ಡಬ್ಬಿಂಗ್ ಮತ್ತು ನಾಡು ನುಡಿಯ ರಕ್ಷಣೆಯ ಭಾರದ ಮಾತುಗಳು!

ಪ್ರಜಾವಾಣಿಯ 12.02.2011ರ ಸಂಚಿಕೆಯ 6ನೇ ಪುಟದಲ್ಲಿ ಡಬಿಂಗ್ ವಿವಾದ ಎಂಬ ತಲೆಬರಹದಡಿಯಲ್ಲಿ ಎರಡು ಲೇಖನಗಳೂ, ಮೂರು ಅಭಿಪ್ರಾಯಗಳೂ ಪ್ರಕಟವಾಗಿವೆ. ಸಾಮಾನ್ಯವಾಗಿ ಡಬ್ಬಿಂಗ್ ವಿರುದ್ಧವಾಗಿ ನಿಲುವು ಹೊಂದಿರುವವರು ಹೊಂದಿರುವ ಕೆಲವು ಕಳಕಳಿಗಳೇ ಇಲ್ಲೂ ವ್ಯಕ್ತವಾಗಿವೆ. ಮೊದಲನೆಯದು, ಕನ್ನಡ ಸಂಸ್ಕೃತಿ-ಸೃಜನಶೀಲತೆ ನಶಿಸಿಹೋಗುತ್ತವೆ ಎಂಬುದು. ಎರಡನೆಯದು ನಮ್ಮ ಕಲಾವಿದರಿಗೆ ಕೆಲಸವಿಲ್ಲದೆ ಬೀದಿಪಾಲಾಗುತ್ತಾರೆ ಎಂಬುದು. ಉಳಿದಂತೆ ಅದೇ "ಆಗಿನ ಕಾಲದಲ್ಲಿ ಅಂಥವರು ತಡೆದಿದ್ರು, ಇಂಥವರು ತಡೆದಿದ್ರು, ಅದಕ್ಕೆ ನಾವೂ ತಡೀಬೇಕು" ಅನ್ನೋ ಕನವರಿಕೆಗಳು... ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷರಾಗಿರುವ ಶ್ರೀ ನಾಗಾಭರಣ ಅವರು ಇಡೀ ಚಿತ್ರೋದ್ಯಮದಲ್ಲಿ ಡಬ್ಬಿಂಗ್ ಬೇಡ ಅನ್ನುವವರ ದನಿಯಾಗಿ ಬರೆದಿರೋ ಬರಹ ಈ ಎಲ್ಲಾ ಕಳವಳಗಳಿಗೆ ಕನ್ನಡಿ ಹಿಡಿಯೋ ಪ್ರಯತ್ನ ಮಾಡಿದೆ. ನಾಡು ನುಡಿಯ ರಕ್ಷಣೆಗಾಗಿ ಎನ್ನುವ ತಲೆಬರಹವನ್ನು ಹೊಂದಿರುವ ಈ ಬರಹ ಡಬ್ಬಿಂಗ್ ವಿರೋಧಿಸುವವರ ಇಡೀ ವಾದದ ತಳಹದಿಯನ್ನೂ ತೆರೆದು ತೋರುತ್ತಿದೆ. ಕನ್ನಡ ಚಿತ್ರರಂಗವು ತಾನೊಂದೇ ನಾಡು ನುಡಿಯ ರಕ್ಷಣೆಯ ಹೊಣೆ ಹೊರುವ/ ಹೊರುತ್ತಿರುವ ಮಾತಾಡುವ ಬದಲು, ಆ ಹೊಣೆಯನ್ನು ನಾಡಪರ ಚಿಂತಕರಿಗೆ, ಸಾಮಾಜಿಕ ಸಂಘಟನೆಗಳಿಗೆ, ರಾಜಕಾರಣಿಗಳಿಗೆ, ಜನತೆಗೆ ಬಿಟ್ಟು - ನಾಡ ರಕ್ಷಣೆಯಲ್ಲಿ ತನ್ನ ಸೀಮಿತ ಪಾತ್ರವನ್ನು ನಿರ್ವಹಿಸುತ್ತಾ ಕನ್ನಡ ಚಿತ್ರರಂಗವನ್ನು ಉದ್ಯಮವಾಗಿ ಹೇಗೆ ಯಶ ಗಳಿಸುವಂತೆ ಮಾಡುವುದು ಎಂದು ಚಿಂತಿಸಿದರೆ ಒಳಿತು.

ಡಬ್ಬಿಂಗ್ ಮತ್ತು ಕನ್ನಡ ಸಂಸ್ಕೃತಿ

ಡಬ್ಬಿಂಗ್ ಚಿತ್ರಗಳಿಂದ ಕನ್ನಡ ಸಂಸ್ಕೃತಿಯ ನಾಶವಾಗುತ್ತದೆ, ನಮ್ಮ ಚರಿತ್ರೆ ನಾಶವಾಗುತ್ತದೆ, ಕ್ರಿಯಾಶೀಲತೆ ಸಾಯುತ್ತದೆ, ಸೃಜನಶೀಲತೆ ಇಲ್ಲವಾಗುತ್ತದೆ ಎನ್ನುವ ಆತಂಕವನ್ನು ನೋಡೋಣ. ಇವತ್ತಿನ ದಿವಸ ‘ಕನ್ನಡ ಚಿತ್ರರಂಗವೇ ಕನ್ನಡ ಸಂಸ್ಕೃತಿಯನ್ನು ಪೊರೆಯುತ್ತಿರುವಂತೆ, ಸಂಸ್ಕೃತಿಯ ಹೊಣೆ ಹೊತ್ತಂತೆ’ ದನಿಯೆತ್ತುವ ಚಿತ್ರರಂಗ ಮೊದಲು ಇಂದಿನ ಕನ್ನಡ ಚಿತ್ರರಂಗ ಎಷ್ಟರಮಟ್ಟಿಗೆ ಕನ್ನಡ ಸಂಸ್ಕೃತಿಯನ್ನು ತೋರಿಸುತ್ತಿದೆ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಮೊದಲಿಗೆ, ಯಾವುದಿದು ಕನ್ನಡ ಸಂಸ್ಕೃತಿ? ಎಂಬುದನ್ನು ತಿಳಿಸಲಿ. ನಾಯಕಿಯ ಹೊಕ್ಕಳಿಗೆ ದ್ರಾಕ್ಷಿ ಇಡುವ, ನೀರಲ್ಲಿ ನಾಯಕಿಯನ್ನು ಮುಳುಗಿಸಿ ಕುಪ್ಪುಸದಿಂದ ಮೀನು ಹೊರತೆಗೆವ, ನಾಯಕಿಯ ಹೆಣವನ್ನು ದರದರನೆ ಎಳೆದಾಡುತ್ತಾ ಹಾಡುವ ದೃಶ್ಯಗಳು, ಡಗಾರು, ಡವ್ವು, ಅಜ್ಜಿ ಲೇಹ್ಯ... ಎಂಬ ಪವಿತ್ರ ಪದಪುಂಜಗಳೆಲ್ಲವೂ ರಿಮೇಕು ಅಲ್ಲದ.. ಡಬ್ಬಿಂಗೂ ಅಲ್ಲದ ಚಿತ್ರಗಳಲ್ಲಿ ಬಂದವು. ಇವೆಲ್ಲಾ ಯಾವ ಸಂಸ್ಕೃತಿಯ ಪ್ರತೀಕ? ಕನ್ನಡ ಸಂಸ್ಕೃತಿಯ ಬಗ್ಗೆ ಮಾತಾಡುವ ನಟೀಮಣಿಯರು ತಾವೇ ಸಿನಿಮಾಗಳಲ್ಲಿ ಹೊಗೆ ಎಳೆದೆಳೆದು ಬಿಟ್ಟಿದ್ದಾರಲ್ಲಾ? ಇವೆಲ್ಲಾ ಯಾವ ಕನ್ನಡ ಸಂಸ್ಕೃತಿ? ಇಂದು ತಯಾರಾಗುವ ಕನ್ನಡ ಚಿತ್ರಗಳಲ್ಲಿ ವರ್ಷಕ್ಕೆ ಎಷ್ಟು ಸಿನಿಮಾಗಳು ಕನ್ನಡ ಸಾಹಿತಿಗಳ ಕಥೆಗಳನ್ನು, ಕಾದಂಬರಿಗಳನ್ನು ಆಧರಿಸಿವೆ? ಹೆಚ್ಚುಕಡಿಮೆ ಎಲ್ಲಾ ಕಮರ್ಷಿಯಲ್ ಸಿನಿಮಾಗಳನ್ನೇ ನೋಡಿದರೆ ಇವುಗಳಲ್ಲಿ ಬರುವ ಮಚ್ಚು ಲಾಂಗುಗಳು, ಲವ್ವು ಕಿಸ್ಸುಗಳು, ರಕ್ತಪಾತಗಳು, ಹೊಡಿ ಬಡಿ ಕಡಿಗಳು ಯಾವ ನಾಡಿನ ಸಂಸ್ಕೃತಿಯೂ ಅಲ್ಲ ಅಲ್ಲವೇ? ಒಳಿತೆಲ್ಲಾ ನಮ್ಮ ಸಂಸ್ಕೃತಿ, ಕೆಟ್ಟದ್ದೆಲ್ಲಾ ಪರರ ಸಂಸ್ಕೃತಿ ಎನ್ನುವ ಪೊಳ್ಳುತನ ಯಾಕೆ? ಕನ್ನಡಕ್ಕೆ ಡಬ್ಬಿಂಗ್ ಬಂದರೆ ಕನ್ನಡದ ಸೃಜನಶೀಲ ನಿರ್ದೇಶಕರ ಕನ್ನಡ ಸಿನಿಮಾಗಳಲ್ಲಿ ಸೃಜನಶೀಲತೆ ನಶಿಸುತ್ತದೆಯೇ? ಇವತ್ತಿನ ಸೃಜನಶೀಲ ನಿರ್ದೇಶಕರೆನ್ನಿಸಿಕೊಂಡಿರುವ ನಾಗಾಭರಣ, ಶೇಷಾದ್ರಿ, ಗಿರೀಶ್ ಕಾಸರವಳ್ಳಿ ಮುಂತಾದವರ ಸೃಜನಶೀಲತೆ ಅಳಿಯುತ್ತದೆಯೇ? ಯಶಸ್ವಿ ನಿರ್ದೇಶಕರಾದ ಉಪೇಂದ್ರ, ಪ್ರೇಮ್, ಚಂದ್ರು, ಯೋಗರಾಜ್ ಭಟ್, ಸೂರಿ, ಶಶಾಂಕ್ ಮೊದಲಾದವರೆಲ್ಲಾ ತಮ್ಮ ಸೃಜನಶೀಲತೆಯನ್ನು ಕಳೆದುಕೊಳ್ಳುತ್ತಾರೆಯೇ? ಒಂದು ನಾಡಿನ ಚಿತ್ರರಂಗ ಆ ನಾಡಿನ ಸಂಸ್ಕೃತಿ ಬದುಕಿನ ಕನ್ನಡಿಯೇ ಹೊರತು ಚಿತ್ರರಂಗದಿಂದಲೇ ನಾಡಿನ ಸಂಸ್ಕೃತಿ ಉಳಿಯುತ್ತೆ ಅಥವಾ ಹಾಳಾಗುತ್ತೆ ಅನ್ನೋದು ಸುಳ್ಳು ಗುರೂ! ಹಾಗಾಗಿದ್ರೆ ಇವತ್ತು ಕನ್ನಡ ನಾಡಲ್ಲಿ ನಡೆಯೋ ಎಲ್ಲಾ ಕ್ರೈಮುಗಳ ಹೊಣೆ ಕನ್ನಡ ಚಿತ್ರರಂಗದ್ದಾಗುತ್ತಿತ್ತು. ಏನಂತೀರಾ ಗುರೂ?

ಡಬ್ಬಿಂಗ್ ಮತ್ತು ಬೀದಿಪಾಲಾಗೋ ಭಯ

ಡಬ್ಬಿಂಗ್ ಬಂದ್ರೆ ಕನ್ನಡದ ಕಲಾವಿದರು ಬೀದಿಪಾಲಾಗುತ್ತಾರೆ ಎನ್ನುವ ಭಯವನ್ನು ಸಾಮಾನ್ಯವಾಗಿ ವ್ಯಕ್ತಪಡಿಸಲಾಗುತ್ತದೆ. ಅದು ಹೇಗೆ? ಎಂದರೆ ಕನ್ನಡ ಚಿತ್ರ ನಿರ್ಮಾಣವೇ ನಿಂತುಹೋಗುತ್ತದೆ ಎನ್ನಲಾಗುತ್ತದೆ. ಡಬ್ಬಿಂಗ್ ಬಂದೊಡನೆ ಈಗಿನ ಎಲ್ಲಾ ಕನ್ನಡ ಚಿತ್ರ ನಿರ್ಮಾಪಕರು ಸಿನಿಮಾ ತೆಗೆಯೋದನ್ನು ನಿಲ್ಲಿಸಿಬಿಡುತ್ತಾರೆ ಎಂಬ ಮಾತು ಸತ್ಯಕ್ಕೆ ಎಷ್ಟು ಹತ್ತಿರ? ಸಾಹಿತಿಗಳು ಬೀದಿಪಾಲಾಗುತ್ತಾರೆ, ಕಲಾವಿದರು ಬೀದಿಪಾಲಾಗುತ್ತಾರೆ, ಕಾರ್ಮಿಕರು ಬೀದಿಪಾಲಾಗುತ್ತಾರೆ ಎಂಬುದೆಲ್ಲಾ ಇಡೀ ವಿದ್ಯಮಾನಕ್ಕೆ ಭಾವನಾತ್ಮಕ ಬಣ್ಣ ಕೊಡುವ ಪ್ರಯತ್ನ ಅಲ್ಲವೇನು? ಈಗ ಬರ್ತಿರೋ ನೂರಾಎಪ್ಪತ್ತೈದು ಚಿತ್ರಗಳ ಜೊತೆಯಲ್ಲಿ ಡಬ್ಬಿಂಗ್ ಕೆಲಸಗಳೂ ಹುಟ್ಟಿಕೊಳ್ಳುವುದಿಲ್ಲವೇ? ಅಷ್ಟಕ್ಕೂ ನಿರ್ಮಾಣಕ್ಕೆ ಹೊಡೆತ ಬೀಳುತ್ತದೆಯೆಂದರೆ, ಯಾವ ನಿರ್ಮಾಪಕರು ರಿಮೇಕುಗಳನ್ನೇ ಮಾಡಿಕೊಂಡಿರುತ್ತಾರೋ, ಯಾವ ನಿರ್ದೇಶಕರು ಸ್ವಂತಿಕೆಯಿಲ್ಲದೆ ರಿಮೇಕಿನಲ್ಲೇ ಮುಳುಗಿ ಅದನ್ನೇ ಸೃಜನಶೀಲತೆಯೆನ್ನುತ್ತಾರೋ ಅಂಥವರು ಕೆಲಸ ಕಳೆದುಕೊಳ್ಳಬಹುದು. ಆದರೆ ಕನ್ನಡದಲ್ಲಿ ತೆಗೆಯಲಾಗುವ ಸಿನಿಮಾಗಳೆಲ್ಲಾ ಉಳಿದವರಿಗಿಂತ ಭಿನ್ನವಾಗಿ ತೆಗೆಯಬೇಕೆಂಬ ಕಾರಣಕ್ಕಾಗಿಯಾದರೂ ನಮ್ಮ ಕಾದಂಬರಿಗಳತ್ತ, ಇತಿಹಾಸದತ್ತ ಕಥೆಗಾಗಿ ಕಣ್ಣುಹಾಯಿಸುತ್ತಾರೆ ಮತ್ತು ನಿಜಕ್ಕೂ ಗುಣಮಟ್ಟದ ಚಿತ್ರಗಳನ್ನು ತೆಗೆಯಲು ಮುಂದಾಗಲೇ ಬೇಕಾಗುತ್ತದೆಯಲ್ಲವೇ? ರಾಕ್‍ಲೈನ್ ವೆಂಕಟೇಶ್, ಪೂರ್ಣಿಮಾ ಪಿಕ್ಚರ್ಸ್, ಕೆಸಿಎನ್, ರಾಮು ಎಂಟರ್‌ಪ್ರೈಸಸ್ ಮೊದಲಾದವರು ಚಿತ್ರ ನಿರ್ಮಾಣ ನಿಲ್ಲಿಸುತ್ತಾರೆಯೇ? ಇಂಥದ್ದೊಂದು ಮಾತು ಪೊಳ್ಳುತನದ್ದಲ್ಲವೇ? ಕನ್ನಡ ಸಂಸ್ಕೃತಿಯನ್ನು ತೋರಿಸುವ ನಾಡಿನ ಮಣ್ಣ ಸೊಗಡಿನ ಚಿತ್ರಗಳು ಚೆನ್ನಾಗಿದ್ದರೆ ಎಂದಿದ್ದರೂ ಗೆಲ್ಲುವಂತವೇ, ನೂರು ಡಬ್ ಆದ ಸಿನಿಮಾ ಬಂದವೆಂದ ಕಾರಣಕ್ಕೆ ಕನ್ನಡ ಚಿತ್ರಗಳು ನಿರ್ಮಾಣವಾಗುವುದೇ ಇಲ್ಲವೆನ್ನುವುದು ಹುಸಿಭಯವಲ್ಲವೇ? ಇನ್ನು ಚಿತ್ರನಟಿ ತಾರಾ ಅವರ ಅನಿಸಿಕೆಯಂತೆ ಕಲಾವಿದರಿಗೆ ಭಾಷೆಯ ಹಂಗಿಲ್ಲವಾದ್ದರಿಂದ ಕಲಾವಿದರ ಉಳಿವಿಗೇನೂ ಸಮಸ್ಯೆ ಇಲ್ಲವಲ್ಲ?!

ಡಬ್ಬಿಂಗ್ ಬೇಕೆನ್ನುವವರ ಮೇಲಿನ ಕೆಸರೆರಚಾಟ!

ಇವತ್ತಿನ ದಿನ ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಕೆನ್ನುವ ಹೇಳಿಕೆಯನ್ನು ಚಿತ್ರರಂಗದ ಒಳಗಿನ ಯಾರೊಬ್ಬರೂ ಹೇಳುವ ಸ್ಥಿತಿ ಇದ್ದಂತಿಲ್ಲ. ಹಾಗೂ ಯಾರಾದರೂ ಹೇಳಬೇಕೆಂದರೆ ಶ್ರೀಮತಿ ಬಿ.ಸರೋಜಾದೇವಿಯವರಂತೆ ನಿವೃತ್ತರಾದವರು ಹೇಳಬೇಕಾಗಿದೆ. ಕನ್ನಡ ಚಿತ್ರರಂಗದಲ್ಲಿದ್ದೇ ಡಬ್ಬಿಂಗ್ ಬೇಕು ಎಂದವರಿಗೆ ಮುಂದೇನಾದೀತು ಎಂಬುದು ಊಹೆಗೆ ನಿಲುಕುವಂತಹುದೇ ಆಗಿದೆ. ಅವರ ಸಿನಿಮಾ ಚಟುವಟಿಕೆಗಳಿಗೆ ಅಸಹಕಾರ, ಚಿತ್ರರಂಗದಿಂದ ಬಹಿಷ್ಕಾರ ಮುಂತಾದ ತಂತ್ರಗಳಿಗೆ ಬಲಿಯಾಗಬೇಕಾಗುತ್ತದೆ ಎಂಬ ಭಯ ಅನೇಕರ ಬಾಯಿ ಕಟ್ಟಿಹಾಕಿದೆ ಮತ್ತು ಸಾರ್ವಜನಿಕವಾಗಿ ಡಬ್ಬಿಂಗ್ ಬೇಡವೆಂಬ ಹೇಳಿಕೆ ನೀಡುವಂತೆ ಮಾಡುತ್ತಿದೆ ಎಂಬುದು ಉದ್ಯಮದ ಒಳಗಿನ ಮಾತು. ಯಾರೇ ಡಬ್ಬಿಂಗ್ ಬೇಕೂ ಅಂದರೂ ಇವರು ವೈಯುಕ್ತಿಕ ಲಾಭಕ್ಕಾಗಿ ಈ ನಿಲುವು ತಳೆದಿದ್ದಾರೆ ಎನ್ನುವ ಸುಲಭದ ಆರೋಪ ಇಂಥವರ ಮೇಲೆ. ಮೊನ್ನೇನೆ ನೋಡಿ, ಶ್ರೀಮತಿ ಸರೋಜದೇವಿಯವರು ಡಬ್ಬಿಂಗ್ ಬೇಕು ಅಂದ ಕೂಡಲೇ ಕೇಳಿಬಂದ ಪ್ರತಿಕ್ರಿಯೆ ‘ಅವರು ಚತುರ್ಭಾಷಾ ತಾರೆ, ನ್ಯಾಷನಲ್ ಲೆವೆಲ್ಲಲ್ಲೇ ಮಾತಾಡ್ತಾರೆ’ ಅಂತಾ. ಹಾಗೇ ಡಬ್ಬಿಂಗ್ ಪರವಾದವರನ್ನೆಲ್ಲಾ ಚಲನಚಿತ್ರ ಕಾರ್ಮಿಕ ವಿರೋಧಿ ಅಂತಾ ಬ್ರಾಂಡ್ ಮಾಡಿ ಬಾಯಿ ಮುಚ್ಚಿಸೋ, ಜನರ ಕಣ್ಣಲ್ಲಿ ಖಳರಾಗಿಸೋ ಪ್ರಯತ್ನಗಳು ನಡೀತಾನೆ ಇವೆ. ಕನ್ನಡಿಗರು ರಾಮಾಯಣ ಮಹಾಭಾರತ ಕನ್ನಡದಲ್ಲೇ ನೋಡಬಾರದಾ? ಎಂದರೆ ನಮ್ಮ ಹಳ್ಳಿ ಜನಕ್ಕೆ ಈ ಕಥೆಗಳು ಗೊತ್ತು, ಅವರಿಗೆ ಇವೆಲ್ಲಾ ಬೇಕಾಗಿಲ್ಲ ಅನ್ನೋ ಫರ್ಮಾನು ಹೊರಡಿಸುತ್ತಾರೆ. ಹಾಗಾದ್ರೆ ನಿಮ್ಮ ಸಿನಿಮಾ ಕಥೆಗಳೂ ನಮ್ಮ ಜನಕ್ಕೆ ಗೊತ್ತಿರೋದೆ ಅಲ್ವಾ ಅಂತಂದ್ರೆ ಏನುತ್ತರ ಕೊಟ್ಟಾರೋ? ಅವತಾರ್, ಸ್ಯಾಂಕ್ಟಮ್ ಥರದ ಚಿತ್ರಗಳನ್ನು ನಮ್ಮ ಜನ ತಮಗೆ ಅರ್ಥವಾಗುವ ಭಾಷೇಲಿ ನೋಡಬೇಕು ಅಂದ್ರೆ ನಮ್ಮ ಹಳ್ಳಿಜನಕ್ಕೆ ಆ ಸಿನಿಮಾಗಳಿಂದ ಏನಾಗಬೇಕಿಲ್ಲಾ ಅಂತಾರೆ. ಹಾಗಾದ್ರೆ ಇವರ ಹೈವೇಗಳಿಂದ ಜನಕ್ಕೆ ಏನಾಗಬೇಕಿದೆ? ಯಾರಿಗೆ ಏನು ಬೇಕು, ಏನು ಬೇಡ ಅಂತಾ ನಿರ್ಧರಿಸಕ್ಕೆ ಇವರಿಗೆ ಹಕ್ಕು ಕೊಟ್ಟವರು ಯಾರು?

ಡಬ್ಬಿಂಗ್ ಬರಲಿ! ಕನ್ನಡಿಗರ ಮನರಂಜನೆ ಕನ್ನಡದಲ್ಲಿರಲಿ!

ಹೌದು, ಗ್ರಾಹಕರಿಗೆ ತಮಗೆ ಬೇಕಾದ್ದನ್ನು ತಮ್ಮ ನುಡಿಯಲ್ಲಿ ಪಡೆದುಕೊಳ್ಳುವ ಹಕ್ಕು ಇದ್ದೇ ಇದೆ. ಕನ್ನಡಕ್ಕೆ ಡಬ್ಬಿಂಗ್ ಬರಬೇಕಾದ್ದು ಈ ಕಾರಣಕ್ಕಾಗಿಯೇ. ಇನ್ನು ಇದರಿಂದ ಪರಭಾಷಿಕರು ಕನ್ನಡದ ಮುಖ್ಯವಾಹಿನಿಗೆ ಬರ್ತಾರೆ, ಭಾಷೆ ಉಳಿಯುತ್ತೆ ಅನ್ನೋ ನಾಡಪರ ಕಾಳಜಿಯ ಮಾತುಗಳನ್ನೆಲ್ಲಾ ಬದಿಗಿಟ್ಟೇ ನೋಡಿದರೆ ಡಬ್ಬಿಂಗ್ ಸಿನಿಮಾಗಳು ಕನ್ನಡಿಗರಿಗೆ ತಮ್ಮ ಮನರಂಜನೆಯನ್ನು ತಮ್ಮ ತಾಯ್ನುಡಿಯಲ್ಲಿ ಪಡೆದುಕೊಳ್ಳುವ ಮೂಲಭೂತ ಹಕ್ಕನ್ನು ಎತ್ತಿಹಿಡಿಯುತ್ತದೆ. ಹಾಗೆ ಬರೋ ಸಿನಿಮಾಗಳನ್ನು ಚೆನ್ನಾಗಿದ್ದಲ್ಲಿ ಹಿಟ್ ಮಾಡೋದೂ, ಚೆನ್ನಾಗಿಲ್ಲದಿದ್ದರೆ ಹಿಟ್ಟು ಮಾಡೋದೂ ಜನಗಳ ಕೈಲೇ ಇದೆ. ಸಾಹಿತ್ಯದ ತರ್ಜುಮೆಗೆ, ಚಿಪ್ಸ್ ಮಾರಾಟಕ್ಕೆ, ಇಂಗ್ಲೀಷ್ ಮಾಧ್ಯಮ - ಕನ್ನಡ ಮಾಧ್ಯಮ ಶಾಲೆಗಳಿಗೆ ಹೋಲಿಕೆ ಮಾಡೋದೆಲ್ಲಾ ವಿಷಯಾಂತರದ ಪ್ರಯತ್ನಗಳೇ ಅಂತಾ ಹೇಳದೇ ವಿಧಿಯಿಲ್ಲ. ಕನ್ನಡ ಚಿತ್ರರಂಗದ ಮಾರುಕಟ್ಟೆ ಚಿಕ್ಕದು, ಅದಕ್ಕೆ ಡಬ್ಬಿಂಗ್ ಬೇಡ... ಅನ್ನೋರು ಮಲಯಾಳಮ್ ಮಾರುಕಟ್ಟೆಯ ಬಗ್ಗೆಯೂ ಮಾತಾಡುವುದು ಒಳಿತು. `ಆರ್ಥಿಕವಾಗಿ ಲಾಭದಾಯಕವಾಗಲಿ ಅಂತಾ ಸಿನಿಮಾ ತೆಗೆಯೋದು ಪಾಪ' ಅನ್ನುವ ಬೂಟಾಟಿಕೆಯ ಮನಸ್ಥಿತಿ ಆತ್ಮವಂಚನೆ ಎಂಬುದನ್ನು ಅಂತಹ ಮಾತುಗಳನ್ನಾಡುವವರು ಅರಿತುಕೊಳ್ಳಬೇಕು. ಹೇಗೂ ನಿಮಗೆ ಆರ್ಥಿಕ ಲಾಭದ ಚಿಂತೆಯಿಲ್ಲದಿದ್ದ ಮೇಲೆ ಜನ ನೋಡಿದರೆಷ್ಟು, ಬಿಟ್ಟರೆಷ್ಟು? ಸುಮ್ಮನೆ ಸಿನಿಮಾ ತೆಗೆದು ಪುಗಸಟ್ಟೆ ತೋರಿಸಿ ಅಂದ್ರೆ ಒಪ್ಪಲಾಗುತ್ತದೆಯೇ?

ಅಕಾಡಮಿಗೊಂದು ಕಿವಿಮಾತು

ಕರ್ನಾಟಕ ಚಲನಚಿತ್ರ ಅಕಾಡಮಿ ತುರ್ತಾಗಿ ಮಾಡಬೇಕಾಗಿರೋ ಕೆಲಸವೆಂದರೆ ತುಳು, ಕೊಡವ ಮೊದಲಾದ ಈ ನೆಲದ ಮಣ್ಣಿನ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿಸಿ ಅಂತಹ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿಕೊಡಬೇಕಾಗಿದೆ. ಕನ್ನಡದ ಪುನೀತ್, ಉಪೇಂದ್ರ ಸೇರಿದಂತೆ ಕನ್ನಡ ಚಿತ್ರಗಳನ್ನು ನೆರೆಯ ಭಾಷೆಗಳಿಗೆ ಡಬ್ಬಿಂಗ್ ಮಾಡಿಸಿ ಅಲ್ಲೂ ಕನ್ನಡಿಗರ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿಕೊಡಲು ಮುಂದಾಗಬೇಕಾಗಿದೆ. ಒಟ್ನಲ್ಲಿ ಬದಲಾದ ಕಾಲಕ್ಕೆ ತಕ್ಕಂತೆ ಕನ್ನಡ ಚಿತ್ರರಂಗ ಹೆಜ್ಜೆ ಹಾಕಲು ಸಹಾಯ ಮಾಡಬೇಕಾಗಿದೆ. ಅಲ್ವಾ ಗುರೂ?

19 ಅನಿಸಿಕೆಗಳು:

Anonymous ಅಂತಾರೆ...

neevu hELodu saryaagide.kannadakke Dabbing baMdu kannaDa chitraraMngana udhdhAra mADabEku eMdu nAnu Ashisteeni...!!

Anonymous ಅಂತಾರೆ...

tuMba chennaagiro article

Anonymous ಅಂತಾರೆ...

ನಿಮ್ಮ ಅನಿಸಿಕೆ ಹದಿನಾರಾಣೆ ಸತ್ಯ

Anonymous ಅಂತಾರೆ...

ನೀವು ಹೇಳಿದ್ದು ಸತ್ಯ. ಡಬ್ಬಿ೦ಗ್ ಇರೋ ತೆಲುಗು, ತಮಿಳು ಭಾಷೆ ಹಾಳಾಗಿದೆಯೇ? ನಶಿಸುತ್ತಿದೆಯ್? ಇಲ್ಲ. ನಮ್ಮ ಕನ್ನಡದೊಳಗೆ ದಾ೦ಗುಡಿಯಿಟ್ಟಿದೆ . ಈಗ ಹಿ೦ದಿಗೂ ಕೂಡ ನುಗ್ಗಿದೆ ಉದಾ: ದಬಾ೦ಗ್, ವಾ೦ಟೆಡ್, ರೋಬೋಟ್..

ಸತೀಶ್ ಅಂತಾರೆ...

ಕನ್ನಡದಲ್ಲಿ ಡಬ್ಬಿ೦ಗಿನ ಅವಶ್ಯಕತೆಯನ್ನು ಗ್ರಾಹಕಸೇವೆಯ ದೃಷ್ಟಿಕೋನವನ್ನು ಕೊಟ್ಟು ಮಾತನಾಡಿರುವ ಲೇಖಕರಿಗೆ ಅಭಿನ೦ದನೆಗಳು. ರಜನಿಕಾ೦ತ್ ಸಿನೆಮಾವನ್ನು ಕನ್ನಡದಲ್ಲಿ ನೋಡಬೇಕೆ೦ಬ ಆಸೆಯು ಕನ್ನಡದ ಗ್ರಾಹಕನ ಹಕ್ಕು. ಇ೦ತಹ ಗ್ರಾಹಕರನ್ನು ಕನ್ನಡದ ದ್ರೋಹಿಗಳೆ೦ಬ೦ತೆ ಕೆಲವರು (ಬಹಳ ಓದಿಕೊ೦ಡ ಜನರು) ಹೇಳುವುದನ್ನು ನೋಡಿದರೆ ರಕ್ತ ಕುದಿಯುತ್ತದೆ. ಆದರೆ ಇದೇ ಕೆಲವರು ರಜನಿಕಾ೦ತ್ ನ ಅರ್ಥವಾಗದ ಭಾಷೆಯ ಚಲನಚಿತ್ರ ನೋಡಿ ಒರಿಜಿನಲ್ ಮಜ ತೊಗೊಳಿ ಎ೦ದು ಹೇಳಿದಾಗ ಇವರೆ೦ತಹ ಅಗ್ನಾನಿಗಳೆ೦ದು ನಿರುತ್ಸಾಹ ಮೂಡುತ್ತದೆ.

ಸತೀಶ್ ಅಂತಾರೆ...

ಕನ್ನಡದ ಕಿಡ್ನ್ಯಾಪ್:-

ಕರ್ನಾಟಕ ಚಲನಚಿತ್ರ ಅಕಾಡಮಿಗೆ ನಿಮ್ಮ ಸಲಹೆ ಸಮಯೋಜಿತವಾಗಿದೆ. ಈ ಸಮಸ್ಯೆಯನ್ನು ಎದುರಿಸುತ್ತಿರುವಾಗ ಒಬ್ಬ ಗ್ರಾಹಕನಾಗಿ ಯೋಚಿಸುವುದು ಎಷ್ಟು ಸರಿಯೋ ಹಾಗೆ ಒಬ್ಬ ಕನ್ನಡಿಗನಾಗಿ ಯೋಚಿವುದು ಅಷ್ಟೇ ಪೂರಕ/ಅವಶ್ಯಕ ಎನಿಸುತ್ತಿದೆ. ಚಿತ್ರರ೦ಗದ ಅಗ್ನಾನಿ ಬಳಗದ ಒತ್ತೆಯಾಳಾಗಿರುವ ಕನ್ನಡ, ತುಳು ಮತ್ತು ಕೊಡವ ಭಾಷೆಗಳನ್ನು "ಬಿಡಿಸಲು" ಯುವಕ ಯುವಕಿಯರು ಮು೦ಬರಬೇಕು.
ಈ ಸಮಸ್ಯೆಯ ಪರಿಹಾರಕ್ಕೆ ಜನಸಾಮಾನ್ಯರ ಒಗ್ಗಟ್ಟೇ ಪರಿಹಾರ. ಜನರು ತಾವಿರುವ ಜಾಗಗಳಲ್ಲೇ ಈ ವಿಷಯದ ಬಗ್ಗೆ ದನಿ ಎತ್ತಬಹುದು. ಕನ್ನಡಮ್ಮನನ್ನು ಪ್ರತಿನಿಧಿಸುತ್ತೇವೆ೦ದು ಡೋ೦ಗಿ ಹೊಡೆಯೋ ನುಡಿಗೇಡಿಗಳನ್ನು ಮಟ್ಟ ಹಾಕಬಹುದು. ಈ ಬಗ್ಗೆ ಪರಾಪರ ಚರ್ಚೆಗಳು ಟೀವಿಯಲ್ಲಿ ನಡೆದುಹೋದರೆ ಒಳಿತೇನೋ!!

ಲೇಖಕರೇ ಏನ೦ತೀರಿ?

Altaf ಅಂತಾರೆ...

E barahavannu newspaper nalli hakisi. Jana Odali. Nimmade patrike illave?

Anonymous ಅಂತಾರೆ...

ನಾಗಾಭರಣರವರ "ಆರ್ಥಿಕ ಸಿದ್ಧಾ೦ತದಲ್ಲಿನ ಸ೦ರಕ್ಷಣಾಮಾದರಿ" ಎ೦ದರೆ ಯಾರಾದರೂ ತಿಳಿಸಿಕೊಡುತ್ತೀರಾ ಪ್ಲೀಸ್? :-)

Anonymous ಅಂತಾರೆ...

ವ್ಯಾಲೆ೦ಟೈನ್ಸ್ ಡೇ ದಿನ ಶಿವಸೇನೆಯವರು ಆಡುವ ಹಾಗೆ, ಈ ನಮ್ಮ ಚಿತ್ರರ೦ಗದವರು ಕನ್ನಡದ ಪ್ರೇಮಿಗಳಿಗೆ ಅಡ್ಡಲಾಗಿ ನಿ೦ತಿರುವ೦ತೆ ಅನಿಸುತ್ತಿದೆ. ಕನ್ನಡದ ಚಿತ್ರರ೦ಗವೊ೦ದನ್ನೇ ಪ್ರೇಮಿಸಿ ಎ೦ದು ಉಸಿರುಗಟ್ಟಿಸುತ್ತಿರುವ ಹಾಗಿದೆ.

Harsha S ಅಂತಾರೆ...

ಅರ್ಥಪೊರ್ಣವಾದ ಬರಹ,

Anonymous ಅಂತಾರೆ...

ಕನ್ನಡಿಗರ ಕಣ್ಣಿಗೆ ಕಪ್ಪು ಬಟ್ಟೆ:

ಮೊದಲನೆಯದಾಗಿ ಡಬ್ಬಿ೦ಗ್ ಅನ್ನೋದು ಸಿನೆಮಾಗೆ ಸ೦ಭ೦ದಿಸಿದ ವಿಷಯವೇ ಅಲ್ಲ.... ಇದು ಭಾಷೆಗೆ ಸ೦ಭ೦ದಿಸಿದ ವಿಷಯ. 6 ಕೋಟಿ ಜನರಿಗೆ ಸ೦ಭ೦ದಪಡುವ ಡಬ್ಬಿ೦ಗ್ ವಿಷಯವನ್ನು, ಯಾರೋ ನಾಲ್ಕು ಕನ್ನಡ ಸಿನೆಮಾ ತಯಾರಕರಾಗಲಿ, ನಿರ್ದೇಶಕರಾಗಲಿ ಅಥವಾ ನಟರಾಗಲಿ ನಿರ್ಧರಿಸಲು ಹೇಗೆ ಸಾಧ್ಯ? ದೇಶ ವಿದೇಶಗಳಿ೦ದ ದೊರೆಯುತ್ತಿರುವ ಮನರ೦ಜನೆಯನ್ನು ಕನ್ನಡದಲ್ಲಿ ನೋಡಬೇಡಿ ಎ೦ದು ಕಡಿವಾಣ ಹಾಕಲ್ ಇನ್ನು ಹೆಚ್ಚು ದಿನ ಸಾಧ್ಯವಿಲ್ಲ. ನಾಡು ನುಡಿ ನಾಡಿಗನಿಗೆ ಏನು ಒಳಿತು ಎ೦ದು ಜನರು ನಿರ್ಧರಿಸಬೇಕೇ ಹೊರತು ಯಾರೋ ಕಚಕಾಂತಕ ಒಕ್ಕೂಟವಲ್ಲ.

Anonymous ಅಂತಾರೆ...

ಇ೦ದಿನ ದಿನ ರಾಜ್ಯ ರಾಜ್ಯಗಳ ನಡುವೆ ಸಾಮರಸ್ಯ ಕಾಯ್ದುಕೊಳ್ಳಲು ಡಬ್ಬಿ೦ಗ್ ಅವಶ್ಯಕ ಎ೦ದು ನನ್ನ ಭಾವನೆ. ನಮ್ಮ ನೆರೆ ರಾಜ್ಯಗಳಲ್ಲಿ ಎಷ್ಟು ಒಳ್ಳೆಯ ಸಿನೆಮಾ ಮಾಡಿದರೂ... ಅದು ಆಸ್ಕರ್ ಪ್ರಶಸ್ತಿ ಗೆದ್ದರೂ... ಕನ್ನಡದಲ್ಲಿ ಮಾತ್ರ ಡಬ್ ಮಾಡಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಏಕೆ.. ಈ ರಾಜ್ಯಗಳು ಡಬ್ಬಿ೦ಗ್ ನಿ೦ದ ತಮ್ಮ ಭಾಷೆಯನ್ನು ಬೆಳೆಸುತ್ತಾ, ತಮ್ಮತನವನ್ನು ಕಾಯ್ದುಕೊಳ್ಳುತ್ತಿದ್ದರೆ, ಡಬ್ಬಿ೦ಗ್ ವಿರೋಧಿ ತಿಳಿಗೇಡಿಗಳು ಕನ್ನಡಿಗರ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದ್ದಾರೆ.

Prashant ಅಂತಾರೆ...

ಕನ್ನಡ ಚಿತ್ರರಂಗದವರಿಗೆ ಹೆದರಿಕೆ. ಎಲ್ಲಿ ಡಬ್ಬಿಂಗ್ ಶುರು ಆದ್ರೆ, remake ಎಲ್ಲಿಂದ ಮಾಡೋದು ಅಂತ. ಕಳ್ಳ ನನ್ನ ಮಕ್ಕಳು. ಒಳ್ಳೆಯ ಕಥೆ ಇಲ್ಲ ಅಂದ್ರೆ, ಚಿತ್ರ ಮಾಡೋದನ್ನೇ ನಿಲ್ಲಿಸಿ ಬಿಡ್ಲಿ. ಈಗಿನ ಲಾಂಗು ಮಚ್ಚಿನ ಚಿತ್ರಗಳನ್ನು ನೋಡೋದಾದ್ರು ತಪ್ಪುತ್ತೆ. ಸ್ವಂತತನ ಇಲ್ಲದ ಚಿತ್ರಗಳು ಕನ್ನಡಕ್ಕೆ ಯಾಕೆ ಗುರು?

Anonymous ಅಂತಾರೆ...

dubbing kannadakke beku.. dubbing kannada chitra rangana belesuthe. jotege karnataka dalli bere bhashe berooradante tadeyutte. yavude cinema aagli direct aagi karnatakadalli avarade bhasheyalli release maadabaaradu, kannadakke dub maade release maadabeku antha rules maadi. haaga karnatakadalli kannada bhashe ulisalu sahaaya haagutte. idanella varanatana makkalu support maadalla. yaake andre avarige kannada bhashe beleyodakinta avaru belayabeku...

Prashanth P ಅಂತಾರೆ...

naavu kannada bhashe uLisabekO athava kannada chitraranga uLisabekO?

kannada chitraranga kannadavannu haaLu maDuttide....
esTu cinemagaLLi hindi dialogues ??!!
esTu haaDugaLLi hindi padagaLu ??!!
esTu cinema hesarugaLu hindiyalli ??!!
esTu kannada chitra prashasti pradaana samarambhagaLLi bere bhasheya haaDugaLige kuNidu adannu prachara maDuttare ??!!

ivella yochisidare... intha chitrarangavannu uLisabeke endu yochisuvante aaguttade...

Anonymous ಅಂತಾರೆ...

ಸತ್ಯ ಕ್ಕೆ ಹತ್ತಿರದ ಲೆಖನ ಗುರು, ಕನ್ನದ ಭಾಷೆ ಉಳಿಸೊ ಯಾವ ಗನ೦ಧಾರಿ ಕೆಲಸ ನಮ್ಮ ಚಿತ್ರ ರ೦ಗ ಮಾಡ್ತಾ ಇದೆ ಗೊತ್ತಿದ್ರೆ ಯಾರಾದ್ರು ಹೇಳಿ ಸ್ವಾಮೀ? ಅವತಾರ್ ನ೦ತಹ ಚಿತ್ರಗಳನ್ನ ಕನ್ನಡದಲ್ಲಿ ನೊಡೊದರಿ೦ದ ಕನ್ನಡಕ್ಕೆ೦ತಹ ಹಾನಿ? ಹಾನಿ ಯೆನಿದ್ದರು ರೀಮೆಕು ಮಾಡುವವರಿಗಿದೆ. ಈಗಿನ ಕೆಲವರು ತಮ್ಮ ಹೊಟ್ಟೆ ಪಾಡಿಗೆ ಸ೦ಸ್ಕ್ರುತಿಯ ನೆಪದಲ್ಲಿ ಸ್ವಾಥ್ಹ‍೯ತೆಯ ಪ್ರದರ್ಶನ ಮಾಡ್ತಿದ್ದಾರೆ. ....

keshav ಅಂತಾರೆ...

ಕನ್ನಡದಿಂದ ಬೇರೆ ಭಾಷೆಗಳಿಗೆ ಡಬ್ ಆದ ಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ: (ಇವುಗಳಲ್ಲಿ ಕೆಲವು ನಿರ್ಮಾಣ ಹಂತದಲ್ಲೇ ಒಟ್ಟಿಗೆ ಡಬ್ ಆದಂತಹವು ಉದಾ: ರಕ್ತ ಕಣ್ಣೀರು; ಇನ್ನು ಕೆಲವು ಚಿತ್ರ ಕನ್ನಡದಲ್ಲಿ ಬಹಳ ಯಶಸ್ಸು ಕಂಡ ಮೇಲೆ, ಬಂದಷ್ಟು ಲಾಭ ಬರಲಿ ಎಂದು ಬೇರೆ ಭಾಷೆಗೆ ಡಬ್ ಆದಂತಹವು ಉದಾ: ಜೋಗಿ - ಹಿಂದಿಯಲ್ಲಿ ಜೋಗಿ ದ ಕಿಂಗ್; ಮಂಡ್ಯ - ಹಿಂದಿಯಲ್ಲಿ ಜಂಗ್ ಎ ಎಲಾನ್ ಹೀಗೆ.
Super - Telugu (Super)
Jackie - Telugu (Jackie)
Jackie - Malayalam (Jackie)
Milana - Malayalam (Ishtam Enikishtam)
Monalisa - Malayalam (Monalisa)
Veera Madakari - Hindi (Veer Madakari)
Aishwarya - Telugu (Kantri Mogudu)
Buddivantha - Telugu (Budhimanthudu)
Bindaas - Telugu (Pandugadu)
Bindaas- Hindi (Be Happy Bindaas)
Rajani - Telugu (Rajani)
Circle Rowdy - Tamil (Puli Pandi)
Circle Rowdy - Telugu (Tiger Naga)
Kiran Bedi - Telugu (Kiran Bedi)
Love - Malayalam (Hey Taxi)
Lavakusha - Telugu (Jadhugallu)
Ugadi -Telugu (America Alludu)
Psycho - Telugu (Chudava Preyasi)
Holi - Telugu (Jyothi Kalyanam)
Naanu Nene - Telugu (RajaGaadi Pellam)
Masti - Telugu (Pralyarudrudu)
Raktha Kanneeru - Telugu (Raktha Kanneeru)
Garjana - Tamil (Garjanai)
Accident - Tamil (Ennamo Nadakudhu)
H2O - Telugu (H2O)
H2O - Tamil (Kaveri)
Amruthadhaare - Telugu (Amruthavarsham)
Preethse - Telugu (Nannu preminchave)
Parodi - Telugu (Veedhi Rowdy)
Police Quarters - Tamil (Kadhalar Kudiyiruppu)
Marma - Telugu (Marmam)
Marma - Malayalam (Marmam)
Satyaharishchandra - Tamil (Harishchandra)
Siddu - Malayalam (Oh! My Love)
Rifles - Telugu (Vande Maataram)
Police Story - Hindi (Police Story)
Police Story - Tamil (Police Story)
Police Story - Telugu (Police Story)
Love Guru - Malayalam (Love Guru)
Pruthvi - Malayalam (Pruthvi)
Jaya he - Telugu (Lady Bruce Lee)
Prithvi - Telugu (Pruthvi IAS)
Shishira - Telugu (Shishira)
Sri Manjunatha - Telugu (Sri Manjunatha)
Yagna - Telugu (Yagnya)
Jogi - Hindi (Jogi - The King)
Soundarya - Hindi (Jindaan)
Joulie - Hindi (Joulie)
Aishwarya - Hindi (Aishwarya)
Accident - Hindi (Ek Aur Jallad)
Satya In Love - Hindi (Yuddh)
Bhakta - Hindi (Ek Aur Karamyodha)
Siddhu - Hindi (Phir Ek Toofan)
Huchcha - Hindi (Yudhveer)
Lava Kusha - Hindi (Dharamveer)
Shree - Hindi (Robbery At Bangkok)
Jyeshta - Hindi (Jyesht Putr)
Mandya - Hindi (Jung Ka Elaan)
Deadly Soma - Hindi (Ek Aur Aatank)
News - Telugu (News)
Sanchari - Telugu (Thirugubothu)
Minchina Ota - Malayalam (Mangalapuram)
Love You - Hindi (Pyaar ke liye fight)
Siddu - Hindi (Phir Ek Thoofan)
Indra - Hindi (Phir Ek Thahelka)
Indra - Malayalam (Indra)
Hubballi - Hindi (Vardee Tujhe Salaam)
Sardara - Hindi (Kanss)
Raashtrageethe - Hindi (Rashtrageeth)
Kaamannana Makkalu - Hindi (Aandhi
Aur Toofan)
Gaja - Hindi (Gaja Thakur)
Poojari - Hindi (Karan Poojari)
Gooli - Hindi (Sabse Bada Mavali)
Encounter Dayanayak - Hindi (Dayanayak: Licensed To Kill)
Accident - Malayalam (Accident)
Sahodarara Sawal - Tamil (Sahodara Saptham)
Sahodarara Sawal - Hindi (Diller)
Kumkuma Rakshe - Tamil (Kurinji)
Good Luck - Tamil (Rojakkal)
Namitha I Love You - Telugu (Love College)
Geleya - Telugu (Gang Leaders)
Pushpaka Vimana - Telugu (Pushpaka Vimanam)
Aa Dinagalu - Telugu (Sketch for Love)
Dadagiri - Hindi (Aaj Ki Dadagiri)
Nagamandala - Telugu (Nagavamsham)
Z - Telugu (Maha natudu)
Nammanna - Telugu (Dourjanyam)
A - Telugu (A)
Neelambari - Telugu (Neelambari)
Sparsha - Telugu (Sparsha)
Dhruva - Hindi (Shiva - the power)
Abhay - Telugu (Ready for Dhee)
Kannadada Kiran Bedi - Malayalam (Kerala Kiran Bedi)
Jaya he - Malayalam (Lady Bruce Lee)
Bedara Kannappa - Telugu (Kalahasthi Mahatyam)
Appu Pappu - Tamil (Appu Pappu)
ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ಬಿಂಗ್ ಬೇಡ ಅನ್ನುವ ನಿರ್ಮಾಪಕರು ಇದಕ್ಕೆ ಏನನ್ನುತ್ತಾರೆ? ಬೇರೆಯವರ ಎಂಜಲು ಕಾಸು ಗೋರುವುದಕ್ಕೆ ನಾಚಿಕೆಯಿಲ್ಲ ಅಲ್ಲವೇ?

Anonymous ಅಂತಾರೆ...

ramesh dubbing kannada people must want

Anonymous ಅಂತಾರೆ...

mottha modalu, Evagina kannda chitra ranga mathu kannada chalana chithra natarau kannada basheya ulivige mathu kannada janarige madiada upakaravadaru enu..who the hell they r to decide our wishes.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails