ಕನ್ನಡ ಚಿತ್ರರಂಗ: ಇಲ್ಲಿ ಆಟಕ್ಕೂ ಇಲ್ಲಾ, ಲೆಕ್ಕಕ್ಕೂ ಇಲ್ಲಾ!


ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡಮಿ ಏರ್ಪಡಿಸಿದ್ದ ಹನ್ನೊಂದನೇ ಚಿತ್ರೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶ್ರೀಲಂಕಾ ದೇಶದಲ್ಲಿ ನಡೆಸಲಾಗುತ್ತಿದೆಯೆಂಬ ಕಾರಣಕ್ಕಾಗಿ- ಶ್ರೀಲಂಕಾ ತಮಿಳರ ಬೆಂಬಲಾರ್ಥವಾಗಿ - ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯೋರು ಬಹಿಷ್ಕರಿಸಿದ್ದಾರೆ. ಇದರಲ್ಲಿ ಯಾವ ಬಾಲಿವುಡ್ ಸೋದರರೂ ಭಾಗವಹಿಸಬಾರದೆಂದೂ, ಹಾಗೊಮ್ಮೆ ಭಾಗವಹಿಸಿದರೆ ಅಂಥವರ ಚಿತ್ರಗಳನ್ನು ದಕ್ಷಿಣ ಭಾರತದಲ್ಲಿ ಬಹಿಷ್ಕರಿಸಲಾಗುವುದೆಂದೂ, ಇಡೀ ದಕ್ಷಿಣ ಭಾರತದ ನಾಕೂ ಭಾಷೆಗಳ ಚಿತ್ರರಂಗದೋರು ಇನ್ಮುಂದೆ ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಬಾರದೆಂದು ತೀರ್ಮಾನಿಸುವುದರೊಂದಿಗೆ ಆ ದೇಶದಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಿಲ್ಲವೆಂದೂ ಕೊಟ್ಟಿರೋ ಹೇಳಿಕೆ ದಿನಾಂಕ 29.05.2010ರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬಂದಿದೆ ಗುರೂ!

ಐ.ಐ.ಎಫ್.ಐ ಅಂದ್ರೆ ಹಿಂದಿ ಚಿತ್ರೋದ್ಯಮದೋರ ಸ್ವತ್ತಾ?

ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡಮಿ ಎನ್ನೋ ಹೆಸರಿನ (International Indian Film Academy IIFA) ಸಂಸ್ಥೆ ಕೆಲವು ವರ್ಷಗಳ ಹಿಂದೆ ಜನ್ಮ ತಳೆದಿದೆ. ಈ ಸಂಸ್ಥೆಯೋರು ಪ್ರತಿವರ್ಷಾ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಭಾರತೀಯ ಚಿತ್ರೋತ್ಸವಗಳ್ನ ಏರ್ಪಡಿಸಿ ಭಾರತೀಯ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿ ಕೊಡೋ ಘನವಾದ ಉದ್ದೇಶ ಹೊಂದಿದಾರೆ. ಹಾಗಂತ ತಮ್ಮ ಅಂತರ್ಜಾಲ ತಾಣದಲ್ಲಿ ಬರೆದೂಕೊಂಡಿದ್ದಾರೆ. ಆದರೆ ಇವರ ಕಣ್ಣಲ್ಲಿ ಭಾರತ ಅಂದ್ರೆ ಉತ್ತರ ಭಾರತ, ಭಾರತೀಯ ಚಿತ್ರ ಅಂದ್ರೆ ಹಿಂದೀ ಚಿತ್ರಗಳು. ಬೇರೆ ಬೇರೆ ದೇಶಗಳಲ್ಲಿ ಇವರು ನಡೆಸಿರೋ ಇದುವರೆಗಿನ ಎಲ್ಲಾ ಹತ್ತು ಪ್ರಶಸ್ತಿ ಪ್ರದಾನ ಸಮಾರಂಗಳಲ್ಲಿಯೂ ಪ್ರಶಸ್ತಿ ಗಳಿಸಿದ್ದಿರಲಿ, ಪ್ರಶಸ್ತಿಗೆ ನಾಮಕರಣವಾದ ಚಿತ್ರಗಳೂ ಕೂಡಾ ಹಿಂದೀ ಭಾಷೆಯವೆ. ಹೀಗೆ ಪ್ರಪಂಚಕ್ಕೆಲ್ಲಾ ಭಾರತೀಯ ಚಿತ್ರರಂಗ ಅಂದ್ರೆ ಹಿಂದೀದು ಅನ್ನೋ ಅಪಪ್ರಚಾರ ಮಾಡ್ತಾ ಇರೋ ಈ ಸಂಸ್ಥೆ ಮತ್ತು ಹಿಂದಿ ಚಿತ್ರೋದ್ಯಮದ ಮಂದಿಯ ಕಣ್ಣಿಗೆ ಭಾರತದ ಇತರೆ ಭಾಷಾ ಚಿತ್ರಗಳು ಆಟಕ್ಕೆ ಇಲ್ಲವಾಗಿದೆ. ಇವರು ಒಂದುಕಡೆ ಭಾರತೀಯ ಚಿತ್ರರಂಗ ಅಂದ್ರೆ ಹಿಂದೀ ಅಂತಾ ಸಾರಕ್ ಮುಂದಾಗಿದ್ರೆ ಇನ್ನೊಂದು ಕಡೆ ದಕ್ಷಿಣ ಭಾರತದ ಚಿತ್ರೋದ್ಯಮ ಅಂದ್ರೆ ತಮಿಳು ಅನ್ನೋ ಹುಂಬತನಕ್ಕೆ ತಮಿಳು ಚಿತ್ರರಂಗದೋರು ಮುಂದಾಗಿದಾರೆ!

ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಂದ್ರೆ ತಮಿಳರ ಸ್ವತ್ತಾ?
ಒಂದು ಕಡೆ ಹಿಂದೀ ಚಿತ್ರೋದ್ಯಮ ಕನ್ನಡವನ್ನೂ ಸೇರಿಸಿ ಭಾರತದ ಉಳಿದೆಲ್ಲಾ ಚಿತ್ರರಂಗಗಳನ್ನು ಆಟಕ್ಕಿಲ್ಲದಂತೆ ಮಾಡ್ತಿದ್ರೆ ಇನ್ನೊಂದು ಕಡೆ ತಮಿಳು ಚಿತ್ರೋದ್ಯಮ ನಮ್ಮುನ್ನ ಚಿನ್ನತಂಬಿ ಅಂತಾ ದೊಡ್ಡಣ್ಣನ ಮನಸ್ಥಿತಿ ತೋರುಸ್ತಿದೆ. ತಮಿಳರ ಮೇಲೆ ಶ್ರೀಲಂಕಾದಲ್ಲಿ ದೌರ್ಜನ್ಯಾ ನಡೀತು ಅಂತಾ ತಮಿಳುನಾಡಿನ ಕೆಲವು ತಮಿಳು ಸಂಘಟನೆಗಳೋರು ದನಿ ಎತ್ತಿದ್ದಕ್ಕೆ ಆ ದನಿಗೆ ತಮ್ಮ ದನಿಯನ್ನು ಸೇರಿಸಲು ತಮಿಳು ಚಿತ್ರರಂಗ ಮುಂದಾಗಿದ್ದಿದ್ರೆ, ಅದು ಅವರಿಷ್ಟ ಅನ್ಬೋದಿತ್ತು. ಆದ್ರೆ ಇಡೀ ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳ ಚಿತ್ರರಂಗದೋರನ್ನು ಪ್ರತಿನಿಧಿಸೋ ದಕ್ಷಿಣ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳೀದು ಈ ನಿಲುವು ಅಂತಾ ಹೇಗಂದ್ರು ಇವ್ರು? ಈ ನಿಲುವಿಗೆ ನಾಲ್ಕೂ ರಾಜ್ಯಗಳ ಎಲ್ಲಾ ನಟರ, ತಂತ್ರಜ್ಞರ, ವಿತರಕರ, ಪ್ರದರ್ಶಕ ಸೋದರರ ಸಮ್ಮತಿ ಇದೆ ಅಂತಾರಲ್ಲಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೋರುನ್ನಾ ಕೇಳಿ ಇಂಥಾ ಹೇಳಿಕೆ ಕೊಟ್ಟಿದಾರಾ? ಕಾವೇರಿ ಗಲಾಟೆ ಸಂದರ್ಭದಲ್ಲಿ, ಇದೇ ದ.ಭಾ.ಚ.ವಾ.ಮಂ ಅವ್ರು ಹೇಳ್ದೆ ಕೇಳ್ದೆ ಕನ್ನಡದೋರುನ್ನಾ ಮಂಡಳಿಯಿಂದ ಕಿತ್ತು ಬಿಸಾಕುದ್ರಲ್ಲಾ ಆಗೆಲ್ಲಿ ಹೋಗಿತ್ತು ಈ ಸೋದರ ಬಾಂಧವ್ಯ? ಇದುನ್ನೆಲ್ಲಾ ಸಹಿಸಿಕೊಂಡು ಕೂತಿರೋಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೋರಿಗೂ, ಕನ್ನಡ ಚಿತ್ರರಂಗದೋರಿಗೂ ಸ್ವಾಭಿಮಾನಾ ಸತ್ತು ಹೋಗಿದೆಯಾ? ಗುರೂ!

3 ಅನಿಸಿಕೆಗಳು:

sarala ಅಂತಾರೆ...

ನಮಸ್ಕಾರ,
ಲೇಖನ ನಿಜಕ್ಕೂ ತುಂಬಾ ಚೆನ್ನಾಗಿ ಬರೆದಿದ್ದಿರ. ಇತ್ತೀಚಿಗೆ ಯುಟ್ಯುಬಿನಲ್ಲಿ ಅಡ್ಡಾಡುತ್ತಿರುವಾಗ ಫಿರ್ ಮಿಲೇ ಸುರ್ ಮೇರ ತುಮ್ಹಾರಾ ಎನ್ನುವ ಹಾಡು ಸಿಕ್ಕಿತು. ಹಿಂದೆ ಮಿಲೇ ಸುರ್ ಮೇರ ತುಮ್ಹಾರಾ ನೆನಪಿರಬೇಕಲ್ಲ ಅದರ ದೊಡ್ಡಣ್ಣ ಇದು.

ನೋಡಿದಾಗ ಬಹಳ ಬೇಜಾರಾಯಿತು. ಮೊದಲಿಗೆ ನಮ್ಮ ದೇಶ ಇಷ್ಟು ವರ್ಷಗಳಾದರೂ ಏನು ಬೆಳೆದಿಲ್ಲವಲ್ಲ ಎಂದು ಬೇಜಾರಾಗಿ ನಂತರ ಆ ಹಾಡು ಎಷ್ಟು ಅಸಹ್ಯವಾಗಿದೆಯಲ್ಲ ಎಂದು ಅನಿಸಿತು.
ಮೊದಲನೆಯ ಹಾಡಿನಲ್ಲಾದರು ಭಾರತದ ಮುಖ್ಯಭಾಷೆಗಳಲ್ಲೆಲ್ಲ ಸಾಳುಗಲಿದ್ದವು. ಈಗ ಬರಿ ಹಿಂದಿ, ತಮಿಳು ಹಾಗು ತೆಲುಗು. ಯಾರ ವಾಣಿಜ್ಯ ಚಿತ್ರರಂಗ ದೊಡ್ದದಿದೆಯೋ ಆ ಭಾಷೆಗಳಲ್ಲಿ ಹಾಡನ್ನು ಮಾಡಿದ್ದರೆ.

ಹಿಂದಿ ಮತ್ತು ತಮಿಳಿನಲ್ಲಾದರೆ ಹಳೆಯ ಸಾಲುಗಳನ್ನೇ ಬಳಸಿಕೊಂಡು ತೆಲುಗಿಗೆ ಹೊಸ ಹಾಡನ್ನು ಬರೆದಿದ್ದಾರೆ. ನಮ್ಮ ಕನ್ನಡ ನಾಡಿನವರೆನು ಇದನ್ನು ನೋಡು ಆರಾಮಾಗಿ ಬಳ್ಳಾರಿಯಲ್ಲಿ ತೀರ್ಥಲ್ಲಿಯಲ್ಲಿ ಮಾಡುವೆ ಊಟ ಹೊಡೆದು ಎಮ್ಮೆಗಳ ಥರ ಬಿದ್ದಿಕೊಂದಿದಾವೆ? ಪ್ರತಿಭಾತಿಸಬಹುದಿತ್ತಲ್ಲವೇ? ವಿವಿಧತೆಯಲ್ಲಿ ಈಕತೆಯೆಂದರೆ ಇದೆ ಏನು? ಬರಿ ಹಿಂದಿ ತಮಿಳು ತೆಲುಗು ಮಾತನಾಡುವ ಜನ ಒಗ್ಗತ್ತಾಗಿದ್ದರೆ ಸಾಕೆನು?

ಇನ್ನು ತಮಿಳು ಚಿತ್ರರಂಗವಷ್ಟೇ ಅಲ್ಲ ತಮಿಳು ಜನರಿಗೆ ಸಹ ಮೊದಲಿನಿಂದ ದುರಭಿಮಾನ. ಅವರ ಸಾಲಿಗೆ ತೆಲುಗರು ಸೇರಿಕೊಳ್ಳುತ್ತಿದ್ದಾರೆ. ಲಾಭಿ ಮಾಡಿ ತಮಗೂ ರಾಷ್ಟ್ರೀಯ ಸ್ಥಾನ ಮಾನ ಗಿಟ್ಟಿಸಿಕೊಂಡರು. ಇನ್ನು ನಮ್ಮ ಗತಿ ಅಷ್ಟೇ. ಚೆನ್ನಾಗಿ ದುಡ್ಡು ಹೊಡೆದುಕೊಳ್ಳುವ ರಾಜಕೀಯದವರು ನಿರಭಿಮಾನಿತ ಜನರು. ಇನ್ನೇನು ಗತಿ?

dhanush ಅಂತಾರೆ...

ಸಾರ್, ನಿಮ್ಮ ಲೇಖನದ ಕೊನೆಯ ಭಾಗದಲ್ಲಿರುವ ವರದಿ ನೋಡಿದರೆ ಅರ್ಥವಾಗುವುದು ಬ್ರಿಟಿಷರ divide and rule ಪದ್ದತಿಯನ್ನು ನಮ್ಮ ಭಾರತ ಸರ್ಕಾರ ನಮ್ಮ ಮೇಲೆ ಉಪಯೋಗಿಸುತ್ತಿದೆ. ಈಗ ನಾವು ತಮಿಳರ ಮೇಲಿನ ಸಿಟ್ಟಿನಿಂದ ಅವರನ್ನು ಬೆಂಬಲಿಸದೇ ಇದ್ದರೆ ಅದರ ಪ್ರಯೋಜನ ಆಗುವುದು ರಾಷ್ಟ್ರ ಸರಕಾರಕ್ಕೆ. ತಮಿಳರು ಏನನ್ನಾದರೂ ಮಾಡುವ ತನಕ ಸುಮ್ಮನಿದ್ದು ಆಮೇಲೆ ಹೊಟ್ಟೆಯಲ್ಲಿ ಬೆಂಕಿ ಬಿದ್ದಿರುವ ತರಹ ಆಡುವ ಬದಲು ಅವರಿಗಿಂತ ಮುಂಚೆಯೇ ನಮಗೆ ಬೇಕಾಗಿರುವುದನ್ನು ಪಡೆದುಕೊಳ್ಳಬೇಕು ಸರಿ ತಾನೇ?

ಫಸ್ಟ್ ಈ ಸಂಸ್ಥೆ ಬಾಲಿವುಡ್ ಚಿತ್ರಗಳನ್ನು ಪ್ರದರ್ಶಿಸಿ ಅದರಲ್ಲಿ ಚೆನ್ನಾಗಿರುವ ಚಿತ್ರಗಳಿಗೆ ಅವಾರ್ಡ್ ಕೊಡುವುದಕ್ಕೆ ಮಾಡಿರುವ ಸಂಸ್ಥೆಯೆಂದು ವಿಕಿಯಲ್ಲಿದೆ. ಆದರೆ ಭಾರತ ಸರ್ಕಾರ ಮಾಡಿರುವ ಸಂಸ್ಥೆಯಾದ್ದರಿಂದ ಎಲ್ಲಾ ರಾಜ್ಯದವರಿಗೂ ನಮ್ಮ ಚಿತ್ರಗಳನ್ನು ಅಂತರರಷ್ಟ್ರಿಯವಾಗಿ ಯಾವಾಗ ಪ್ರದರ್ಶನ ಮಾಡುತ್ತಿರ ಎಂದು ಪ್ರಶ್ನಿಸುವ ಅಧಿಕಾರ ೨೦೦೦ ದ ಇಸವಿಯಿಂದ ಇತ್ತು. ಯಾವ ರಾಜ್ಯದವನು ತುಟಿ ಪಿಟಿಕ್ ಎಂದಿಲ್ಲ ಅವರು ತಮ್ಮ ಬಾಲಿವುಡ್ ರಾಜ್ಯಭಾರ ಮುಂದುವರಿಸುತ್ತಲೇ ಹೋದರು. ಈಗ ತಮಿಳರು ಇನ್ಯಾವುದೋ ಕಾರಣಕ್ಕೆ ಪ್ರತಿಭಟಿಸುತ್ತಿದ್ದಾರೆ. ಅದಕ್ಕೆ ನಾವು ಸಪೋರ್ಟ್ ಮಾಡುವುದು ಬೇಡ. ಆದರೆ ನಮ್ಮದೇ ಬೇರೆ ಬೇಡಿಕೆ ಇಡೋಣ ರಾಷ್ಟ್ರಸರ್ಕಾರದ ಮುಂದೆ. ನಮ್ಮ ಕನ್ನಡ ಚಿತ್ರರಂಗದ ಚಿತ್ರಗಳನ್ನು ಪ್ರದರ್ಶಿಸಿದರೆ ಸರಿ ಇಲ್ಲವಾದರೆ ಹಿಂದಿ ಚಿತ್ರಗಳು ಇನ್ನು ಮುಂದೆ ಕರ್ನಾಟಕದಲ್ಲಿ ಓಡುವುದಿಲ್ಲ ಎಂದು ಹೇಳೋಣ.

ಇನ್ನು ಕನ್ನಡ ಚಿತ್ರರಂಗದವರಿಗೆ ಮಾನ ಮರ್ವಾದೆ ಇಲ್ಲ ಅಂತ ಯಾವಾಗಲೋ ಪ್ರ್ರೋವ್ ಆಗಿಲ್ವಾ ಮತ್ತೇನು ಅದನ್ನೇ ಬಡ್ಕೊಳ್ಳೋದು? ಮೊನ್ನೆ ಕನ್ನಡ ಚಿತ್ರರಂಗದ ೫೦ ಅಥವಾ ೭೫ ವರ್ಷ ಆಯಿತು ಅಂತ ದೊಡ್ಡ ಕಾರ್ಯಕ್ರಮ ಮಾಡಿದ್ರಲ್ಲ ಅದರಲ್ಲಿ ಕರ್ನಾಟಕಕ್ಕೇ ಥೂ ಚೀ ಅಂತ ಉಗಿದ ರಜನಿಕಂತಪ್ಪ, ಕಮಲಪ್ಪ ಇವ್ರುನೆಲ್ಲ ಕರೆಸಿ ಮಾತಾದ್ಸುದ್ರಲ್ಲ ಅವಾಗ್ಲೇ ಪ್ರೂವ್ ಆಗೋಗಿತ್ತು. ಅವರ ಎಂಜಲನ್ನು ತಂದು ಇಲ್ಲಿ ಸಿನಿಮ ಮಾಡೋಕ್ಕೆ ಬೇಕಲ್ಲ ಮತ್ತೆ ಅವರಿಗೆ ಪೂಸಿ ಹೊಡ್ಕೊಂಡು ಇರೋದೇ ಗತಿ. ಮಾಡೋದೇ ಅಪರೂಪಕ್ಕೆ ಒಂದು ದೊಡ್ಡ ಕಾರ್ಯಕ್ರಮ ಕರ್ನಾಟಕದ ದೊಡ್ಡ ದೊಡ್ಡ ನಟರು ಯಾರಪ್ಪ ಅಂತ ಹೊರಗಿನವರಿಗೆಲ್ಲ ಗೊತ್ತಾಗಿರೋದು. ಮತ್ತೆ ಅದೇ ತಮಿಳು ತೆಲುಗಿನ ನಟರನ್ನ ಕರೆತಂದು ಕೂರಿಸಿದ್ದಾರೆ ಇಲ್ಲಿ. ನೋ ಹೋಪ್ಸ್ ....

bsadithyacool ಅಂತಾರೆ...

innu next few months nodtha iri... jackie, super, pancharangi, maduve mane, munthada chitragalu hege kannada chitrarangavannu ettarakke tagedukondu hogtade antha

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails