ನಮ್ಮ ಮೆಟ್ರೋ ಆರ್.ಟಿ.ಐ: ಇನ್ನೂ ಬಾರದ ಉತ್ತರ!

(ಚಿತ್ರ ಕೃಪೆ: www.justkannada.in )
ತಿಂಗಳ ಹಿಂದೆ ಓದುಗರೊಬ್ಬರು ನಮ್ಮ ಮೆಟ್ರೋದಲ್ಲಿ ಬಳಸುತ್ತಿರುವ ಭಾಷಾನೀತಿಯ ಬಗ್ಗೆ ಮಾಹಿತಿ ಕೋರಿ ಒಂದು ಆರ್.ಟಿ.ಐ ಸಲ್ಲಿಸಿದ್ದರು. ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸಲ್ಲಿಸಲಾದ ಆ ಅರ್ಜಿಗೆ ಮೂವತ್ತು ದಿನಗಳು ಮುಗಿದ ನಂತರವೂ ಇನ್ನೂ ಯಾವ ಉತ್ತರ ಬಂದಿಲ್ಲ ಎಂದು ಅರ್ಜಿದಾರರು ಏನ್ ಗುರುವಿಗೆ ಬರೆದು ತಿಳಿಸಿದ್ದಾರೆ.
ಮಾಹಿತಿ ಹಕ್ಕು ಮತ್ತು ತಡವಾದ ಉತ್ತರ!

ಮಾಹಿತಿ ಹಕ್ಕು ಕಾಯ್ದೆ - ೨೦೦೫ರ ಅನ್ವಯ ಸಲ್ಲಿಸಲಾದ ಅರ್ಜಿಗೆ ಸಂಬಂಧಪಟ್ಟ ಅಧಿಕಾರಿಗಳು ಮೂವತ್ತು ದಿನಗಳ ಒಳಗೆ ಉತ್ತರ ನೀಡಬೇಕಾಗಿದೆ. ಹಾಗೆ ಉತ್ತರ ನೀಡದಿರುವುದು ನಿರಾಕರಣೆಗೆ ಸಮಾನವೆಂದೇ ಪರಿಗಣಿತವಾಗುತ್ತದೆ ಎನ್ನುತ್ತದೆ ಕಾನೂನು. ಆರ್.ಟಿ.ಐ ಮನವಿಯನ್ನು ನಿರಾಕರಿಸಿದ ಪಕ್ಷದಲ್ಲಿ ಅದಕ್ಕೆ ಕಾರಣವನ್ನಾದರೂ ಮೂವತ್ತು ದಿನಗಳ ಒಳಗೆ ನಮ್ಮ ಮೆಟ್ರೋ ತಿಳಿಸಬೇಕಿರುತ್ತದೆ. ಹಾಗೆ ನಿರಾಕರಿಸೋದಕ್ಕೆ ಕಾಯ್ದೆಯ ಪ್ರಕಾರ ಕೆಲವು ಕಾರಣಗಳಿವೆ.

ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಿದ್ದರೆ, ಭದ್ರತೆ, ಏಕತೆಗ ಧಕ್ಕೆ ತರುವಂತಿದ್ದರೆ...
ಯಾವುದೇ ನ್ಯಾಯಾಲಯ ಅಂತಹ ಮಾಹಿತಿ ನೀಡುವುದನ್ನು ನಿಶೇಧಿಸಿದ್ದಲ್ಲಿ...
ಸಂಸತ್ತಿನ/ ವಿಧಾನಮಂಡಲದ ಹಕ್ಕುಚ್ಯುತಿಗೆ ಕಾರಣವಾಗುವುದಿದ್ದಲ್ಲಿ...
ರಹಸ್ಯ ವಾಣಿಜ್ಯ ಒಪ್ಪಂದ, ಮೂರನೆಯವರ ಸ್ಪರ್ಧಾತ್ಮಕತೆಗೆ ತೊಡಕುಂಟುಮಾಡುವುದಿದ್ದಲ್ಲಿ...
ಅಂತಹ ಮಾಹಿತಿಯನ್ನು ನೀಡುವುದನ್ನು ನಿರಾಕರಿಸಬಹುದಾಗಿದೆ. ಇಷ್ಟೇ ಅಲ್ಲದೆ ಇನ್ನೂ ಕೆಲವು ಕಾರಣಗಳಿವೆ... ಒಟ್ಟಾರೆ ನಮ್ಮ ಮೆಟ್ರೋ ಮಾಹಿತಿ ನೀಡುವುದನ್ನು ನಿರಾಕರಿಸುವುದಾದರೂ ಅದಕ್ಕೆ ಸೂಕ್ತ ಕಾರಣವನ್ನು ಕೊಡಬೇಕಾಗುತ್ತದೆ. ಹಾಗೆ ಕಾರಣವನ್ನೂ ನೀಡದೆ, ಉತ್ತರವನ್ನೂ ನೀಡದೆ ಸುಮ್ಮನಿರಲಂತೂ ಕಾಯ್ದೆ ಅವಕಾಶ ಮಾಡಿಕೊಡುವುದಿಲ್ಲ.

ಹಾಗಾಗಿ ಸದರಿ ಆರ್.ಟಿ.ಐಗೆ ಉತ್ತರವಿನ್ನೂ ಬಂದಿಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿದರೆ ಮೊದಲನೇ ಮೇಲ್ಮನವಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. 

1 ಅನಿಸಿಕೆ:

Rajashekhara ಅಂತಾರೆ...

೩೦ ದಿನ ಮೀರಿದ ಉತ್ತರಕ್ಕೆ ಅವರು ಕೊಡುವ ಪುಟಗಳಿಗೆ ಶುಲ್ಕ ನೀಡಬೇಕಗಿಲ್ಲ. ಉತ್ತರವನ್ನು ಉಚಿತವಾಗಿ ನೀಡಬೇಕಾಗುತ್ತದೆ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails