"ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ" - ಕರವೇ

ಡಿ.1 ರಂದು ನಡೆದ ಕರ್ನಾಟಕ ರಕ್ಷಣಾ ವೇದಿಕೆಯ ಆರನೆಯ ರಾಜ್ಯಮಟ್ಟದ ಸ್ವಾಭಿಮಾನಿ ಕನ್ನಡಿಗರ ಸಮಾವೇಶದ ಸುದ್ದಿ ಪತ್ರಿಕೆಗಳಲ್ಲಿ ರಾರಾಜಿಸ್ತಾ ಇದೆ. ಒಂದು ಲಕ್ಷಕ್ಕೂ ಹೆಚ್ಚು ಜನ ಕನ್ನಡಿಗರು ಸೇರಿದ್ದ ಈ ಸಮಾವೇಶದಲ್ಲಿ ನಡೆದ ಮೆರವಣಿಗೆ ಇಡೀ ಪ್ರಪಂಚಕ್ಕೆ ಕನ್ನಡಿಗರ ಒಗ್ಗಟ್ಟಿನ ಬಲ ತೋರಿಸಿಕೊಟ್ಟಿದೆ. ಹಾಗೇ ಸಮಾವೇಶದ ನಿರ್ಣಯಗಳು ನಾಡು-ನುಡಿಯ ರಕ್ಷಣೆಗೆ ಆಗಲೇಬೇಕಾದ ಕೆಲಸಗಳನ್ನು ಸಾಮಾನ್ಯ ಜನರಿಗೂ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೂ, ಉದ್ದಿಮೆದಾರರಿಗೂ ನೆನಪಿಸಿವೆ.

ಈ ಸಮಾವೇಶದಿಂದ ಕೆಲಕಾಲ ಬೆಂಗಳೂರಿನ ರಸ್ತೆ ಸಂಚಾರ ಚೂರುಪಾರು ಅಸ್ತವ್ಯಸ್ತ ಆಗಿದೆ ಅನ್ನೋದೇನೋ ನಿಜ, ಆದ್ರೆ ಇದರಿಂದ ಕನ್ನಡನಾಡಿನ ಏಳಿಗೆಯ ದಾರಿ ಸುಗಮ ಆಗೋದು ಕಾಣ್ತಾ ಇರುವಾಗ ಇವೆಲ್ಲಾ ಓಕೆ ಗುರು!

ಸಮಾವೇಶದಲ್ಲಿ ನಾಡಕಟ್ಟೋ ಚರ್ಚೆ

ಈ ಸಮಾವೇಶಕ್ಕೆ ಕನ್ನಡನಾಡಿನ ಎಲ್ಲಾ ಜಿಲ್ಲೆಗಳಿಂದಲೂ ಬಂದಿದ್ದ ಕನ್ನಡಪರ ಹೋರಾಟಗಾರರಿಗೆ ದಾರಿ ತೋರಲು ಪಾಟೀಲ್ ಪುಟ್ಟಪ್ಪ, ದೇ ಜವರೇಗೌಡ, ಶಿಕ್ಷಣ ಕ್ರಾಂತಿ ಮತ್ತು ಅಧ್ಯಾತ್ಮದ ಮೂಲಕ ನಾಡಿಗರ ಸೇವೆ ಮಾಡುತ್ತಿರುವ ಅನೇಕ ಮಠಗಳ ಸ್ವಾಮೀಜಿಗಳು, ರೈತ ನಾಯಕರುಗಳು, ಚಿಂತಕರುಗಳು ಅಲ್ಲಿ ನೆರೆದಿದ್ದು ನಿಜಕ್ಕೂ ಒಳ್ಳೇ ಬೆಳವಣಿಗೆ ಗುರು.

"ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
" ಎನ್ನುವ ಸಂದೇಶ ಸಾರಿದ ಈ ಸಮಾವೇಶ ಕೈಗೊಂಡ ನಿರ್ಣಯಗಳ ಹಿಂದೆ ಕನ್ನಡಿಗರ ಉಳಿವು-ಏಳ್ಗೆಗಳ ಬಗ್ಗೆ ಸಾಕಷ್ಟು ಚಿಂತನೆಯಾಗಿ ಕನ್ನಡಿಗರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಬಗ್ಗೆಯ ಗೌರವ ಹೆಚ್ಚಿಸಿದೆ ಅಂದ್ರೆ ತಪ್ಪಲ್ಲ. ಇದು ಕರ್ನಾಟಕ ರಕ್ಷಣಾ ವೇದಿಕೆಯ ಬಗ್ಗೆ ಕನ್ನಡ ನಾಡು ತುಂಬು ಭರವಸೆಯಿಂದ ನೋಡುವಂತೆ ಮಾಡಿರೋದು ಮಾತ್ರಾ ಹದಿನಾರಾಣೆ ನಿಜಾ ಗುರು.

ಇಂಥಾ ಸಮಾವೇಶ ನಡ್ಯೋದ್ರಿಂದ ನಾಡಿನ ಮೂಲೆಮೂಲೆಗಳ ಜನ ಒಂದೆಡೆ ಒಂದೇ ಉದ್ದೇಶಕ್ಕಾಗಿ ಒಟ್ಟು ಸೇರಿ ಚರ್ಚೆ ಮಾಡಿ, ಹಾಗೆ ಒಂದಾಗಿ ಸೇರಿದ್ದ ಕಾರಣಕ್ಕೇ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚುಸ್ಕೊಳೋದು ಸಾಧ್ಯ ಆಗುತ್ತೆ ಗುರು. ರಾಜಧಾನಿಯ ಬೀದಿ-ಬೀದಿಗಳಲ್ಲಿ ಕನ್ನಡಿಗರ ಈ ಪಡೆ ಮೆರವಣಿಗೆ ನಡೆಸಿದ್ದು ಕನ್ನಡ ವಿರೋಧಿಗಳಿಗೊಂದು ಎಚ್ಚರಿಕೆ ಸಂದೇಶಾನೂ ಕೊಟ್ಟಂಗಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಜನ ಕನ್ನಡ ಹೋರಾಟಗಾರರು ಒಂದಾಗಿ ಬಂದು, ಎಷ್ಟೊಂದು ಕನ್ನಡವನ್ನು ಕಡೆಗಣಿಸಿರೋ ಅಂಗಡಿ ಮುಂಗಟ್ಟುಗಳು ದಾರಿ ತುಂಬಾ ಇದ್ರೂ ಅತ್ಯಂತ ಸಂಯಮದಿಂದ ಯಾವ ಅಹಿತಕರ ಘಟನೆ ನಡೆಯದ ಹಾಗೆ ನಡೆದುಕೊಂಡ ರೀತಿ ನಿಜಕ್ಕೂ ವೇದಿಕೆಯ ಒಳಶಿಸ್ತನ್ನು ತೋರಿಸ್ತಿದೆ.

ಚಿಂತನೆ ಒಂದೇ ಸಾಲದು, ಸಂಘಟನಾಶಕ್ತಿಯೂ ಬೇಕು

ಹೌದು, ಇವತ್ತಿನ ದಿನ ಕನ್ನಡನಾಡಿನ ಏಳಿಗೆಗೆ ದಾರಿ ತೋರುವ ಚಿಂತಕರುಗಳ ಅಗತ್ಯ ಎಷ್ಟಿದೆಯೋ ಅದನ್ನು ಈಡೇರಿಸಲು ಕರ್ನಾಟಕ ರಕ್ಷಣಾ ವೇದಿಕೆಯಂತಹ ಒಂದು ಸಂಘಟನೆಯ ಅಗತ್ಯವೂ ಅಷ್ಟೇ ಇದೆ ಗುರು. ನೆನಪಿಡಿ, ಕರ್ನಾಟಕದ ಇತಿಹಾಸದಲ್ಲಿ ವಿಶೇಷವಾಗಿ ಈ ಐವತ್ತೊಂದು ವರ್ಷಗಳಲ್ಲಿ ನಾಡಿಗರನ್ನೆಲ್ಲಾ ಕನ್ನಡ ಬಾವುಟದ ಅಡಿಯಲ್ಲಿ ಸಂಘಟಿಸಿದ ಪುರಾವೆಗಳಿಲ್ಲ. ಅದು ಈಗ ನಾರಾಯಣ ಗೌಡ್ರ ಮುಂದಾಳತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಹೆಸರಲ್ಲಿ ಆಗ್ತಾ ಇದೆ ಅನ್ನೋದು ಸಂತಸದ ಸುದ್ದಿ ಗುರು! ಕನ್ನಡಿಗರ ಆತ್ಮವಿಶ್ವಾಸ ಇಮ್ಮಡಿಸಿ ಒಂದೇ ಸೂರಿನಡಿಯಲ್ಲಿ ನಾಡಿನ ಮೂಲೆಮೂಲೆಗಳಿಂದ ಬಂದ ಒಂದು ಲಕ್ಷಕ್ಕೂ ಹೆಚ್ಚು ಕನ್ನಡಿಗರನ್ನ ಒಗ್ಗೂಡಿಸಿ ಕನ್ನಡದ ದೀಕ್ಷೆ ಕೊಡಿಸೋ ಈ ಒಂದು ಸಮಾವೇಶವನ್ನ ನಡೆಸಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ್ರಿಗೆ ಸಲಾಂ!

11 ಅನಿಸಿಕೆಗಳು:

Anonymous ಅಂತಾರೆ...

Narayana goudrige' thumba thanks.. E-naadalli deve'goudrinda kannadigara maana harajagtidre.. Narayana goudrinda..nammage Hemme aagtha ide...

Satish

Anonymous ಅಂತಾರೆ...

samaveshakke naanu hogidde. alli ashtondu nijavaada kannadigarannu kandu nijavaagiyu romanchana aithu. ellellu haladi-kempina darshana !!. alli aneka mahileyaru kandu bandaru.
innyaava sangataneyu ee reethi ondu uttamavada samaveshavannu nadesiralilla adu kannadigarigaagi - Dhanyasi

Anonymous ಅಂತಾರೆ...

ನಾರಾಯಣ ಗೌಡ್ರಿಗೆ ನನ್ನ ಕಡೆಯಿಂದನೂ ಒಂದು ಸಲಾಂ....
ಇಂತಹ ಸಮಾವೇಶಗಳು ರಾಜ್ಯದ ಗಡಿ ಜಿಲ್ಲಾ ಕೇಂದ್ರಗಳೆಲ್ಲಡೆ ನಡೆದರೆ ಒಳ್ಳೆದು.
ನೀರಾವರಿ ಅನುಕೂಲ ಇರುವೆಡೆಯಲ್ಲ ಪರರಾಜ್ಯದವರೇ ಜಾಸ್ತಿ ಬಂದು ಒಕ್ಕರಿಸಿಕೊಂಡಿದ್ದಾರೆ ಇದಕ್ಕೆ ಸರಿಯಾದ ಉದಾಹರಣೆ ಅಂದ್ರೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಮತ್ತು ಸುತ್ತಲಿನ ಪ್ರದೇಶ. ಆಲಮಟ್ಟಿ ಆಣೆಕಟ್ಟಿನ ಅಚ್ಚುಕಟ್ಟು ಪ್ರದೇಶ.
ನಮ್ಮ ಜನಗಳಲ್ಲಿ ಇದರ ಬಗ್ಗೆ ಜಾಗ್ರತೆ ಮೂಡಿಸಬೇಕಾಗಿದೆ. ಕನ್ನಡ ರಕ್ಸಣಾ ವೇದಿಕೆ ನೋರು ಈಕಡೆ ಕೂಡ ಸ್ವಲ್ಪ ಗಮನ ನೀಡಲಿ.

ನಮಸ್ಕಾರ.
ಜಯಪ್ರಕಾಶ ನೇ ಶಿವಕವಿ

Anonymous ಅಂತಾರೆ...

chennagide varadi

Anonymous ಅಂತಾರೆ...

bengaluru anno rogi-ge aagaga intha ondu kannada-da injection sigta irabeku. nija vaagiyu tumba shistininda e sabhe nadeyitu.

Ka.Ra.Ve andre yaaro bunch of fanatics anno murkharige alli seridda lakshakku hecchina janare uttara. rajyada moole mooleyinda bandidda jana, avara abhimaana, ka.ra.ve melina nambike nodi tumba kushi aaytu. raajyakke nammade aada paksha illadiddaru nadu-nudiya prashne bandaaga horadalu ka.ra.ve idey anno message clear aagi janarige sikkide

Anonymous ಅಂತಾರೆ...

Namaskara,

Naanu kooda e samaveshakke hogidde. Ellede kannada bavuta rarajastha ithu....chindu feeling guru.

Mathe, mukyamantri chandru avara bahasana sooper.

Adre english papers nalli idara bagge jasti varadi kottilla...yaako gothilla.

Hats off Narayana Gowdre!!

ಪುಟ್ಟ PUTTA ಅಂತಾರೆ...

Hats off KRV!

Anonymous ಅಂತಾರೆ...

chennagide varadi .. mundina baari, ee samaaveshana MG road nalli, brigade roadnalli, matte hosur road nalli kooda nadesi .. ella tarahada janakku tiLiyali ...

KRV .. Jai !!

Sri

Anonymous ಅಂತಾರೆ...

nan maklu times of india navrige chappali seve madbeku . yake andre north india nalli ene adru front page photo kodo maklu, sachin tendulkar maga bedi madkonda anta front page varadi madovru, inta mahattaravaada event na varadi madilla. olagade 5 page nalli ello bardiddare. intaha patrikegalige bahishkaara haakbeku.
but gowdru madta iro kelsa shalghaniyavadaddu.

Amarnath Shivashankar ಅಂತಾರೆ...

karnaaTaka rakShaNaa vEdike ya shakti ellarigu arivaayitu.
intaha ati doDDa kannaDIgara habba, jaatre hindendu bengaLoorinalli naDediralilla..
karnaaTaka rakShaNaa vedikege jayavaagali..
T.A.Narayana gowdarige namma hrudaya poorvaka dhanyavaadagaLu

ಮಹೇಶ ಪ್ರಸಾದ ನೀರ್ಕಜೆ ಅಂತಾರೆ...

ಕನ್ನಡದ ಬಾವುಟ ನೋಡೋದೇ ಒಂದು ಚೆಂದ. ಬೆಂಗಳೂರಂತೂ ಹಳದಿ-ಸಿಂಧೂರ ವರ್ಣಮಯವಾಗಿತ್ತು. ಕಣ್ಣಿಗೆ ಹಬ್ಬ. ನಾರಾಯಣ ಗೌಡ್ರಿಗೆ ಧನ್ಯವಾದಗಳು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails