ್ ಫಿಲಂ ಒಳ್ಳೆ ಉದಾಹರಣೆ.ತಾಂತ್ರಿಕವಾಗಿ ಯಾವ ಭಾಷೆ ಚಿತ್ರಕ್ಕೂ ಸಡ್ಡು ಹೊಡೆಯುತ್ತೆ.'ರಾಜ್' ಬಿಡುಗಡೆ ಆಗಿ ಮಗಧೀರದ ಗಳಿಕೆಗೆ ಪೆಟ್ಟು ಕೊಡೋಕೆ ಶುರು ಮಾಡಿದಾಗ ನಮ್ಮ ನಾಡ್ನಲೇ ಅದಕ್ಕೆ ಅಡ್ಡಗಾಲು ಹಾಕೋದು 'ಮಗಧೀರ' ದವರ ಯೋಜನೆ ಆಗಿತ್ತು.ಅದನ್ನ ನಮ್ಮ ಗಾಂಧಿನಗರದ ಮಂದಿಯೇ ಆ ಫಿಲಂನ ವಿತರಕರ ಜೊತೆ ಸೇರಿ ಆ ಕೆಲಸ ಚೆನ್ನಾಗಿ ಮಾಡಿದ್ರು.ನಮ್ ಜನಾನೇ ಮಗಧೀರದ ಬಗ್ಗೆ ಪ್ರಚಾರ ಮಾಡಿ ರಾಜ್ ಬಗ್ಗೆ ಅಪಪ್ರಚಾರ ಮಾಡಿ ಅದರ ಅಬ್ಬರ ಕಡಿಮೆ ಮಾಡಿದ್ರು(ಅದರಲ್ಲೂ ಆ ಹೊಲಸು tv9 ಅವರು).

Sandesh ಅಂತಾರೆ...

Shochaneeya!

Anonymous ಅಂತಾರೆ...

Kannadigaru hechecchu makkalannu hettu ee telugu tamilara jana sankhyeginta hecchaguvavaregu kannada chitrarangavirali, kannadada ella vishaygaligoo ide reethiya samasye kaaDutte. modalu kannaDigara saMkye hecchu maadi kannaDigara vote bank beledu ka.ra.ve adhikarakke baruvavaregu ee anyaya tapiddalla!

ಅಜೇಯ ಅಂತಾರೆ...

ಕನ್ನಡದವರಿಗೆ ಸ್ವಾಭಿಮಾನ ಅನ್ನೋದೇ ಇಲ್ಲ! ಎಲ್ಲಾರಿಗು ತಾವು Cosmopolitanಅಂತ ತೋರಸ್ಕೊಳ್ಳೊ ಚಟ. ತಮಗೆ ಬೇರೆ ಭಾಷೆ ಬರುತ್ತೆ, ಬೇರೆ ಚಿತ್ರಗಳ್ನಾ ನೋಡ್ತಿವಿ ಅಂತ ತೋರಸ್ಕೊಳ್ಳೊ ಚಪಲ. ತಮಗೆ ಕನ್ನಡ ಬಿಟ್ಟು ಬೇರೆದೆಲ್ಲ ಬರುತ್ತೆ ಅಂತ ತೋರ್ಸಕೊಂಡ್ರೆನೇ ಬುದ್ಧಿವಂತರೆನಿಸಿಕೊಳ್ತೇವೆ ಅನ್ನೊ ಭ್ರಮೆ.

Anonymous ಅಂತಾರೆ...

ಈ ಸಮಾರಂಭದ ಆಚರಣೆಯಲ್ಲಿ ಏನೂ ತಪ್ಪಿಲ್ಲ. ಯಾಕೆಂದರೆ ಅದು ಕಾನೂನು ಸಂಮತವಾಗಿದೆ.

ಆದರೆ, ಬೇರೆ ಭಾಷೆಯ ಸಿನಿಮಾಗಳಷ್ಟೇ ಮೇಲ್ಮಟ್ಟದ್ದು ಅನ್ನುವುದು ಹುಂಬತನ. ಉಮಾಶ್ರೀಗೆ ರಾಷ್ಟ್ರ ಪ್ರಶಸ್ತಿ ತಂದ ಸಿನಿಮ ಗುಲಾಬೀ ಟಾಕೀಸ್, ಅಂತರ ರಾಷ್ಟೀಯ ಪ್ರಶಸ್ತಿ ಪಡೆದ ಮುಖಪುಟ ಇವೆಲ್ಲ ಕನ್ನಡ ಸಿನಿಮಾಗಳೇ ತಾನೇ? ಎಲ್ಲ ಅಭಿರುಚಿಯ ಕನ್ನಡ ಸಿನಿಮಾಗಳು ಬರುತ್ತಿವೆ. ಹೆಚ್ಚಿನವರಿಗೆ ಸಿನಿಮ ಬರೀ ಮನರಂಜನೆ ಹಾಗು ಟೈಮ್ ಪಾಸ್ ಸಾಧನ. ಆದುದರಿಂದ ಹೆಚ್ಚು ಕಮರ್ಷಿಯಲ್ ಸಿನಿಮಾಗಳು ಬರುವುವು.

ಆದರೆ ಅದಕ್ಕಿಂತ ಗಂಭೀರ ಸಮಸ್ಯೆ ಕನ್ನಡ ಸಿನಿಮಗಳು ಮಾರುಕಟ್ಟೆ ಕಳೆದುಕೊಂಡು, ಇಂಡಸ್ಟ್ರಿ ಕಣ್ಮರೆಯಾಗುವುದು. ಇದರ ಬಗ್ಗೆ ಕನ್ನಡದಲ್ಲಿ ಸಿನಿಮ ನೋಡಬೇಕು ಎಂದು ಆಸಕ್ತಿ ಇರುವವರೆಲ್ಲ, ಯೋಚಿಸಬೇಕಾದುದು. ಕನ್ನಡದಲ್ಲಿ ಒಳ್ಳೆ ಸಿನಿಮಾಗಳು ಬರಬೇಕೆಂದರೆ, ಬಂದ ಒಳ್ಳೆ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ. ಪ್ರೋತ್ಸಾಹಿಸದೆ ಸುಮ್ನೆ ಟೀಕೆ ಮಾಡಿ ನಮ್ಮ ಸಿನಿಮಾಗಳ ಬಗ್ಗೆ ಅಪಪ್ರಚಾರ ಮಾಡಿದರೆ ನಷ್ಟ ಕನ್ನಡಿಗರಿಗೆನೆ!

ಬಹುಶಃ ಕನ್ನಡಕ್ಕೆ ಹಾನಿ ಆಗಲೆಂದೇ ಕೆಲ ಖೂಳ ಮಂಧಿ ಹೀಗೆ ಅಪಪ್ರಚಾರದ ಟೀಕೆಗಳನ್ನು ಮಾಡುತ್ತಲಿರಲೂ ಬಹುದು.!

ಶನಿ ಮಹಾತ್ಮ ಅಂತಾರೆ...

ಮಾಯ್ಸಣ್ಣ,
ಏನ್ ಗುರು ಈ ಸಮಾರಂಭ ತಪ್ಪು ಅಂತ ಬರ್ದಿಲ್ಲ. ಅವನು ಹೇಳಿರೋದು, ತಮ್ಮ ಮಾರುಕಟ್ಟೆ ವಿಸ್ತರಣೆಗೆ ಅಂತ ಬಂದ ಅವರ ಸಂಚಿಗೆ ನಮ್ಮ ನಾಡಿನ ನಟ ಮಾನ್ಯರು, ಮಂತ್ರಿಗಳು ಹೋಗಿ ಹಾಡಿ ಹೊಗಳಿ, ಸ್ವಾಭಿಮಾನಾನಾ ೩ ಕಾಸಿಗೆ ಹರಾಜು ಹಾಕಬಿಟ್ರಲ್ಲ ಅನ್ನೋದಷ್ಟೇ ಏನ್ ಗುರುನ ಮಾತು. ಇದೇ ಮಗಧೀರ ನಮ್ಮ ೩-೪ ಒಳ್ಳೊಳ್ಳೆ ಕನ್ನಡ ಚಿತ್ರಗಳನ್ನ ತುಳಿದು ಹಾಕ್ತು, ಆದ್ರೂ ಅವರ ಮುಂದೆ ಹಲ್ಲು ಗಿಂಜೋ ಬುದ್ಧಿ ನಮ್ಮ ಚಿತ್ರ ರಂಗದ ಸೋ ಕಾಲ್ಡ್ ನಾಯಕರಿಗೆ, ಥೂ,, :(

maddy ಅಂತಾರೆ...

Idake nijakku en hELbeko gotagta illa!

Namma kannada neladalle kannada chitra kaNmare aagta ide.. bere bhaashe chitragalu tamma haNabaladinda munnugta ide..

Kaarana 1st of all naaave!! bere yarannu doori prayojana illa.. Kannadigaru olle chitra bandaga khandita adanna prothsahisabeku.. mukhyavagi bhaashaprema beliskobeku...

ee Tamil n telugu nora tara over beda.. esht beko ashte irli.. andre namma swabhimana kanmare aagde irohagadru bhaasha prema uliskobeku..

Aavagle navugala elranu meeriso reethili belibahudu... Shivanna ee samarabhake hogiddu tappenu illa

vasant ಅಂತಾರೆ...

Just imagine this..


puneeth starrer "Raj" has celebrated 50 days in 15 centers in Andhra pradesh.

idey kushili,, hyderabad nalli aayojisalaagidda samaarambakke bandidda,, chiranjeevi avara maga ram charan avaru,," Raj chitra andhradalli 50 dina oDirodu santosha tandide,, namma appa haagu dr.rajkumar avara naduvina sambandha yaavattu nenapirutte" andru..

nantara maatadida,, aandhrada mukhya mantri . K Rosiah avaru " 500 varshada hinde krishnadevaraayana kaaladalli kannada-telugu eradu onde aagiddavu. ee chitrada mulaka aa sambandha igalu munduvariyuttiruvudu santasa tandide " andaru..


mele helirodu sumne tamashege,,, inta ondu dina namma jivanadalli ommeyaadru nodtiva?

bari bere cinemagalavara munde, namma swabhimana bittu doGGu salaamu hoDeyode nammatana na?

Rohith B R ಅಂತಾರೆ...

ಈ ರೀತಿ ಆಗಿದ್ರಲ್ಲಿ ಏನೂ ಅನ್ಯಾಯ ಇರಲಿಲ್ಲ, ಅಥವಾ ಹೀಗೆ ಕಲೆಗೆ ಬೆಲೆ ಕೊಟ್ಟವರು ಸರಿಯಾಗಿಯೇ ಮಾಡಿದರು ಎಂತೆಲ್ಲಾ ದೊಡ್ಡತನ ತೋರಿಸುತ್ತಿರುವವರಿಗೆ ಒಂದೇ ಒಂದು ಪ್ರಶ್ನೆ:

ಇಂತಹ ದೊಡ್ಡತನದಿಂದ ನಿಮಗೇನು ಸಿಗುತ್ತದೆ? ಕನ್ನಡ ನಾಡಿಗೇನು ಸಿಗತ್ತೆ?

ಈ ದೊಡ್ಡತನದಿಂದ ಶಿವರಾಜಕುಮಾರ್ ಅವರಿಗೆ ಮುಂದಿನ ತೆಲುಗು ಸಿನಿಮಾ ಒಂದರಲ್ಲಿ ಜಾಗವೇನೋ ಸಿಗಬಹುದು! ಅದು ಅವರಿಗೆ ಹಣ ತರಬಹುದು. ಆದ್ರೆ ಅದು ಕನ್ನಡದ ಸಿನಿಮಾಗೆ ಹಣ ತರುತ್ತದೆಯೇ? ಕನ್ನಡಿಗ ಸಿನಿಮಾ ಉದ್ಯಮಕ್ಕೆ ಹೆಸರು ತರುತ್ತದೆಯೇ? ನಾಳೆ ಹೀಗೆ ತೆಲುಗು ಸಿನಿಮಾ ಉದ್ಯಮಕ್ಕೆ ಹೆಸರು ಸಿಗುವಲ್ಲಿ ಕನ್ನಡ ಸಿನಿಮಾ ಉದ್ಯಮಿಗಳು ಸಹಾಯ ಮಾಡಿದರು ಎಂದು ಮಾತ್ರ ಹೆಸರು ಬರಬಹುದು. ಆದರೆ ಅದು ಕೇವಲ ಉಪ್ಪಿನಕಾಯಿ. ಊಟದ main course ಎಲ್ಲಿ ಸಿವ? ಊಟಕ್ಕೆ ಬರೀ ಉಪ್ಪಿನಕಾಯಿ ತಿಂದರೆ ಆಯ್ತದ? ನಮ್ಮ ಮನೆಯಲ್ಲೇ ಊಟಕ್ಕೆ ಅನ್ನ ಇಲ್ಲದಾಗ ಪಕ್ಕದ ಮನೆಯ ಅನ್ನ ಬೇಯಿಸಲು ನಮ್ಮ ಮನೆಯ ಸೌದೆ ಕೊಯ್ದಂತೆ - ಇದಕ್ಕೆ ಸರ್ವಜ್ಞ ಮೆಚ್ಚುತ್ತಾನಾ ಸಿವ?

ಸಾಗರದಾಚೆಯ ಇಂಚರ ಅಂತಾರೆ...

ಕನ್ನಡದವರೇ ಕನ್ನಡ ಕೊಲೆ ಮಾಡಿದ್ರೆ ಇನ್ಯಾರು ಗತಿ ಉಳಿಸೋಕೆ,
ಮೊದಲೇ ಬೆಂಗಳೂರು ಅರ್ಧ ತೆಲುಗು, ಇನ್ನರ್ಧ ತಮಿಳು ಆಗಿದೆ, ಇನ್ನು ಇಂಥಹ ಕಾರ್ಯಕ್ರಮಗಳು ಇನ್ನು ಕನ್ನಡ ಹಾಲು ಮಾಡುತ್ತವೆ

ರ೦ಗನಾಥ್ ಅಂತಾರೆ...

ಸಕ್ಕತ್ತಾಗಿ ಬರೆದಿದ್ದೀರ ಇ೦ಥಾ article ನಾನೆ೦ದೂ ನೋಡಿರ್ಲಿಲ್ಲ ಹೋಗ್ಲಿ ಬಿಡಿ ಕನ್ನಡಿಗರು ಏನೇ ಆದ್ರು ಸಮಾನ ಮನಸ್ಕರು ಸಹೃದಯಿ ಸಹನಶೀಲ ಸೌಮ್ಯ ಕೋಮಲ ಶೀತಲ ನಿರ್ಮಲ etc etc ಗುಣಗಳನ್ನು ಹೊ೦ದಿರುವವರು ಹಸುವಿನ೦ತಹವರು. ಯಾಕೆ ಹಸುನೇ ಅನ್ನಿ ತಪ್ಪಿಲ್ಲ,, ಹಾಗಾಗಿ ಕನ್ನಡ ಸಿನಿಮಾದಲ್ಲಿ 10 ಕೋಟಿ ಬ೦ಡವಾಳ ಹಾಕಿದ್ರೆ 100 ಕೋಟಿ ನಮ್ಮಪ್ರಾಣೆ ಆಗಲ್ಲ. ಯಾಕೇ೦ದ್ರೆ ತೆಲುಗು ಸಿನೆಮಾ ತಮಿಳು ಸಿನೆಮಾ ಮತ್ತು ಅರ್ಥ ಆಗ್ದೇ ಇರೋ "ರಾಷ್ಟ್ರ ಭಾಷೆ" ಸಿನೆಮಾನೆಲ್ಲ ಉದ್ಧಾರ ಮಾಡೋದು ಯಾರು?

Anonymous ಅಂತಾರೆ...

for the brothers in film industry its just business. they do not care about kannada abhimana. magadheera selling rights was taken by some karnataka producer. he makes money by using his muscle power, political power and gets the cinema released in 50-60 theaters.
also how we treat our movies? "raj the showman" hakoke, "yedellu manjunatha", "savari" etc movies theatre inda yethisthare...raj flopped...duddu madthaidda manjunatha savari kooda hoytu...idu sarina?
--manjunath

Praveen, Raghu, Rahul, Kavitha, Soujanya, Prem, Kiran Kamat, Yogesh, Naveen, Prakruth, Vaibhav matthe namma yella friends. ಅಂತಾರೆ...

Naanu obba Kannada cinima abhimani:

yeshteshto cinima nodiddivi, kannadadalli, yaake? Jogi odlilva? Prithi yeke bhumimelide cinimage yeshto expectations idvu, yaake odlilla? na helalla, nimige gotthu. Iga Prem Kahani chennagilva, nodiddivi encourage maadthivi, Love Guru olle cinima, super songs, hit aaglilva?

Hangantha heli, baro prathi cinimanu nodakke aagolla. Olle cinima idhre, news haage habutthe. Sumne nammanna naave point maadi baidhre upayoga illa.

Please dayavittu artha maadkoli, yellar mundhe nu cheap aagodhu beda...

Nam cinemagalu chennagive, illa anthalla, nan prakara naavgalu FEEDBACKge positive aagi react maadthilla, bari point out maadodhe aaithu.

Same old fasion style, same old way of cinimatography, editing, please, kala badlagidhe, yaaradru PRODUCER DIRECTOR, TECHNICAL Staff e thread nodthidre, please positive aagi react maadi, matthe neen thapp maathaddhe, aganu a programege hogiddhe, ivanu e programege hogiddha annodu bittu, yaake a cinima hit aaithu antha yochane maadi, yaaru sumsumne duddu kottu bekar cinimage hogalla.

Nanige gotthu, nan thread nodi bahala mandi nanmele baithare, hugithare, aadre, nanige problemilla, nan abhipraya naan vyakthapadisiddhini.

Bejaradare kshamisi..

Expecting to see some good talent and mainly "A CHANGE" in the way the cinimas are produced in KANNADA.

Dhanyavadagalu.

Amarnath Shivashankar ಅಂತಾರೆ...

naachige getta jana.
Shivrajkumar ge yen bantu dhaaDi hogi alli telugara baavuTa haarisakke
Tanna chitragaLu 50 days function maadi eshtu varshagaLu aagide anta enadru arivideyaa?
magadheera chitra kannada chitra gaLinda theatregaLna kittkondu 50 dina oDide..idarinda aneka oLLeya chitragaLige hoDeta biddide.
Shivanna tammana chitra Raj kooda yeTu tindide.
ishtella admele mahaa sauhaardate anta hogi aa chitrakke function madsiddaralla nam Shivanna, idakke aLabekaa, nagabekaa gotilla.
aadru aNNavru kaapaaDikondu banda swaabhimaana makkaLu uLisikondilla biDi guru

Anonymous ಅಂತಾರೆ...

Kannada Chalana Chitra Vanijya Mandaliya almost all Adyksharu, Padadikarigalu, Avara ella team navaru ondu taraha Meersadakru iddanthe. Sri Gangaraju inda eginavaregu navu nodida hage bereay bashe chitragalanu avurugalu distribution thegedukondu duddu maduvude avara jayamana. Yarigu kannadadadha bagge kalaji ella. avarige ellarigu gothu Andhrage hodarey Kannada davarannu avrugalu musi sahita noduvudilla. Kannada Chalan Chitra madaliyavarige nachike,SWABIMANA ondu churu illa. Mandaliya ella Purusharugalu MEERSADAKARU. Berey Basheya ella chitragalu Bangalaore nalli Rarajisuthiruva Samyadalli at least ondu kannada chitravannu Nere Rajgalanda,Tamilnadu,Andhra dalli pradarshana maduvudannu bittu Swarthakagi ella Chalana Chitra Vanijya Mandali BOOPARU kANNDADA hesarinalli nataka adikondu para basheya chitragala vithrakaragi kannda bashege dhroha maduvudannu nillisi para Rajjake hogi nelasali.

ಕ್ಲಾನ್ಗೊರೌಸ್ ಅಂತಾರೆ...

ಸ್ವಾಮಿ ಮಂಜುನಾಥ್,
ನೀವು ಎದ್ದೇಳು ಮಂಜುನಾಥ, ಸವಾರಿ ಹೊಗಳೋಕ್ಕೆ 'ರಾಜ್' ನ ಯಾಕೆ ಸ್ವಾಮಿ ಫ್ಲಾಪ್ ಅಂತಿರ ? , ನೀವ್ ಹೋಗಿ ಸಿನಿಮಾ ನೋಡಿದ್ದೀರಾ ?. ಇದೆ ನೋಡಿ ನಮ್ಮ ಕನ್ನಡಿಗರು ಮಾಡೋ ಕೆಲಸ, ನಮ್ಮ ಸಿನೆಮಗಳನ್ನೇ ನೋಡೋ ನೋಡ್ದೇನೋ ಫ್ಲಾಪ್ ಅನ್ಬುಡೋದು . P. V. R ನಲ್ಲಿ ಇದು ವರ್ಗು ಯಾವ ಭಾಷೆ ಸಿನೆಮನು ೧೮ ಶೋ ಓಪನಿಂಗ್ ತೊಗೊಂಡಿಲ್ಲ. ಅದು 'ರಾಜ್' ಮಾಡಿದ ರೆಕಾರ್ಡ್, ಪೂರ್ತಿ ಹೂಡಿಕೆ ಆಗ್ಲೇ ವಾಪಸ್ ಬಂದಾಗಿರುತ್ತೆ, ಇನ್ನೆನಿದ್ರು ಲಾಬ ನೇ. ಎದ್ದೇಳು ಮಂಜುನಾಥ ಒಳ್ಳೆ ಚಿತ್ರ ಎರಡು ಮಾತಿಲ್ಲ , ಇನ್ನು ಸವಾರಿ ಹಾಡುಗಳು ಚೆನ್ನಾಗಿವೆ. ನೀವು ಹೇಳೋ ಮಾತು ಒಪ್ತೀನಿ ಒಂದು ಕನ್ನಡ ಸಿನಿಮಾ ಇನ್ನೊಂದು ಕನ್ನಡ ಸಿನಿಮಾನ ಎತ್ತಂಗಡಿ ಮಾಡೋದು ತಪ್ಪು , ಆದರೆ ಅದಕ್ಕೋಸ್ಕರ ನಮ್ಮ ಸಿನಿಮಾ ಚೆನ್ನಾಗಿದ್ರು ಅಪಪ್ರಚಾರ ಮಾಡೋದು ಯಾವ ನ್ಯಾಯ ?. KFCC ಇದರ ಬಗ್ಗೆ ಗಮನವರಿಸಿ ಮೊದಲ ಆದ್ಯತೆ ಕನ್ನಡ ಸಿನಿಮಾಗಳಿಗೆ ಕೊಡ್ಬೇಕು .

ಮುಂಚೆನೇ ಹೇಳ್ದಂಗೆ ನಾನು 'ರಾಜ್' ಮತ್ತು 'ಮಗಧೀರ' ಎರಡು ನೋಡಿದ್ದೀನಿ , ಮಜ ಕೊಟ್ಟಿದ್ದು 'ಮಗಧೀರ' ಗಿಂತ 'ರಾಜ್' ಸಿನೆಮಾನೇ. 'ಮಗಧೀರ' ಬರಿ ಆಲ್ ಹೈಪ್ ನೋ ಹೋಪ್ ಸಿನಿಮಾ, ಗ್ರಾಫಿಕ್ಸ್ ಬಿಟ್ರೆ ಚಿತ್ರದಲ್ಲಿ ಇನ್ನೇನು ಹುರಳಿಲ್ಲ.

ಕೊಳ್ಳಿ ದೆವ್ವ ಅಂತಾರೆ...

shivarajkumar olle nata anta kelavaru antaare aadre olletana illa anta iiga gottagta ide uppu tinda manege eldu bageyoorige kannadadalli korate enoo illa idu mattondu udaaharane aste

naanu sivarajkumar abhimaani alla aadre naa heege andiraadu aa karanadindalla



hana sikkudre ee mandi kakka tinnaakoo hinjariyalla

Free Kannada Movies and TV channels ಅಂತಾರೆ...

Guru,

Namma naachike getta CM yeddy bagge ondu post haaku .. matte a tamilara poet na mysore nalli haaktini antanalla .. entaha nayaka rannu arsiddivalla ..

http://www.kannadaprabha.com/pdf/epaper.asp?pdfdate=9/26/2009

Unknown ಅಂತಾರೆ...

e vivadada bagge egagale mathadidhene.....
adhru eshotondhu vishayagalu nanage thilidirlila....
bari telgu chitrada 50 dinada samrambanda bagge sumne charche maduthidhare antha thilididhe......
adhare ishtondu vishayagalu adagiruvudhu thilithu....

kannada chitragalige kevala kannada hesaranne idabeku yendu gante gattale mathanaduthida chitra mandali inthaha samrabagalige yeke uttejana koduthidharo???
hagu karana yenirabahudo???thiluthilla????
kannada hesaridali yendu heluva mandali adhe bere bhasheya cinemagalige prothsaha needuthiruvudhu thappu....

BABAPRASAD VENKATESH ಅಂತಾರೆ...

magadheera teluginalli release maadidde tappu. kannadakke dub maadi release maada bekittu

Manjunath ಅಂತಾರೆ...

Dubbing iddidre kannada chitraranga haladroo kannadanadru ulitittu

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails