ಹಿಂದಿ ಹೇರಿಕೆಯ ಮೂರು ತಂತ್ರಗಳು: ಒತ್ತಾಯ, ಆಮಿಷ, ವಿಶ್ವಾಸ

ಬ್ರಿಟಿಷರಿಂದ ಬಿಡುಗಡೆಯಾದ ಮೊದಲನೇ ದಿನದಿಂದಲೇ ಹಿಂದಿ ಅನ್ನೋ ಒಂದು ಭಾಷೇನ ರಾಷ್ಟ್ರಭಾಷೆಯನ್ನಾಗಿಸುವ ಪ್ರಯತ್ನಗಳು ನಡೆದವು ಅನ್ನೋದು "ವಿವಿಧತೆಯಲ್ಲಿ ಏಕತೆ" ಅನ್ನೋದನ್ನೇ ಆಧಾರವಾಗಿಟ್ಟುಕೊಂಡು ಕಟ್ಟಿರೋ ಭಾರತದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ. ಈ ಪ್ರಯತ್ನಗಳ್ನ ಕೇರಳ, ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡಿನಂತಹ ಪ್ರದೇಶಗಳು ವಿರೋಧಿಸಿದಾಗ ಹಿಂಬಾಗಿಲ ಮೂಲಕ ಹಿಂದಿಯನ್ನು ಹೇರಲು ಆರಂಭಿಸಿದರು. ಹಿಂದಿಗೆ ರಾಜ್ ಭಾಷಾ ಎನ್ನುವ (ಅಧಿಕೃತ ಆಡಳಿತ ಸಂಪರ್ಕ ಭಾಷೆ) ಪಟ್ಟ ಕಟ್ಟಲಾಯಿತು.

ಮೂರು ತಂತ್ರಗಳು

ಇವತ್ತಿಗೂ ನಮ್ಮ ಕೇಂದ್ರ ಸರ್ಕಾರ ಹಿಂದೀನ ರಾಜ್-ಭಾಷೆ ಅಂತ ಕರೀತಾ ಇಟ್ಕೊಂಡಿರೋ ನಿಲುವು ನೋಡಿ:
It has been the policy of the Government of India that progressive use of Hindi in the official work may be ensured through persuasion, incentive and goodwill.

ಏನು ಹೀಗಂದ್ರೆ? ಒತ್ತಾಯ, ಆಮಿಷ ಇಲ್ಲವೇ ವಿಶ್ವಾಸ - ಈ ಮೂರುಗಳನ್ನು ಭಾರತೀಯರಿಗೆ ಒಡ್ಡಿ ಕೇಂದ್ರ-ಸರ್ಕಾರದ ಕೆಲಸಗಳನ್ನು ಹಿಂದಿಯಲ್ಲೇ ಮಾಡಿಸಬೇಕು ಅನ್ನೋದೇ ಇದರ ಅರ್ಥ. ಅಬ್ಬಾ! "ವಿವಿಧತೆಯಲ್ಲಿ ಏಕತೆ"ಗೆ ಏನು ಉದಾಹರಣೆ, ಏನು ಕತೆ! ಒಟ್ನಲ್ಲಿ ಕರ್ನಾಟಕದಲ್ಲಿ ಕನ್ನಡ ಕೇಂದ್ರಸರ್ಕಾರದ ಕೆಲಸಗಳ ಮಟ್ಟಿಗೆ ಗೌಣವಾಗಬೇಕು ಅನ್ನೋದು ನಮ್ಮ ವ್ಯವಸ್ಥೇಲಿ ಬೇರೂರಿದೆ ಅನ್ನೋದು ಸ್ಪಷ್ಟ ಗುರು!

ಈ ಮೂರು ತಂತ್ರಗಳೂ ಹಿಂದಿ ಬಾರದ ಭಾಷಾವಾರು ಜನಾಂಗಗಳ ಮೇಲೆ ಬಹಳ ಸಮರ್ಪಕವಾಗಿ ಉಪಯೋಗವಾಗುತ್ತಿವೆ ಅನ್ನುವುದಕ್ಕೆ ಉದಾಹರಣೆಗಳನ್ನು ಕೊಡುತ್ತ ಹೋದರೆ ಜಾಗವೇ ಸಾಕಾಗಲ್ಲ ಗುರು!

ಕೇಂದ್ರದ ಒತ್ತಾಯಕ್ಕೆ ಮಣಿದೇ ಕರ್ನಾಟಕದಲ್ಲಿ ಹಿಂದಿ ಅನ್ನೋ ಚಪ್ಪಡಿ ಕಲ್ಲನ್ನು ಕನ್ನಡಿಗರು ತಮ್ಮಮೇಲೆ ತಾವೇ ಎಳೆದುಕೊಂಡಿರೋದು (ಇದ್ರಲ್ಲಿ ನಮ್ಮ ರಾಷ್ಟ್ರೀಯ ಪಕ್ಷಗಳ ರಾಜಕಾರಣಿಗಳದಂತೂ ಅದ್ಭುತವಾದ ಪಾತ್ರ!). ಈ ಒತ್ತಾಯದಿಂದಲೇ ಕನ್ನಡದ ಮಕ್ಕಳಿಗೆ ಇವತ್ತು ಹಿಂದಿ ರಾಷ್ಟ್ರಭಾಷೆ ಅನ್ನೋ ಸುಳ್ಳು "ವಿದ್ಯೆ" ಕಲಿಸಲಾಗುತ್ತಿರುವುದು!

ಆಮಿಷಗಳ್ನ ಕಣ್ಣಾರೆ ನೋಡೋದಕ್ಕೆ ಕೇಂದ್ರಸರ್ಕಾರದ ಯಾವುದೇ ಕೆಲಸಕ್ಕೆ ಅಥವಾ ಯವುದೇ ಬ್ಯಾಂಕಿಗೆ ಅರ್ಜಿ ಹಾಕಿ ನೋಡಿದರೆ ಸಾಕು!

ಇನ್ನು ವಿಶ್ವಾಸಕ್ಕೆ ಉದಾಹರಣೆಗಳು ಬೇಕೆ? ಭಾರತಕ್ಕೆ ಒಂದು ರಾಷ್ಟ್ರಭಾಷೆ ಅಂತ ಇರಬೇಕು, ಅದು "ನಮ್ಮದಲ್ಲದ" ಇಂಗ್ಲೀಷ್ ಆಗಿರುವುದಕ್ಕಿಂತ ಹಿಂದಿಯಾಗಿರುವುದೇ ಒಳ್ಳೇದು ಅಂತ ಭಾರತೀಯರಿಗೆಲ್ಲಾ ನಿಧಾನವಾಗಿ ಒಪ್ಪಿಸುತ್ತಾ ಬಂದಿರುವುದೇ ಇದಕ್ಕೆ ಉದಾಹರಣೆ. ಅಂದಹಾಗೆ ಇದಕ್ಕೆ ನಮ್ಮ ಉತ್ತರ - ಕನ್ನಡವನ್ನು ಬಿಟ್ಟು ಬೇರೆ ಪ್ರತಿಯೊಂದು ಭಾಷೆಯೂ ನಮಗೆ "ನಮ್ಮದಲ್ಲದ" ಭಾಷೇನೇ. ಹಿಂದೀನೂ ನಮದಲ್ಲದ್ದು, ಇಂಗ್ಲೀಷೂ ನಮ್ಮದಲ್ಲದ್ದು. ಕನ್ನಡಕ್ಕೂ ಹಿಂದಿಗೂ ಯಾವ ಭಾಷಾವೈಜ್ಞಾನಿಕ ಸಂಬಂಧವೂ ಇಲ್ಲ.

ಭಾರತಕ್ಕೆ ಒಂದೇ ರಾಷ್ಟ್ರಭಾಷೆಯಿರಬೇಕು ಅಂತ ಹಟ ಹಿಡಿಯೋರಿಗೆ ಉತ್ತರ

ಒಂದೇ ರಾಷ್ಟ್ರಭಾಷೆಯಿರ"ಬೇಕು" ಎಂದು ವಾದ ಎತ್ತುವುದರಲ್ಲೇ ಆ ರಾಷ್ಟ್ರ ಮೊದಲಿಂದಲೇ ಒಂದಾಗಿರಲಿಲ್ಲ ಅನ್ನೋದರ ಸ್ಪಷ್ಟವಾದ ಗುರುತು ಅಡಗಿದೆ! ಮೊದಲಿಂದ ಒಂದಾಗೇ ಇದ್ದಿದ್ದರೆ ಒಂದೇ ಭಾಷೆ ಮೊದಲಿಂದಲೇ ಇರುತ್ತಿತ್ತು! ಒಂದು ರಾಷ್ಟ್ರಕ್ಕೆ ಒಂದೇ ರಾಷ್ಟ್ರಭಾಷೆ ಇರುವುದನ್ನು ಪ್ರಪಂಚದಲ್ಲಿ ಬೇರೆಬೇರೆ ಕಡೆ ನೋಡುತ್ತೇವೆ, ನಿಜ. ಆದರೆ ಅದೇ ಭಾರತಕ್ಕೂ ಅನ್ವಯಿಸಬೇಕಾಗೇನಿಲ್ಲ. ಒಂದುವೇಳೆ ಒಂದೇ ಭಾಷೆ ರಾಷ್ಟ್ರಭಾಷೆಯಾಗಲೇಬೇಕು ಅಂತ ಹಟ ಹಿಡಿದರೆ ಅದು ಇಂಗ್ಲೀಷೇ ಆಗಬೇಕು, ಮತ್ತೊಂದಲ್ಲ. ಯಾಕೇಂತೀರಾ? ಇಂಗ್ಲೀಷಿಗಿರುವಷ್ಟು ಶಕ್ತಿ ಮತ್ತು ಅಧಿಕಾರ ಇವತ್ತಿನ ದಿನ ಬೇರೆ ಯಾವ ಭಾಷೆಗೂ ಇಲ್ಲ. ಬೇರೆಬೇರೆ ಭಾಷಾವಾರು ಜನಾಂಗಗಳನ್ನು ಇಡೀ ಪ್ರಪಂಚದಲ್ಲಿ ಒಗ್ಗೂಡಿಸುತ್ತಿರೋ ಭಾಷೆ ಅದು. ಹಿಂದಿಗಾಗಲಿ ಕನ್ನಡವೂ ಸೇರಿದಂತೆ ಬೇರೆಯಾವ ಭಾರತೀಯ ಭಾಷೆಗಾಗಲಿ ಇವತ್ತು ಈ ಯೋಗ್ಯತೆಯಿಲ್ಲ. ಆದ್ದರಿಂದ ಹಟ ಹಿಡಿದವರಿಗೆ ಇದೇ ಉತ್ತರ.

ಭಾರತಕ್ಕೆ ಹೊಂದುವ ಸರಿಯಾದ ಭಾಷಾ ನಿಯಮ ಹೇಗಿರಬೇಕು?

ನಿಜವಾಗಲೂ ಯೋಚಿಸಿ ನೋಡಿದರೆ ಭಾರತದ ಪ್ರತಿಯೊಂದು ಭಾಷೆಯೂ ರಾಷ್ಟ್ರಭಾಷೆಯಾಗಬೇಕು. ಯಾವುದೋ ಆಯ್ಕೆಯ ಒಂದೆರಡಲ್ಲ. ಯೂರೋಪು ಒಕ್ಕೂಟದಲ್ಲಿ ಕೇಂದ್ರ-ಸರ್ಕಾರ ಒಗ್ಗೂಡಿರುವ ಎಲ್ಲಾ ರಾಜ್ಯಗಳ ಭಾಷೆಗಳಲ್ಲೂ ಕೆಲಸ ಮಾಡಕ್ಕೆ ತಯಾರಿರುವಾಗ ಭಾರತಕ್ಕೆ ಯಾಕೆ ಹಿಂದಿ ಅನ್ನೋ ಒಂದೇ ಭಾಷೆ ಮೇಲೆ ಒಲವು? ಈ ಒಲವು ಪ್ರಜಾಪ್ರಭುತ್ವಕ್ಕೆ ಎಷ್ಟು ಹೊಂದುವಂಥದ್ದು? ಈ ಒಲವು ಕರ್ನಾಟಕದಲ್ಲಿ ಕನ್ನಡ ಮತ್ತು ಕನ್ನಡಿಗರು ಸಾರ್ವಭೌಮರಾಗಿರಬೇಕೆಂಬ ಪ್ರತಿಯೊಬ್ಬರ ಸಹಜವಾದ ಆಶಯಕ್ಕೆ ಎಷ್ಟು ಪೂರಕ? ಕೇಂದ್ರ-ಸರ್ಕಾರದ ಕೆಲಸಗಳೆಲ್ಲ ಒಂದೇ ಭಾಷೇಲಿ ಆಗಬೇಕು ಅನ್ನೋ ಚಿಂತನೆಯಾದರೂ ಎಷ್ಟು ಸರಿ? ಇವತ್ತಿನ ದಿನ ತಂತ್ರಜ್ಞಾನದ ಬಳಕೆಯಿಂದ ಪ್ರತಿಯೊಂದು ಭಾಷೆಯಲ್ಲೂ ಆಡಳಿತ ಮಾಡುವುದು ಕಷ್ಟವೂ ಏನಿಲ್ಲ...

10 ಅನಿಸಿಕೆಗಳು:

Anonymous ಅಂತಾರೆ...

Yes.. This problem is being faced by all south Indians expect Tamils.

Our politicians are just idiots who have no idea about all these. For them always the slavery of Delhi high command matters....

But.. will our politicians ever realize this? Can AP, Karnataka and Kerala follow TN?

This is good dream, but quite impossible in the present.

I don't have any hope from parties in AP, Karnataka and Kerala.

Is there any Kannada newspaper publishing this kind of articles? or All Kannada newspaper too are like Kannada politicians?

Thanks!

Anonymous ಅಂತಾರೆ...

hindi hErike eega shishu vihara da haMta dindale naDeyuttide.
anEka "HI PROFILE" (Euro Kids, KIDZEE, AMARA Soundarya vidyalaya), itare play home gaLalli "Dhobhi aaya" anno haaDu kooDa hELi koDthare gotta ??
2 ne varshada makkLige heege brain wash agakke shuru adre saku. avu 5-6 ne taragati ge baro ashtakke saaku .. gOvinda ...
kannaDa "go illinda" agiratte ashTe..

Niranjan Manjunath ಅಂತಾರೆ...

ಇದು ಬರೀ ಬೊಗಳೆ. ಯಾವ ಭಾಷೆಯನ್ನು ಯಾರ ಮೇಲೂ ಹೇರಲಾಗದು. ಇಷ್ಟಾಗಿಯು ಭಾಷೆ ಕಲಿಕೆಯಿಂದ ಯಾರೂ ಏನು ಕಳೆದುಕೊಳ್ಳುವುದಿಲ್ಲ. ಪರಭಾಷೆ ಕಲಿಕೆಯಿಂದ ನೀವು ಕೂಪ ಮಂಡೂಕದಂತಾಗದೆ ಕುವೆಂಪುರವರು ಹೆಳಿದಂತೆ ವಿಶ್ವಮಾನವರಾಗುವಿರಿ. ಜೀವನದಲ್ಲಿ ಹೆಚ್ಚಿನದನ್ನು ಸಾಧಿಸಬೇಕೆಂದಿರುವವರು ಈ ರೀತಿಯ ಚಿಕ್ಕ ಯೋಚನೆಗಳನ್ನು ಬಿಟ್ಟು ದೊಡ್ದದಾಗಿ ಯೊಚಿಸಬೇಕು. ಸ್ವಾಮಿ, ಇಂಗ್ಲಿಷ್ ಕಲಿತ ಮಂದಿ ಗರಿ ಗರಿ ನೋಟು ಎಣಿಸುತ್ತಿಲ್ಲವೆ? ಯಾಕೆ ಗೊತ್ತೆ? ಅವರ ಪ್ರಪಂಚ ದೊಡ್ದದು. ಜೀವನ ಸುಲಭವಾಗುತ್ತದೆ. ಕನ್ನಡದ ಬಗ್ಗೆ ಬರೆದು ಬೇರೆ ಭಾಷೆಯವರನ್ನು ಹಳೆದ ಮಾತ್ರಕ್ಕೆ ನಾವು ಕನ್ನಡಿಗರೆನಿಸಿಕೊಳ್ಳುವುದೆಲ್ಲ. ಕನ್ನಡ ಮಾತಾಡಿ, ಕನ್ನಡ ಬರೆಯಿರಿ. ಕನ್ನಡ ಓದಿ. ಕನ್ನಡವನ್ನು ನಿಮ್ಮ ಪರಭಾಷಾ ಮಿತ್ರರಿಗೆ ಕಲಿಸಿ. ಕನ್ನಡವನ್ನು ಕಲಿತ ಮಿತ್ರರಿಗೆ ಮತ್ತು ಕನ್ನಡ ಮಾತನಾಡುವವರಿಗೆ ನಿಮ್ಮ ಹೆಮ್ಮೆ ತೊರಿಸಿ. ಈ ರೀತಿಯ ಪೊಳ್ಳು ವಿಷಯಗಳನ್ನ್ಲು ದೊಡ್ದದು ಮಾಡುವದು ಕಮ್ಮಿ ಮಾಡಿ. ಕನ್ನಡ ಧ್ವಜವನ್ನು ವಿಶ್ವದಾದ್ಯಂತ ಹಾರಿಸಲು ಮೊದಲು ನೀವು ವಿಶ್ವಮಾನವರಾಗಿರಿ. Do not think small. Always think big. Be a kannadiga at heart but be a global citizen.

Anonymous ಅಂತಾರೆ...

೧. ಯಾವುದು ಬೊಗಳೆ? ಆ ರೀತಿ ಕಾನೂನಿರುವುದು ಬೊಗಳೆಯೇನು? ಸುಮ್ಮನೆ ನೋಡದೆ ಮಾಡದೆ ಬೊಗಳೆ ಎನ್ನಬೇಡಿರಿ ಸ್ವಾಮಿ! rajbhasha.nic.in ಗೆ ಹೋಗಿ ನೀವೇ ನೋಡಿ.

೨. ಇಲ್ಲಿ ಎಲ್ಲಿ ಬೇರೆಭಾಷೆಯವರನ್ನು ಹಳಿದಿದೆ? ಉದಾಹರಣೆ ಕೊಡಿ.

೩. ಪೊಳ್ಳು ವಿಷಯವಂತೆ! ಹಿಂದಿಗಿಂತ ಕನ್ನಡ ಕೀಳುಭಾಷೆ ಎಂಬ ಮನೋಭಾವವನ್ನು ಹುಟ್ಟಿಸುತ್ತಿರುವ ವ್ಯವಸ್ಥೆಯ ಬಗ್ಗಿನ ಮಾತು ಪೊಳ್ಳು ಹೇಗೆ?

೪. ನಿಜವಾದ ವಿಶ್ವಮಾನವತ್ವ ಇರುವವನೇ ಪ್ರತಿಯೊಂದು ಭಾಷೆಯನ್ನೂ ಗೌರವಿಸಬೇಕು, ಬೆಳವಣಿಗೆಗೆ ಹಾದಿ ಮಾಡಿಕೊಡಬೇಕು ಎಂಬ ಕನಸಿಟ್ಟುಕೊಳ್ಳುವುದು.

೫. Sure, always think big, do not think small. It is you who are thinking small - actually not thinking at all; simply flowing with the wind. If only you were thinking and not typing down without thinking, you would have first read and understood what is written in the article. You're again flawed in your proclamation that one needs to be a Kannadiga at heart but a global citizen. If only you were really thinking, you'd have said: Be a global citizen in spirit and a kannadiga in flesh.

6. People like you use the G-word (global) to escape from the harsh fact that you can neither act locally nor globally! It is impossible to act globally. You need to think globally, and act locally. Ever heard of this thing?

Anonymous ಅಂತಾರೆ...

beLiggeyinda nanna snehitarigella e blog link kaLiside,, bahaLashTu janarige hindi rashtra bhashe ,, adanna kaliyondrinda deshda unity ge oLLedu anno tappu kalpane idey,, aadre nimma blog idannu saakashTu vistrata vaagi, adhyayana maaDi namma mundiTTide,, namage hindi bekagilla,, hindi herike viruddha horaTA aaglebeku..

nimmondige naaviddeve guru !

ಆನಂದ್ ಅಂತಾರೆ...

ಪ್ರೀತಿಯ ನಿರಂಜನ್,

ನಿಮಗೆ ಭಾಷಾ ಹೇರಿಕೆ ಅನ್ನೋದ್ರ ಅರ್ಥ ಗೊತ್ತಾಯ್ತಾ ಅನ್ನೋದೆ ಅನುಮಾನಾರೀ. ನಾವು ಚೆನ್ನಾಗಿ ಜೀವನ ಮಾಡಬೇಕು ಅಂದ್ರೆ ಸಂಪಾದನೆ ಮಾಡಬೇಕು. ಹಾಗೆ ಮಾಡಲು ನಮ್ಮದೆ ಉದ್ದಿಮೆ ಇರಬೇಕು ಅಥವಾ ಯಾರ ಬಳಿಯಾದರೂ ಕೆಲಸಕ್ಕೆ ಸೇರಬೇಕು. ಅಂಥ ಉದ್ಯೋಗದ ಅವಕಾಶ ಇರೋ ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ಅವು ನಮ್ಮ ನಾಡಲ್ಲೇ ಕೆಲಸ ಮಾಡುತ್ತಿದ್ದಾಗಲೂ ನಾವು ಹಿಂದಿ ಕಲಿತಿರಲೇಬೇಕು ಅನ್ನೋ ನಿಅಯಮಾನ ಕೇಂದ್ರ ಸರ್ಕಾರ ಮಾಡಿರೋದು ನಿಮ್ಮ ಕಣ್ಣಿಗೆ ಹೇರಿಕೆಯಾಗಿ ಕಾಣ್ಸೋದಿಲ್ವಾ?
ಹೀಗೆ ನಮ್ಮ ನಾಡಿನಲ್ಲೇ ನಾವು ಕೆಲಸಕ್ಕೆ ಸೇರಬೇಕು ಎಂದರೆ ಹಿಂದಿ ಕಲಿತರಬೇಕಾದದ್ದು ಕಡ್ಡಾಯ ಅನ್ನೋ ನಿಯಮ ಮಾಡಿರುವುದರ ಅರ್ಥ ಏನು? ರೇಲ್ವೆಯಲ್ಲಿ ಇತ್ತೀಚಿಗೆ 'ಡಿ' ದರ್ಜೆಯ ಹುದ್ದೆಗಳಿಗೆ ಕರೆದಾಗ ವಿದ್ಯಾರ್ಹತೆ ಎಂಟನೇ ತರಗತಿ ಎಂದು ತೀರ್ಮಾನಿಸಿದ್ದರು. ಆದರೆ ಅರ್ಜಿಯನ್ನು ಹಿಂದಿ/ ಇಂಗ್ಲಿಷ್ ನಲ್ಲಿ ಮಾತ್ರ ಅಭ್ಯರ್ಥಿಯ ಸ್ವಹಸ್ತದಿಂದ ಬರೆದಿರಬೇಕು ಅಂತ ಹಾಕಿದ್ದರು. ಇದರ ಅರ್ಥ ಏನು? ಈ ಉದ್ಯೋಗ ಅವಕಾಶ ಇದ್ದದ್ದು ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೇಲ್ವೆ ವಲಯದಲ್ಲಿ. ತಮಾಶೆ ಅಂದರೆ ಈ ವಲಯದಲ್ಲಿ ಇರೋದು ಮೈಸೂರು, ಬೆಂಗಳೂರು, ಮಂಗಳೂರು ವಿಭಾಗಗಳು. ಅಂದರೆ ನಮ್ಮ ನಾಡಿನಲ್ಲಿ ನಮಗೆ ಕೆಲಸ ಬೇಕೆಂದರೆ ಎಂಟನೆ ತರಗತಿಯಷ್ಟು ಕಡಿಮೆ ವಿದ್ಯಾಭ್ಯಾಸ ಮಾಡಿದ್ದರೂ ನಮ್ಮದಲ್ಲದ ಭಾಷೆಯಲ್ಲಿ ಬರೆಯಲು ಬರಬೇಕು ಅಂತ ಅರ್ಥ ಅಲ್ಲವೆ?
ಒಂದು ಭಾಷಾ ಜನಾಂಗ ತನ್ನ ಹೊಟ್ಟೆಪಾಡಿಗಾಗಿ ತನ್ನದಲ್ಲದ ಭಾಷೆ ಕಲೀಲೆ ಬೇಕು ಅಂತ ನಮ್ಮನ್ನಾಳುವ ಸರ್ಕಾರ (ಕೇಂದ್ರ) ಕಾನೂನು ಮಾಡೊದು ಭಾಷಾ ಹೇರಿಕೆ ಅಲ್ವಾ ಗೆಳೆಯರೇ?

Anonymous ಅಂತಾರೆ...

ಏನ್ ಗುರು, ಇಷ್ಟು ಓಪನ್ ಆಗಿ ಕೇಂದ್ರ ಸರ್ಕಾರ ನಮ್ಮ ಮೇಲೆ ಹಿಂದಿ ಹೇರ್ತಾ ಇರೋ ವಿಷಯ ಮತ್ತು ಅದಕ್ಕೆ ಬೇಕಾದ ಕಾನೂನು ಮಾಡ್ಕೊಂಡಿರೋ ವಿಷಯ ಗೊತ್ತೇ ಇರ್ಲಿಲ್ಲ. ಇದು ಶೋಷಣೆ ಅಲ್ದೇ ಮತ್ತೇನೂ ಅಲ್ಲ.

ನಿರಂಜನ ಅವರೇ ಸುಮ್ನೆ ಕನ್ನಡಿಗರ ಕಾಲೆಳೆಯಬೇಡಿ. ಏನ್ ಗುರು ಹೇಳ್ತಾ ಇರೋದು ಸರಿಯಾಗಿ ಅರ್ಥ ಮಾಡಿಕೊಂಡು ಬರೆಯಿರಿ. ಇಂಗ್ಲಿಷ್ ಕಲಿಯಬೇಡಿ ಅಂತ ಅವರು ಎಲ್ಲೂ ಹೇಳಿಲ್ಲ. ಗರಿ ಗರಿ ನೋಟು ಎಣಿಸೋಕೆ ಹಿಂದಿ ಯಾಕೆ ಬೇಕು? ಕನ್ನಡಿಗ ಯಾವುದೇ ಭಾಷೆ ಕಲಿಯಲಿ. ಅದು ಅವನ ಸ್ವಂತ ಅಗತ್ಯ, ಅಭಿರುಚಿಗಳಿಗೆ ಸಂಬಂಧಿಸಿದ್ದು. ಆದರೆ ಹೇರಿಕೆಯಾಗಬಾರದು.

-ಗುರುಪ್ರಸಾದ

Rohith B R ಅಂತಾರೆ...

ನಿರಂಜನ,
ಗರಿ ಗರಿ ನೋಟು ಎಣಿಸೋಕ್ಕೆ ಹಿಂದಿ/ಇಂಗ್ಲಿಷ್ ಭಾಷೆ ಬೇಕೇ-ಬೇಕು ಅಂದ್ರೆ, ನೀವು ಕನ್ನಡದಿಂದ ಅದು ಸಾಧ್ಯವಿಲ್ಲ ಅಂದಹಾಗಾಗತ್ತೆ. ಅಂದ್ರೆ ನಿಮ್ಮ ಭಾಷೆ ಮತ್ತೆ ನೀವು ಸೋಲನ್ನ ಒಪ್ಪಿಕೊಂಡಂತೆ.. ಹಿಂದಿ/ಇಂಗ್ಲಿಷ್ ಎಂಬ ಭಾಷೆ ಇಲ್ಲದೇ ಇದ್ದಿದ್ದರೆ ಏನ್ ಮಣ್ಣ್ ಮುಕ್ಕ್ತ್ತಿದ್ದ್ರಾ, ಹೇಳಿ? ಅಥ್ವಾ ಇನ್ನ್ಯಾರ್ದಾದ್ರು ಅಂಡ್ ನೆಕ್ಕ್ತಿದ್ದ್ರೋ? ಹುಟ್ಟಿದ ಮೇಲೆ ಸ್ವತಹ ನಿಮ್ಮದು ಅಂತ ಒಂದು ಭಾಷೆ ಕಲ್ತಿದೀರ, ಅದನ್ನ ಬರೀ ಮಾತಾಡಕ್ಕೆ ಬಳಸದೇ ನಿಮ್ಮ ಆ ನೋಟು ದುಡಿಯಲೂ ಉಪ್ಯೋಗ್ಸಕ್ಕೆ ಶುರು ಅಚ್ಚ್‍ಕೊಳಿ.. ಈ ನಿಟ್ಟಿನಲ್ಲಿ ದುಡಿಯಲು ಶುರು ಅಚ್ಚ್‍ಕೊಳಿ..

ಏನ್ರೀ ಇತರ ಭಾಷೆಗೆ ಮೋರೆ ಹೋಗಿ, ಅದಕ್ಕೆ ಸೋತು, ಅದ್ರಲ್ಲೇ ಮೆರಿಯೋ ಪ್ರಯತ್ನ ಮಾಡ್ತಿದೀರಲ್ಲ, ಅದೂ ಈ ಏನ್‍ಗುರು ಅಲ್ಲಿ! ನಿಮಗೆ ಸ್ವಲ್ಪವಾದ್ರೂ ನಾಚಿಕೆ ಅಂತ ಏನಾದ್ರು ಇದ್ಯ?!

Phantom ಅಂತಾರೆ...

ಕ್ಯಾ ಬಾ ಕ್ಯೊನ್ ಬಾ - ಭಾಷೆಯಲ್ಲಿ,
||ಹಿಂದಿ ಹೇರುವ ಸೋಗಿನಲ್ಲಿ|೨|

ಸುಳ್ಳು ಪೊಳ್ಳು ಏಕತೆಯಲ್ಲಿ,
||ಕೇಂದ್ರ ಸರ್ಕಾರದ ಮರ್ಜಿಯಲ್ಲಿ|೨|

ಎಲ್ಲ ಮಾಯ ನಾಳೆ ಕನ್ನಡ ಮಾಯ
ಎಲ್ಲ ಮಾಯ ನಾಳೆ ಕನ್ನಡ ಮಾಯ

Anonymous ಅಂತಾರೆ...

Pls Go through this link.....

http://www.geocities.com/tamiltribune/97/0901.html

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails