ಗಾಡಿಗಳ ಮೇಲೆ ಕನ್ನಡದ ಫಲಕ ಕಾನೂನು ಬದ್ಧವಾಗಲಿ!

ಕರ್ನಾಟಕದಲ್ಲಿ ಓಡಾಡೋ ವಾಹನಗಳಲ್ಲಿ ಅನೇಕವು ಕನ್ನಡದಲ್ಲಿ ಇರುತ್ತವೆ. ಇಂಥವನ್ನು ನೋಡ್ದಾಗ ನಮಗೆ ಹೆಮ್ಮೆಯೂ ಆಗುತ್ತೆ. ನಾಡಿನ ಮೇಲಿನ ಅಭಿಮಾನದಿಂದ ನಮ್ಮ ಜನರೂ ಕೂಡಾ ತಮ್ಮ ಗಾಡಿಗಳ ನಂಬರ್ರನ್ನು ಕನ್ನಡದಲ್ಲಿ ಬರೆಸಿರುತ್ತಾರೆ.

ಅಷ್ಟೇ ಏಕೆ? ಬೆಂಗಳೂರಿನಲ್ಲಿ ಓಡಾಡೊ ಬಿಟಿಎಸ್ ಬಸ್ಸುಗಳಲ್ಲೂ ನೀವು ಕನ್ನಡದ ಅಂಕಿಗಳ ಬಳಕೆ ನೋಡಿರಬಹುದು. ರಾಜ್ಯೋತ್ಸವ ಬಂದಾಗ ಕನ್ನಡದಲ್ಲಿ ಅಂಕಿ ಬರೆಸುವ ಒಂದು ಕಾರ್ಯಕ್ರಮವನ್ನೂ ಕೆಲ ಸಂಘಟನೆಗಳು ಹಮ್ಮಿಕೊಳ್ಳುತ್ತಾ ಬಂದಿವೆ.

ಆದರೆ ಇದು ಭಾರತದಲ್ಲಿ ಕಾನೂನು ಬಾಹಿರವಾದದ್ದು ಅಂತಾ ನಿಮಗೆ ಗೊತ್ತಾ ಗುರೂ!


ಸಾರಿಗೆ ಇಲಾಖೆಯ ಕಾಯ್ದೆ

ಭಾರತದ ಸಾರಿಗೆ ಇಲಾಖೆಯು ವಾಹನಗಳ ನಾಮಫಲಕ ಹೇಗಿರಬೇಕೆಂದು ಒಂದು ನಿಯಮ ಮಾಡಿದೆ. ಅದರಲ್ಲಿ ಹೀಗಿದೆ ನೋಡಿ.
All motorised road vehicles are tagged with a registration or licence number in India. The Licence plate (commonly known as number plates) number is issued by the district-level Regional transport office (RTO) of respective states — the main authority on road matters. The licence plates are placed in the front and back of the vehicle. By law, all plates are required to be in modern Hindu-Arabic numerals with Roman alphabet.

ಅಂದರೆ ಕರ್ನಾಟಕದಲ್ಲಿ ನಾವು ಕನ್ನಡದಲ್ಲಿ ನಮ್ಮ ಗಾಡಿಗಳಿಗೆ ಕನ್ನಡದಲ್ಲಿ ನಾಮಫಲಕ ಬರೆಸೋದು ಕಾನೂನು ಬಾಹಿರವಾದದ್ದಾಗಿದೆ. ಬೇರೆ ಬೇರೆ ದೇಶಗಳಲ್ಲಿ ವಾಹನಗಳ ನೋಂದಣಿ ಫಲಕ ಹೇಗಿರುತ್ತೆ ಅಂತಾ ಮಾಹಿತಿ ವಿಕಿಪೀಡಿಯಾದಲ್ಲಿದೆ. ನೋಡಿ. ಎಂಥಾ ದುರಂತಾ ನೋಡಿ, ನಮ್ಮ ನಾಡಲ್ಲಿ ನಾವು ದುಡ್ಡು ಕೊಟ್ಟು ಕೊಂಡುಕೊಳ್ಳೋ ಗಾಡಿಯ ನೋಂದಣಿ ಸಂಖ್ಯೆಯನ್ನು ನಮ್ಮ ನುಡಿಯಲ್ಲಿ ಬರೆಯೋದು ಕಡ್ಡಾಯ ಅಂತಾ ಇರೋ ದೇಶಗಳ ನಡುವೆ "ಹಾಗೆ ಬರೆಯೋದು ಕಾನೂನು ಬಾಹಿರ" ಅನ್ನೋ ವ್ಯವಸ್ಥೆ ಭಾರತದ್ದು!

ನಿಜಕ್ಕೂ ಕೇಂದ್ರದ ಸಾರಿಗೆ ಕಾಯ್ದೆಯಲ್ಲಿ ವಾಹನಗಳ ನಾಮಫಲಕಗಳಲ್ಲಿ ಇಂಗ್ಲೀಷ್ ಮತ್ತು ಆಯಾ ರಾಜ್ಯದ ಭಾಷೆ ಕಡ್ಡಾಯ ಅಂತಾ ಮಾಡಿದ್ದಿದ್ರೆ ಸರಿ ಇರ್ತಿತ್ತು. ಆಗ ನಮ್ಮ ನಾಡಲ್ಲಿ ನಮ್ಮ ನುಡಿಯನ್ನು ಬಳಸೋದು ಅಪರಾಧ ಅನ್ನೋ ವಿಕೃತಿಗೆ ಅವಕಾಶ ಆಗ್ತಾ ಇರಲಿಲ್ಲ. ಆದರೂ ನಮ್ಮ ಪುಣ್ಯವೆಂದರೆ ಕೇಂದ್ರದ ಆಡಳಿತ ಭಾಷೆಗಳಾದ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಬರೆಯೋದು ಕಡ್ಡಾಯ ಅನ್ನೋ ದಿನಗಳು ಇನ್ನೂ ಬಂದಿಲ್ಲ ಅಂತಾ ಸಮಾಧಾನ ಮಾಡ್ಕೋಬೇಕಾಗಿದೆ ಅಲ್ವಾ ಗುರೂ!!

8 ಅನಿಸಿಕೆಗಳು:

ravi ಅಂತಾರೆ...

ಇಂತಹ ವಿಷಯಗಳಿಂದಲೇ ಕನ್ನಡ ಬಳಕೆ ಪ್ರಾರಂಭವಾಗದ ಹೊರತು, ದೆಲ್ಲಿಯಲ್ಲಿ ಶಾಸ್ತ್ರೀಯಸ್ತಾನಮಾನದಕುರಿತು ಕಾದಾಡುವುದು ವ್ಯರ್ಥ...

raviguruji935@gmail.com

http://santasajoy-vasudeva.blogspot.com ಅಂತಾರೆ...

Bro,
ಕ್ಲಿಷ್ಟ ಆಗಿರುವ ಕನ್ನಡ ಸಂಖ್ಯೆಯನ್ನು ಮತ್ತೊಮ್ಮೆ ಕಲಿಸಲು ಹೊರಟಿದ್ದಿರಿ :-). ನಿಮ್ಮ ಮಾತು ಸರಿ ೧೦೦ ಕ್ಕೆ ೧೦೦ :-)
- ಜಯಶ್ರೀ

Narendra Kumar ಅಂತಾರೆ...

ನೀವು ನೀಡಿದ ಕೊಂಡಿಯನ್ನು ಪ್ರವೇಶಿಸಿ ವಿವರಗಳನ್ನು ನೋಡಿದೆ ಮತ್ತು ಅಲ್ಲಿರುವ ಪ್ರತಿಯೊಂದು ಚಿತ್ರವನ್ನೂ ಅವಲೋಕಿಸಿದೆ.
ಕೆಲವು ಮುಸಲ್ಮಾನ ದೇಶಗಳನ್ನು ಬಿಟ್ಟರೆ, ಉಳಿದೆಲ್ಲಾ ದೇಶಗಳಲ್ಲೂ ಹಿಂದು ಅಂಕಿಯೇ ಬಳಕೆಯಲ್ಲಿದೆ.
ಇದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಅಲ್ಲವೆ.

ಇನ್ನು ಕನ್ನಡದ ಅಂಕೆಯ ಬಳಕೆಯ ಕುರಿತು:
ವಾಹನಗಳ ಮೇಲೆ ಕನ್ನಡದ ಅಂಕೆ ಬಳಸಿದರೆ, ಅದರಿಂದ ಉಂಟಾಗಬಹುದಾದ ಕೆಲವು ಸಮಸ್ಯೆಗಳಿಗೂ ನಾವು ಪರಿಹಾರ ಹುಡುಕಬೇಕಾಗುತ್ತದೆ.
ಉದಾಹರಣೆಗೆ, ಕರ್ನಾಟಕದ ವಾಹನ ತಮಿಳುನಾಡಿಗೆ ಹೋಯಿತೆನ್ನಿ. ಅಲ್ಲಿನ ಪೊಲೀಸ್ ಇಲಾಖೆಗಾಗಲೀ, ಆರ್.ಟಿ.ಓ ಇಲಾಖೆಗಾಗಲೀ
ಕನ್ನಡ ಬರಲಾರದು. ಅದೇ ಸಮಸ್ಯೆ ತಮಿಳುನಾಡು ಅಥವಾ ಇನ್ಯಾವುದೇ ರಾಜ್ಯದಿಂದ ಕರ್ನಾಟಕಕ್ಕೆ ಬರುವ ವಾಹನಗಳಿಂದಲೂ ಆಗುತ್ತದೆ.
ಈ ಸಮಸ್ಯೆಯನ್ನು ಬಗೆಹರಿಸಲು ನಮ್ಮ ಬಳಿ ಯಾವುದಾದರೂ ಸಲಹೆ ಇದೆಯೇ?

ನಮ್ಮ ಭಾಷೆ-ಸಂಸ್ಕೃತಿಗಳನ್ನು ನಾವು ಉಳಿಸಿಕೊಳ್ಳಬೇಕೆಂಬುದರಲ್ಲಿ ಎರಡು ಮಾತಿಲ್ಲ.
ಆದರೆ, ನಾವು ಭಾರತದಂತಹ ಸಾಕಷ್ಟು ವೈವಿಧ್ಯತೆ ಹೊಂದಿರುವ ನಾಡಿನಲ್ಲಿರುವಾಗ, ಎಲ್ಲರೂ ಕೆಲವು ಸಮಾನ ಅಂಶಗಳ ಅಂಕುಶಕ್ಕೆ ಒಳಪಡುವುದು ಉಚಿತ.
ಆಗ ಮಾತ್ರ, ನಾವು ಒಂದು ದೇಶವಾಗಿ ಬಾಳಬಹುದು, ಅಭಿವೃದ್ಧಿ ಹೊಂದಬಹುದು.
ಈ ನಿಟ್ಟಿನಲ್ಲಿ, ಇಡೀ ದೇಶದ ಜನ ಒಂದು ಸಮಾನ ಅಂಕಿ - ಹಿಂದು ಅಂಕಿ - ಬಳಸುವುದು ಉಚಿತ ಅಲ್ಲವೇ?

ಆನಂದ್ ಅಂತಾರೆ...

ನರೇಂದ್ರ ಅವರೇ,

ಬರಹದಲ್ಲಿ ಸ್ಪಷ್ಟವಾಗಿ ರಾಜ್ಯಭಾಷೆ ಮತ್ತು ಇಂಗ್ಲೀಷ್ ಬಳಸಿ ಅಂತಾ ಬರೆದಿದೆಯಲ್ಲಾ? ಕೊನೆಯ ಪ್ಯಾರಾದಲ್ಲಿ "ನಿಜಕ್ಕೂ ಕೇಂದ್ರದ ಸಾರಿಗೆ ಕಾಯ್ದೆಯಲ್ಲಿ ವಾಹನಗಳ ನಾಮಫಲಕಗಳಲ್ಲಿ ಇಂಗ್ಲೀಷ್ ಮತ್ತು ಆಯಾ ರಾಜ್ಯದ ಭಾಷೆ ಕಡ್ಡಾಯ ಅಂತಾ ಮಾಡಿದ್ದಿದ್ರೆ ಸರಿ ಇರ್ತಿತ್ತು." ಇದೆಯಲ್ಲಾ?
ಇಲ್ಲಿ ಬರಹದ ಉದ್ದೇಶ ಕನ್ನಡನಾಡಿನಲ್ಲಿ ಕನ್ನಡದಲ್ಲಿ ನಾಮಫಲಕ ಬರೆಯೋದು ಅಪರಾಧ ಅನ್ನೋ ಕಾನೂನಿನ ಬಗ್ಗೆ ಆಕ್ಷೇಪ ಅಷ್ಟೆ.

ಆನಂದ್

ಆನಂದ್ ಅಂತಾರೆ...

ನರೇಂದ್ರ ಅವರೇ,

ಭಾರತದಂತಹ ವೈವಿಧ್ಯತೆಯ ನಾಡಲ್ಲಿ "ಒಂದು ದೇಶ, ಒಂದು ಭಾಷೆ - ಒಂದು ದೇಶ, ಒಂದು ಸಂಸ್ಕೃತಿ - ಒಂದು ದೇಶ, ಒಂದು ಧರ್ಮ" ಅನ್ನೋ ಥರದ ಚಿಂತನೆಗಿಂತಾ ಪ್ರತಿಯೊಂದು ಪ್ರದೇಶಕ್ಕೂ, ಸಂಸ್ಕೃತಿಗೂ, ಧರ್ಮಕ್ಕೂ, ಭಾಷೆಗೂ, ಜನಾಂಗಕ್ಕೂ ಸಮ ಗೌರವ - ಅವರವರ ಪ್ರದೇಶದಲ್ಲಿ ಸಾರ್ವಭೌಮತ್ವ, ಅವರವರ ಆಡಳಿತ ಅವರವರ ನುಡಿಯಲ್ಲಿ - ಎನ್ನುವುದು ಹೆಚ್ಚು ಹೊಂದುತ್ತದೆ. "ಭಾರತದ ಏಕತೆ" ಎನ್ನುವುದನ್ನು ಸಮಾನ ಗೌರವದ ಆಧಾರದ ಮೇಲೆ ಸಾಧಿಸದೆ ಸಮಾನ ಅಂಶಗಳ ಅಂಕುಶದ ಮೇಲೆ ಸಾಧಿಸಲು ಹೋಗುವುದು ಸರಿಯಲ್ಲ. ಯಾಕೆಂದರೆ ಅಂಕುಶದ ಆಶಯಗಳು ಒಂದು ಭಾಷಾಜನಾಂಗದ ಹಕ್ಕನ್ನು ಮೊಟಕು ಮಾಡುತ್ತದೆ. ಪ್ರಜಾಪ್ರಭುತ್ವಕ್ಕೆ ಮಾರಕವೆನ್ನಿಸುತ್ತದೆ.

Anonymous ಅಂತಾರೆ...

ನರೇಂದ್ರ ಅವರೇ,

ನೀವಂದಂತೆ ಹೆಚ್ಚಿನ ಕಡೆ ರೋಮನ್ ಲಿಪಿ ಬಳಸಿರುವುದು ಕಾಣುತ್ತೆ ಅನ್ನೋದು ನಿಜ. ತಮ್ಮ ನುಡಿಗೆ ಲಿಪಿಯನ್ನು ಹೊಂದಿದ್ದೂ ಬಳಸದವರು ನಮಗೆ ಮಾದರಿಯೋ, ಅಥವಾ ಜಪಾನ್, ಚೀನಾ, ಕೊರಿಯಾ ಥರದವು ಮಾದರಿಯೋ?

ಸುಂದರ್

Ganapi ಅಂತಾರೆ...

ಆಯಿತು. ಅದರಲ್ಲೇನು ಕಷ್ಟ? ಕಾನೂನನ್ನು ಬದಲಿಸಿದರೆ ಆಯಿತು? ಇದಕ್ಕೆ ಅಡ್ಡಿ ಯಾರು ಮಾಡಲು ಸಾಧ್ಯ? ನಮ್ಮ ನಾಡು ನಮ್ಮ ಭಾಷೆ..!!

ಹಾಗಿದ್ರೆ ಹೊಸ ಕಾನೂನಿನ ಪ್ರಕಾರ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ನಮ್ಮ ನಾಮಫಲಕಗಳನ್ನು ಬರೆಸಿದರೆ ಆಯಿತು.
ಇಗೋ ಹೊಸ ಕಾನೂನು ಈ ರೀತಿ ಇದೆ..


Amendment.....
All motorised road vehicles are tagged with a registration or licence number in India. The Licence plate (commonly known as number plates) number is issued by the district-level Regional transport office (RTO) of respective states — the main authority on road matters. The licence plates are placed in the front and back of the vehicle. By Law, the numerals and alphabet of all plates are required to be in the respective official languages of the state. Also, all plates are required to be in modern Hindu-Arabic numerals with Roman alphabet and with lesser font size than the official language of the state. .

Anonymous ಅಂತಾರೆ...

ಇದು ಕೇವಲ ಕನ್ನಡ ಫಲಕದ ವಿಷಯ ಮಾತ್ರ ಅಲ್ಲ. ನಿಧಾನವಾಗಿ ರಾಜ್ಯಗಳ ಒಂದೊಂದೆ ಅಧಿಕಾರವನ್ನು ಕಿತ್ತುಕೊಳ್ಳುತ್ತಿದೆ ದೆಹಲಿ ಸರ್ಕಾರ. ಕೊನೆಗೆ ರಾಜ್ಯಗಳು ಪುರಸಭೆ ಮಟ್ಟಕ್ಕೆ ತಳ್ಳಲ್ಪಡುತ್ತವೆ. ಮುಂದೊಂದು ದಿನ ಕರ್ನಾಟಕದಲ್ಲಿ ಕನ್ನಡದಲ್ಲಿ ವ್ಯವಹರಿಸುವುದೇ ಕಾನೂನುಬಾಹಿರ ಆದರೆ ಎನೂ ಆಶ್ಚರ್ಯವಿಲ್ಲ.
-ರಾವ್

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails