ಚಿನ್ನಕ್ಕೂ ಹಿಡೀತಲ್ಲಪ್ಪೋ ತುಕ್ಕು!


ಕರ್ನಾಟಕದ ಸಂಸ್ಕೃತಿ ಮೆರುಸ್ತೀವಿ ಅಂದ್ಕೊಂಡು ನಮ್ಮೂರಿಗೆ ಕಾಲಿಟ್ಟಿರೋ ಸುವರ್ಣ ಎಂಬ ಅಪ್ಪಟ 24 ಕ್ಯಾರೆಟ್(?) ಚಿನ್ನಕ್ಕೂ ಹಿಂದಿ ಹೇರಿಕೆ ಮಾಡೋ ತುಕ್ಕು ಹಿಡ್ಯಕ್ ಶುರು ಆಗಿದೆಯಲ್ಲಾ ಗುರು, ಏನ್ಮಾಡಣಾ?
ಏಷಿಯಾ ನೆಟ್ ಎಂಬ ಮಲಯಾಳಿ ಮಾಲಿಕತ್ವದ ಈ ಖಾಸಗಿ ವಾಹಿನಿಯಲ್ಲಿ ಹಾಡುಗಾರಿಕೆ ಸ್ಪರ್ಧೆಯೊಂದನ್ನು ನಡುಸ್ತಾ ಇದಾರೆ. "ಕಾನ್ಫಿಡೆಂಟ್ ಸ್ಟಾರ್ ಸಿಂಗರ್" ಅನ್ನೋ ಕಾರ್ಯಕ್ರಮ ಅದು. ಅದರಲ್ಲಿ ಈಗ ಹೊಸದಾಗಿ ಸ್ಪರ್ಧಿಗಳಿಂದ ಹಿಂದಿ ಸಿನಿಮಾ ಹಾಡುಗಳನ್ನು ಹಾಡಿಸಲು ಮುಂದಾಗಿದಾರೆ. ಗಮನಿಸಿ, ಕನ್ನಡದಲ್ಲಿ ಇರೋ ಯಾವ ವಾಹಿನಿಯೂ ಇಂತಹ ಒಂದು ಕ್ರಮಕ್ಕೆ ಇದುವರೆಗೂ ಮುಂದಾಗಿರಲಿಲ್ಲ. ಈ ಟಿವಿಯಲ್ಲಿ ಬರ್ತಿರೋ ಎದೆ ತುಂಬಿ ಹಾಡಿದೆನು ಕಾರ್ಯಕ್ರಮದಲ್ಲಿ ಗಾಯಕ ಬಾಲಸುಬ್ರಮಣ್ಯಂರವರು ಮಧ್ಯೆ ಮಧ್ಯೆ ಆಗಾಗ ಪರಭಾಷಾ ಹಾಡುಗಳನ್ನು/ಆಲಾಪಗಳನ್ನ ಹಾಡ್ತಿದ್ರು. ಅದೇ ಮೊಸರನ್ನ ತಿನ್ನೋವಾಗ ಬಾಯಿಗೆ ಸಿಗೋ ಕಲ್ಲಾಗಿದ್ದರೆ ಈಗ ಸುವರ್ಣದವರು ಕೈಗೊಂಡಿರೋ ನಿಲುವು ಕನ್ನಡಿಗರ ತಲೆ ಮೇಲೇ ಎತ್ತಿ ಹಾಕಕ್ಕೆ ಹೊರಟಿರೋ ಹಿಂದಿ ಹೇರಿಕೆಯೆನ್ನುವ ಚಪ್ಪಡಿ ಕಲ್ಲಾಗಿದೆ.
ಯಾಕೆ ಬೇಡ ಈ ಕ್ರಮ? ಈ ಕಾರ್ಯಕ್ರಮ?

ಸುವರ್ಣದವರು ಈ ಬೆಳವಣಿಗೇನ ಹೇಗೆ ಸಮರ್ಥಿಸಿಕೊಳ್ತಿದಾರೆ ಅಂದರೆ ಕನ್ನಡವರು ಎಗರಿ ಬಿದ್ದು ಅವರ ಕಾಲಿಗೆ ಉದ್ದಂಡ ನಮಸ್ಕಾರ ಹಾಕ್ಬಿಡಬೇಕು. ನಮ್ಮ ಕನ್ನಡದ ಗಾಯಕ ಗಾಯಕಿಯರಿಗೆ ಹಿಂದಿ ಹಾಡುಗಳನ್ನು ಹೇಳುವ ಮೂಲಕ ಹೆಚ್ಚಿನ ಅವಕಾಶಗಳು ಸಿಗುತ್ವಂತೆ. ಅಲ್ಲಾರೀ, ಸೋನು ನಿಗಮ್ಮು, ಕುನಾಲ್ ಗಾಂಜಾವಾಲ, ಶ್ರೇಯಾ ಹತ್ರ ಕನ್ನಡದಲ್ಲಿ ಹಾಡ್ಸಕ್ಕೆ ಮೊದಲು ಅವ್ರೆಲ್ಲಾ ಕನ್ನಡದಲ್ಲಿ ಹಾಡೋದ್ನ ಕಲೀಲಿ ಅಂತಾ ಯಾರಾನಾ ಕೇಳಿದ್ರಾ? ಅಥವಾ ಸ್ಪರ್ಧೆಗಳಲ್ಲಿ ಅವ್ರುಗಳು ಕನ್ನಡದಲ್ಲಿ ಹಾಡಿದ್ರಾ?
ಕನ್ನಡದ ಸ್ಪರ್ಧಿಗಳ ಹತ್ರ ಹಿಂದಿ ಹಾಡುಗಳ್ನಾ ಹಾಡ್ಸೋ ಈ ಕ್ರಮ ಯಾಕೆ ಮನೆ ಹಾಳುತನದ್ದಾಗಿದೆ ಅಂದ್ರೆ ಇವರುಗಳು ಹಿಂದಿ ಹಾಡುಗಳ್ನ ಕಲೀದೆ ಇದ್ರೆ ಆ ಸ್ಪರ್ಧೆಯಿಂದ ದೂರ ಉಳೀಬೇಕಾಗುತ್ತೆ. ಇವತ್ತು ಹಿಂದೀಲೂ ಹಾಡಿ ಅನ್ನೋರು ನಾಳೆ ಹಿಂದೀಲೇ ಹಾಡಿ ಅನ್ತಾರೆ.
ಈ ಕಾರ್ಯಕ್ರಮದಲ್ಲಿ ಹಿಂದಿ ಚಿತ್ರಗೀತೆ ಹಾಡುವಾಗ ಆಯಾ ಹಾಡುಗಳ ಪರಿಚಯ ಮಾಡಿಕೋಡೋ ನೆಪದಲ್ಲಿ ಇವತ್ತು ಹಿಂದಿ ಸಿನಿಮಾಗಳ ಬಗ್ಗೆ ಮಾತಾಡ್ತಾರೆ, ನಾಳೆ ಹಿಂದಿ ಉಚ್ಚರಣೆ ಬಗ್ಗೆ, ಹಿಂದಿ ಸಿನಿಮಾ ರಂಗದ ಬಗ್ಗೆ ಮಾತಾಡ್ತಾರೆ, ನಾಡಿದ್ದು ಹಿಂದೀಲೇ ಮಾತಾಡ್ತಾರೆ. ಇವತ್ತು ಒಂದು ಹಾಡಿನ ಸ್ಪರ್ಧೆ ಹಿಂದೀಲಿ ಮಾಡೋರು, ನಾಳೆ ಹಿಂದೀಲೆ ವಾಹಿನಿಯ ಅರ್ಧ ಕಾರ್ಯಕ್ರಮಗಳನ್ನು ಮಾಡಕ್ ಮುಂದಾಗ್ತಾರೆ. ಇದೆಲ್ಲಕ್ಕಿಂತ ದೊಡ್ಡ ಅಪಾಯ ಅಂದ್ರೆ ಈ ಸುವರ್ಣ ಟಿವಿ ನೋಡ್ಕೊಂಡು ಉಳಿದ ಚಾನೆಲ್ಲುಗಳೂ ಇದೇ ಚಾಳಿ ಅನುಸರಸಕ್ಕೆ ಶುರು ಹಚ್ಕೊಂಡ್ರೆ ಇವುಗಳಲ್ಲಿ ಕನ್ನಡ ಅಧೋಗತಿ ಆಗೋದ್ರಲ್ಲಿ ಅನುಮಾನಾನೆ ಇರಲ್ಲ. ಮನರಂಜನೆ ಮೂಲಕ ಹಿಂದಿ ಹೇರೋದು ಅಂದ್ರೆ ಇದೇ ಅಲ್ವಾ ಗುರುಗಳೇ?

ಇದು ನಮಗೆ ಬೇಡ ಅಂತ ಇವತ್ತೇ ದನಿ ಎತ್ತೋಣ ಬನ್ನಿ.
ಸುವರ್ಣ ವಾಹಿನಿಯ ಮುಖ್ಯಸ್ಥರುಗಳಿಗೆ ಒಂದು ಮಿಂಚೆ ಕಳಿಸಿ, ನಮ್ಮ ಆತಂಕವನ್ನು ವಿವರಿಸೋಣ. ಕನ್ನಡ ವಿರೋಧಿಯಾದ ಈ ನಿಮ್ಮ ಧೋರಣೆಗೆ ನಮ್ಮ ವಿರೋಧವಿದೆ, ನಿಮ್ಮ ಈ ಕ್ರಮ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡುವ ಹೇಯಕೃತ್ಯ, ಇದನ್ನು ನಾವು ವಿರೋಧಿಸ್ತೀವಿ ಅಂತ ಸಾರಿ ಹೇಳೋಣ. ಚಿನ್ನ ಆಗೋ ಅವಕಾಶ ಕೈಬಿಟ್ಟು ತುಕ್ಕನ್ನು ಹಿಡ್ಸಿಕೊಳ್ಳೋಕೆ ಮುಂದಾಗಿರೋ ಸುವರ್ಣದವರಿಗೆ ನಮ್ಮ ಅನಿಸಿಕೆಗಳನ್ನು ಇಂದೇ ಮುಟ್ಟಿಸೋಣ. ಏನಂತೀ ಗುರು?

14 ಅನಿಸಿಕೆಗಳು:

Anonymous ಅಂತಾರೆ...

ಹೌದು, ಗುರುಗಳೇ, ನೀವು ಹೇಳಿದ್ದು ಸರಿಯಾಗಿದೆ. ಈ ಬಗ್ಗೆ ಈಗಾಗ್ಲೆ ಈ ಮೈಲ್ ಬಂದಿದೆ. ಅದರಲ್ಲಿ ಕೊಟ್ಟಿರೋ ಸುವರ್ಣ ಟಿ.ವಿ ವಿಳಾಸ ನೋಡಿ. ಎಲ್ರೂ ಅವರಿಗೆ ಬರೆಯೋಣ ಬನ್ನಿ:
ಏಷಿಯಾ ನೆಟ್ ಸುವರ್ಣ ದೂರದರ್ಶನ (ಸಂಪರ್ಕ ಅಧಿಕಾರಿ : ಶಾಮಸುಂದರ್)
ಸಂಖ್ಯೆ 202, ಎಂಬಾಸಿ ಸ್ಕ್ವೇರ್, 2ನೇ ಮಹಡಿ,
ಇನ್ ಫ್ಯಾಂಟ್ರಿ ರಸ್ತೆ, ಬೆಂಗಳೂರು - 560 001

ದೂರವಾಣಿ : +(91)-(80)-30550666 , 30520000

ಮಿಂಚೆ ವಿಳಾಸ/ಅಂತರ್ಜಾಲ ತಾಣ :

webmaster@asianetglobal.com
website@asianetworld.tv
asianet@md2.vsnl.net.in
feedback@asianetglobal.com

Anonymous ಅಂತಾರೆ...

ಇದು ಅತಿ ಅಯಿತು. ಕನ್ನಡದ ಜನ ಕನ್ನಡ ವಾಹಿನಿಗಳನ್ನು ನೋಡುವುದು ಕನ್ನಡ ಕಾರ್ಯಕ್ರಮಗಳನ್ನ ನೋಡೋಕ್ಕೆ. ಇದು ಉದ್ಧಟತನವಲ್ಲದೆ ಇನ್ನೇನು. ಅನಾನಿಮಸ್ ಕೊಟ್ಟಿರುವ ಮಿಂಚೆಗೆ ಈಗಲೇ ಕಳಿಸುತ್ತೇನೆ.

ಶ್ವೇತ

Anonymous ಅಂತಾರೆ...

Hindi haadina spardhege antale nooraru hindi channelgaLu iruvaaga namma kannada channel nalli e riti hindi haadu haadisuttiruvudu dodda aparaadha. When there are hundreds of channels available to showcase hindi talent, why the hell a kannada channel has to resort to such cheap gimmicks?

We must condemn this and stop other channels from copying this.

Anonymous ಅಂತಾರೆ...

guru sariyaag heLidri,,

naale telugu, tamilu haadu haadsoku shuru maadboudu..,, idanna igle taDibeku

Anonymous ಅಂತಾರೆ...

kannadigare,

dayamaadi karey maadi, email haaki,,

idanna tadilebeku,, illa andre blog alli helida haage mundina dina kannada-da yella channelgaLu hindi programs air maadoke shuru maadboudu,,

We must give stern msg to Suvarna

Anonymous ಅಂತಾರೆ...

ಅಲ್ರೀ ಇವರ ಬುದ್ಡಿ ಸರಿ ಇದೆಯೋ ಇಲ್ಲೊ ? ಕನ್ನಡ ವಾಹಿನಿದಾಗ್ ಹಿಂದಿ ಹಾಡು ಹಾಡಿಸೋ ವಿಚಾರ್ ಹೆಂಗ್ ಬಂತ್ರಿ ಇವರ ತಲ್ಯಾಗ್ ? . ಹಿಂದಿ ಹಾಡ್ ಕೇಳಾಕ ನೂರಾರ ಚ್ಯಾನೆಲ್ ಅದಾವ್, ನಾವು ಈ ಚ್ಯಾನೆಲ್ ನೋಡೋಕ್ಕ್ ಕಾರಣ ಅಂದ್ರ ಇದು ಕನ್ನಡ ಚ್ಯಾನೆಲ್ ಅಂತ, ಇಲ್ಲಾ ಅಂದ್ರ ಯಾರಿಗ್ರೀ ಬೇಕು ಕರ್ನಾಟಕ ದಾಗಾ ಸುವರ್ಣ ಚ್ಯಾನೆಲ್ . ಅವ್ರಿಗಿ ಹಿಂದಿನ ಬೇಕಂದ್ರ ಸುವರ್ಣ ಚ್ಯಾನೆಲ್ ನ ಪೂರ್ತಿ ಹಿಂಡಿನ್ ಮಾಡಿಬಿದ್ರ್, ಇಂತಾ ಚ್ಯಾನೆಲ್ ನಮಗ್ ಬ್ಯಾಡ್ ಬ್ಯಾಡ್.--

ಕನ್ನಡಿಗ

Anonymous ಅಂತಾರೆ...

houdu....this is not fair....kannada dalli ashtondu sumadhura geetegaLu iruvaaga hindi na yaake haadbeko nange gottilla....its just pure gimmicks ashte....kannada channel nalli maataado aa hostsdu kannada keLi asahya aagatte..."aa" kaara "ha" kaara illade, "kanglish" maataadikondu, hindi channel gaLanna copy maadirodu saalu anta eega edu bere!!!

Unknown ಅಂತಾರೆ...

Bahala arogyakara prathibatane idhu....
E Vahiniyanu Shuru maduvaga, appata kannada vahini yendu heli, Kuvempu, Annavaru hegi hiriya chitragalanu pracharakagi upayogisi, ivaga Confident Star Singer ano karyakramavanu kannada hadugaligali misalu antha shuru madi, ivaga hindi hadu hada beku antha shuru madidhare, idhu indirect agi kannadigarige maduthiruva avamana, kannadigara kaiyalli hindi hadugalanu hadisi, ivara hathira aguvudilla antha thorisuvudhu.....
Nammalle jeevana paryantha, kelidharu mugiyalagadasthu sundaravadha kannada chalana chitra geethegalu idhe, hagagi namage hindi hadugalu beda. E kudale sambandha pattavaru suktha krama kaigondu, hindi hadugalanu nilisabeku....
Jai Karnataka

Anonymous ಅಂತಾರೆ...

ನಂ ಕಾಲ್ ಮ್ಯಾಗೆ ನಾವೇ ಕಲ್ಲು ಹಾಕ್ಕೊಂದಂಗ ಐತಪಾ ಇದು! ಅಲ್ಲ್ಲ ಇಂಥ ಮಂದಿಗಿ ನಾವು ಬ್ಯಾಡಾ ಅನ್ನಲ್ಲ, ಇಂಥವರು ಎಲ್ಲ ಕಡೆನು ಭಾಳ ಜನ ಅದರ ಆದ್ರ ಇಂಥವರಂದ ಪೂರಾ ಕನ್ನದಾವರಿಗೆಲ್ಲ ಕಷ್ಟ ಮಾಡ್ಟರ್ !

ಕನ್ನಡ ಮುಂದ ತರಕ ಎಲ್ಲರೂ ವದ್ದಾಡಕಾತ್ತಾರ ಇವ್ರು ನೋಡಿದ್ರಾ ಹಿಂದ ಜಗ್ಗಾತಾರ್!

-ವಿನೋದ್.

Anonymous ಅಂತಾರೆ...

ee kaaryakramagaLalli kelvomdu amshagaLu bhaari bEsara taristave..

i. himdi haaDugaLannu haaDisOdu haage adakke dance maaDsOdu...kannaDadalli
gaayakaraagabEku annOrige himdi haaDanna haaDi prathibhe tOrsuvudaralli
Enu purushaartha ideyo gottilla..naaLe tamilu telugu haaDsOdu kaDDaaya
maaDbahudu ( asianet malayaali channel nalli yEnu maaDtaaro ivru
adanna maaDtaare )

ii. judges amta bamdiro mahaanubhaavaru englishna jaasti baLsOdu
haLLigaLalli ee kaaryakrama nODtirtaare anno parive illa ivarige

iii. niroopaki praveen ji guru ji amta sambhOdisuvadu
'ji' anno himdi gulaamagiri yaake bEkO gottilla..

iv. gaayakanige haaDuvadashte kelsa avnyaake kuNibEko naa kaaNe

-putta

ಪೂರ್ಣ ವಿ-ರಾಮ ಅಂತಾರೆ...

ಕನ್ನಡದಲ್ಲೂ ಇಂಥದ್ದೊಂದು ಸಂಘಟಿತ ಬ್ಲಾಗಿದೆ ಎಂದು ದೇವರಾಣೆ ಗೊತ್ತಿರಲಿಲ್ಲ. ಯೋಗ್ಯವಾದ ಬರಹ ಕಮ್‌ ಪ್ರತಿಭಟನೆಯ ಹಾದಿ. ಸದಾ ಎಲ್ಲರ ಬೆಂಬಲ ಇದ್ದೇ ಇರುತ್ತೆ.


ಥ್ಯಾಂಕ್ಯೂ

pramod s ಅಂತಾರೆ...

idu teera ati aayitu guru . ellaru seri kannada da kole madta idaare . idakke takka pratibhatane kodalebeku . melina address ge ondu mail bidtini igale

Anonymous ಅಂತಾರೆ...

Haudu Guru neevu helta irodu sariyaagide, naavellaru ivaru madiddanna nodta koorodru badlu, adaralli iro tappu galanna virodisale beku..

Baani yellaru eee prayatnavanna khandisona

Anonymous ಅಂತಾರೆ...

ಆಂಗ್ಲ ಭಾಷೆಯೂ ಬೇಡ. ಹಿಂದಿ ಭಾಷೆಯೂ ಬೇಡ. ಕನ್ನಡ ಮಾತ್ರ ಸಾಕು. ಜಗತ್ತಿನ ಯಾವ ದೇಶದಲ್ಲೂ ಈ ರೀತಿ ಹತ್ತಾರು ಭಾಷೆಗಳ ಆಯ್ಕೆ ಇರುವುದಿಲ್ಲ. ಅವರವರ ಭಾಷೆಯಲ್ಲಿ ಮಾತ್ರ ಎಲ್ಲಾ ಇರುತ್ತದೆ. ಬೇಕಾದ್ರೆ ಬನ್ನಿ. ಇಲ್ದಿದ್ರೆ ಬಸ್ಸಿಂದ ಇಳಿಯಿರಿ ಅಂತಾರೆ. ಉದಾಹರಣೆ: ಜಪಾನ್, ಬ್ರೆಜಿಲ್, ಜರ್ಮನಿ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails