"ನಾನು ಮೊದಲು ಭಾರತೀಯನು, ಆನಂತರ ಕರ್ನಾಟಕನು ಎಂಬುದು ಸರಿಯಲ್ಲ"

ಇವತ್ತಿನ ದಿನ ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳ್ಗೆಗಾಗಿ ದುಡಿಯುವುದು ದುರಭಿಮಾನ, ಇಲ್ಲವೇ ಜಾತಿವಾದ, ಇಲ್ಲವೇ ರಾಷ್ಟ್ರೀಯತ್ವಕ್ಕೆ ವಿರುದ್ಧ ಎಂದು ದುಡುಕುವುದು ಕೆಲವರಿಗೆ ವಾಡಿಕೆಯಾಗಿಹೋಗಿದೆ. ಆದರೆ ಈ ದುಡುಕಾಟದಲ್ಲಿ ಹುರುಳಿಲ್ಲ.

ಕರ್ನಾಟಕವೆಂಬ ಭಾಷಾವಾರು ರಾಜ್ಯ ಹುಟ್ಟಬೇಕು ಎಂದು ವಾದಿಸಿದ ಮೊದಲಿಗ, ಕರ್ನಾಟಕ ಕುಲಪುರೋಹಿತರಾದ ಆಲೂರ ವೆಂಕಟರಾಯರ "ಕರ್ನಾಟಕತ್ವದ ವಿಕಾಸ" ಎಂಬ ಹೊತ್ತಗೆಯಿಂದ ಆಯ್ದ ವಾಕ್ಯಗಳು ಕೆಳಗಿವೆ. ಹಿಂದೆ ಕರ್ನಾಟಕವೆಂಬ ಪ್ರತ್ಯೇಕ ರಾಜ್ಯ ಕ್ಕಾಗಿ ಹೋರಾಡುತ್ತಿದ್ದ ಅಲೂರ ವೆಂಕಟರಾಯರನ್ನು ಕೂಡ ಜನರು (ಕನ್ನಡಿಗರು ಕೂಡ!) ಅಪಾರ್ಥ ಮಾಡಿಕೊಂಡಿದ್ದುಂಟು, ಅವರನ್ನು "ದುರಭಿಮಾನಿ", "ಜಾತಿವಾದಿ", ಮತ್ತು "ರಾಷ್ಟ್ರೀಯತ್ವ ವಿರೋಧಿ" ಎಂದೆಲ್ಲ ಕರೆದಿದ್ದುಂಟು. ಹಿಂದೆಯೂ ಅವರು ಈ ಪೊಳ್ಳು ವಿರೋಧಗಳಿಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಸಿದ್ಧಾಂತವನ್ನು ಸ್ಪಷ್ಟವಾಗಿ ಅರ್ಥ ಮಾಡಿಸಿದ್ದುಂಟು. ಕರ್ನಾಟಕವೆಂಬ ಪ್ರತ್ಯೇಕ ರಾಜ್ಯವನ್ನು ಕನ್ನಡಿಗರಿಗಾಗಿ ಅವರು ಕೊಡಿಸಿಯೇ ತೀರಿದ್ದು. ಆ ಮಹಾನುಭಾವನ ಅಂದಿನ ಮಾತುಗಳು ಇಂದಿಗೂ ಹೊಂದುತ್ತವೆ. ಇಂದೂ ಕೂಡ ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳ್ಗೆಗಾಗಿ ದುಡಿಯುವವರಲ್ಲಿ ಇಲ್ಲಸಲ್ಲದ ದೋಷಗಳನ್ನು ಕಾಣುವವರಿಗೆ ಅವರದೇ ಉತ್ತರ:
ಪ್ರಾಂತೀಯತೆ ಎಂದರೆ ಪ್ರಾಂತದ ದುರಭಿಮಾನವಲ್ಲ. ಪ್ರಾಂತೀಯತೆಯೇ ಸರ್ವಸ್ವವಲ್ಲವೆಂಬುದು ಕರ್ನಾಟಕರಿಗೆ ಗೊತ್ತಿದೆ. ಅನ್ಯರು ಕಲಿಸುವದು ಬೇಡ.

ಕರ್ನಾಟಕರು ಇಂದಿನ ವರೆಗೆ ಎಂದೂ ಅಧಿಕೃತವಾಗಿ ರಾಷ್ಟ್ರೀಯತ್ವಕ್ಕೆ ವಿರುದ್ಧವಾಗಿ ಹೋಗಿಲ್ಲ, ಹೋಗುವುದಿಲ್ಲ.

ಪ್ರಾಂತೀಯತೆಯನ್ನು ಜಾತೀಯತೆಗೆ ಹೋಲಿಸುವುದು ತಪ್ಪು. ಕರ್ನಾಟಕಕ್ಕೆ ಭಾರತದಂತೆ ಸ್ವಾಧೀನ ಕರ್ತೃತ್ವವು ಬೇಡ. ಭಾರತಾಧೀನ ಕರ್ತೃತ್ವ ಬೇಕಿದೆ. ಸರ್ವತಂತ್ರತ್ವವು ಬೇಡ. ದತ್ತ ಸ್ವಾತಂತ್ರ್ಯವು ಬೇಕು.

ನಾನು ಮೊದಲು ಭಾರತೀಯನು, ಆನಂತರ ಕರ್ನಾಟಕನು ಎಂಬುದು ಸರಿಯಲ್ಲ. ಇವುಗಳಲ್ಲಿ ಮೊದಲು, ಹಿಂದಗಡೆಗಳಿಲ್ಲ. ಎರಡೂ ಭಾವನೆಗಳು ಪರಸ್ಪರ ವಿರುದ್ಧಗಳಲ್ಲ. ವೃಷ್ಟಿತ್ವವೂ ಸಮಷ್ಟಿತ್ವವೂ ಏಕಸಮಯಾವಛೇದದಿಂದ ಬೇಕು.

ಏಳಿ! ಎದ್ದೇಳಿ! ಕನ್ನಡಿಗನೇನೆಂಬುದನ್ನು ಅರ್ಥ ಮಾಡಿಕೊಳ್ಳಿ! ಪ್ರಪಂಚದಲ್ಲಿ ಕೋಟಿಗೊಂದು ಹೃದಯ ಕನ್ನಡಿಗನದಷ್ಟು ಶುದ್ಧವಾಗಿದ್ದೀತು! ಇಡೀ ಭಾರತಕ್ಕೆ ಕನ್ನಡಿಗನೇ ಆದರ್ಶ ಪುರುಷನು! ಇವನಲ್ಲಿ ಸಂಕುಚಿತ ಮನೋಭಾವವೆಲ್ಲಿಂದ ಬಂದೀತು? ಇವನಲ್ಲಿ ಹೇಡಿತನವೆಲ್ಲಿಂದ ಬಂದೀತು? ಇಲ್ಲಸಲ್ಲದ ಮಣ್ಣೆರಚಾಟವನ್ನು ಕೈಬಿಡಿ! ಬನ್ನಿ! ಒಗ್ಗೂಡಿ! ಒಂದಾಗಿ ಬಂಗಾರದ ಕನ್ನಡನಾಡ ಕಟ್ಟಲು ಮುಂದಾಗಿ!

ಅಂದಹಾಗೆ ಆಲೂರ ವೆಂಕಟರಾವ ಪ್ರತಿಷ್ಠಾನ, ಸಾಧನಕೇರಿ, ಧಾರವಾಡ - ಇವರ ವತಿಯಿಂದ "ಆಲೂರ ವೆಂಕಟರಾಯರ ಸಮಗ್ರ ಕೃತಿಗಳು" ಎನ್ನುವ ಹೊತ್ತಿಗೆ ಸಿಗುತ್ತಿದೆ, ಮರೆಯದೆ ಕೊಂಡು ಓದಿ! ಬೆಂಗಳೂರಿನಲ್ಲಿ ಗಾಂಧೀಬಜಾರಿನ "ಅಂಕಿತ ಪುಸ್ತಕ" ದಲ್ಲಿ ಎಷ್ಟು ಬೇಕಾದರೂ ಸಿಗುತ್ತಿವೆ ಗುರು!

8 ಅನಿಸಿಕೆಗಳು:

Anonymous ಅಂತಾರೆ...

ಕನ್ನಡದ್ ಬಗ್ಗ ಮಾತಾಡಿದ್ರ, ನಮಗ್ ದಿನಾಲೂ ಆಗ್ತಿರೊ ಅನ್ಯಾಯದ ಬಗ್ಗ ಮಾತಾಡಿದ್ರ fanatic ಅಂತ ಬ್ರಾಂಡ ಮಾಡು ಮಂದಿ ಬಾಳ ಅದಾರ್. ಆದ್ರ ಅದರ ಬಗ್ಗ ನಾವು ತಲಿ ಕೆಡಸ್ಕೊಬೇಕಾಗಿಲ್ಲ ಗುರುಗಳೇ.. ನೀವು ಹೇಳು ಹಂಗ ಒಬ್ಬ ಹೆಮ್ಮೆಯ ಕನ್ನಡಿಗ ಆದ್ ಮೇಲೇನೆ.. ಆತಾ ಹೆಮ್ಮೆಯ ಭಾರತೀಯ ಆಗಾಕ್ ಸಾಧ್ಯ. ನಮ್ಮತನ, ನಮ್ಮ ಭಾಷೆ, ನಮ್ಮ ಜೀವನಶೈಲಿ, ನಮ್ಮ ಮಣ್ಣಿನ ಸೊಗಡಿನ ಬಗ್ಗ ಮಾತಾಡುದ್ ಯಾವತ್ತು ತಪ್ಪಲ್ಲ. ಏನ್ ಗುರು ಮಾಡತಾ ಇರು ಅಗದಿ ಚಲೋ ಕೆಲಸ ಅಂದ್ರ ಕನ್ನಡದೋರ್ ಎಲ್ಲಾ ಒಂದೇ,, ಅದೆ ನಮಗಿರು identity ಅಂತ ಹೇಳಾಕತ್ತಿರೋದು.

Sandesh ಅಂತಾರೆ...

Bahala Chennagi barediddiri! Inde Aaluru Venkataraayara krthigalannu kondu odhuththene!

Naanu Kannadiga, Naanu Bhaaratheeya! Iveradu ottottige nadedukondu hoguththade! Adu noorakke nooru prathishatha satya!

Anonymous ಅಂತಾರೆ...

Correct agi helidri gurugale.
Prathi obba kannadigana identity kooda "Naanobba kannadiga" antha agbeku.
"Banni alloru Venakata raayara kanasannu nanasu maadona,Kanasina Karnataka kattonaa"
Jai karnataka

Amarnath Shivashankar ಅಂತಾರೆ...

ದೇಷ ದೊಡ್ಡದ್ದು, ಕರ್ನಾಟಕ ಚಿಕ್ಕದು ಅನ್ನುವ ಮೂರ್ಖರು ಬಹಳಷ್ಟು ಮಂದಿ ಇದ್ದಾರೆ..
ಕರ್ನಾಟಕವೇ ಇಲ್ಲದಿದ್ದರೆ ಭಾರತ ಪರಿಪೂರ್ಣವಾಗುತಿತ್ತಾ?ಖಂಡಿತಾ ಇಲ್ಲ.....
ಕರ್ನಾಟಕವನ್ನು ಕಡಿಮೆ ಪ್ರೀತಿಸುವುದು, ದೇಷವನ್ನು ಹೆಚ್ಚು ಪ್ರೀತಿಸುವುದು ಎನ್ನುವುದು ಹುಚ್ಚುತನವೇ ಸರಿ..
"ಕರ್ನಾಟಕಂತರ್ಗತ ಭಾರತಮಾತೆ" ಎನ್ನುವುದರ ಅರ್ಥವನ್ನು ಎಲ್ಲರು ತಿಳಿದುಕೊಳ್ಳಬೇಕು....
ಕನ್ನಡಿಗರು ಕರ್ನಾಟಕವನ್ನು ಪ್ರೀತಿಸಿ, ಗೌರವಿಸಿ, ಉಳಿಸಿಕೊಳ್ಳುವುದು ನಿಜವಾದ ದೇಷ ಪ್ರೇಮ...
ತಮಿಳರು ತಮಿಳುನಾಡನ್ನು ಪ್ರೀತಿಸಿ, ಗೌರವಿಸಿ, ಉಳಿಸಿಕೊಳ್ಳುವುದು ನಿಜವಾದ ದೇಷ ಪ್ರೇಮ...
ಮರಾಠಿಗರು ಮಹಾರಾಷ್ಟ್ರವನ್ನು ಪ್ರೀತಿಸಿ, ಗೌರವಿಸಿ, ಉಳಿಸಿಕೊಳ್ಳುವುದು ನಿಜವಾದ ದೇಷ ಪ್ರೇಮ...

Chetan ಅಂತಾರೆ...

ನಿಜ ವೆಂಕಟರಾಯರು ಆ ಕಾಲದಲ್ಲಿ ಹೇಳಿದ್ದು ಈ ದಿನಕ್ಕೂ ಅನ್ವೆಸುವಂಥ ಮಾತು. ಅವರು ಹೇಳುವಂತೆ ಪ್ರಾಂತಿಯತೆ ಹಾಗೂ ರಾಸ್ಟ್ರಿಯತೆ ನಡುವೆ ಬಹಳ ನಾಜೂಕಾದ ಗೆರೆ ಇದೆ. ಒಂದನ್ನು ಜಾಸ್ತಿ ಎಳೆದರು ಅದು fanatic ಆಗಿ ಕಾಣುವ ಸಂಭವ ಹೆಚ್ಚು. ಈ ದಿನ ನಾವು ಬೇರೆಯವರ ವಿಷಯಕ್ಕಿಂತ
ನಮ್ಮ ಬಗ್ಗೆ ಚಿಂತಿಸಬೇಕಾದ ಅಗತ್ಯವಿದೆ .

Unknown ಅಂತಾರೆ...

"Banni alloru Venakata raayara kanasannu nanasu maadona,Kanasina Karnataka kattonaa"
Jai karnataka
bejaru madko beda prashanth

neevu heliddu bashana kke thumba soghasagide,,,,,,,adre nijavagi adanna paripaliso jana sakath kammi,,,,,,,,,nive ene heli,,,,naanu obbane kannadakke horadthini andre aghutthe,,,,,ellaru bari bashana madidre agolla,,,ella banni ondu sanga kattona,,,,bari kanndigarigoskara,,,,,,horadana,,,adhu thumba,,,,,gambiravagi,,,,,dayavittu,,,ellaru sahkarisi,,,,
naanu obba software engg,,,,enukke heli hotte horiyoke,,,,adre naanu Ee kelsa thognakke,,,thumba kashta pattidini,,,,adanna nensokondre kannu thumbkonutthe,,,,swamy,,
innu swalpa dina,,,,kannadigranna karnataka dinda horakke hokoke,,,nijavaglu,,,,kanndigarge maryade elli idhe sir,,,,

banni banni sir,,,,,kannada horata,,madona ,,adre...yavdho kannada sanga andokondu rajakiya beda,,,,,,
namma niru,,namma jaga,,,namma kannada dhu savalatthu beku adre software company kelsakke kannadiga beda,,,,,hogi swamy hogi....company li hogi nodi kannadigru padtha iru kashta na
100 kke 10 jana kannadiga sikkudre hecchhu,,swamy,,,inthdralli nivu,,,naavu,,,Enu madoke agolla swamy,,,,banni ellaru seri horata madona.....edi karnataka dalli eshtu company idiyo ashtu companygu 80% kannadigargi misalu antha,,,avaga namma kanndigaru gulamgiri inda horakke barthare,,,,ellaru manelu kannad da dipa hachhu thare,,,,sarakadoru enu madolla ri kacchadthare,,,

Tarale Seena ಅಂತಾರೆ...

About a good decade and half ago, I approached a company called Pharmacia for a Engineering position. Right from the moment I landed in the lobby, people would come out and ask me "So what language do you speak at home".
I performed extremely well in the technical aptitude test. I was asked to appear for a personal interview, and the big shot again, asks me "What language do you speak at home". Not to mention that I did not get the job, though it would have meant a whole lot to me at that time and perhaps changed the direction my life would have taken. And to think that Tamil folks in Bangalore can afford to play this politics amidst the plethora of "Cosmopolitan Kannadigas", and play with our lives, is a rape of Kannadigas. I have heard many such stories from companies such as Infosys, Wipro, you name it.

Anonymous ಅಂತಾರೆ...

ಕೆಲವು ದಿನಗಳು ಹಿಂದೆ ನಾನು ಬಾಡಿಗೆಗೆ ಮನೆ ನೋಡಕ್ಕೆ ಹೋಗಿದ್ದೆ. ಮನೆ ನೋಡಿ ಆದಮೇಲೆ ಮನೆ ಓನರ್ ಕೇಳಿದ್ದು ತಮಿಳ್ ಕನ್ನಡ ನ..(ಅಂದ್ರೆ ನಾವು ತಮಿಲಿಅನ್ಸ ಅಥವಾ ಕನ್ನಡಿಗರ ಅಂಥಾ ತಿಳಿದುಕೊಳ್ಳೋಕೆ) ನನಗೆ ಒಂದು ಕ್ಷಣ ಮಿಂಚು ಹೊಡೆದ ಅನುಭವ..ಅಲ್ಲ ಇಂಥವರು ಮೊದಲ ಬಾರಿ ಭೇಟಿ ಮಾಡಿದರೆ ಹೀಗ ಕೇಳೋದು ಅನ್ನಿಸ್ತು..ನಾವು ನಮ್ಮ ನೆಲದಲ್ಲೇ ಪರಕೀಯರು ಅನ್ನೋ ಭಾವನೆ ಕಾಡಕ್ಕೆ ಶುರುವಾಯ್ತು..ನಾನು ನಿಂತಿರುವ ನೆಲ ತಮಿಳುನಾಡೆ ಅನ್ನಿಸೋಕೆ ಶುರುವಾಗಿತ್ತು..ನಮ್ಮ ನೆಲಕ್ಕೆ ಬಂದು ಇವರು ತಮ್ಮ ಭಾಷೆಯ ಪ್ರದರ್ಶನ ಮಾಡುತಾರಲ್ಲ !!! ಆಮೇಲೆ ನಾವು ತಮಿಳಿನಲ್ಲಿ ಮಾತಾಡಬೇಕು ಅನ್ನುವ expectation ಬೇರೆ...ಎಲ್ಲಾ ಕರ್ನಾಟಕದ ಸವಲತ್ತುಗಳು ಬೇಕು ಆದರೆ ಕರ್ನಾಟಕ ಬೇಡ !!!

ಬೆಂಗಳೂರಿನ ನೀರು , ಗಾಳಿ , ಹಾಗು ವಾತವರಣ ಬೇಕು ಮತ್ತೆ ಹೇಳೋದು I love Chennai !!..ಅಷ್ಟು ಬೇಕು ಅಂದ್ರೆ ವಾಪಸ್ಸು ಚೆನ್ನೈಗೆ ಹೋಗಬೇಕು..ಇವರು ಇಷ್ಟು ಬೆಲಿಯೊದಿಕ್ಕೆ ಒಂದು ಹಂತದಲ್ಲಿ ನಾವೇ ಕಾರಣ...These people (Not only Tamilians even Telugu and Malayali's and now Marathi's ) are taking undue advantage of Us..It's high time we show their place..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails