ಚೌಕಾಸಿಯಿಲ್ಲದ ವಿಶ್ವೇಶ್ವರಯ್ಯನೋರ ಮೇಲೆ ಆಣೆ!

ಕನ್ನಡಾಂಬೆಯ ಹೆಮ್ಮೆಯ ಮಗ, ಚೌಕಾಸಿಯಿಲ್ಲದ ದಾರ್ಶನಿಕ, ಶ್ರೇಷ್ಠ ಎಂಜಿನಿಯರ್, ಸರಿಸಾಟಿಯಿಲ್ಲದ ವೃತ್ತಿಪರತೆಯ ಕೆಲಸಗಾರ, ಕಾಯಕವೇ ಕೈಲಾಸವೆಂದು ನಂಬಿದ್ದ ಮೈಸೂರಿನ ದಿವಾನರಾಗಿದ್ದ ನಮ್ಮ ಮೋಕ್ಷಗುಂಡಂ ವಿಶ್ವೇಶ್ವರಯ್ಯ ನೋರು ಹುಟ್ಟಿದ ದಿನ ಸೆಪ್ಟೆಂಬರ್ 15 ಅನ್ನು "ಇಂಜಿನಿಯರ ದಿನ" ಅಂತ ಇಡೀ ಭಾರತ ಎಂದಿನಂತೆ ಆಚರಣೆ ಮಾಡ್ತು.

ಕನಸು ಕಾಣಬೇಕಾದರೆ, ಯೋಜನೆಗಳ್ನ ಹಾಕಿಕೊಳ್ಳಬೇಕಾದರೆ, ಕೆಲಸಕ್ಕೆ ಕೈ ಹಾಕಬೇಕಾದರೆ ಚೌಕಾಸಿ ಮಾಡಬೇಡಿ! ದೊಡ್ಡ ದೊಡ್ಡ ಕನಸು ಕಾಣ್ರಿ! ದೊಡ್ಡ ದೊಡ್ಡ ಯೋಜನೆಗಳ್ನ ಹಾಕ್ಕೊಳಿ! ದೊಡ್ಡದೊಡ್ಡ ಕೆಲಸಕ್ಕೆ ಕೈ ಹಾಕಿ! ಶಿಸ್ತಿನಿಂದ ಕೆಲಸ ಮಾಡಿ! - ಇದು ವಿಶ್ವೇಶ್ವರಯ್ಯನೋರ ಜೀವನದಿಂದ ಕಲೀಬೇಕಾದ ಮುಖ್ಯವಾದ ಪಾಠ.

ವಿಶ್ವೇಶ್ವರಯ್ಯನೋರು ಬರೀ ಒಬ್ಬ ಬುದ್ಧಿವಂತ ಇಂಜಿನಿಯರ್ ಆಗಿರಲಿಲ್ಲ. ಔರು ನಮ್ಮ ನಾಡು, ನಾಡಿನ ಜನತೆಯ ಭವಿಷ್ಯಕ್ಕೆ ಮುನ್ನುಡಿ ಬರೆದು, ನಮ್ಮ ನಾಡು ಏಳಿಗೆ ಹೊಂದಬೇಕಾದರೆ ನಾವು ಹೋಗಬೇಕಾದ ದಾರಿ ಬಗ್ಗೆ ಸ್ಪಷ್ಟ ಕಲ್ಪನೆಗಳ್ನ ಇಟ್ಟುಕೊಂಡಿದ್ದು, ಅವುಗಳ್ನ ಯೋಜನಾ ಬದ್ಧವಾಗಿ ತಮ್ಮ ಸೀಮಿತ ಅಧಿಕಾರದ ಅವಧಿಯಲ್ಲೇ ಸಾಕಷ್ಟು ಜಾರಿಗೆ ತಂದೋರು. ಅವರು ಕೆಲಸಮಾಡಿದ ಕನ್ನಡನಾಡಿನಲ್ಲಿ ಮೂಲಭೂತ ಸೌಕರ್ಯಗಳೂ ಇರಲಿಲ್ಲ. ಜನರಲ್ಲಿ ಮೂಢನಂಬಿಕೆಗಳು, ತಾಮಸ ಗುಣ ತುಂಬಿ ತುಳುಕಾಡ್ತಿದ್ವು. ಇಂತಹಾ ಒಂದು ನಾಡ್ನ ಅದೆಷ್ಟು ಮೇಲಕ್ಕೆ ತಂದರು ಈ ಮಹಾನುಭಾವರು!

ನಾಳಿನ ತಂತ್ರಜ್ಞಾನಗಳನ್ನು ಇವತ್ತೇ ಬೆಳೆಸಿ ಉತ್ಪನ್ನಗಳನ್ನು ತಯಾರಿಸಿ ಜಗತ್ತಿನಲ್ಲಿ ಸ್ಪರ್ಧೆ ಮಾಡೋದೇ ನಾಡು ಕಟ್ಟುವ ಸರಿಯಾದ ಮಾರ್ಗ ಅಂತ ಔರು ತಮ್ಮ ನಡೆಯಲ್ಲಿ ತೋರಿಸಿದರು. ನಾಡಿಗೆ ವಿಶ್ವೇಶ್ವರಯ್ಯನೋರ ಕೊಡುಗೆಗಳ ಪಟ್ಟಿ ಮಾಡ್ತಾ ಹೋದರೆ ನಿಲ್ಲೋದೇ ಇಲ್ಲ ಗುರು! ನಮ್ಮ ನೆಲದಲ್ಲೇ ಇರೋ ನೀರು, ಖನಿಜ, ನೆಲ, ವನ ಸಂಪತ್ತು (ಉದಾ: ಶ್ರೀಗಂಧ) ಇವುಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡು ನಮ್ಮ ಜನರ ಅರ್ಥಿಕ ಸಬಲೀಕರಣದ ಸಾಧನೆಗೆ ಶ್ರಮಿಸಿದವರು ಇವರು. ವ್ಯರ್ಥವಾಗುತ್ತಿದ್ದ ಜೋಗದ ನೀರಲ್ಲಿ ವಿದ್ಯುತ್ ತಯಾರಿಕೆಯ ಕನಸು ಕಂಡು ನನಸಾಗಿಸಿದವರು.

ಇವರ ನೀರಾವರಿ ಯೋಜನೆಗಳು ಹಸಿರುಗೊಳಿಸಿದ ಹೊಲಗಳೆಷ್ಟೋ, ಇವರ ಕೈಗಾರಿಕೆಗಳು ಹಸನುಗೊಳಿಸಿದ ಮನೆಗಳೆಷ್ಟೋ. ಪ್ರತಿ ಯೋಜನೆಯೂ ನಾಡ ಮಣ್ಣಿನ ಮಕ್ಕಳಿಗೆ ಕೈತುಂಬ ಕೆಲಸ (ಅದು ಬೇಸಾಯವೇ ಇರಲಿ, ಕೈಗಾರಿಕೆಯೇ ಇರಲಿ) ಕೊಡುವ, ಆ ಮೂಲಕ ಆರ್ಥಿಕ ಬಲ ತಂದುಕೊಡೋ ಯೋಜನೆಗಳೇ ಆಗಿದ್ದವು. ನಾಡ ಏಕೀಕರಣಕ್ಕೆ ಕನ್ನಡ ಸಾಹಿತ್ಯ ಪರಿಷತ್ ಬಣ್ಣಿಸಲಾಗದಷ್ಟು ಮಹತ್ವದ ಕೊಡುಗೆ ನೀಡಿತು. ಉತ್ತರ ದಕ್ಷಿಣ ಕರ್ನಾಟಕದ ಭಾವನಾತ್ಮಕ ಬೆಸುಗೆಗೆ ನಾಂದಿ ಹಾಡಿತು.

ಅಂದಿನ ಕಾಲದಲ್ಲೇ ಅಣೆಕಟ್ಟೆಯ ಬೃಹತ್ ಗೇಟುಗಳ ಪೇಟೆಂಟ್ ಹೊಂದಿದ್ದರು ಅವರು. ತಂತ್ರಜ್ಞಾನದ ಕ್ಷೇತ್ರವನ್ನು ಕೃಷಿಗೂ ವಿಸ್ತರಿಸಿ ವಿಶ್ವವಿದ್ಯಾಲಯ ಕಟ್ತಿದರು. ಕೈಗಾರಿಕೀಕರಣದ ಅಗತ್ಯ ಪೂರೈಸಲು ಇಂಜಿನಿಯರಿಂಗ್ ಕಾಲೇಜು ತೆಗೆದವರು ಅವರು. 1930ರಲ್ಲಿ ಟಯೋಟಾ ಸಂಸ್ಥೆ ಜಪಾನಿನಲ್ಲಿ ಮೋಟಾರು ಕಾರುಗಳ ಉತ್ಪಾದನೆ ಆರಂಭಿಸಿತು. ಸರ್ ಎಂವಿಯವರು ಸುಮಾರು 1939ರಲ್ಲಿಯೇ ಮೈಸೂರಿನಲ್ಲಿ ಒಂದು ಕಾರು ತಯಾರಿಸುವ ಕಾರ್ಖಾನೆಯ ಬಗ್ಗೆ ಯೋಜನೆ ರೂಪಿಸಿದ್ದರು.

ವಿಶ್ವೇಶ್ವರಯ್ಯನೋರೆ, ನಿಮ್ಮ ಮೇಲೆ ಆಣೆ! ಇನ್ನೆಂದಿಗೂ ಚಿಕ್ಕ ಕನಸುಗಳ, ಚಿಕ್ಕ ಯೋಜನೆಗಳ, ಚಿಕ್ಕ ಕೆಲಸಗಳಿಗೇ ನಮ್ಮ ಜೀವನವನ್ನು ಮೀಸಲಾಗಿ ಇಡೋದಿಲ್ಲ! ಕನಸು ಕಾಣುತ್ತೇವೆ, ಚಿನ್ನದ, ರನ್ನದ, ಬಂಗಾರದ ಕನ್ನಡನಾಡನ್ನು ಕಟ್ಟುವ ಕನಸು ಕಾಣುತ್ತೇವೆ. ಮಾಡಿ ತೋರಿಸುತ್ತೇವೆ, ಚಾಚೂ ತಪ್ಪದೆ ನಿಮ್ಮ ದಾರಿಯನ್ನೇ ಹಿಡಿಯುತ್ತೇವೆ, ಶಿಸ್ತಿನಿಂದ ಕೆಲಸ ಮಾಡುತ್ತೇವೆ!

ಇದು ನಿಮ್ಮ ಮೇಲೆ ಆಣೆ!

12 ಅನಿಸಿಕೆಗಳು:

Vijendra ( ವಿಜೇಂದ್ರ ರಾವ್ ) ಅಂತಾರೆ...

ಅವಾಗ ಒಂದೇ ಒಂದು ವಿಶ್ವೇಶ್ವರಯ್ಯ ಕನ್ನಡ ನಾಡನ್ನ ಕಟ್ಟೋಕೆ ಪ್ರಯತ್ನಿಸಿದ್ರು, ಕಟ್ಟಿದ್ರು ಕೂಡ. ಈಗ ಬನವಾಸಿ ಬಳಗದಲ್ಲಿ ಅಂತಹ ನೂರಾರು ವಿಶ್ವೇಶ್ವರಯ್ಯ ಇದ್ದಾರೆ. ಬಲಿಷ್ಟ ಕನ್ನಡ ನಾಡಿನ ಭವಿಷ್ಯ ಕಣ್ಣ ಮುಂದೆ ಬರ್ತಾ ಇದೆ....

"ವಿಶ್ವೇಶ್ವರಯ್ಯನೋರೆ, ನಿಮ್ಮ ಮೇಲೆ ಆಣೆ! ಇನ್ನೆಂದಿಗೂ ಚಿಕ್ಕ ಕನಸುಗಳ, ಚಿಕ್ಕ ಯೋಜನೆಗಳ, ಚಿಕ್ಕ ಕೆಲಸಗಳಿಗೇ ನಮ್ಮ ಜೀವನವನ್ನು ಮೀಸಲಾಗಿ ಇಡೋದಿಲ್ಲ! ಕನಸು ಕಾಣುತ್ತೇವೆ, ಚಿನ್ನದ, ರನ್ನದ, ಬಂಗಾರದ ಕನ್ನಡನಾಡನ್ನು ಕಟ್ಟುವ ಕನಸು ಕಾಣುತ್ತೇವೆ. ಮಾಡಿ ತೋರಿಸುತ್ತೇವೆ, ಚಾಚೂ ತಪ್ಪದೆ ನಿಮ್ಮ ದಾರಿಯನ್ನೇ ಹಿಡಿಯುತ್ತೇವೆ, ಶಿಸ್ತಿನಿಂದ ಕೆಲಸ ಮಾಡುತ್ತೇವೆ!

ಇದು ನಿಮ್ಮ ಮೇಲೆ ಆಣೆ!"

Anonymous ಅಂತಾರೆ...

Bengaloorina antararaashtreeya vimaana nildaaNakke vishweshwariah navara hesariDabeku.

Unknown ಅಂತಾರೆ...

Thumba chennagide article.
Odide mele hosadondu kanasa kaanuva bayake agide. kannadigarigagi dodda company thegiyona,kannadigarige maatra kelasa kottu,karunaadannu belosonaaa.
Vishweshwarayya navaru chiraakaala kannadigara manadalli hasiraagirali.
Jai karnataka

Anonymous ಅಂತಾರೆ...

Sir MV avara sadhane nodi

1891:
Established Deccan Club at Pune.

1899:
Designed a New System of Automatic Waste Weir Flood Gate.

1901:
Introduced the Block System of Irrigation.

1909:
Prepared a Scheme for Flood Protection work and underground drainage for Hyderabad City.

1913:
Started State Bank of Mysore

1914:
Started Mechanical Engineering School at Bangalore

1916:
Established Mysore University and the State Engineering College in Bangalore.

1918:
Approved the plan to establish Bhadravathi Iron and Steel Works and a Number of other Industries.

1927:
Designed and constructed Krishnarajasagar Reservoir.

Public libraries were established in Bangalore and Mysore

1936:
Automobile industry plan was prepared

1937 to 1938:
Mahanadi flood control work in Orissa

1941:
Establishment of All India Manufactures’s Organisation, and was President from 1941-1954

1942:
Started Sri Jayachamarajendra Polytechnic at Bangalore

1952:
Selected the proper site for a new Railway bridge to river Ganga in Bihar.

Director in the Tata Iron & Steel Co. Ltd., Bombay from 1927-55.

Travelled extensively in Europe, Canada, UK and visited U.S.A. five times and Japan twice with a view to gain knowledge and experience for developing our country.

Anonymous ಅಂತಾರೆ...

Bharat Ratna Sir Mokshagundam Visveswarayya's life was a saga of adventure. As an engineer he gained international reputation. He was a pioneer in harnessing the river waters of India. He was the prime architect of Mysore's all-round progress, administratively, educationally and industrially. He founded the All India Manufacturers' Organisation in 1941. As far back as 1934, Visveswarayya published his Planned Economy for India and thus laid the foundation of India's five-year Plans which began in 1952. This centenarian was a byword for impeccable dress and punctuality

Anonymous ಅಂತಾರೆ...

Sir MV avara sadhane-ge illi nodi

http://en.wikipedia.org/wiki/Sir_M_Vishweshwariah

hats off Sir MV and hats off to banavasi baLaga.. GurugaLe nimma jote naaviddivi,, yella seri sundara k'taka kaTToNa

Anonymous ಅಂತಾರೆ...

ಏನ್ ಗುರೂ...
ನೀವು ಮಾತಾಡ್ತಾ ಇರೋದು ತುಂಬಾ ಚೆನ್ನಾಗಿದೆ. ಆದ್ರೆ ಇವೆಲ್ಲ ಮಾಡಕ್ಕೆ ಎಷ್ಟು ವರ್ಷಗಳು ಬೇಕು? ನಿಮ್ಮ ಜೀವಿತ ಅವಧಿಯಲ್ಲಿ ಮಾಡಕ್ ಆಗುತ್ತಾ? ಇದನ್ ಮಾಡಕ್ಕೆ ಅಧಿಕಾರ ಬೇಕಾಗುತ್ತೆ ಅಲ್ವಾ? ಅವತ್ ಮೈಸೂರು ಮಹಾರಾಜರು ಬೆನ್ನೆಲುಬಾಗಿ ನಿಂತಿದ್ದಕ್ಕೇ ಸರ್ ಎಂ.ವಿಗೆ ಅಷ್ಟೆಲ್ಲಾ ಮಾಡಕ್ ಆಯ್ತು. ಇದೆಲ್ಲಾ ಸಾಧ್ಯ ಆಗುತ್ತೆ ಅನ್ಸುತ್ತಾ?

ರಾಮಶೇಷು

Anonymous ಅಂತಾರೆ...

ರಾಮಶೇಷು ಅವರೆ,

ಮೈಸೂರು ಮಹಾರಾಜರು ವಿಶ್ವೇಶ್ವರಯ್ಯನವರ ಬೆನ್ನೆಲುಬಾಗಿ ನಿಂತಿದ್ದು ನಿಜ. ಆದರೆ ಮಹಾರಾಜನೇ "ಬನ್ನಿ ವಿಶ್ವೇಶ್ವರಯ್ಯ್ಯನವರೆ! ನಿಮ್ಮಿಂದ ನಾಡಿಗಾಗಬೇಕಾದ ಕೆಲಸವಿದೆ!" ಎಂದು ಕರೆಯುವಷ್ಟು ಯೋಗ್ಯತೆ ಆ ಮಹಾನುಭಾವನಲ್ಲಿತ್ತು. ಆ ಯೋಗ್ಯತೆಯನ್ನು ನಾವು ಬೆಳೆಸಿಕೊಳ್ಳೋಣ. ಆಗ ಮಹಾರಾಜನೂ ತಲೆಬಾಗಬೇಕು, ಅವರಪ್ಪನೂ ತಲೆಬಾಗಬೇಕು! ಬಾಗದಿದ್ದರೆ ಬಾಗಿಸೋಣ!

ನಮ್ಮ ಜೀವಿತಾವಧಿಯಲ್ಲೇ ಬಹಳ ಬದಲಾವಣೆ ಮಾಡಲು ಸಾಧ್ಯ. ಈಗಾಗಲೇ ಸಾಕಷ್ಟು ಬದಲಾವಣೆ ಆಗಿದೆ, ಆಗುತ್ತಲೂ ಇದೆ. ನಾವು ಗಟ್ಟಿಯಾಗಿ ನಿಂತರೆ ನಮ್ಮನ್ನು ಅಲ್ಲಾಡಿಸಲು ಯಾರ ಕೈಯಲ್ಲೂ ಸಾಧ್ಯವಿಲ್ಲ!

ಇಲ್ಲಿಯವರೆಗೆ ಕನ್ನಡಿಗರು ಗಟ್ಟಿಯಾಗಿ ಹೀಗೆ ನಿಂತಿರಲಿಲ್ಲ, ಅದಕ್ಕೇ ನಾವು ಹೀಗಿದ್ದೇವೆ, ಅಷ್ಟೆ. ಆದರೆ ಈಗೀಗ ನಮ್ಮಲ್ಲಿ ಅಪೂರ್ವವಾಗ ಒಗ್ಗಟ್ಟು ಮತ್ತು ನಾಡಿನ ಬಗ್ಗೆ ಕಾಳಜಿ ಮೂಡುತ್ತಿದೆ. ಇನ್ನು ಇಲ್ಲಿಂದ ಒಳಿತೇ ಸಾಧ್ಯ!

Unknown ಅಂತಾರೆ...

HE IS GREAT ENGINEER SALAAM SIR M V

Anonymous ಅಂತಾರೆ...

Article has got facts about the genius. Proud to be born in the same land where Sir M V has born. But I would like to say one thing to the author, that is, though everywhere we see Mokshagundam for his initial M, it is not the fact. Mokshagundam is a place near kurnool where Sir has took birth but his name's M will stand for his native place MuddenaHalli which is near bangalore. Please correct this. One can see this is his certificates.

Sunil Mallenahalli ಅಂತಾರೆ...

ಕಾಯಕ,ಸಮಯ ಪ್ರಜ್ಞೆ, ಶಿಸ್ತು,ಶ್ರಮ ಜೀವಿ = ವಿಶ್ವೇಶ್ವರಯ್ಯ ನವರು = ಕನ್ನಂಬಾಡಿ ಕಟ್ಟೆ + ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್+ ಮೈಸೂರ್ ಶ್ರೀ ಗಂಧದ ಕಾರ್ಖಾನೆ + ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ + ಇನ್ನೂ ಹಲವಾರು......

Anonymous ಅಂತಾರೆ...

Vishveshvaraiah navaru namma naadige, deshakke atyamoolya koduge kottiddhare avaru maadida saadhaneyannu naavu maadabeku avara hesaranna ulisabeku. Sumne beka bitti aane geene maadbedi kelsa maadi torsbeku.
Sirigannadam Gelge.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails