ಅಶೋಕ್ ನಾಯಕ್ ಏರಿದ ಎತ್ತರ ನಾಡಿಗೆ ಸ್ಪೂರ್ತಿ

ಬೆಂಗಳೂರಿನಲ್ಲಿರೋ ಹಿಂದುಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥರಾಗಿ ಕನ್ನಡಿಗರಾದ ನಾಯಕ್ ಅವ್ರು ನೇಮಕವಾಗಿದಾರೆ ಅನ್ನೋ ಸುದ್ದಿ 2009ರ ಏಪ್ರಿಲ್ 1ರ ’ಕನ್ನಡಪ್ರಭ’ದ ಹನ್ನೊಂದನೇ ಪುಟದಲ್ಲಿ ವರದಿಯಾಗಿದೆ ಗುರು! ಇವರು ಕನ್ನಡಿಗ್ರು ಅನ್ನೋದು ತುಂಬಾ ಸಂತೋಷದ ವಿಷಯ. ಒಬ್ಬ ಕನ್ನಡಿಗ ತಂತ್ರಜ್ಞಾನದ ಮಹತ್ವದ ಸಂಸ್ಥೆಯ ಉನ್ನತ ಹುದ್ದೆಯನ್ನು ಗಳಿಸಿಕೊಳ್ಳೋದು ನಾಡಿನ ಕನ್ನಡಿಗರೆಲ್ರಿಗೂ ಹೆಮ್ಮೆ ತಂದಿದೆ. ಇವ್ರು ಈ ಹುದ್ದೆಗೆ ತಲುಪೋ ಮೊದಲು ಇಂಜಿನಿಯರ್ ಆಗಿ ಎಚ್.ಎ.ಎಲ್ ನ ಬೆಳವಣಿಗೆಗೆ ಮಹತ್ವದ ಕಾಣಿಕೆಗಳನ್ನು ನೀಡಿದಾರೆ. ನಮ್ಮ ಕನ್ನಡಿಗರು ಹೀಗೇ ಹೊಸಹೊಸ ಸಾಧನೆಗಳ ಮಜಲುಗಳನ್ನು ತಲುಪಬೇಕು ಅನ್ನೋದು ನಾಡಿನ ಏಳಿಗೆಯ ದೃಷ್ಟಿಯಿಂದ ಬಲುಮುಖ್ಯವಾದುದು. ಹಾಗೇ ಈ ಸುದ್ದಿ, ಈಗಾಗ್ಲೆ ಎನ್.ಎ.ಎಲ್, ಏ.ಡಿ.ಎ, ಇಸ್ರೋ, ಐಐಎಸ್ಸಿ ಮುಂತಾದ ಸಂಸ್ಥೆಗಳಲ್ಲಿ ದುಡೀತಿರೋ ಕನ್ನಡಿಗರಿಗೂ ಆಯಾ ಸಂಸ್ಥೆಗಳ ಉನ್ನತ ಹುದ್ದೇನ ತಾವೇ ದಕ್ಕಿಸಿಕೊಳ್ಳಬೇಕೂ ಅನ್ನೋ ಸ್ಪೂರ್ತಿ ಕೊಡೋದ್ರಲ್ಲಿ ಅನುಮಾನವಿಲ್ಲ. ಆ ದಿನಗಳು ಬೇಗ ಬರಲಿ ಅಂತಾ ಹಾರೈಸೋಣ ಗುರು! ನಮ್ಮ ನಮ್ಮ ಕ್ಷೇತ್ರಗಳಲ್ಲಿ ಪರಿಣಿತಿ ಸಾಧಿಸಲು ಈ ಬೆಳವಣಿಗೆ ಸ್ಪೂರ್ತಿ ಕೊಡಲಿ. ಹಾಗೇ ಪರಿಣಿತ ಕನ್ನಡಿಗರೇ ಕನ್ನಡನಾಡಿನ ಏಳಿಗೆಯ ನಾಳೆಗಳ ಆಶಾಕಿರಣ ಅನ್ನೋದ್ರಲ್ಲಿ ಸಂಶಯವಿಲ್ಲ.

6 ಅನಿಸಿಕೆಗಳು:

ವಸೀಮ್ ಅಂತಾರೆ...

ಆಹ್!! ಸಿಹಿ ಸುದ್ದಿ.
ಅಶೋಕ್ ನಾಯಕ್ ರವರಿಗೆ ಹೃದಯತು೦ಬಿದ ಅಭಿನ೦ದನೆಗಳು. ಅವರ ನಾಯಕತ್ವ, ಅಯಸ್ಕಾ೦ತದ ತರಹ ಇಡೀ ಕಾರ್ಮಿಕ ವರ್ಗಕ್ಕೆ ಮಾದರಿಯಾಗಲಿ.

prithvi ಅಂತಾರೆ...

super news guru !!

Priyank ಅಂತಾರೆ...

ನಿಜಕ್ಕೂ ಸಂತೋಷದ ಸಂಗತಿ ಗುರು.
ಕನ್ನಡಿಗರು "ಪವರ್ ಹಂಗ್ರಿ" ಆಗಬೇಕು. ನಾಯಕ್ ಅವರಿಂದ ಸ್ಪೂರ್ತಿ ಸಿಗಲಿ.

ಉಉನಾಶೆ ಅಂತಾರೆ...

ಅಭಿನಂದನೆಗಳು, ಅಶೋಕ್ ನಾಯಕ್ ಅವರಿಗೆ.

ಮಂಜು ಅಭಿ ಅಂತಾರೆ...

ಇದಂತೂ ಕನ್ನಡಿಗರ ಹೆಮ್ಮೆಯ "ಕರ್ನಾಟಕ ರತ್ನ ಸಿಂಹಾಸನಕ್ಕೆ" "ರತ್ನ ಕಿರೀಟವಿಟ್ಟಂತೆ".....

ಆದರು ಕನ್ನಡಿಗರು ಎಷ್ಟೇ ಪ್ರಾಮಾಣಿಕತೆಯಿಂದ ನಮ್ಮ ದೇಶಕ್ಕೆ ಸೇವೆ ಸಲ್ಲಿಸಿದರು ಅದು ಕೇಂದ್ರ ಸರ್ಕಾರದ ಕಣ್ಣಿಗೆ ಎಲೆ ಮರೆ ಕಾಯಿ.... ಇದಕ್ಕೆ ಉದಾಹರಣೆ....!!

೧) ಫೀಲ್ಡ್ ಮಾರ್ಷಲ್ ಕಾರ್ಯಪ್ಪ - ಸ್ವಾತಂತ್ಯ್ರ ಬಂದ ಕಾಲದಲ್ಲಿ.... ಭಾರತದ, ಭೂಸೇನೆ, ನೌಕಸೇನೆ ಮತ್ತು ವಾಯುಸೇನೆಯನ್ನು ಜವಾಬ್ದಾರಿಯಿಂದ ಮುನ್ನಡೆಸಿ, ಭಾರತದ ಸೈನ್ಯದ ರೂಪುರೇಷೆಗಳನ್ನು ಬದಲಿಸಿದವರು, (ಕೇಂದ್ರ ಸರ್ಕಾರದ ಯೋಗ್ಯತೆಗೆ ಒಂದು "ಭಾರತ ರತ್ನ ಪ್ರಶಸ್ತಿ ಕೊಡಲು ಆಗಲಿಲ್ಲಾ)

೨) ಕರ್ನಲ್ ವಸಂತ್: ಕಾರ್ಗಿಲ್ ಯುದ್ದದಲ್ಲಿ ಹೋರಾಡಿ ಮಾಡಿದವರಲ್ಲೇ ಅಪ್ರತಿಮ "ವೀರ ಕನ್ನಡಿಗ" ಹೆಂಡತಿ ಹೆರಿಗೆಗಾಗಿ ಅಸ್ವತ್ರೆಯಲ್ಲಿದ್ದರು ಹೆಂಡತಿಯನ್ನು ಲೆಕ್ಕಿಸದೆ, ದೇಶಕ್ಕಾಗಿ ಪ್ರಾಣ ಕೊಟ್ಟ "ವೀರರ ನಾಡು ಕೊಡಗಿನ ಕಾವೇರಿ" ಪುತ್ರ (ಕೇಂದ್ರ ಸರ್ಕಾರದ ಯೋಗ್ಯತೆಗೆ ಒಂದು "ಭಾರತ ರತ್ನ ಪ್ರಶಸ್ತಿ ಕೊಡಲು ಆಗಲಿಲ್ಲಾ)

೩) ವಿಶ್ವದಲ್ಲೇ ಶಿಕ್ಷಣ ದಾಸೋಹ, ಮತ್ತು ಅನ್ನ ದಾಸೋಹ, ಜಾತಿ-ಮತ-ಧರ್ಮದ ಬೆದಭಾವವಿಲ್ಲದೆ, ಒಂದು ಮಾದರಿ ವಿಶ್ವ ವಿದ್ಯಾನಿಲಯವನ್ನು ಮುನ್ನಡೆಸುತ್ತಿರುವ ಡಾ!! ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು, ಗ್ರಾಮೀಣ ಪ್ರದೇಶಗಳಲ್ಲಿ ೨೫೦ ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಜ್ಞಾನ ದಾಹವನ್ನು ನೀಗಿಸಿ ದೇಶಕ್ಕೆ ಸತ್ಪ್ರಜೆಗಳನ್ನು ನೀಡುತ್ತಿದ್ದಾರೆ, (ಕೇಂದ್ರ ಸರ್ಕಾರದ ಯೋಗ್ಯತೆಗೆ ಒಂದು "ಭಾರತ ರತ್ನ ಪ್ರಶಸ್ತಿ ಕೊಡಲು ಆಗಲಿಲ್ಲಾ)

೪) ಜಾತಿ-ಮತ, ಬೇಡ-ಭಾವ ಬೇಡ ಅಂತ , ವಿಷಮನವನ ಸಂದೇಶವನ್ನು ಸಾರಿದ, ಕರ್ನಾಟಕದ ಮಲೆನಾಡಿನ "ರಾಷ್ಟ್ರಕವಿ ಕುವೆಂಪು"ರವರಿಗೆ (ಕೇಂದ್ರ ಸರ್ಕಾರದ ಯೋಗ್ಯತೆಗೆ ಒಂದು "ಭಾರತ ರತ್ನ ಪ್ರಶಸ್ತಿ ಕೊಡಲು ಆಗಲಿಲ್ಲಾ)

೫) ಮೈಸೂರು ಸಂಸ್ಥಾನದ ದಿವಾನರಾಗಿ ದುಡಿದು.... ಜನಪರ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿ.... ಕರ್ಣಾಟಕದ ಎರಡನೇ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಮತ್ತು ದೇಶಕ್ಕೆ ಸಲ್ಲಿಸಿದ ಸೇವೆ ಇನ್ನೊಬ್ಬ ಮುಖ್ಯಮಂತ್ರಿ ಮಾಡಲು ಸಾದ್ಯವಿಲ್ಲ. ಇವರ ಕಾಲದಲ್ಲಿ ನಿರ್ಮಾಣವಾದ ನಾಲೆಗಳು, ಬಂಜರು ಭೂಮಿಯಲ್ಲ, ಹಸಿರಿನ ಮೈದಳೆದು ಭೂತಾಯಿ ನಗುವಿನ ಅಲೆಯಲ್ಲಿ ತೇಲಿದ ಸಂದರ್ಭ, ಕರ್ನಾಟಕಕ್ಕೆ ಕೈಗಾರಿಕೆಗಳ ಲಗ್ಗೆ, ಪುರಾತನ ಕಟ್ಟಡ, ಕೋಟೆಗಳು, ದೇವಾಲಯಗಳು ಸ್ಮಾರಕಗಳು, ಇವೆಲ್ಲ ಇವರ ಕಾಲದಲ್ಲೇ ಸಂರಕ್ಷಣೆಯಾಗಿದ್ದು.... (ಕೇಂದ್ರ ಸರ್ಕಾರದ ಯೋಗ್ಯತೆಗೆ ಒಂದು "ಭಾರತ ರತ್ನ ಪ್ರಶಸ್ತಿ ಕೊಡಲು ಆಗಲಿಲ್ಲಾ)

೬) ತಮ್ಮ ಸರಳ ತನದಿಂದ ಜನರಿಗೆ ಒಳ್ಳೊಳ್ಳೆ ಸಂದೇಶಗಳನ್ನು ನೀಡುತ್ತಲೇ ಬಣ್ಣದ ಬದುಕಿಗೆ ಶ್ರಮಿಸಿದ ವ್ಯಕ್ತಿ, ವರನಟ ಡಾ!! ರಾಜ್ ಕುಮಾರ್ (ಕೇಂದ್ರ ಸರ್ಕಾರದ ಯೋಗ್ಯತೆಗೆ ಒಂದು "ಭಾರತ ರತ್ನ ಪ್ರಶಸ್ತಿ ಕೊಡಲು ಆಗಲಿಲ್ಲಾ)

೭) ಅಧುನಿಕ ಜಗತ್ತಿನ ಕವಿಯೆಂದೇ ಗುರುತಿಸಿ ಕೊಂಡ ಹಾಗು ಭಾರತದ ಸಾಹಿತಿಗಳಲ್ಲೇ ಕಂಪ್ಯೂಟರ್ ಕೊಂಡ ಮೊದಲ ಸಾಹಿತಿ, ಪೂರ್ಣ ಚಂದ್ರ ತೇಜಸ್ವಿ, ಕರ್ನಾಟಕ ಸರ್ಕಾರದ ಅಡಿನದಲ್ಲಿರುವ "ಕನ್ನಡ ಗಣಪ ಪರಿಷತ್ತು" ಮಾಡಿರುವ ಲೋಪದೋಶಗಳುಳ್ಳ "ನುಡಿ" ತಂತ್ರಾಂಶದಿಂದ ಗ್ರಾಮೀಣ ಪ್ರದೇಶದ ವಿಧ್ಯಾರ್ಥಿಗಳಿಗೆ ಆಗುತ್ತಿರುವ ಮೋಸವನ್ನು ಬಯಲಿಗೆಳೆದವರು, ಇವರಂತೆ ಎಲ್ಲ ಸಾಹಿತಿಗಳು ಬಯಸಿದ್ದಾರೆ, ಕರ್ನಾಟಕದ ಗ್ರಾಮೀಣ ಭಾಗದ ವಿಧ್ಯಾರ್ಥಿಗಳ ಭವಿಷ್ಯ ಹೀಗೆ ಇರುತ್ತಿರಲಿಲ್ಲ.... (ಕೇಂದ್ರ ಸರ್ಕಾರದ ಯೋಗ್ಯತೆಗೆ ಒಂದು "ಭಾರತ ರತ್ನ ಪ್ರಶಸ್ತಿ ಕೊಡಲು ಆಗಲಿಲ್ಲಾ)

೮) ಭಾರತದ ಪ್ರಸಿದ್ದ ಖಗೋಳ ವಿಜ್ಞಾನಿ ಡಾ!! ಸಿ.ಅರ್. ಚಂದ್ರಶೇಖರ ಅವರು ಕೂಡ ಕನ್ನಡಿಗರೇ ಆದ್ದರಿಂದ ವಂಚಿತರಾಗಿದ್ದಾರೆ, (ಕೇಂದ್ರ ಸರ್ಕಾರದ ಯೋಗ್ಯತೆಗೆ ಒಂದು "ಭಾರತ ರತ್ನ ಪ್ರಶಸ್ತಿ ಕೊಡಲು ಆಗಲಿಲ್ಲಾ)

ಹೇಳುತ್ತಿದ್ದಾರೆ ಹೀಗೆ ಅನೇಕ ಅನೇಕ ಉದಾಹಾರನೆಗಳು ಕಣ್ಣ ಮುಂದೆ.... ಏನೇ ಇರಲಿ ಇಷ್ಟೆಲ್ಲಾ ಸಾಧನೆ ಮಾಡಿದವರು ಕನ್ನಡಿಗರು ಎನ್ನುವುದಕ್ಕೆ ಹೆಮ್ಮೆಯಿದೆ.... ಗುರು...

srikantiahgr ಅಂತಾರೆ...

ashok kamathravarige shubhashayagalu.h.a.l nalli prathibhavantha kannadigarannu guruthisi avaru samstheya agrasthanakke baralu avakasha koduthheeragi aashisona.kannada bhasheya belavanige kooda ivara adhikaradalli chennagi aagalendu haaraisona

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails