ಡಬ್ಬಿಂಗ್ ಬೇಕೆನ್ನೋ ಫೂಲ್‍ಗಳು ಅರ್ಥ ಮಾಡ್ಕೋಬೇಕು - ಶಿವಣ್ಣ!


ಅಂತೂ ಕನ್ನಡ ಚಿತ್ರರಂಗ ಡಬ್ಬಿಂಗ್ ಎದುರಿಸೋ ಉದ್ದೇಶದಿಂದ ತನ್ನ ಮತ್ತೊಂದು ಅಸ್ತ್ರವನ್ನು ಬಿಟ್ಟಿರೋ ಹಾಗಿದೆ. ನಮ್ಮ ನೆಚ್ಚಿನ ಡಾ. ರಾಜ್‍ರ ದೊಡ್ಡಮಗನೂ ಸ್ವತಃ ನಟನೂ ಆಗಿರುವ ಶ್ರೀ ಶಿವರಾಜ್‍ಕುಮಾರ್ ಅವರು ಡಬ್ಬಿಂಗ್ ಬಗ್ಗೆ ತಮ್ಮ ಅಭಿಪ್ರಾಯಾನಾ ‘ಹೀಗೆ’ ಹೇಳಿದಾರೆ ಅಂತಾ ನಾಡಿನ ಖ್ಯಾತ ಚಲನಚಿತ್ರ ತಿಂಗಳ ಪತ್ರಿಕೆ ರೂಪತಾರಾ ಪ್ರಕಟಿಸಿದೆ. ಓದುಗರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದಂತಿರುವ ಈ ಸಂದರ್ಶನದಲ್ಲಿ ಡಬ್ಬಿಂಗ್ ಬಗ್ಗೆ "ಕನ್ನಡಕ್ಕೆ ಡಬ್ಬಿಂಗ್ ತರಬೇಕೆಂದು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಶಿವಣ್ಣ ಯಾಕೆ ಮಾತಾಡುತ್ತಿಲ್ಲ?" ಎಂದು ಕೇಳಲಾದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿ ಮತ್ತೂ ಮುಂದುವರೆಯುತ್ತಾ ಶಿವಣ್ಣ "ಡಬ್ಬಿಂಗ್ ಬೇಕು ಅಂತಾ ಒತ್ತಾಯ ಮಾಡ್ತಿರೋ ಫೂಲ್‍ಗಳು ಒಂದು ವಿಷಯ ಅರ್ಥ ಮಾಡ್ಕೋಬೇಕು. ನಮ್ಮ ಭಾಷೆ ಚಿತ್ರಗಳು ಬೇರೆ ಕಡೆ ಬಿಡುಗಡೆ ಮಾಡಲ್ಲ. ಹಾಗಿರುವಾಗ ಅವರ ಚಿತ್ರಗಳನ್ನು ನಾವು ಮೆರೆಸಬೇಕಾ. ಸ್ಯಾಟಲೈಟ್ ರೈಟ್‍ನಿಂದ ದುಡ್ಡು ಬರುತ್ತೆ ಅನ್ನೋ ಕಾರಣಕ್ಕೆ ಈ ಕೆಲಸ ಮಾಡಬೇಡಿ. ದುಡ್ಡು ಸಂಪಾದಿಸಬೇಕು ಅಂದ್ರೆ ನಿಯತ್ತಾಗಿರಬೇಕು. ಆಗ ದುಡಿದ ದುಡ್ಡು ಸಹಾ ಅರಗುತ್ತೆ. ಇದನ್ನು ನಾನು ಕನ್ನಡಿಗರ ಪರವಾಗಿ ಹೇಳ್ತಿದ್ದೇನೆ" ಎಂದಿದ್ದಾರೆ.

ರಿಮೇಕ್ ಬಗ್ಗೆ...

ಮತ್ತೊಂದು ಪ್ರಶ್ನೆ ರಿಮೇಕ್ ಬಗ್ಗೆ ಇದ್ದು ಹೀಗಿದೆ: ರಿಮೇಕ್‍ಗಳ ಬಗ್ಗೆ ನಿಮ್ಮ ಸದ್ಯದ ನಿಲುವೇನು?" (ಎರಡೂ ಪ್ರಶ್ನೆಗಳನ್ನು ಕೇಳಿರುವ ವಿಧಾನದಲ್ಲಿರೋ ವ್ಯತ್ಯಾಸ ಗಮನಿಸಿ. ಡಬ್ಬಿಂಗ್ ಬಗ್ಗೆ - ಯಾಕೆ ಸುಮ್ಮನಿದ್ದೀರಾ? ಎಂದಿದ್ದರೆ ರಿಮೇಕ್ ಬಗ್ಗೆ - ಸದ್ಯದ ನಿಲುವು ಕೇಳ್ತಿದಾರೆ. ಪಾಪ ಓದುಗರೇ ಕೇಳಿರೋ ಪ್ರಶ್ನೆಗಳಂತೆ ಇವು!). ಇದಕ್ಕೆ ಶಿವಣ್ಣ "ನಾನು ರಿಮೇಕ್ ಮಾಡುತ್ತಿಲ್ಲ. ಹಾಗಾಗಿ ಈ ಬಗ್ಗೆ ಮಾತನಾಡೋದು ತಪ್ಪಾಗಬಹುದು. ಸಿನಾಮಾನ ನಂಬಿ ಬದುಕೋ ಸಾಕಷ್ಟು ಜನ ಇದ್ದಾರೆ. ರಿಮೇಕೋ, ಸ್ವಮೇಕೋ ಸಿನಿಮಾಗಳು ಬರುತ್ತಿದ್ದರೆ ಮಾತ್ರಾ ಅವರೆಲ್ಲರ ಹೊಟ್ಟೆ ತುಂಬೋಕೆ ಸಾಧ್ಯ. ಆ ದೃಷ್ಟಿಯಿಂದ ಏನೂ ಹೇಳಲು ಸಾಧ್ಯವಿಲ್ಲ. ಇನ್ನು ನಾನಂತೂ ಸ್ವಮೇಕ್ ಮಾಡುತ್ತಲೇ ಇದ್ದೇನೆ. ಚಿತ್ರ ಹಿಟ್ ಆಯಿತೋ ಫ಼್ಲಾಪ್ ಆಗುತ್ತಿದೆಯೋ ಬೇರೆ ಮಾತು. ನನ್ನ ನಿರ್ಧಾರ ಮಾತ್ರಾ ಬದಲಾಗಿಲ್ಲ" ಎಂದಿದ್ದಾರೆ.

ಎರಡೂ ಉತ್ತರಗಳಲ್ಲಿರೋ ಅನುಕೂಲ ಸಿಂಧುತ್ವ ಗಮನಿಸಿದಿರಾ? ಇರಲಿ ಬನ್ನಿ ಈಗ ಶಿವಣ್ಣನವರನ್ನು ಮಾತಾಡಿಸೋಣ.

ಹಿರಿಯರು ಅಂದಿದ್ರೂ ಅಂತಾ...

ಹಿರಿಯರು ಡಬ್ಬಿಂಗ್ ಬೇಡಾ ಅಂದಿದಾರೆ ಅದಕ್ಕೆ ಬೇಡಾ ಅಂದುಬುಟ್ರೆ ಹೆಂಗೆ ಶಿವಣ್ಣಾ? ಹಿರಿಯರು ಬೇಡಾ ಅಂದಿದ್ದ ಸಂದರ್ಭ ಎಂಥದ್ದು? ಯಾಕೆ ಬೇಡಾ ಅಂದಿದ್ರು? ಇವತ್ತಿನ ಪರಿಸ್ಥಿತಿ ಹಂಗೇ ಇದೆಯಾ? ಇಷ್ಟಕ್ಕೂ ಆವತ್ತು ಹಿರಿಯರು ಬೇಡಾ ಅಂದಿದ್ದು ಸರೀನಾ ಅಂತಾ ಈಗಿನವರು ವಿಚಾರ ಮಾಡಬೇಕಲ್ವಾ? ಹಿಂದೆ ನಮ್ಮ ತಾತನ ಕಾಲದಲ್ಲಿ ಪ್ಯಾಂಟ್ ಹಾಕ್ಕೋಂಡ್ರೇ ಮೊಕಕ್ ಉಗೀತಿದ್ರು, ಪ್ಯಾಂಟ್ ಹಾಕ್ಕೋಬಾರ್ದು ಪಂಚೇ ಉಟ್ಕಳ್ಳಿ ಅಂತಿದ್ರು... ಈಗಲೂ ಹಂಗೇ ಮಾಡಬೇಕಾ? ಕಾಲಕ್ಕೆ ತಕ್ಕಂತೆ ಕುಣಿಯಬೇಕು ಅಂತಾ ಅಣ್ಣಾವ್ರೇ ಹೇಳಿಲ್ವಾ?

ಇದೇನು ಬೆದರಿಕೇನಾ ಶಿವಣ್ಣಾ?

ಇಷ್ಟಕ್ಕೂ ಈಗ ಜಬರ‍್‍ದಸ್ತಿ ಮಾಡ್ತಾ ಇರೋದು ಯಾರು? ಕಾನೂನು ಬಾಹಿರವಲ್ಲದ ಒಂದು ಕೆಲಸಾನಾ, ಕಾನೂನು ಬಾಹಿರವಾಗಿ ಬ್ಯಾನ್ ಮಾಡ್ತೀನಿ ಅನ್ನೋಕೆ ಚಲನಚಿತ್ರರಂಗವೇನು ಯಾರದೋ ಪಾಳೇಗಾರಿಕೇನಾ? ಡಬ್ಬಿಂಗ್ ಅವಶ್ಯಕತೆ ಇದೆಯೋ ಇಲ್ವೋ ಅಂತಾ ಹೇಳೋಕೆ ನಾನೂ ನೀವೂ ತಾನೇ ಏನು ಅಧಿಕಾರ ಹೊಂದಿದೀವಿ? ಈಗ ಪ್ರೇಕ್ಷಕರಾದ ನಾವು ಡಬ್ಬಿಂಗ್ ಬೇಕು ಅಂತಿದೀವಿ. ನಮ್ಮ ಬೇಡಿಕೆ ಪೂರೈಸಲು ಆಗುವವರು ಪೂರೈಸುತ್ತಾರೆ. ಯಾರಿಗೆ ಬೇಕೋ ಅವರು ಅಂಥಾ ಸಿನಿಮಾ ನೋಡ್ಕೋತಾರೆ. ಅಂಥಾ ಸಿನಿಮಾಗಳು ವ್ಯಾವಹಾರಿಕವಾಗಿ ಲಾಭ ಅನ್ಸುದ್ರೆ ಉಳೀತಾವೆ, ಇಲ್ದಿದ್ರೆ ಇಲ್ಲಾ. ಈಗ ಚಿತ್ರರಂಗದೋರು ತೆಗಿತಾ ಇರೋ ರಿಮೇಕುಗಳನ್ನು ನಾವು ತಡ್ಯಕ್ಕೆ ಬೀದಿಗಿಳೀತೀವಿ, ಯಾವ ಲೆವೆಲ್ಲಿಗಾದ್ರೂ ಇಳೀತೀವಿ ಅನ್ನೋಕಾಗುತ್ತಾ? ಹುಡುಗ್ರು ಹಿಟ್ ಆಗೋದಾದ್ರೆ ಸಂತೋಷ... ಎಲ್ಲೀ ತನಕ ಜನರಿಗೆ ಸಿನಿಮಾ ನೋಡೋ, ಗೆಲ್ಲಿಸೋ, ಸೋಲಿಸೋ ಸ್ವಾತಂತ್ರವಿದೆಯೋ ಅಲ್ಲೀ ತನಕ ಎಲ್ಲಾ ಸರೀನೆ. ಅದು ಬಿಟ್ಟು, ಇದುನ್ನಾ ತಡೀತೀವಿ, ಇದುನ್ನಾ ಬ್ಯಾನ್ ಮಾಡ್ತೀವಿ ಅಂತಾ ಅನ್ನೋಕೆ ತಮ್ಮದೇನು ಜನರಿಂದ ರಾಜ್ಯ ಆಳಕ್ಕೆ ಅಂತಾ ಆರಿಸಲ್ಪಟ್ಟ ಸರ್ಕಾರಾನಾ? ಅಷ್ಟಕ್ಕೂ ಈ ದೇಶದಲ್ಲಿ ಸಂವಿಧಾನ, ಕಾನೂನು ಅಂತಾ ಇರೋದು ತಮ್ಮ ಗಮನದಲ್ಲಿಲ್ವಾ? ಕಾನೂನು ಏನೇ ಇದ್ಕೊಳ್ಲಿ, ನಾವು ಬೀದಿಗೆ ಇಳಿದು ಹೋರಾಟ ಮಾಡ್ತೀವಿ ಅಂದ್ರೇನರ್ಥ? ಅಂದಹಾಗೆ ಯಾವ ಲೆವೆಲ್ಲಿಗೆ ಬೇಕಾದ್ರೂ ಇಳೀತೀವಿ ಅಂತೀರಲ್ಲಾ? ಇದೇನು ಬೆದರಿಕೇನಾ ಶಿವಣ್ಣಾ? ಇಂಥಾ ಬೆದರಿಕೆಯಿಂದಾ ಕನ್ನಡಿಗರಿಗೆ ತಮ್ಮ ನುಡಿಯಲ್ಲೇ ಮನರಂಜನೆ ಪಡೆದುಕೊಳ್ಳೋ ಹಕ್ಕನ್ನು ನಿರಾಕರಿಸೋದು ತಪ್ಪಲ್ವಾ?

ಕನ್ನಡತನಾ ಅಂದ್ರೆ...

ಇನ್ನು ನಮ್ಮಂಥಾ ಬರೀ ಕನ್ನಡ ಮಾತ್ರಾ ಗೊತ್ತಿರೋ ಕನ್ನಡಿಗರಿಗೆ ಇವರುಗಳ ಕನ್ನಡತನಾನೇ ಅರ್ಥವಾಗದು. ಕನ್ನಡದಲ್ಲಿ ಎಲ್ಲಾ ಭಾಷೆಯ ಚಿತ್ರ ನೋಡೋದು ಕನ್ನಡತನವೋ? ಕನ್ನಡಿಗರೆಲ್ಲಾ ಬೇರೆ ಬೇರೆ ಭಾಷೆಯ ಚಿತ್ರಗಳನ್ನು ಅವವೇ ಭಾಷೇಲಿ ನೋಡೋದು ಕನ್ನಡತನವೋ? ಬೇರೆ ಭಾಷೆ ಚಿತ್ರಗಳು ನಮ್ಮಲ್ಲಿ ಬಿಡುಗಡೆ ಆಗ್ತಿವೆ ಅದುಕ್ಕೆ ಡಬ್ಬಿಂಗ್ ಬೇಡಾ... ಕನ್ನಡದವುನ್ನ ಬೇರೆ ಕಡೆ ಬಿಡುಗಡೆ ಮಾಡಲ್ಲ, ಅದುಕ್ಕೆ ನಮ್ ಸಿನಿಮಾ ಡಬ್ ಆಗ್ಲೀ ಅನ್ನೋದು ಬೂಟಾಟಿಕೆ ಅನ್ಸಲ್ವಾ? ಕರ್ನಾಟಕದ ಆಚೆ ಇರೋ ಕನ್ನಡಿಗರು ಕನ್ನಡದಲ್ಲಿ ಸಿನಿಮಾ ನೋಡದೇ ಅವರಿರೋ ರಾಜ್ಯಗಳ ಭಾಷೇಲಿ ಡಬ್ ಆದ ರೂಪದಲ್ಲಿ ನಮ್ಮ ಸಿನಿಮಾ ನೋಡಲೀ ಅನ್ನೋದಾದರೆ, ಇದೇ ನ್ಯಾಯಾ ಪರಭಾಷಾ ಚಿತ್ರಗಳಿಗೂ ಅನ್ವಯವಾಗಲ್ವಾ? ಪರಭಾಷಾ ಚಿತ್ರಗಳನ್ನು ಅವವೇ ಭಾಷೇಲಿ ನೋಡಬೇಕು ಅನ್ನುವಂತೆ ‘ನಮ್ಮಲ್ಲಿ ಪರಭಾಷಾ ಚಿತ್ರಗಳು ಬಿಡುಗಡೆಯಾಗ್ತಿರುವಾಗ ಡಬ್ಬಿಂಗ್ ಯಾಕೆ?’ ಅನ್ನೋ ನೀವು, ಕನ್ನಡಿಗರೆಲ್ಲಾ ಪರಭಾಷೆಗಳನ್ನು ಕಲಿತುಕೊಂಡು ಆಯಾಭಾಷೆಯಲ್ಲಿ ಆಯಾ ಸಿನಿಮಾ ನೋಡಿ ಅನ್ನೋದಾಗಲೀ, ಭಾಷೆ ಬರದಿದ್ರೂ ಆ ಭಾಷೇಲೇ ನೋಡಿ ಅನ್ನೋದಾಗ್ಲೀ ನಿಮ್ಮ ಸ್ವಾರ್ಥದಿಂದ ಕನ್ನಡಕ್ಕೆ, ಕನ್ನಡಿಗರಿಗೆ ಮಾಡ್ತಿರೋ ಮೋಸ ಅಲ್ವಾ ಶಿವಣ್ಣಾ? ಇದುನ್ನಾ ಕನ್ನಡತನಾ ಅನ್ನಕ್ ಆದೀತಾ? ಆಯ್ತು.. ಕನ್ನಡಚಿತ್ರರಂಗದ ದೊಣೇನಾಯಕರೇ ಈಗ ಕೊರಿಯನ್, ಜಪಾನೀಸ್ ಸಿನಿಮಾಗಳು ಇಲ್ಲಿ ಬಿಡುಗಡೆ ಆಗ್ತಿಲ್ಲಾ... ಇವುನ್ನಾ ಡಬ್ ಮಾಡ್ಬೋದಾ?

ನಿಯತ್ತಿನ ಸಂಪಾದನೇ ಅಂದ್ರೆ...

ಯಾವುದೇ ವಿಷಯದ ಬಗ್ಗೆ ನಿಮಗಿಂತಾ ಬೇರೆಯಾದ ಅಭಿಪ್ರಾಯ ಹೊಂದಿರೋದು ಮೂರ್ಖತನಾ ಅನ್ನೋದು ಎಷ್ಟು ಸರೀ ಶಿವಣ್ಣಾ? ಇನ್ನು ಡಬ್ಬಿಂಗ್‍ನಿಂದಾ ಸಂಪಾದಿಸೋ ದುಡ್ಡು ನಿಯತ್ತಿನದಲ್ಲಾ ಅಂತೀರಲ್ಲಾ? ಇದೇ ಮಾತುನ್ನಾ ಫ್ರೇಮ್ ಟೊ ಫ್ರೇಮ್ ರಿಮೇಕ್ ಮಾಡೋ ಬಗ್ಗೆ ಯಾಕೆ ಹೇಳಲ್ಲಾ? ಇತ್ತೀಚಿಗೆ ನಿಮ್ಮದೇ ಕುಟುಂಬದ "ಜಾಕಿ" ಬೇರೆ ಭಾಷೆಗೆ ಡಬ್ ಆದಾಗ ಹೆಮ್ಮೆ ಪಟ್ಕೊತೀರಲ್ಲಾ? ಅದ್ಯಾವ ಸೀಮೆ ನ್ಯಾಯಾ? ಹಾಗೆ ಬೇರೆ ಭಾಷೆಗೆ ಡಬ್ ಮಾಡಿ ಸಂಪಾದಿಸೋ ದುಡ್ಡು ನಿಯತ್ತಿಂದಲ್ಲಾ ಅನ್ನಕ್ ಆಗುತ್ತಾ? ಕಾನೂನು ಬಾಹಿರವಲ್ಲದ ಮಾರ್ಗದಲ್ಲಿ ಸಂಪಾದಿಸೋ ಎಲ್ಲಾನೂ ನಿಯತ್ತಿನ ಸಂಪಾದನೇನೇ ಅಲ್ವಾ ಶಿವಣ್ಣಾ?

ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ?

ಅಣ್ಣಾವ್ರು, ಪ್ರೇಕ್ಷಕರನ್ನು ಅಭಿಮಾನಿ ದೇವರುಗಳು ಅಂತಿದ್ರೂ... ತಾವು ಫೂಲ್‍ಗಳು ಅಂದ್ರೀ ಅಂತಿದೆ ರೂಪತಾರಾ?ನಂಬಕ್ಕಾಗ್ತಿಲ್ಲಾ... ಹಿರಿಯರು ಡಬ್ಬಿಂಗ್ ಬೇಡಾ ಅಂದ್ರು ಅದ್ಕೆ ಬೇಡಾ ಅಂತಾ ಆ ಪಾಟಿ ಗೌರವಾ ಕೊಡ್ತಿರೋ ನೀವು, ನಿಮ್ಮದಲ್ಲದ ಅಭಿಪ್ರಾಯ ಇಟ್ಕೊಂಡೋರ ಬಗ್ಗೆ ಹಿಂಗೆಲ್ಲಾ ಅನ್ನೋದನ್ನು ಹಿರಿಯರು ಮೆಚ್ಚುತ್ತಿದ್ರು ಅಂತೀರಾ ಶಿವಣ್ಣಾ?

33 ಅನಿಸಿಕೆಗಳು:

Repudiated Brilliance ಅಂತಾರೆ...

ಬಹಳ ಚೆನ್ನಾಗಿ ಹೆಳಿದ್ದೀರಾ ಗುರು. ಸೂಪರ್. ತಮ್ಮ ಲಾಭಗಳನ್ನ ಕಾಯ್ದು ಕೊಳ್ಳೊಕೆ ಕನ್ನಡದ ಹೆಸರನ್ನ ಮಧ್ಯ ಯೆಳೆಯೊದೆ ಇವರುಗಳ ಕಾರ್ಯತನ್ತ್ರ ಆಗ್ಬಿಟ್ಟಿದೆ. ಅನ್ಯ ರಾಜ್ಯಗಳಲ್ಲಿ ನಮ್ಮ ಚಿತ್ರಗಳು ಯಾಕೆ ತೊರಿಸೊಲ್ಲ ಅನ್ದ್ರೆ ಅದಕ್ಕೆ ಕಾರಣ ನಮ್ಮ ಚಿತ್ರಗಳು ಅಲ್ಲಿ ಬಿಡುಗಡೆ ಅಗೊಕ್ಕೆ ಲಾಯಕ್ ಇಲ್ಲ ಅನ್ತ. ಚಲನಚಿತ್ರಗಳ ಮಟ್ಟ ಏರಿಸಿದರೆ ನೋಡೋ ಜನ ಸಿಗ್ತಾರೆ. for example, ತಮಿಳುನಾಡಲ್ಲಿ ತಮಿಳು ಚಿತ್ರದ ರೀಮೇಕ್ ಆಗಿರುವ ಕನ್ನಡ ಚಿತ್ರವನ್ನ ಜನ ಯಾಕೆ ನೋಡ್ತಾರೆ ಹೇಳಿ ಗುರು..

Anonymous ಅಂತಾರೆ...

Shivraj words proves that he is only concern about his income from the industry and least bothered about the language. If shivraj says that he cant tell anything about the remakes because he is not doing the remakes. Then it is fair for him to be silent on dubbing. because he is not doing the dubbing also. Nobody forcing him to make or watch the dubbing movies. I expected matured words from him. But he is proved that he is not different than others in the film industry. Deejay

Prashant ಅಂತಾರೆ...

ಅವಿವೇಕತನದಿಂದ ಉತ್ತರ ಕೊಟ್ಟ ಹಾಗಿದೆ ಶಿವಣ್ಣ ಅವ್ರು! He needs to be reminded that India still is a democratic country!

@En Guru Coffee Aaytha: Is it possible for you guys to get an interview with him on this topic? If so, it'd be very good.

ಗಿರೀಶ್ ಕಾರ್ಗದ್ದೆ ಅಂತಾರೆ...

ತುಂಬಾ ಚೆನ್ನಾಗಿ ಪಂಚ್ ಕೊಟ್ಟಿದೀಯ ಗುರು...
ಅಣ್ಣಾವ್ರು ಕನ್ನಡದ ಮೇಲಿನ ಪ್ರೀತಿಗಾಗಿ..ಕನ್ನಡ ಸಿನೆಮಾ ಇನ್ನು ಸರಿಯಾಗಿ ಬೇರು ಬಿಟ್ಟಿರದ ಸಮಯದಲ್ಲಿ ಡಬ್ಬಿಂಗ್ ಬೇಡ ಅಂದಿದ್ರು..ಅವತ್ತಿಗೆ ಅದು ಸರಿ. ಆದರೆ ಇಂದಿನ ಪರಿಸ್ತಿತಿ ಹಾಗಿಲ್ಲ..ಅಣ್ಣಾವ್ರಿಗೆ ಅಂದು ಇದ್ದದ್ದು..ಸಿನೆಮಾ ರಂಗದ ಮೇಲಿನ ಅನನ್ಯ ಕಾಳಜಿ..ಆದರೆ ಇಂದಿನವರಿಗೆ ಇರೋದು..ಸ್ವಂತ ಹಣದ ಮೇಲಿನ ಕಾಳಜಿ..ಇದು ನ್ಯಾಯವು ಅಲ್ಲ..ನಿಯತ್ತೂ ಅಲ್ಲ. ಕಾಲಕ್ಕೆ ತಕ್ಕಂತೆ ಕೋಲ ಕಟ್ಟಬೇಕು..ಇದನ್ನು ಸಿನಿಮಾ ರಂಗ ಅರ್ಥ ಮಾಡಿಕೊಳ್ಳಲಿ..ದೂರಾಲೋಚನೆ ಮಾಡಲಿ...ಇಲ್ಲದಿದ್ದರೆ..ಮುಂದೆ ಕನ್ನಡ ಸಿನಿಮಾ ರಂಗಕ್ಕೆ ಅಪಾಯ ಇದೆ.

amjadkhan ಅಂತಾರೆ...

kannada cinema rangadawaru ide dhorane yannu munduvaresikondu hodare, kannada cinemagalige bhavishya viruvudilla. bere bhashegala cinemagallu yavude mujugaravillade remake maduvavarige dubbing maduvudu mathra tappagi kanuthiruvudu durantha.

Srikanth Manjunath ಅಂತಾರೆ...

ಕೆಟ್ಟದಾಗಿ "ಒಳ್ಳೆಯ" ಪರಭಾಷೆ ಸಿನಿಮಾ ರೀಮೆಕ್ ಮಾಡೋದಕ್ಕಿಂತ...ಡಬ್ಬಿಂಗ್ ವಾಸಿ...ಇಲ್ಲಿ ಚಿತ್ರರಂಗ ಅಳಿವು ಉಳಿವಿನ ಹಂತದಿಂದ ತುಂಬಾ ದೂರ ಬಂದಿದೆ...ಬರಿ ಉಪಗ್ರಹ ಹಕ್ಕುಗಳಿಗಾಗಿ ಸಿನಿಮಾ ಮಾಡುವ, ಪ್ರಚಾರದ ತೆವಲಿಗಾಗಿ ಚಿತ್ರ ಮಾಡುವ ಮಂದಿಗಳಿಂದ ಚಿತ್ರರಂಗ ಯಾವತ್ತು ಉದ್ದಾರ ಆಗೋಲ್ಲ..ಇದನ್ನ ಅವಕಾಶವಾದಿ ಚಿತ್ರಕೂಟದ ಮಂದಿಗೆ ತಿಳಿಯುವಂತೆ ಹೇಳ್ಬೇಕು...ಈ ನಿಟ್ಟಿನಲ್ಲಿ ನಿಮ್ಮ ಲೇಖನ ಅರ್ಥಪೂರ್ಣ ಹಾಗು ಅರ್ಥಗರ್ಭಿತ

Anonymous ಅಂತಾರೆ...

ಜಬರ್ದಸ್ತಿ ಮಾಡ್ತಿರೋದು ನೀವು/ಸಿನಿಮಾ ರಂಗದೋರು ಶಿವಣ್ಣ. ಪ್ರೇಕ್ಷಕರ ಹಕ್ಕನ್ನು ಕಿತ್ತು ಕೊಂಡಿರೋರು ನೀವು ಮೇಲಾಗಿ ನಮ್ಮನ್ನೇ ನಿಯಮವನ್ನ ಉಲ್ಲಂಘನೆ ಮಾಡ್ತಾ ಇದೀವಿ ಅಂತಿದಿರಾ ಇದ್ಯಾವ ಲೆಕ್ಕ ಶಿವಣ್ಣ. ಗುರು ಒಳ್ಳೆಯ ಲೇಖನ.

ನಿಮ್ಮ ಗೆಳೆಯ.
ಗಿರೀಶ್ ದೇಶಿ

chandramouli ಅಂತಾರೆ...

Even I support Dubbing Policy...if Kannada film associations start protesting,we also protest by stopping watching kannada movies..

Anonymous ಅಂತಾರೆ...

ಹಾಲಿವುಡ್ ಮತ್ತಿತರ ಚಿತ್ರಗಳನ್ನು ಕನ್ನಡಕ್ಕೆ ಅನುವಾದಿಸೋದ್ರಿಂದ ಕನ್ನಡ ಭಾಷೆ ಬೆಳೆಯುತ್ತೆ. ನೂರಾರು ಡಬ್ಬಿಂಗ್ ಕಲಾವಿದರುಗಳಿಗೂ ಕೆಲಸ ಸಿಗುತ್ತೆ. ಬರೀ ನಾಯಕ ನಟರು ಮಾತ್ರ ದುಡ್ಡು ಮಾಡಬೇಕಾ? ಡಬ್ಬಿಂಗ್ ಕಲಾವಿದರೂ ಸ್ವಲ್ಪ ದುಡ್ಡು ಮಾಡಿಕೊಳ್ಳಲಿ.

Shivayogi ಅಂತಾರೆ...

ಡಬ್ಬಿ೦ಗ ಸಮರ್ಥಿಸುವವರನ್ನು ಫೂಲ್ ಗಳೆ೦ದ ....ಶಿವಣ್ಣನಿಗೆ ಆರು ಪ್ರಶ್ನೆಗಳು..........

1) ನಿಮ್ಮ ಭಾಷೆಯ (ಅ೦ದರೆ ಕನ್ನಡ) ಚಿತ್ರಗಳನ್ನು ಬೇರೆ ಕಡೆ ಯಾಕೆ ಬಿಡುಗಡೆ ಮಾಡಲ್ಲ ಶಿವಣ್ಣ ?.... ಒ೦ದು ಅದು ನಿಮ್ಮ ಸೋ೦ಬೇರಿತನ ವಾಗಿರಬೇಕು...ಅಥವಾ ನಿಮ್ಮ ಚಿತ್ರಗಳು ಅವರ ಚಿತ್ರಗಳಿಗಿ೦ತ ಕಳಪೆ ಗುಣಮಟ್ಟವಿದ್ದು ಅಲ್ಲಿನ ಜನರಿರಲಿ.. ಅಲ್ಲಿರುವ ಕನ್ನಡಿಗರೂ ಅವನ್ನು ನೋಡಲ್ಲ ಎ೦ಬ ಕೀಳರಿಮೆ ಇರಬೇಕು. ಹೈದಾರಾಬಾದ / ಚೈನ್ನೈ ನಲ್ಲಿ ಕನ್ನಡಿಗರಿಲ್ಲವೇ ? ನಮ್ಮ ಚಿತ್ರ ಅಲ್ಲಿ ಸುಗಮವಾಗಿ ಓಡಲು ಅವಕಾಶ ಮಾಡಿ ಕೊಟ್ಟರಷ್ಟೇ ನಾವು ಅವರ ಭಾಷಾ ಚಿತ್ರ ಗಳನ್ನು ಇಲ್ಲಿ ಬಿಡುವುದು ಎ೦ದು ಸಾರುವ ಧೈರ್ಯವಿದೆಯಾ...?

2) ಈಗ ಕನ್ನಡಿಗರು ತೆಲಗು / ತಮಿಳು ಚಿತ್ರ ಗಳನ್ನು ಮೆರೆಸುವುದು ಏನು ಕಡಿಮೆ ಇದೆಯಾ.....ಬೆ೦ಗಳೂರಿ ನಲ್ಲಿ ರಜನೀ ಕಾ೦ತ ಚಿತ್ರ ಬಿಡುಗಡೆಯಾಗುವಾಗ ಕನ್ನಡ ಚಿತ್ರ ನಿರ್ಮಾಪಕರು ನಡಗುವದೇಕೆ ?, ಕರ್ನಾಟಕದ ಮೊಲೆ ಮೊಲೆಗಳಲ್ಲಿ ಈಗ ಅಚ್ಚ ಕನ್ನಡಿಗರೇ ತೆಲಗು ಚಿತ್ರಗಳನ್ನು ತಲೇ ಮೇಲಿಟ್ಟು ಮೆರೆಸುವುದನ್ನು ಕ೦ಡಿಲ್ಲವೇ, ಅಥವಾ ಜಾಣ ಕುರುಡಾ ?

3) ಸಾವಿರಾರು ಕಾರ್ಮಿಕರು ಕೆಲಸ ಕಳೆದು ಕೊಳ್ಳುತ್ತಾರೆ ಎನ್ನುತ್ತೀರಲ್ಲ....ಯಾರು ಈ ಕಾರ್ಮಿಕರು.....ಕೇವಲ ವಜ್ರೇಶ್ವರಿಯವರಾ...? ಅಥವಾ ರಿಮೇಕ್ ಚಿತ್ರಗಳನ್ನೇ ಹಾಸಿ ಹೊದ್ದು ಮಲಗಿರುವ ಇತರ ಬೆರಳೆಣಿಕೆಯ ನಾಯಕ ನಟರಾ ?.....ಕನ್ನಡದ ಗಾಯಕರು / ಕನ್ನಡ ನಾಯಕ ನಟಿಯರೂ ಕಾರ್ಮಿಕರೇ ಅಲ್ಲವೇ...? ನಿಮ್ಮ ಚಿತ್ರಗಳಿಗೆ ಪರಭಾಷಾ ನಾಯಕಿಯರೇ ಬೇಕು, ನಿಮ್ಮ ಹಾಡು ಹಾಡಲು ಸೋನು ನಿಗಮ್/ ಕುನಾಲ್ ಗಾ೦ಜಾವಾಲಾ/ ಕೈಲಾಶ್ ಖೇರ್ ಬೇಕು....ಮನು / ರಾಜೇಶ ಕ್ರಿಷ್ಣ / ನಿನ್ನ ಕೋಲು ಮ೦ಡೆ ಜ೦ಗಮ ಹಾಡನ್ನು ಅಮರ ಗೊಳಿಸಿದ ಶಾಸ್ತ್ರಿ ...ಇವರು ಕಾರ್ಮಿಕರಲ್ಲವೇ ? ಇವರ ಬಗ್ಗೆ ಕಾಳಜಿ ಇಲ್ಲವೇ ? ನಿನ್ನ ೧೦೦ ನೇ ಚಿತ್ರ “ ಜೋಗಯ್ಯ “ ಚಿತ್ರದ ಡಬ್ಬಿ೦ಗ್/ ಮಿಕ್ಸಿ೦ಗ್ ಕಾರ್ಯ ಚನ್ನೈನಲ್ಲೇಕೆ ನಡೆದಿದೆ ಶಿವಣ್ಣ...? ...ಅವತಾರ್ ನ೦ತಹ ಹಾಲಿವುಡ್ ಚಿತ್ರಗಳ ಸ್ಪೇಶಲ್ ಎಫೆಕ್ಟ ಕೆಲಸ ಮಾಡಿದ ಬೆ೦ಗಳೂರಿನ ಕಾರ್ಮಿಕರು (ತ೦ತ್ರಜ್ನ್ಯರು ) ನೆನಪಾಗಲಿಲ್ಲವೇ ?

4) “ ಜಾಕಿ “ ಯ೦ತಹ ಯಶಸ್ವೀ ಕನ್ನಡ ಚಿತ್ರ ಕನ್ನಡ ಭಾಷೆ ಯಲ್ಲಿದ್ದರೂ ಅದು ಹೈದಾರಾಬಾದ್ ನಲ್ಲಿ ( ಅಲ್ಲಿರುವ ಕನ್ನಡಿಗರು ಮಾತ್ರ ನೋಡಿದರೂ ) ೧೦೦ ದಿನ ನಡೆಯ ಬೇಕಾಗಿತ್ತು...ಆದರೆ ಅವರು ಮಾಡಿದ್ದೇನು ? ಅದನ್ನು ಎರಡು ವಾರಕ್ಕೇ ಕಿತ್ತು ಹಾಕಿ..ಅದರ ತೆಲಗು ಡಬ್ಬಿ೦ಗ ಮಾಡಿ ಅದನ್ನು ಅವರೇ ಬಿಡುಗಡೆಮಾಡಿ ದುಡ್ದು ಕೊಳ್ಳೇ ಹೊಡೆದರು ಇದಲ್ಲವೇ ಭಾಷಾಭಿಮಾನ ?.

5) ನಿಮ್ಮ ತ೦ದೆ ಡಾ. ರಾಜ್ ೧೦೦ ನೇ ಚಿತ್ರಕ್ಕೆ “ ನಾನೇ ರಾಜ ಕುಮಾರ ...ಕನ್ನಡ ತಾಯಿಯ ಪ್ರೇಮದ ಕುವರ “ ಎ೦ದು ಹಾಡಿ ಕುಣಿದರು...೧೫೦ ನೇ ಚಿತ್ರಕ್ಕೆ “ ನಾವಾಡುವ ನುಡಿಯೇ ಕನ್ನಡ ನುಡಿ “ ಎ೦ದು ಹಾಡಿ ಕನ್ನಡಿಗರ ಬಾಯಲ್ಲಿ ಆ ಹಾಡು ಇ೦ದಿನವರೆಗೂ ನಲಿಯುವ೦ತೆ ಮಾಡಿದರು..೨೦೦ ನೇ ಚಿತ್ರಕ್ಕೆ ..” ದೇವತಾ ಮನುಷ್ಯ “ನೇ ಆದರು. ಯಾಕೆ೦ದರೆ ಅವರಿಗೆ ತಮ್ಮ ಈ ಮೈಲಿಗಲ್ಲು ಚಿತ್ರಗಳು ನಮ್ಮ ಭಾಷೆ, ಸ೦ಸ್ಕ್ರುತಿ, ಅಭಿರುಚಿ, ಮತ್ತು ಜನರ ನಿರೀಕ್ಷೆಗಳನ್ನು ಹುಸಿಗೊಳಿಸಬಾರದೆ೦ಬ ಬದ್ದತೆ ಯಿತ್ತು, ಆದ್ದರಿ೦ದಲೇ ಅವರು ಕನ್ನಡದ ಪರವಾಗಿ ಮತ್ತು ಡಬ್ಬಿ೦ಗ ವಿರುದ್ದವಾಗಿ ಗುಟುರು ಹಾಕಿದಾಗಲೆಲ್ಲ ೫ ಕೋಟಿ ಕನ್ನಡಿಗರು ಅವರ ಜೊತೆ ದನಿಗೂಡಿಸಿದರು...ಆ ಬದ್ದತೆ, ಸಾಮರ್ಥ್ಯ ನಿನಗಿದೆಯಾ ?

6) ಇನ್ನು ಕನ್ನಡಿಗರು ಕನ್ನಡ ಚಿತ್ರರ೦ಗದ ಬಗ್ಗೆ ಯಾಕೆ ದಯೆ / ಕನಿಕರ ತೋರಬೇಕು...ವಾರಕ್ಕೆ ಮೂರು.. ಒ೦ದು ವಾರ ಕೂಡ ಓಡದ ಕಳಪೇ ಮಾಲುಗಳನ್ನು ಕನ್ನಡಿಗರ ಮೇಲೆ ಹೇರುತ್ತಿರುವುದಕ್ಕಾ ? ಕನ್ನಡ ಭಾಷಾಭಿಮಾನಕ್ಕೆ ಕಿ೦ಚಿತ್ತೂ ಕೊಡುಗೆ ನೀಡಲಾಗದ ಕಳಪೇ ಚಿತ್ರಗಳನ್ನು ಯಾರಿಸುತ್ತಿರುವುದಕ್ಕಾ ?...ಅಥವಾ ತೆಲಗು / ತಮಿಳು ಚಿತ್ರಗಳ ವಿತರಣಾ ಹಕ್ಕನ್ನು /ರಿಮೇಕ್ ಹಕ್ಕನ್ನು ಪೈಪೋಟಿ ಯಿ೦ದೆ೦ಬ೦ತೆ ತ೦ದು ಕರ್ನಾಟಕದ ಮೊಲೆ ಮೊಲೆಗಳಲ್ಲಿ ತಲುಪಿಸಿ ಕನ್ನಡ ತಾಯಿಯ ಸೇವೆ ಮಾಡುತ್ತಿರುವ ನಿನ್ನ ಆಪ್ತ ಮಿತ್ರ ರಾದ “ ರಾಕ್ ಲೈನ್ “ ಮತ್ತು “ ಕೋಟಿ ರಾಮು “ ಗಳು ಕನಿಕರಕ್ಕೆ ಅರ್ಹರೇ...? ಇವರ ಈ ಕನ್ನಡ ಸೇವೆಯನ್ನು ವಿರೋಧಿಸುವ ಬಗ್ಗು ಬಡಿಯುವ ಸಾಮರ್ಥ್ಯ ನಿನಗಿದೆಯೇ ?. ಡಾ. ರಾಜ್ ಇದ್ದಾಗ ಬಾಲಮುದುರಿಕೊ೦ಡಿದ್ದ ಇವರು ಈಗ ಬಾಲ ಬಿಚ್ಚಿದ್ದು ಏನನ್ನು ತೋರಿಸುತ್ತದೆ ಶಿವಣ್ಣ ........?

ನಿನ್ನ ಅಪ್ಪಟ ಅಭಿಮಾನಿಯಾಗಿದ್ದೂ ನಿನಗಿ೦ಥ ಪ್ರಶ್ನೆಗಳನ್ನು ಕೇಳಬೇಕಾಗಿ ಬ೦ದದ್ದು ನನ್ನ ದೌರ್ಭಾಗ್ಯವೇ ಸರಿ......

Anonymous ಅಂತಾರೆ...

Can any one tell me how many Kannada movies are available in BluRay(High Defination)? None
Why cant we get kannada movies in bluray? No one takes the extra burden of releasing it.
You would have noticed whenever you go to the TV show room, the sales person to give a high def demo puts other regional movies bluray dvds(specially shivaji tamil,magadheera telugu)there is no kannada movies to be shown, Why? Because there is no quality? We do make good movies no doubt about that, why cant you market it? Whats wrong in dubbing?
You can see on the torrents, you get harry potter and other english movies in tamil language, their language keeps growing, our language keeps going down. Its all because of some idiots in the industry.
I am sorry to post it as anonymous.....

Anonymous ಅಂತಾರೆ...

We do need dubbing, i would like to watch the English high definition movies in Kannada, you guys cant give a high definition releases for sure(DVD or CD)then why take away the rights.

hyderabad kannadigaru ಅಂತಾರೆ...

tantragnaanada jotege change aagade iruva KFI tamma swarthakkoskara prekshakaranna avamanisuttiddaare. Dubing beke beku. Adannu beda annuavavru kannadigare alla.

ಹರ್ಷ ಅಂತಾರೆ...

ರೀಮೆಕ್ ಸಿನಿಮಾ ನೋಡಿ ಸಾಕಾಗಿದೆ, ಸ್ವಮೇಕ್ ಕೆಲವು ಚಿತ್ರಗಳು ಚೆನ್ನಾಗಿದೆ ಮತ್ತು ಅದೇ ಸಾಕು ಎನ್ನಲಾಗುವುದಿಲ್ಲ ಪ್ರೇಕ್ಷಕರಾಗಿ ನಮ್ಮ ನಿಲವು ಖಂಡಿತ ಅವಶ್ಯಕತೆ ಇದೆ, ಅವರು ನಟರು ಎಂದ ಮಾತ್ರಕ್ಕೆ ಅವರ ಮಾತೆ ಅಂತಿಮವಾಗಲಾರದು,
ಇವರು ಕಾರ್ಮಿಕರ ಕಷ್ಟಕ್ಕೆ ಆಗುವುದೆ ಆದರೆ ಡಬ್ಬಿಂಗ್ ಗೆ ವಿರೋದ ವ್ಯಕ್ತಪಡಿಸುವುದು ಸರಿಯಲ್ಲ, ಜೋಗಯ್ಯ ಬೇರೆ ಬಾಷೆಗಳಲ್ಲಿ ಡಬ್ಬಾದರೆ ಇವರು ಬೇಡಾ ಅನ್ನುತ್ತಾರಾ?? ಖಂಡಿತ ಇಲ್ಲ, ಸುಮ್ಮನೆ ಅವರಿಗನ್ನಿಸುವುದನ್ನು ಹೇಳುವುದಲ್ಲ, ಕನ್ನಡಪರ ಸಂಘಟನೆಗಳಲ್ಲಿ ಬಂದು ವಾದಕ್ಕೆ ಕುಳುತುಕೊಳ್ಳಲಿ ಆಮೇಲೆ ಬೇರೆ ವಿಷಯ..

lokesh ಅಂತಾರೆ...

ಶಿವಣ್ಣ ನಿಮ್ಮ ಬ್ಯಾನರ್ ನಲ್ಲಿ ಮಗಧೀರ ,2012 , ರೋಬೋಟ್ , ಹ್ಯಾರಿ ಪಾಟರ್ ,ಸಿನಿಮಾ ಗಳನ್ನು ಮಾಡಿ ಕರ್ನಾಟಕದ ಜನರಿಗೆ ತೋರಿಸಿ ಹಾಗ ನಾವು ನಿಮ್ಮ ಜೊತೆ ಹೋರಾಟಕ್ಕೆ ಬರ್ತಿವಿ.

ಕರ್ನಾಟಕ ಚಲನಚಿತ್ರ ಮಂಡಳಿಗೆ ತಾಕತ್ ಇದ್ದರೆ ಡಬ್ಬಿಂಗ್ ನಿಷೇದ ಮಾಡಿದ್ದೀವಿ ಅಂತ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ನಿರ್ಣಯ ತಗೊಂಡು ಪತ್ರಿಕೆಯವರನ್ನು ಕರೆಸಿ ಸಾರ್ವಜನಿಕವಾಗಿ ನಿಷೇದ ಮಾಡಿದ್ದೀವಿ ಅಂತ ಹೇಳಲಿ.

ಅವರು ಆ ರೀತಿ ಮಾಡಿದರೆ ಅವರು ಪತ್ರಿಕೆ ಹೇಳಿಕೆ ಕೊಟ್ಟಿದ ಮಾರನೆ ದಿನಾನೆ ಕರ್ನಾಟಕದಲ್ಲಿ ಡಬ್ಬಿಂಗ್ ಕಾನೂನು ರೀತಿಯಲ್ಲಿ ಜಾರಿಗೆ ಬರೋತರಾ ಮಾಡ್ತಿವಿ.

Prakash Adagoor ಅಂತಾರೆ...

in karnataka most of tamil and english movies releasing in telugu version..people use to see in telugu..telugu language getting popular in karnataka..not kannada..if its remains same means all ppl will get diverted to telugu..no body will see kannada movie..current situation around 40% of people are not watching kannada movies..think as kannsdigas.

MUTHURAJU.T ಅಂತಾರೆ...

Dubbing bandre matra kannada uliyate ...ila andre ila ...tamilina endiran ...kannadali dub age release adre..ilriuva tamiliana kuda adane nodabeku..aga avrige kannada bhaseya parichayavagute...iladidre ..avaru kannada cinema nodala ..nama kanadigaru tamil cinema nodi tamil matanadodana kalitare aste....ega uttara karnatakadali..telugu ..cinema ...bhala ..eve ..so alina janake telugu parichayavgute...nantara adake ..adict agutare...adra badalu nivu ade cinemana kannadali torsi..aga kannada uliyute...ila andre...kannada mayavgute....

MUTHURAJU.T ಅಂತಾರೆ...

Dubing beke beku. Adannu beda annuavavru kannadigare alla.....idu satya shivana .........Dubbing bandre matra kannada cinema uliute ...kannad cinemagalige theater sigute........ila didre..bangalore ninda kannada maya ...adualade...nivu..kannada kalavidaru...( gotila nima mathru bhase kannada /teluhgu /tamil /english )yake andre nivu kannada bittu..bere bhaseyali setnali ...tv interviewnali matanadodu jasti..bere bhaseyali..alva....inu imukyavada visaya andre..studiodali yaradru kannadigaru ..idara antha huduka beku...kannada cinema set nali telugu /tamilina mate jasti..elidare swami kannadigaru...adake...navu dubbing cinemane kannadadali nodona original cinema ban modona ....aga tamilnava /teluginava / hindiyavanu kuda kannadave nodabeku...sarina tappa.............sariyagi yocisi helli ..kannadigare

sandeep vb ಅಂತಾರೆ...

ಸೂಪರ್ ಗುರು..... ಕುಣಿಯೋಕೆ ಬರ್ದೆ ಇರೊರು ನೆಲ ಡೊ೦ಕು ಅ೦ದ್ರ೦ತೆ..! DUBBING ಬ೦ದ್ರೆ..... ರಜನಿ ಮಾಡೋ ಉಪೇ೦ದ್ರ್ ಸೂಪರ್ ಥರ, ಕೆ೦ಪೇಗೌಡ ಮಾಡೋ ಸುದೀಪ ವಿಷ್ಣುವರ್ಧನ ಥರ, ಪೊರ್ಕಿ ಮಾಡೋ ದರ್ಶನ ಸಾರಥಿ ಥರ, ಹುಡುಗರು ಮಾಡೋ ಪುನೀತ ಜಾಕಿ ಥರ, ಕಳ್ಳ ಮಳ್ಳ ಸುಳ್ಳ ಮಾಡೋ ರವಿಚ೦ದ್ರನ ಮಲ್ಲ ಥರ, ಮದುವೆ ಮನೆ ಮಾಡೋ ಗಣೇಶ ಗಾಳಿಪಟ ಥರ, ಶೈಲೂ ಮಾಡೋ ಕಲಾಸಾಮ್ರಾಟ ವೀರಪ್ಪ ನಾಯಕ ಥರ, ಯೋಧ ಮಾಡೋ ಓಂ ಪ್ರಕಾಶ ಎಕೆ೪೭ ಥರ ಚಲನಚಿತ್ರ ಗಳನ್ನು ಮಾಡ್ತರೆ..... ಕನ್ನಡದಲ್ಲಿ ಪ್ರತಿಭೆಗಳಿಗೇನು ಕಮ್ಮಿ ಇಲ್ಲ.... ಆದರೆ ಆಲಸ್ಯ. ಯೋಗರಜ್ ಭಟ್, ಉಪೇ೦ದ್ರ, ಸೂರಿ, ಅನ೦ತ್ ನಾಗ್, ರ೦ಗಾಯಣ, ತಾಳೀಕೋಟೆ, ನಾಗಾಭರಣ, ನಾಗತಿಹಳ್ಳೀ, S.V ರಾಜೆ೦ದ್ರ ಸಿ೦ಗ್ ಬಾಬು, ದಿನಕರ್ ತೂಗುದೀಪ್, ಯುವ ಪ್ರತಿಭೆ ಪವನ್, ವಿ.ಹರಿಕ್ರಿಶ್ಣ ಹೀಗೆ ಹಲವಾರು ಮ೦ದಿ. ಇ೦ದು INDUSTRY ಶ೦ಕರ್ ನಾಗ್, ಕಾಶಿನಾತ್, ಪುಟ್ಟಣ ಕಣಗಲ್ ಇ೦ತವರ ಹಾದಿಯಲ್ಲಿ ನಡೆದು ಬ೦ದಿದ್ದರೆ, ಯಾವ BOLLYWOOD ಗೇನು ಕಮ್ಮಿ ಇರ್ತಇರಲಿಲ್ಲ. ಲಾಯಕ್ಕ್ ಇಲ್ದೇ ಇರೋರು ಎಲ್ಲ HERO'ಗಳಾದ್ರೆ, INDUSTRY ಎಕ್ಕುಟ್ಟೋಗುತ್ತೆ "ಶಿವನೇ".... ನಮ್ಗೆ FOOL ಅನ್ಬೇಡ.. ಅಭಿಮಾನಿಗಳು ಚಪ್ಪಾಲೆ ಹೊಡಿದಿದ್ರೆ ಇವತ್ತು ಪುಟ್ಟ ಸ್ವಾಮಿ ಶಿವರಾಜ್ ಕುಮಾರ್ ಆಗ್ತಾ ಇರ್ಲಿಲ್ಲ, ನಿಮ್ಮ ಹೆಸರಾ೦ತ ವಜ್ರೇಶ್ವರೀ ಕ೦ಬೈನ್ಸ್ ನಿಮ್ಮ ಕುಟು೦ಬಕ್ಕೆ 80 ಚಲನಚಿತ್ರ ಗಳನ್ನು ಮಾಡಕ್ಕೆ ಆಗ್ತಾ ಇರ್ಲಿಲ್ಲ..........

Som ಅಂತಾರೆ...

ಶಿವಣ್ಣ "ಡಬ್ಬಿಂಗ್ ಬೇಕು ಅಂತಾ ಒತ್ತಾಯ ಮಾಡ್ತಿರೋ ಫೂಲ್‍ಗಳು ಒಂದು ವಿಷಯ ಅರ್ಥ ಮಾಡ್ಕೋಬೇಕು. ನಮ್ಮ ಭಾಷೆ ಚಿತ್ರಗಳು ಬೇರೆ ಕಡೆ ಬಿಡುಗಡೆ ಮಾಡಲ್ಲ. ಹಾಗಿರುವಾಗ ಅವರ ಚಿತ್ರಗಳನ್ನು ನಾವು ಮೆರೆಸಬೇಕಾ. ಸ್ಯಾಟಲೈಟ್ ರೈಟ್‍ನಿಂದ ದುಡ್ಡು ಬರುತ್ತೆ ಅನ್ನೋ ಕಾರಣಕ್ಕೆ ಈ ಕೆಲಸ ಮಾಡಬೇಡಿ. ದುಡ್ಡು ಸಂಪಾದಿಸಬೇಕು ಅಂದ್ರೆ ನಿಯತ್ತಾಗಿರಬೇಕು. ಆಗ ದುಡಿದ ದುಡ್ಡು ಸಹಾ ಅರಗುತ್ತೆ. ಇದನ್ನು ನಾನು ಕನ್ನಡಿಗರ ಪರವಾಗಿ ಹೇಳ್ತಿದ್ದೇನೆ" ಎಂದಿದ್ದಾರೆ.

ಏನು ಶಿವಣ್ಣ ಕನ್ನಡ ಜನತೆಯನ್ನ ಮೂರ್ಖರು ಅಂತ ಹೇಳ್ತಾ ಇದ್ದೀರಾ. ಒಂದು ವಿಷಯ ವನ್ನು ಮಾತ್ರ ಮರೆಯ ಬೇಡಿ ಅದೇ ಮೂರ್ಖ ಜನರು ಈದಿನ , ನಿಮ್ಮನ್ನು ಈ ಮಟ್ಟಿಗೆ ತಂದಿರುವುದು. ಮೊದಲನೆಯದಾಗಿ ನೀವು ಹೇಳಿದ್ದಿರಲ್ಲ ನಮ್ಮ ಚಿತ್ರಗಳು ಬೇರೆ ರಾಜ್ಯ ಗಳಲ್ಲಿ ಬಿಡುಗಡೆ ಆಗಲ್ಲ ಅಂತ , ಒಂದು ವಿಷಯ ಯೋಚಿಸಿ ನಮ್ಮ ಚಿತ್ರಗಳು ಅಷ್ಟು ಗುಣಮಟ್ಟದ ಚಿತ್ರಗಳೇ ?. ಬಿಡುಗಡೆ ಮಾಡುವುದೆಂದರೆ ಸುಮ್ಮನೆ ಒಂದು ಅರ್ಥವಾಗದ ಕಥೆಯನ್ನು ತೆರೆಗೆ ತಂದು, ಅದನ್ನು ಬೇರೆ ರಾಜ್ಯದಲ್ಲಿ ಬಿಡುಗಡೆ ಮಾಡಿ ಏಕೆ ಕನ್ನಡಿಗರನ್ನು ಅವಮಾನಿಸುತ್ತಿರ. ನೀವು ಹೇಳಿದ್ದಿರಲ್ಲ ಕನ್ನಡಿಗರ ಪರವಾಗಿ ಹೇಳಿದ್ದೇನೆ ಎಂದು ... ನೀವೇನು ಕನ್ನಡಿಗರ ವತಿಯಿಂದ ಪಾಲೆಗರಿಕೆಗೆ ಬಂದ್ದ್ದೀರ ?. ಏಕೆ ನೀವು ಕನ್ನಡಿಗರ ಹೆಸರು ಹೇಳಿ ನಿಮ್ಮ ಬೆಲೆಯನ್ನು ಬೇಯಿಸಿಕೊಲ್ಲುತ್ತಿರ. ಹತ್ತರಲ್ಲಿ ಒಂಬತ್ತು ಜನ ... ಡಬ್ ಮಾಡಿರೋ ಚಿತ್ರಗಳನ್ನು ಬಯಸುತ್ತಾರೆ. ಆದರೆ ಕೆಲವೊಬ್ಬರಿಗೆ ಅದರ ಬಗ್ಗೆ ಅದರ ಅರಿವೆಏ ಇರುವುದಿಲ್ಲ.

ಇತ್ತೀಚಿಗೆ ಬಂದ ಅವತಾರ್ , ರೋಬೋ, ಅರುಂದತಿ ಇನ್ನು ಹಲವರು ಚಿತ್ರಗಳು ಬಂದ್ದಿದ್ದವು. ಎಲ್ಲವನ್ನು ಅವುಗಳ ಮೂಲ ಭಾಷೆಯಲ್ಲೇ ವೀಕ್ಷಿಸಿದೆ . ಒಂದು ಮಾತು ಮಾತ್ರ ಸತ್ಯ ಅದು ಏನೆಂದರೆ ಈ ಚಿತ್ರಗಳನ್ನು ಕನ್ನಡದಲ್ಲಿ ಮಾಡುವುದಂತೂ ಅಸಾಧ್ಯ. ಈಂಥಹ ಚಿತ್ರಗಳನ್ನು ನೋಡಬೇಕೆಂದರೆ ಅವುಗಳ ಮೂಲ ಬಾಷೆಯನ್ನು ಕಲಿಯಬೇಕು. ನಾನು ವಾಸಿಸುವುದು ಉತ್ತರ ಕರ್ನಾಟಕದಲ್ಲಿ. ಇಲ್ಲಿ ಕನ್ನಡಿಗರಿಗೆ ಎಲ್ಲ ಭಾಷೆಗಳುಗೊತ್ತು ಏಕೆ ಗೊತ್ತ? ಕೇವಲ ಸಿನಿಮಾ ನೋಡುವ ಸಲುವಾಗಿ ಅವರು ಕಲಿತುಕೊಂದಿರುವುದು. ಕೆಲಸಕ್ಕೆ ಬರದ ಈ ಫಿಲಂ ಚೆಮ್ಬೇರ್ ನವರು , ಬಸಂತ್ ಕುಮಾರ್ ಪಾಟೀಲ್, ರಮೇಶ್ (ನಿರ್ದೇಶಕ) , ಶ್ರೀನಿವಾಸಮೂರ್ತಿ (ನಟ , ನಿರ್ಮಾಪಕ) , ಎಲ್ಲರು ಕನ್ನಡದ ಹೆಸರಿನಲ್ಲಿ ತಮ್ಮ ಬೆಲೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ. ಈತ್ತಿಚೆಗೆ ಕನ್ನಡಿಗರಿಗೆ ಕನ್ನಡ ಚಿತ್ರಗಳೆಂದರೆ ಸಪ್ಪೆ ಎನಿಸುತ್ತಿದೆ.
ನಿಮ್ಮಂತಹ ಜನರಿಂದ ಕನ್ನಡ ಚಿತ್ರರಂಗ ಈ ಸ್ಥಿತಿಗೆ ತಲುಪಿದೆ. ನಿಮ್ಮಥವರು ಇರುವವರೆಗೂ ಕನ್ನಡ ಭಾಷೆ ಉದ್ದಾರ ಆಗಲ್ಲ . ಯಾರ್ಯಾರು ಡಬ್ಬಿಂಗ್ ಬೇಡ ಅನ್ನುತ್ತಾರೋ ಅವ್ರು ಸ್ವಾರ್ಥಿಗಳು .. ಸ್ವಾರ್ಥ ಸದನೆಗೆ ಕನ್ನಡವನ್ನು ಕೊಳ್ಳುತ್ತಿರುವರು . ಕನ್ನಡ ಪ್ರೇಕ್ಷಕನಿಗೆ ಗೊತ್ತು ನಮ್ಮ ಚಿತ್ರಗಳು ಎಷ್ಟು ಆಳದಲ್ಲಿವೆ ಎಂದು.

ಸಂಪತ್ ಹೆಬ್ಬಾರ್ ಅಂತಾರೆ...

ಕನ್ನಡ ಚಿತ್ರರಂಗ ಯಾವತ್ತು ಕನ್ನಡ ಸಾಹಿತ್ಯದ ಕಡೆ ನೋದತ್ತೋ ಆ ದಿನ ಅದು ಉದ್ಧಾರ ಆಗತ್ತೆ. ಕನ್ನಡ ಸಾಹಿತ್ಯದಲ್ಲಿ ಇರುವಂಥ ಕಥೆ, ಕಾದಂಬರಿಗಳು ಬಹುಶಃ ಯಾವ ಭಾರತೀಯ ಭಾಷೆಯಲ್ಲೂ ಇಲ್ಲ. ಉದಾಹರಣೆ: ತೇಜಸ್ವಿ ಅವರ ಕಾದಂಬರಿ 'ಕರ್ವಾಲೋ'.

sunil kudla ಅಂತಾರೆ...

KAREECTAGI AGI HELIDRI Hebbarrare

Anonymous ಅಂತಾರೆ...

To be frank dubbing and Remake are not required for any language. Dont think anyone Cinema is for to make money its a art. Every cinema is having its own specialization u need watch that on original language. Cinema is art who r intrested to love that let them watch. If they dont have intrest what we can do. But dont do dubbing and remake in any of the languages it purely art.

Anonymous ಅಂತಾರೆ...

''kannada bhashe huttida melenee chithraranga huttiddu''(kannada cinima hutti 70..75....vrsha, ade kannada bashege 2000...innu belithide...)
innu thadabadabaradu ondu thirmanakke bandu bidoona kuthu,baredu,koleyokkintha neravagi kanunu molakla buddi kalisabekagide.

Anonymous ಅಂತಾರೆ...

''nanna bhashe nanna hakku nanna duddu ''

Anonymous ಅಂತಾರೆ...

thaja suddi en guru

Anonymous ಅಂತಾರೆ...

dubbing na bagge thaja suddi kodi

Shivanna Gundanavar ಅಂತಾರೆ...

ಈ ಬನವಾಸಿ ಬಳಗದವರನ್ನ ವಿರೋದಿಸೋಕೆ ಒಂದೇ ಕಾರಣ ಅಂದ್ರೆ ಅವರ ಈ ಡಬ್ಬಿಂಗ ಪರ ವಾದ.....

ಆನಂದ್ ಅಂತಾರೆ...

ಶ್ರೀ ಶಿವಾನಂದ ಎಚ್ ಜಿ ಯವರೇ,

ಬನವಾಸಿ ಬಳಗ ಕನ್ನಡ ಕನ್ನಡಿಗ ಕರ್ನಾಟಕಗಳಿಗೆ ಯಾವುದು ಒಳಿತೋ ಅದನ್ನು ಹಿಂಜರಿಕೆಯಿಲ್ಲದೆ ಒಪ್ಪುತ್ತದೆ ಮತ್ತು ಹೇಳುತ್ತದೆ. ಬಳಗದ ನಿಲುವುಗಳು ಸರಿಯಿಲ್ಲದಿದ್ದರೆ ಹೇಗೆ ಯಾಕೆ ಎನ್ನುವುದನ್ನು ತಿಳಿಸಿಕೊಟ್ಟರೆ ದಿಟವನ್ನು ಒಪ್ಪಲು ತೆರೆದ ಮನವನ್ನೂ ಹೊಂದಿದ್ದೇವೆ. ತಾವೊಮ್ಮೆ ಏನ್ ಗುರುವಿನಲ್ಲಿ ಡಬ್ಬಿಂಗ್‍ಗೆ ಸಂಬಂಧಪಟ್ಟಂತೆ ಹಾಕಿರುವ ಎಲ್ಲಾ ಬರಹಗಳನ್ನು ಓದಿರಿ, ನಿಮಗೆ ಭಿನ್ನವಾದ ಅಭಿಪ್ರಾಯವಿದ್ದರೆ ಹಂಚಿಕೊಳ್ಳಿ... ಯಾರೇನೇ ಹೇಳಿದರೂ ಕೊನೆಗೆ ದಿಟ ಅನ್ನುವುದು ದಿಟವೇ ಆಗಿರುತ್ತದೆ ಅಲ್ಲವೇ!

keshav ಅಂತಾರೆ...

ಕನ್ನಡದಿಂದ ಬೇರೆ ಭಾಷೆಗಳಿಗೆ ಡಬ್ ಆದ ಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ: (ಇವುಗಳಲ್ಲಿ ಕೆಲವು ನಿರ್ಮಾಣ ಹಂತದಲ್ಲೇ ಒಟ್ಟಿಗೆ ಡಬ್ ಆದಂತಹವು ಉದಾ: ರಕ್ತ ಕಣ್ಣೀರು; ಇನ್ನು ಕೆಲವು ಚಿತ್ರ ಕನ್ನಡದಲ್ಲಿ ಬಹಳ ಯಶಸ್ಸು ಕಂಡ ಮೇಲೆ, ಬಂದಷ್ಟು ಲಾಭ ಬರಲಿ ಎಂದು ಬೇರೆ ಭಾಷೆಗೆ ಡಬ್ ಆದಂತಹವು ಉದಾ: ಜೋಗಿ - ಹಿಂದಿಯಲ್ಲಿ ಜೋಗಿ ದ ಕಿಂಗ್; ಮಂಡ್ಯ - ಹಿಂದಿಯಲ್ಲಿ ಜಂಗ್ ಎ ಎಲಾನ್ ಹೀಗೆ.
Super - Telugu (Super)
Jackie - Telugu (Jackie)
Jackie - Malayalam (Jackie)
Milana - Malayalam (Ishtam Enikishtam)
Monalisa - Malayalam (Monalisa)
Veera Madakari - Hindi (Veer Madakari)
Aishwarya - Telugu (Kantri Mogudu)
Buddivantha - Telugu (Budhimanthudu)
Bindaas - Telugu (Pandugadu)
Bindaas- Hindi (Be Happy Bindaas)
Rajani - Telugu (Rajani)
Circle Rowdy - Tamil (Puli Pandi)
Circle Rowdy - Telugu (Tiger Naga)
Kiran Bedi - Telugu (Kiran Bedi)
Love - Malayalam (Hey Taxi)
Lavakusha - Telugu (Jadhugallu)
Ugadi -Telugu (America Alludu)
Psycho - Telugu (Chudava Preyasi)
Holi - Telugu (Jyothi Kalyanam)
Naanu Nene - Telugu (RajaGaadi Pellam)
Masti - Telugu (Pralyarudrudu)
Raktha Kanneeru - Telugu (Raktha Kanneeru)
Garjana - Tamil (Garjanai)
Accident - Tamil (Ennamo Nadakudhu)
H2O - Telugu (H2O)
H2O - Tamil (Kaveri)
Amruthadhaare - Telugu (Amruthavarsham)
Preethse - Telugu (Nannu preminchave)
Parodi - Telugu (Veedhi Rowdy)
Police Quarters - Tamil (Kadhalar Kudiyiruppu)
Marma - Telugu (Marmam)
Marma - Malayalam (Marmam)
Satyaharishchandra - Tamil (Harishchandra)
Siddu - Malayalam (Oh! My Love)
Rifles - Telugu (Vande Maataram)
Police Story - Hindi (Police Story)
Police Story - Tamil (Police Story)
Police Story - Telugu (Police Story)
Love Guru - Malayalam (Love Guru)
Pruthvi - Malayalam (Pruthvi)
Jaya he - Telugu (Lady Bruce Lee)
Prithvi - Telugu (Pruthvi IAS)
Shishira - Telugu (Shishira)
Sri Manjunatha - Telugu (Sri Manjunatha)
Yagna - Telugu (Yagnya)
Jogi - Hindi (Jogi - The King)
Soundarya - Hindi (Jindaan)
Joulie - Hindi (Joulie)
Aishwarya - Hindi (Aishwarya)
Accident - Hindi (Ek Aur Jallad)
Satya In Love - Hindi (Yuddh)
Bhakta - Hindi (Ek Aur Karamyodha)
Siddhu - Hindi (Phir Ek Toofan)
Huchcha - Hindi (Yudhveer)
Lava Kusha - Hindi (Dharamveer)
Shree - Hindi (Robbery At Bangkok)
Jyeshta - Hindi (Jyesht Putr)
Mandya - Hindi (Jung Ka Elaan)
Deadly Soma - Hindi (Ek Aur Aatank)
News - Telugu (News)
Sanchari - Telugu (Thirugubothu)
Minchina Ota - Malayalam (Mangalapuram)
Love You - Hindi (Pyaar ke liye fight)
Siddu - Hindi (Phir Ek Thoofan)
Indra - Hindi (Phir Ek Thahelka)
Indra - Malayalam (Indra)
Hubballi - Hindi (Vardee Tujhe Salaam)
Sardara - Hindi (Kanss)
Raashtrageethe - Hindi (Rashtrageeth)
Kaamannana Makkalu - Hindi (Aandhi
Aur Toofan)
Gaja - Hindi (Gaja Thakur)
Poojari - Hindi (Karan Poojari)
Gooli - Hindi (Sabse Bada Mavali)
Encounter Dayanayak - Hindi (Dayanayak: Licensed To Kill)
Accident - Malayalam (Accident)
Sahodarara Sawal - Tamil (Sahodara Saptham)
Sahodarara Sawal - Hindi (Diller)
Kumkuma Rakshe - Tamil (Kurinji)
Good Luck - Tamil (Rojakkal)
Namitha I Love You - Telugu (Love College)
Geleya - Telugu (Gang Leaders)
Pushpaka Vimana - Telugu (Pushpaka Vimanam)
Aa Dinagalu - Telugu (Sketch for Love)
Dadagiri - Hindi (Aaj Ki Dadagiri)
Nagamandala - Telugu (Nagavamsham)
Z - Telugu (Maha natudu)
Nammanna - Telugu (Dourjanyam)
A - Telugu (A)
Neelambari - Telugu (Neelambari)
Sparsha - Telugu (Sparsha)
Dhruva - Hindi (Shiva - the power)
Abhay - Telugu (Ready for Dhee)
Kannadada Kiran Bedi - Malayalam (Kerala Kiran Bedi)
Jaya he - Malayalam (Lady Bruce Lee)
Bedara Kannappa - Telugu (Kalahasthi Mahatyam)
Appu Pappu - Tamil (Appu Pappu)
ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ಬಿಂಗ್ ಬೇಡ ಅನ್ನುವ ನಿರ್ಮಾಪಕರು ಇದಕ್ಕೆ ಏನನ್ನುತ್ತಾರೆ? ಬೇರೆಯವರ ಎಂಜಲು ಕಾಸು ಗೋರುವುದಕ್ಕೆ ನಾಚಿಕೆಯಿಲ್ಲ ಅಲ್ಲವೇ? ಇದೇ ಶಿವಣ್ಣ, ತನ್ನ ’ಜೋಗಿ” ಚಿತ್ರವನ್ನ ಹಿಂದಿಯಲ್ಲಿ ’ಜೋಗಿ ದಿ ಕಿಂಗ್’ ಅಂತಲೂ, ’ನಮ್ಮೂರ ಮಂದಾರ ಹೂವೇ’ ಚಿತ್ರವನ್ನ ’ತೆಲುಗಿನಲ್ಲಿ ’ಅಕ್ಕ ಮೊಗುಡು’ ಎಂದು ಡಬ್ ಮಾಡುವಾಗ ಏಕೆ ಸುಮ್ಮನಿದ್ದರು?

Anonymous ಅಂತಾರೆ...

kannadigas are having all rights to decide their choice, its not the Film chamber nor the Shivarajkumar can dictate us, what to watch.Dr Raj has opposed dubbing for a good cause and it was very much required at that time & people never felt the importance of dubbing since they were getting good stuff. But now people are getting frustrated with the quality our Kannada films in recent times (there are some exceptions) and our younger generation is going far away from Kannada just because of this.Entertainment is the strongest tool for promotion of a language.
Please please stop taking like an representatives of Kannada culture...Kannada people are wise enough to keep up their culture...I bet after Dr Raj nobody in industry has a commitment towards our culture & language to such extent.

Anonymous ಅಂತಾರೆ...

Iwruge.. Film dubbing agodillaa.. Adre tv adds yella dub adadu agtadantaaa... Idannu oppose mado dairya illaa.. Yakandre 95% add dubb adadde irodu.. Adara virudda chaluvali madidre.. Iwra satelite rights keloru yar irollaa.. Film yella makade malgbekagute..
dubb film beda .. Dubb add agute... Yenu sojigaa....

Anonymous ಅಂತಾರೆ...

CCI descission yawga barotte... Ondu wele bandrunu... Kannadada rakshaka (sorry bhakshaka) mathu awana spoonugalu... Dub film release agodakke bidlikilla... Gaddala yebbisabahudu... Inta swarta Kannada bhakshar irwaga dubbing barudu doubt kanutte....

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails