ನಂ ನಾಡ್ನ "ಗಂಧದ್ ಗುಡಿ" ಅನ್ನೋದು ಕಾಟಾಚಾರಕ್ಕಲ್ಲ ಗುರು!

"ನಾವಾಡುವ ನುಡಿಯೇ ಕನ್ನಡ ನುಡಿ...ನಾವಿರುವಾ ತಾಣವೆ ಗಂಧದಗುಡಿ" ಅಂತ ಪಿ.ಬಿ.ಶ್ರೀನಿವಾಸು ಡಾ ರಾಜ್ ಗೆ ಹಿನ್ನೆಲೆ ಸಂಗೀತ ಕೊಟ್ಟಿರೋದೇನೋ ನಮಗೆ ಗೊತ್ತೇ ಇದೆ. ಏನು ಹಾಡು ಗುರು ಅದು! ಅದೆಷ್ಟು ಸರಿ ಕೇಳ್ದ್ರೂ ಬೇಜಾರಾಗಲ್ಲ! ಅದೆಷ್ಟು ಸರಿ ನೋಡಿದರೂ ಇನ್ನೊಂದ್ಸಾರಿ ನೋಡ್ಮ ಅನ್ಸತ್ತಲ್ಲ ಗುರು! ಇನ್ನೊಂದ್ಸಲಿ ನೋಡ್ಮ:


ಹಾಗೇ....ನಿಜಕ್ಕೂ ಗಂಧದಗುಡಿ ಅಂದ್ರೆ ಕರ್ನಾಟಕಾನೇ ಅನ್ನೋದು ಗೊತ್ತಿತ್ತಾ? ಶ್ರೀಗಂಧ ಇನ್ನೆಲ್ಲೂ ಬೆಳ್ಯಲ್ಲ ಗುರು! ಇಲ್ಲಿ ನೋಡಿ:



ಪೂರ್ತಿ ಬರಹಕ್ಕಾಗಿ 1990ರಲ್ಲಿ ಹವಾಯಿಯಲ್ಲಿ ನಡೆದ ಒಂದು ಸಮ್ಮೇಳನದಲ್ಲಿ ಓದಲಾದ ಬರಹ ನೋಡಿ. ಇಲ್ಲಿ ಯಾವುದನ್ನ ತಮಿಳುನಾಡು ಅಂತ ಕರೀತಿದಾರೋ ಅದು ಇವತ್ತು ಭೌಗೋಳಿಕವಾಗಿ ತಮಿಳ್ನಾಡೇನೋ ನಿಜ. ಆದರೆ ಅಲ್ಲಿರೋರೆಲ್ಲ ಹೆಚ್ಚು-ಕಡಿಮೆ ಬಡಗರು ಮತ್ತು ಕನ್ನಡಕ್ಕೆ ಹತ್ತಿರವಿರೋ ಇನ್ನೂ ಕೆಲವು ಭಾಷೆಗಳನ್ನು ಆಡೋರೇ. ಬಡಗರು ಅಂದ್ರೆ ಕನ್ನಡಿಗರೇ. ಮೈಸೂರು-ಚಾಮರಾಜನಗರದ ಕನ್ನಡಕ್ಕೆ ಸಕ್ಕತ್ ಹತ್ರ ಬಡಗರ ನುಡಿ. ತಮಿಳ್ಗೂ ಬಡಗಕ್ಕೂ ಒಂಚೂರೂ ನಂಟಿಲ್ಲದಿದ್ದರೂ ಈಗ ಬಡಗನಾಡು ತಮಿಳ್ನಾಡಲ್ಲಿದೆ ಅನ್ನೋದು ಕಟುಸತ್ಯ. ಭಾಷಾವಾರು ರಾಜ್ಯಗಳ ವಿಂಗಡನೆಯಾಗುವಾಗ ಕರ್ನಾಟಕ ಬಡಗನಾಡನ್ನು ಕಳ್ಕೋತು, ಅಷ್ಟೆ. ಈಗ ನಾವು ಕಣ್ ಮುಚ್ಕೊಂಡಿದ್ರೆ ಬೆಳಗಾವಿ ಹೇಗೆ ಕೈಬಿಟ್ಟುಹೋದೀತೋ ಹಾಗೆ.

7 ಅನಿಸಿಕೆಗಳು:

Parisarapremi ಅಂತಾರೆ...

ಬ್ಲಾಗು ನೋಡಿದೆ, ಚೆನ್ನಾಗಿದೆ. ಆದರೆ, ಕಮೆಂಟಿನ ಜಾಗದಲ್ಲಿ ನೀವು ಈ ಕೊಂಡಿಗಳನ್ನು "ಮರ್ಕೆಟಿಂಗ್" ಮಾಡುವುದು ಅಷ್ಟು ಸೂಕ್ತವಲ್ಲವೆಂದು ನನ್ನ ಅನಿಸಿಕೆ. ಅನ್ಯಥಾ ಭಾವಿಸದಿರಿ.

Anonymous ಅಂತಾರೆ...

ಡಾ||ರಾಜ್ ಈ ಹಾಡು ನೋಡಿಯೇ ಆ ಸಮಾಜ ಘಾತುಕ ವೀರ್ಯಪ್ಪನ್ ಗಂಧ ಕದಿಯೋ ಕೆಲ್ಸಕ್ಕೆ ಹಾಕಿ ಸುಟ್ಟು ಶವ ಆಗಿದ್ದು.

Satish ಅಂತಾರೆ...

ಹಿಂದೆ ನಮ್ ಊರ್‌ನಲ್ಲಿ ಗಂಧದ ಮರಗಳು ಸ್ವಾಭಾವಿಕ/ಸಹಜವಾಗಿ ಬೆಳೆಯುತ್ತಿದ್ದವು, ಊರಿನವರ ಆಸೆಗೆ ಬಲಿಯಾದ ಅಂತಹ ಮರಗಳ್ನ ಇವತ್ತು ಹುಡ್ಕಿದ್ರೂ ಸಿಗೋದಿಲ್ಲ. ನಮ್ ಆಫೀಸ್ನಲ್ಲಿ ಗಂಧದ (ಮರದಲ್ಲಿ ಕೆತ್ತಿದ) ಆನೆಗಳ್ನ ಅದರ ಬಗ್ಗೆ ಕೇಳ್ದೋರಿಗೆ ವಾಸನೆ ನೋಡ್ಲಿಕ್ಕೆ ಹೇಳ್ತೀನಿ, ಅವರ ಕಣ್ಣುಗಳು ಬೆರಗಿನಿಂದ ಅರಳೋದನ್ನ ನೋಡ್ತೀನಿ!

’ಈಗ ನಾವು ಕಣ್ ಮುಚ್ಕೊಂಡಿದ್ರೆ ಬೆಳಗಾವಿ ಹೇಗೆ ಕೈಬಿಟ್ಟುಹೋದೀತೋ ಹಾಗೆ...’ ಅಂದ್ರೆ, ಬೆಳಗಾವಿ ಈಗಾಗ್ಲೇ ಕೈ ಬಿಟ್ಟು ಹೋಯ್ತು ಅಂತಲೋ? ಬೇರೆಯವ್ರು ಬಳಸೋ ಕನ್ನಡದ ಬಗ್ಗೆ ಬರೆಯೋ ನಿಮ್ಮ ಈ ವಾಕ್ಯದ ಬಳಕೆ/ರಚನೆ ನನಗೆ ಅರ್ಥ ಆಗ್ಲಿಲ್ಲ - (ಇಷ್ಟೊಂದ್ ವರ್ಷಾ ದೂರಾ ಇರೋ) ನನ್ನ ಮಿತಿ ಇದ್ದಿರಲೂಬಹುದು.

ಬನವಾಸಿ ಬಳಗ ಅಂತಾರೆ...

ಸತೀಶ್ ಅವರೆ, ನಿಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ. "ಕೈಬಿಟ್ಟುಹೋದೀತೋ" ಅನ್ನುವುದು ಭವ್ಯಿಷ್ಯದಲ್ಲಿ ಆಗಬಹುದಾದ (ಕೈಬಿಟ್ಟುಹೋಗುವುದು ಎಂಬ) ಒಂದು ಘಟನೆಯ ಬಗ್ಗೆ ಇದೆಯೇ ಹೊರತು ಭೂತದಲ್ಲಲ್ಲ. ಗೊಂದಲವಾಗಿದ್ದರೆ ಅದು ನಮ್ಮ ತಪ್ಪು, ಕ್ಷಮಿಸಬೇಕು.

Amarnath Shivashankar ಅಂತಾರೆ...

ಕರ್ನಾಟಕದ ಅರಣ್ಯ ವಿಸ್ತಾರ ಬಹಳ ವಿಭಿನ್ನವಾಗಿದೆ..ಇದು ನಿಜವಾಗಿಯೂ ಗಂಧದಗುಡಿಯೇ
ನಮ್ಮ ಆಗುಂಬೆ ಅರಣ್ಯ ಭಾಗದಲ್ಲಿರುವ ಸರಿ ಸುಮಾರು ೨೦೦೦ ಗಿಡ, ಮರಗಳು ಪ್ರಪಂಚದ ಯಾವುದೇ ಭಾಗದಲ್ಲಿಯೂ ಇಲ್ಲ..
ಕರ್ನಾಟಕದ ಅರಣ್ಯಗಳು, ಅದರ ವೈವಿಧ್ಯತೆ ಬೇರೆಲ್ಲೂ ಕಂಡುಬರುವುದಿಲ್ಲ..
ಪರಿಸರ ದೇವತೆ ಕರ್ನಾಟಕಕ್ಕೆ ಬಹಳ ಚೆನ್ನಾಗಿ ಒಲಿದಿದ್ದಾಳೆ.

ಭಾವಜೀವಿ... ಅಂತಾರೆ...

ನಮ್ಮ ಕರ್ನಾಟಕ ಶ್ರೀಗಂಧದ ನಾಡು ನಿಜ, ಆದರೆ ಗಂಧದ ಮರಗಳ ಬಗ್ಗೆ ನೀವು ಇಲ್ಲಿ ಕೊಟ್ಟಿರುವ ಅಂಕಿ ಅಂಶಗಳು ಇತ್ತೀಚಿನದೇ!? ಪ್ರಸ್ತುತ ನಾಡಿನಾದ್ಯಂತ ಎಷ್ಟರಮಟ್ಟಿಗೆ ಶ್ರೀಗಂಧದ ಮರಗಳು ಇನ್ನೂ ನಳನಳಿಸುತ್ತಿವೆ!?
ಈ ಸಂದೇಹವನ್ನು ಏಕೆಂದರೆ, ನನ್ನೂರಾದ ಶೃಂಗೇರಿಯ ಸುತ್ತಮುತ್ತ (ಹಾಗೆ ಹೇಳಬೇಕೆಂದರೆ, ಪಶ್ಚಿಮ ಘಟ್ಟಗಳಾದ್ಯಂತವೂ ಹೌದು!) ಗಂಧದ ಮರಗಳು ಹೇಳ ಹೆಸರಿಲ್ಲದಂತೆ ಮಾಯವಾಗಿವೆ. ಒಂದು ಗಿಡ ಬೆಳೆದು ಅರ್ಧ ಅಡಿ ದಪ್ಪವಾಗುವ ಹೊತ್ತಿಗೆ ಮನುಷ್ಯನ ಆಸೆ ಎಂಬ ಕ್ರೂರ ಕೊಡಲಿಗೆ ಬಲಿಯಾಗಿ ಬಿಡುತ್ತವೆ, ಹಾಗು ಉಳಿಯುವ ಬೊಡ್ಡೆಯನ್ನು ಅರಣ್ಯ ಇಲಾಖೆಯವರು ಅಂತ್ಯಸಂಸ್ಕಾರವನ್ನು ನೆನಪು ಮಾಡುವಂತೆ ಕೀಳಿಸಿಕೊಂಡು ಹೋಗುತ್ತಾರೆ. ಇದು ಚಿಕ್ಕಂದಿನಿಂದಲೂ ನೋಡಿದ ಗಂಧದ ಮರಗಳ ದುರ್ಗತಿ. ಅಪ್ಪಿತಪ್ಪಿ ಎಲ್ಲಾದರೂ ತಮ್ಮ ತೋಟದ ಒಳಗೋ ಅಥವ ಹಿತ್ತಿಲ ಒಳಗೋ ಒಂದು ಗಂಧದ ಗಿಡ ಹುಟ್ಟಿಕೊಂಡಿತೆಂದರೆ, ಅರಣ್ಯ ಇಲಾಖೆಯವರ ಕಾಟಕ್ಕೆ ಭಯಬಿದ್ದು ಜನ ಅದನ್ನು ಕಿತ್ತು ಹಾಕುತ್ತಾರೆ. ಇಲ್ಲವಾದರೆ ನಾಳೆ ಅದು ಬೆಳೆದು ದೊಡ್ಡ ಮರವಾದ ಮೇಲೆ, ಯಾರಾದರೂ ಕದ್ದೊಯ್ದರೆ ಅರಣ್ಯ ಇಲಾಖೆಯವರು ಆ ಜಾಗದ ಯಜಮಾನನನ್ನು ಪೀಡಿಸುತ್ತಾರೆ. ಕಾಡುಗಳ್ಳರು, ಅವರಿಂದ ಸಾಕಲ್ಪಡುವ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗು ಇವರ ಮಧ್ಯೆ ಸಿಲುಕಿದ ಸಾಮಾನ್ಯ ಜನರು, ಒಟ್ಟಿನಲ್ಲಿ ಈ ಇಡೀ ವ್ಯವಸ್ಥೆಯ ಮಧ್ಯೆ ಶ್ರೀಗಂಧ ಎನ್ನುವುದು ಕೇವಲ ಕರ್ನಾಟಕದ ಪಶ್ಚಿಮ ಘಟ್ಟಗಳ ಇತಿಹಾಸದ ಹಿರಿಮೆಯಾಗಿದೆ ಎನ್ನುವುದು ನನ್ನ ಅನಿಸಿಕೆ..!

Anonymous ಅಂತಾರೆ...

hello all......

nanu e blog ge hosba kanrii.. nanu namma arnya sampattinna bagge swlpa abiman eronu kanrii so nanage ansida erdu muru line barita eddine protsha kodtira anta nabididni

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails