ವಿಜ್ಞಾನ-ತಂತ್ರಜ್ಞಾನಗಳ್ನ ಕನ್ನಡದಲ್ಲಿ ತರಕ್ಕೆ ಮೊದಲ ಹೆಜ್ಜೆ ಏನು?

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಜ್ಞಾನ ಸಮ್ಮೇಳನ ಉದ್ಘಾಟಿಸುತ್ತ ಉನ್ನತ ಶಿಕ್ಷಣ ಮಂತ್ರಿ ಶ್ರೀ ಡಿ.ಎಚ್. ಶಂಕರಮೂರ್ತಿಗಳು, "ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಪುಸ್ತಕಗಳು ಬೇಕು" ಅಂತ ಹೇಳಿರೋದ್ನ ಇವತ್ತಿನ ಕನ್ನಡ ಪ್ರಭ ವರದಿ ಮಾಡಿದೆ.

ಇದೇ ಶಂಕರಮೂರ್ತಿಗಳಿಗೆ ಕರ್ನಾಟಕ ಅಂದ್ರೇನು, ಕನ್ನಡ ಅಂದ್ರೇನು, ಭಾರತ ಅಂದ್ರೇನು ಅಂತ ಗೊತ್ತಿರಲಿ ಗೊತ್ತಿಲ್ಲದೇ ಇರಲಿ, ಹೇಗೋ ಏನೋ ಈ ಮೂರು ದೊಡ್ಡ ದೊಡ್ಡ ಮಾತುಗಳ್ನ ಹೇಳಿ ಇವತ್ತು ಹೊಗಳಿಕೆಗೆ ಪಾತ್ರ ಅಂತೂ ಆಗಿದಾರೆ:
  • ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂದಪಟ್ಟ ಪುಸ್ತಕಗಳು ಕನ್ನಡದಲ್ಲಿ ಹೆಚ್ಚು ಹೆಚ್ಚು ಪ್ರಕಟವಾಗಬೇಕು
  • ವಿಜ್ಞಾನ ಕಲಿಯಲು ಕನ್ನಡ ಭಾಷೆ ಸೂಕ್ತವಲ್ಲ ಎಂಬ ಭಾವನೆಯನ್ನು ಜನರಿಂದ ಹೋಗಲಾಡಿಸಲು ತಜ್ಣರು ಶ್ರಮಿಸಬೇಕು
  • ಮಾತೃಭಾಷೆಯಲ್ಲಿ ಪಡೆದ ಜ್ಞಾನ ಹೃದಯಕ್ಕೆ ಹತ್ತಿರವಾಗುತ್ತದೆ ಮತ್ತು ಅದನ್ನು ಮತ್ತೊಬ್ಬರಿಗೆ ಪ್ರಸಾರ ಮಾಡಲು ಸುಲಭವಾಗುತ್ತದೆ
ಆದರೆ ಈ ಮೇಲಿನ ವಿಷಯಗಳ್ನ ಕುವೆಂಪುವಿಂದ ಹಿಡಿದು ಐನ್‍ಸ್ಟೈನ್ ಅಂತಹ ಹಿರಿಯರಿಂದ-ತಜ್ಞರಿಂದ-ಬಲ್ಲವರಿಂದ ನಾವು ಕೇಳದೆ ಏನಿಲ್ಲ ! ಮೂರ್ತಿಗಳು ಹೇಳಿರೋದ್ರಲ್ಲಿ ವಿಶೇಷ ಏನಿಲ್ಲ. ವಿಶೇಷ ಇರೋದು ಇದನ್ನ ಕಾರ್ಯರೂಪಕ್ಕೆ ಹೇಗೆ ತರೋದು ಅನ್ನೋದ್ರಲ್ಲಿ. ಬರೀ ಮೂರು ಮುತ್ತು ಉದುರಿಸಿದರೆ ಸಾಲದು, ನಿಜವಾಗಿ ಈ ನಿಟ್ಟಲ್ಲಿ ಕೆಲಸ ಮಾಡ್ಬೇಕು ಗುರು!

ಏನು ಕೆಲಸ ಮಾಡಬೇಕು? ಸರ್ಕಾರ ಮತ್ತು ಸಾರ್ವಜನಿಕರು ಹೇಗೆ ಇದನ್ನ ಕಾರ್ಯಗತ ಮಾಡ್ಬೋದು ಅಂತ ನೋಡ್ಮ.

ಸರ್ಕಾರ ಮಾಡಬೇಕಾದ ಕೆಲಸ

ಸರ್ಕಾರ ಮುಖ್ಯವಾಗಿ ಮೂಲಭೂತ ವ್ಯವಸ್ಥೆ ಕಲ್ಪಿಸಿ ಕೊಡೋ ಅಂಗ ತಾನೆ? ಇವತ್ತಿನ ದಿನ ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನಗಳು ಬರಬೇಕಾದ್ರೆ ಕೆಲವು ಮೂಲಭೂತ ಕೆಲಸಗಳು ಆಗಬೇಕಿವೆ ಗುರು. ಉದಾಹರಣೆಗೆ:
  • ಹೊಸದಾಗಿ ವಿಜ್ಞಾನ-ತಂತ್ರಜ್ಞಾನಗಳ ಬಗ್ಗೆ ಬರಿಯೋರ್ನ ಗುರುತಿಸಿ, ಅವರಿಗೆ ಪ್ರೋತ್ಸಾಹ ಕೊಡಬೇಕು
  • ಪ್ರೌಢಶಾಲಾ ಹಂತದ ವರೆಗೆ ಕನ್ನಡದ ಪಠ್ಯಗಳನ್ನು ತಿಳಿಗನ್ನಡದಲ್ಲಿ ಸರಳವಾಗಿರುವಂತೆ ಮಾಡಿ, ಹೆಚ್ಚು ಆಕರ್ಷಕವಾಗಿರುವಂತೆ, ಮನಸ್ಸಿಗೆ ನಾಟುವಂತೆ ಹೊಸತುಮಾಡಿಸಬೇಕು
  • ಕನ್ನಡದ ಪಠ್ಯಗಳ್ನ ಇಂಗ್ಲೀಷಿಂದ ಅನುವಾದ ಮಾಡಿ ರಚಿಸುವ ಪದ್ದತಿ ಕಿತ್ತೊಗೀಬೇಕು, ಬದಲಾಗಿ ಕನ್ನಡದಲ್ಲೇ ನೇರವಾಗಿ ಚಿಂತನೆ ಮಾಡಿ ಬರೆದ ಪಠ್ಯಗಳು ಹೊರಬರಬೇಕು
  • ಪಠ್ಯಗಳನ್ನು ರೂಪಿಸಲು ಸಾರ್ವಜನಿಕರಿಂದ ಸಲಹೆ ತೊಗೊಳೋ ವ್ಯವಸ್ಥೆ ಹುಟ್ಟಿಹಾಕಬೇಕು
  • ಶಿಕ್ಷರಿಗೆ ಕನ್ನಡದ ಮಕ್ಕಳಿಗೆ ಪಾಠ ಹೇಳಿಕೊಡುವುದು ಹೇಗೆ ಅನ್ನೋ ಬಗ್ಗೆ ತರಬೇತಿ ಕೊಡಬೇಕು
  • ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸಿ ಪ್ರೋತ್ಸಾಹ ಕೊಡಬೇಕು
  • ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಂದ/ಶಿಕ್ಷಕರಿಂದ ನಡೆಯೋ ಸಂಶೋಧನೆಯ ಸಾರಂಶವನ್ನ ಕನ್ನಡದಲ್ಲಿ ಕಡ್ಡಾಯವಾಗಿ ಬರೆಸಲು/ಮೂಡಿಸಲು ಇಂತಿಷ್ಟು ಅಂಕ ಅಂತ ಮೀಸಲಿಡಬೇಕು
ನಾವು-ನೀವು ಮಾಡಬೇಕಾದ ಕೆಲಸ

ಇನ್ನು ಜವಾಬ್ದಾರಿಯುತ ಕನ್ನಡದ ಸಾರ್ವಜನಿಕರಾಗಿ ನಾವು-ನೀವು ಈ ನಿಟ್ಟಿನಲ್ಲಿ ಏನೇನು ಮಾಡಬಹುದು ಅಂತ ಯೋಚಿಸ್ತಾ ಹೋದ್ರೆ....
  • ಅಂತಹ ಪುಸ್ತಕಗಳ ಬಗ್ಗೆ ಆಸಕ್ತಿ ತಾಳಬೇಕು, ತೊಗೊಂಡು ಓದಬೇಕು
  • ಅಂತಹ ಪುಸ್ತಕಗಳ್ನ ಬರೆಯಕ್ಕೆ ಇಷ್ಟ ಪಡೋರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು
  • ಕನ್ನಡ ಮಾಧ್ಯಮದಲ್ಲಿ ಓದ್ತಿರೋರನ್ನು ನೋಡಿ ಪ್ರೋತ್ಸಾಹ ಕೊಡಬೇಕು, ಗೇಲಿ ಮಾಡುವ ನಾಡದ್ರೋಹದ ಕೆಲಸ ಮಾಡಬಾರದು.
  • ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಹೆಚ್ಚು ಹೆಚ್ಚು ಸೇರಿಸಬೇಕು
  • ನಮ್ಮ ನಮ್ಮ ಕೆಲಸಗಳಲ್ಲಿ ಆದಷ್ಟೂ ಕನ್ನಡದಲ್ಲೇ ವಿಜ್ಞಾನ-ತಂತ್ರಜ್ಞಾನ ಸಂಬಂಧಿಸಿದ ಚಂತೆನೆ-ಆಲೋಚನೆಗಳನ್ನು ಮಾಡಬೇಕು, ಇತರ ಕನ್ನಡಿಗರೊಡನೆ ಕನ್ನಡದಲ್ಲೇ ಈ ಸಂಬಂಧದ ಚರ್ಚೆಗಳಿಗೆ ಕೂರಬೇಕು
  • ಈಗಾಗಲೇ ನಮಗೆ ಗೊತ್ತಿರೋ ಜ್ಞಾನ-ವಿಜ್ಞಾನದ ಕನ್ನಡವನ್ನ ಮರೀದೆ ಸದಾ ಬಳಸುತ್ತಾ ಇರಬೇಕು, ಬೇರೆಯವರಿಗೆ ಹೇಳಿಕೊಡುತ್ತಲೂ ಇರಬೇಕು
  • ನಮ್ಮ ಬಳಿ ಇರೋ ಜ್ಞಾನವನ್ನು ಕನ್ನಡದಲ್ಲಿ ಬರೆದು, ಕಿರಿಯರಿರಗೆ ತಲುಪಿಸಬೇಕು
  • ವಿಶ್ವವಿದ್ಯಾನಿಲಯಗಳನ್ನು-ಸರ್ಕಾರವನ್ನು ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂದ ಪಟ್ಟಂತೆ ಕಲಿಕೆಗೆ ಅನುವು ಮಾಡಲು ಆಗ್ರಹಿಸುವುದು
ಇದ್ಯಾವುದೂ ಮಾಡಕ್ಕೆ ಕಷ್ಟ ಇಲ್ಲ ಗುರು! ಮಾಡಬೇಕು, ಅಷ್ಟೆ. ಈ ಪ್ರತಿಯೊಂದು ಹೆಜ್ಜೆಯಿಂದಾನೂ ನಮ್ಮ ಭವ್ಯಕರ್ನಾಟಕದ ಕನಸು ಒಂದು ಗೇಣು ಹತ್ತಿರ ಆಗತ್ತೆ ಗುರು!

29 ಅನಿಸಿಕೆಗಳು:

Vijendra ( ವಿಜೇಂದ್ರ ರಾವ್ ) ಅಂತಾರೆ...

ಈ ಬರಹ ತುಂಬಾ ಚೆನ್ನಾಗಿದೆ ಗುರು.. ನಾನು ಕನ್ನಡ ಮಾದ್ಯಮದಲ್ಲಿ ಕಲಿತವ.. ಅದ್ರ ಬಗ್ಗೆ ನಂಗೆ ಈಗ್ಲೂ ಹೆಮ್ಮೆ ಇದೆ...ನನ್ನ ಯೋಚನಾ ಶಕ್ತಿ, ನನ್ನ ಭಾಷೆ (ಇಂಗ್ಲೀಶ್ ಹಾಗು ಕನ್ನಡ ಎರಡೂ) ಎಲ್ಲಾ ಇತರರಿಗಿಂತ ತುಂಬಾ ಎತ್ತರದಲ್ಲಿದೆ. ಇದಕೆಲ್ಲಾ ಕಾರಣ ನನ್ನ ಕನ್ನಡ ಶಿಕ್ಷಣ..
ಎಲ್ಲರೂ ಕನ್ನಡ ಶಿಕ್ಷಣದ ಬಗ್ಗೆ ಒಲವು ತೋರಿಸ್ಬೇಕು. ಅದರ ಮೊದಲು ನಮ್ಮ ಶಿಕ್ಷಣ ಕ್ರಮ ಮೂಲದಿಂದಲೇ ಬದಲಾಗಬೇಕು.... ನಾವು ಮಾಡ್ಬೇಕು..

Anonymous ಅಂತಾರೆ...

Dreams!! :)

I don't see any use of science in Kannada.. Rather Kannada lacks scientific tempo.

Whatever scientific literature in Kannada is full of awkward and stupid lingo. It is not only difficult understand, but also very weired to be called Kannada.

Scientific literature in Kannada is nothing but a crazy writing where all the English terminologies are replaced by awkward Sanskrit words.

Who cares to read science in Kannada? Even after 60 years, these people are thinking about the start. Funny!!

when will they implement? How capable are they? I really doubt.

All these circus is nothing but feeding some lobby Sanskrit/Kannada pundits from the taxers pocket.

Enguru come on stop bluffing!!

Ganesh K ಅಂತಾರೆ...

Geleyare nimagaagi

Apaarthakosha

www.aparthakosha.wordpress.com

omme bheti kodi

Anonymous ಅಂತಾರೆ...

ಒಳ್ಳೆಯ ಯೋಚನೆ ಗುರು! ನಾವು ಆಡಳಿತ(ಸರ್ಕಾರ) ಮಾಡುತ್ತೆ ಅಂತ ಕಾದು ಕುಳಿತು ಕೊಳ್ಳುವುದೇ ಬೇಡ. ಕನ್ನಡಕ್ಕಾಗಿ ಮಾಡಬೇಕಾದ ಕರ್ತವ್ಯವನ್ನು ನಾವು ಮಾಡೋಣ. "ನಾವು-ನೀವು ಮಾಡಬೇಕಾದ ಕೆಲಸ" ದಲ್ಲಿ ಇನ್ನೊಂದು ಮಾಡಬಹುದು. ನಾವು ನಮಗೆ ಗೊತ್ತಿರುವ ವಿಷಯಗಳ (mathematics, basic sciences, computer science, engineering, medical) ಬಗ್ಗೆ ಕನ್ನಡದಲ್ಲಿ ಬರೆದು ಆ ಬರಹಗಳನ್ನು ಬಲೆ(InterNet)ಯ ತಾಣಗಳಲ್ಲಿ ಹಾಕಬಹುದು. ಬಹಳ ಮಂದಿ ಅದನ್ನು ಓದಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ಬರಹಗಾರರು ತಮ್ಮ ಬರಹಗಳನ್ನು ಅದರಂತೆಯೇ ಚೆನ್ನಗೊಳಿಸಿದರೆ, ಮೇಲ್ಮಟ್ಟದ ವಿಜ್ಞಾನ-ತಂತ್ರಜ್ಞಾನ ಬರಹಗಳು ನಮ್ಮಲ್ಲಿ ಮೂಡಿದಾವು.

ಇನ್ನೊಂದು ಗಮನದಲ್ಲಿಡ ಬೇಕಾದ ವಿಷಯವೇನೆಂದರೆ, ಇಂತಹ ಹೊಸ ಬರಹಗಳಲ್ಲಿ ನಾವು ಹೆಚ್ಚು ಕನ್ನಡ ಪದಗಳನ್ನು ಬಳಸಬೇಕು. ಸಂಸ್ಕ್ರುತ ಆದಷ್ಟೂ ಕಡಿಮೆ ಮಾಡ ಬೇಕು. ಈಗ ಇರುವ ಬರಹಗಳಲ್ಲಂತೂ ಸಂಸ್ಕ್ರುತ ತುಂಬಿ ತುಳುಕುತ್ತೆ.

Anonymous ಅಂತಾರೆ...

Someone avare,

nimmantaha palaayanavaadi heDigaLige ee lekhana anvayisuvudilla. nimge yenoo madakke aagolla andmele manege hogi baLe totkonDu kambLi hodkonDu malko hogi!!. maaDi torisuva taakattiruva kannaDigarige maatra ee lekhana !!

Unknown ಅಂತಾರೆ...

Illa Guru,Science kannadalli irbku annodu naanu oppodilla,world is turning out be globalization.Do you think learning science in kannada really helps out,Never.I have seen many example who really struggles hard to pick-up when they enter fromm Kannada to English medium.
My friend is an example for that.Although he had very good percentage he was rejected from joining a very popular PUC college at Mysore.(Even though the college principle was Kannadiga).
I am not againest Kannada medium,but in my concern Education should be in English
Jai karnataka

Pramod P T ಅಂತಾರೆ...

ಬರಹ ಚೆನ್ನಾಗಿದೆ. ಸೂಕ್ತ ಸಲಹೆಗಳು!
ಇಲ್ಲೇ ಓದಿ, ಒಂದೆರಡು ಅನಿಸಿಕೆಗಳನ್ನ ಬರೆದು ಮರೆತು ಬಿಡೊದಕ್ಕಿಂತ ಮುಂದಿನ ಕಾರ್ಯಕ್ರಮಗಳ ಬಗ್ಗೆ ಯೋಚಿಸುವುದೊಳಿತು.

Anonymous ಅಂತಾರೆ...

aadhyaatmakke Samskruta hego, aaDubhaashege kannaDa hego haage vignaanakke englishe chenda. prati bhaashegoo adaradde aada choukattide. adara pharidiyannu meeridare sariyiruvudilla. ootadalli uppinakaayi onchooru irabeku ashte. aadare uppina kaayiyanne oota vaagi tinnalu saadhyave?

Amarnath Shivashankar ಅಂತಾರೆ...

The article is very well written but how near is it to practicality?
Is it possible to implement the things here in India , I dont think so...
In India, we have many different languagas and the central government for sure will never let us go about these stuff.
The examples of Japan, France and Germany cannot be implied well here.They are all independent and are not under the obligations of others.
All these day dreams could be met only if Karnataka is made a seperate country :)

Anonymous ಅಂತಾರೆ...

satyavaada maathu gurugale :)

aadare
"ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಹೆಚ್ಚು ಹೆಚ್ಚು ಸೇರಿಸಬೇಕು"
ee vondhu maathu swalpa kashta.. eegina IT prapanchadalli aangla bhaasheya gyaana bahala atyagathya..
aadre english maadhyama shaalegalalli, hindi/tamil/malayalam annu prathama bhaasheyaagi bodhiso badhalu.. kannadavannu prathama bhaashe anta kaddaya madidare bahala olledu..

Modhala hejje -
Pradyapakaru kannadadalli bodhisuvanthaadare innu hecchagi vidyarthigalige anukoola agutthe, haagu chennagi artha maadkobodu :)
(kelavu jana, pusthakadalli yeniruttho, adhanne kanta paata maadkondu namge uppisthaare ashte)

ondh chikka Udaharane : VTU navru foreign authors book na prescribe maadthaare.. aadre namma thathana aanegu andralli odhidre artha agolla, sakkath standard aagi irutthe.. ee local authors namge artha agohange patyapustakana bardirthaare..
haageye taragathigalalli kannadadalli bodhisuva vishayagalu bega artha agutthe..

anonymous avru helidanthe.. thanthragyaana da pusthakagalu kannada madhamadalli internetnalli bandre, namge bahala upayoga agutthe.. odhovru odhe odhtaare.. kannada namma maathru bhaashe agirodrinda, vishayagalu beka thalege naatutthe..

yaaru yenaadru helli, namma bhaashe ulsodhu namma karthavya..

"All these circus is nothing but feeding some lobby Sanskrit/Kannada pundits from the taxers pocket."

----> namma janakke anukoola agoantha kelsa naave maadbeku, pararanna nambokke aguttha someone ?

kannadadalli vigyaana haagu thantragyaana puskagalu adashtu bandare nijavaaglu santoshada vishya :)(eegaagale saakashtu bandide kooda, aadre namma shaikshanika patyapusthakagalu barebeku anno aase)

Jai Kannadaambe

Anonymous ಅಂತಾರೆ...

ಕನ್ನಡದಲ್ಲಿ ವಿಜ್ಞಾನ ಕಲಿಕೆ ಸಾಧ್ಯವಿಲ್ಲ ಎಂದುಕೊಳ್ಳುವವರಿಗೆ ಉತ್ತರ:

ಕನ್ನಡದಲ್ಲೇ ನಿಜವಾದ ವಿಜ್ಞಾನದ ಕಲಿಕೆ ಸಾಧ್ಯ. ಅದನ್ನು ಇಂಗ್ಲೀಷಲ್ಲಿ ಮಾಡುವುದರಿಂದ ಭಾಷೆಯೇ ದೊಡ್ಡ ತೊಡಕಾಗಿ ನಿಜವಾದ ವಿಜ್ಞಾನದ ಕಲಿಕೆಗೆ ಕೊಡಬೇಕಾದ ಗಮನ ಇಂಗ್ಲೀಷ್ ಭಾಷೆಯನ್ನು ಕಲಿಯುವುದರಲ್ಲಿ ಹೋಗುತ್ತದೆ. ಇಲ್ಲಿಯವರೆಗೆ ಕನ್ನಡದಲ್ಲಿ ವಿಜ್ಞಾನದ ಕಲಿಕೆ (ಕಾಲೇಜು ಮಟ್ಟದಲ್ಲಿ) ಸಮರ್ಪಕವಾಗಿ ನಡೆದಿಲ್ಲ ಎನ್ನುವುದಕ್ಕೆ ಕನ್ನಡ ಭಾಷೆ ಕಾರಣವಲ್ಲ, ಕನ್ನಡಿಗರ ಪ್ರಯತ್ನದಲ್ಲಿನ ದೋಷಗಳೇ ಕಾರಣ. ಇಂತಹ ದೋಷಗಳಲ್ಲಿ ಅತಿ ಹೆಚ್ಚು ಸಂಸ್ಕೃತದ ಪದಗಳ ಬಳಕೆಯೂ ಒಂದು. ಎರದನೆಯದು ಈ ಕೆಲಸ ವ್ಯವಸ್ಥಿತವಾಗಿ ನಡೆಯದೆ ಇದ್ದಿದ್ದು. ಈ ದೋಷಗಳನ್ನು ಹೋಗಿಸಿಕೊಂಡರೆ ಕನ್ನಡ ಪ್ರಪಂಚದ ಫ್ರೆಂಚು, ಜರ್ಮನ್, ಡಚ್, ಹೀಬ್ರೂ, ಜಪಾನಿ ಮುಂತಾದ ಭಾಷೆಗಳಿಗೆ ಪೈಪೋಟಿ ಕೊಡುವಂತಹ ಸ್ಥಾನಕ್ಕೆ ಬರುವುದರಲ್ಲಿ ಸಂದೇಹವಿಲ್ಲ.

It's not Kannada which is stupid. It's Kannadigas till now who have produced stupid scientific literature in Kannada.

And again, the fact that Kannada scientific literature abounds with Sanskrit terminology is part of the PROBLEM. We will need to take this as the point of departure and introduce simpler terminology in Tiligannada. For example, ಎಲೆಹಸಿರು is better than ಪತ್ರಹರಿತ್ತು for chlorophyll. These mistakes have to be set right.

ಒಟ್ಟಿನಲ್ಲಿ ಇಲ್ಲಿಯವರೆಗೆ ಕನ್ನಡದಲ್ಲಿ ನಿಜವಾಗಲೂ ವಿಜ್ಞಾನವನ್ನು ತರುವ ಪ್ರಯತ್ನ ಸರಿಯಾಗಿ ವ್ಯವಸ್ಥಿತವಾಗಿ ನಡೆದಿಲ್ಲ. ಅದನ್ನು ನಡೆಸುವುದಕ್ಕೆ ಇನ್ನೂ ಕಾಲ ಮಿಂಚಿಲ್ಲ.

Anonymous ಅಂತಾರೆ...

It's stupid to believe the globalization demands us to work in English. That's bullcrap, and is leading India towards being the coolie capital of the world.

What globalization demands is knowledge. Only the knowledgeable survive in a globalized world. And your own mother tongue is the best vehicle for that. This is accepted by people all over the world. Only you guys haven't got this point even after so many years of your so called great civilization!

You need to understand the difference between (a) the language needed to interact with the outer world (English) and (b) the language needed to produce real scientific research / knowledge. Here in Europe we understand it pretty well. Even Japan understands it pretty well. It's only you Indians who are so obsessed with English and so lacking in determination that you guys keep milking a dead cow (which is to expect scientific output in English!). Instead, do the real work in your own languages and use English to communicate it with global researchers / customers.

Cut the crap, dudes! What Enguru is saying makes absolute sense. It's high time you understand that English can't solve your education problems.

Anonymous ಅಂತಾರೆ...

illi kelavu mandige samskrutavannu dweshisuvudu yendare kannaDada abhimaana yendu koNdantide..'patra harittu' modalaada kannaDa padagaLannu naavu eegaagale saMskrutadinda sweekarisiddeve. avugaLu haage iddare olleyadu. hege 'bus', 'car','bike' emba english padagaLannu ade hesarinalli naavu kannaDadalli kareyuttiddevo haage, iruva saMskruta padagaLannoo haage ye upayogisidalli tappenilla.

Anonymous ಅಂತಾರೆ...

ರೀ ಆನುದೇವ,

ನಿಮ್ಮಂಥವರಿಗೆ ಯಾರು ಯಾವುದನ್ನು ದ್ವೇಷಿಸುತ್ತಿದ್ದಾರೆ ಯಾರು ಯಾವುದನ್ನು ಪ್ರೀತಿಸುತ್ತಿದ್ದಾರೆ ಎನ್ನುವುದನ್ನು ಬಿಟ್ಟರೆ ಬೇರೆ ಏನೂ ತಲೆಗೆ ಹೊಳೆಯುವುದಿಲ್ಲವೇನು?

"ಪತ್ರ ಹರಿತ್ತು" ಎನ್ನುವುದು ಬೇಡ, "ಎಲೆ-ಹಸಿರು" ಎನ್ನೋಣ ಎಂದರೆ ಸಂಸ್ಕೃತವನ್ನು ದ್ವೇಷಿಸಿದಂತೆ ಹೇಗಾಯಿತು? ನಿಮ್ಮ ಪ್ರಕಾರ "Mummy" ಎನ್ನುವ ಬದಲು "ಅಮ್ಮ" ಎನ್ನೋಣ ಎಂದರೆ ಇಂಗ್ಲೀಷನ್ನು ದ್ವೇಷಿಸಿದ ಹಾಗೇನು?

ಸುಮ್ಮನೆ ಅರ್ಥವಿಲ್ಲದ ಮಾತಾಡಬೇಡಿ. ಇಲ್ಲಿ ಪ್ರಶ್ನೆ ರಾಗ-ದ್ವೇಷಗಳದಲ್ಲ. ಎಲೆ ಮತ್ತು ಹಸಿರು - ಇವೆರಡೂ ಗೊತ್ತಿರುವ ಮಗುವಿಗೆ ಎಲೆಹಸಿರು ಎಂದು ಹೇಳಿಕೊಡುವುದು ಸುಲಭವೋ ಪತ್ರವೂ ಗೊತ್ತಿಲ್ಲದ, ಹರಿತ್ತೂ ಗೊತ್ತಿಲ್ಲದ ಮಗುವಿಗೆ ಪತ್ರಹರಿತ್ತನ್ನು ಹೇಳಿಕೊಡುವುದು ಸುಲಭವೋ ಎನ್ನುವುದು ಪ್ರಶ್ನೆ.

Anonymous ಅಂತಾರೆ...

"aadhyaatmakke Samskruta hego, aaDubhaashege kannaDa hego haage vignaanakke englishe chenda." ಎಂದ ಶ್ರೀರಾಮ್ ಅವರೆ,

ಈಗ ನಡೆಯಲು ಕಲಿಯುತ್ತಿರುವ ಮಗುವಿಗೆ ಗೋಡೆ ಬೇಕು, ಈಗ ಅಕ್ಷರ ಕಲಿಯುತ್ತಿರುವ ಮಗುವಿಗೆ ಸ್ಲೇಟು-ಬಳಪ ಬೇಕು, ಈಗ ತಾನೇ ಬಚ್ಚಲು ಮನೆಗೆ ಹೋಗಿಬರುವುದನ್ನು ಕಲಿಯುತ್ತಿರುವ ಮಗುವನ್ನು ನೋಡಿಕೊಳ್ಳಲು ಯಾರಾದರೊಬ್ಬರು ಬೇಕು.

ಆದರೆ ಆ ಮಗುವು ದೊಡ್ಡದಾಗಲೇಬಾರದು ಅಥವಾ ದೊಡ್ಡದಾದಮೇಲೂ ಗೊಡೆ-ಸ್ಲೇಟು-ಬಳಪ-ನೋಡಿಕೊಳ್ಳೋರು ಬೇಕು ಎಂದು ವಾದಿಸುವವರಿಗೆ ಮತಿಗೆಟ್ಟಿದೆ ಎಂದು ಹೇಳದೆ ಬೇರೆ ದಾರಿಯಿಲ್ಲ.

ಅಧ್ಯಾತ್ಮಕ್ಕೂ ಸಂಸ್ಕೃತಕ್ಕೂ ಇರುವ ನಂಟು ಜಾಸ್ತಿ ದಿನ ಮುಂದುವರೆಯುವುದಿಲ್ಲ.

ಹಾಗೆಯೇ ವಿಜ್ಞಾನಕ್ಕೂ ಇಂಗ್ಲೀಷಿಗೂ ಇರುವ ನಂಟೂ ಜಾಸ್ತಿ ದಿನ ಮುಂದುವರೆಯುವುದಿಲ್ಲ.

ಸಂಸ್ಕೃತ-ಇಂಗ್ಲೀಷುಗಳು ಕೇವಲ ಕನ್ನಡದ ಬೆಳವಣಿಗೆಯ ಈ ಹಂತದಲ್ಲಿ ಬೇಕಾಗಿರುವ ಭಾಷೆಗಳು. ಕೊನೆಗೆ ಇವೆರಡೂ ಬೇಡ.

ಹೌದು, ಊಟಾದಲ್ಲಿ ಉಪ್ಪಿನಕಾಯಿರಬೇಕು. ಇಂಗ್ಲೀಷು-ಸಂಸ್ಕೃತಗಳೇ ಉಪ್ಪಿನಕಾಯಿಗಳು. ಒಂದು ಮಾವಿನದು, ಇನ್ನೊಂದು ನಿಂಬೇಹಣ್ಣಿನದು. ಬರೀ ಇವೆರಡನ್ನೇ ತಿನ್ನುತ್ತೇನೆ ಎನ್ನುತ್ತಿರುವ ನಿಮಗೆ ಆ ದೇವರು ಬುದ್ಧಿ ಕೊಡಲಿ!

Anonymous ಅಂತಾರೆ...

koenrad dude..

"Cut the crap, dudes! What Enguru is saying makes absolute sense. It's high time you understand that English can't solve your education problems."

Now you cut the crap..!!

1)First of all you are writing in English,
2) Japan is a independent country, Karnataka is not
3)"And your own mother tongue is the best vehicle for that." Then why are YOU writing in English.!!

All useless blah blah blah!!

Anonymous ಅಂತಾರೆ...

Mr. Someone,

I don't give a damn whether your Karnataka is an independent country or not. The point I'm making is that irrespective of all your political hassles, the only way to real progress for linguistic communities crossing a population of 10 million is to apply their language in linguistic regiters which "matter". Education is one such register. And whether it's science or humanities or whatever - this rule does not change.

And BTW, I can't write in Kannada because I do not know how to. I'm a researcher of Socio-linguistics in Asia, and I can only make out a little bit of Kannada. So don't come out with more of your personal bullcrap.

Anonymous ಅಂತಾರೆ...

Koenrad

"I can only make out a little bit of Kannada. So don't come out with more of your personal bullcrap."

You are simply great!! If you can only make out a little bit of Kannada, how did u understand the article? a little bit?

:)

Please do read a single science literature in Kannada, specially by Mysore University :) !

WHATEVER..!!

I better cut the crap!! :)

Anonymous ಅಂತಾರೆ...

ravi avre,

maatige modale neevu yeleyoLagiruva patra harittannu huDukikondu hogutteera. aadare kaNNedurige oDaaDuttiruva 'Bus','Car' gaLu nimma kaNNige yeke beeLuvudilla? ee aangla paDagaLannu kannaDeekarisuva bagge eke yochisuvudilla? namma bhaasheyalli indu aangla padagaLu tooriruvashtu saMskruta padagalu bandilla.

indu yaava chikka makkaLu maataDidru
"Hello uncle, breakfast aayta? office ge nimge Time aytalva?"

anta keltave? eega heLi idaralli yeshtu SaMskruta ide? yeshtu English padagaLu ive anta?

Anonymous ಅಂತಾರೆ...

Ravi avre,
haage noDidre 'vignaana', 'tantragnaana' modalaada padagaLoo saMskruta mooladinda bandave.

eega nnavu intaha padagaLannella kannaDa padakoshadinda tegedu haakutta kootare, hosadaada bhaasheyanne srushtisabekaadeetu. mattu aa bhaashege 'kannaDa' ennuva badalu bere innenaadaroo hesarannu iDabekaadeetu.!!

aaddarinda ee 'bhaashaa shudheekaraNa' maaDuva badalu hosa aavishkaaragaLu , hosa padagaLa baLake hechchabeku ashte.

Anonymous ಅಂತಾರೆ...

ಆನುದೇವ,

ಬಸ್ಸು, ಕಾರು - ಇವುಗಳು ಕನ್ನಡ ಪದಗಳೇ ಎಂದು ಒಪ್ಪಿಕೊಂಡು ಅದನ್ನು ಮುಬರುವ ನಿಘಂಟುಗಳಲ್ಲಿ ಸೇರಿಸಿಬಿಡಬೇಕು. ಯಾಕೆ ಎನ್ನುವುದಕ್ಕೆ ಮುಂದೆ ಓದಿ.

ವಾಸುದೇವ,

ಕನ್ನಡದಿಂದ ಸಂಸ್ಕೃತದ ಪ್ರತಿಯೊಂದು ಪದವನ್ನೂ ತೆಗೆದು ಹಾಕಬೇಕು ಎಂದು ನಾನೇನು ಹೇಳಲಿಲ್ಲ. ಯಾವಯಾವ ಪದಗಳು ಈಗಾಗಲೇ ಬಹಳಷ್ಟು ರೂಢಿಯಲ್ಲಿವೆಯೋ, ಅವುಗಳನ್ನು ಬದಲಾಯಿಸುವುದರಿಂದ ಗೊಂದಲವೇ ಯಾವ ಪದಗಳಿಂದ ಹೆಚ್ಚುತ್ತದೆಯೋ ಅವುಗಳನ್ನು ಹಾಗೇ ಉಳಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ ಹೊಸ ಪದಗಳನ್ನು ಹುಟ್ಟಿಸುವಾಗ ಹಿಂದಿನಿವರಿಗಿಂತ ಸ್ವಲ್ಪ ಹೆಚ್ಚು ತಲೆ ಉಪಯೋಗಿಸಿ ಒಳ್ಳೊಳ್ಳೆಯ ಪದಗಳನ್ನು ಹುಟ್ಟಿಸುವ ಪ್ರಯತ್ನ ಮಾಡಬೇಕು.

[ಆನು|ವಾಸು]ದೇವ,

ನಿಮ್ಮಿಬ್ಬರಿಗೂ ನನ್ನ ಮಾತೇ ಸರಿಯಾಗಿ ಅರ್ಥವಾಗುತ್ತಿಲ್ಲ ಎನಿಸುತ್ತಿದೆ. ನಾನು ಹೇಳುತ್ತಿರುವುದು ಇಷ್ಟೇ: ಕನ್ನಡದಲ್ಲಿ ಹೊಸ ಪದಗಳನ್ನು ಹುಟ್ಟಿಸುವಾಗ ಈ ಕೆಳಗಿನ ಕ್ರಮ ಬಳಸಿಕೊಳ್ಳುವುದು ಒಳಿತು:

೧. ಕನ್ನಡದಲ್ಲಿ ಆ ಪದವೇ ಇದ್ದರೆ ಅದನ್ನು ಬಿಟ್ಟು ಬೇರೆ ಯಾವುದನ್ನೂ ಉಪಯೋಗಿಸಬಾರದು. ಇಲ್ಲದಿದ್ದರೆ -

೨. ಇವತ್ತಿನ ಕನ್ನಡಭಾಷೆಯಲ್ಲಿರುವ ಪದಗಳನ್ನೇ ಬಳಸಿ ಹೊಸ ಪದಗಳನ್ನು ಹುಟ್ಟಿಸಬೇಕು. ಇದಾಗದಿದ್ದರೆ -

೩. ಇವತ್ತು ಕನ್ನಡಭಾಷೆಯಲ್ಲಿ ಬಳಕೆಯಾಗದಿದ್ದರೂ ಹಿಂದೆ ಬಳಕೆಯಲ್ಲಿದ ಪದಗಳನ್ನು ಉಪಯೋಗಿಸಿ ಹೊಸ ಪದಗಳನ್ನು ಹುಟ್ಟಿಸಬೇಕು. ಇದಾಗದಿದ್ದರೆ -

೪. ಇವತ್ತು ಇಂಗ್ಲೀಷ್, ಸ್ಪ್ಯಾನಿಷ್, ಫ್ರೆಂಚ್, ರಷ್ಯನ್, ಹಿಂದಿ, ತಮಿಳು, ತೆಲುಗು, ಸಂಸ್ಕೃತ ಮುಂತಾದ ಯಾವುದೇ ಭಾಷೆಗಳಲ್ಲಿ ಬಳಕೆಯಾಗುತ್ತಿರುವ ಮತ್ತು ಕನ್ನಡಿಗನ ನಾಲಿಗೆಯಲ್ಲಿ ಸುಲಭವಾಗಿ ಹೊರಳುವ ಪದಗಳನ್ನು ಆಮದು ಮಾಡಿಕೊಂಡು ಅವುಗಳನ್ನು "ಕನ್ನಡಿಸಬೇಕು" (ಇದರಿಂದಲೇ Bus ಬಸ್ಸು ಆಗಿರುವುದು, Car ಕಾರು ಆಗಿರುವುದು. ಇದರಿಂದಲೇ ಸಂಸ್ಕೃತದ ತಂತ್ರಜ್ಞಾನ ಕನ್ನಡಿಗನ ನಾಲಿಗೆಯಲ್ಲಿ "ತಂತ್ರಗ್ನಾನ" ಆಗಿರುವುದು. ಆದರೂ ಸಂಸ್ಕೃತದ ಮೇಲಿನ "ಅಭಿಮಾನ"ಕ್ಕೆ ಅದೇ ಜ್ಞಕಾರವನ್ನು ಉಪಯೋಗಿಸುತ್ತಿದ್ದೇವೆ, ಅಷ್ಟೆ!).

ಹೊಸ ಪದಗಳು ಸರಳವಾಗಿದ್ದಷ್ಟೂ ಒಳ್ಳೆಯದು. ಇಲ್ಲಿ ಸರಳ ಎಂದರೆ "ಕನ್ನಡಿಗನ ನಾಲಿಗೆಯಲ್ಲಿ ಸುಲಭವಾಗಿ ಹೊರಳಬಲ್ಲ" ಎಂದು.

Anonymous ಅಂತಾರೆ...

Someone,

I read this article from the english transliteration link - with the help of my Kannada colleague K S Gaonkar.

From curiosity I found the discussion (in english) here amusing and completely against what I know and understand, so just thought of writing my two cents' worth.

It's up to you to take it or leave it.

Auf Wiedersehen!

Anonymous ಅಂತಾರೆ...

koenrad,

what a trouble, you took!!

"it's up to you to take it or leave it. "

Well, I left it!! :)

ಆನಂದ್ ಅಂತಾರೆ...

Mr. someone :
ಕನ್ನಡದಲ್ಲಿ ವಿಗ್ನಾನದ ಸಾಹಿತ್ಯ ಇಲ್ಲ ಅಂತಿದೀರಾ. ಅಂದ್ರೆ ಇವತ್ತಿಲ್ಲ ಅಂದ್ರೆ ಮುಂದೂ ಇರಬಾರ್ದು ಅಂತ ಏನಿಲ್ಲವಲ್ಲ? ನೀವು ಹೇಳೋ ಒಂದು ಮಾತು ನಿಜಾನೆ, ಇಂದಿನ ದಿನ ಕನ್ನಡದಲ್ಲಿ ವಿಗ್ನಾನ ಅಂತ ನಾವು ಓದುತ್ತಿರೋದು ಜನಸಾಮಾನ್ಯರು ಅರಿಯಲು ಕಠಿಣವಾದ ಪದಗಳಿಂದ ಕೂಡಿದ ಬರಹಗಳು. ಇದನ್ನೇ ನಾವು ಸರೀ ಮಾಡಬೇಕಿರೋದು... ನಾವು ವಾಸ ಮಾಡೋ ಮನೆ ಸೋರ್ತಿದೆ ಅಂದ್ರೆ, ವಾಸಕ್ಕೆ ಸರಿ ಇರಲಿಲ್ಲ ಅಂದ್ರೆ ಅದನ್ನು ಸರಿ ಮಾಡಿಕೊಳ್ಳಬೇಕೋ ಅಥವಾ ಬಿಟ್ಟು ಓಡಿಹೋಗಬೇಕೋ ನೀವೇ ಯೋಚಿಸಿ.
ಎಲ್ಲದಕ್ಕೂ ಒಂದು ಮೊದಲ ಹೆಜ್ಜೆ ಇದ್ದೇ ಇರುತ್ತೆ, ನಿಮ್ಮ ಬದುಕಿನ ಅವಧಿಗಾಗಿ ನಾಡು ಕಟ್ಟುವ ಯೋಚನೆ ಮಾಡಬೇಡಿ. ನೂರು ವರ್ಷಗಳಿಗಾಗಿ ಯೋಜನೆ ಮಾಡಿ, ಅದಕ್ಕಾಗಿ ಜನರನ್ನ ಸಂಘಟಿಸಿ ಅಂತ ಸೋನಿ ಸ್ಥಾಪಕ ಶ್ರೀ ಅಕಿಯೋ ಮೊರಿಟಾ ಬರೀತಾರೆ.ಇದನ್ನು ತಿಳ್ಕೊಂಡ್ರೆ ಈ ಲೇಖನದಲ್ಲಿ ಏನ್ ಬರೆದಿದೆ ಅನ್ನೋದರ ಅರಿವಾಗ ಬಹುದು.

ಶ್ರೀ. ಪ್ರಶಾಂತ್ :
ಜಾಗತೀಕರಣ ಅನ್ನೋದನ್ನ ನೀವು ತಪ್ಪು ಅರ್ಥ ಮಾಡ್ಕೊಂಡಿದೀರ. ತೆರೆದ ಮಾರುಕಟ್ಟೆಯಲ್ಲಿ ನಿಮ್ಮ ಅತ್ಯುತ್ತಮ ಭಾಷಾ ಗ್ನಾನಕ್ಕಿಂತ ನೀವು ತಯಾರು ಮಾಡೋ ವಸ್ತುಗಳ ಗುಣಮಟ್ಟ ಉತ್ತಮವಾಗಿದ್ರೆ ಮಾತ್ರ ನೀವು ಗೆಲ್ಲಕ್ ಆಗೋದು. ಭಾರತದಂತಹ ನೂರು ಕೋಟಿ ಜನಸಂಖ್ಯೆಯ ದೇಶಕ್ಕೆ ಒಂದು ಮೊಬೈಲ್ ಫೋನ್ ತಯಾರು ಮಾಡಕ್ ಆಗ್ತಿಲ್ಲ ಅಂದ್ರೆ ಏನು ಕಾರಣ ಯೋಚಿಸಿ. ನಿಮಗೆ ಅರ್ಥವಾಗುವ ಭಾಷೇಲಿ ಕಲಿತರೆ ವಿಷಯದ ಆಳಕ್ಕೆ ಹೋಗಬಲ್ಲಿರಿ, ಆಗ ಮಾತ್ರ ಹೊಸದನ್ನು ಕಂಡುಹಿಡಿಯಬಲ್ಲಿರಿ, ಅಲ್ವಾ?
ಇದನ್ನು ಯಾವುದೇ ಭಾಷೆಯನ್ನು ಬಿಟ್ಟು ಬಿಡೋ ಅರ್ಥದಲ್ಲಿ ನೋಡಬೇಡಿ. ನಮಗೆ ಇಂಗ್ಲಿಷ್ ಭಾಷೇನೆ ಬೇಡ ಅಂತ ಅಲ್ಲ. ಹೊರ ಜಗತ್ತಿನ ಜೊತೆ ವ್ಯವಹರಿಸಲು ಇಂಗ್ಲಿಷ್ ಕಲಿಯೋಣ. ಅದೊಂದೆ ಯಾಕೆ? ಮಾರುಕಟ್ಟೆ ಗೆಲ್ಲೋಕೆ ಜಪಾನೀಸ್, ಮಂದಾರಿನ್, ಫ್ರೆಂಚ್, ಜರ್ಮನ್ .... ಎಲ್ಲವನ್ನು ಕಲಿಯಬೇಕು ನಾವು. ನಿಜವಾದ ಗ್ನಾನವನ್ನು ಬಿಟ್ಟು ನಮ್ಮದಲ್ಲದ ಭಾಷೆಯ ಕಲಿಕೆಯ ಬೆನ್ನ ಹಿಂದೆ ಬಿದ್ದರೆ ಬರೀ ಭಾಷಾಧಾರಿತ ಸೇವಾ ಕ್ಷೇತ್ರದಲ್ಲಿ ಮಾತ್ರ ಉಳಿಯಬಹುದು. ಇದರ ಅರ್ಥ ಆ ಕ್ಷೇತ್ರ ಬೇಡ ಅಂತ ಅಲ್ಲ. ಅದೂ ಬೇಕು, ಆದ್ರೆ ಅದೊಂದೇ ಸಾಲದು ಅಂತ.

Mr. sriram :
ಇಂಥ ಭಾಷೆಗೆ ಇಂಥ ಯೋಗ್ಯತೆ ಮಾತ್ರ ಇರುತ್ತೆ ಅನ್ನೋ ನಿಮ್ಮ ನಂಬಿಕೇನೆ ಪೊಳ್ಳು ಸ್ವಾಮಿ. ಸಂಸ್ಕೃತದಲ್ಲಿ ಅಧ್ಯಾತ್ಮ ಮಾತ್ರವಲ್ಲ, ಕಾಮಸೂತ್ರವೂ ಇದೆ, ತಂತ್ರಗ್ನಾನದ ಅಥರ್ವಣ ವೇದವೂ ಇದೆ. ವೇದ ಗಣಿತವೂ ಇದೆ, ವಿಗ್ನಾನವೂ ಇದೆ.
ಅದೇ ರೀತಿ ವಿಗ್ನಾನದ ಭಾಷೆ ಅಂತ ತಾವು ಹೇಳ್ತಿರೋ ಇಂಗ್ಲಿಷ್ ಭಾಷೆಯಲ್ಲಿ ಸಾಹಿತ್ಯವೂ ಇದೆ, ಶೇಕ್ಸ್ ಪಿಯರ್ ನ ನಾಟಕವೂ ಇದೆ.
ಜೊತೆಗೆ ವಿಗ್ನಾನದ ಬರಹವೆನ್ನುವ ಬಹಳಷ್ಟು ಇಂಗ್ಲಿಷ್ ಭಾಷೆಗೆ ಬಂದಿರುವುದೇ ಲ್ಯಾಟೀನ್, ಗ್ರೀಕ್ ಇತ್ಯಾದಿಗಳಿಂದ.
ಹಾಗೇ ಕನ್ನಡ ಇಂದು ಆಡುಮಾತಿಗೆ ಸೀಮಿತಗೊಂಡಿದ್ದರೆ ಅದು ಭಾಷೆಗೆ ಇರುವ ಮಿತಿ ಅಲ್ಲ, ಅದನ್ನು ಬಳಸದವರ ಅಯೋಗ್ಯತನ.

Mr. naanu:
ಗುರಿ ಮುಟ್ಟಲು ನಾನಾ ಅಡೆತಡೆಗಳು ಇದ್ದೇ ಇರುತ್ವೆ ಅಲ್ಲವೇ ಮಿತ್ರಾ? ಎಲ್ಲ ಸರಿ ಹೋದ ಮೇಲೆ ಇದನ್ನು ಮಾಡ್ತೀನಿ ಅನ್ನೋಕಾಗುತ್ತಾ? ನಮ್ಮ ಉಳಿವಿಗೆ ಏಳಿಗೆಗೆ ಇದು ಸರಿಯಾದ ದಾರಿ, ಇದೊಂದೇ ದಾರಿ ಅಂತ ನಮಗೆ ಅರಿವಾದರೆ, ನಾವೆಲ್ಲ ಒಂದಾಗಿ ಈ ಕೆಲಸ ಮಾಡಿದರೆ ಈ ಗುರಿ ಸಾಧನೆಗೆ ಬರಿಯ 25 ವರ್ಷ ಸಾಕು. ನಾವು ಒಂದಾದರೆ ಈ ಅಡೆತಡೆಗಳೆಲ್ಲ ಯಾವ ಲೆಕ್ಕ?

Mr.Pavan,
ನಿಮ್ಮ ತಾಯಿನುಡಿಯ ಮೇಲಿನ ಅಭಿಮಾನಕ್ಕಾಗಿ ಕನ್ನಡ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸಬೇಕು ಅನ್ನೋ ವಾದ ಅರೆಬೆಂದದ್ದು. ಆ ಮಾತನ್ನು ಇಲ್ಲಿ ಹೇಳ್ತಿಲ್ಲ. ನಿಮ್ಮ ಮಕ್ಕಳ ಕಲಿಕೆ ಸುಲಲಿತವಾಗಿ ಆಗಬೇಕೆಂದರೆ ತಾಯ್ನುಡಿಯಲ್ಲಿ ಕಲಿಸೋಣ ಅಂದದ್ದು. ಅಲ್ರೀ... ಆನೆ ಅನ್ನೋದ್ನ " elephant ಅಂದ್ರೆ ಆನೆ" ಅಂತ ಯಾಕ್ರೀ ಕಲೀಬೇಕು? ಮಕ್ಳುನ್ನ ಅಷ್ಟಕ್ಕೇ ಬಿಡ್ತೀವಾ? ಅದರ ಕಾಗುಣಿತ ಬೇರೆ ಕಂಠಪಾಠ ಮಾಡುಸ್ತೀವಿ. ಕೂಡೋದ್ನ, ಕಳೆಯೋದ್ನ, ಮಗ್ಗೀನ, ವಿಗ್ನಾನಾನ ಯಾಕ್ರಿ ಇಂಗ್ಲಿಷ್ ಭಾಷೇಲಿ ಕಲೀಬೇಕು? ಇಂಗ್ಲಿಷ್ ಭಾಷೇನ ಕಲಿಯೋದು ಖಂಡಿತಾ ಬೇಕು, ಆದ್ರೆ ಇಂಗ್ಲಿಷ್ ಮಾಧ್ಯಮ ಮೊದಲ ಕಲಿಕೆಯ ಕಾಲಕ್ಕಂತೂ ಕಲಿಕೆಗೆ ತೊಡಕೇ ಅಲ್ಲವೇನ್ರಿ?

Mr. aanu dEva . . .
ಇಲ್ಲಿನ ಉದಾಹರಣೆಗಳನ್ನು, ನಮ್ಮ ಸಾಮಾನ್ಯ ಕನ್ನಡಿಗನ ನಾಲಗೆಯಲ್ಲಿ ಹೊರಳಬಲ್ಲ, ಸಾಮಾನ್ಯನ ಬಳಕೆಯಲ್ಲಿರುವ ಸರಳ ಪದಗಳನ್ನು ಬಳಸಬೇಕು ಅಂತ ನೋಡಬೇಕೆ ಹೊರತು, ಸಂಸ್ಕೃತ- ಇಂಗ್ಲಿಷ್-ಕನ್ನಡ ಅಂತ ಅಲ್ಲ. ಪತ್ರಹರಿತ್ತು ಅನ್ನುವ ದಿನಬಳಕೆಯಲ್ಲಿಲ್ಲದ ಪದ ಯಾಕೆ ಬಳಸಬೇಕು? ಅನ್ನುವ ಉದಾಹರಣೆನ ಉದಾಹರಣೆಯಾಗಿ ಮಾತ್ರ ನೋಡಿ. ಬಸ್ ಅನ್ನೋದನ್ನು ಬಸ್ಸು ಅನ್ನುವುದರಲ್ಲಿ, ಕಾರ್ ಅನ್ನು ಕಾರು ಅನ್ನುವುದರಲ್ಲಿ ಯಾವ ತಪ್ಪೂ ಇಲ್ಲ. ನಿಮಗೆ ಇಷ್ಟವಿರಲಿ ಬಿಡಲಿ ಇದಕ್ಕೆ ನೀವು ಕಠಿಣ ಪದ ಹುಟ್ಟು ಹಾಕಿದರೂ ಅದು ಜೀವಂತ ಉಳಿಯುವುದಿಲ್ಲ. ಅದಕ್ಕೆ ಉದಾಹರಣೆ ದೂರದರ್ಶನ ಅನ್ನೋ ಪದ. ಜನ ಬಳಸೋದು ಟಿವಿ ಅಂತ್ಲೇ ಅಲ್ವಾ? ನಮ್ಮ ವಿಗ್ನಾನ ತಂತ್ರಗ್ನಾನದ ಪಠ್ಯವೂ ಹೀಗೆ ಜನಬಳಕೆಯ ಪದಗಳಿಂದ ಕಂಗೊಳಿಸಲಿ ಅನ್ನುವುದು ಬರಹಗಾರನ ಆಶಯ. ಇಷ್ಟರ ಮೇಲೆ ಪರಭಾಷೆಗಳಿಂದ ಪದಗಳ್ನ ಪಡ್ಯೋದು ಒಂದು ಭಾಷೆಯ ಉಳಿವಿಗೆ ಅಗತ್ಯ ಮತ್ತು ಅದೇ ಒಂದು ಜೀವಂತ ಭಾಷೆಯ ಲಕ್ಷಣ.

Mr.vasudev:
ವಿಜ್ಞಾನ - ತಂತ್ರಜ್ಞಾನ ಇವೆಲ್ಲಾ ಸಂಸ್ಕೃತ ಪದಗಳು ನಿಜ. ಸಂಸ್ಕೃತ ಪದಗಳ್ನ ಬಳಸಬೇಡಿ ಅಂತ ಯಾರ್ ಹೇಳ್ತಿದಾರೆ? ಸರಳವಾದ ಕನ್ನಡ ಪದಗಳನ್ನು ಬಳಸಿ, ಇಲ್ದಿದ್ರೆ ಹುಟ್ ಹಾಕಿ ಅಂತಿದಾರೆ ಇಲ್ಲಿ. ನಿಜವಾಗಿ ಹೊಸ ಭಾಷೆ ಹುಟ್ಟು ಹಾಕ್ತಿರೋದು ಸಂಸ್ಕೃತ ಬಳಕೆ ಹೆಚ್ಚುಗಾರಿಕೆಯದು ಎಂದು ಭಾವಿಸುವ ಜನರು. ನೋಡಿ ನೀವೆ, ಹೆಬ್ಬೆಂಗಳೂರು ಅಥವಾ ದೊಡ್ಡ ಬೆಂಗಳೂರು ಅಂತ ಆಗಬೇಕಾದದ್ದು ಬೃಹತ್ ಬೆಂಗಳೂರು ಆಗಿದೆ. (ಬೃಅತ್ ಅಂತ್ಲೇ ಹೆಚ್ಚಿನವರು ಉಚ್ಚರಿಸೋದು) ಹೀಗೆ ದೊಡ್ದಸ್ತಿಕೆಗೆ ಸಂಸ್ಕೃತ ಬಳಸಬಾರದು ಅಂತ ಮಾತ್ರ ಮಾತಾಡ್ತಿರೋದು ಇಲ್ಲಿ.

ನನ್ನಿ

ತಿಮ್ಮಯ್ಯ

Anonymous ಅಂತಾರೆ...

ಗೆಳೆಯರೇ,
ಕನ್ನಡಕ್ಕೆ ತಂತ್ರಜ್ಞಾನ ತರುವ ಯತ್ನವಾಗಿ "ಅಲ್ಯುಮಿನಿಯಮ್ ಡೈ ಕ್ಯಾಸ್ಟಿಂಗ್" ಎಂಬ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಒಂದು ವಿಷಯಕ್ಕೆ ಪದಕೋಶ ಬರೆಯಲಾಗುತ್ತಿದೆ. ಇದರಲ್ಲಿ ಬಳಸಿರುವ ಕೆಲ ಪದಗಳು ನಿಮ್ಮ ಗಮನಕ್ಕೆ.
die casting = ಅಚ್ಚೆರಕ,
Cylinder = ಟೊಳ್ಳು ಉರುಳೆ
Piston = ತಳ್ಳುಕ
Gravitation = ನೆಲಸೆಳೆ ಬಲ
Blister = ಬಿಸಿಗುಳ್ಳೆ
Grease = ಕೀಲು ಬೆಣ್ಣೆ

ಈ ರೀತಿ ಪ್ರತಿ ಪದಕ್ಕೆ ಕನ್ನಡ ಅರ್ಥ ಕೊಡಲಾಗುತ್ತಿದೆ. ಜೊತೆಗೆ ಆ ಪದವನ್ನು ವಿವರಿಸಿ ಬರೆಯಲಾಗುತ್ತಿದೆ ( ರೇಖಾ ಚಿತ್ರಗಳ ಸಹಿತ). ಈ ಪದಕೋಶದಲ್ಲಿ ಸುಮಾರು 1000ಕ್ಕೂ ಹೆಚ್ಚಿನ ಪದಗಳನ್ನು ವಿವರಿಸಲಾಗುತ್ತಿದೆ.
ಈ ಹೊತ್ತಿಗೆ ಸಿದ್ಧವಾಗಲು ಇನ್ನಷ್ಟು ಕೆಲಸ ನಡೆಯಬೇಕಾಗಿದ್ದು ಸುಮಾರು ಮೂರು ತಿಂಗಳ ಸಮಯದ ಅಗತ್ಯವಿದೆ.

ವಿಶ್ವಾಸಿ

ಆನಂದ್

Anonymous ಅಂತಾರೆ...

@ ವಿಜೇಂದ್ರ ರಾವ್, ನೀವು ಹೇಳೋದು ನಿಜ. ತಾಯಿನುಡಿಯಲ್ಲಿ ಒಳ್ಳೆ ಶಿಕ್ಷಣ ಸಿಕ್ರೆ ಯೋಚನಾ ಶಕ್ತಿ ಚನ್ನಾಗಿರುತ್ತೆ. ನಮ್ಮ ವಿಚಾರಗಳಲ್ಲಿ ಗೊಂದಲಗಳು ಕಡಿಮೆ ಇರ್ತವೆ.

ವಿಜ್ಞಾನ-ತಂತ್ರಜ್ಞಾನದಲ್ಲಿ ಅಪ್ಪಟ ಕನ್ನಡವನ್ನ ಬಳಸಿದರೆ ವೈಜ್ಞಾನಿಕ-ತಾಂತ್ರಿಕ ವಿಚಾರಧಾರೆ ಬಲಶಾಲಿಯಾಗುತ್ತೆ. ಸಂಸ್ಕೃತದ ಪ್ರಭಾವದಿಂದ ನಮ್ಮ ನಾಲಿಗೆಗೆ ಹೊಂದದ ಪದಗಳನ್ನ ವಿಜ್ಞಾನ-ತಂತ್ರಜ್ಞಾನದಲ್ಲಿ ಬಳಸ್ತಾ ಇದೀವಿ. ಇಂಗ್ಲೀಷೇ ಬೇಕು ಅನ್ನೋ ಗುಲಾಮಗಿರಿತನದಿಂದ ನಮ್ಮ ಸೃಜನಶೀಲತೆ ಬತ್ತಿ ಹೋಗಿದೆ. ಜರ್ಮನಿ, ಫ್ರಾನ್ಸ, ರಷ್ಯ, ಜಪಾನ್ ಮತ್ತು ಇತರ ದೇಶಗಳಲ್ಲಿ ವಿಜ್ಞಾನವನ್ನ ತಮ್ಮ ನುಡಿಗಳಲ್ಲೇ ಕಲೀತಾರೆ. ವಿಜ್ಞಾನ-ತಂತ್ರಜ್ಞಾನಕ್ಕೆ ಆ ದೇಶಗಳ ಕೊಡುಗೆಯೂ ಅಪಾರವಾಗಿದೆ. ಇಂಗ್ಲೀಷನ್ನ ಕೊಂಡಿಯಾಗಿ ಇತರ ದೇಶದವರೊಂದಿಗೆ ವ್ಯವಹರಿಸಲು ಉಪಯೋಗಿಸ್ತಾರೆ.

ನಮ್ಮ ಬೇರುಗಳನ್ನ ಸರಿಪಡಿಸ್ಲಿಕ್ಕೆ ಪ್ರಾಥಮಿಕ ಶಿಕ್ಷಣವನ್ನ ಸರಿಪಡಿಸಬೇಕು. ಇಲ್ಲದಿದ್ರೆ ಗುಲಾಮರಾಗೆ ಇರ್ತೀವಿ.

Anonymous ಅಂತಾರೆ...

neevu heLod khare aitri..aadre vignaana-tantragnaana emba saamaanya padagaLannu utpaadisuva saamarthya namma kannaDa bhaashege illave? bhaashege ashtondu shakti illave? ondu vichaara lahari ashte.

nodi ide reeti bahaLashtu padagaLu kannaDadalli haasu hokkaagive.

innu 'bruhat bengaLooru'. Just like Big,Bigger, biggest, we can use 'dodda','tumba doDDa'&'ati doDda'. illi 'bruhat BengaLooru' endu kareyalu horatiruvudu namma kannaDada 'tumba doDDa' padada saraLa vyavashte ashte. why do we need to crib here??

haage noDidare KannaDa-vignaana padakoshadalli bahaLashtu saMskruta padagaLive. idarasrtha ishte, indaadaroo, innu mundeyaadaroo ondu nirdhishta pada kannaDa bhAsheyalli dorakalilla vendare athava doreta pada ashtu artha poorNavilladalli saMskrutadinda padagalannu tegedukoLLuvudaralli tappenilla.

Anonymous ಅಂತಾರೆ...

ಆನುದೇವ ಕನ್ನಡದವನು . . .

ಕನ್ನಡದಲ್ಲಿ ವಿಜ್ಞಾನಕ್ಕೆ ಹೆಚ್ಚರಿವು, ನಲ್ಲರಿವು, ಆಳರಿವು ಇತ್ಯಾದಿ ಯಾವ ಪದವನ್ನಾದರೂ ಬಳಸಬಹುದು. ತಂತ್ರಜ್ಞಾನಕ್ಕೆ ಚಳಕರಿವು, ಕುಶಲರಿವು ಅಂತ ಕರೀಬೌದು ಅಲ್ವಾ? ಪದಗಳಿಲ್ಲ ಅಂತ ಅನ್ನೋದು ನಿಜವೇ ಆಗಿದ್ದ ಸಂದರ್ಭದಲ್ಲಿ, ವಿಜ್ಞಾನವನ್ನು ವಿಗ್ನಾನ ಅಂತಲೂ ತಂತ್ರಜ್ಞಾನವನ್ನು ತಂತ್ರಗ್ನಾನ ಅಂತಲೂ ಬಳಸಬಹುದು.
ಮುಖ್ಯವಾಗಿ ಇರೋದನ್ನ ಬಳುಸ್ತೀನಿ, ಇಲ್ದಿದ್ರೆ ಹುಡುಕ್ತೀನಿ, ಸಿಗದಿದ್ರೆ ಹುಟ್ಟು ಹಾಕ್ತೀನಿ ಅನ್ನೋ ಮನಸ್ಸು ಬೇಕು ಅಷ್ಟೆ.
ನಿಮ್ಮ ಮುಂದಿನ ಪ್ರಶ್ನೆ ಅದನ್ನು ಯಾರು ಬಳಸ್ತಾರೆ? ಯಾರಿಗೆ ಅರ್ಥ ಆಗುತ್ತೆ? ಅಂತ ತಾನೆ.
ಯಾವ ಪದಕ್ಕೂ ಮೊದಲು ಎಲ್ಲರಿಗೂ ಅರಿವಿದ್ದುದರಿಂದ ಬಳಕೆಯಲ್ಲಿ ಸ್ಥಾನ ಸಿಗಲ್ಲ. ಉದಾಹರಣೆಗೆ 20 ವರ್ಷದ ಹಿಂದೆ 'windows' ಅಂದ್ರೆ ಕಿಟಕಿಗಳು ಅಂದ್ಕೊತಾ ಇದ್ವಿ. ಆದ್ರೆ ವಿಷಯಕ್ಕೆ ಯಾವ ಸೂತ್ರ ಸಂಬಂಧ ಇಲ್ದಿದ್ರೂ ಈಗ ಹಾಗಂದ್ರೆ ms windows ಅಂತ ಅರ್ಥ ಮಾಡ್ಕೋತೀವಿ. QUIZ ಪದ ಹುಟ್ಟಿದ ಕಥೆಯೂ ತಮಗೆ ತಿಳಿದಿರಬೇಕಲ್ವಾ? ನಮ್ಮ ತಾಯ್ನಿಡಿಗೆ ತಾಕತ್ತಿಲ್ಲ ಅನ್ನೋ ಕೀಳರಿಮೆಯನ್ನು ಬಿಡಿ, ಸಂಸ್ಕೃತದಲ್ಲಿ ಎಲ್ಲ ಪದಗಳು ಇವೆ ಅಂತಲೂ ತಿಳ್ಕೋಬೇಡಿ. ಅದು ಅರ್ಥ ಆಗಲ್ಲ ಅದಕ್ಕೆ ಚೆನ್ನಾಗಿದೆ ಅಂದ್ಕೋತಾ ಇದೀರೇನೋ?
ನೋಡಿ, electricity ಅನ್ನೋ ಪದಕ್ಕೆ ಕನ್ನಡದಲ್ಲಿ ಏನಂತಾರೆ ಅಂದ್ರೆ 'ವಿದ್ಯುತ್' ಅಂತೀವಿ. ಇದು ಸಂಸ್ಕೃತ ಪದ, ಇದರ ಅರ್ಥ ಬಿಡಿಸಿನೋಡಿ, 'ವಿ' ಅಂದರೆ ವಿಶೇಷವಾದ 'ದ್ಯುತ್' ಅಂದರೆ ಬೆಳಕು ಅಂತ, ಅದನ್ನೇ ನಾವು ಮೊದಲಿನಿಂದ ಮಿಂಚು ಅಂದಿದ್ದರೆ ಎಷ್ಟು ಸುಲಭವಾಗಿ ಉಲಿಯಬಹುದಿತ್ತು ಅಂತ ಯೋಚ್ಸಿ. ಇವತ್ತಿಗೂ ನಮ್ಮ ಹಳ್ಳಿ ಮಕ್ಕಳು ವಿದ್ಯುತ್ ಅನ್ನು ಇದ್ಯುತ್ ಅಂತ ಅನ್ನೋದನ್ನ ಗಮನಿಸಿದ್ದೀರಾ? ಯಾಕೀ ತೊಡಕಿನ ಪದಗಳು ಅಂತ ಮಾತಾಡ್ತಿದೀವಿ, ಇಲ್ಲಿ.
ಸಾಹೇಬರೇ, ದೊಡ್ಡ, ತುಂಬಾ ದೊಡ್ಡ, ಮತ್ತು ಅತಿ ದೊಡ್ಡ ಅನ್ನೋ ಪದಗಳಲ್ಲಿ ಅತಿದೊಡ್ದಕ್ಕೆ ಸಮಾನವಾಗಿ 'ಬೃಹತ್' ಅಂತಾರೆ ಅಂದ್ರಲ್ಲ ಅದು ತಪ್ಪು ಸ್ವಾಮಿ. ಸಂಸ್ಕೃತದಲ್ಲಿ ಹಾಗೆ ದೊಡ್ಡ, ಅತಿದೊಡ್ಡ, ತುಂಬಾ ದೊಡ್ಡ ಅನ್ನೋದಕ್ಕೆಲ್ಲಾ ಬೇರೆ ಬೇರೆ ಪದಗಳಿಲ್ಲ. ಇರೋದೊಂದೆ ಬೃಹತ್ ಅಂತ ಮಾತ್ರ ಮತ್ತು ಅದರ ಅರ್ಥ ದೊಡ್ಡ ಅಂತ.
ಈಗ ನಿಮ್ಮನ್ನು ನೀವು ಚೂರು ಅನಲೈಸ್ ಮಾಡ್ಕೊಳ್ಳಿ. ನಿಮ್ಮ ಮನಸ್ಸಲ್ಲಿ ಬ್ರಹತ್ ಅನ್ನೋದು ಕನ್ನಡದ ದೊಡ್ಡ ಅಥವಾ ಹಿರಿಯ ಅನ್ನುವುದಕ್ಕಿಂತಲೂ ದೊಡ್ಡದು ಅಂತ ಯಾಕೆ ಅನ್ನಿಸಿತು? ಇದನ್ನೇ ನಾವು ಇಲ್ಲಿ ಮಾತಾಡ್ತಿರೋದು, ಸಂಸ್ಕೃತ ಪದಗಳನ್ನು ಬಳಸುವುದು ಹೆಚ್ಚುಗಾರಿಕೆ ಅನ್ನೋ ಮನೋಭಾವವನ್ನೇ ನಾವು ಮೊದಲು ಗೆಲ್ಲಬೇಕಾಗಿರೋದು.
ನೋಡಿ ನೀವೇ . . . ಕೋಳಿ ಸಾಕಣೆ ಅನ್ನೋದ್ನ ಕುಕ್ಕುಟ ಪಾಲನೆ ಅಂತೀವಿ ಯಾಕೆ? ದಸರಾ ಹಬ್ಬವನ್ನು ದಸರಾ ಉತ್ಸವ ಅನ್ತೀವಿ ಯಾಕೆ? ಪಶು ಸಂಗೋಪನ ಕೇಂದ್ರ ಅಂತೀವಿ ದನದ ಹಟ್ಟಿ ಅನ್ನಲ್ಲ ಯಾಕೆ? ಬಸುರಾಗೋದು ಅನ್ನೋಕ್ಕೆ ಗರ್ಭಧಾರಣೆ ಅಂತೀವಿ ಯಾಕೆ? ಯಾಕೆ? ಯಾಕೆ?
ಇದನ್ನೇ ನಾವು ಸರಿ ಮಾಡ್ಕೋ ಬೇಕಿರೋದು ಸ್ವಾಮಿ. ಕನ್ನಡದಲ್ಲಿ ಪದಗಳಿಲ್ಲ ಅಂದ್ರೆ ಸಂಸ್ಕೃತದಿಂದ ತೊಗೋಬೇಕು ಅನ್ನೋಕಿಂತ ಆ ಪದದ ಮೂಲರೂಪಿನಿಂದ ಪಡೆದು ತತ್ಸಮಗಳನ್ನು ಬಳಸಬಹುದಲ್ವಾ? ಅದ್ಯಾಕೆ ನಿಮಗೆ ನಮ್ಮ ಭಾಷಾ ಜಾಯಮಾನದಿಂದ ಬೇರೆಯೇ ಆದ ಒಂದು ಭಾಷೆಯ ಬಗ್ಗೆ ಅಷ್ಟೊಂದು ಹಪಾಹಪಿ?
ಕನ್ನಡದವರಿಗೆ ಕನ್ನಡ ಬಿಟ್ಟರೆ ಬೇರೆ ಎಲ್ಲ ಭಾಷೆಗಳೂ ಬೇರೇ ಭಾಷೆಗಳೇ ಸ್ವಾಮಿ. ಎಲ್ಲ ಭಾಷೆಯಿಂದ ಪದಗಳನ್ನು ತೆಗೆದುಕೊಂಡೇ ನಾವು ಬೆಳೆದಿರುವುದು ಮತ್ತು ಬೆಳೆಯಬೇಕಾದದ್ದು. ಆದರೆ ನಾಲಿಗೆಗೆ ಉಲಿಯಲು ಸುಲಭವಾಗುವಂತಹ ಪದಗಳನ್ನು ಬಳಸುವುದು ಸರಿಯಾದ ವಿಧಾನ ಎಂದಷ್ಟೇ ನಾವು ಮಾತನ್ನಾಡುತ್ತಿರುವುದು. ಬೃಹತ್ ಅನ್ನುವುದು ಸಂಸ್ಕೃತ ಪದ ಅನ್ನುವ ಕಾರಣದಿಂದ ಅದನ್ನು ವಿರೋಧಿಸುತ್ತಿಲ್ಲ. ನೀವು ಹೇಳಿದಿರಲ್ಲಾ, ಕನ್ನಡದ ದೊಡ್ಡಕ್ಕಿಂತ ಸಂಸ್ಕೃತದ ಬೃಹತ್ ಹಿರಿದು ಎನ್ನುವ ಭಾವನೆಯಿಂದ ದೊಡ್ಡಸ್ತಿಕೆಗಾಗಿ ಸಾಮಾನ್ಯರ ಬಳಕೆಯಿಂದ ದೊಡ್ಡ/ ಹಿರಿದುಕ್ಕಿಂತ ಬಳಕೆಯಲ್ಲಿ ದೂರವಿರುವ ಬೃಹತ್ ಪದ ಬೇಡ ಎಂದು ಹೇಳಿದೆ ಅಷ್ಟೆ.

ನನ್ನಿ

ತಿಮ್ಮಯ್ಯ

Anonymous ಅಂತಾರೆ...

Hi ,
People in this blog/ bloggers are talking some sense. It seems they have studied all the subjects before they write here. Look at their postings about HiMdithey are just wonderful. Nothing is without proof. Everything with data. wonderful guys. hats off to you. We have to just follow you. . .

anivaasi

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails