ವಿ.ಎಚ್.ಪಿ ಅಂದ್ರೆ ವಿಶ್ವ ಹಿಂದೀ ಪರಿಷತ್ತಾ?


ಮಹಾರಾಷ್ಟ್ರಾ ವಿಧಾನಸಭೆಯಲ್ಲಿ ಇತ್ತೀಚಿಗೆ ಅಬು ಅಜ್ಮಿ ಅನ್ನೋ ಸಮಾಜವಾದಿ ಪಕ್ಷದ ಶಾಸಕರು ಮುಖಕ್ ಮಂಗಳಾರತಿ ಎತ್ತುಸ್ಕೊಂಡಿದ್ದಕ್ಕೆ ಏನು ಕಾರಣ? ‘ಅವರು ಮರಾಠಿಯಲ್ಲಿ ಪ್ರಮಾಣವಚನ ತೊಗೊಂಡಿಲ್ಲಾ’ ಅನ್ನೋದು ಎಂ.ಎನ್.ಎಸ್ ಕೊಡೋ ಕಾರಣವಾದರೆ ‘ಅಜ್ಮಿ ಅವ್ರು ಹಿಂದೀಲಿ ಪ್ರಮಾಣ ವಚನ ತೊಗೊಂಡಿದ್ದಕ್ಕೆ’ ಅನ್ನೋದು ಮಾಧ್ಯಮಗಳ, ರಾಷ್ಟ್ರೀಯ ಪಕ್ಷಗಳ ಹಾಗೂ ಅವುಗಳ ನಾಯಕರುಗಳು ಕೊಡೋ ಕಾರಣ. ಈ ವಿಷಯವಾಗಿ ವಿಶ್ವ ಹಿಂದು ಪರಿಷತ್ತಿನ ಮುಖಂಡರಾದ ಶ್ರೀ ಅಶೋಕ್ ಸಿಂಘಾಲ್ ಅವ್ರು ಒಂದು ಹೇಳಿಕೆ ಕೊಟ್ಟಿದ್ದಾರೆ. ಹಿಂದೀಲಿ ಪ್ರಮಾಣ ವಚನ ಸ್ವೀಕಾರ ಮಾಡೋದನ್ನು ವಿರೋಧ ಮಾಡೋ ರಾಜ್ ಠಾಕ್ರೆಗೆ ಕಠಿಣ ಶಿಕ್ಷೆ ಕೊಡಬೇಕು ಅಂತಾ ಅಪ್ಪಣೆ ಕೊಡ್ಸಿದಾರೆ. ಇಷ್ಟೇ ಅಲ್ಲಾ, ಬೆಂಗಳೂರಿನಲ್ಲಿ ಮೊನ್ನೆ ಮೊನ್ನೆ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಭೇಲೂ ಸಂಘದ ಮುಖಂಡರಾದ ಮೋಹನ್ ಭಾಗವತ್ ಅವರೂ ಇದೇ ವಿಷಯವಾಗಿ ಇನ್ನೊಂದು ಧಾಟಿಯ ಮಾತುಗಳನ್ನಾಡಿದ್ದಾರೆ.

ಏಕಂತೆ ಇವರ ವಿರೋಧ?

ವಿಶ್ವ ಹಿಂದೂ ಪರಿಷತ್ ಮತ್ತು ಆರೆಸ್ಸೆಸ್‌ಗಳೆರಡೂ ಅದ್ಯಾಕೋ ಹಿಂದುತ್ವಕ್ಕೂ ಹಿಂದೀಗೂ ನಡುವಿನ ವ್ಯತ್ಯಾಸದ ಬಗ್ಗೆ ಗೊಂದಲ ಮಾಡ್ಕೊಂಡಂಗಿದೆ. ಇವರ ಮಾತುಗಳ ಪ್ರಕಾರ ಹಿಂದೀನ ವಿರೋಧಿಸೋದು ದೇಶದ್ರೋಹದ ಕೆಲಸ ಮತ್ತು ಹಿಂದೂ ಧರ್ಮದ್ರೋಹದ ಕೆಲಸ ಆಗಿದ್ದಂಗಿದೆ. ಭಾಗವತರಂತೂ ತಮ್ಮ ಭಾಷಣದಲ್ಲಿ ಗುಲಾಮಗಿರಿಯ ಸಂಕೇತವಾಗಿ ಇಂಗ್ಲಿಷ್ ಭಾಷೆಯನ್ನೂ, ರಾಷ್ಟ್ರಪ್ರೇಮದ ಸಂಕೇತವಾಗಿ ಹಿಂದಿಯನ್ನೂ ಬಿಂಬಿಸಿ ಮಾತಾಡಿದರು. ಹೊರದೇಶದ ಭಾಷೆ ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣ ವಚನ ತೊಗೊಂಡರೆ ಪರ್ವಾಗಿಲ್ಲಾ, ನಮ್ಮ ದೇಶದ ಹಿಂದೀಲಿ ಬೇಡ ಅಂದ್ರೆ ಏನರ್ಥ? ಎಂದು ಗುಟುರು ಹಾಕುದ್ರು. ಇದೆಂಗಿದೆ ಅಂದ್ರೆ ‘ಪಕ್ಕದ ಮನೆಯೋರ ಚಾಕುವಿನಿಂದ ಚುಚ್ಚುದ್ರೆ ನೋವಾಗುತ್ತೇ ಅಂತಾ ಚೀರೋದು ಸರೀ, ಆದ್ರೆ ನಮ್ಮ ಮನೆಯ ಚಾಕುವಿನಿಂದಲೇ ಚುಚ್ಚುದ್ರೆ ನೋವಾಗುತ್ತೆ ಅಂದ್ರೆ ಏನರ್ಥ?’ ಅಂದಂಗಿದೆ. ವಿಶ್ವ ಹಿಂದೂ ಪರಿಷತ್ ಆಗ್ಲೀ ಆರೆಸ್ಸೆಸ್ ಆಗ್ಲೀ ತಿಳ್ಕೋಬೇಕಾಗಿರೋದು ಹಿಂದೂ ಅನ್ನೋ ಪದಕ್ಕೂ ಹಿಂದಿ ಅನ್ನೋ ಪದಕ್ಕೂ ಯಾವ ಸಂಬಂಧವೂ ಇಲ್ಲಾ... ಹಾಗೇನಾದ್ರೂ ಹಿಂದೂ ಆದವನು ಹಿಂದೀಗೆ ಗೌರವ ಸಲ್ಲಿಸಲೇ ಬೇಕು ಅಂತ ಅಂದ್ಕೊಂಡಿದ್ರೆ ಇವರ ಹಿಂದುತ್ವದ ಪಟ್ಟಿಯಿಂದ ಭಾರತದ ಅರ್ಧಕ್ಕಿಂತ ಹೆಚ್ಚು ಹಿಂದುಗಳು ಹೊರಗಾಗ್ತಾರೆ ಅಷ್ಟೆ. ಹಾಗೇ ಆರೆಸ್ಸೆಸ್ ಮುಖಂಡರು ಕೂಡಾ ಇಂಗ್ಲಿಷ್‌ನಂತಹ ಸಮಾನ ಶತ್ರು(?)ವನ್ನು ತೋರಿಸಿ ಭಾರತಾನಾ ಒಂದು ಮಾಡ್ತೀವಿ ಅನ್ನೋ ತಪ್ಪು ದಾರಿಯಿಂದ ಹೊರಬರೋದು ಒಳ್ಳೇದು ಅನ್ಸುತ್ತೆ.

ವಿಶ್ವ ಹಿಂದೀ ಪರಿಷತ್ ಆಗದಿರಲಿ!

ಸಹಜವಾಗಿ ಭಾರತದಲ್ಲಿರೋ ವೈವಿಧ್ಯತೇನಾ ಒಪ್ಕೊಂಡು ಎಲ್ಲಾ ಭಾಷೆಗಳೂ ಅವುಗಳ ನಾಡಿನಲ್ಲಿ ಸಾರ್ವಭೌಮ ಭಾಷೆಗಳಾಗಬೇಕು ಅನ್ನೋ ನಿಲುವನ್ನು ತೋರಿಸಿದ್ದರೆ ಈ ಎರಡೂ ಸಂಸ್ಥೆಗಳ ಖ್ಯಾತಿಗೆ ತಕ್ಕಂಗೆ ಇರೋದು ಗುರು. ‘ಮಹಾರಾಷ್ಟ್ರದಲ್ಲಿ ಅಜ್ಮಿಯವರು ಮರಾಠಿಯಲ್ಲಿ ಪ್ರಮಾಣ ವಚನ ತೊಗೊಳ್ಳೋ ಮೂಲಕ ತಾವು ಮರಾಠಿ ಮುಖ್ಯವಾಹಿನೀಲಿ ಇದೀನಿ ಅನ್ನೋದನ್ನು ಎತ್ತಿ ಹಿಡಿಯಬೇಕಿತ್ತು. ಆ ಮೂಲಕ ದೇಶದಲ್ಲಿ ಭಾಷಾವಾರು ಮನಸ್ತಾಪಗಳನ್ನು ಹುಟ್ಟು ಹಾಕದಂತೆ ನಡೆದುಕೊಳ್ಳಬೇಕಿತ್ತು’ ಅನ್ನೋ ಒಂದು ಮಾತನ್ನು ಆಡಿದ್ದಿದ್ರೆ ಬಹುಷಃ ‘ಹೌದಪ್ಪಾ! ಇವರಿಗೆ ನಿಜವಾಗ್ಲೂ ದೇಶದ ಬಗ್ಗೆ ಕಾಳಜಿಯಿದೆ’ ಅಂತ ಜನ ನಂಬೋಕಾಗ್ತಿತ್ತು. ಈಗ ಇವರಾಡಿರೋ ಮಾತುಗಳು ‘ಅಣ್ಣಾ... ನಾವೆಲ್ಲಾ ಒಂದೇ ದೇಶದವರು, ನಿಮ್ಮ ಮನೆಗೆ ನುಗ್ಗಿ ನಿಮ್ಮುನ್ನ (ನಿಮ್ಮ ನುಡಿಯನ್ನ) ಹೊರಗಾಕುದ್ರೂ ನೀವು ದೇಶದ ಒಗ್ಗಟ್ಟಿಗಾಗಿ ಸಹಿಸಿಕೊಳ್ಳೀ. ದೇಶ ಅನ್ನೋದ್ರು ಮುಂದೆ ಮನೆ ಅನ್ನೋದು ಗೌಣಾ’ ಅಂದಂಗಿದೆಯಲ್ವಾ? ಈ ಎರಡೂ ಸಂಸ್ಥೆಗಳೋರು ನಿಮ್ಮ ನಿಮ್ಮ ಭಾಷೆಗಳ ಬಗ್ಗೆ ನಮಗೇನೂ ಅಗೌರವವಿಲ್ಲ. ಆದ್ರೆ ಅವುಗಳನ್ನು ನಿಮ್ಮ ಮನೆಗಳಲ್ಲಿ ಬಳಸಿಕೊಳ್ಳಿ. ಬೀದಿಗೆ ಬಂದಾಗ ಹಿಂದೀನ ಬಳ್ಸಿ ಅನ್ನೋ ಥರಾ ರಾಗ ಪಾಡುದ್ರೆ ಹೆಂಗೇ ಗುರು? ಒಟ್ನಲ್ಲಿ ಏನೋಪ್ಪಾ... VHP ಅಂದ್ರೆ ವಿಶ್ವ ಹಿಂದೀ ಪರಿಷತ್ತಾ ಅಂತಾ ಜನಕ್ಕೆ ಅನುಮಾನ ಶುರುವಾಗಿದೆ... ಏನಂತೀ ಗುರು?

16 ಅನಿಸಿಕೆಗಳು:

Kannada Nationalist ಅಂತಾರೆ...

ನೋಡಿ.. ಗುರುಗಳೇ...

ಕ್ರಿಶ್ಚಿಯನ್ನರು ಅವರವರ ಲಾಕಲ್ ಬಾಶೆಯಲ್ಲಿ ಪ್ರೆಯರ‍್ ಮಾಡ್ತಾರೆ.. ತಮಿಳು ಪಾದ್ರಿ ಚರ‍್ಚಲ್ಲಿ ತಮಿಳಲ್ಲೇ ಎಲ್ಲ ಆರಾದನೆ ನಡೆಸಿದ್ರೆ, ಕನ್ನಡ ಪಾದ್ರಿ ಕನ್ನಡದಲ್ಲೇ ನಡೆಸೋದು.

ಹೀಗೆ ಇಸ್ಲಾಂಲ್ಲೂ ಕೂಡ.. ಇರಾನ್ ದೇಶದಲ್ಲ ನಮಾಜು ಪರ‍್ಸಿಯನ್ ಬಾಶೆಯಲ್ ಮಾಡಿದ್ರೆ, ತುರ‍್ಕಿಯಲ್ಲಿ ತುರ್ಕಿ ಬಾಶೇಲಿ, ಪಾಕಿಸ್ತಾನದಲ್ಲಿ ಉರ್ದೂಲಿ, ಬಂಗಾಳದೇಶದಲ್ಲಿ ಬಂಗಾಳೀಲಿ..

ಆದರೆ ಈ ಹಿಂದೂ ರಿಲಿಜನ್ನಲ್ಲಿ ಎಂದಾದರು ಆ ಆ ಪ್ರದೇಶದ ಜನ ಆ ಆ ಪ್ರದೇಶದ ಬಾಶೇಲಿ ಪೂಜೆಗೀಜೇ ಮಾಡಿದ್ದುಂಟೇ?

ನಮ್ ಕನ್ನಡ ನೆಲದಲ್ಲಿ ಅದೆಶ್ಟು ದೇವಸ್ತಾನಗಳಲ್ಲಿ ಕನ್ನಡದಲ್ಲೇ ಪೂಜೆ ನಡೆಯತ್ತೆ? ಕನ್ನಡದಲ್ ಬೈಬಲ್ ಓದೋ ಮಂದಿಯ ಚರ್ಚಿಗೆಲ್ಲ ಕಲ್ ಹೊಡೆದಾಗ ನೀವೆಲ್ ಇದ್ರಿ ಗುರುಗಳೇ?

Ravi Mattikere ಅಂತಾರೆ...

English and Hindi both are foreign to Kannadigas. English has bread attached to it, while Hindi has just nothing.

Now, RSS/ VHP must raise their voice to elevate all Indian languages to the stature of English in their respective states and make them bread winning languages. Only then, can we buy this theory of doing away with English.

Anonymous ಅಂತಾರೆ...

ಹೌದೂ ಗುರುಗಳೇ,

ಆಜ್ಞೆ ಮಾಡೋ ಐಗೋಳೆಲ್ಲಾ ದ್ಯಾವ್ರೇ ಆಗ್ಲಿ ಎಲ್ಲಾ,
ಕನ್ನಡ ಸುದ್ದೀಗೇನಾರ್ ಬಂದ್ರೆ ಮಾನಾ ಉಳ್ಸಾಕಿಲ್ಲಾ...

ದ್ಯಾವ್ರಾದ್ರೇನು ಮಾಡ್ತೀನಿ ಅವ್ನ್‍ಗೇ ಖತ್ನಾ...

ರತ್ನಪ್ರಿಯ

ಕ್ಲಾನ್ಗೊರೌಸ್ ಅಂತಾರೆ...

ಸ್ವಾಮಿ ಕನ್ನಡ ರಾಷ್ಟ್ರಿಯರೇ ..,
ಗುಡಿಗಳಲ್ಲಿ ಪೂಜಾರಿಗಳು ಮಾಡೋ ಪೂಜೆ ಸಂಸ್ಕೃತ ದಲ್ಲಿದ್ರು , ಬಹುತೇಕ ಜನ ಶ್ಲೋಕಗಳನ್ನ ಕನ್ನಡದಲ್ಲೇ ಓದೋದು, ಕಲಿಯೋದು .. ಅದು ಬಿಟ್ರೆ ಸಾಮಾನ್ಯ ಜನ ಪೂಜಿಸೋದು "ದೇವ್ರೇ ಕಾಪಾಡಪ್ಪ..." ಅಂತಾನೆ . ಎಲ್ಲಾರ್ಗೂ ಸಂಸ್ಕೃತ ಬರೋಲ್ಲ... . ಇನ್ನು ಹಳ್ಳಿಗಳ ಕಡೆ ಹೋದ್ರೆ ಯಾರು ಸಂಸ್ಕೃತದಲ್ಲಿ ದೇವರಿಗೆ ನಮಿಸೋಲ್ಲ ... ಗುಂಡು ಮಾದಯ್ಯನಿಗೆ ಉಘೆ ಉಘೆ ನೆ ಹೇಳೋದು ತಿಳ್ಕೊಳಿ .... ನೀವು ಯಾಕೋ ಇಲ್ಲೂ ತಮ್ಮ ಧರ್ಮ ಪ್ರಚಾರ ಮಾಡೋಕ್ಕೆ ಬಂದ ಹಾಗಿದೆ... !!!.

Anonymous ಅಂತಾರೆ...

ಗುರುವೇ, VHP ಬಗ್ಗೆ ಗೊತ್ತಿಲ್ಲ, ಆದರೆ RSS ನಲ್ಲಿ ಎಲ್ಲ ಭಾಷೆಗಳಿಗೂ ಆಧ್ಯತೆ ಕೊಡ್ತಾರೆ. ಅಲ್ಲಿನ ವ್ಯವಹಾರ ಭಾಷೆ ಸ್ಥಳೀಯ, ಹಾಗು ಆಜ್ಞೆಗಳು (commands) ಸಂಸ್ಕೃತದಲ್ಲಿ. ಅಲ್ಲಿ ಹೇಳಿಕೊಡುವ ದೇಶಭಕ್ತಿ ಗೀತೆಗಳು, ಭಾರತದ ಎಲ್ಲಾ ಭಾಷೆಗಳಲ್ಲೂ ಇರತ್ತೆ.

ಸ್ವಾಮಿ ಕನ್ನಡ ರಾಷ್ಟ್ರಿಯರೇ, ಮುಸ್ಲಿಮರು ಕನ್ನಡದಲ್ಲಿ ನಮಾಜ್ ಮಾಡ್ತಾರಾ ಹೇಳಿ?

--ಸಿದ್ದ

Kannada nationalist ಅಂತಾರೆ...

KannaDadalli namaaz maaDo muslimmaru iddaare ...

bEkaadre... huDukikoLLi..

Anonymous ಅಂತಾರೆ...

ಗುರೂ,... ಕಾಮಾಲೆ ಕಣ್ಣೀನವರಿಗೆ ಕಾಣೋದೆಲ್ಲ ಹಳದೀನೇ...
ಮೋಹನ ಭಾಗವತರು ಮರಾಠಿಯಲ್ಲಿ ಪ್ರಮಾಣವಚನ ತಗೋಬೀಡಿ ಅಂತ ಹೇಳಿಲ್ಲ... ಇಂಗ್ಲೀಶಕೂಡ ಒಂದು ಪರಕೀಯ ಭಾಷೆತಾನೆ? ಇಂಗ್ಲೀಶನಲ್ಲಿ ಪ್ರಮಾಣವಚನ ತಗೊಂಡ್ರೆ ಯಾರೂ ವಿರೋಧಿಸೊದಿಲ್ಲ ಆದರೆ ಹಿಂದೀಯಲ್ಲಿ ತಗೊಂಡ್ರೆ ಯಾಕೆ ವಿರೋಧ ಅಂತ ಕೇಳಿದ್ರು. ಇದರ ಅರ್ಥ "ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ" ಯಾಕೆ? ಇಂಗ್ಲೀಶ್ ನಲ್ಲೂ ಪ್ರಮಾಣವಚನ ತಗೊಂಡ್ರೆ ಯಾಕೆ ವಿರೋಧಿಸುವುದಿಲ್ಲ ಅಂದ್ರು.
-ವಿನಾಯಕ

Anonymous ಅಂತಾರೆ...

ವಿನಾಯಕ,

ಕಾಮಾಲೆ ಕಣ್ಣು ಯಾರದೋ ತಿಳಿಯಲಿಲ್ಲ. ಮಹಾರಾಷ್ಟ್ರ ವಿಧಾನ ಸಭೇಲಿ ಇಂಗ್ಲಿಷಲ್ಲಿ ಯಾರು ಪ್ರಮಾಣ ವಚನ ತೊಗೊಂಡ್ರು? ಯಾರು ವಿರೋಧಿಸಲಿಲ್ಲ? ಸ್ವಲ್ಪ ಹೇಳ್ತೀರಾ? ಬ್ರಿಟೀಷರು ನಿಮ್ಮುನ್ನ ಆಳುದ್ರೆ ಪರ್ವಾಗಿಲ್ಲಾ, ನಾವು ಆಳುದ್ರೆ ತಪ್ಪಾ ಅಂದಂಗಾಯ್ತು ನಿಮ್ಮ ಮಾತು.

ಶಿಷ್ಯ

Bharatada Kannadiga hindu ಅಂತಾರೆ...

VHP deshadalliruva ella hindugala Oggudisuva sanghatane. VHP kannadallu prachara madutte yakandre naanu karnataka dalli ellu VHP ya anya bhasha banner nodilla. Karnataka dalli kannada vanne upyogisutta kannada seve maaduttiddaralla.

Raghavendra Kulkarni (Raghu) ಅಂತಾರೆ...

Karnaataka-da RSS-nalli mattu idara ella shaakhe-galalli Kannadavanne BaLisodu.. Aaata, boudhika ivellavoo Kannadaballe aaagodu.. RSS-na geetegaLoo kooda Kannadadalle irodu (ex: DhavaLa Himada Giriya Mele AruNa Dhwajava haarisi... Mugila EeNi Eeri Nindu Vijaya Bheri Baarisi... baarisi). IshTella irovaaga, VHP/RSS-gaLu KannaDa-da virodha maadtave - andre hege? Yavaagalaadroo RSS shaakhegaLige hogiddeera? Anubhavisiddeera? Nanna prakaara, idondu raajakeeya pitoori, ashte?

Anonymous ಅಂತಾರೆ...

Kannada nationalist> ಕ್ರಿಶ್ಚಿಯನ್ನರು ಅವರವರ ಲಾಕಲ್ ಬಾಶೆಯಲ್ಲಿ ಪ್ರೆಯರ್ ಮಾಡ್ತಾರೆ.. ತಮಿಳು ಪಾದ್ರಿ ಚರ್ಚಲ್ಲಿ ತಮಿಳಲ್ಲೇ ಎಲ್ಲ ಆರಾದನೆ ನಡೆಸಿದ್ರೆ, ಕನ್ನಡ ಪಾದ್ರಿ ಕನ್ನಡದಲ್ಲೇ ನಡೆಸೋದು.

ಕರ್ನಾಟಕದ ಚರ್ಚುಗಳಲ್ಲಿ ಕನ್ನಡದಲ್ಲಿ ಪ್ರಾರ್ಥನೆ ತರಬೇಕು ಅಂತ ಹೋರಾಟನೇ ನಡೆದಿದೆ ಮತ್ತು ಇಲ್ಲಿಯವರೆಗೆ ಹೆಚ್ಚಿನ ಚರ್ಚುಗಳ ಪ್ರಾರ್ಥನೆ ಇಂಗ್ಲಿಷಿನಲ್ಲೇ ಇದೆ.

Kannada nationalist> ಹೀಗೆ ಇಸ್ಲಾಂಲ್ಲೂ ಕೂಡ.. ಇರಾನ್ ದೇಶದಲ್ಲ ನಮಾಜು ಪರ್ಸಿಯನ್ ಬಾಶೆಯಲ್ ಮಾಡಿದ್ರೆ, ತುರ್ಕಿಯಲ್ಲಿ ತುರ್ಕಿ ಬಾಶೇಲಿ, ಪಾಕಿಸ್ತಾನದಲ್ಲಿ ಉರ್ದೂಲಿ, ಬಂಗಾಳದೇಶದಲ್ಲಿ ಬಂಗಾಳೀಲಿ.
ನಮಾಜ್ ಜಗತ್ತಿನಲ್ಲಿ ಎಲ್ಲಿ ಹೊದರೂ ಮೂಲ ಭಾಷೆ ಬಿಟ್ಟು ಬೇರೆ ಭಾಷೆಯಲ್ಲಿ ಮಾಡುವುದಕ್ಕೆ ಅಧಿಕಾರನೇ ಇಲ್ಲ. ನಮಾಜ್ ವಿಷಯ ಬಿಡಿ. ಅವರ ಮದ್ರಾಸಾಗೆ ಹೋಗಿ ನೋಡಿ - ಅಲ್ಲಿ ಕಲಿಸುವುದೂ ಸಹ ಪರ್ಷಿಯನ್ ಭಾಷೆಯಲ್ಲಿ ಮಾತ್ರಾ. ಟಿಪ್ಪು ಸುಲ್ತಾನ್ ಮತ್ತು ಇನ್ನಿತರ ಮುಸಲ್ಮಾನ ಆಳ್ವಿಕೆಗಳಲ್ಲಿ ಕನ್ನಡವನ್ನು ಹೊಸಕಿ ಹಾಕಿ ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆ ಮಾಡಿದ್ದರು. ಮೈಸೂರಿನ ಅರಮನೆ ಮತ್ತು ಇನ್ನಿತರ ಕಡೆ ಇಟ್ಟಿರುವ ಟಿಪ್ಪು ಸುಲ್ತಾನನ ಖಡ್ಗ, ನಾಣ್ಯ ಇನ್ನಿತರ ವಸ್ತುಗಳೇ ಇದಕ್ಕೆ ಸಾಕ್ಷಿ.

Kannada nationalist> ನಮ್ ಕನ್ನಡ ನೆಲದಲ್ಲಿ ಅದೆಶ್ಟು ದೇವಸ್ತಾನಗಳಲ್ಲಿ ಕನ್ನಡದಲ್ಲೇ ಪೂಜೆ ನಡೆಯತ್ತೆ?
ಕನ್ನಡದಲ್ಲಿ ಪೂಜೆ ಮಾಡಬಾರದೆಂದು ಎಲ್ಲೂ ಹೇಳಿಲ್ಲವಲ್ಲ. ಹಾಗೆ ಮಾಡುವವರನ್ನು ವಿರೋಧಿಸಿದ್ದನ್ನಾಗಲೀ, ಹೊಡೆದದ್ದನ್ನಾಗಲೀ, ಕೊಂದದ್ದನ್ನಾಗಲೀ ಯಾರೂ ಎಲ್ಲೂ ನೋಡಿಲ್ಲವಲ್ಲ.
ಕರ್ನಾಟಕದ ಕೆಲವು ದೇವಸ್ಥಾನಗಳಲ್ಲಿ ಕನ್ನಡದಲ್ಲಿ ಪೂಜೆ ಮಾಡುತ್ತಾರೆ.
ಅದಕ್ಕೆ ಹೆಚ್ಚು ಪ್ರೋತ್ಸಾಹ ನೀಡಿ, ಎಲ್ಲಾ ದೇವಸ್ಥಾನಗಳಲ್ಲೂ ನಡೆಯುವಂತೆ ಮಾಡುವುದು ನಮ್ಮ-ನಿಮ್ಮಂತಹ ಕನ್ನಡಿಗರ ಜವಾಬ್ದಾರಿ ಅಷ್ಟೇ!

> ಇದೆಂಗಿದೆ ಅಂದ್ರೆ ‘ಪಕ್ಕದ ಮನೆಯೋರ ಚಾಕುವಿನಿಂದ ಚುಚ್ಚುದ್ರೆ ನೋವಾಗುತ್ತೇ ಅಂತಾ ಚೀರೋದು ಸರೀ, ಆದ್ರೆ ನಮ್ಮ ಮನೆಯ ಚಾಕುವಿನಿಂದಲೇ ಚುಚ್ಚುದ್ರೆ ನೋವಾಗುತ್ತೆ ಅಂದ್ರೆ ಏನರ್ಥ?’ ಅಂದಂಗಿದೆ.
ಅಂದರೆ, ನಿಮ್ಮ ಪ್ರಕಾರ ಹಿಂದಿ ಅಥವಾ ಇಂಗ್ಲಿಷಿನ ಚಾಕುವಿಗಿಂತ ಕನ್ನಡದ ಚಾಕುವೇ ಬೇಕು ಇರಿಯಲಿಕ್ಕೆ ಎಂದೇ!?

> ಹಾಗೇ ಆರೆಸ್ಸೆಸ್ ಮುಖಂಡರು ಕೂಡಾ ಇಂಗ್ಲಿಷ್ನಂತಹ ಸಮಾನ ಶತ್ರು(?)ವನ್ನು ತೋರಿಸಿ ಭಾರತಾನಾ ಒಂದು ಮಾಡ್ತೀವಿ ಅನ್ನೋ ತಪ್ಪು ದಾರಿಯಿಂದ ಹೊರಬರೋದು ಒಳ್ಳೇದು ಅನ್ಸುತ್ತೆ.
ಆರೆಸ್ಸೆಸ್ ಎಂದೂ ಇಂಗ್ಲಿಷನ್ನಾಗಲೀ ಇನ್ನಾವುದೇ ಭಾಷೆಯನ್ನಾಗಲೀ ಶತ್ರುವೆಂದು ಪರಿಗಣಿಸಿಯೇ ಇಲ್ಲ.
ಆರೆಸ್ಸೆಸ್ಸಿನ ಹೆಚ್ಚಿನ ಪುಸ್ತಕಗಲು ಇಂಗ್ಲಿಷಿನಲ್ಲೇ ಪ್ರಕಟವಾಗುತ್ತವೆ. ಇಂಗ್ಲಿಷ್ ಇಂದಿನ ವಾಸ್ತವ ಎಂಬುದನ್ನು ಅವರು ಒಪ್ಪಿದ್ದಾರೆ.
ಆದರೆ, ಇಂಗ್ಲಿಷಿನ ಹುಚ್ಚು ಹೊಳೆಯಲ್ಲಿ, ನಮ್ಮ ಕನ್ನಡ ಹಾಗೂ ಇನ್ನಿತರ ಭಾರತೀಯ ಭಾಷೆಗಳು ಕೊಚ್ಚಿಕೊಂಡು ಹೋಗದಿರಲಿ ಎಂಬ ಇಚ್ಚೆಯನ್ನಷ್ಟೇ ಅವರು ಹೊರಹಾಕಿದ್ದಾರೆ.
ಹಾಗೆ ನೋಡಿದರೆ, ಆರೆಸ್ಸೆಸ್ಸಿನವರಷ್ಟು ಶುದ್ಧ ಕನ್ನಡವನ್ನು ಮಾತನಾಡುವಾಗ, ಬರೆಯುವಾಗ ಕರ್ನಾಟಕದಲ್ಲಿ ಉಪಯೋಗಿಸುವವರು ಯಾರೂ ಇಲ್ಲ ಎಂದೇ ಹೇಳಬೇಕು.
ಕನ್ನಡದಲ್ಲಿ ಪತ್ರಿಕಾ ಪ್ರಕಟಣೆ, ಪುಸ್ತಕ ಪ್ರಕಾಶನಗಳನ್ನು ಆರೆಸ್ಸೆಸ್ ನಡೆಸುತ್ತದೆ.
ಕರ್ನಾಟಕದಲ್ಲಿ ನಡೆಯುವ ಆರೆಸ್ಸೆಸ್ಸಿನ ಪ್ರತಿಯೊಂದು ವ್ಯವಹಾರವೂ ಕನ್ನಡದಲ್ಲೇ.

ಆರೆಸ್ಸೆಸ್ಸಿನವರ ಕುರಿತಾಗಿ ಪೂರ್ವಾಗ್ರಹವನ್ನಿಟ್ಟುಕೊಂಡು ಪತ್ರಿಕಾ ವರದಿಗಳನ್ನೋದಿದರೆ, ಸತ್ಯ ತಿಳಿಯುವುದಿಲ್ಲ. ಇದರಿಂದ ಆರೆಸ್ಸೆಸ್ಸಿಗೇನೂ ನಷ್ಟವಿಲ್ಲ. ಆರೆಸ್ಸೆಸ್ಸನ್ನು ಹತ್ತಿರದಿಂದ ನೋಡಿ ಸತ್ಯ ತಿಳಿಯಲು ಪ್ರಯತ್ನಿಸಿದ್ದರೆ ಈ ರೀತಿಯ ತಪ್ಪು ಅಭಿಪ್ರಾಯಗಳನ್ನು ನೀವು ಹೊಂದುತ್ತಿರಲಿಲ್ಲವೆಂದು ನನ್ನ ಅನಿಸಿಕೆ.

-ನರೇಂದ್ರ

Pramod ಅಂತಾರೆ...

very nice article. As for Hindi is concerned, namgu hindi gu nantu irodu Bollywood moolaka ashte. aa glamour jagattannu mecchi namma thanaana kaLkondre adu ivatto naaLeno doora aago girl friend goskara hetta thaayiyannu doora maadkonda haage aagatte....

Anonymous ಅಂತಾರೆ...

Mr. Narendra,

please see recent call given by Mr. chakravarti sulibele, who is from the same school of thought. He says in the coming sensus do mention english as a language known to you. He gives this call using English only. This is the Hypocracy what right wing has.

When bhagvat ji says "for these peole english is OK, hindi is not Ok" - what is the meaning of this statement? Let us see the other way. If a voice was rised against english & not against hindi, the same bhagvat might have been happy. Atleast he would have not made similar statement. Right?

subbu

Anonymous ಅಂತಾರೆ...

Subbu> please see recent call given by Mr. chakravarti
Subbu> sulibele, who is from the same school of thought. He
Subbu> says in the coming sensus do mention english as a
Subbu> language known to you
First of all Chakravarti Sulibele is neither a member of RSS nor a member of VHP. Also, I don't know where you heard or read about Sulibele's statement. Atleast, I don't know what he has said and also I don't know why he has said so.
It will be good of you, if you can pass on a reliable source where we can see that statement.

Subbu> If a voice was rised against english & not against
Subbu> hindi, the same bhagvat might have been happy.
What is wrong in that statement?
Don't you think while English is a foreign language, Hindi is a language of our own country.
Look at the reality - In the name of job, career, etc, it is English which is replacing Kannada. Please explain me what harm Hindi has done to Kannada?

-Narendra

Anonymous ಅಂತಾರೆ...

Hi narendra,

dayaviTTu omme, facebook oLage hOgi chakravarthi soolibeleyavara profile nODi. avarE taavu BJP mattu RSS eMdu baredukoMdiddaare. avara adE facebook oLage english gottilla aMta hELi, saMskRutaana taaynuDi aMtaa baresi aMtellaa baredukoMDiddaare.

English has not replaced kannada or any indian language regarding job, career etc... Indian education system did not have any such stuff which can teach current day's eduation syllabus. Indian languages have not grown to get either jobs, or to create world class products! So, there is no replacement theory here. Infact, we should make kannada replace english!!!

About the harms of hindi... please read all the posts in this blog under the tag:hindi herike.

Later yo will understand how hindi is dangerous than English to kannadigas.

Regards

Subbu

ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡ ಅಂತಾರೆ...

ಹೆಸರಿಲ್ದವ್ರೆ,
ನಿಮ್ಗೆ ಗಾದೆ ಗೊತ್ತು. ಬಳ್ಸು ತರ ಸರಿಇಲ್ಲ. ಬಾಗ್ವತ್ರು ಹೇಳಿದ್ರರ್ತಾ, "ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ" ಯಾಕೆ ಅಂತ ಅಲ್ವೇ ಅಲ್ಲ. ಇದರ ಅರ್ಥ, ಒಂದು ಕಣ್ಣಿಗೆ ಅನ್ಟಿರೊ ಸುಣ್ಣ ಹೊರೆಸ್ತಿರ, ಇನ್ನೊಂದ್ ಕಣ್ಣಿಗೆ ಅನ್ಟಿರೊ ಬೆಣ್ಣೆ ಯಾಕೆ ಹೊರ್ಸೊಲ್ಲ ಅಂತ.
ಸಿದ್ರಾಜು ಬೋರೇಗೌಡ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails