ಗುಣಮಟ್ಟ ವೃತ್ತ ಸ್ಪರ್ಧೆಯಲ್ಲಿ ಕೇಳಿಬಂದ ಕನ್ನಡ!

ಇತ್ತೀಚಿಗೆ ಬೆಂಗಳೂರಿನ ಪಿ.ಇ.ಎಸ್.ಐ.ಟಿ (PESIT)ಸಭಾಂಗಣದಲ್ಲಿ ಒಂದು ಕಾರ್ಯಕ್ರಮ ನಡೀತು. ಅಖಿಲ ಭಾರತ ಗುಣಮಟ್ಟ ವೃತ್ತ ಸಂಸ್ಥೆಯ ಬೆಂಗಳೂರು ವಿಭಾಗದೋರು ಕಾರ್ಖಾನೆಗಳಲ್ಲಿ ತಂಡಗಾರಿಕೆಯ ಮೂಲಕ ಉತ್ಪನ್ನಗಳ ಗುಣಮಟ್ಟದ ಹೆಚ್ಚಳದ ಜೊತೆಜೊತೆಗೇ ಕೆಲಸ ಮಾಡೋ ವಿಧಾನದ, ಸುರಕ್ಷತೆಯ ಗುಣಮಟ್ಟ ಹೆಚ್ಚಿಸೋ ಉದ್ದೇಶದಿಂದ ನಾನಾ ಉತ್ಪಾದನಾ ಸಂಸ್ಥೆಗಳ ’ಗುಣಮಟ್ಟ ವೃತ್ತ’ಗಳ ಒಂದು ಸ್ಪರ್ಧೆ ನಡುಸ್ತು ಗುರು!

ಇಲ್ಲಿ ಕನ್ನಡಕ್ಕೆ ಉತ್ತೇಜನವಿತ್ತು!

ಈ ಕಾರ್ಯಕ್ರಮದಲ್ಲಿ ಕರ್ನಾಟಕದ ನಾನಾ ಸಂಸ್ಥೆಗಳ ಹತ್ತಾರು ತಂಡಗಳು ಭಾಗವಹಿಸಿದ್ವು. ಈ ತಂಡಗಳು ಹೆಚ್ಚಿನದಾಗಿ ಯಂತ್ರಾಗಾರದ ಕಾರ್ಮಿಕರನ್ನೇ ಒಳಗೊಂಡಿದ್ದು ಅವರುಗಳೇ ತಮ್ಮ ತಂಡದ ಸಾಧನೆಯ ಬಗೆಗಿನ ಪ್ರಾತ್ಯಕ್ಷಿಕೆಗಳನ್ನು ವಿವರಿಸಿದರು. ಇಡೀ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದ ಒಂದೆರಡು ವಿಷಯಗಳಂದ್ರೆ ಟಯೋಟಾ ಸಂಸ್ಥೆಯ ಅಂಗಸಂಸ್ಥೆಯೊಂದರ ತಂಡವೂ ಸೇರಿದಂತೆ ಅನೇಕ ತಂಡಗಳು ಕನ್ನಡದಲ್ಲಿ ತಮ್ಮ ಪ್ರಾತ್ಯಕ್ಷಿಕೆಗಳನ್ನು ವಿವರಿಸಿದ್ದು. ಈ ಸ್ಪರ್ಧಾವಳಿಯ ಆಯೋಜಕರೂ ಕೂಡಾ ಕನ್ನಡದ ವಿವರಣೆಯನ್ನು ಉತ್ತೇಜಿಸಿದರು ಗುರು!

ಈ ಸ್ಪರ್ಧೆಗಳ ಒಬ್ಬ ತೀರ್ಪುಗಾರರು ಅಂದು ಅಂದ ಮಾತು ..."ಈ ಸಂಸ್ಥೆಯ ತಂಡದೋರು ಕನ್ನಡದಲ್ಲೇ ಮಾತಾಡಿದ್ರೂ (ಇಂಗ್ಲಿಷ್ ಮಾತಾಡದೇ ಇದ್ದದ್ದು ಕೊರತೆ ಎನ್ನೋ ಮನೋಭಾವ ಅವರ ದನಿಯಲ್ಲಿತ್ತು!) ವಿಷಯದ ಬಗ್ಗೆ ಭಾಳಾ ಚೆನ್ನಾಗಿ ತಿಳ್ಕೊಂಡಿದ್ರು. ತಾವು ತಿಳಿದುಕೊಂಡಿದ್ದನ್ನು ಪ್ರತಿಯೊಬ್ರೂ ಎಷ್ಟು ಆತ್ಮವಿಶ್ವಾಸದಿಂದ ವಿವರುಸ್ತಾ ಇದ್ರೂ ಅಂದ್ರೆ ಅದಕ್ಕಾಗೆ ಅವರಿಗೆ ಪ್ರಶಸ್ತಿ ಹತ್ತಿರವಾಯ್ತು"

ಹಲವಾರು ತಂಡಗಳಿಗೆ ತಮ್ಮದಲ್ಲದ ನುಡಿಯಲ್ಲಿ (ಇಂಗ್ಲಿಷ್) ವಿವರಿಸೋದೇ ಒಂದು ದೊಡ್ಡ ತೊಡಕಾಗಿದ್ದುದು ಎದ್ದು ಕಾಣ್ತಿತ್ತು ಗುರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಂಜೆ ನಡೆಯುವಾಗ ಮುಖ್ಯ ಅತಿಥಿಗಳಾಗಿ ಬಂದ ನಾಡಿನ ಖ್ಯಾತ ಉದ್ಯಮಿಗಳಲ್ಲೊಬ್ಬರಾದ ಶ್ರೀ ಷಡಕ್ಷರಿಯವರು ತಾವಾಗೆ ಸಭೆಯನ್ನು ಕುರಿತು "ನನಗೆ ಕನ್ನಡದಲ್ಲಿ ಮಾತಾಡಲು ಇಷ್ಟ, ಮಾತಾಡ್ತೀನಿ , ಪರ್ವಾಗಿಲ್ವಾ?" ಅಂದಾಗ ಇಡೀ ಸಭಾಂಗಣ ಒಕ್ಕೊರಲಿನಿಂದ ಹೂಂಗುಟ್ಟಿದ್ದು, ಆ ನಂತರದ ಇಡೀ ಕಾರ್ಯಕ್ರಮ ಕನ್ನಡದಿಂದ ಮೆರುಗು ಪಡೆದದ್ದೂ ಮತ್ತೊಂದು ವಿಶೇಷ ಗುರು!

ಭಾಷೆ ಸಹಕಾರದ ಮಾಧ್ಯಮ!

ತಂತ್ರಜ್ಞಾನ ವಲಯದ ಸೆಮಿನಾರುಗಳು, ತರಬೇತಿಗಳು, ಇಂತಹ ಗುಣಮಟ್ಟ ವೃತ್ತ ಸ್ಪರ್ಧೆಗಳು ಇವೆಲ್ಲಾ ನಮ್ಮ ನಾಡಿನ ನುಡಿಯಲ್ಲಿ ನಡೆಯೋದು ನಿಜವಾಗ್ಲೂ ನಮ್ಮ ಏಳಿಗೆಯ ಹಾದಿಯಲ್ಲಿ ಇಡ್ತಿರೋ ಸರಿಯಾದ ಹೆಜ್ಜೆಗಳು. ತಂಡಗಾರಿಕೆಯಿಂದ ಗುಣಮಟ್ಟದ ಏಳಿಗೆ ಸಾಧಿಸುವ ಯೋಜನೆಯ ಯಶಸ್ಸಿಗೆ ಕಾರಣವಾಗುವುದೇ ತಂಡದ ಸದಸ್ಯರ ನಡುವಣ ಸಹಕಾರ. ಈ ಸಹಕಾರಕ್ಕೆ ಸಾಧನವೇ ಎಲ್ಲರಿಗೂ ತಮ್ಮನ್ನು ತಾವು ಸಂಪೂರ್ಣವಾಗಿ ಅಭಿವ್ಯಕ್ತಗೊಳಿಸಲು ಸಾಧ್ಯವಾಗೋದ್ರಿಂದ. ಅದು ಆಗೋದು ತಾಯ್ನುಡಿಯಿಂದ. ಭಾಷೆ ಬರೀ ಸಂವಹನದ ಸಾಧನ ಎಂದು ವಾದ್ಸೋರಿಗೆ ಉತ್ತರ ಕೊಡುವಂತೆ ಅಂದಿನ ಕಾರ್ಯಕ್ರಮಗಳು ನಡೆದು "ಭಾಷೆ ಸಂವಹನವಷ್ಟೇ ಅಲ್ಲ, ಒಂದು ಜನಾಂಗದ ಸಹಕಾರದ ಮಾಧ್ಯಮ" ಎಂಬುದನ್ನು ಸಾರಿ ಸಾರಿ ಹೇಳಿದ್ದು ಮಾತ್ರಾ ಹದಿನಾರಾಣೆ ದಿಟ ಗುರು!

8 ಅನಿಸಿಕೆಗಳು:

clangorous ಅಂತಾರೆ...

idu ondu oLLe beLavaNige guru... naanu ide vidyasamstheyalli nanna gaNaka vigNana padavi padade annodu nanage ivattu nijakku sarthakathe tandide......

Anonymous ಅಂತಾರೆ...

ದಯವಿಟ್ಟು ನಿಮ್ಮ ಬ್ಲಾಗನ್ನು ಆಡುಭಾಷೆ ಕನ್ನಡದಲ್ಲಿ ಬರೆಯಬೇಡಿ; ಬದಲಾಗಿ ಸರಳ ಸ್ಪಷ್ಟ ಔಪಚಾರಿಕ ಕನ್ನದದಲ್ಲಿ ಬರೆಯಿರಿ. ಇಲ್ಲದಿದ್ದಲ್ಲಿ ನಿಮ್ಮ ಹೊಸ ಬ್ಲಾಗ್ ಬಗೆಗಿನ ಮೇಲನ್ನು ತೆರೆಯದೆ ಡಿಲೀಟ್ ಗುಂಡಿಯನ್ನು ಒತ್ತಲೇ ಬೇಕಾಗುತ್ತದೆ.

Unknown ಅಂತಾರೆ...

santhosha agutte ee reethiya maatu kelokke. haage ee vichaara manasinalli itkondu, naavu idannu anusariso praamaNika prayatna maadalebeku. naanu innu munde inta avakaasha sikkaga ee diseyalli praamanika prayatna maduve. bahusha idanna namma jothegaararindaloo apekshisabahudu.

Sathya Charana S.M.

Anonymous ಅಂತಾರೆ...

entaha paristhiti bandide nodi kannadakke!!! kannadadalli debate maadodu atva bhaashana maadodu ondu aashcharyavaagi kanutta ide..idu dina nitya nadeyabeku.. aagale kannadakke dhakke baaradu.. ella kade, kannadavanna upayogisi, bereyavaru kannadavanna baLasuvanta paristhiti udbhavisabeku.. haage aagalikke navellaru prayatna maadoNa.

ಉಉನಾಶೆ ಅಂತಾರೆ...

ನಮ್ಮ "ಕೆಲಸಗಳಲ್ಲಿ" ಕನ್ನಡವನ್ನು ಹೆಚ್ಚು ಹೆಚ್ಚು ಬಳಸಿದಷ್ಟೂ ನಮಗೇ ಲಾಭ.

Anonymous ಅಂತಾರೆ...

ಒಂದು ಒಳ್ಳೆಯ ಸುದ್ದಿ.. ಭಾಷೆಯ ಬಗೆಗಿನ ನಮ್ಮ ಅಭಿಪ್ರಾಯವನ್ನು ಇನ್ನೂ ಉತ್ತಮ್ಮಗೊಳ್ಲಿಸಿಕೊಳ್ಳಬೇಕು
--ಚಂದ್ರು

Anonymous ಅಂತಾರೆ...

ಅನಾನಿಮಸ್ ರವರೇ,
ಆಡುಭಾಷೆಯಲ್ಲಿ ಏಕೆ ಬರೆಯಬಾರದೆ೦ದು ತಿಳಿಸುವಿರಾ?
ಈ ರೀತಿ ಬರೆಯುವುದರಿ೦ದ ಹೆಚ್ಚು ಜನರನ್ನು ನಮ್ಮ ಚಿ೦ತನೆಗಳಿಗೆ ಹತ್ತಿರಮಾಡಿಕೊಳ್ಳಬಹುದಲ್ಲ. ಎಲ್ಲರೂ ಕುತೂಹಲದಿ೦ದ ಇದನ್ನು ಓದಬಹುದಲ್ಲ? ಉತ್ತರ ಕರ್ನಾಟಕದ ಆಡುಭಾಷೆ, ಮ೦ಡ್ಯದ ಆಡುಭಾಷೆ ಎಲ್ಲವೂ ತಿಳಿದ೦ತಾಗುತ್ತದೆ. ಇದು ಖುಷಿಪಡೋ ಸ೦ಗತಿ ಅಲ್ವಾ?

ಸಾ೦ಪ್ರದಾಯಿಕವಾಗಿ ಬರೆದರೆ ಮಾತ್ರ ಕನ್ನಡವೇ?

Manjunath ಅಂತಾರೆ...

nijakku olleya suDDi...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails