ಮಾಹಿತಿ ಹಕ್ಕು ಎಲ್ಲಾ ನುಡಿಯಲ್ಲಿರಬೇಕು ಅಂದೋರ್ಯಾರು ಗೊತ್ತಾ?

ಮೊನ್‍ಮೊನ್ನೆ ಅಂದ್ರೆ 2009ರ ಅಕ್ಟೋಬರ್ 13ನೇ ತಾರೀಕಿನಂದು ನವದೆಹಲಿಯಲ್ಲಿ ನಡೆದ, 2005ರ ಮಾಹಿತಿ ಹಕ್ಕು ಕಾಯ್ದೆಯ ನಾಲ್ಕನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾರತದ ಉಪರಾಷ್ಟ್ರಪತಿಗಳಾದ ಶ್ರೀ ಮೊಹಮದ್ ಹಮೀದ್ ಅನ್ಸಾರಿಯವರು ಒಂದು ಸೊಗಸಾದ ಹೇಳಿಕೆ ಕೊಟ್ಟಿದಾರೆ ಅಂತ ಯಾಹೂ ಸುದ್ದಿ ಹೇಳ್ತಿದೆ ಗುರು!

ಪ್ರಜಾತಂತ್ರಕ್ಕಿದು ನಿಜವಾದ ಅರ್ಥ!

ಭಾರತ ಒಪ್ಪಿರೋ 22 ಅಧಿಕೃತ ಭಾಷೆಗಳಲ್ಲಿರೋ ಎಲ್ಲಾ ಭಾಷೆಗಳಲ್ಲಿ ಈ ಮಾಹಿತಿ ಹಕ್ಕು ಕಾಯ್ದೆ ಇರಬೇಕು ಮತ್ತು ವ್ಯವಹಾರ ನಡೀಬೇಕು ಅನ್ನೋ ಉಪರಾಷ್ಟ್ರಪತಿಗಳ ಈ ಅನಿಸಿಕೆ ಭಾರತ ಒಪ್ಪುಕೂಟಕ್ಕೆ ನಿಜವಾಗಿ ಗೌರವ ತರೋ ಕೆಲಸ. ಜನರಿಂದ ಜನರಿಗಾಗಿ ಇರೋ ವ್ಯವಸ್ಥೆಗಳು ಸಹಜವಾಗಿ ಜನರ ನುಡಿಯಲ್ಲಿ ಇರಬೇಕಾಗ್ತದೆ. ಆ ಕಾರಣದಿಂದ ಈ ನಿಲುವು ಸರಿಯಾಗಿದೆ. ಹಿಂದಿಯೆನ್ನುವ ನುಡಿನುಂಗಣ್ಣನನ್ನು ತಲೆಮೇಲೆ ಹೊತ್ತು ಮೆರೆಸುತ್ತಿರುವ ಭಾರತ ದೇಶದ ಇಂದಿನ ವ್ಯವಸ್ಥೇಲಿ ಭಾರತ ದೇಶದೊಂದು ಉನ್ನತ ಸ್ಥಾನದಲ್ಲಿರೋ ವ್ಯಕ್ತಿ ಈ ಥರ ಮಾತಾಡ್ತಿರೋದು ಒಳ್ಳೇ ಬೆಳವಣಿಗೆ!

ಹೌದು, ಪ್ರಜಾತಂತ್ರಕ್ಕೆ ನಿಜವಾದ ಅರ್ಥ ಸಿಗಬೇಕಾದರೆ ಆಯಾ ಪ್ರದೇಶದ ಆಡಳಿತ ಆಯಾ ಭಾಷೇಲಿ ನಡೀಬೇಕು. ಕೇಂದ್ರ ಸರ್ಕಾರ ತನ್ನ ಪಟ್ಟೀಲಿರೋ 22 ಭಾಷೇಲಿ ಇಂಥಾ ಮಾಹಿತೀನಾ ಒದಗಿಸಿಕೊಡಲಿ. ಆದ್ರೆ ಇಂಥಾ ವ್ಯವಸ್ಥೆ ಭಾರತ ಒಪ್ಪುಕೂಟ ಶುರು ಆದಾಗಿನಿಂದಲೂ ಸಹಜವಾಗೇ ಇರಬೇಕಿತ್ತು, ಈಗ ಅಂಥ ಕೊರತೇನಾ ಉಪರಾಷ್ಟ್ರಪತಿಗಳು ಗುರುತಿಸಿ ಹೇಳಿರೋದು ತಡವಾಗಿ ಆಗ್ತಿರೋ ಜ್ಞಾನೋದಯದ ಗುರುತಲ್ವಾ ಗುರು?

1 ಅನಿಸಿಕೆ:

Deepthi ಅಂತಾರೆ...

ಶ್ರೀ ಮೊಹಮದ್ ಹಮೀದ್ ಅನ್ಸಾರಿಯವರಿಗೆ ಜಯವಾಗಲಿ.

ಹಯ್ಯೋ ಸಿದ್ದಪ್ಪ ನುಡಿನು೦ಗಣ್ಣ ಅ೦ದ್ರೆ ಬೇರೆ ನುಡಿಗಳನ್ನು ನು೦ಗೋ ಬಕಾಸುರ ಅ೦ತ. ಅದಕ್ಕೆ ಹೋಗಿ ಗೂಗಲ್ ನಲ್ಲಿ ಹುಡುಕುತ್ತೀಯಲ್ಲ ಮಾರಾಯ :-)

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails