ಮರಾಠಿ ಹುಲಿ ಬಾಳಾ ಠಾಕ್ರೆ ಇನ್ನಿಲ್ಲ!


ಮಹಾರಾಷ್ಟ್ರ ಏಕೀಕರಣ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಪ್ರಬೋಧಂಕರ್ ಠಾಕ್ರೆಯವರ ಮಗನಾಗಿ ೧೯೨೬ರಲ್ಲಿ ಹುಟ್ಟಿದ ಶ್ರೀ ಬಾಳಾಠಾಕ್ರೆ ಇಂದು ನಿಧನರಾಗಿದ್ದಾರೆ. ಮಹಾರಾಷ್ಟ್ರದಲ್ಲಿ "ಮರಾಠಿ ಕೇಂದ್ರಿತ" ರಾಜಕೀಯ ಶಕ್ತಿಯಾದ ಶಿವಸೇನೆಯನ್ನು ಹುಟ್ಟುಹಾಕಿದವರು ಈತ. ಇವರ ನಿಧನದಿಂದಾಗಿ ಇತಿಹಾಸದ ಒಂದು ಯುಗ ಮುಗಿದು ಹೋದಂತಾಯ್ತು! ಇವರ ಆತ್ಮಕ್ಕೆ ಶಾಂತಿ ಸಿಗಲಿ!

ಬಾಳಾಠಾಕ್ರೆಯವರು ೧೯೬೦ರ ದಶಕದಲ್ಲಿ ಮುಂಬೈ ಕೇಂದ್ರಾಡಳಿತ ಪ್ರದೇಶವಾಗಬೇಕು ಎನ್ನುವ ಕೂಗಿಗೆ ಸವಾಲಾಗಿ ಎದ್ದು ನಿಂತು ಮರಾಠಿ ಜನರನ್ನು ಒಗ್ಗೂಡಿಸಿ ಮರಾಠಿ ಸ್ವಾಭಿಮಾನವನ್ನು ಜಾಗೃತಗೊಳಿಸಿ ದೊಡ್ಡ ರಾಜಕೀಯ ಶಕ್ತಿಯನ್ನು ಕಟ್ಟಿದವರು. ಹಿಂದುತ್ವದ ಸಿದ್ಧಾಂತ ಮತ್ತು ಮರಾಠಿ ಸಿದ್ಧಾಂತಗಳ ನಡುವಿನ ಗೊಂದಲದಲ್ಲಿ ಕಳೆದುಹೋದವರಂತೆ ಕೆಲವೊಮ್ಮೆ ನಡೆದುಕೊಂಡ ಇವರು, ಮಹಾರಾಷ್ಟ್ರದ ಕನ್ನಡಿಗರನ್ನು ಅನೇಕ ಸಲ ಅನೇಕ ರೀತಿಯಲ್ಲಿ ಕಾಡಿದ್ದರೂ ಕೂಡಾ... ರಾಷ್ಟ್ರೀಯ ಪಕ್ಷಗಳಿಂದ ಮರಾಠಿಗರಿಗೆ ಕೆಲಕಾಲವಾದರೂ ಮುಕ್ತಿ ಕೊಡಿಸಿದ ಹಿರಿಮೆ ಇವರದ್ದು! ಮರಾಠಿ - ಮರಾಠಿಗ - ಮಹಾರಾಷ್ಟ್ರ ಎನ್ನುವುದನ್ನು ರಾಜಕೀಯ ಶಕ್ತಿಕೇಂದ್ರವಾಗಿಸಿದ ಹಿರಿಮೆ ಇವರದ್ದು. ಮರಾಠಿ ಜನರಲ್ಲಿ ಸ್ವಾಭಿಮಾನವನ್ನು ಜಾಗೃತಗೊಳಿಸುವಲ್ಲಿ ಇವರದ್ದು ದೊಡ್ಡ ಸಾಧನೆ!

ಇವರ ಆತ್ಮಕ್ಕೆ ಶಾಂತಿ ಸಿಗಲಿ!

1 ಅನಿಸಿಕೆ:

ಮೈಸೂರಿಗ ಅಂತಾರೆ...

ಇವೊತ್ತಿನ ನವೆಂಬರ್ ೧೮ರ ವಿಜಯಕರ್ನಾಟಕದ ಮೊದಲ್ನೇ ಪುಟ ನೋಡಿ.

ಇವೊಯ್ಯಂಗೆ ಹಿಟ್ಲರ್ ಆದರ್ಶವಂತೆ. ಬೆಳ್ಳಗಿರೋ ಮರಾಠರೆಲ್ಲ ಉತ್ತಮರು, ಕರ್ರಗಿರೋ ಕನ್ನಡಿಗರು ನೀಚಜನ್ತುಗಳು!

ಇನ್ನೊಂದು. ಇವರ ಅಪ್ಪ ಶುರು ಹಚ್ಚಿದ 'ಮರಾಟಿ ಪ್ರಾದೇಶಿಕತೆ'ಯ ಫ್ಯಾಮಿಲಿ-ಬಿಸಿನೆಸ್ಅನ್ನು ಇನ್ನೆರಡು ಪೀಳಿಗೆ ಮುಂದುವರಿಸಿದ ಮಹಾರಾಷ್ಟ್ರದ 'ಕರುಣಾನಿಧಿ' :)

ಭಾಷೆ-ಧರ್ಮ ಸಿಕ್ಕಿದ್ದು ಇವೊಯ್ಯಂಗೆ, ಆಟದ ಸಾಮಾನು! ಎಷ್ಟು ಜನ ಸತ್ರು ಬಾಂಬೆ ಹಿಂದೂ-ಮುಸ್ಲಿಂ ಗಲಾಟೆಯಲ್ಲಿ!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails