ಮಾತಾಡೋರು ಹೆಚ್ಚು ಅಂತಾ ಹಿಂದೀನಾ ಒಪ್ಪಕ್ಕಾಗುತ್ತಾ?

ಭಾರತ ದೇಶದಲ್ಲಿ ಹಿಂದೀನ ತಾಯ್ನುಡಿಯಾಗಿ ಹೊಂದಿರೋರು ಎಷ್ಟು ಜನಾ? ಅಂತ ಕೇಳುದ್ರೆ ನಾವು ನೋಡೋದು 2001ರ ಜನಗಣತಿಯ ಮಾಹಿತಿ ಕಡೇನೇ ಗುರು! ಇದು ಭಾರತ ಸರ್ಕಾರದ ಅಧಿಕೃತ ಅಂತರ್ಜಾಲ ತಾಣದಲ್ಲಿ ಸಿಗ್ತಾಯಿದೆ, ನೋಡಿ. ಇದರ ಪ್ರಕಾರ ಭಾರತದಲ್ಲಿ ಹಿಂದೀನ ತಾಯ್ನುಡಿಯಾಗಿ ಹೊಂದಿರೋರ ಸಂಖ್ಯೆ ಸುಮಾರು 42 ಕೋಟಿ. ಇದು ಭಾರತದ ಒಟ್ಟು ಜನಸಂಖ್ಯೆಯಾದ 102.87 ಕೋಟೀಲಿ ಶೇಕಡಾ 41ರಷ್ಟು ಅಂತ ನಾವು ನಂಬಬೇಕಾಗುತ್ತೆ.

ಹಿಂದಿ ತಾಯ್ನುಡಿಯಾಗಿರೋರ ನಿಜಸಂಖ್ಯೆ!

ಒಸಿ ಇದರ ಆಳಕ್ಕಿಳಿದು ನೋಡುದ್ರೆ ಕಾಣೋದು ಬೇರೇನೆ ಗುರು! ಇಲ್ಲಿ ಹಿಂದಿ ಅಂದ್ರೆ ಬರೀ ಹಿಂದಿ ಅಲ್ಲಾ... ಹಿಂದಿ ಅಂದ್ರೆ ಒಟ್ಟು 50 ಭಾಷೆಗಳ ಸಮೂಹ. ಈ ಪಟ್ಟೀಲಿ ಇಡೀ ಒಂದು ರಾಜ್ಯದ ಭಾಷೆಗಳಾದ ಭೋಜ್‍ಪುರಿ, ಚತ್ತೀಸ್‍ಘರೀ, ಹರ್ಯಾನ್ವಿ, ರಾಜಾಸ್ಥಾನಿಗಳೂ ಸೇರ್ಕೊಂಡಿವೆ. ಇದರಲ್ಲಿರೋ ಭಾಷೆಗಳನ್ನು ನೋಡ್ತಿದ್ರೆ ಅನ್ಸೋದು ಈ ಹಿಂದೀ ಅನ್ನೋ ಹೆಸರಲ್ಲಿ ಎಷ್ಟೊಂದು ಭಾಷೆಗಳನ್ನು ನಾಶ ಮಾಡಕ್ ಮುಂದಾಗಿದೆ ಭಾರತ ಸರ್ಕಾರ ಅಂತಾ ಗುರು! ಅದೆಂಗೇ ಅಂತಾ ಕೇಳ್ತೀರಾ? ಇವೆಲ್ಲದರ ತಲೆ ಮೇಲೆ ಭಾರತ ಸರ್ಕಾರವೇ ಹೇರಲು ಮುಂದಾಗಿರೋ ಒಂದು ಭಾಷೆ ಇದೆ. ಅದರ ಹೆಸರು "Standard hindi" ಅಂದ್ರೆ "ಪ್ರಮಾಣಿಕೃತ ಹಿಂದಿ" ಅಂತ. ಅಂದರೆ ಇವತ್ತಿನ ದಿನ ಭಾರತ ಸರ್ಕಾರ ತನ್ನ ನಾಡಿನ 24%ರ‍ಷ್ಟು ಜನರು ಬಳುಸ್ತಿರೋ(?) ನುಡೀನಾ ಅಧಿಕೃತ ಭಾಷೆ ಅಂತಾನೂ, ರಾಷ್ಟ್ರೀಯ ಭಾಷೇ ಅಂತಾನೂ ಸುಳ್ಳು ಹರುಡ್ತಾ, ಇಡೀ ಭಾರತದ ಹೆಚ್ಚು ಜನರ ತಾಯ್ನುಡಿಯೆನ್ನುತ್ತಾ ಉಳಿದ 76% ಜನತೆಯ ಮೇಲೆ ಹೇರಕ್ಕೆ ಹೊರಟಿರೋದು ಯಾವ ಸೀಮೆ ಪ್ರಜಾಪ್ರಭುತ್ವಾ? ಗುರು!
ಇದರ ಜೊತೇಲೆ ಹಿಂದೀ ಮಾತಾಡೋರೂ, ಬಲ್ಲೋರೂ ಹೆಚ್ಚಾಗಿದಾರೆ ಅನ್ನೋ ಮಾತು ಕೂಡಾ ಅಸಂಬದ್ಧವಾದ್ದೇ ಆಗಿದೆ. ಅರವತ್ತು ವರ್ಷದಿಂದ ನಾನಾ ತಂತ್ರಗಳ ಮೂಲಕ ಹಿಂದೀನಾ ಹೇರ್ತಾ ಇದ್ರೂ ಈ ಮಾತು ಕರ್ನಾಟಕಕ್ಕೆ ಅನ್ವಯ ಆಗಲ್ಲ. ಯಾಕಂದ್ರೆ ಇವತ್ತು ಹಿಂದೀ ಗೊತ್ತಿರೋ ಕನ್ನಡದೋರು ಎಷ್ಟು ಜನ ಇದಾರೆ ಅಂತಾ ನೋಡಕ್ಕೆ ರೈಲ್ವೇ ನೇಮಕಾತಿಯ ಪ್ರಹಸನಾನೆ ನೋಡೋಣ. ನೈಋತ್ಯ ರೈಲ್ವೇಲಿ ಖಾಲಿಯಿದ್ದ 4701 ಡಿ ದರ್ಜೆ ಹುದ್ದೆಗಳಿಗೆ ಹಿಂದೀಲಿ ಅರ್ಜಿ ಬರೀಬೇಕಾದ್ದು ಕಡ್ಡಾಯ ಅಂದಾಗ, ಆ ಪರೀಕ್ಷೆಗೆ ಹಾಜರಾದ ಕನ್ನಡಿಗರ ಸಂಖ್ಯೆ ಉಳಿದೋರ ಸಂಖ್ಯೆಯ ಮುಂದೆ ಎಷ್ಟು ಕಮ್ಮಿಯಿತ್ತು ಅನ್ನೋದನ್ನು ನೋಡುದ್ರೆ ಇದು ತಿಳಿಯುತ್ತೆ ಗುರು! ಒಟ್ನಲ್ಲಿ ಅರವತ್ತು ವರ್ಷದಿಂದ ನಿರಂತರವಾಗಿ ಹಿಂದೀ ಹೇರಿದ್ರಿಂದ ನಾವು ಕೆಲಸ ಕಳ್ಕೊಂಡ್ವೇ ಹೊರತು ಹಿಂದೀ ಕಲೀಲಿಲ್ಲಾ!

ಹಿಂದಿಯೋರ ಸಂಖ್ಯೆ 90% ಆಗಿರಲಿ..So what?

ನಮ್ಮ ಹಿಂದೀ ಭಕ್ತರು "ನೋಡುದ್ರಾ, ನೀವ್ ಏನೇ ಲೆಕ್ಕ ಕೊಟ್ರೂ ಹಿಂದೀ ಮಾತಾಡೋರು ತಾನೆ ಹೆಚ್ಚು ಸಂಖ್ಯೇಲಿರೋದು? ಅದಕ್ಕೆ ಹಿಂದೀ ರಾಷ್ಟ್ರಭಾಷೆ ಆಗಬೇಕು" ಅಂದಾರು, ಜ್ವಾಪಾನ! ಹಿಂದೀ ತಾಯ್ನುಡಿಯೋರು 24% ಅಲ್ಲಾ 90% ಆದ್ರೂ ಏನೀಗ? ನಮ್ಮ ನಾಡಲ್ಲಿ ಹಿಂದೀ ನಮ್ಮದಲ್ಲದ ನುಡಿ. ಇದನ್ನು ನಮ್ಮ ಮಕ್ಕಳ ಮೇಲೆ ಕಲಿಕೆಯಲ್ಲಿ ಕಡ್ಡಾಯ ಮಾಡೋದಾಗಲೀ, ನಮ್ಮ ಜನರ ಮೇಲೆ ಆಡಳಿತದ ಹೆಸರಲ್ಲಾಗಲೀ, ಕೆಲಸ ಸಿಗಲು ಬೇಕಾದ ಅರ್ಹತೆಯೆಂದಾಗಲೀ ಆಮಿಷ, ಒತ್ತಾಯ, ಬಲವಂತ ಮಾಡಿ ಹೇರೋದನ್ನು ಅದೆಂಗೆ ಒಪ್ಪಕ್ ಆಗುತ್ತೆ? ಸರಿಯಾದ ವ್ಯವಸ್ಥೇಲಿ ನಮ್ಮ ಕನ್ನಡವನ್ನೇ ಇವತ್ತು ಅನ್ನ ಕೊಡೋ ಭಾಷೆಯನ್ನಾಗಿಸಲು ಕರ್ನಾಟಕ ಸರ್ಕಾರ ಮುಂದಾಗಬೇಕು, ಕೇಂದ್ರಸರ್ಕಾರ ಹಿಂದಿನ ಬೆನ್ನೆಲುಬಾಗಬೇಕು. ಅದುಬಿಟ್ಟು ಇರೋ ವೈವಿಧ್ಯತೇನಾ ಅಳಿಸುತ್ತೇ ಅನ್ನೋ ಪರಿವೆಯೂ ಇಲ್ಲದೆ ಹಿಂದೀನಾ ಕೇಂದ್ರದೋರು ಭಾರತದ ಅಧಿಕೃತ ಸಂಪರ್ಕ ಭಾಷೆಯನ್ನಾಗಿಸಿರೋದು, ಕರ್ನಾಟಕ ಸರ್ಕಾರ ತ್ರಿಭಾಷಾ ಸೂತ್ರ ಅಂತ ಕನ್ನಡಿಗರನ್ನು ಕುಣುಸ್ತಿರೋದೂ ಸರೀನಾ? ನೀನೇ ಹೇಳು ಗುರು!!

8 ಅನಿಸಿಕೆಗಳು:

Unknown ಅಂತಾರೆ...

hindi onde alla namma deshada ella bhashegaligu protsaha siguvantaagabeku.olleya vishaya charcheyaagali.

Anonymous ಅಂತಾರೆ...

15% Kannada Matrubhashe hondiruva Dakshina Kannadadalli, haagu 30% Kannada Matrubhashe kannada aagiruva Kodaginalli Kannada herike sariyalla

ಕ್ಲಾನ್ಗೊರೌಸ್ ಅಂತಾರೆ...

ಹಿಂದಿ ಮಾತಾಡೋರ ಸಂಖ್ಯೆ ಇಟ್ಕೊಂಡು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿ ಅನ್ನೋ ಹಿಂದಿ ಭಕ್ತರಿಗೆ ಎಲ್ಲರೂ ಒಂದೇ ಒಂದು ಪ್ರಶ್ನೆ ಕೇಳಿ : ಭಾರತದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚು ಅಂತ ಹಿಂದೂ ಧರ್ಮನ ರಾಷ್ಟ್ರೀಯ ಧರ್ಮ, ಎಲ್ಲರೂ ಅದರ ಬಗ್ಗೆ ತಿಳ್ಕೊಬೇಕು ಅಂತ ಕಡ್ಡಾಯ ಮಾಡೋದನ್ನ ಹಿಂದೂ ಅಲ್ಲದವರು ಒಪ್ಪುತ್ತಾರ ?. ಅಷ್ಟೇ ಸಾಕು ಅವರ ಬಾಯಿ ಮುಚ್ಚಿಸೋಕ್ಕೆ.

Anonymous ಅಂತಾರೆ...

yaava pradEshadalloo, yaara mEloo aa naaDinadallada hErike aagabaaradu annOde sariyaada niluvu. EnaMtee guru?

ಕ್ಲಾನ್ಗೊರೌಸ್ ಅಂತಾರೆ...

ಸ್ವಾಮಿ ಮೊದಲನೇ ಅನಾಮಧೇಯರೇ,
ಅದೇ ರೀತಿ ಆ ಕನ್ನಡದವರ ಮೇಲೆ ತುಳು ಅಥವ ಕೊಡವ ಕೂಡ ಹೇರಿಕೆ ಅಗ್ಬಾರದಲ್ಲವೇ ?. ಆ ಪ್ರದೇಶಗಳಲ್ಲಿ ವಾಸಿಸುವ ಕನ್ನಡಿಗರು ಯಾವತ್ತು ತುಳು ಅಥವ ಕೊಡವ ಕಲಿಯೋದಿಲ್ಲ ಅಂತ ಹೇಳಲಿಲ್ವಲ್ಲ... . ಇನ್ನೂ ಮಂಗಳೂರಿನ ಈಗಿನ ಪೀಳಿಗೆಯ ಬಹುತೇಕ ಯುವಕ ಯುವತಿಯರು ನಮ್ಮ ನಾಡಿನದಲ್ಲದ ಹಿಂದಿಗೆ ಕೊಡುವ ಅರ್ಧ ಪ್ರಾಮುಖ್ಯತೆನೂ ನಮ್ಮ ನಾಡಿನ ಕನ್ನಡಕ್ಕೆ ಕೊಡೋಲ್ಲ. ರಾಷ್ಟ್ರೀಯ ಭಾಷೆ ಅನ್ನೋ ಪೊಳ್ಳು ದೇಶ ಪ್ರೇಮ, ತುಳುಗೆ ಬಹಳ ಹತ್ತಿರವಿರುವ ಕನ್ನಡ ಮಾತಾಡೋಕ್ಕೆ ಕೀಳರಿಮೆ.

rta ಅಂತಾರೆ...

hagadrey nanna deshadalli kagey jasti irodrnda crow is our naional bird antha goshisabeku alva

ಕೃಷ್ಣಪ್ರಕಾಶ ಬೊಳುಂಬು ಅಂತಾರೆ...
This comment has been removed by the author.
Anantha Rao ಅಂತಾರೆ...

First we must all write to Karnataka Govt to drop third language concept in school education. Kannada language should made be mandatory as third language if first language is not Kannada. Now Karnataka has adopted CBSC(NCERT) syllabus but (strangely) not its adopted language formula. In CBSC, third language is mandatory only from 5th to 8th standard but our government continues with three languages till 10th standard like before. when CBSC, ICSC & many state govt in India do not have concept of three languages. Then why Karnataka students should waste time in learning a unknown language? It is better to devote children time in learning core subjects like science, maths or improving skills in music, arts, etc which is of great use in their future life. That's why we can see poor results in SSLC while in CBSC, ICSC, TN, UP, etc passing percentage is very good.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails