ರಾಜ್ಯದಿಂದ ಕೇಂದ್ರ ಅನ್ನೋ ಸಂದೇಶಾ ಕೊಡ್ತಿರೋ ಯಡ್ಯೂರಪ್ನೋರು!


ನೋಡ್ರಣ್ಣಾ! ನಾವೇನು ಯಡ್ಯೂರಪ್ಪನೋರಿಗೆ ಯಾವ್ ಥರಾನೂ ನೆಂಟ್ರು ಪಂಟ್ರು ಅಲ್ಲಾ! ಅವರೇನಾರಾ ತೆಪ್ ಮಾಡುದ್ರೆ ಅವುರುನ್ನ ಒಪ್ಪಿಟ್ಟುಕೊಳ್ಳೋದೂ ಇಲ್ಲಾ! ಆ ಯಪ್ಪಾ ಮಾಡಿರಬಹುದಾದ ಭ್ರಷ್ಟಾಚಾರಾನೂ ಒಪ್ಕೊಳಾಕಿಲ್ಲ! ಆದ್ರೂ ಮುಕ್ಯಮಂತ್ರಿ ಸಾಹೇಬ್ರು ತಮ್ ಜುಟ್ಟು ಹಿಡ್ಯಕ್ ಮುಂದಾದ ಹೈಕಮಾಂಡಿನೋರುನ್ನಾ ಹಿಗ್ಗಾಮುಗ್ಗಾ ಬೆಚ್ಚಿ ಬೀಳ್ಸೋ ಹಾಂಗೆ ಪಟ್ಟು ಹಾಕ್ತಾ ಇರೋದುನ್ನಾ ಮೆಚ್ಚಿಕೊಳ್ದೇ ಇರಕ್ ಆಗತಿಲ್ಲಾ ಗುರುಗೋಳೇ!

ಹೈಕಮಾಂಡಿನೋರು ಸಾಮ್ರಾಟರಾ?

ಹೂಂ.. ಕಣ್ರಣ್ಣಾ... ಹಳೇಕಾಲದಲ್ಲಿ ಒಬ್ಬ ಸಾಮ್ರಾಟ ಇರೋನು... ಅವನ ಕೆಳಗೆ ಸಾಮಂತರು, ಅವ್ರು ಕೆಳ್ಗೆ ಮಾಂಡಲೀಕರು, ಅವ್ರು ಕೆಳ್ಗಡೆ ದಂಡನಾಯಕ್ರು, ದೊಣೆನಾಯಕ್ರು.... ಹಿಂಗಿರೋದು ಗುಲಾಮಗಿರಿ ಚೈನು! ಬ್ರಿಟೀಶಿನೋರು ಬಿಟ್ಟು ಹೋಗಿ ಬರೀ ಅರವತ್ತು ವರ್ಸ ಆಗೈತೆ... ಸಾವರಾರು ವರ್ಶದ ಗುಲಾಮಗಿರಿ ಬುದ್ದಿ ಅಷ್ಟು ಸಲೀಸಾಗ್ ಹೋಗಿಬುಡ್ತದಾ? ರಾಷ್ಟ್ರೀಯ ಪಕ್ಷಗಳು ಅನ್ನೋ ಸಾಮ್ರಾಟರ ಎದ್ರು ಕೈಕೊಟ್ಟುಕೊಂಡು, ಅವರು ಹೇಳೋರು ಸಾಮಂತರಾಗೋ ರಾಜ್ಯಗಳ ಶಾಕೆಗಳು... ಏನಾರಾ ಯೆತ್ವಾಸಾ ಕಾಣ್ತುದಾ ದಣೀ? ಇಂಥಾ ಯವಸ್ತೇನಾಗೆ ಐಕಮಾಂಡು ಕುಂತ್ಕಾ ಅಂದ್ರೆ ಕುಂತ್ಕೊಂಡು, ನಿಂತ್ಕೋ ಅಂದಾಗ ನಿಂತ್ಕಂಡು, ಮನಿಕ್ಕೋ ಅಂದಾಗ ಮನಿಕ್ಕೊಂಡು, ಎದ್ದೇಳ್ಲಾ ಅಂದಾಗ ಎದ್ದೋಗ್ದಲೇ... "ಎಲಾ ಬಡ್ಡೆತವಾ... ಕೇಂದ್ರ ಅನ್ನೋದು ರಾಜ್ಯಗಳಿಂದ ಆಗಿರೋದು ಕಣ್ರುಲಾ" ಅನ್ನೋಂಗೆ ಕರ್ನಾಟಕದ ರಾಜಕಾರಣಾನಾ ನಾವೇ ನೋಡ್ಕೊಂತೀವಿ ಅಂತಾ ಯಡ್ಯೂರಪ್ಪನೋರು ಸಡ್ಡು ಹೊಡ್ದಿರೋದು ಮಸ್ತಾಗೈತೆ ಗುರೂ! ನೀ ಏನಂತೀಯಾ? ಯಡ್ಯೂರಪ್ಪನೋರು ಭಂಡ, ಪುಂಡ ಅನ್ನೋದೆಲ್ಲಾ ನಿಜಾನೋ ಸುಳ್ಳೋ ಪಕ್ಕಕ್ಕಿಟ್ಟು ಪ್ರಚಂಡಾ ಅನ್ನೋದ್ನಾ ಒಪ್ಕೊಬೇಕಾಯ್ತುದೆ ಅಲ್ವಾ?

7 ಅನಿಸಿಕೆಗಳು:

koti ಅಂತಾರೆ...

ಚನ್ನಾಗಿದೆ,ಅಭಿನಂದನೆಗಳು...........

Unknown ಅಂತಾರೆ...

ಹೈಕಮಾಂಡಿನಲ್ಲಿರೋರಲ್ಲಿ ಸಾಚಾ ಆಗಿದ್ರೆ ಅವರು ಬೇರೆಯವರಿಗೆ ಬುದ್ಧಿ ಹೇಳಬಹುದು. ಈ ಸುಶ್ಮಾಸ್ವರಾಜು, ದೇವೇಂದ್ರ ಪ್ರಧಾನು, ರಾಜ್ನಾಥ್ಸಿಂಗು ಇವ್ರೆಲ್ಲಾ ಕರ್ಣಾಟಕದವರಿಂದ ಎಂಜಲು ಈಸ್ಕೊಂಡು ತಿಂದಿರೋವ್ರೇಯಾ.. ಎಲ್ಲಾಕಿಂತ್ಲೂ ಆ ವೆಂಕಯ್ನಾಯ್ಡುನ್ ಕಂಡ್ರೆ ಮೈಯೆಲ್ಲಾ ಉರಿಯತ್ತೆ. ನಂ ರಾಜ್ಯದಿಂದ ಬಲ್ವಂತ್ವಾಗಿ ಆಯ್ಕೆ ಮಾಡ್ಸಿಕೊಂಡು ಒಂದೇ ಒಂದು ದಿನಾನೂ ಸಹಿತ ನಮ್ಮವರಿಗೆ ಒಳ್ಳೆ ಕೆಲ್ಸ ಮಾಡಿಕೊಟ್ಟಿಲ್ಲ. ಏನಾದ್ರೂ ಎಡವಟ್ಟು ಆದ್ರೆ ಮೂರ್ನಾಕ್ ದಿನ ಸುಮ್ನೆ ಎಲ್ಲೆಲ್ಲೋ ಬಚ್ಚಿಟ್ಕೊಂಡು ಸನ್ನಿವೇಶ ಸ್ವಲ್ಪ ಕಂಟ್ರೋಲ್ಗೆ ಬಂದ್ಮೇಲೆ ಎಲ್ಲಾ ತಾನೇ ಸರಿ ಮಾಡ್ದೆ ಅಂತ ಪಂಚೆ ಮೇಲೆತ್ಕೊಂಡ್ ಬಂದ್ ಬಿಡ್ತಾನೆ ನಾಯಿಡು.. ರಾಜೀವ್ ಚಂದ್ರಶೇಖರ್ ಅನ್ನೋ ಮಲಯಾಳಿಗೆ (ಮನೆಹಾಳ) ಇನ್ನೊಂದು ರಾಜ್ಯಸಭೆ ಸೀಟ್ ಮಾರಿಕೊಂಡಿದಾರೆ ಇದೇ ಹೈಕಮಾಂಡಿನೋರು. ಇಂಥವ್ರಿಗೆ ಸರಿಯಾಗೇ ಚಳ್ಳೇಹಣ್ಣು ತಿನ್ನಿಸ್ತಾ ಇದಾರೆ ಯೆಡ್ಡಿ..

ಇಡೀ ಬಿಜೆಪಿಯಲ್ಲಿ ನೈತಿಕವಾಗಿ ಯಡ್ಡಿಯನ್ನ ದಬಾಯಿಸೋ ಶಕ್ತಿ ಇರೋ ಒಬ್ಬನೇ ವ್ಯಕ್ತಿ ಅಂದ್ರೆ ನರೇಂದ್ರ ಮೋದಿ..

ಅಭಿ ಅಂತಾರೆ...

ಚನ್ನಾಗಿದೆ!!!

kannada songs ಅಂತಾರೆ...

chennagide :)

ಪುಟ್ಟ ಅಂತಾರೆ...

@ಬ್ಲಾಗಿ thumba chennagi eliddira

Amar ಅಂತಾರೆ...

Appreciate BSY for his tough stands...He is the man, who has brought BJP to power in South India, not venkayya Naidu or Sushma Swaraj or Anath Kumar. Why should he say 'Yes' to everything what high command tells? He still demonstrates his courage, power even on the last day....unlike the congress state leaders who will beg if asked by high-command.
Very unfotunate that a leader who fought 40 yrs to come to power has to exit like this. May be it was money needed for elections which made him to turn a blind eye on Reddy brothers, who screwed up everything with support of their mother Sushma Swaraj

Kiran ಅಂತಾರೆ...

yes I agree, BSY is the MAN. All this would have been avoided had the BJP High Command(?) demonstared guts to throw Reddy's out when they revolted agaianst BSY. BSY took some bold steps then, but that old, useless man LK did nothing to solve the problem.Then there was reddy'd mother Sushma who gaurded Reddys. Now BSY is being made scapegoat.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails