ಕರ್ನಾಟಕಕ್ಕೆ ಮಾತ್ರ ಎರಡನೇ ಪಾಸ್ಪೋರ್ಟ್ ಕಚೇರಿಯಿಲ್ಲ!

ಕರ್ನಾಟಕಕ್ಕೆ ಎರಡನೇ ಪಾಸ್ ಪೋರ್ಟ್ ಕಚೇರಿ ಕೊಡಕ್ಕೆ ಕೇಂದ್ರ ಸರ್ಕಾರ ಇಲ್ಲ ಅಂದಿರೋ ಬಗ್ಗೆ ಹೋದವಾರ ವಿ.ಕ. ವರದಿ ಮಾಡಿದೆ. ನಮಗೆ ಇದೇನು ಹೊಸದಲ್ಲಿ ಬಿಡಿ! ರೈಲು, ರೈಲು ಗೇಜ್ ಪರಿವರ್ತನೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ಕರ್ನಾಟಕದಲ್ಲಿರುವ ಕೇಂದ್ರದ ಕಛೇರಿ-ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಕೆಲಸಕ್ಕೆ ಆದ್ಯತೆ ಇವುಗಳೆಲ್ಲದರಲ್ಲಿಯೂ ನಮಗೆ ಇದು ಅಭ್ಯಾಸ ಆಗೋಗಿದೆ!

ಕರ್ನಾಟಕಕ್ಕೆ ಮಾತ್ರ ಬೇರೆಯ ಮಾನದಂಡವನ್ನು ಕೇಂದ್ರ ಅನುಸರಿಸುತ್ತಲೇ ಬಂದಿದೆ. ಮಹಾರಾಷ್ಟ್ರ, ಕೇರಳ, ಆಂಧ್ರ ಗಳಲ್ಲೆಲ್ಲ ಒಂದಕ್ಕಿಂತ ಹೆಚ್ಚು ಪಾಸ್ ಪೋರ್ಟ್ ಕಛೇರಿಗಳಿದ್ದು ಅವುಗಳಿಗಿಲ್ಲದ 50,000 ಅರ್ಜಿಗಳ ಅಳತೆಗೋಲು ಕರ್ನಾಟಕಕ್ಕೆ ಮಾತ್ರ ಅನ್ವಯಿಸೋದು!

ಇದರಲ್ಲಿ ಕೇಂದ್ರದ ತಪ್ಪೇನಿಲ್ಲ ಬಿಡಿ. ಶಾಂತಿಪ್ರಿಯ ಕನ್ನಡಿಗರು ಯಾವುದೇ ರೀತಿಯ ಪ್ರತಿರೋಧ ಒಡ್ಡದೇ ತೆಪ್ಪಗೆ ಮಲಗಿರುವಾಗ, ಅಳದೇ, ರಚ್ಚೆ ಹಿಡಿಯದೇ ಸುಮ್ಮನೇ ಇರೋ ಕೂಸಿಗೆ ಹಾಲುಣಿಸಲು ಕೇಂದ್ರಕ್ಕಾದರೂ ಹುಚ್ಚೆ?

ಅಧಿಕಾರ ಒಂದಿದ್ದರೆ ಸಾಕು ಎನ್ನುವ ನಮ್ಮ ರಾಜ್ಯದ ಇಂದಿನ ರಾಷ್ಟ್ರೀಯ ಪಕ್ಷಗಳ ನಾಯಕರುಗಳಿಗೆ ಕೇಂದ್ರವನ್ನು ಒತ್ತಾಯಿಸಿ, ಬೆದರಿಸಿ ನಮ್ಮ ಪಾಲನ್ನು ಪಡೆಯುವ ನರ ಕೂಡ ಸತ್ತು ಹೋಗಿದೆ!

ಕನ್ನಡ-ಕರ್ನಾಟಕ-ಕನ್ನಡಿಗರ ಅನುಕೂಲ, ಏಳಿಗೆ ಇವುಗಳನ್ನೇ ಗುರಿಯಾಗಿಸಿಕೊಂಡಿರುವ ಪ್ರಾದೇಶಿಕ ಪಕ್ಷ ಮಾತ್ರ ಇವುಗಳಿಗೆಲ್ಲ ಮದ್ದು. ಕರ್ನಾಟಕಕ್ಕೆ ಸಿಗಬೇಕಾದ್ದು ಸಿಗದಿದ್ದರೆ ಕೇಂದ್ರ ಸರ್ಕಾರ ಅಲ್ಲಾಡೋಹಂಗೆ ಆಗೋವರ್ಗೂ ನಮಗೆ ಇದೇ ಪಾಡು ಗುರು!

5 ಅನಿಸಿಕೆಗಳು:

Rohith B R ಅಂತಾರೆ...

ಪಾಸ್ಪೋರ್ಟ್ ಕಚೇರಿನೂ ಹೌದು, ಅಮೇರಿಕದ ಕಾನ್ಸುಲೇಟ್ ಕೂಡ ಹೌದು - ಇವೆರಡೂ ವಿಷ್ಯಗಳಲ್ಲಿ ಮೋಸ ಹೋಗಿದೀವಿ ನಾವು ಕನ್ನಡಿಗರು. ಹೈದರಾಬಾದ್ನಲ್ಲಿ ಇದೆ ಅಮೇರಿಕದ ಕಾನ್ಸುಲೇಟು, ಇಲ್ಲಿಲ್ಲ. ಇದ್ರಿಂದ ಏನು ಅಂತ ನಷ್ಟ ಅಂತ ಹೇಳ್ತಿಲ್ಲ ನಾನು, ಆದ್ರೆ ಎಲ್ಲಿ ಬೇಕೊ ಅಲ್ಲಿ ಕೊಡದೆ ಎಲ್ಲಿ ತಮಗೆ ಬೇಕೊ ಅಲ್ಲಿ ಶುರು ಮಾಡ್ತಿದಾರಲ್ಲ ಕೇಂದ್ರದೋರು.. ಇದು ಖಂಡನೀಯ. ಅಲ್ವ? ಎಲ್ಲಾ ವಿಷ್ಯಗಳ್ತರಾನೇ, ಈ ವಿಷ್ಯದಲ್ಲೂ ನಮ್‍ಗೆ ಮೋಸ ಆಗೈತೆ. ಅಷ್ಟೆ.

ಈಗ ವೀಸ ಬೇಕು ಅಂತ ನಾವು ಕಾನ್ಸುಲೇಟಿಗೆ ಅರ್ಜಿ ಸಲ್ಸ್ತೀವಿ.. ಅದಕ್ಕಾಗಿ ಚೆನ್ನೈಗೋ, ಕಲ್ಕತ್ತಾಗೋ, ಎಲ್ಲಿಗೋ ಹೋಗ್ಬೇಕಾಗತ್ತೆ.. ಎರ್ಡ್ ದಿನಾನಾದ್ರು ಇರ್ಬೇಕು ಅಲ್ಲಿನ ಹೋಟಲ್‍ಗಳಲ್ಲಿ.. ಅದೇ ನಮ್ಮಲ್ಲೇ ಒಂದು ಕಾನ್ಸುಲೇಟ್ ಇದ್ದಿದ್ದ್ರೆ ಅಲ್ಲಿಗೆ ಹೋಗೋದು ತಪ್ಪುತ್ತಿತ್ತು.. ಆದ್ರೆ ಅವರಲ್ಲಿ ಮಾತ್ರ ಇರೋದ್ರಿಂದ ಅಲ್ಲಿಯ ಪ್ರವಾಸ ಮತ್ತು ಹೋಟೆಲ್ industry ಗೆ ದುಡ್ಡು ಸುರಿದು, ಅವರ ಏಳ್ಗೆಗೆ ನಾವೆ ದಾನಿಗಳಾಗ್ತಿದೀವಿ.. ತಪ್ಪೇನಿಲ್ಲದೇ ಇರ್ಬೋದು.. ಆದ್ರೆ ಆ ಕಚೇರಿ ನಮ್ಮಲ್ಲೇ ಇದ್ದಿದ್ದ್ರೆ ಇಲ್ಲಿಗೆ ಜನ ಬಂದು ಹೋಗ್ತಿದ್ದ್ರು, ನಮ್ಮಲ್ಲಿನ ಈ industryಗಳಿಗೇ ಲಾಭ ಆಗ್ತಿತ್ತು. ಕನ್ನಡಿಗರಿಗೆ ಹೆಚ್ಚು ರೀತಿಗಳಲ್ಲಿ ಲಾಭ ಆಗ್ತಿತ್ತು, ಅಲ್ವ? ಇದೇ ಬೇಕಿಲ್ದೇ ಇರೋದು ನಮ್ಮ ಕೇಂದ್ರ ಸರ್ಕಾರಕ್ಕೆ.. ಆದ್ರೆ ನಮ್ಮ ರಾಜ್ಕಾರ್ಣಿಗಳ್ಗೆ ಮುಂಡೇವುಕ್ಕೆ ಇಂತಹದ್ದು ಅರ್ಥ ಆಗೋಲ್ವೆ!!

Anonymous ಅಂತಾರೆ...

sariyagi heLidiri... aadre if we need a second passport office where should it be located ? thats the next question and is mostly cant be solved easily ... any way thats left to us to decide where in karnatka, all that center has to do is grant the 2nd Passport office.

One thing i want to tell is that having a regional party alone wont gurantee the growth ... we need better visionaries ..... Look at Punjab/Gujarat/MH (certain extent) they arent ruled by regional parties still they've developed..

Karnataka is lacking visionary politician, and not a united agenda mainly because we dont have united cause to fight. If you say ka.ra.ve can be a potential political party, i am sceptikal about this...

i feel karave in karnataka is not a synonym for shivsena in maharashtra ...

Anonymous ಅಂತಾರೆ...

GurugaLe neevu helod khare aitri..

innondu baaLa mukhya vichaara aiti nodri.
Nodri nam karnatakada Haasan, Mangalooru, kaaravaara, madikeri jillegalinda raajadhaani Bengaloorige ishtu varsha aadroo ondu rylu bandi illa nodri. aadre yaavudo raajyagaLa yernaculammu, tirunelveli, anantapuram anta yellakadeyindanoo "neevu benglurige hogrila" anta heli rylu samparka kottiddaare. nam kannadigarige vanchisi bere raajyadavarige upakaara maadudu yaava nyaya neeve helri saahebra.? idu tappillenu??

Anonymous ಅಂತಾರೆ...

ninne paper nalli odide. bengaloorigu mattu chennai gu 3 gantegaLalli prayana mado thara bullet train baratte ante. idaralli nodi illi iruva mattu chennai ninda illige illinda allige hogo tamilara hitasaktige eshtu gamana vahisthare antha.
nammavaru waste bodygaLu illinda mangaLoorige hogakke ondu railu saha illa. hogali bengaloorininda hasanakku ondu railu illa guru. namma sanmanya devegouDaru enu madtha idare ?. ambareesh , thejaswini, ananthkumar ... ella enu madtha idare ?.
howdu pradeshika paksha madbeku..
nammade ada ondu paksha .. - Danyasi

Anonymous ಅಂತಾರೆ...

ಗುರುಗಳೇ...
ಬರೇ ಇ ಇಲ್ಲಗಳ ನಡು ಬದುಕುದು ನಮ್ಮ ಕನ್ನಡದವ್ರಿಗ್ ಅಭ್ಯಾಸ್ ಆಗ್ ಹೋಗೆತಿ. ಇನ್ನೊಂದ ಪಾಸಪೋರ್ಟ್ ಕಚೇರಿ ಬೇಕ ಬೇಕು ಅಂತ ನಮ್ಮ ಮಂದಿ ರೋಡಿಗ್ ಇಳದ್ರ ಮಾತ್ರ ನಮ್ಮ ಕೆಲ್ಸ ಆಕ್ಕೆತೆನ್? ವಿಚಿತ್ರ ನೋಡ್ರಿ,, ನಮ್ಮ ಕರ್ನಾಟಕದ ಎನಾ ವಿಷ್ಯಾ ತಗೊರಿ,, ಅವನೌನ್.. ನಾವೆಲ್ಲ ಲಬ ಲಬ ಬಾಯಿ ಬಡಕೊಳ್ಳುಮಟ ಯಾವ ಹಲ್ಕಟ್ ನನ್ನ ಮಕ್ಕಳು ನಮ್ಮ ಕಡೆ ತಿರಗಿನು ನೋಡಂಗಿಲ್ಲರೀ ಗುರುಗಳೇ... ಅವನೌನ್ ,, ನಮ್ಮ ನಸೀಬ ಸುಮಾರ್ ಐತೆನ್?? ಇದಕೆಲ್ಲಾ ಕೊನಿ ಯಾವಗ್ರಿ?? ಜಲ್ದಿ ಒಂದ ಪ್ರಾದೇಶಿಕ್ ಪಕ್ಷ ಬೇಕ್ರಿ,, ಇಲ್ಲಾಂದ್ರ ಕೆಲಸ್ ಆಗುದಿಲ್ಲ್ ಅವನೌನ್....

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails