ರಾಜ್ಯಸರ್ಕಾರದ ದೇಣಿಗೆ ದಾಸೋಹ!

ಮತ್ತೊಮ್ಮೆ ಈ ಸುದ್ದಿ ಬಂದಿದೆ. ದಿನಾಂಕ 05.12.2010ರ ವಿಜಯಕರ್ನಾಟಕದ ಎರಡನೇ ಪುಟದಲ್ಲಿ ತಮಿಳುನಾಡಿನ ಗುಡಿಯೊಂದಕ್ಕೆ ರಾಜ್ಯಸರ್ಕಾರದ ಬೊಕ್ಕಸದಿಂದ ಒಂದು ಕೋಟಿ ರೂಪಾಯನ್ನು ಕನ್ನಡಿಗರ ಹೆಮ್ಮೆಯ ಮುಖ್ಯಮಂತ್ರಿ ಯಡ್ಯೂರಪ್ಪನವರು ಕೊಟ್ಟಿದ್ದಾರಂತೆ.

ದೇಣಿಗೆಯ ದಾನಶೂರ!

ಯಾರದ್ದೋ ದುಡ್ಡು ಯಲ್ಲಮ್ಮನ್ ಜಾತ್ರೆ ಅನ್ನೋ ಹಾಗೆ ಕರ್ನಾಟಕದ ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಸೇರಿದ ಬೊಕ್ಕಸದಿಂದ ಮೊಗೆಮೊಗೆದು ಕೋಟಿ ಕೋಟಿ ರೂಪಾಯಿಗಳನ್ನು ಕಂಡ ಕಂಡ ಗುಡಿಗಳಿಗೆ ದಾನಾ ಮಾಡ್ತಾರಲ್ಲಾ ಇದೆಂಥಾ ಮರುಳು ಇವರಿಗೆ ಅಂತಾ... ನಿಜವಾಗ್ಲೂ ಸರ್ಕಾರಗಳು ಮಾಡೋಕೆ ನೂರಾರು ಆದ್ಯತೆಯ ಕೆಲಸಗಳಿರೋವಾಗ ಇಂಥಾ ದೇಣಿಗೆ ದಾಸೋಹಕ್ಕೆ ಇವರು ಯಾಕೆ ಟೊಂಕ ಕಟ್ಟಿ ನಿಂತಿದಾರೆ ಅಂತಾ... ಯಾವುದೇ ಸರ್ಕಾರ ತನ್ನ ಜನಕ್ಕೆ ಬೇಕಾಗಿರೋ ಶಾಲೆ ಕಾಲೇಜು ಆಸ್ಪತ್ರೆ ರಸ್ತೆ ಕುಡಿಯೋ ನೀರು, ನೀರಾವರಿ ಅಂತಾ ಯೋಜನೆ ಮಾಡ್ಕೊಂಡು ಜಾರಿ ಮಾಡೋದು ಸರಿಯಾದ್ದು, ಉತ್ತರ ಕರ್ನಾಟಕದ ನೆರೆ ಪೀಡಿತರ ಗೋಳು ಇವತ್ತಿಗೂ ಕೇಳೋರಿಲ್ಲದೇ ಇರೋವಾಗ ಈ ಯಪ್ಪಂದು ಇದೆಂಥಾ ಕೆಲ್ಸಾ ಅಂತಾ ಜನ ಮಾತಾಡ್ತಿದಾರೆ. ಹೋಗ್ಲೀ, ಅಷ್ಟರ ಮೇಲೂ ಗುಡಿಗಳಿಗೆ ದೇಣಿಗೆ ಕೊಡೋದೇ ಆದ್ರೂ ಕರ್ನಾಟಕದಲ್ಲಿರೋ ಗುಡಿಗಳು ಇವರ ಕಣ್ಣಿಗೆ ಕಾಣ್ತಿಲ್ವಾ ಅಂತಾ... ಅಂತಿದಾರೆ ಗುರೂ!

ನಮ್ ದೇವ್ರುಗಳೂ ನಮ್ ಪಕ್ಷಗಳಂಗೇ...

ನೀವೇನೇ ಹೇಳ್ರೀ... ಕನ್ನಡನಾಡಿನ ದೇವಾನುದೇವತೆಗಳು ನಮ್ ರಾಜ್ಯದ ರಾಜಕೀಯ ಪಕ್ಷಗಳ ಥರಾನೇ ಭಾಳಾ ವೀಕು. ನಮ್ ರಾಜ್ಯದ ಇವತ್ತಿನ ರಾಜಕೀಯ ಪಕ್ಷಗಳಿಗೆ ನಾಡಿನ ಹಿತ ಕಾಪಾಡೊಕ್ ಹೇಗೆ ಆಗ್ತಿಲ್ವೋ/ ಮನಸಿಲ್ವೋ ಹಾಗೇ ನಮ್ಮ್ ಕರ್ನಾಟಕದ ದೇವರುಗಳಿಗೆ ನಮ್ ಜನಗಳನ್ನು ಕಾಪಾಡೋ ತಾಕತ್ತಿಲ್ಲ. ಅದ್ರಲ್ಲೂ ನಮ್ಮ ನಾಯಕರಾದ ಯಡ್ಯೂರಪ್ಪನವರ ಹಿತ ಕಾಪಾಡಕ್ ಆಗ್ತಿಲ್ಲಾ ಅನ್ಸುತ್ತೆ. ಇದು ನಿಜಾನೋ ಸುಳ್ಳೋ ಬೇರೆ ಮಾತು. ಆದ್ರೆ ಯಡ್ಯೂರಪ್ಪನೋರು ಮಾತ್ರಾ ಹಿಂಗೇ ನಂಬಿರೋ ಹಾಂಗ್ ಕಾಣ್ತಿದೆ. ಇಲ್ದಿದ್ರೆ ಗಳಿಗ್ಗೊಮ್ಮೆ ಪಕ್ಕದ ರಾಜ್ಯಗಳ ಗುಡಿಗಳಿಗೆ ಹೋಗೋದುನ್ನಾ, ಹೋದ ಕಡೇಗೆಲ್ಲಾ ದೇಣಿಗೆ ಕೊಡೋದನ್ನಾ ನೋಡೋ ಭಾಗ್ಯ ಕನ್ನಡಿಗರಿಗೆ ಸಿಗ್ತಿರಲಿಲ್ಲಾ... ಅಲ್ವಾ ಗುರೂ?

9 ಅನಿಸಿಕೆಗಳು:

Anonymous ಅಂತಾರೆ...

tamma swanta duddannu koduttiddara athava raajyada janara tax duddannu koduttiddara endu hege tilidukolluvudu?
swanta duddadalli kodali, raajyada duddu kevala para rajyakkashte alla namma rajyadalliyu saha sadupayoga madabeku, bari devasthana, masidi, charchugalige koduvudalla.
HUNDI (tamma hotteyannu serisi) ge hakodralli nissimaru anisutte ee vayya.

Shesh ಅಂತಾರೆ...

ಯಾರದ್ದೋ ದುಡ್ಡು ಯಲ್ಲಮ್ಮನ್ ಜಾತ್ರೆ, ಅವ್ರಪ್ಪಂಧು ಆದ್ರೆ ಅಂಗೆ ಕೊಡುತಿದ್ರ. ನಮ್ಮತ್ರ ಟ್ಯಾಕ್ಸ್ ಅಂತ ಕಲೆಕ್ಟ್ ಮಾಡಿ ಬೇಕಾ ಬಿಟ್ಟಿ ಖರ್ಚು
ಮಾಡ್ತಾರೆ. ಇಲ್ಲಿ ಕೆಲವರಿಗಿ ತಿನ್ನೋಕ್ಕೆ ಇಲ್ಲಾ, ಇವ್ರು ಕೋಟಿಗಟ್ಲೆ ಲೂಟಿ ಮಾಡ್ತವ್ರೆ. ನಮ್ಮ ಕರ್ನಾಟಕನ ಆ ದೇವ್ರೆ ಕಾಪಾಡಬೇಕು.

Anonymous ಅಂತಾರೆ...

When the common man is paying tax... What is there in announcing... Is any money is going from his pocket?? NO..!! Thats why he announces 1 Crore...!!

Srikanth Shenoy ಅಂತಾರೆ...

Saar,

Ide riti Namma sarkara galu, Haj yatre anta koti koti rupayee galannu mecca ge hogalu kodutta ideyalla, adara bagege yavaga bariteeri saar?

ಬನವಾಸಿ ಬಳಗ ಅಂತಾರೆ...

ಪ್ರಿಯ ಶ್ರೀಕಾಂತ್ ಶೆಣೈ,

ಸರ್ಕಾರಗಳು ಧಾರ್ಮಿಕ ದೇಣಿಗೆ ಕೆಲಸಕ್ಕೆ ಕೈ ಹಾಕೋದೇ ಸರಿಯಿಲ್ಲ. ಅದು ಹಜ಼್ ಆದರೂ, ಗುಡಿಗೆ ದೇಣಿಗೆಯಾದರೂ ಒಂದೇ. ನಮಗೆ ಬರೆಯಕ್ಕೆ ಹಿಂಜರಿಕೆಯೇನೂ ಇಲ್ಲ. ಸರ್ಕಾರದ ಸ್ವರೂಪ ಹೊಣೆಗಾರಿಕೆಗಳ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗೇ ಇದೆ.

ಸಂಪಾದಕರು
ಏನ್ ಗುರು

Anonymous ಅಂತಾರೆ...

ಯಾರದ್ದೋ ದುಡ್ಡು ಯಲ್ಲಮ್ಮನ್ ಜಾತ್ರೆ

Anonymous ಅಂತಾರೆ...

http://en.wikipedia.org/wiki/Somnath#Restoration_of_temple_after_Independence

:D .. idu hostalla.!

ಪುಟ್ಟ PUTTA ಅಂತಾರೆ...

ಇವನ ಬಗ್ಗೆ ಮಾತಾಡೋಕೆ ಹೇಸಿಗೆಯಾಗುತ್ತೆ. ಇವನು ನಮ್ಮ CM ಅನ್ನೋದು ಕನ್ನಡಿಗರ ದುರ್ಧೈವ.

ಜಲನಯನ ಅಂತಾರೆ...

ಆನಂದ್ ನಿಮ್ಮ ಮಾತು ವಾಸ್ತವಕ್ಕೆ ಹಿಡಿದ ಕನ್ನಡಿ, ನಮ್ಮ ರಾಜಧಾನಿಯ ಗತಿ ಹೇಗಾಗಿದೆ? ರೈತರ ಗೋಳು ಹೇಳತೀರದು..ಪ್ರವಾಹ ಪೀಡಿತರು ಸದಾ ಪೀಡಿತರೇ..? ಮೊನ್ನೆ ಆಕಸ್ಮಿಕವಾಗಿ ಒಂದು ಊರಿನ ಹಲವು ಅಮಾಯಕ ಜೀವಗಳ ಅಪಘಾತದಲ್ಲಿ ಸತ್ತಾಗ ಭಿಕ್ಷೆ ಅಂತ ಹಾಕಿದ್ರೇ ಹೊರತು ಯಾವ ಮಂತ್ರಿಯೂ ಅವರನ್ನು ಸಂತೈಸಲು ಹೋಗಲಿಲ್ಲ...ಇದು ನಮ್ಮ ಸರ್ಕಾರ..ಅದನ್ನು ಕುಣಿಸುತ್ತಿರುವ ನಮ್ಮ ವಿರೋಧಪಕ್ಷಗಳ ತಾಳ ತಂಬೂರಿ...ಜನತೆ..ಕಥೆ ಗೋವಿಂದ...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails