ಬನವಾಸಿ ಬಳಗದಿಂದ ಕ್ಯಾಂಪಸ್ ಆಯ್ಕೆ ಸಮೀಕ್ಷೆ.


ಕನ್ನಡನಾಡಿನ ಏಳಿಗೆ ಆಗಬೇಕೂಂದ್ರೆ ನಮ್ಮ ನಾಡಲ್ಲಿ ಹೆಚ್ಚುಹೆಚ್ಚು ಉದ್ದಿಮೆಗಳು ಆರಂಭವಾಗಬೇಕು ಮತ್ತು ನಮ್ಮ ಜನಕ್ಕೆ ಹೆಚ್ಚುಹೆಚ್ಚು ಕೆಲಸಗಳು ಸಿಗಬೇಕು. ಇಂಥಾ ಕೆಲಸಗಳು ನಮ್ಮ ಜನಕ್ಕೇ ಸಿಗದೇ ಹೋದರೆ ನಮ್ಮ ನಾಡಿನ ನಿರುದ್ಯೋಗ ಸಮಸ್ಯೆಯಂತೂ ಬಗೆಹರಿಯಲ್ಲ. ನಿರುದ್ಯೋಗ ನಿವಾರಣೆಗಾಗೇ ನಮ್ಮ ಸರ್ಕಾರಗಳು ಉದ್ದಿಮೆಗಳನ್ನು ಆರಂಭಿಸೋದು. ಪುಗಸಟ್ಟೆ ನೆಲ, ತೆರಿಗೆ ರಜಾ, ವಿದ್ಯುತ್ ಇತ್ಯಾದಿ ಕೊಡೋದಕ್ಕೂ ಇದೇ ದೊಡ್ಡ ಕಾರಣ ಅಂದ್ರೆ ತಪ್ಪಿಲ್ಲ. ಹೀಗೆ ಆರಂಭವಾದ ಉದ್ದಿಮೆಗಳಲ್ಲಿ ಐಟಿ ಕ್ಷೇತ್ರದ ಉದ್ಯಮಗಳು ಪ್ರಮುಖವಾಗಿವೆ.

ಕ್ಯಾಂಪಸ್ ಆಯ್ಕೆ ಮತ್ತು ಸಮೀಕ್ಷೆ.

ಇಂಥಾ ಐ.ಟಿ ಉದ್ದಿಮೆಗಳು ತಮ್ಮ ಸಂಸ್ಥೆಗೆ ನೇಮಕ ಮಾಡಿಕೊಳ್ಳಲು ನಾಡಿನ ಬೇರೆ ಬೇರೆ ಕಾಲೇಜುಗಳಿಗೆ ಹೋಗುತ್ತವೆ. ಇವು ಹೆಚ್ಚು ಹೆಚ್ಚು ಕರ್ನಾಟಕದ ಕಾಲೇಜುಗಳಿಗೇ ಹೋಗಬೇಕು ಮತ್ತು ನಮ್ಮ ವಿದ್ಯಾರ್ಥಿಗಳು ನೇಮಕಾತಿಯಲ್ಲಿ ಆಯ್ಕೆಯಾಗಬೇಕು ಮತ್ತು ವಿದ್ಯಾಸಂಸ್ಥೆಗಳು ಕ್ಯಾಂಪಸ್ ಆಯ್ಕೆಯ ಪ್ರಕ್ರಿಯೆಯನ್ನು ಸಮರ್ಥವಾಗಿ ಆಯೋಜಿಸಬೇಕು. ಅಂದರೆ ಇಂಥಾ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಗಳ ಸಂಪೂರ್ಣ ಲಾಭ ನಮ್ಮ ನಾಡಿನ ವಿದ್ಯಾರ್ಥಿಗಳಿಗೂ, ನಾಡಿನ ಉದ್ದಿಮೆಗಳಿಗೂ ಸಿಗುವಂತಾಗುವುದು ಅತ್ಯಂತ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ರಾಜ್ಯದಲ್ಲಿರುವ ನಾನಾ ಉದ್ದಿಮೆದಾರರು, ವಿದ್ಯಾಸಂಸ್ಥೆಗಳು ಮತ್ತು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಬನವಾಸಿ ಬಳಗವು ಒಂದು ಸಮೀಕ್ಷೆಯನ್ನು ಆರಂಭಿಸಲು ಮುಂದಾಗಿದೆ. ಈ ಉದ್ದೇಶಿತ ಸಮೀಕ್ಷೆಯು ಪ್ರಾತಿನಿಧಿಕವಾಗಿದ್ದು ಆಯ್ದ ಕೆಲವು ಸಂಸ್ಥೆಗಳಿಂದಲೂ, ಕಾಲೇಜುಗಳಿಂದಲೂ, ಅಭ್ಯರ್ಥಿಗಳಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಕರ್ನಾಟಕದ ವೃತ್ತಿಪರ ಕಾಲೇಜುಗಳಲ್ಲಿ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಯನ್ನು ಹೆಚ್ಚಿಸಿ, ಆ ಮೂಲಕ ಹೆಚ್ಚು-ಹೆಚ್ಚು ಕನ್ನಡಿಗರಿಗೆ ಉದ್ಯೋಗ ಸಿಗಲು ನೆರವಾಗುವುದು.

ಸಮೀಕ್ಷೆಯ ತಿರುಳಲ್ಲಿದೆ...

ಈ ಸಮೀಕ್ಷೆಯ ಮೂಲಕ ಕ್ಯಾಂಪಸ್ ಆಯ್ಕೆ ನಡೆಸುತ್ತಿರುವ/ ನಡೆಸಬೇಕೆಂದಿರುವ ಕಾಲೇಜುಗಳು ಮಾಡಿಕೊಂಡಿರುವ ವ್ಯವಸ್ಥೆಗಳು, ಅವು ಎದುರುಸುತ್ತಿರುವ ಸವಾಲುಗಳು, ಅನುಸರಿಸುತ್ತಿರುವ ಯಶಸ್ವಿ ಕ್ರಮಗಳು - ಇವುಗಳ ಬಗ್ಗೆ ಮಾಹಿತಿ ಕೂಡಿಹಾಕಲಾಗುವುದು. ಹಾಗೆಯೇ, ಕ್ಯಾಂಪಸ್ ಆಯ್ಕೆ ಮಾಡುವ ಕಂಪನಿಗಳ ನೇಮಕಾತಿ ವರ್ಗದವರು ಕಾಲೇಜುಗಳಿಂದ ಏನೇನು ತಯಾರಿ ಬಯಸುವರು, ಕ್ಯಾಂಪಸ್ ಆಯ್ಕೆಗೆ ಕಾಲೇಜುಗಳನ್ನ ಯಾವ ಆಧಾರದ ಮೇಲೆ ಆರಿಸುತ್ತಾರೆ? ಆಯ್ಕೆ ಪ್ರಕ್ರಿಯೆಯಲ್ಲಿ ಏನಿರುತ್ತದೆ? ಮತ್ತು ಕ್ಯಾಂಪಸ್ ಆಯ್ಕೆಯನ್ನು ಸುಸೂತ್ರವಾಗಿ ನಡೆಸುವಲ್ಲಿ ಕಂಪನಿಗಳು ಎದುರಿಸುತ್ತಿರುವ ಸವಾಲುಗಳೇನು? - ಇವುಗಳ ಬಗ್ಗೆಯೆಲ್ಲಾ ಮಾಹಿತಿ ಕೂಡಿಸಿ ಹಂಚಿಕೊಳ್ಳುವ ಉದ್ದೇಶ ನಮಗಿದೆ.

ಸಮೀಕ್ಷೆಯಲ್ಲಿ ಕೈಜೋಡಿಸಲು ಕರೆ..

ಸಮೀಕ್ಷೆ ಯಶಸ್ವಿಯಾಗಲು, ನಿಮ್ಮೆಲ್ಲರ ಸಹಕಾರ ಅತ್ಯಗತ್ಯ. ನೀವು ಓದಿದ ಅಥವಾ ನಿಮ್ಮ ಮಿತ್ರರು ಓದುತ್ತಿರುವ ಕರ್ನಾಟಕದ ವಿವಿಧ ಇಂಜಿನಿಯರಿಂಗ್/ ಎಂ.ಸಿ.ಎ. ಕಾಲೇಜುಗಳಲ್ಲಿ ನಡೆಸುವ ಕ್ಯಾಂಪಸ್ ಆಯ್ಕೆ ಬಗ್ಗೆ ನಿಮಗೆ ಮಾಹಿತಿ ಗೊತ್ತಿದ್ದಲ್ಲಿ ಅದನ್ನು ನಮಗೆ ತಿಳಿಸಿ. ಹಾಗೆಯೇ, ನಿಮ್ಮ ಕಂಪನಿಗಳಿಂದ ಕ್ಯಾಂಪಸ್ ಆಯ್ಕೆ ನಡೆಸುತ್ತಿದ್ದರೆ, ಆ ಪ್ರಕ್ರಿಯೆಯ ಬಗ್ಗೆ ಮಾಹಿತಿ ತಿಳಿಸಬಹುದು. ಈ ವಿಷಯವಾಗಿ ನೀವು ನಮ್ಮ ಬಳಗದ ಶ್ರೀ ಜಯಪ್ರಕಾಶ್ ಅವರನ್ನು ಸಂಪರ್ಕಿಸಬೇಕೆಂದು ಕೋರುತ್ತೇವೆ.

ಅವರ ಮಿಂಚೆ ವಿಳಾಸ: jayaprakash@banavasibalaga.org

6 ಅನಿಸಿಕೆಗಳು:

Unknown ಅಂತಾರೆ...

Khandithavagi, Namma Sahakaara nimage ide.


-Laxmikanth
Bengaluru

sandesha ಅಂತಾರೆ...

ಕರ್ನಾಟಕದ ಬಹುತೇಕ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪರರಾಜ್ಯದ ವಿದ್ಯಾರ್ಥಿಗಳು ಗಣನೀಯ ಸಂಖ್ಯೆಯಲ್ಲಿ ಇದ್ದಾರೆ. ಕರ್ನಾಟಕದ ಕಾಲೇಜುಗಳಲ್ಲಿ ಕ್ಯಾಂಪಸ್ ಇಂಟರ್ವ್ಯೂ ನಡೆದರೂ ಅದರ ಸಂಪೂರ್ಣ ಫಲ ಕರ್ನಾಟಕದ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಹಾಗಾಗಿ ಸಮೀಕ್ಷ್ಯೆಯನ್ನು ಕರ್ನಾಟಕದಲ್ಲಿ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಎಷ್ಟು ಕನ್ನಡಿಗ ವಿದ್ಯಾರ್ಥಿಗಳಿಗೆ ಕೆಲಸ ಸಿಕ್ಕಿದೆ ಎಂಬುದು ಗಮನದಲ್ಲಿಟ್ಟುಕೊಂಡು ನಡೆಸಬೇಕಾಗುತ್ತದೆ.

shanks ಅಂತಾರೆ...

Great effort and a scheme. My best wishes and will share information

Naveen ಅಂತಾರೆ...

This is great. Actualy it is the need of the hour. Because I can surely say there is missing link between the colleges and industry.

Colleges neither dont know what Industry wants nor they prepare them. I have seen in one of the BBA college of North Karnataka in the bunch of 45 students around 40 students didn't introduced themselves without pause. Thats the fate of our college systems and in this situation we demand to give more jobs to Kannadigas...

So we should come out of the pre conceived mind and think freely.. Else it will be only hot discussion and no practical action.

In this regard I beleive this survey is very much useful. It should tell the college management where they are lacking, it should urge them to build the students to industry ready...

rajaram ಅಂತಾರೆ...

Seats in Engineering colleges - which are run by persons with a view that it is a " money making machine" and they 'sell' seats to outsiders with a pretext of 'management quota" - are ensured for students of Karnataka, kannadiga students are bound to be sidelined.

ಚಲಪತಿ ಅಂತಾರೆ...

ಒಳ್ಳೆ ಕೆಲಸ. ನನಗೆ ತಿಳೀದಿರೋ ಸ್ವಲ್ಪ ಮಾಹಿತಿ (*) ಕೆಲವು ಸಂಸ್ಥೆಗಳು grading system ಅಂದ್ರೆ AICTE ಕೊಟ್ಟ ranming consider ಮಾಡತ್ವೆ. ಹೀಗಾಗಿ ನೀವು ಕಂಪನಿಗಳು ಏನು grade prefer ಮಾಡ್ತಾವೆ, ಹಾಗೆ ಯಾವ college ಯಾವ grade ಇದೆ ಅನ್ನೋದನ್ನು ಕೂಡ ಸಮೀಕ್ಷೆ ಇಂದ ತಿಳ್ಕೊಳಿ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails