ABVP ನಿರ್ಣಯದಲ್ಲಿ ಮರೆತ ತಾಯ್ನುಡಿಯಲ್ಲಿ ಕಲಿಕೆ!


ನಿನ್ನೆ ಬೆಂಗಳೂರಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮೂರು ದಿನಗಳ ಸಮಾವೇಶ ಮುಕ್ತಾಯವಾಯಿತು. ನಮ್ಮ ನಾಳಿನ ಭವಿಷ್ಯದ ರೂವಾರಿಗಳು ಕೈಗೊಳ್ಳಲಿರುವ ನಿರ್ಣಯಗಳ ಬಗ್ಗೆ ಕುತೂಹಲವನ್ನು ಈ ಸಮ್ಮೇಳನ ಹುಟ್ಟು ಹಾಕಿತ್ತು.

ನಿರ್ಣಯಗಳು

ಈ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಇವತ್ತಿನ (29.12.2010ರ) ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿ ಮೂಡಿಬಂದಿದೆ. ಆ ವರದಿಯಂತೆ ನಿರ್ಣಯಗಳಲ್ಲಿ ಕಂಡಿರೋದು 2ಜಿ ಸ್ಪೆಕ್ಟ್ರಂ ಹಗರಣ, ಶಿಕ್ಷಣದ ವ್ಯಾಪಾರಿಕರಣಕ್ಕೆ ವಿರೋಧ, ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ, ಜಗತ್ತಿನ ತಾಪಮಾನ ಏರಿಕೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿಯಂತಹ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಭಾಳ ಸಂತೋಷ. ದೇಶದ, ಪ್ರಪಂಚದ ಎಲ್ಲಾ ಆಗುಹೋಗುಗಳ ಬಗ್ಗೆ ಕಾಳಜಿ ಹೊಂದಿರೋದು ಸರಿ. ಆದರೆ ದೇಶದ ನಾನಾ ಭಾಗಗಳಿಂದ ಬಂದಿರೋ ಹತ್ತು ಸಾವಿರ ಪ್ರತಿನಿಧಿಗಳ ಈ ಸಭೆಯಲ್ಲಿ ಭಾರತೀಯರ ಕಲಿಕೆ ತಾಯ್ನುಡಿಯಲ್ಲಿ ಆಗಬೇಕು ಅನ್ನೋ ದಿಕ್ಕಲ್ಲಿ ಚರ್ಚೆ ನಡೆದಿದ್ರೆ ಚೆನ್ನಾಗಿರೋದಲ್ವಾ ಗುರೂ? ನಾಳಿನ ಭವಿಷ್ಯ ರೂಪುಗೊಳ್ಳೋಕೆ ನಮ್ಮ ವಿದ್ಯಾರ್ಥಿಗಳ ಕಲಿಕೆ ಮತ್ತು ದುಡಿಮೆಗಳು ಅತ್ಯುತ್ತಮವಾಗಬೇಕು. ಹೀಗಾಗಲು ತಾಯ್ನುಡಿಯಲ್ಲಿನ ಕಲಿಕೆಯೊಂದೇ ಸರಿಯಾದ ದಾರಿ, ಈ ದಿಕ್ಕಲ್ಲಿ ನಾಡಿನ ಕಲಿಕಾ ವ್ಯವಸ್ಥೆಗಳು ಸಾಗಬೇಕು ಅನ್ನೋ ಬಗ್ಗೆ ನಿರ್ಣಯಗಳಲ್ಲಿ ಒಂದಂಶವನ್ನು ಎಬಿವಿಪಿಯ ಹಿರಿತಲೆಗಳು ಸೇರಿಸುವುದು ಇಂದಿನ ಅಗತ್ಯವಾಗಿತ್ತು ಅಲ್ವಾ ಗುರೂ?

1 ಅನಿಸಿಕೆ:

Mahesh ಅಂತಾರೆ...

92.7 Big FM ನಲ್ಲಿ ಹಿಂದಿ ಹಾಡುಗಳ ಕಾರ್ಯಕ್ರಮ ಮತ್ತೆ ಶುರು ಮಾಡ್ತಾರಂತೆ. ಬಾಲಿವುಡ್ ಬ್ಲಾಸ್ಟ್ ಅಂತ ಹಿಂದಿ ಕಾರ್ಯಕ್ರಮ ಕೇಳಿ ಆನಂದಿಸಿ ಅಂತ ಹೇಳ್ತಿದ್ರು.

ಕನ್ನಡ ಹಾಡು ಪ್ರಸಾರ ಮಾಡ್ತಿರೋದ್ರಿಂದ ಮಾತ್ರ ನಿಮ್ಮ ವಾಹಿನಿ ಇಷ್ಟ ಆಗಿರೋದು ಅಂತ ಎಲ್ಲ ಎಫ್.ಎಂ ಗಳಿಗೆ ಒತ್ತಿ ಒತ್ತಿ ಹೇಳಬೇಕಾಗಿದೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails