ಬಿಹಾರಿಗಳಿಗೆ ಕೆಲ್ಸ ಕೊಡುಸ್ಬೇಕಾದವ್ರು ಯಾರು?

ಮಹಾರಾಷ್ಟ್ರದಲ್ಲಿ ಇತ್ತೀಚಿಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯೋರು ರೈಲ್ವೇ ನೇಮಕಾತಿಯಲ್ಲಿ ಮರಾಠಿಗರಿಗೆ ಕೆಲಸ ಕೊಡ್ತಿಲ್ಲ, ಬರೀ ಬಿಹಾರಿಗಳನ್ನೇ ತಂದು ತುಂಬ್ತಿದಾರೆ ಅಂತ ಹೋರಾಟ ಮಾಡಿ ಪರೀಕ್ಷೆಗೆ ಬಂದಿದ್ದ ಉತ್ತರ ಭಾರತದವರನ್ನು ಓಡಿಸಿದ ಸುದ್ದಿ ಗೊತ್ತೇ ಇದೆ. ಇದಕ್ಕೆ ಪ್ರತಿಯಾಗಿ ಬಿಹಾರದಲ್ಲಿ ಭಾರಿ ಪ್ರತಿಭಟನೆ ನಡೆದು ಇಡೀ ಬಿಹಾರ ಹತ್ತಿ ಉರಿದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ ಗುರು!

ಇಂಥಾ ಘಟನೆಗಳು ಯಾಕಪ್ಪಾ ಆಗ್ತವೆ? ಈ ವ್ಯವಸ್ಥೆಗೆ ಇವುಗಳು ಆಗದ ಹಾಗೆ ತಡೆಯೋ ತಾಕತ್ತು ಇಲ್ವಾ? ಅನ್ಸಕ್ ಶುರು ಆಗ್ತದೆ ಗುರು! ಇಡೀ ಸಮಸ್ಯೆಯ ಮೂಲ ಕೆದುಕ್ತಾ ಹೋದ್ರೆ... ಎಮ್.ಎನ್.ಎಸ್ ನೋರು ರೈಲ್ವೆ ಕೆಲಸಗಳು ಮರಾಠಿಗರಿಗೇ ಸಿಗಲಿ ಅಂತ ಹೋರಾಟಕ್ ಇಳ್ದಿದ್ದು ಯಾಕೇ? ಮಹಾರಾಷ್ಟ್ರದಲ್ಲಿರೋ ರೈಲ್ವೇ ಕೆಲಸಗಳಲ್ಲಿ ಮರಾಠಿಗರನ್ನು ಕಡೆಗಣಿಸದ್ದಕ್ಕೆ ತಾನೇ? ಅಲ್ಯಾಕೆ ಅವರನ್ನು ಕಡೆಗಣಿಸಿದ್ರು? ಬಿಹಾರದಿಂದ ಅಭ್ಯರ್ಥಿಗಳನ್ನು ತಂದು ತುಂಬಕ್ಕೆ ತಾನೆ? ಅವರ್ಯಾಕೆ ಕಂಡ ಕಂಡಲ್ಲೆಲ್ಲಾ ಬಿಹಾರಿಗಳನ್ನು ತುಂಬಕ್ಕೆ ಹೋದ್ರು? ರೈಲ್ವೇ ಸಚಿವ ಬಿಹಾರಿ ಅಂತಾ ತಾನೇ? ಇದ್ಯಾಕೆ ಹೀಗೆ ಕೆಲಸದ ಅವಕಾಶ ಬೇರೆ ಬೇರೆ ರಾಜ್ಯಗಳಲ್ಲಿದ್ರೂ ಅಲ್ಲೆಲ್ಲಾ ಬಿಹಾರಿಗಳನ್ನು ತಂದು ತುಂಬಕ್ಕೆ ರೇಲ್ವೇ ಸಚಿವರು ಮುಂದಾಗ್ತಾರೆ ಅಂತೆಲ್ಲಾ ಅನ್ಸಲ್ವಾ ಗುರು? ಇವೆಲ್ಲಾ ನೋಡುದ್ರೆ ಅನ್ಸೋದು ಇಷ್ಟು.

ಸಮಸ್ಯೆ ಇರೋದು ಮುಂಬೈಯಲ್ಲಲ್ಲ! ಬಿಹಾರದಲ್ಲಿ!!

ಕಳೆದ ಎರಡು ದಶಕಗಳಲ್ಲಿ ಕೇಂದ್ರದ ರೈಲ್ವೇ ಸಚಿವರಲ್ಲಿ ಹೆಚ್ಚಿನವರು ಬಿಹಾರದೋರು. ನಿತಿಶ್ ಕುಮಾರ್, ರಾಮ್ ವಿಲಾಸ್ ಪಾಸ್ವಾನ್, ಲಾಲೂ ಹೀಗೆ ಬಿಹಾರದ ಸಚಿವರ ಸಂಖ್ಯೆ ದೊಡ್ದದು. ಇವ್ರು ಬಾಯಲ್ಲಿ ಹೇಳ್ತಿರೋ ಹಾಗೆ "ಅರ್ಹರಿಗೆ ರೈಲ್ವೇ ಇಲಾಖೆ ಕೆಲಸಗಳಿಗೆ ಸಂದರ್ಶನಕ್ಕೆ ಕರೆ ಹೋಗಿದೆ, ಇದು ಅಖಿಲ ಭಾರತ ಮಟ್ಟದ ಆಯ್ಕೆ ಪ್ರಕ್ರಿಯೆ" ಇತ್ಯಾದಿ ಮಾತುಗಳಲ್ಲಿ ಹುರುಳಿದ್ಯಾ ಅನ್ಸಲ್ವಾ ಗುರು? ಇವ್ರು ಹೇಳೋದೆ ನಿಜಾ ಆಗಿದ್ರೆ ಅದ್ಯಾಕೆ ಕರ್ನಾಟಕ, ಅಸ್ಸಾಮ್, ಮಹಾರಾಷ್ಟ್ರದ ಪರೀಕ್ಷೆಗಳಿಗೆ ಭಾರತದ ಇತರೆ ಕಡೆಗಳಿಗಿಂತ ಹೆಚ್ಚು ಅಭ್ಯರ್ಥಿಗಳು ಬಿಹಾರದಿಂದಲೇ ಬಂದರು ಅನ್ನೋ ಕೂಗು ಯಾಕೆ ಎದ್ದಿದೆ? ಬೆಂಕಿ ಇಲ್ದೇನೇ ಹೊಗೇನಾ? ಸಮಸ್ಯೆ ಏನಂದ್ರೆ ಭಾರತದಲ್ಲಿ ಯಾರು ಎಲ್ಲಿ ಬೇಕಾದ್ರೂ ಕೆಲಸ ಮಾಡಬಹುದು ಅನ್ನೋದನ್ನೇ ಅಸ್ತ್ರವಾಗಿಸಿಕೊಂಡು ಬಿಹಾರದಂತಹ ಪ್ರದೇಶಗಳ ರಾಜಕಾರಣಿಗಳು, ಭಾರತದ ಮೂಲೆ ಮೂಲೆಗೆ ತಮ್ಮ ನಾಡಿಂದ ಜನರನ್ನು ವಲಸೆ ಮಾಡುಸ್ತಾ ಇರೋದೇ ಆಗಿದೆ.

ಬಿಹಾರದ ಜನ ದನಿ ಎತ್ತಬೇಕಾದದ್ದು ಯಾರ ವಿರುದ್ಧ?

ಬಿಹಾರದಲ್ಲಿ ಉದ್ದಿಮೆಗಳನ್ನು ಬೆಳೆಸಿ, ಉದ್ಯೋಗಾವಕಾಶ ಹೆಚ್ಚಿಸೋದನ್ನು ಬಿಟ್ಟು ಹೀಗೆ ಕಂಡ ಕಂಡ ಕಡೆಗೆ ಬಡತನದ ಜೊತೆಗೇ ತನ್ನ ನಾಡಿನ ಜನರನ್ನು ಪಾರ್ಸಲ್ ಮಾಡ್ತಿರೋ ತಮ್ಮ ರಾಜ್ಯದ ರಾಜಕಾರಣಿಗಳ ವಿರುದ್ಧವೇ ಬಿಹಾರಿಗಳು ದನಿ ಎತ್ತಬೇಕಾಗಿತ್ತಲ್ವಾ ಗುರು? ನಮ್ಮ ಬಿಹಾರಕ್ಕೆ ಎಷ್ಟು ಉದ್ದಿಮೆಗಳನ್ನು ತಂದಿದೀರಾ? ಇದರಿಂದಾಗಿ ಎಷ್ಟು ಉದ್ಯೋಗಾವಕಾಶಗಳು ಹುಟ್ಟಿಕೊಂಡಿದೆ? ನಮ್ಮ ರಾಜ್ಯದ ತಲಾವಾರು ಆದಾಯ ಎಷ್ಟು? ನಮ್ಮ ರಾಜ್ಯದ ತಲಾವಾರು ಉತ್ಪಾದಕತೆ ಎಷ್ಟು? ಭಾರತದಲ್ಲೇ ಅತ್ಯಂತ ಶ್ರೀಮಂತ ಖನಿಜ ಸಂಪತ್ತಿರೋ ನಾಡುಗಳಲ್ಲಿ ಒಂದಾದ ನಮ್ಮ ರಾಜ್ಯ ಯಾಕೆ ಹಿಂದುಳಿದಿದೆ? ಈ ನಾಡನ್ನು ಉದ್ಧಾರ ಮಾಡೋಕೆ ನಿಮ್ಮ ಯೋಜನೆಗಳೇನು? ಅಂತ ಜನರು ಕುತ್ತಿಗೆಪಟ್ಟಿ ಹಿಡಿದು ಕೇಳ್ಬೇಕಾದ್ದು ಬಿಹಾರದ ರಾಜಕಾರಣಿಗಳನ್ನಲ್ವಾ ಗುರು! ಇಲ್ದಿದ್ರೆ ಇವತ್ತು ಮಹಾರಾಷ್ಟ್ರ, ಅಸ್ಸಾಮ್, ಕರ್ನಾಟಕಗಳಲ್ಲಿ ಆಗ್ತಿರೋದು ನಾಳೆ ಬೇರೆ ಬೇರೆ ಕಡೇನೂ ಆಗೋ ಅಪಾಯ ಇಲ್ವಾ ಗುರು?

ರಾಷ್ಟ್ರೀಯ ಪಕ್ಷಗಳ ಗೋಸುಂಬೇತನ!

ಇಡೀ ಎಪಿಸೋಡಿನಲ್ಲಿ ಭಾರತದ ರಾಷ್ಟ್ರೀಯ ಪಕ್ಷಗಳು ನಡೆದುಕೊಂಡ ರೀತಿ ಅಚ್ಚರಿ ಹುಟ್ಟಿಸೋ ಅಂಥದ್ದು. ಭಾರತೀಯ ಜನತಾ ಪಕ್ಷದವರಾಗಲೀ, ಕಾಂಗ್ರೆಸ್ಸಿಗರಾಗಲೀ ಬಿಹಾರಿಗಳ ಪರವಾಗಿ ಆ ಪರಿ ದನಿ ಎತ್ತಿ ನಿಂತೋರು ಯಾಕೆ ಭಾರತದ ಯಾವುದೇ ಮೂಲೆಯಲ್ಲಿ ರೈಲ್ವೇ ಪರೀಕ್ಷೆ ಮಾಡಿದ್ರೂ ಬಿಹಾರಿಗಳೇ ಹೆಚ್ಚು ಹೆಚ್ಚು ಕಾಣ್ತಾರೆ ಅನ್ನಲಿಲ್ಲ, ಯಾಕೆ ಅರ್ಜಿ ಹಾಕಬೇಕಾದರೆ ಹಿಂದಿಯಲ್ಲೇ ಬರೀಬೇಕು? ಯಾಕೆ ಕನ್ನಡದಲ್ಲಿ ಬರೆದ ಅರ್ಜಿಯನ್ನು ತಿರಸ್ಕಾರ ಮಾಡ್ತೀರಾ? ಅಂತ ದನಿ ಎತ್ತಲಿಲ್ಲ ಗುರು! ಕಡೇ ಪಕ್ಷ ರಾಜ್ಯದಲ್ಲಿರೋ ಇವರ ಪಕ್ಷಗಳೋರಾದ್ರೂ ಮಾತಾಡುದ್ರಾ? ಪಾಪಾ, ಕನ್ನಡದಲ್ಲಿ ಅರ್ಜಿ ಸಲ್ಲಿಸಕ್ಕೆ ಅವಕಾಶ ಕೊಡಿ ಅಂದ್ರೆ ಭಾರತದ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಬಂದುಬಿಡುತ್ತೆ ಅಂದುಕೊಂಡ್ರೇನೋ? ಒಟ್ನಲ್ಲಿ ಈ ಸೋ ಕಾಲ್ದ್ ರಾಷ್ಟ್ರೀಯ ಪಕ್ಷಗಳು ಬರೀ ಹಿಂದಿ ನಾಡಿನ ಪಕ್ಷಗಳು ಆಗಿಬಿಟ್ಟವೇನೋ ಅಂತ ಅನುಮಾನ ಜನತೇನ ಕಾಡ್ತಾ ಇದೆ ಗುರು!

ಕೊನೆಹನಿ: ಮಹಾರಾಷ್ಟ್ರದಲ್ಲಿ ನಡೆದ ದೊಂಬಿಯನ್ನು ಖಂಡಿಸೋ ಭರದಲ್ಲಿ ರೈಲ್ವೇ ಇಲಾಖೆಗೆ ಅಷ್ಟು ನಷ್ಟವಾಯ್ತು, ಇಷ್ಟು ನಷ್ಟವಾಯ್ತು ಅನ್ನೋರು ಬಿಹಾರದಲ್ಲಿ ಹತ್ತಾರು ರೈಲುಗಳನ್ನು ಸುಟ್ಟಾಗ, ಪ್ರತಿದಿನ ೨೦೦ಕ್ಕೂ ಹೆಚ್ಚು ರೈಲುಗಳ ಸಂಚಾರಕ್ಕೆ ಧಕ್ಕೆ ಆದಾಗ, ದಿನಕ್ಕೆ ನೂರಾರು ಕೋಟಿ ನಷ್ಟವಾದಾಗ... ಯಾಕೆ ಸುಮ್ಮನೆ ಇರ್ತಾರೆ ಅನ್ಸೋದಿಲ್ವಾ ಗುರು!

5 ಅನಿಸಿಕೆಗಳು:

Anonymous ಅಂತಾರೆ...

Leaders from Bihar, cutting across party lines, came together and criticised the manner in which MNS attacked Bihari youths attending railway examms in Mumbai.

leaders like Lalu Prasad, central minister Ram Vilas Paswan and Bihar Chief Minister Nitish Kumar should ponder why Biharis are forced to leave their state and seek jobs elsewhere.

"The real culprits in Bihar are the state's leaders because of whom people from that state are forced to hunt for jobs outside," he asserted.

For the past 18 years, leaders from Bihar have handled the railway ministry. "Yet people from that state are compelled to go out of Bihar for jobs,"

Marathi people are not fools and their verdict would be known in the next general elections.

Anonymous ಅಂತಾರೆ...

ಈ ಲಾಲು ಮಹಾನುಭಾವ ನಮ್ಮ ರಾಜ್ಯಕ್ಕೆ, ಮಹರಾಷ್ಟ್ರಕ್ಕೆ ತನ್ನ ಜನರನ್ನು ತಳ್ಳಿದ ಹಾಗೆ ತಮಿಳುನಾಡಿಗೆ ತಳ್ಳುತ್ತಾನೆಯೆ? ಖಂಡಿತ ಇಲ್ಲ. ಯಾಕೆಂದ್ರೆ ಅಲ್ಲಿರುವ ಕರುಣಾನಿಧಿ ಕರುಣೆಯಿಲ್ಲದ ತನ್ನ ಕಣ್ಣನ್ನು ಬಿಡುತ್ತಾನೆ ಕೇಂದ್ರ ಸರ್ಕಾರಕ್ಕೆ. ರಾಜ್ಯ ಸರ್ಕಾರದವರು ಸರಿ ಇದ್ದಿದ್ದರೆ ಇದೆಲ್ಲ ಯಾಕೆ ಅಗುತ್ತಿತ್ತು ಹೇಳಿ.

- ಬೃಂದ

Anonymous ಅಂತಾರೆ...

Ellidakku RAJAKARANAvee moola, en guru, namma deshadalli rajakaaranigala koralu patti hididu keloo thakattu janarige edeyaa?, khadithaa ella, haage nodidare French kranthiyanthe esto kranthigalu namma deshadalli nadeya bekaagittu, Neharu emba doora drusti ellada RAAJ KAARANI (bidisi barediddaralli thumbaa olaartha ede) maadida advaana kelasagala prathiphalagu eega doreyuttive (Vote bank raajakarana, janasankhyashpota etc etc).

Anonymous ಅಂತಾರೆ...

ಬಿಹಾರದಲ್ಲಿ ಹೊಸ ಉದ್ಯೋಗ ಹುಟ್ಟಿಸುವುದಕ್ಕಿಂತ ಈಗಲೇ ಲಭ್ಯವಿರುವ ರೈಲ್ವೇಯ ಉದ್ಯೋಗಗಳನ್ನು ಗಿಟ್ಟಿಸುವುದು ಒಳ್ಳೇದು ತಾನೆ?

ಎಷ್ಟೇ ಆದರೂ ಕೇಂದ್ರ ಸರಕಾದ ಕೆಲಸಗಳ ಸವಲತ್ತುಗಳನ್ನು ಬಿಹಾರದ ರಾಜ್ಯ ಸರಕಾರ ಎಲ್ಲಿಂದ ಕೊಟ್ಟೀತು?

gangadhara ಅಂತಾರೆ...

jana ecchetthu raajakaaranigalige naadidre ella sari hogatte..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails